Tag: ಕೋಲ್ಕತ್ತ

  • ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಇನ್ನಿಲ್ಲ

    ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಇನ್ನಿಲ್ಲ

    ಕೋಲ್ಕತ್ತ: ಹೃದಯಾಘಾತದಿಂದಾಗಿ ಕೋಲ್ಕತಾದ ಆಸ್ಪತ್ರೆಯಲ್ಲಿ ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿರವರು ಇಂದು ವಿಧಿವಶರಾಗಿದ್ದಾರೆ.

    ಚಟರ್ಜಿ(89) ಅವರು ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಮಂಗಳವಾರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, 12 ಸದಸ್ಯರ ವೈದ್ಯರ ತಂಡ ಅನುಭವಿ ರಾಜಕಾರಣಿಯನ್ನು ನೋಡಿಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ತಿಂಗಳು ಚಟರ್ಜಿರವರು ರಕ್ತಸ್ರಾವದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು.

    ರಾಗಾ ಸಂತಾಪ:
    10 ಅವಧಿ ಸಂಸದರಾಗಿದ್ದು, ಮಾಜಿ ಸೋಮನಾಥ ಚಟರ್ಜಿರವರು ನಮ್ಮನ್ನು ಅಗಲಿರುವುದು ದುಖಃದ ಕ್ಷಣವಾಗಿದೆ. ಸೋಮನಾಥ್ ಚಟರ್ಜಿ ಸಂಸತ್ತಿನ ಎಲ್ಲ ಸದಸ್ಯರ ಗೌರವ ಮತ್ತು ಮೆಚ್ಚುಗೆಗೆ ಪಾತ್ರವಾದಂತ ಅಜಾತಶತೃ ನಾಯಕ. ಚಟರ್ಜಿ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವಿಟ್ಟರ್  ನಲ್ಲಿ ಬರೆದುಕೊಂಡಿದ್ದಾರೆ.

    ಚಟರ್ಜಿರವರು 10 ಬಾರಿ ಲೋಕಸಭಾ ಸದಸ್ಯರಾಗಿದ್ದರು ಮತ್ತು ಸಿಪಿಐ(ಎಂ) ನ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 1968 ರಲ್ಲಿ ರಾಜಕೀಯ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಸದನದಲ್ಲಿ 2004 ರಿಂದ 2009 ರವರೆಗೆ ಲೋಕಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಯುಪಿಎ-ಐ ಸರ್ಕಾರಕ್ಕೆ ತನ್ನ ಪಕ್ಷದ ಬೆಂಬಲ ಹಿಂತೆಗೆದುಕೊಂಡ ಬಳಿಕ ಸ್ಪೀಕರ್ ಆಗಿ ರಾಜೀನಾಮೆ ನೀಡಲು ನಿರಾಕರಿಸಿದ್ದಕ್ಕೆ 2008ರಲ್ಲಿ ಚಟರ್ಜಿರವರನ್ನು ಸಿಪಿಐ(ಎಂ) ನಿಂದ ಹೊರಹಾಕಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://twitter.com/CMofKarnataka/status/1028874221483520001

  • ವಿಡಿಯೋ: ಕೋಲ್ಕತ್ತಾದ ಎಲ್‍ಐಸಿ ಕಚೇರಿಯಲ್ಲಿ ಅಗ್ನಿ ಅವಘಡ

    ವಿಡಿಯೋ: ಕೋಲ್ಕತ್ತಾದ ಎಲ್‍ಐಸಿ ಕಚೇರಿಯಲ್ಲಿ ಅಗ್ನಿ ಅವಘಡ

    ಕೋಲ್ಕತ್ತ: ಗುರುವಾರ ಬೆಳಗ್ಗೆ ಕೋಲ್ಕತ್ತಾದ ಜವಾಹರ್ ಲಾಲ್ ನೆಹರೂ ರೋಡ್ ನಲ್ಲಿರೋ ಎಲ್‍ಐಸಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

    ಇಂದು ಬೆಳಗ್ಗೆ ಸುಮಾರು 10:20ಕ್ಕೆ ಈ ಅವಘಡ ಸಂಭವಿಸಿದೆ. 16ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವೇಗವಾಗಿ 17ನೇ ಮಹಡಿಗೂ ಆವರಿಸಿದೆ. ಘಟನಾ ಸ್ಥಳಕ್ಕೆ ಹತ್ತು ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ. ಘಟನೆಯಲ್ಲಿ ಪ್ರಾಣಹಾನಿ ಆಗಿರೋ ಬಗ್ಗೆ ಈವರೆಗೆ ಯಾವುದೇ ವರದಿಯಾಗಿಲ್ಲ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ಲೋಬಲ್ ಮಾರ್ಕೆಟ್ ಕಚೇರಿಯ ಸರ್ವರ್ ರೂಮ್ ಕೂಡ ಇದೇ ಮಹಡಿಯಲ್ಲಿದೆ. ಆ ಮಹಡಿಯಲ್ಲಿ ಯಾರೂ ಸಿಲುಕಿರುವ ಬಗ್ಗೆ ಸುದ್ದಿ ಇಲ್ಲ ಎಂದು ಎಸ್‍ಬಿಐನ ಮುಖ್ಯ ವ್ಯವಸ್ಥಾಪಕರಾದ ಪಿ.ಪಿ ಸೇನ್ ಗುಪ್ತಾ ತಿಳಿಸಿದ್ದಾರೆ.

    ಜೀವನ್ ಸುಧಾ ಕಟ್ಟಡದ 17ನೇ ಮಹಡಿಯಲ್ಲಿ ಅವರಿಸಿರೋ ಬೆಂಕಿಯನ್ನು ನಂದಿಸಲು ಹತ್ತು ಅಗ್ನಿಶಾಮಕ ವಾಹನಗಳನ್ನ ಬಳಸಿಕೊಳ್ಳಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ವೇಗವಾಗಿ ಬೇರೆ ಕಟ್ಟಡದ ಇತರೆ ಮಹಡಿಗಳಿಗೂ ಆವರಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

    19 ಮಹಡಿಯ ಈ ಕಟ್ಟಡದಲ್ಲಿ ಎಸ್‍ಬಿಐನ ಕಚೇರಿ, ಎಲ್‍ಐಸಿ ಬ್ರಾಂಚ್ ಹಾಗೂ ಇತರೆ ಹಣಕಾಸು ಸಂಸ್ಥೆಗಳ ಕಚೇರಿಗಳು ಇವೆ.