Tag: ಕೋಳಿ ಮಾಂಸ

  • ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ: ಸಿದ್ದು ವಿರುದ್ಧ ವಿಜಯೇಂದ್ರ ಆಕ್ರೋಶ

    ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ: ಸಿದ್ದು ವಿರುದ್ಧ ವಿಜಯೇಂದ್ರ ಆಕ್ರೋಶ

    ಗದಗ: ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗದಗ ಜಿಲ್ಲೆ ಲಕ್ಷ್ಮೇಶ್ವರದ ಮುಕ್ತಿಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೆನು ಎಂಬ ಈ ಭಂಡತನ ಯಾರೂ ಸಹ ಒಪ್ಪುವುದಿಲ್ಲ. ನಮ್ಮ ನಾಡಿಗೆ ಒಂದು ಸಂಸ್ಕೃತಿ, ಪರಂಪರೆ, ಧಾರ್ಮಿಕ ಶ್ರದ್ಧೆ ಇದೆ. ಇದೆಲ್ಲವನ್ನು ನಂಬಿ ಜೀವನ ಸಾಗಿಸುವ ಅಪಾರ ಜನರು, ಭಕ್ತರು ಇದ್ದಾರೆ. ಆದರೆ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುವುದರಿಂದ ಇತರರ ಮನಸ್ಸಿಗೆ ಘಾಸಿಯನ್ನುಂಟು ಮಾಡಬಾರದು. ನಮ್ಮ ನಡುವಳಿಕೆ ಇತರರಿಗೆ ಮಾದರಿಯಾಗಬೇಕು ಎಂದಿದ್ದಾರೆ.

    ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದೇ ಬಿಟ್ಟಿದೇವೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಮುನ್ನುಗ್ಗುತ್ತಿದ್ದಾರೆ. ಬಿಎಸ್‌ವೈಗೆ ಉನ್ನತ ಸ್ಥಾನ ಸಿಕ್ಕಿದ್ದು, ಕಾಂಗ್ರೆಸ್‌ಗೆ ಆಘಾತ ಆಗಿದೆ. ವಿಜಯದ ನಾಗಾಲೋಟಕ್ಕೆ ಯಡಿಯೂರಪ್ಪ ಅಡ್ಡಿಯಾಗುತ್ತಾರಲ್ಲ ಅಂತ ಮಾಜಿ ಹಾಗೂ ಭಾವಿ ಮುಖ್ಯಮಂತ್ರಿ ಅಭ್ಯರ್ಥಿಗಳ ಕನಸಿಗೆ ಭಂಗ ಆಗಿದೆ. ಸೋಲಿನ ಭಯಕ್ಕೆ ಸಹಜವಾಗಿ ಮಠ, ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಗುದದ್ವಾರಕ್ಕೆ ಸ್ಟೀಲ್ ಗ್ಲಾಸ್ ತುರುಕಿದ ಸ್ನೇಹಿತರು – ಮಲ ವಿಸರ್ಜನೆ ಮಾಡಲಾಗದೇ ಪರದಾಡಿದ

    ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದರೂ, ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಾದಿದ್ದರೂ, ಜಾತಿ ವಿಷ ಬೀಜ ಬಿತ್ತುತ್ತಾರೆ. ಹಿಂದೆಯೂ ಕೂಡಾ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತಿದ್ದರು. ಅದು ಯಶಸ್ವಿಯಾಗಿರಲಿಲ್ಲ. ಆದರೆ ವೀರಸಾವರ್ಕರ್ ಅವರಂಥವರನ್ನು ರಸ್ತೆ ಮೇಲೆ ತಂದು ಅವಮಾನ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವಂಥದ್ದಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವಹೇಳನಕಾರಿ ಹೇಳಿಕೆ ಶೋಭೆ ತರುವುದಿಲ್ಲ. ಇತ್ತೀಚಿಗೆ ಬಿಜೆಪಿಯಲ್ಲಾದ ರಾಜಕೀಯ ಬೆಳವಣಿಯಿಂದ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿದೆ. ಮೊಟ್ಟೆ ಎಸಿದಿದ್ದು ಯಾರು ಅಂತ ಮೊಟ್ಟೆ ಎಸೆದವನೇ ಹೇಳಬೇಕು ಎಂದು ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಘಮ ಘಮಿಸುವ ಚಿಕನ್ ಮಸಾಲ ಮಾಡುವ ವಿಧಾನ

    ಘಮ ಘಮಿಸುವ ಚಿಕನ್ ಮಸಾಲ ಮಾಡುವ ವಿಧಾನ

    ಚಿಕನ್ ಕರಿಯನ್ನು ನಾವು ಬೇರೆ ಬೇರೆ ಸ್ಟೈಲ್‍ನಲ್ಲಿ ತಯಾರಿಸಿ ಸೇವಿಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಮಾಂಸದ ಅಡುಗೆ ಸಖತ್ ಸರಳವಾಗಿದೆ ಮತ್ತು ಅಷ್ಟೆ ರುಚಿಯಾಗಿಯು ಇರುತ್ತದೆ. ಖಾರವಾದ ಅಡುಗೆ ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ.

    ಈ ಕರಿಯನ್ನು ಚಪಾತಿ, ಅನ್ನ ಹಾಗೂ ರಾಗಿ ಮುದ್ದೆಯೊಂದಿಗೂ ಸವಿಯಬಹುದು. ನೀವು ಮನೆಯಲ್ಲಿ ಸುಲಭ ಹಾಗೂ ಸರಳ ವಿಧಾನದಲ್ಲಿ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿಯೊಂದಿಗೆ ಮಾಡುವ ವಿಧಾನ ಈ ಕೆಳಗಿನಂತಿದೆ.  ಇದನ್ನೂ ಓದಿ:  ಬಿದಿರು ಕಳಲೆ ಸಾಂಬಾರ್ ಸೂಪರ್ ಟೇಸ್ಟ್

    ಬೇಕಾಗುವ ಸಾಮಗ್ರಿಗಳು:
    * ಕೋಳಿ ಮಾಂಸ – ಅರ್ಧ ಕೆಜಿ
    * ಇರುಳ್ಳಿ_ 2
    * ಶುಂಠಿ ಪೇಸ್ಟ್- 2 ಟೀ ಸ್ಪೂನ್
    * ಕಾಳು ಮೆಣಸು – 2 ಟೀ ಸ್ಪೂನ್
    * ಲವಂಗ, ಚಕ್ಕೆ- ಸ್ವಲ್ಪ
    * ಗಸೆಗಸೆ- ಅರ್ಧ ಸ್ಪೂನ್
    * ತೆಂಗಿನಕಾಯಿ- ಅರ್ಧ ಕಪ್
    * ಪಲಾವ್ ಎಲೆ-1
    * ಏಲಕ್ಕಿ- 2
    * ಜೀರಿಗೆ- 1 ಟೀ ಸ್ಪೂನ್
    * ಕೊತ್ತಂಬರಿ ಬೀಜ- 3 ಟೀ ಸ್ಪೂನ್
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಬಳಸದೆ ಕಾಳು ಮೆಣಸು, ಲವಂಗ, ದಾಲ್ಚಿನ್ನಿ ಸೇರಿಸಿ ಹುರಿದುಕೊಳ್ಳಬೇಕು.- ಸಂಪೂರ್ಣವಾಗಿ ಆರಿದ ಬಳಿಕ ಮಿಕ್ಸರ್ ಪಾತ್ರೆಗೆ ಸೇರಿಸಿ ರುಬ್ಬಿಕೊಳ್ಳಬೇಕು.
    * ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.
    * ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು, ಈರುಳ್ಳಿ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಉಪ್ಪನ್ನು ಸೇರಿಸಿ, 15 ನಿಮಿಷಗಳ ಕಾಲ ಬೇಯಿಸಬೇಕು.

    * ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆ, ಈರುಳ್ಳಿ, ತೆಂಗಿನ ತುರಿ, ಜೀರಿಗೆ ಉಳಿದ ಮಸಾಲೆ ಸಾಮಾಗ್ರಿಯನ್ನು ಸೇರಿಸಿ ಸ್ವಲ್ಪ ಬೇಯುವವರೆಗೆ ಹುರಿಯಬೇಕು.
    * ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆಯೇ 2 ನಿಮಿಷಗಳ ಕಾಲ ಹಿರಿಯಿರಿ. ನಂತರ ದಾಲ್ಚಿನ್ನಿ ಮತ್ತು ಲವಂಗದೊಂದಿಗೆ ಮಿಕ್ಸರ್ ಪಾತ್ರೆಗೆ ಸೇರಿಸಿ, ಪುಡಿ ಮಾಡಬೇಕು.

    * ನಂತರ ಕೋಳಿ ಮಾಂಸ ಇರುವ ಪಾತ್ರೆಗೆ ಈ ಮೊದಲೆ ತಯಾರಿಸಿದ ರುಬ್ಬಿದ ಮಸಾಲೆ, ಮತ್ತು ಹುರಿದಿಟ್ಟ ಇರುಳ್ಳಿ, ಅರಿಶಿಣ, ಏಲಕ್ಕಿ, ಕೆಂಪುಮೆಣಸು ಕೊತ್ತಂಬರಿ ಸೇರಿಸಿ ಚೆನ್ನಾಗಿ ಬೇಯಿಸಿದರೆ ಚಿಕನ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.

  • ಹೆಚ್ಚು ಮಾಂಸ ಪ್ರಿಯರು ಇರೋ ಮಂಡ್ಯದಲ್ಲಿ ಕೋಳಿ ದರ ಇಳಿಕೆ

    ಹೆಚ್ಚು ಮಾಂಸ ಪ್ರಿಯರು ಇರೋ ಮಂಡ್ಯದಲ್ಲಿ ಕೋಳಿ ದರ ಇಳಿಕೆ

    ಮಂಡ್ಯ: ಕೊರೊನಾ ವೈರಸ್ ರಾಜ್ಯದ ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೋಳಿ ಮಾಂಸದ ಮಾರಾಟದಲ್ಲಿಯೂ ವ್ಯತ್ಯಯವಾಗಿದೆ.

    ರಾಜ್ಯದಲ್ಲಿ ಅತೀ ಹೆಚ್ಚು ಮಾಂಸ ಪ್ರಿಯರು ಇರುವ ಮಂಡ್ಯ ಜಿಲ್ಲೆಯಲ್ಲಿ ಸಹ ಕೊರೊನಾ ವೈರಸ್ ಭೀತಿಯಿಂದಾಗಿ ಕೋಳಿ ಮಾಂಸದ ರೇಟ್ ಬಿದ್ದಿದೆ. ಕಳೆದ ವಾರ ಕೋಳಿ ಮಾಂಸ ಪ್ರತಿ ಕೆಜಿಗೆ 140 ರಿಂದ 145 ರೂ. ವರೆಗೆ ಇತ್ತು. ಆದರೆ ಇಂದು 80 ರೂಪಾಯಿಗೆ ಇಳಿದಿದೆ. ಈ ಮೂಲಕ ಒಂದು ಕೆಜಿಗೆ 60 ರಿಂದ 65 ರೂಪಾಯಿ ಇಳಿತ ಕಂಡಿದೆ. ಮೂರು ದಿನಗಳಲ್ಲಿ ಇಷ್ಟು ಪ್ರಮಾಣದಲ್ಲಿ ಕೋಳಿ ಮಾಂಸದ ದರ ಇಳಿಕೆ ಕಂಡಿರುವುದು ಮಾರಾಟಗಾರರಿಗೆ ನಷ್ಟವಾಗಿದೆ ಎಂದು ಮಾರಾಟಗಾರರು ಹೇಳುತ್ತಾ ಇದ್ದಾರೆ.

    ಫಾರಂ ಕೋಳಿಯನ್ನು ಜನರು ತಿನ್ನುವ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜನರು ನಾಟಿಕೋಳಿ ಮತ್ತು ಕುರಿ ಹಾಗೂ ಮೇಕೆ ಮಾಂಸದ ಖರೀದಿಗೆ ಹೆಚ್ಚಿದ್ದಾರೆ. ಮಂಡ್ಯದಲ್ಲಿ ನಾಟಿ ಕೋಳಿ ಕೆ.ಜಿಗೆ 400 ರಿಂದ 450 ರೂ. ವರೆಗೆ ಇದೆ. ಕುರಿ ಹಾಗೂ ಮೇಕೆಯ ಮಾಂಸ ಕೆಜಿಗೆ 450 ರಿಂದ 530ರ ವರೆಗೂ ಇದೆ.

  • ಮಾಂಸಪ್ರಿಯರೇ ಚಿಕನ್ ಕಬಾಬ್ ತಿನ್ನೋ ಮೊದಲು ಎಚ್ಚರ

    ಮಾಂಸಪ್ರಿಯರೇ ಚಿಕನ್ ಕಬಾಬ್ ತಿನ್ನೋ ಮೊದಲು ಎಚ್ಚರ

    – ಬೆಂಗ್ಳೂರಿನ ಕರಾಳ ಮಾಂಸ ಮಾರಾಟ ದಂಧೆ ಬಯಲು
    – ತಾಜಾ ಕೋಳಿ ಜೊತೆ ಸತ್ತ ಕೋಳಿ ಸೇರಿಸಿ ಮಾರಾಟ

    ಬೆಂಗಳೂರು: ಮಾಂಸ ಪ್ರಿಯರೇ ನೀವು ತಿನ್ನೋ ಕೋಳಿ ಬಗ್ಗೆ ಗೊತ್ತಾದರೆ ಅಯ್ಯೋ ಇಷ್ಟು ದಿನ ಇದನ್ನ ನಾವು ತಿಂದಿದ್ದು ಎಂದು ಶಾಕ್ ಆಗುತ್ತೀರ. ಸಿಲಿಕಾನ್ ಸಿಟಿಯಲ್ಲಿ ಸತ್ತ ಕೋಳಿಗಳ ಕರಾಳ ಮಾರಾಟ ದಂಧೆ ನಡೆಯುತ್ತಿರುವ ವಿಚಾರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ರಾಜ್ಯ ರಾಜಧಾನಿಯ ಹಲವು ಕಡೆ ನಿಮಗೆ ಗೊತ್ತಿಲ್ಲದೆ ಸತ್ತು ಒಂದೆರಡು ದಿನ ಆಗಿರುವ ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆ ನಡೆಸಿತ್ತು. ಆಗ ಈ ದಂಧೆಯ ಕರಾಳ ಮುಖ ಅನಾವರಣಗೊಂಡಿದೆ.

    ಪಬ್ಲಿಕ್ ಟಿವಿ ತಂಡ ಮೊದಲಿಗೆ ಮಾಹಿತಿಯಂತೆ ಹೆಗ್ಗನಹಳ್ಳಿಯ ಚಿಕನ್ ಸೆಂಟರ್‌ಗೆ ಹೋಗಿದ್ದು, ನಮ್ನ ಪ್ರತಿನಿಧಿ ಕಬಾಬ್ ಅಂಗಡಿ ಹೊಸದಾಗಿ ಪ್ರಾರಂಭ ಮಾಡ್ತಿದ್ದೀವಿ, ಚಿಕನ್ ಬೇಕಿತ್ತು, ಎಷ್ಟು ರೇಟ್ ಎಂದು ವಿಚಾರಿಸಿದ್ದಾರೆ. ಆಗ ಅಲ್ಲಿದ್ದ ಚಿಕನ್ ಅಂಗಡಿ ವ್ಯಾಪಾರಿ ಕೂಡಲೇ 50 ರೂಪಾಯಿ ಎಂದು ಹೇಳಿದ. ಬಳಿಕ 200 ರೂಪಾಯಿ ಆಸುಪಾಸಿನಲ್ಲಿರುವ ಚಿಕನ್ ಬೆಲೆ ಹೇಗೆ 50 ರೂಪಾಯಿಗೆ ಸಿಗುತ್ತೆ ಅಂದಾಗ ಅನುಮಾನ ಬಂದು, ವಿಚಾರವನ್ನು ಕೆದುಕುತ್ತಾ ಹೋದಾಗ ಒಂದೊಂದೆ ಸತ್ತ ಕೋಳಿ ದಂಧೆ ಬಯಲಾಯಿತು.

    ಮೊದಲಿಗೆ ಅಂಗಡಿಯವನು ಮಾಂಸ ತೆಗೆದು ಕೋಳಿ ಬಾಡಿ 50 ರೂಪಾಯಿ, ನಮಗೆ ಅದೇ ರೀತಿ ಬರುತ್ತೆ ಎಂದಿದ್ದಾನೆ. ಅಲ್ಲಿಗೆ ಈ ಸತ್ತ ಕೋಳಿ ಮಾರಾಟದ ಜಾಲ ದೊಡ್ಡದಿದೆ ಅನ್ನೊದು ಗೊತ್ತಾದ ಬಳಿಕ ಅಲ್ಲಿಂದ ನೇರವಾಗಿ ಸಿಟಿ ಮಾರುಕಟ್ಟೆಯ ಮಾಂಸದ ಅಂಗಡಿಗೆ ತಂಡ ತೆರಳಿತು.

    ಕೆ.ಆರ್ ಮಾರ್ಕೆಟಿನಲ್ಲಿರುವ ಮಾಂಸದ ಮಾರುಕಟ್ಟೆಯಿಂದ ಹಲವು ಕಡೆಗಳಿಗೆ ದೊಡ್ಡ ಮಟ್ಟದಲ್ಲಿ ಮಾಂಸ ಸರಬರಾಜಾಗುತ್ತದೆ. ಅಲ್ಲಿಯೂ ಕಬಾಬ್ ಅಂಗಡಿಗೆ ಚಿಕನ್ ಬೇಕು ಎಂದು ಕೇಳಿದಾಗ, ಅಲ್ಲಿ ಒಬ್ಬೊಬ್ಬರು ಒಂದೊಂದು ದರ ಹೇಳಿದರು. ಯಾವಾಗ ನಾವು 50 ರೂಪಾಯಿಗೆ ಚಿಕನ್ ಸಿಗುತ್ತೆ ಎಂದು ಹೇಳಿದಾಗ, ಓ ಅಲ್ಲಿ ಸಿಗುತ್ತೆ ನೋಡಿ ಎಂದು ವಿಳಾಸ ತೋರಿಸಿದರು. ಆಗ ವಿಳಾಸಕ್ಕೆ ತೆರಳಿ, ವಿಧವಿಧ ಮಾಂಸದ ತುಂಡು ಮಾಡುತ್ತಿದ್ದ ವ್ಯಕ್ತಿಯನ್ನ ಮಾತನಾಡಿಸಿದಾಗ ಆತ ನಾಜೂಕಾಗಿ ಎಲ್ಲವನ್ನೂ ಹೇಳಲು ಶುರು ಮಾಡಿದ. “40 ರೂಪಾಯಿಗೆ ಒಂದು ಕೆಜಿ ಕೋಳಿ ಮಾಂಸ ಸಿಗುತ್ತೆ. ನಾಳೆ ಬೆಳಗ್ಗೆ ಬನ್ನಿ. ನೂರಾರು ಕೆಜಿ ಸತ್ತ ಕೋಳಿಯ ಮಾಂಸಕ್ಕೆ ಬೇಡಿಕೆ ಇದೆ. ಒಂದೊಂದು ಹೋಟೆಲಿಗೂ 50-60 ಕೆಜಿ ಕೊಡುತ್ತೇವೆ” ಎಂದು ಹೇಳಿದ್ದಾನೆ.

    ಪ್ರತಿದಿನ 300, 400 ಕೆಜಿ ಬರುತ್ತೆ. ಬೋಗ್ ರಾಜ್ ಫ್ಯಾಕ್ಟರಿಯಿಂದ, ಕೋಲಾರ್ ರಸ್ತೆಯಿಂದ ಈ ಕೋಳಿಗಳು ಬರುತ್ತೆ. ಕೋಳಿ ಬಾಡಿ 40 ರೂಪಾಯಿಗೆ ಒಂದು ಕೆಜಿ ಸಿಗುತ್ತೆ. ಕಟ್ ಮಾಡಿ ತೋರಿಸ್ತೀನಿ ನೋಡಿ. ನೋಡೋಕೆ ಸತ್ತ ಹಾಗೆ ಕಾಣುತ್ತೆ ಕಟ್ ಮಾಡಿದ ಬಳಿಕ ಗೊತ್ತಾಗಲ್ಲ. ಬೇಕಿದ್ದರೆ ಈ ಮಾಂಸದ ಜೊತೆಗೆ ಸ್ವಲ್ಪ ತಾಜಾ ಮಾಂಸವನ್ನು ಮಿಕ್ಸ್ ಮಾಡಿ ಏನೂ ಗೊತ್ತಾಗಲ್ಲ. 300 ಕೆಜಿ ಏನು ಎಷ್ಟು ಬೇಕಾದರು ಮಾಂಸ ಸಿಗುತ್ತೆ ಎಂದಿರುವುದು ರಹಸ್ಯ ಕಾರ್ಯಾಚರಣೆ ವಿಡಿಯೋದಲ್ಲಿ ಸೆರೆಯಾಗಿದೆ.

    ಅಷ್ಟೇ ಅಲ್ಲದೆ ಸತ್ತ ಕೋಳಿ ಎಂದು ಜನರಿಗೆ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಏನೂ ತಿಳಿಯಲ್ಲ, ಸತ್ತ ಕೋಳಿ ಮಾಂಸದ ಜೊತೆ ತಾಜಾ ಕೋಳಿ ಮಾಂಸ ಸೇರಿಸಿ ಮಾರಾಟ ಮಾಡುತ್ತೇವೆ. ನಿಮಗೆ ಎಷ್ಟು ಕೆ.ಜಿ ಮಾಂಸವಾದರೂ ಸಿಗುತ್ತೆ. ಹೀಗೆ ಮಿಶ್ರಣ ಮಾಡಿ ಕೊಟ್ಟರೆ ಯಾರಿಗೂ ತಿಳಿಯುವುದಿಲ್ಲ. ರುಚಿಯಲ್ಲಿ ಏನು ವ್ಯತ್ಯಾಸ ಬರಲ್ಲ. ಶೇ.10 ಬೇರೆ ರೀತಿ ಅನಿಸಬಹುದು. ಅದಕ್ಕೆ ವೆನಿಗರ್ ಅಲ್ಲಿ ಚಿಕನ್ ತೊಳೆದು, ಉಪ್ಪು ಖಾರ ಚೆನ್ನಾಗಿ ಹಾಕಿದರೆ ಗೊತ್ತಾಗಲ್ಲ. ಬೆಳಗ್ಗೆ ಬಂದು ನೋಡಿ ಒಬ್ಬೊಬ್ರು 50ರಿಂದ 60 ಕೆಜಿ ಸತ್ತ ಕೋಳಿ ಮಾಂಸ ತೆಗೆದುಕೊಂಡು ಹೋಗುತ್ತಾರೆ ಎಂದು ಸತ್ಯಾಂಶ ಬಾಯಿಬಿಟ್ಟಿದ್ದಾನೆ.

    ಯಾವ ಭಯವೂ ಇಲ್ಲದೇ ನಮಗೆ ಮಾರಾಟ ಆಗಬೇಕಷ್ಟೇ ಎಂದು ವ್ಯಾಪಾರಿಗಳು, ದಂಧೆ ನಡೆಸುವವರು ಸತ್ತು ಒಂದೆರಡು ದಿನ ಆದ ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಇನ್ನು ಅಂಗಡಿಯವರು ಕಡಿಮೆ ಹಣಕ್ಕೆ ಕೋಳಿ ಸಿಗುತ್ತೆ ಅಂತ ತಂದು ಮಾರುತ್ತಾರೆ. ಕೂಡಲೇ ಆರೋಗ್ಯ ಸಚಿವರು ಈ ಬಗ್ಗೆ ಗಮನಹರಿಸಿ, ಈ ರೀತಿ ಜನರ ಆರೋಗ್ಯಕ್ಕೆ ಮಾರಕವಾಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

    https://www.youtube.com/watch?v=ru7PDerT2bM

  • ನಿಪಾ ವೈರಸ್ ಸುಳ್ಳು ಸುದ್ದಿ ಹರಡಿದ 7 ಮಂದಿ ಅರೆಸ್ಟ್

    ನಿಪಾ ವೈರಸ್ ಸುಳ್ಳು ಸುದ್ದಿ ಹರಡಿದ 7 ಮಂದಿ ಅರೆಸ್ಟ್

    ತಿರುವನಂತಪುರಂ: ಕೆಲವು ಸ್ಥಳಗಳಲ್ಲಿ ನಿಪಾ ವೈರಸ್ ಪತ್ತೆಯಾಗಿದೆ, ಅದು ಕೋಳಿ ಮಾಂಸದಿಂದ ಹರಡುತ್ತಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದ ಏಳು ಜನರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ನಿಪಾ ವೈರಸ್ ಕುರಿತು ವಾಟ್ಸಪ್ ಮೂಲಕ ಸುಳ್ಳು ಸುದ್ದಿಯನ್ನು ಧ್ವನಿ ಸಂದೇಶಗಳನ್ನು ರಚಿಸಿ ರವಾನಿಸುತ್ತಿದ್ದರು.

    ಈ ಕುರಿತಂತೆ ಕೊಝಿಕ್ಕೋಡು ಜಿಲ್ಲಾ ವ್ಯಾಪ್ತಿಯ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ವೈಷ್ಣವ್, ನಿಮೇಶ್, ಬಿವಿಜ್, ದಿಲ್ಜಿತ್, ವಿಷ್ಣುದಾಸ್ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೇ ಈ ಧ್ವನಿ ಸಂದೇಶ ರಚಿಸಿದ ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ನಿಪಾ ವೈರಸ್ ಕೋಳಿ ಮಾಂಸದಲ್ಲಿ ಪತ್ತೆಯಾದ ಕುರಿತು ಆರೋಗ್ಯ ಇಲಾಖೆಯ ವಿರುದ್ಧ ಸುಳ್ಳು ಸುದ್ದಿಯನ್ನೂ ಹಬ್ಬಿಸಲಾಗಿತ್ತು. ಹಾಗಾಗಿ ಯಾರೂ ಕೋಳಿ ಮಾಂಸವನ್ನು ಬಳಸಬಾರದೆಂದು ಕಿಡಿಗೇಡಿಗಳು ಹರಿಬಿಟ್ಟಿದ್ದರು. ಈ ಕುರಿತಂತೆಯೂ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ:ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಇದಕ್ಕೆ ಪ್ರತಿಕ್ರಿಯಿಸಿದ ಫರೂಕ್ ಪೊಲೀಸ್ ಠಾಣಾಧಿಕಾರಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಐವರನ್ನು ಈಗಾಗಲೇ ಬಧಿಸಿದ್ದೇವೆ. ಅಲ್ಲದೇ ನಲ್ಲಾಲಂನಲ್ಲೂ ಇಬ್ಬರ ಬಂಧನವಾಗಿದೆ. ಫಿರೋಕ್ ಆಸ್ಪತ್ರೆಯ ಕಿರಿಯ ವೈದ್ಯಾಧಿಕಾರಿಗಳು ಈ ಕುರಿತಂತೆ ದೂರನ್ನೂ ಕೂಡಾ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.