Tag: ಕೋಳಿ ಮರಿ

  • 10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್!

    10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್!

    ಶಿವಮೊಗ್ಗ: 10 ರೂಪಾಯಿ ಕೋಳಿ ಮರಿಗೆ ಕೆಎಸ್‌ಆರ್‌ಟಿಸಿ ಬಸ್ಸಿನ ನಿರ್ವಾಹಕರೊಬ್ಬರು 52 ರೂಪಾಯಿಗೆ ಅರ್ಧ ಟಿಕೆಟ್ ನೀಡಿದ್ದಾರೆ.

    ಅಲೆಮಾರಿ ಕುಟುಂಬವೊಂದು ಶಿರಸಿಯಲ್ಲಿ 10 ರೂಪಾಯಿ ನೀಡಿ ಕೋಳಿ ಮರಿ ಖರೀದಿಸಿತ್ತು. ಶಿರಸಿಯಿಂದ ಹೊಸನಗರಕ್ಕೆ ಖಾಸಗಿ ಬಸ್ಸಿನಲ್ಲಿ ಬಂದಿಳಿದ ಅಲೆಮಾರಿ ಕುಟುಂಬ, ಹೊಸನಗರದಿಂದ ಶಿರೂರಿಗೆ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿತ್ತು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸಂಪುಟದ 6 ಸಚಿವರಿಗೆ ಕೊಕ್‌?

    ಈ ವೇಳೆ ಬಸ್ ನಿರ್ವಾಹಕರು ಕೋಳಿ ಮರಿಗೂ ಟಿಕೆಟ್ ಖರೀದಿಸಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ ಅಲೆಮಾರಿ ಕುಟುಂಬ ಕೋಳಿ ಮರಿಗಾಗಿ 52 ರೂಪಾಯಿ ಅರ್ಧ ಟಿಕೆಟ್ ನೀಡಿ ಶಿರೂರಿನಲ್ಲಿ ಇಳಿದಿದೆ.

    ಅರ್ಧ ಟಿಕೆಟ್ ಕಡ್ಡಾಯ:
    ಕೆಎಸ್‍ಆರ್‌ಟಿಸಿ ಬಸ್ಸಿನಲ್ಲಿ ಸಾಕು ಪ್ರಾಣಿ/ ಪಕ್ಷಿಗಳನ್ನು ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಸಾಗಾಣಿಕೆ ಮಾಡಬಹುದು. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು

    ಪ್ರತಿಷ್ಠಿತ ಸಾರಿಗೆಗಳಾದ ಕರ್ನಾಟಕ ವೈಭವ, ರಾಜಹಂಸ, ಹವಾನಿಯಂತ್ರಣರಹಿತ ಸ್ಲೀಪರ್ ಮತ್ತು ಎಲ್ಲಾ ರೀತಿಯ ಹವಾನಿಯಂತ್ರಿತ ಸಾರಿಗೆಗಳಲ್ಲಿ ಸಾಕು ಪ್ರಾಣಿ/ ಪಕ್ಷಿಗಳ ಸಾಗಣೆಯನ್ನು ನಿರ್ಬಂಧಿಸಲಾಗಿದೆ.

    ಮೊಲ, ನಾಯಿಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಇತ್ಯಾದಿಗಳಿಗೆ ಮಕ್ಕಳ ದರ ವಿಧಿಸಲಾಗುತ್ತದೆ. ನಾಯಿಯನ್ನು ಸೂಕ್ತವಾಗಿ ಚೈನಿನಿಂದ ಬಿಗಿದು, ವಾರಸುದಾರರ ಕಾಳಜಿಯೊಂದಿಗೆ ಕೊಂಡೊಯ್ಯಬಹುದು. ಸಾಕು ಪ್ರಾಣಿಗಳನ್ನು ಕೊಂಡೊಯ್ಯುವ ಪ್ರಯಾಣಿಕರು ಇತರೆ ಪ್ರಯಾಣಿಕರಿಗೆ ಅಥವಾ ನಿಗಮದ ಸಿಬ್ಬಂದಿಗಳಿಗೆ ಅಥವಾ ಲಗೇಜ್‍ಗೆ ಹಾನಿಯಾಗದ ರೀತಿ ಅಥವಾ ಇತರೆ ಪ್ರಯಾಣಿಕರ ವಸ್ತುಗಳಿಗೆ ತೊಂದರೆಯಾಗದಂತೆ ಹಾಗೂ ನಿಗಮದ ಆಸ್ತಿಗೆ ಹಾನಿಯಾಗದ ರೀತಿ ಕಾಳಜಿ ವಹಿಸತಕ್ಕದ್ದು ಎಂದು ಕೆಎಸ್‍ಆರ್‌ಟಿಸಿ  ತನ್ನ ವೆಬ್‍ಸೈಟ್‍ನಲ್ಲಿ ತಿಳಿಸಿದೆ.

  • ಕಾಡಿನಲ್ಲಿ ರಾಶಿ ರಾಶಿ ಕೋಳಿ ಮರಿಗಳು – ಮನೆಗೆ ಹೊತ್ತೊಯ್ದ ಜನ

    ಕಾಡಿನಲ್ಲಿ ರಾಶಿ ರಾಶಿ ಕೋಳಿ ಮರಿಗಳು – ಮನೆಗೆ ಹೊತ್ತೊಯ್ದ ಜನ

    ಚಿಕ್ಕಬಳ್ಳಾಪುರ: ಇಲ್ಲಿನ ಅರಣ್ಯ ಪ್ರದೇಶದಲ್ಲಿ ರಾಶಿ ರಾಶಿ ಕೋಳಿ ಮರಿಗಳು ಪತ್ತೆಯಾಗಿದ್ದು, ಕೋಳಿ ಮರಿಗಳನ್ನು ಗ್ರಾಮಸ್ಥರು ಮನೆಗಳಿಗೆ ಹೊತ್ತೊಯ್ದ ಘಟನೆ ಚಿಕ್ಕಬಳ್ಳಾಪುರ ತಾಲೂಕು ಕಣಿತಹಳ್ಳಿ ಗ್ರಾಮದ ಬಳಿ ನಡೆದಿದೆ.

    ಗ್ರಾಮ ಹೊರವಲಯದ ಅರಣ್ಯ ಪ್ರದೇಶದಲ್ಲಿ ಹಿಂಡು ಹಿಂಡು ಫಾರಂ ಕೋಳಿ ಮರಿಗಳನ್ನ ಕಂಡು ಗ್ರಾಮಸ್ಥರ ಬ್ಯಾಗ್, ಚೀಲ, ಪ್ಲಾಸ್ಟಿಕ್ ಬಿನ್, ಟಬ್ ಗಳಲ್ಲಿ ಮನೆಗೆ ಕೊಂಡೊಯ್ದಿದ್ದಾರೆ. ಅರಣ್ಯ ಪ್ರದೇಶದಲ್ಲಿ ಚಿಲಿ ಪಿಲಿ ಅಂತ ಸಾವಿರಾರು ಕೋಳಿ ಮರಿಗಳ ಒಡಾಟ ಸಾಗಿದೆ.

    ಕೋಳಿ ಮರಿಗಳು ಇಲ್ಲಿಗೆ ಬಂದಿದ್ದು ಹೇಗೆ..?
    ಅಸಲಿಗೆ ರಾಜ್ಯದಲ್ಲಿ ಫಾರಂ ಕೋಳಿ ಸಾಕಾಣಿಕೆದಾರ ರೈತರು ಹಾಗೂ ಚಿಕನ್ ಗೆ ಕೋಳಿ ಸಪ್ಲೈ ಮಾಡುವ ಬಹುರಾಷ್ಟ್ರೀಯ ಕಂಪನಿಗಳ ನಡುವೆ ಜಟಾಪಟಿ ನಡೀತಿದ್ದು ಕಂಪನಿಗಳ ವಿರುದ್ಧ ಸಾಕಾಣಿಕೆದಾರರು ಹೋರಾಟ ನಡೆಸಿದ್ದಾರೆ. ಪ್ರಮುಖವಾಗಿ ಎಂಎನ್‍ಸಿ ಕಂಪನಿಗಳು ಸಾಕಾಣಿಕೆದಾರರಿಗೆ ಕೋಳಿ ಮರಿಗಳನ್ನ ಸಪ್ಲೈ ಮಾಡಲಿದ್ದು, ಆ ಮರಿಗಳನ್ನ ಸಾಕಾಣಿಕೆ ಮಾಡಿ ಅದೇ ಕಂಪನಿಯವರಿಗೆ ವಾಪಾಸ್ ಮಾಡಲಿದ್ದಾರೆ. ಆಗ ಕಂಪನಿಯವರು ಕೋಳಿ ಸಾಕಾಣಿಕೆ ಮಾಡಿದ್ದಕ್ಕೆ ಪ್ರತಿ ಕೆ.ಜಿ ಗೆ 2-3 ರೂಪಾಯಿ ಕೊಡಲಾಗುತ್ತಿದೆ.

    ಆದರೆ ಕೆಲವೊಮ್ಮೆ ಕೋಳಿ ಚೆನ್ನಾಗಿ ದಷ್ಟ ಪುಷ್ಟವಾಗಿ ಬೆಳೆದಿಲ್ಲ ತೂಕ ಬರಲಿಲ್ಲವಾದರೆ ಹಣ ಕೊಡೋದಿಲ್ಲವಂತೆ. ಹೀಗಾಗಿ ನಮಗೆ ಸೂಕ್ತ ದರ ನಿಗದಿ ಮಾಡಿ ಕೊಡಬೇಕು ಅಂತ ಕಂಪನಿಗಳ ವಿರುದ್ಧ ಕೋಳಿ ಸಾಕಾಣಿಕೆದಾರರು ಹಲವು ದಿನಗಳಿಂದ ಹೋರಾಟ ನಡೆಸುತ್ತಾ ಬರ್ತಿದ್ದಾರೆ.

    ಇತ್ತೀಚೆಗೆ ಸರ್ಕಾರದ ಮಟ್ಟದಲ್ಲಿ ಬೆಂಗಳೂರಿನ ಪಶು ಸಂಗೋಪನಾ ಇಲಾಖೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಪಶು ಭವನದಲ್ಲಿ ಸಭೆ ನಡೆಸಿ ಇದೇ ತಿಂಗಳ 11 ರಂದು ಎಂಎನ್‍ಸಿ ಕಂಪನಿಗಳು ಹಾಗೂ ಸಾಕಾಣಿಕೆದಾರರ ನಡುವೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡುವ ಭರವಸೆ ನೀಡಲಾಗಿದೆ. ಆದರೆ ಈ ಭರವಸೆಗೆ ಸಾಕಾಣಿಕೆದಾರರು ಷರತ್ತು ವಿಧಿಸಿದ್ದು, ಸಭೆ ನಡೆಸುವ ದಿನದದವರಗೂ ನಾವು ಯಾವುದೇ ಎಂಎನ್‍ಸಿ ಕಂಪನಿಗಳಿಂದ ಕೋಳಿ ಮರಿಗಳನ್ನ ಪಡೆದುಕೊಳ್ಳುವುದಿಲ್ಲ.

    ಈಗಾಗಲೇ ಫಾರಂ ಗಳಲ್ಲಿ ಇರೋ ಕೋಳಿ ಗಳನ್ನ ಮಾರಾಟಕ್ಕೆ ಕೋಡೋದಿಲ್ಲ ಅಂತ ಹೇಳಿದ್ರು. ಆದರೆ ಈ ಮಧ್ಯೆ ಸಾಕಾಣಿಕೆದಾರರ ಷರತ್ತಿನ ವಿಚಾರ ಗೊತ್ತೊದ್ದೋ ಅಥವಾ ಗೊತ್ತಿಲ್ಲದೆಯೋ ಎಂಎನ್‍ಸಿ ಕಂಪನಿಗಳ ಕೋಳಿ ಮರಿಗಳನ್ನ ಫಾರಂಗಳಿಗೆ ಸಾಗಾಟ ಮಾಡುವ ಕೆಲಸ ಮುಂದುವರಿಸಿದ್ದಾರೆ. ಹೀಗಾಗಿ ಮೊದಲೇ ಷರತ್ತು ವಿಧಿಸಿರೋ ಕೋಳಿ ಫಾರಂ ಸಾಕಾಣಿಕೆದಾರರು ಕೋಳಿ ಮರಿಗಳನ್ನ ಸಾಗಾಟ ಮಾಡೋ ವಾಹನಗಳು ಕಂಡು ಬಂದರೆ ವಾಹನಗಳನ್ನ ತಡೆದು ಅಡ್ಡ ಹಾಕಿ, ಆಗ ವಾಹನದಲ್ಲಿರೋ ಕೋಳಿ ಮರಿಗಳನ್ನ ಎಲ್ಲಂದರಲ್ಲಿ ಬಿಸಾಡೋ ಕೆಲಸ ಮಾಡ್ತಿದ್ದಾರೆ.

    ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ಹಲವು ಕಡೆ ಕಳೆದ ಎರಡು ದಿನಗಳಿಂದ ಇದೇ ರೀತಿ ಕೋಳಿ ಮರಿಗಳನ್ನ ಬಿಸಾಡಲಾಗ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ಹಾಗೂ ಕಣಿತಹಳ್ಳಿ ಬಳಿ ಈ ರೀತಿ ಕೋಳಿ ಮರಿಗಳನ್ನ ಬಿಸಾಡಿ ಸಾಕಾಣಿಕೆರದಾರರು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿದ್ದಾರೆ.

  • ಅಚ್ಚರಿ ಮೂಡಿಸಿದ ಮೂರು ಕಾಲಿನ ಅಪರೂಪದ ಕೋಳಿ ಮರಿ

    ಅಚ್ಚರಿ ಮೂಡಿಸಿದ ಮೂರು ಕಾಲಿನ ಅಪರೂಪದ ಕೋಳಿ ಮರಿ

    ಧಾರವಾಡ: ಕೋಳಿಗೆ ಎರಡು ಕಾಲು ಇರೋದು ಸರ್ವೇ ಸಾಮಾನ್ಯ. ಆದರೆ ಧಾರವಾಡದಲ್ಲಿ ಒಂದು ಕೋಳಿ ಮರಿಗೆ ಮೂರು ಕಾಲುಗಳಿದ್ದು, ಈ ಅಪರೂಪದ ಕೋಳಿಮರಿ ಎಲ್ಲರನ್ನು ಅಚ್ಚರಿಗೊಳಿಸಿದೆ.

    ಹೌದು, ಧಾರವಾಡ ಹೊರವಲಯದ ಆಂಜನೆಯನಗರದ ಬಳಿಯ ಕೋಳಿ ಫಾರ್ಮನಲ್ಲಿ ಈ ಕೋಳಿ ಮರಿ ಪತ್ತೆಯಾಗಿದೆ. ಕೋಳಿ ಫಾರ್ಮನ ಮಾಲೀಕ ಇಲ್ಮುದ್ದಿನ್ ಮೊರಬ ಈ ಅಪರೂಪ ಮರಿಯನ್ನು ಸಾಕುತ್ತಿದ್ದಾರೆ. ಎರಡು ಕಾಲುಗಳ ಜೊತೆ ಇನ್ನೊಂದು ಕಾಲು ಬೆನ್ನಿನ ಕೆಳ ಭಾಗದಲ್ಲಿದೆ. 15 ದಿನ ಈ ಮರಿಗೆ ಓಡಾಡಲು ಏನು ತೊಂದರೆ ಆಗಿರಲಿಲ್ಲ. ಆದರೆ ಇದಕ್ಕೆ ಇರುವ ಪ್ರತ್ಯೇಕ ಕಾಲಿನಿಂದಲೇ ಈಗ ಕೊಂಚ ತೊಂದರೆಯಾಗುತ್ತದೆ. ಇದನ್ನೂ ಓದಿ:ಕಾಫಿನಾಡಿನಲ್ಲಿ ಕಂಡುಬಂತು 4 ಕಾಲಿನ ಫಾರಂ ಕೋಳಿ

    ಈ ಕೋಳಿಮರಿಯನ್ನು ಮೊರಬ ಕುಟುಂಬ ಮಾರಾಟ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡು ಸಾಕುತ್ತಿದ್ದಾರೆ. ಈ ಕೋಳಿ ಮರಿಗೆ ಮೂರು ಕಾಲು ಇರುವುದನ್ನ ಕೇಳಿದ ಜನರು ಕೂಡಾ ಅತ್ಯಂತ ಕುತೂಹಲದಿಂದ ಇದನ್ನು ನೋಡಲು ಬರುತ್ತಿದ್ದಾರೆ. ಜೊತೆಗೆ ಇದರ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.

  • ಕೋಳಿಮರಿಯನ್ನು ರಕ್ಷಿಸಲು ಕೂಡಿಟ್ಟಿದ್ದ ಹಣವನ್ನು ಆಸ್ಪತ್ರೆಗೆ ತಂದ ಬಾಲಕನಿಗೆ ಪ್ರಶಸ್ತಿ

    ಕೋಳಿಮರಿಯನ್ನು ರಕ್ಷಿಸಲು ಕೂಡಿಟ್ಟಿದ್ದ ಹಣವನ್ನು ಆಸ್ಪತ್ರೆಗೆ ತಂದ ಬಾಲಕನಿಗೆ ಪ್ರಶಸ್ತಿ

    ಐಜ್ವಾಲ್: ಆಟವಾಡುವಾಗ ಕೋಳಿ ಮರಿ ಮೇಲೆ ಸೈಕಲ್ ಹರಿಸಿ ಬಳಿಕ ತನ್ನೊಂದಿಗೆ ಇದ್ದ ಹಣವನ್ನು ಆಸ್ಪತ್ರೆಗೆ ತೆಗೆದುಕೊಂಡು ಅದನ್ನು ರಕ್ಷಿಸಲು ಪ್ರಯತ್ನಪಟ್ಟ ಬಾಲಕನಿಗೆ ಶಾಲೆ ಮೆಚ್ಚುಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

    6 ವರ್ಷದ ಡೆರೆಕ್ ಸಿ ಲಾಲ್ಚಾನ್ಹಿಮಾ ಬಾಲಕನ ಕಾರ್ಯ ನೋಡಿ ಶಾಲಾ ಸಿಬ್ಬಂದಿ ಆತನಿಗೆ ಸನ್ಮಾನ ಮಾಡಿದ್ದಾರೆ. ಶಾಲಾ ಸಿಬ್ಬಂದಿ ಅವರು ಡೆರೆಕ್‍ಗೆ ಶಾಲು ಹೊದಿಸಿದ್ದಾರೆ. ಮಿಜೋರಾಂನಲ್ಲಿ ಈ ಹಿಂದೆ ಈ ರೀತಿಯ ಶಾಲುಗಳನ್ನು ಯೋಧರಿಗೆ ಅಥವಾ ಮುಖ್ಯ ಅತಿಥಿಗಳಿಗೆ ಹಾಕಿ ಸನ್ಮಾನಿಸುತ್ತಿದ್ದರು. ಈಗ ಬಾಲಕನ ಶೌರ್ಯವನ್ನು ಮೆಚ್ಚಿದ ಶಾಲಾ ಸಿಬ್ಬಂದಿ ಈ ಶಾಲನ್ನು ಬಾಲಕನಿಗೆ ಹಾಕಿ ಸನ್ಮಾನಿಸಿದ್ದಾರೆ.

    ಬಾಲಕನಿಗೆ ಶಾಲು ಹೊದಿಸಿ ಕೈಯಲ್ಲಿ ಪ್ರಶಸ್ತಿ ಹಿಡಿದುಕೊಂಡು ನಿಂತಿರುವ ಫೋಟೋವನ್ನು ಸಂಗಾ ಎನ್ನುವವರು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಬಾಲಕ ಕೋಳಿ ಮರಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಫೋಟೋವನ್ನು ಕೂಡ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು.  ಇದನ್ನೂ ಓದಿ: ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ನಡೆದಿದ್ದೇನು?
    ಆಟವಾಡುವ ವೇಳೆ ಬಾಲಕ ತುಳಿಯುತ್ತಿದ್ದ ಸೈಕಲ್ ಕೋಳಿ ಮರಿ ಮೇಲೆ ಹರಿದಿದ್ದು, ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿತ್ತು. ಕೂಡಲೇ ತನ್ನಿಂದಲೇ ಕೋಳಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ ಬಾಲಕ ತಾನು ಕೂಡಿಟ್ಟಿದ್ದ ಹಣದೊಂದಿಗೆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತೆರಳಿದ್ದನು. ಆಸ್ಪತ್ರೆಗೆ ತೆರಳಿದ ಬಾಲಕ ವೈದ್ಯರಿಗೆ ತಾನು ತಂದಿದ್ದ ಹಣವನ್ನು ನೀಡಿ ಕೋಳಿ ಮರಿಗೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾನೆ. ಬಾಲಕನ ಈ ಫೋಟೋದೊಂದಿಗೆ ಆತನ ವಿವರಗಳನ್ನು `ಸಂಗಾ’ ಹೆಸರಿನ ವ್ಯಕ್ತಿಯೊಬ್ಬರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಫೋಟೋ ವೈರಲ್ ಆಗಿತ್ತು.

  • ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ಐಜ್ವಾಲ್: ಮಕ್ಕಳು ಶುದ್ಧ ಮನಸ್ಸಿನ ದೇವರ ಪ್ರತಿರೂಪಗಳು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಸದ್ಯ ಈ ಮಾತಿಗೆ ನೈಜ ಸಾಕ್ಷಿಯಂತೆ ಮಿಜೋರಾಂನ ಸೈರಂಗ್ ಬಾಲಕ ಮಾಡಿದ ಮುಗ್ಧ ಮನಸ್ಸಿನ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    ನಡೆದಿದ್ದೇನು?
    ಆಟವಾಡುವ ವೇಳೆ ಬಾಲಕ ತುಳಿಯುತ್ತಿದ್ದ ಸೈಕಲ್ ಕೋಳಿ ಮರಿ ಮೇಲೆ ಹರಿದಿದ್ದು, ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿದೆ. ಕೂಡಲೇ ತನ್ನಿಂದಲೇ ಕೋಳಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ ಬಾಲಕ ತಾನು ಕೂಡಿಟ್ಟಿದ್ದ ಹಣದೊಂದಿಗೆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.

    ಆಸ್ಪತ್ರೆಗೆ ತೆರಳಿದ ಬಾಲಕ ವೈದ್ಯರಿಗೆ ತಾನು ತಂದಿದ್ದ ಹಣವನ್ನು ನೀಡಿ ಕೋಳಿ ಮರಿಗೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾನೆ. ಬಾಲಕನ ಈ ಫೋಟೋದೊಂದಿಗೆ ಆತನ ವಿವರಗಳನ್ನು ‘ಸಂಗಾ’ ಹೆಸರಿನ ವ್ಯಕ್ತಿಯೊಬ್ಬರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಬಾಲಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಪೋಸ್ಟಿಗೆ ಇದುವರೆಗೂ 1 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. 74 ಸಾವಿರ ಮಂದಿ ಶೇರ್ ಮಾಡಿದ್ದರೆ, 9 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಕನ ಈ ನಡೆಗೆ ಮೆಚ್ಚುಗೆ ಸೂಚಿಸಿರುವ ಹಲವು ಮಂದಿ ಆತನ ಪೋಷಕರು ಬಾಲಕನನ್ನು ಬೆಳೆಸಿದ ಪರಿಗೂ ಶಹಬ್ಬಾಶ್ ಗಿರಿ ನೀಡಿದ್ದಾರೆ.

  • ವಿಡಿಯೋ: ಕೋಳಿಯನ್ನು ಮೇಲಕ್ಕೆತ್ತಲು ಬಾಲಕನನ್ನು ಬಾವಿಗಿಳಿಸಿದ ಮಹಿಳೆಯರು!

    ವಿಡಿಯೋ: ಕೋಳಿಯನ್ನು ಮೇಲಕ್ಕೆತ್ತಲು ಬಾಲಕನನ್ನು ಬಾವಿಗಿಳಿಸಿದ ಮಹಿಳೆಯರು!

    ಮಂಗಳೂರು: ನೀರಿಲ್ಲದ ಬಾವಿಯೊಳಗೆ ಬಿದ್ದಿದ್ದ ಕೋಳಿಯನ್ನು ಎತ್ತಲು ಬಾಲಕನೋರ್ವನನ್ನು ಹಗ್ಗ ಕಟ್ಟಿ ಬಾವಿಯೊಳಗೆ ಇಳಿಸಿದ ಘಟನೆ ರಾಜ್ಯದ ಕರಾವಳಿಯಲ್ಲಿ ನಡೆದಿದೆ.

    ಈ ಭಯಾನಕ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಗೂ ಗ್ರಾಮಸವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ಸೇರಿ ಬಾಲಕನನ್ನು ಬಕೆಟ್‍ನಲ್ಲಿ ನಿಲ್ಲಿಸಿ ಆತನ ಸೊಂಟಕ್ಕೆ ಹಗ್ಗ ಕಟ್ಟಿ ಬಾವಿಯೊಳಗೆ ಇಳಿಸಿದ್ದಾರೆ. ಬಾವಿಯೊಳಗೆ ಇಳಿದ ಬಾಲಕ ಕೋಳಿಯನ್ನು ಹಿಡಿದು ಬಕೆಟ್‍ನೊಳಗೆ ಹಾಕಿ ಮತ್ತೆ ಅದೇ ಬಕೆಟ್ ಮೂಲಕ ಮೇಲಕ್ಕೆ ಬರುತ್ತಾನೆ. ಕೋಳಿ ಸಿಕ್ಕಿದ ಖುಷಿಯಲ್ಲಿ ಮಹಿಳೆಯರು ಬಾಲಕ ಬಕೆಟ್‍ನಲ್ಲಿರೋದನ್ನು ಗಮನಿಸದೇ ವೇಗವಾಗಿ ಮೇಲಕ್ಕೆ ಎಳೆದಿದ್ದಾರೆ.

    ಒಂದು ವೇಳೆ ಆಯತಪ್ಪಿ ಬಾಲಕ ಕೆಳಕ್ಕೆ ಬಿದ್ದಿದ್ದರೆ ದೊಡ್ಡ ಅನಾಹುತವಾಗ್ತಿತ್ತು. ಮಾತ್ರವಲ್ಲದೆ ಈ ಹಿಂದೆ ಜಿಲ್ಲೆಯಲ್ಲೇ ಕೆಲವು ಮಂದಿ ಬಾವಿಯೊಳಗೆ ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣವೂ ನಡೆದಿದೆ. ಈ ದೃಶ್ಯವನ್ನು ಚಿತ್ರೀಕರಿಸಿದ ಯುವಕನೂ ಈ ಕೃತ್ಯಕ್ಕೆ ಸಹಕರಿಸಿದ್ದಾನೆ. ಬಾವಿಯೊಳಗೆ ಆಯತಪ್ಪಿ ಬಿದ್ದಿರುವ, ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣಗಳು ನಡೆಯುತ್ತಿದ್ದರೂ ಈ ರೀತಿ ಮಾಡಿರೋದು ಇದೀಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

    https://www.youtube.com/watch?v=CSyf8xubTWU&feature=youtu.be