Tag: ಕೋಳಿ ಫಾರಂ

  • ಹಕ್ಕಿ ಜ್ವರ ಹರಡುತ್ತಿರುವ ಹಿನ್ನೆಲೆ ಎಲ್ಲಾ ಪೌಲ್ಟ್ರಿ ಫಾರಂಗಳ ಮೇಲೆ ಕಣ್ಣಿಡಲು ಕೇಂದ್ರ ಸೂಚನೆ

    ಹಕ್ಕಿ ಜ್ವರ ಹರಡುತ್ತಿರುವ ಹಿನ್ನೆಲೆ ಎಲ್ಲಾ ಪೌಲ್ಟ್ರಿ ಫಾರಂಗಳ ಮೇಲೆ ಕಣ್ಣಿಡಲು ಕೇಂದ್ರ ಸೂಚನೆ

    ನವದೆಹಲಿ: ಹಲವಾರು ರಾಜ್ಯಗಳಲ್ಲಿ ಹೆಚ್5ಎನ್1(H5N1) ಹಕ್ಕಿ ಜ್ವರ(Birf flu) ಹರಡುತ್ತಿರುವ ಹಿನ್ನೆಲೆ ಎಲ್ಲಾ ಕೋಳಿ ಫಾರಂಗಳ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

    ಹಕ್ಕಿ ಜ್ವರ ಹರಡುವಿಕೆ ತಡೆಗಟ್ಟಲು ಮೂರು-ಹಂತದ ಕಾರ್ಯತಂತ್ರದ ಭಾಗವಾಗಿ ಎಲ್ಲಾ ಕೋಳಿ ಸಾಕಣೆ ಕೇಂದ್ರಗಳು ಒಂದು ತಿಂಗಳೊಳಗೆ ಕಡ್ಡಾಯವಾಗಿ ಆಯಾ ರಾಜ್ಯ ಪಶುಸಂಗೋಪನಾ ಇಲಾಖೆಗಳಲ್ಲಿ ನೋಂದಣಿ ಮಾಡಬೇಕು ಎಂದು ಕೇಂದ್ರ ಪಶುಸಂಗೋಪನೆ ಸಚಿವಾಲಯ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ಮಾಜಿ ಸಿಎಂಗಳು ಸಂಚರಿಸಿದ ಕಾರನ್ನ 2.10 ಲಕ್ಷಕ್ಕೆ ಖರೀದಿಸಿದ ಕಾಂಗ್ರೆಸ್‌ ನಾಯಕ

    ದೇಶದ ಹಲವಾರು ಪ್ರದೇಶಗಳಲ್ಲಿ ಹೆಚ್5ಎನ್1 ವೈರಸ್ ನಿರಂತರವಾಗಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ದೇಶನ ಬಂದಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ಮಧ್ಯಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ 34 ಕೇಂದ್ರಗಳಲ್ಲಿ ಅಧಿಕಾರಿಗಳು ಹಕ್ಕಿ ಜ್ವರದ ಹರಡುವಿಕೆಯನ್ನು ದೃಢಪಡಿಸಿದ್ದಾರೆ. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆಗೂ ಮುನ್ನ ಪೂಜೆ ಸಲ್ಲಿಸಿದ್ದ ದೇವಾಲಯದಲ್ಲಿ ಕಳ್ಳತನ!

    ಹಕ್ಕಿ ಜ್ವರವನ್ನು ಹಾಗೂ ಅದರ ಹರಡುವಿಕೆಯನ್ನು ತಡೆಗಟ್ಟಲು ತುರ್ತು ಕ್ರಮಗಳ ಕುರಿತು ಚರ್ಚಿಸಲು ಅಲ್ಕಾ ಉಪಾಧ್ಯಾಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೃಷಿ ಭವನದಲ್ಲಿ ಕೋಳಿ ಉದ್ಯಮ ಪ್ರತಿನಿಧಿಗಳು, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಧಿಕಾರಿಗಳು ಮತ್ತು ಇತರ ಪಾಲುದಾರರೊಂದಿಗೆ ಉನ್ನತ ಮಟ್ಟದ ಸಭೆ ನಡೆಯಿತು. ಇದನ್ನೂ ಓದಿ: ಹೆಡ್ ಕಾನ್‍ಸ್ಟೇಬಲ್ ಮನೆಗೆ ಕನ್ನ – 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

    ಹಕ್ಕಿ ಜ್ವರ ಎಂದರೇನು?
    ಏವಿಯನ್ ಇನ್ಫ್ಲುಯೆನ್ಸ್‌ ಎಂದು ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಒಂದು ಸೋಂಕು ಆಗಿದ್ದು, ಅದು ಪಕ್ಷಿಗಳಲ್ಲಿ ಹರಡುತ್ತದೆ. ಇದು ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ.

  • ಹಕ್ಕಿಜ್ವರ ಭೀತಿ – ಚಿತ್ರದುರ್ಗ ಜಿಲ್ಲಾಡಳಿತದಿಂದ ಕೋಳಿ ಫಾರಂಗಳಲ್ಲಿ ಜಾಗೃತಿ

    ಹಕ್ಕಿಜ್ವರ ಭೀತಿ – ಚಿತ್ರದುರ್ಗ ಜಿಲ್ಲಾಡಳಿತದಿಂದ ಕೋಳಿ ಫಾರಂಗಳಲ್ಲಿ ಜಾಗೃತಿ

    ಚಿತ್ರದುರ್ಗ: ರಾಜ್ಯಾದ್ಯಂತ ಹಕ್ಕಿಜ್ವರದ (Bird Flu) ಭೀತಿ ಕಾಡುತ್ತಿದೆ. ಅದರಲ್ಲೂ ಆಂಧ್ರಪ್ರದೇಶ ಹಾಗೂ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲೂ ಹಕ್ಕಿಜ್ವರ ತಾಂಡವವಾಡುತ್ತಿರುವ ಪರಿಣಾಮ ಅಲರ್ಟ್ ಆಗಿರುವ ಚಿತ್ರದುರ್ಗ ಜಿಲ್ಲಾಡಳಿತ (Chitradurga District Administration) ಕೋಳಿ ಫಾರಂಗಳಲ್ಲಿ (Poultry) ಹಕ್ಕಿಜ್ವರ ಹರಡದಂತೆ ಜಾಗೃತಿ ಮೂಡಿಸಿದೆ.

    ಹಕ್ಕಿಜ್ವರವನ್ನು ಎದುರಿಸಲು ಸಜ್ಜಾಗಿರುವ ಜಿಲ್ಲೆಯ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು, ಚಿತ್ರದುರ್ಗ ತಾಲೂಕಿನ ದಂಡಿನ ಕುರುಬರಹಟ್ಟಿಯ ಕರ್ನಾಟಕ ಪೌಲ್ಟ್ರಿ ಫಾರಂನಲ್ಲಿ ಹಕ್ಕಿಜ್ವರದ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ನಡೆಸಿದ್ದು, ಫಾರಂನಲ್ಲಿನ ಸ್ವಚ್ಛತಾ ವ್ಯವಸ್ಥೆ ಹಾಗೂ ಹಕ್ಕಿಜ್ವರ ಹರಡದಂತೆ ಅಲ್ಲಿನ ಸಿಬ್ಬಂದಿಗಳು ಕೈಗೊಂಡಿರುವ ಮುಂಜಾಗ್ರತೆಯನ್ನು ಗಮನಿಸಲಾಯಿತು. ಇದನ್ನೂ ಓದಿ: ಕೊಡಗಿನಲ್ಲೂ ಹಕ್ಕಿ ಜ್ವರದ ಭೀತಿ – ಬಿರಿಯಾನಿ ಹೋಟೆಲ್‌ಗಳು ಖಾಲಿ ಖಾಲಿ!

    ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಹಕ್ಕಿಜ್ವರ ದಿನದಿನಕ್ಕೂ ಮಿತಿಮೀರುತ್ತಿರುವ ಪರಿಣಾಮ ಆಂಧ್ರ ಗಡಿಭಾಗದಲ್ಲಿರುವ ಚಿತ್ರದುರ್ಗದಲ್ಲೂ ಹಕ್ಕಿಜ್ವರದ ಭೀತಿ ಶುರುವಾಗಿದೆ. ಹೀಗಾಗಿ ಕುಕ್ಕುಟೋದ್ಯಮದ ಮೇಲಿನ ಎಫೆಕ್ಟ್ ತಗ್ಗಿಸಲು ಪಶುಸಂಗೋಪನೆ ಇಲಾಖೆಅಧಿಕಾರಿಗಳು ಮುಂದಾಗಿದ್ದು, ಜಿಲ್ಲೆಯ 337 ಕೋಳಿ ಫಾರಂಗಳು, 307 ಮಾಂಸದ ಫಾರಂ ಹಾಗೂ 35 ಮೊಟ್ಟೆ ಕೋಳಿ ಫಾರಂಗಳಿಗೆ ಭೇಟಿ ನೀಡಿ ಹಕ್ಕಿಜ್ವರದ ಜಾಗೃತಿ ಮೂಡಿಸಿದರು. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – 10 ದಿನ ಕಳೆದ್ರೂ ಸಂಪರ್ಕಕ್ಕೆ ಸಿಗದ 8 ಕಾರ್ಮಿಕರು

    ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಎದ್ದಲಬೊಮ್ಮಯ್ಯನಹಟ್ಟಿ, ಚಳ್ಳಕೆರೆಯ ನಾಗಪ್ಪನಳ್ಳಿ ಗೇಟ್ ಹಾಗೂ ಹಿರಿಯೂರಿನ ಪಿಡಿ ಕೋಟೆ ಗಡಿಭಾಗದಲ್ಲಿ ಮೂರುಕಡೆ ಚೆಕ್ ಪೋಸ್ಟ್‌ಗಳನ್ನು ತೆರೆದಿದ್ದು, ಹೊರ ರಾಜ್ಯದ ಕೋಳಿ ಹಾಗೂ ಮೊಟ್ಟೆಗಳು ಚಿತ್ರದುರ್ಗಕ್ಕೆ ಎಂಟ್ರಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಇದನ್ನೂ ಓದಿ: ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿಗೆ ಸಂಚು – ಶಂಕಿತ ಭಯೋತ್ಪಾದಕ ಅರೆಸ್ಟ್

    ಜೊತೆಗೆ ಕೋಳಿ ಫಾರಂಗಳಲ್ಲೂ ಸಹ ಹಕ್ಕಿಜ್ವರ ಹರಡದಂತೆ ಮುಂಜಾಗ್ರತೆ ವಹಿಸಿದ್ದು, ಸ್ವಚ್ಛತೆಯೊಂದಿಗೆ, ಫಾರಂ ಸುತ್ತಲು ಆಗಾಗ್ಗೆ ಔಷಧಿ ಸಿಂಪಡಿಸುವಂತೆ ಫಾರಂ ಮಾಲೀಕರಿಗೆ ತಿಳಿಸಲಾಗಿದೆ. ಅಲ್ಲದೇ ಆಂಧ್ರ ಗಡಿಭಾಗದಿಂದ ಹಕ್ಕಿಜ್ವರ ಶುರುವಾದ ಬೆನ್ನಲ್ಲೇ ಹೊರರಾಜ್ಯದಿಂದ ಬರುವ ಕೋಳಿಗಳು, ಮೊಟ್ಟೆ ಹಾಗೂ ಕೋಳಿಗಳ ಆಹಾರ ಸಾಗಾಟಕ್ಕೆ ಕೋಟೆನಾಡಲ್ಲಿ ಬ್ರೇಕ್ ಹಾಕಲಾಗಿದೆ. ಇದನ್ನೂ ಓದಿ: ಹಕ್ಕಿ ಜ್ವರ ಭೀತಿ – ಬಾಗಲಕೋಟೆ ಜಿಲ್ಲಾಡಳಿತದಿಂದ ಸಭೆ

    ಫಾರಂ ಮಾಲೀಕರು ಹಾಗೂ ಸಿಬ್ಬಂದಿ ಕೂಡ ಹಕ್ಕಿಜ್ವರ ತಡೆಯಲು ಅಧಿಕಾರಿಗಳೊಂದಿಗೆ ಕೈ ಜೋಡಿಸಿದ್ದಾರೆ. ಹಕ್ಕಿಜ್ವರ ಹರಡದಂತೆ ತಡೆಯಲು ಫೀಡಿಂಗ್, ಸ್ವಚ್ಛತೆಗೆ ಆದ್ಯತೆ ನೀಡಿರುವುದಾಗಿ ಪೌಲ್ಟ್ರಿ ಸಿಬ್ಬಂದಿಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ: ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ

  • ಚಿತ್ರದುರ್ಗ| ಮಳೆರಾಯನ ಅಟ್ಟಹಾಸಕ್ಕೆ 65 ಲಕ್ಷಕ್ಕೂ ಅಧಿಕ ಮೌಲ್ಯದ 25,000 ಕೋಳಿಗಳ ಮಾರಣಹೋಮ

    ಚಿತ್ರದುರ್ಗ| ಮಳೆರಾಯನ ಅಟ್ಟಹಾಸಕ್ಕೆ 65 ಲಕ್ಷಕ್ಕೂ ಅಧಿಕ ಮೌಲ್ಯದ 25,000 ಕೋಳಿಗಳ ಮಾರಣಹೋಮ

    ಚಿತ್ರದುರ್ಗ: ಸೋಮವಾರ ತಡರಾತ್ರಿ ಸುರಿದ ಮಳೆಗೆ 25,000 ಕೋಳಿಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ಮಹಾದೇವಪುರ ಗ್ರಾಮದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೋಳಿಫಾರಂಗೆ ನೀರು ನುಗ್ಗಿದ್ದು, ಸುಮಾರು 25,000 ಕೋಳಿಗಳು ಸಾವನ್ನಪ್ಪಿರುವ ದೃಶ್ಯ ಮನಕಲಕುವಂತಿದೆ. ಮಹಾದೇವಪುರದ ಶಿವಾನಂದಪ್ಪ ಎಂಬವರಿಗೆ ಸೇರಿದ ಸುಮಾರು 25,000 ಕೋಳಿಗಳನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ರವಾನಿಸಬೇಕಿತ್ತು. ಇದನ್ನೂ ಓದಿ: ತುಂಗಾ ಮೇಲ್ದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿ

    ಆದರೆ ಅತಿ ಕಡಿಮೆ ಮಳೆ ಬೀಳುವ ಈ ಪ್ರದೇಶದಲ್ಲಿ ಇಂತಹ ಅವಾಂತರ ನಡೆದ ಪರಿಣಾಮ ಸುಮಾರು 65 ಲಕ್ಷ ರೂ. ಮೌಲ್ಯದ ಹಾನಿಯನ್ನು ರೈತರು ಎದುರಿಸುವಂತಾಗಿದೆ. ಹೀಗಾಗಿ ಕೋಳಿ ಸಾಕಣೆಧಾರರು ಕಂಗಾಲಾಗಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ತುಮಕೂರು| ಸಾಲಬಾಧೆ ತಾಳಲಾರದೆ ಮಾತ್ರೆ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ – ಪತಿ ಸಾವು, ಪತ್ನಿ ಗಂಭೀರ

  • ಭಾರೀ ಮಳೆಗೆ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ – ರೈತ ಕಂಗಾಲು

    ಭಾರೀ ಮಳೆಗೆ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ – ರೈತ ಕಂಗಾಲು

    –  50 ಲಕ್ಷ ನಷ್ಟ – ದಿಕ್ಕು ದೋಚದಂತಾದ ರೈತ

    ಚಿಕ್ಕಬಳ್ಳಾಪುರ: ಕಳೆದ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಗಂಗರೆ ಕಾಲುವೆ ಗ್ರಾಮದಲ್ಲಿ ಕೋಳಿ ಫಾರಂಗೆ ಮಳೆ ನೀರು ನುಗ್ಗಿ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣ ಹೋಮ ಆಗಿದೆ.

    chicken farm

    ಗ್ರಾಮದ ಗುಣಭೂಷಣ್ ಅವರ ಕೋಳಿ ಫಾರಂ ಇದಾಗಿದ್ದು, ಸರಿಸುಮಾರು 50 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ರೈತ ಗುಣಭೂಷನ್ ತಿಳಿಸಿದ್ದಾರೆ. ಅಂದಹಾಗೆ ಕಳೆದ ರಾತ್ರಿ ಧಾರಕಾರವಾಗಿ ಎಡೆಬಿಡದೇ ಸತತ 4-5 ಗಂಟೆಗಳ ಕಾಲ ಸುರಿದ ಮಳೆಗೆ, ರಾಜಕಾಲುವೆಯಲ್ಲಿ ಹರಿಯಬೇಕಾದ ನೀರು ಕೋಳಿ ಫಾರಂ ಶೆಡ್‍ಗೆ ನುಗ್ಗಿದೆ. ಕೋಳಿ ಫಾರಂ ಶೆಡ್ ತುಂಬಾ 2-3 ಅಡಿ ನೀರು ಶೇಖರಣೆಗೊಂಡು ಕೋಳಿಗಳೆಲ್ಲವೂ ಸಾವನ್ನಪ್ಪಿವೆ. ಇದನ್ನೂ ಓದಿ: ಹೆಚ್‍ಡಿಕೆ ರಾತ್ರಿ 10 ಗಂಟೆ ನಂತ್ರ ಕಣ್ಮುಚ್ಚಿ ಮಲಗಿ ಎಲ್ಲವನ್ನೂ ನೆನಪಿಸ್ಕೊಳ್ಳಲಿ: ಎಸ್‍ಟಿಎಸ್

    chicken farm

    ಇದೇ ಮೊದಲ ಬಾರಿಗೆ ಕೋಳಿ ಫಾರಂ ಆರಂಭಿಸಿದ್ದ ರೈತ ಗುಣಭೂಷಣ್, ಕಳೆದ ಒಂದು ವರ್ಷದಿಂದ 220 ಅಡಿ ಉದ್ದ 40 ಅಡಿ ಅಗಲದ ಕೋಳಿ ಫಾರಂ ಶೆಡ್ ನಿರ್ಮಾಣ ಕಾರ್ಯ ಮಾಡಿ, ಮೂರು ತಿಂಗಳ ಹಿಂದೆಯಷ್ಟೇ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಸಾಕಾಣಿಕೆ ಮಾಡಿದ್ದರು. ಇನ್ನೂ ಎರಡು ಮೂರು ದಿನಗಳಲ್ಲಿ ಕೋಳಿಗಳನ್ನು ಮಾರಾಟ ಸಹ ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ಮಳೆಯಿಂದಾಗಿ ಕೋಳಿ ಫಾರಂಗೆ ನೀರು ನುಗ್ಗಿದ್ದು, ಕೋಳಿಗಳು ಸಾವನ್ನಪ್ಪಿದ್ದು, ರೈತನ ಕನಸುಗಳು ನುಚ್ಚು ನೂರಾಗಿದೆ. ಇದನ್ನೂ ಓದಿ: ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

    chicken farm

    ಸದ್ಯ ಮಾರುಕಟ್ಟೆಯಲ್ಲಿ 200 ರಿಂದ 250 ರೂಪಾಯಿಯವರೆಗೂ 1 ಕೆಜಿ ಚಿಕನ್ ಮಾರಾಟವಾಗುತ್ತಿದ್ದು, ಸರಿ ಸುಮಾರು 25 ಟನ್‍ಗೆ 25 ರಿಂದ 30 ಲಕ್ಷ ಆದಾಯ ಕಣ್ಣು ಮುಂದೆಯೇ ನಾಶವಾಗಿದೆ. ನಾನು ನೇಣು ಹಾಕಿಕೊಳ್ಳುವ ಪರಿಸ್ಥಿತಿಯನ್ನು ಮಳೆ ತಂದೊಡ್ಡಿದೆ ಎಂದು ಗುಣಭೂಷಣ್ ನೋವು ತೋಡಿಕೊಂಡಿದ್ದಾರೆ ಮತ್ತು ಸರ್ಕಾರ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿಕೊಂಡಿದ್ದಾರೆ.

  • ರಾಜಕೀಯ ದ್ವೇಷ – ಶಾಸಕರ ಸೂಚನೆಯಂತೆ ಕೋಳಿ ಫಾರಂ ನೆಲಸಮ

    ರಾಜಕೀಯ ದ್ವೇಷ – ಶಾಸಕರ ಸೂಚನೆಯಂತೆ ಕೋಳಿ ಫಾರಂ ನೆಲಸಮ

    – ದೇವರ ಬಳಿ ಪ್ರಮಾಣ ಮಾಡಲು ಕೈ ಮುಖಂಡರ ಪಟ್ಟು
    – ಎಸ್‍ವಿ ರಾಮಚಂದ್ರಪ್ಪ ಸೂಚನೆಯಂತೆ ನೆಲಸಮ

    ದಾವಣಗೆರೆ: ರಾಜಕೀಯ ದುರುದ್ದೇಶದಿಂದ ಬಿಜೆಪಿ ಶಾಸಕರೊಬ್ಬರು ಕೋಳಿ ಫಾರಂನನ್ನು ಅಕ್ರಮವಾಗಿ ನೆಲಸಮ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ದಾವಣಗೆರೆಯಲ್ಲಿ ಕೇಳಿ ಬಂದಿದೆ.

    ಜಿಲ್ಲೆಯ ಜಗಳೂರು ತಾಲೂಕಿನ ಹೀರೇ ಅರಕೆರೆ ಗ್ರಾಮದ ನಿವಾಸಿ ಗುರುಸ್ವಾಮಿ ರಸ್ತೆಗೆ ಹಾಗೂ ಬಸ್ ನಿಲ್ದಾಣಕ್ಕೆ ಜಮೀನು ಬಿಟ್ಟುಕೊಟ್ಟಿದ್ದರು. ಹೀಗಾಗಿ ಅಲ್ಲೇ ಪಕ್ಕದಲ್ಲಿ 2015ರಲ್ಲಿ ತಹಶೀಲ್ದಾರ್ ಅವರ ಅನುಮತಿ ಮೇರೆಗೆ ಕೋಳಿ ಫಾರಂ ಶೆಡ್ ನಿರ್ಮಾಣ ಮಾಡಿದ್ದರು. ಆದರೆ ಈಗ ಶಾಸಕ ಎಸ್‍ವಿ ರಾಮಚಂದ್ರಪ್ಪ ರಾಜಕೀಯ ದ್ವೇಷದ ಮೇಲೆ ಈ ಶೆಡ್ ಅನ್ನು ಒಡೆಸಿಹಾಕಿದ್ದಾರೆ ಎಂದು ಗುರುಸ್ವಾಮಿ ಆರೋಪ ಮಾಡಿದ್ದಾರೆ.

    ಈ ಹಿಂದೆ ಗುರುಸ್ವಾಮಿ ಹಾಗೂ ಎಸ್‍ವಿ ರಾಮಚಂದ್ರಪ್ಪ ಇಬ್ಬರು ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಈ ಮಧ್ಯೆ ಕಾಂಗ್ರೆಸ್ ಬಿಟ್ಟು ಬಂದ ರಾಮಚಂದ್ರಪ್ಪ ಬಿಜೆಪಿಯಿಂದ ಎಂಎಲ್‍ಎ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಶಾಸಕರಾದರು. ಇದಾದ ನಂತರ ರಾಮಚಂದ್ರಪ್ಪ ಗುರುಸ್ವಾಮಿಯನ್ನು ನಮ್ಮ ಪಕ್ಷಕ್ಕೆ ಬಾ ಎಂದು ಹೇಳುತ್ತಿದ್ದರಂತೆ. ಇದಕ್ಕೆ ಗುರುಸ್ವಾಮಿ ನಾನು ಬರುವುದಿಲ್ಲ ಎಂದು ಹೇಳಿದ್ದಾರೆ. ಪಕ್ಷ ಸೇರದಿದ್ದಕ್ಕೆ ಕೋಪಗೊಂಡ ಶಾಸಕ ಈ ರೀತಿ ಮಾಡಿದ್ದಾರೆ ಎಂದು ಗುರುಸ್ವಾಮಿ ದೂರಿದ್ದಾರೆ.

    ನೋಟಿಸ್ ಕೂಡ ನೀಡದೇ, ಏಕಾಏಕಿ ಜೆಸಿಬಿಯಿಂದ ಶೆಡ್ ಅನ್ನು ತಹಶೀಲ್ದಾರ್ ತಿಮ್ಮಪ್ಪ ನೆಲಸಮ ಮಾಡಿದ್ದಾರೆ. ಈ ವೇಳೆ ಶೆಡ್ ಒಳಗೆ ಇದ್ದ ಮನೆಯ ಸಾಮಗ್ರಿಗಳನ್ನು ತೆಗೆದುಕೊಳ್ಳುತ್ತೇವೆ ಎಂದರೂ ಬಿಡದೇ ಶಾಸಕರಿಂದ ಕರೆ ಮಾಡಿಸಿ ನಾವು ಹಾಗೇ ಬಿಟ್ಟು ಹೋಗುತ್ತೇವೆ ಎಂದು ತಹಶೀಲ್ದಾರ್ ತಿಮ್ಮಪ್ಪ ಹೇಳಿದರು ಎಂದು ಗುರುಸ್ವಾಮಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

    ರಾಜಕೀಯ ದ್ವೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಶಾಸಕ ರಾಮಚಂದ್ರಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೊತೆಗೆ ಈ ಕೃತ್ಯದಲ್ಲಿ ಶಾಸಕರ ಪಾತ್ರವಿಲ್ಲದಿದ್ದರೆ ಮಾಯಮ್ಮ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲ್ ಹಾಕಿದ್ದಾರೆ ಹಾಗೂ ಮಂಗಳವಾರ ಮಾಯಮ್ಮ ದೇವಿ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುವಂತೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.

  • ಮಕ್ಕಳಂತೆ ಸಾಕಿದ್ದೇನೆ – ಕೋಳಿಗಳಿಗಾಗಿ ಗೋಳಾಡಿದ ವೃದ್ಧೆ

    ಮಕ್ಕಳಂತೆ ಸಾಕಿದ್ದೇನೆ – ಕೋಳಿಗಳಿಗಾಗಿ ಗೋಳಾಡಿದ ವೃದ್ಧೆ

    – ದಮ್ಮಯ್ಯ ಎನ್ನುತ್ತೇನೆ ಕೋಳಿ ಬಿಡ್ರಪ್ಪ

    ದಾವಣಗೆರೆ: ಮಕ್ಕಳಂತೆ ಸಾಕಿದ್ದೇನೆ. ದಮ್ಮಯ್ಯ ಎನ್ನುತ್ತೇನೆ ಕೋಳಿ ಬಿಡ್ರಪ್ಪ ಎಂದು ವೃದ್ಧೆಯೊಬ್ಬರು ಗೋಳಾಡಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪಕ್ಕದಲ್ಲೇ ಇರುವ ಅಭಿಷೇಕ್ ಎನ್ನುವರಿಗೆ ಸೇರಿದ ಕೋಳಿ ಫಾರಂನಲ್ಲಿ ಹಕ್ಕಿರೋಗ ಕಂಡುಬಂದಿದ್ದು, ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳು ಕೂಡ ಫಾರಂನ ಒಂದು ಕಿಲೋಮೀಟರ್ ಸುತ್ತಳತೆಯಲ್ಲಿರುವ ಕೋಳಿಗಳನ್ನು ಹಾಗೂ ಸಾಕು ಪಕ್ಷಿಗಳನ್ನು ನಾಶ ಪಡಿಸಲು ಕಿಲ್ಲಿಂಗ್ ಆರ್ಡರ್ ನೀಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಆರೋಗ್ಯ ಇಲಾಖೆ ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಬನ್ನಿಕೋಡು ಗ್ರಾಮದಲ್ಲಿರುವ ಕೋಳಿಗಳನ್ನು ನಾಶಮಾಡಲು ರ‍್ಯಾಪಿಡ್ ಟೀಮ್ ರೆಡಿ ಮಾಡಿಕೊಂಡಿದ್ದಾರೆ.

    ಬನ್ನಿಕೋಡು ಗ್ರಾಮದಲ್ಲಿ 1,167 ಸಾಕು ಕೋಳಿಗಳಿದ್ದು,12 ಜನರ ರ‍್ಯಾಪಿಡ್ ರೆಸ್ಪಾನ್ಸ್ ಟೀಂನಿಂದ ಕಿಲ್ಲಿಂಗ್ ಅಪರೇಷನದ ಶುರು ಮಾಡಿದ್ದಾರೆ. ಗ್ರಾಮದಲ್ಲಿ ಇರುವ ಕೋಳಿಗಳನ್ನು ಹಾಗೂ ಸಾಕು ಪಕ್ಷಿಗಳನ್ನು ಹಿಡಿದು ನಾಶ ಮಾಡಿ ಗ್ರಾಮದ ಹೊರ ಭಾಗದಲ್ಲಿರುವ ಗುಂಡಿಯಲ್ಲಿ ಹಾಕಿ ಮುಚ್ಚಲು ಮುಂದಾಗಿದ್ದಾರೆ. ಆದರೆ ಗ್ರಾಮದ ವೃದ್ಧೆ ಸೀತಮ್ಮ ತಮ್ಮ ಕೋಳಿಗಳನ್ನು ಹಿಡಿದುಕೊಂಡು ಹೋಗಬೇಡಿ ಎಂದು ಗೋಳಾಡಿದ್ದಾಳೆ. ಕೋಳಿಗಳನ್ನು ಮಕ್ಕಳಂತೆ ಸಾಕಿದ್ದೇನೆ. ದಮ್ಮಯ್ಯ ಎನ್ನುತ್ತೇನೆ ನನ್ ಕೋಳಿ ಬಿಡ್ರಪ್ಪ. ಕೋಳಿ ಬದಲು ನನ್ನನ್ನು ಸಾಯಿಸಿ ಎಂದು ವೃದ್ಧೆ ಗೋಳಾಡಿದ್ದಾಳೆ.

    ವೃದ್ಧೆ ಸೀತಮ್ಮನ ಬಳಿ 9 ಕೋಳಿಗಳಿದ್ದು, ಆ ಕೋಳಿಗಳಿಂದಲೇ ಜೀವನ ನಡೆಸುತ್ತಿದ್ದಳು. ಈಗ ಕಿಲ್ಲಿಂಗ್ ಆದೇಶ ಬಂದಿದ್ದೇ ತಡ ಗ್ರಾಮಕ್ಕೆ ನುಗ್ಗಿದ ರ‍್ಯಾಪಿಡ್ ಟೀಮ್ ಒಂದು ಕೋಳಿಯನ್ನು ಬಿಡದೇ ಹಿಡಿದು ಗುಂಡಿಯಲ್ಲಿ ಹೂಳುತ್ತಿದ್ದಾರೆ. ಅದಕ್ಕೆ ವೃದ್ಧೆ ಸೀತಮ್ಮ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೋಳಿಯನ್ನು ಸಾಯಿಸುವ ಬದಲು ನನ್ನನ್ನು ಸಾಯಿಸಿ ಎಂದು ಗೋಳಾಡಿದ್ದಾಳೆ. ಆದರೆ ಅಧಿಕಾರಿಗಳು ಮಾತ್ರ ಆದೇಶದಂತೆ ಕೋಳಿಯನ್ನು ಬಿಡದೆ ಗುಂಡಿಯಲ್ಲಿ ಮುಚ್ಚಿದ್ದಾರೆ. ಅಲ್ಲದೇ ವೃದ್ಧೆಗೆ ಸಮಾಧಾನ ಮಾಡಿ ನಿಮಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    https://www.facebook.com/publictv/videos/792337247922752/

  • ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಯಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಅದರಂತೆ ರಾಜ್ಯದಲ್ಲಿಯೂ ಕೊರೊನಾ ವೈರಸ್‍ನ ಪರಿಣಾಮ ಸಾಕಷ್ಟಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಕುಕ್ಕುಟೋದ್ಯಮ ನಷ್ಟ ಅನುಭವಿಸುತ್ತಿದೆ. ಶಿವಮೊಗ್ಗದ ಸಂತೆಕಡೂರಿನಲ್ಲಿ ಶ್ರೀನಿವಾಸ್ ಕೋಳಿ ಫಾರಂನ ಮಾಲೀಕರಾದ ಶ್ರೀನಿವಾಸ್ ನಷ್ಟ ಅನುಭವಿಸಿದ್ದು, ಸುಮಾರು 4 ಸಾವಿರ ಜೀವಂತ ಕೋಳಿಮರಿಗಳನ್ನು ಗುಂಡಿ ತೆಗೆದು ಹೂತಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಜಗತ್ತಿನ ಹಲವು ದೇಶಗಳ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿದೆ. ಈ ನಡುವೆ ರಾಜ್ಯದಲ್ಲಿಯೂ ಕೊರೊನಾ ವೈರಸ್ ಭೀತಿಯ ಎಫೆಕ್ಟ್ ಬಹಳ ಜೋರಾಗಿದ್ದು, ಈಗಾಗಲೇ ರಾಜ್ಯದಲ್ಲಿ 4 ಮಂದಿಗೆ ಈ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಹಕ್ಕಿ ಜ್ವರದ ಭೀತಿ ಕೂಡ ಶುರುವಾಗಿದ್ದು, ಶಿವಮೊಗ್ಗದ ಕುಕ್ಕುಟೋದ್ಯಮದ ಮೇಲೆ ಭಾರೀ ಗಂಭೀರ ಪರಿಣಾಮ ಬೀರಿದೆ.

    ಶಿವಮೊಗ್ಗದ ಸಂತೆಕಡೂರು ಗ್ರಾಮದ ಶ್ರೀನಿವಾಸ್ ಕೋಳಿ ಫಾರಂನಲ್ಲಿದ್ದ 22 ದಿನಗಳ ಸುಮಾರು 4 ಸಾವಿರ ಕೋಳಿ ಮರಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿದೆ. ಕಳೆದ ನಾಲ್ಕು ದಿನಗಳಿಂದ ಕೋಳಿ ಮಾಂಸ ಮಾರಾಟಗಾರರು ಕೋಳಿ ಖರೀದಿಗೆ ಹಿಂದೇಟು ಹಾಕಿದ್ದು, ಸುಮಾರು 170 ರೂ. ಇದ್ದ ಕೋಳಿ ಮಾಂಸದ ಬೆಲೆ ಕೇವಲ 70 ರೂ. ಗೆ ಇಳಿದಿದೆ. ಇದರಿಂದಾಗಿ ಭಾರೀ ನಷ್ಟವುಂಟಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಕೂಡ ನಷ್ಟದ ಹಾದಿಯಲ್ಲಿದ್ದು, ತಾವು ಫಾರಂನಲ್ಲಿ ಬೆಳೆಸಲಾಗುತ್ತಿರುವ ಕೋಳಿಗಳಿಗೆ ಬೆಲೆ ಇಲ್ಲದಂತಾಗಿ ನಷ್ಟ ಅನುಭವಿಸುವ ಬದಲು ಜೀವಂತವಾಗಿ ಹೂತರೆ ಇನ್ನಷ್ಟು ನಷ್ಟವುಂಟಾಗುವುದು ತಪ್ಪುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

    ಇಂದು ಜೆಸಿಬಿ ಮೂಲಕ 12 ಅಡಿ ಆಳದ ಗುಂಡಿ ತೆಗೆದು ಜೀವಂತವಾಗಿ ಕೋಳಿ ಮರಿಗಳನ್ನು ಹೂತು ಹಾಕಿದ್ದಾರೆ. ಶ್ರೀನಿವಾಸ್ ಅವರಿಗೆ ಒಂದು ಕೆಜಿ ಕೋಳಿಗೆ ಕೇವಲ 8 ರೂ. ಮಾತ್ರ ಸಿಗುತ್ತಿದ್ದು, ಕೋಳಿ ಸಾಕಲು 16 ರೂ. ವರೆಗೂ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡೂವರೆ ಲಕ್ಷ ಖರ್ಚಾಗಿದ್ದು, ಇದನ್ನು ಮತ್ತೆ ಸಾಕಲು ಮುಂದಾದರೆ ಮತ್ತೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತದೆ. ಹೀಗಾಗಿ ಈಗಲೇ ಹೂತು ಹಾಕಿದರೇ ಲಕ್ಷಾಂತರ ರೂಪಾಯಿ ನಷ್ಟ ತಪ್ಪಿದಂತಾಗುತ್ತದೆ ಎಂಬ ನಿರ್ಧಾರಕ್ಕೆ ಶ್ರೀನಿವಾಸ್ ಬಂದಿದ್ದಾರೆ.

    ಆದ್ದರಿಂದ ಶ್ರೀನಿವಾಸ್ ಅವರು 4 ಸಾವಿರ ಕೋಳಿಗಳನ್ನು ಸಮಾಧಿ ಮಾಡುವ ತೀರ್ಮಾನಕ್ಕೆ ಬಂದಿದ್ದು, ಜೀವಂತ ಕೋಳಿಗಳನ್ನು ತಮ್ಮ ಫಾರಂನ ಆವರಣದಲ್ಲಿಯೇ ಹೂತಿದ್ದಾರೆ. ಕೊರೊನಾ ವೈರಸ್ ಭೀತಿಗೆ ಜನರು ಕೋಳಿ ಮಾಂಸ ಸೇವಿಸದೇ ಇರುವುದೇ ಈ ನಷ್ಟಕ್ಕೆ ಕಾರಣವಾಗಿದೆ. ಕೋಳಿ ಕೃಷಿ ಮಾಡುವವರು ಇದೀಗ ಬೀದಿಗೆ ಬರುವಂತಾಗಿದ್ದು, ಮಾಂಸ ಮಾರಾಟಗಾರರು ಕೂಡ ಮಾಂಸ ಮಾರಾಟ ಮಾಡಲಾಗದೇ, ಕೋಳಿಗಳನ್ನ ಖರೀದಿಸದೇ ಸುಮ್ಮನಾಗಿದ್ದಾರೆ.

    ಕೊರೊನಾ ವೈರಸ್ ಕೋಳಿಯಿಂದ ಬಾರಲ್ಲ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತೆದೆ. ಹೀಗಾಗಿ ಕೋಳಿ ತಿನ್ನುವುದರಲ್ಲಿ ಸಮಸ್ಯೆ ಇಲ್ಲ. ಕೋಳಿ ಮಾಂಸ ಖರೀದಿಸಿ, ನಮ್ಮನ್ನು ಉಳಿಸಿ ಎಂಬುದು ಕೋಳಿ ಫಾರಂ ಮಾಲೀಕರ ಅಳಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೋಳಿ ಫಾರಂ ಮಾಲೀಕರು ಮನವಿ ಮಾಡಿದ್ದಾರೆ.

    ಕೊರೊನಾ ವೈರಸ್ ಮತ್ತು ಹಕ್ಕಿ ಜ್ವರದ ಭೀತಿ ಪರಿಣಾಮದಿಂದಾಗಿ ಕುಕ್ಕುಟೋದ್ಯಮಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಇದೀಗ ಜಿಲ್ಲೆಯಲ್ಲಿ ಪ್ರಥಮ ಕೋಳಿ ಫಾರಂ ಮುಚ್ಚಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಏನೇ ಆಗಲಿ ಕೊರೊನಾ ವೈರಸ್‍ನ ಭೀತಿಯಿಂದಾಗಿ ಜನರು ನಲುಗಿಹೋಗಿದ್ದು, ಇದನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

  • ಮಗನನ್ನು ಕೊಂದು ಕೋಳಿ ಫಾರಂನಲ್ಲಿ ಮೃತದೇಹವನ್ನು ಹೂತಿಟ್ಟ ತಂದೆ

    ಮಗನನ್ನು ಕೊಂದು ಕೋಳಿ ಫಾರಂನಲ್ಲಿ ಮೃತದೇಹವನ್ನು ಹೂತಿಟ್ಟ ತಂದೆ

    ಹೈದರಾಬಾದ್: ತಂದೆಯೊಬ್ಬ ತನ್ನ ಮಗನನ್ನು ಕೊಲೆ ಮಾಡಿ ಆತನ ಮೃತದೇಹವನ್ನು ಕೋಳಿ ಫಾರಂನಲ್ಲಿ ಹೂತಿಟ್ಟ ಘಟನೆ ಗುರುವಾರ ಹೈದರಾಬಾದ್‍ನ ಮೆಡಕ್ ಜಿಲ್ಲೆಯ ಇಬ್ರಾಹಿಂಪುರದಲ್ಲಿ ನಡೆದಿದೆ.

    ಶ್ರವಣ್ ಕುಮಾರ್ ರೆಡ್ಡಿ(24) ಕೊಲೆಯಾದ ಮಗ. ಸ್ಥಳೀಯ ಸಂಘದ ಅಧ್ಯಕ್ಷನಾಗಿರುವ ನಾರಾಯಣ ರೆಡ್ಡಿ ತನ್ನ ಮಗ ಶ್ರವಣ್‍ನನ್ನು ಕೊಲೆ ಮಾಡಿದ್ದಾನೆ. ಶ್ರವಣ್ ಆರೋಪಿ ನಾರಾಯಣ ರೆಡ್ಡಿಯ ಎರಡನೇ ಮಗನಾಗಿದ್ದು, ಮೆಡ್ಚಲ್‍ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದನು. ದಸರಾ ಹಬ್ಬಯಿರುವ ಕಾರಣ ಶ್ರವಣ್ ತನ್ನ ಮನೆಗೆ ಬಂದಿದ್ದನು.

    ಸೋಮವಾರ ಸಂಜೆ ನಾರಾಯಣ ರೆಡ್ಡಿ ಹಾಗೂ ಶ್ರವಣ್ ಕುಮಾರ್ ನಡುವೆ ಜಗಳವಾಗಿದೆ. ಜಗಳವಾಡಿದ ಸಮಯದಲ್ಲಿ ಮದ್ಯದ ನಶೆಯಲ್ಲಿದ್ದ ನಾರಾಯಣ ರೆಡ್ಡಿ ತನ್ನ ಮಗ ಶ್ರವಣ್‍ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಗ ಮೃತಪಟ್ಟಿದ್ದಾನೆ ಎಂದು ತಿಳಿದ ತಕ್ಷಣ ನಾರಾಯಣ ಆತನ ಮೃತದೇಹವನ್ನು ಕೋಳಿ ಫಾರಂ ಹೂತಿಟ್ಟಿದ್ದಾನೆ.

    ಶ್ರವಣ ಎಲ್ಲಿಯೂ ಕಾಣಿಸದಿದ್ದಾಗ ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ಅಲ್ಲದೆ ಶ್ರವಣ್ ನಾಪತ್ತೆ ಆದಾಗಿನಿಂದ ಕುಟುಂಬಸ್ಥರು ಆತನ ಬಗ್ಗೆ ಎಲ್ಲಿಯೂ ಮಾತನಾಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸದ್ಯ ಪೊಲೀಸರು ನಾರಾಯಣ ರೆಡ್ಡಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಾರಾಯಣ ತನ್ನ ಮಗನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

  • ಅಚ್ಚರಿ ಮೂಡಿಸಿದ ಮೂರು ಕಾಲಿನ ಅಪರೂಪದ ಕೋಳಿ ಮರಿ

    ಅಚ್ಚರಿ ಮೂಡಿಸಿದ ಮೂರು ಕಾಲಿನ ಅಪರೂಪದ ಕೋಳಿ ಮರಿ

    ಧಾರವಾಡ: ಕೋಳಿಗೆ ಎರಡು ಕಾಲು ಇರೋದು ಸರ್ವೇ ಸಾಮಾನ್ಯ. ಆದರೆ ಧಾರವಾಡದಲ್ಲಿ ಒಂದು ಕೋಳಿ ಮರಿಗೆ ಮೂರು ಕಾಲುಗಳಿದ್ದು, ಈ ಅಪರೂಪದ ಕೋಳಿಮರಿ ಎಲ್ಲರನ್ನು ಅಚ್ಚರಿಗೊಳಿಸಿದೆ.

    ಹೌದು, ಧಾರವಾಡ ಹೊರವಲಯದ ಆಂಜನೆಯನಗರದ ಬಳಿಯ ಕೋಳಿ ಫಾರ್ಮನಲ್ಲಿ ಈ ಕೋಳಿ ಮರಿ ಪತ್ತೆಯಾಗಿದೆ. ಕೋಳಿ ಫಾರ್ಮನ ಮಾಲೀಕ ಇಲ್ಮುದ್ದಿನ್ ಮೊರಬ ಈ ಅಪರೂಪ ಮರಿಯನ್ನು ಸಾಕುತ್ತಿದ್ದಾರೆ. ಎರಡು ಕಾಲುಗಳ ಜೊತೆ ಇನ್ನೊಂದು ಕಾಲು ಬೆನ್ನಿನ ಕೆಳ ಭಾಗದಲ್ಲಿದೆ. 15 ದಿನ ಈ ಮರಿಗೆ ಓಡಾಡಲು ಏನು ತೊಂದರೆ ಆಗಿರಲಿಲ್ಲ. ಆದರೆ ಇದಕ್ಕೆ ಇರುವ ಪ್ರತ್ಯೇಕ ಕಾಲಿನಿಂದಲೇ ಈಗ ಕೊಂಚ ತೊಂದರೆಯಾಗುತ್ತದೆ. ಇದನ್ನೂ ಓದಿ:ಕಾಫಿನಾಡಿನಲ್ಲಿ ಕಂಡುಬಂತು 4 ಕಾಲಿನ ಫಾರಂ ಕೋಳಿ

    ಈ ಕೋಳಿಮರಿಯನ್ನು ಮೊರಬ ಕುಟುಂಬ ಮಾರಾಟ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡು ಸಾಕುತ್ತಿದ್ದಾರೆ. ಈ ಕೋಳಿ ಮರಿಗೆ ಮೂರು ಕಾಲು ಇರುವುದನ್ನ ಕೇಳಿದ ಜನರು ಕೂಡಾ ಅತ್ಯಂತ ಕುತೂಹಲದಿಂದ ಇದನ್ನು ನೋಡಲು ಬರುತ್ತಿದ್ದಾರೆ. ಜೊತೆಗೆ ಇದರ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.

  • ಕಾರವಾರ ಬಿರುಗಾಳಿ ಆರ್ಭಟಕ್ಕೆ 5 ಸಾವಿರ ಕೋಳಿಗಳ ಸಾವು!

    ಕಾರವಾರ ಬಿರುಗಾಳಿ ಆರ್ಭಟಕ್ಕೆ 5 ಸಾವಿರ ಕೋಳಿಗಳ ಸಾವು!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಸಂಜೆ ವೇಳೆಗೆ ಸುರಿದ ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಕೋಳಿ ಫಾರಂ ಮೇಲ್ಛಾವಣಿ ಕುಸಿದು ಸುಮಾರು 5 ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಅರಶಿಣಗೇರಿ ನಡೆದಿದೆ.

    ಅರಶಿಣಗೇರಿಯ ಹಜರತ್ ಅಲಿ ಎಂಬವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ಕೋಳಿ ಫಾರಂ ನೆಲಸಮ ಆಗಿರುವುದಿಂದ ಸುಮಾರು 15 ಲಕ್ಷ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯ ಮುಂಡಗೋಡು, ಶಿರಸಿ, ಯಲ್ಲಾಪುರಗಳಲ್ಲಿ ಗುಡುಗು ಸಹಿತ ಬಿರುಗಾಳಿ ಬೀಸಿದ್ದು, ಅಲ್ಪ ತುಂತುರು ಮಳೆಯಾಗಿದ್ದು ಕರಾವಳಿಯಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ.

    ಇತ್ತ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಹಲವು ಭಾಗಗಳಲ್ಲಿಯೂ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಫಾನಿ ಚಂಡಮಾರುತದಿಂದ ಬಿರುಗಾಳಿ ಸಹಿತ ಮಳೆ ಆಗುವ ನಿರೀಕ್ಷೆ ಇರುವುದಿಂದ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.