Tag: ಕೋಲ್ಕತ್ತ ನೈಟ್ ರೈಡರ್ಸ್

  • IPL 2023: ಆರ್‌ಸಿಬಿ ಗಾಯಾಳುಗಳ ಬದಲಿಗೆ ಕಣಕ್ಕಿಳಿಯಲಿದ್ದಾರೆ ಪಾರ್ನೆಲ್, ವೈಶಾಕ್ ವಿಜಯ್

    IPL 2023: ಆರ್‌ಸಿಬಿ ಗಾಯಾಳುಗಳ ಬದಲಿಗೆ ಕಣಕ್ಕಿಳಿಯಲಿದ್ದಾರೆ ಪಾರ್ನೆಲ್, ವೈಶಾಕ್ ವಿಜಯ್

    ನವದೆಹಲಿ: ಆರ್‌ಸಿಬಿ ತಂಡದ ರೀಸ್ ಟೋಪ್ಲಿ ಹಾಗೂ ರಜತ್ ಪಾಟಿದಾರ್ (Rajat Patidar) ಬದಲಿಗೆ ವೇಯ್ನ್ ಪಾರ್ನೆಲ್ (Wayne Parnell) ಮತ್ತು ವೈಶಾಕ್ ವಿಜಯ್ ಕುಮಾರ್ (Vyshak Vijay Kumar) ಆಡಲಿದ್ದಾರೆ.

    ಪಾರ್ನೆಲ್ ಇದುವರೆಗೆ 56 ಟಿ20 ಗಳಲ್ಲಿ ದಕ್ಷಿಣ ಆಫ್ರಿಕಾವನ್ನು (South Africa) ಪ್ರತಿನಿಧಿಸಿದ್ದರು. 6 ಟೆಸ್ಟ್‌ಗಳು 73 ಏಕದಿನ (ODI) ಪಂದ್ಯವಾಡಿರುವ ಪಾರ್ನೆಲ್ ಟಿ20ಯಲ್ಲಿ 59 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಟೋಪ್ಲಿ ಏ.2ರಂದು ನಡೆದ ಆರಂಭಿಕ ಐಪಿಎಲ್‌ (IPL) ಪಂದ್ಯದ ಫಿಲ್ಡಿಂಗ್ ವೇಳೆ ಭುಜ (Shoulder) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಶಾಕ್ ವಿಜಯ್‍ಕುಮಾರ್ ಹಿಮ್ಮಡಿ ಗಾಯಕ್ಕೊಳಗಾಗಿ ಆರಂಭಿಕ ಪಂದ್ಯದಿಂದಲೂ ಹೊರಗುಳಿದಿದ್ದರು.

    ಭುಜದ ಗಾಯದ ನಡುವೆಯೂ ಟೋಪ್ಲಿ ಕೆಕೆಆರ್ ವಿರುದ್ಧ ಆಡಲು ಕೋಲ್ಕತ್ತಾ (Kolkata) ಪ್ರಯಾಣಿಸಿದ್ದರು. ಆಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಲ್‍ರೌಂಡರ್ ಡೇವಿಡ್ ವಿಲ್ಲಿಯವರನ್ನು ಕಣಕ್ಕಿಳಿಸಿ ಯುಕೆಗೆ ಮರಳಿದ್ದಾರೆ.

    ಪಾಟಿದಾರ್ 2021-22ರ ಸಾಲಿನ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆರು ಪಂದ್ಯಗಳಲ್ಲಿ ಎರಡು ಶತಕಗಳು ಮತ್ತು ಐದು ಅರ್ಧ ಶತಕಗಳಿಸಿದ್ದರು. ಕಳೆದ ಬೇಸಿಗೆಯಲ್ಲಿ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಗಳಿಸಿದ್ದರು.

    ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಎರಡನೇ ಮ್ಯಾಚ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 81 ರನ್‍ಗಳ ಸೋಲು ಕಂಡಿತ್ತು. ಇದನ್ನೂ ಓದಿ: IPL 2023: ಶಾರ್ದೂಲ್‌ ಬೆಂಕಿ ಬ್ಯಾಟಿಂಗ್‌, ವರುಣ್ ಮಿಂಚಿನ ಬೌಲಿಂಗ್‌ – RCBಗೆ ಹೀನಾಯ ಸೋಲು

  • ಭಾರತೀಯರಿಗೆ  ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ಭಾರತೀಯರಿಗೆ ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ನವದೆಹಲಿ: ಅಫ್ಘಾನಿಸ್ತಾನದ ಅಧ್ಯಕ್ಷರಾದ ಅಶ್ರಫ್ ಘನಿ ಟ್ವೀಟ್ ಮಾಡುವ ಮೂಲಕ ಭಾರತೀಯರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಶುಕ್ರವಾರ ಈಡನ್ ಗಾರ್ಡನ್ ನಲ್ಲಿ ನಡೆದ ಎಲಿಮಿನೇಟರ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಆಲ್‍ರೌಂಡರ್ ಪ್ರದರ್ಶನ ತೋರುವ ಮೂಲಕ ರಶೀದ್ ಖಾನ್ ಕ್ರೀಡಾಂಗಣದಲ್ಲಿ ಮಿಂಚಿದ್ರು.

    ತನ್ನ ಮಾತೃ ತಂಡ ಸನ್‍ರೈಸರ್ಸ್ ಹೈದರಾಬಾದ್ ಗೆಲುವುಗಾಗಿ ರಶೀದ್ ಖಾನ್‍ಗೆ ಆಲ್‍ರೌಂಡರ್ ಪ್ರರ್ದಶನ ತೋರಿದ್ದಾರೆ. ಮೂಲತಃ ರಶೀದ್ ಖಾನ್ ಅಫ್ಘಾನಿಸ್ತಾನದ ಆಟಗಾರ. ಹೀಗಾಗಿ ಅಲ್ಲಿನ ರಾಷ್ಟ್ರಾಧ್ಯಕ್ಷ ಅಶ್ರಫ್ ಘನಿ ಅವರು ತಮ್ಮ ದೇಶದ ಪ್ರತಿಭೆಗೆ ಅವಕಾಶ ನೀಡಿದ್ದಕ್ಕಾಗಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಹಂತದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರು 14 ರನ್ ಅಂತರದಲ್ಲಿ ಗೆಲವು ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‍ರೈಸರ್ಸ್ ತಂಡದ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತ್ತು. ರಶೀದ್ ಖಾನ್ ಅವರು ಔಟ್ ಆಗದೆ 10 ಎಸೆತದಲ್ಲಿ 4 ಸಿಕ್ಸ್, 2 ಬೌಂಡರಿ ಮೂಲಕ 34 ರನ್ ಕಲೆ ಹಾಕುವ ಮೂಲಕ ತಂಡದ ಬೃಹತ್ ಮೊತ್ತಗೆ ಸಹಾಯವಾದರು. ಅವರ ಅಮೋಘ ಬ್ಯಾಟಿಂಗ್ ಶೈಲಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

    ಬೃಹತ್ ಮೊತ್ತವನ್ನು ಬೆನ್ನಟ್ಟಿ ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತ ತಂಡವನ್ನು 20 ಓವರ್‍ಗಳಲ್ಲಿ 160 ರನ್‍ಗೆ ಕಟ್ಟಿ ಹಾಕಲು ಹೈದರಾಬಾದ್ ತಂಡದ ಬೌಲರ್‍ಗಳು ಯಶಸ್ವಿಯಾದರು. ರಶೀದ್ ಖಾನ್ ಬೌಲಿಂಗ್‍ನಲ್ಲಿಯೂ ಮಿಂಚಿದ್ದಾರೆ. ಒಟ್ಟು 4 ಓವರ್ ಬೌಲ್ ಮಾಡಿದ ಅವರು ಕೇವಲ 19 ರನ್ ನೀಡಿ 4 ವಿಕೆಟ್ ಪಡೆದಿದ್ರು ತಂಡದ ಗೆಲುವಿಗೆ ಕಾರಣರಾದ್ರು.

    ಅಫ್ಘಾನಿಸ್ತಾನ ಜಲಾಲಾಬಾದ್‍ನ 19 ವರ್ಷದ ಆಟಗಾಗರಾಗಿರುವ ರಶೀದ್ ಖಾನ್ ಬಗ್ಗೆ ಅಲ್ಲಿನ ರಾಷ್ಟ್ರಾಧ್ಯಕ್ಷರು ಆಶ್ರಫ್ ಘನಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಮ್ಮ ಹೀರೋ ರಶೀದ್ ಖಾನ್ ಕುರಿತು ಅಫ್ಘಾನಿಸ್ತಾನ ಹೆಮ್ಮೆ ಪಡುತ್ತದೆ. ಅಲ್ಲದೇ ನಮ್ಮ ನೆಲದ ಪ್ರತಿಭೆಗೆ ವೇದಿಕೆ ಒದಗಿಸಿಕೊಟ್ಟ ನನ್ನ ಭಾರತೀಯ ಸಹೋದರರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.