Tag: ಕೋಲ್ಕಾತ್ತಾ ನೈಟ್ ರೈಡರ್ಸ್

  • 6 ಸಿಕ್ಸರ್ ಸಿಡಿಸಿದ ರೋಹಿತ್ – ಕೋಲ್ಕತ್ತಾಗೆ 196 ರನ್‍ಗಳ ಟಾರ್ಗೆಟ್

    6 ಸಿಕ್ಸರ್ ಸಿಡಿಸಿದ ರೋಹಿತ್ – ಕೋಲ್ಕತ್ತಾಗೆ 196 ರನ್‍ಗಳ ಟಾರ್ಗೆಟ್

    ಅಬುಧಾಬಿ: ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 196 ದೊಡ್ಡ ಮೊತ್ತದ ಟಾರ್ಗೆಟ್ ನೀಡಿದೆ.

    ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಧೋನಿ ನಂತರ 200 ಸಿಕ್ಸರ್ ಸಿಡಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್ (326) ಮತ್ತು ಎರಡನೇ ಸ್ಥಾನದಲ್ಲಿ ಎಬಿಡಿ ವಿಲಿಯರ್ಸ್ (214) ಮತ್ತು ಮೂರನೇ ಸ್ಥಾನದಲ್ಲಿ ಧೋನಿ (212) ಇದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ಬಂದ ಮುಂಬೈ ಇಂಡಿಯನ್ಸ್‍ಗೆ ಆರಂಭಿಕ ಆಘಾತ ನೀಡಿದ ಶಿವಂ ಮಾವಿ, ಪಂದ್ಯದ ಎರಡನೇ ಓವರಿನಲ್ಲಿ ಆರಂಭಿಕ ಕ್ವಿಂಟನ್ ಡಿ ಕಾಕ್ ಒಂದು ರನ್‍ ಗಳಿಗೆ ಔಟ್ ಆದರು. ಆದರೆ ನಂತರ ಒಂದಾದ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಬ್ಯಾಟ್ ಬೀಸಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ತಂಡ ಒಂದು ವಿಕೆಟ್ ಕಳೆದುಕೊಂಡು 59 ರನ್ ಗಳಿಸಿತು.

    ನೈಟ್ ರೈಡರ್ಸ್ ಬೌಲರ್ ಗಳನ್ನು ಕಾಡಿದ ಈ ಜೋಡಿ ಉತ್ತಮವಾಗಿ ಜೊತೆಯಾಟವಾಡಿತು. ಈ ಮೂಲಕ ಹತ್ತು ಓವರ್ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್ ತಂಡ 94 ರನ್ ಗಳಿಸಿತು. ಆದರೆ 11ನೇ ಓವರಿನಲ್ಲಿ ಇಲ್ಲದ ರನ್ ಕದಿಯಲು ಹೋದ ಸೂರ್ಯಕುಮಾರ್ ಯಾದವ್ 28 ಬಾಲಿಗೆ 47 ರನ್ ಸಿಡಿಸಿ ರನೌಟ್ ಆದರು. ನಂತರ ಬಂದು ರೋಹಿತ್‍ಗೆ ಉತ್ತಮ ಸಾತ್ ನೀಡಿದ ಸೌರಭ್ ತಿವಾರಿ 15ನೇ ಓವರಿನಲ್ಲಿ 21 ರನ್‍ಗಳಿಸಿ ಸುನಿಲ್ ನರೈನ್ ಅವರಿಗೆ ಔಟ್ ಆಗಿ ಹೊರ ನಡೆದರು.

    ನಂತರ ರೋಹಿತ್ ಜೊತೆಯಾಗಿ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು, ಆದರೆ 54 ಎಸೆತದಲ್ಲಿ 80 ರನ್ (3 ಫೋರ್, 6 ಸಿಕ್ಸ್) ಸಿಡಿಸಿ ಆಡುತ್ತಿದ್ದ ರೋಹಿತ್ ಶರ್ಮಾ ಶಿವಂ ಮಾವಿ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ನಂತರ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ಪಾಂಡ್ಯ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಕೀರನ್ ಪೊಲಾರ್ಡ್ ಮತ್ತು ಕೃನಾಲ್ ಪಾಂಡ್ಯ ಸೇರಿ ಮುಂಬೈ ತಂಡವನ್ನು 190ರ ಗಡಿ ದಾಟಿಸಿದರು.