Tag: ಕೋಲ್ಕತ್ತಾ ವೈದ್ಯೆ

  • ಜನರ ಹಿತಕ್ಕಾಗಿ ರಾಜೀನಾಮೆ ನೀಡಲು ಸಿದ್ಧ – ಸಿಎಂ ಮಮತಾ ಬ್ಯಾನರ್ಜಿ ಇಂಗಿತ

    ಜನರ ಹಿತಕ್ಕಾಗಿ ರಾಜೀನಾಮೆ ನೀಡಲು ಸಿದ್ಧ – ಸಿಎಂ ಮಮತಾ ಬ್ಯಾನರ್ಜಿ ಇಂಗಿತ

    ಕೋಲ್ಕತ್ತಾ: ಜನರ ಹಿತಕ್ಕಾಗಿ ರಾಜೀನಾಮೆ ನೀಡಲು ಸಿದ್ಧ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಇಂದು ರಾಜ್ಯ ಸಚಿವಾಲಯದಲ್ಲಿ ಕಿರಿಯ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಭಾವನಾತ್ಮಕ ಭಾಷಣ ಮಾಡಿದರು. ರಾಜ್ಯದ ಉನ್ನತ ಹುದ್ದೆಗೆ (ಸಿಎಂ ಸ್ಥಾನ) ನಾನು ಆಕರ್ಷಿತಳಾಗಿಲ್ಲ. ಜನರ ಹಿತಕ್ಕಾಗಿ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಅಬಕಾರಿ ಅಕ್ರಮ: ಶುಕ್ರವಾರ ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ತೀರ್ಪು

    ವೈದ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮಾತುಕತೆಗೆ ಸರ್ಕಾರ ಯಾವಾಗಲೂ ಸಿದ್ಧವಾಗಿದೆ ಎಂದು ವೈದ್ಯರಿಗೆ ಭರವಸೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧದ ಸಂದೇಶಗಳು ಹರಿದಾಡುತ್ತಿರುವುದನ್ನು ಖಂಡಿಸಿದ ಸಿಎಂ, ನಮ್ಮ ಸರ್ಕಾರವನ್ನು ಅವಮಾನಿಸಲಾಗಿದೆ. ಇದರಲ್ಲಿ ರಾಜಕೀಯ ಬಣ್ಣವಿದೆ ಎಂಬುದು ಜನಸಾಮಾನ್ಯರಿಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

    ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದಿರುವ ವ್ಯಕ್ತಿಗಳಿಗೆ ಯಾವುದೇ ನ್ಯಾಯ ಬೇಕಿಲ್ಲ. ಅವರಿಗೆ ಕುರ್ಚಿ ಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Uttar Pradesh | ಕಾನ್ಪುರ-ದೆಹಲಿ ಹೈವೇಯಲ್ಲಿ ಮಹಿಳೆಯ ರುಂಡವಿಲ್ಲದ, ಅರೆಬೆತ್ತಲೆ ಶವ ಪತ್ತೆ

    ಜನರ ಹಿತದೃಷ್ಟಿಯಿಂದ ನಾನು ಕೆಳಗಿಳಿಯಲು ಸಿದ್ಧಳಿದ್ದೇನೆ. ನನಗೆ ಮುಖ್ಯಮಂತ್ರಿ ಹುದ್ದೆ ಬೇಡ. ತಿಲೋತ್ತಮ್ಮ ಅವರಿಗೆ ನ್ಯಾಯ ಬೇಕು. ಸಾಮಾನ್ಯ ಜನರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕೆಂದು ನಾನು ಬಯಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

  • ಮೃತ ವೈದ್ಯೆ ಕುಟುಂಬಕ್ಕೆ ಹಣ ನೀಡಲು ಪ್ರಯತ್ನಿಸಿಲ್ಲ, ಇದು ಹಸಿ ಸುಳ್ಳು: ಮಮತಾ ಬ್ಯಾನರ್ಜಿ ತಿರುಗೇಟು

    ಮೃತ ವೈದ್ಯೆ ಕುಟುಂಬಕ್ಕೆ ಹಣ ನೀಡಲು ಪ್ರಯತ್ನಿಸಿಲ್ಲ, ಇದು ಹಸಿ ಸುಳ್ಳು: ಮಮತಾ ಬ್ಯಾನರ್ಜಿ ತಿರುಗೇಟು

    ಕೋಲ್ಕತ್ತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರವಾಗಿ, ಹತ್ಯೆಗೀಡಾದ ಟ್ರೈನಿ ವೈದ್ಯೆಯ ಪೋಷಕರಿಗೆ ಕೋಲ್ಕತ್ತಾ (Kolkata) ಪೊಲೀಸರು ಲಂಚ ನೀಡಿದ್ದರು ಎಂಬ ಆರೋಪವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತಳ್ಳಿಹಾಕಿದ್ದಾರೆ‌. ಆ ರೀತಿಯ ಘಟನೆಯೇ ನಡೆದಿಲ್ಲ. ಇದು ಸರ್ಕಾರದ ವಿರುದ್ಧ ದೂಷಣೆ ಎಂದು ಪ್ರತಿಪಾದಿಸಿದ್ದಾರೆ.

    ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಶವವನ್ನು ನೋಡಲು ನಮಗೆ ಅವಕಾಶ ನೀಡಲಿಲ್ಲ. ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವಾಗ ಪೊಲೀಸ್ ಠಾಣೆಯಲ್ಲಿ ಕಾಯಬೇಕಾಯಿತು. ನಂತರ, ಶವವನ್ನು ನಮಗೆ ಹಸ್ತಾಂತರಿಸಿದಾಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಮಗೆ ಹಣವನ್ನು ನೀಡಿದರು. ಅದನ್ನು ನಾವು ತಕ್ಷಣ ನಿರಾಕರಿಸಿದ್ದೇವೆ ಎಂದು ಮೃತ ವೈದ್ಯೆಯ ತಂದೆ ಆರೋಪಿಸಿದ್ದರು. ಇದನ್ನೂ ಓದಿ: ಒಪ್ಪಿಗೆ ಪತ್ರ ಇಲ್ಲದೇ ಟ್ರೈನಿ ವೈದ್ಯೆಯ ಮರಣೋತ್ತರ ಪರೀಕ್ಷೆ ಹೇಗೆ ನಡೆಯಿತು? – ಬಂಗಾಳ ಸರ್ಕಾರಕ್ಕೆ ಸುಪ್ರೀಂ ಚಾಟಿ

    ಇದಕ್ಕೆ ತಿರುಗೇಟು ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, ಮೃತ ವೈದ್ಯೆಯ ಕುಟುಂಬಕ್ಕೆ ನಾನು ಯಾವತ್ತೂ ಹಣ ನೀಡಿಲ್ಲ. ಇದು ಅಪಪ್ರಚಾರವಲ್ಲದೆ ಬೇರೇನೂ ಅಲ್ಲ. ಹಣವು ಎಂದಿಗೂ ಜೀವನವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ನಾನು ಪೋಷಕರಿಗೆ ಈ ಹಿಂದೆ ಹೇಳಿದ್ದೆ. ತಮ್ಮ ಮಗಳ ನೆನಪಿಗಾಗಿ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ಅವರು ಬಯಸಿದರೆ ಸರ್ಕಾರವು ಅವರ ಪರವಾಗಿ ನಿಂತಿದೆ ಎಂದು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.

    ಪ್ರತಿಭಟನೆಯ ನಂತರ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ರಾಜೀನಾಮೆ ನೀಡಲು ಮುಂದಾದರು. ಆದರೆ ದುರ್ಗಾ ಪೂಜೆಗೆ ಮುಂಚಿತವಾಗಿ ಕಾನೂನು ಮತ್ತು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ರಾಜೀನಾಮೆ ಅಂಗೀಕಾರಕ್ಕೆ ನಿರಾಕರಿಸಿದೆ. ಪೊಲೀಸ್ ಅಧಿಕಾರಿಗಳು ಲಂಚ ನೀಡುವ ಪ್ರಯತ್ನ ಇದೊಂದು ಹಸಿ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಚೀನಾಗಿಂತ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು – ಅಮೆರಿಕದಲ್ಲಿ ರಾಹುಲ್‌ ಗಾಂಧಿ ಭಾಷಣ

    ಆ.9 ರಂದು ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮತ್ತು ಕೊಲೆ ಮಾಡಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಿವಿಲ್ ಸ್ವಯಂಸೇವಕನನ್ನು ಬಂಧಿಸಲಾಗಿದೆ. ಪ್ರಕರಣವನ್ನು ಸದ್ಯ ಸಿಬಿಐ ತನಿಖೆ ನಡೆಸುತ್ತಿದ್ದು, ಅದು ಅಂತಿಮ ಹಂತದಲ್ಲಿದೆ.

  • ಇಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ – ಹೊರರೋಗಿಗಳಿಗಿಲ್ಲ ಚಿಕಿತ್ಸೆ

    ಇಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ – ಹೊರರೋಗಿಗಳಿಗಿಲ್ಲ ಚಿಕಿತ್ಸೆ

    – ಕೋಲ್ಕತ್ತ ವೈದ್ಯೆಯ ಹತ್ಯೆ ಖಂಡಿಸಿ ಐಎಂಎ ಪ್ರತಿಭಟನೆಗೆ ಕರೆ; ಸರ್ಕಾರಿ ವೈದ್ಯರ ಬೆಂಬಲ
    – ತುರ್ತು ಸೇವೆಗಳು ಮಾತ್ರ ಲಭ್ಯ

    ಬೆಂಗಳೂರು: ಕೋಲ್ಕತ್ತ ವೈದ್ಯೆಯ (Kolkata Doctor) ಹತ್ಯೆ ಖಂಡಿಸಿ ಐಎಂಎ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓಪಿಡಿ ಇಂದು ಬಂದ್ (OPD Bandh) ಆಗಲಿವೆ. ತುರ್ತು ಸೇವೆಗಳು ಮಾತ್ರ ಲಭ್ಯವಿರಲಿವೆ.

    ಕೋಲ್ಕತ್ತದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನ ಖಂಡಿಸಿ ಇಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರತಿಭಟನೆಗೆ ಕರೆ ಕೊಟ್ಟಿದೆ. ಐಎಂಎ ಕೊಟ್ಟಿರುವ ಕರೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆಗಳ ಒಕ್ಕೂಟ ಮತ್ತು ಹಲವು ವೈದ್ಯಕೀಯ ಅಸೋಸಿಯೇಶನ್‌ಗಳು ಬೆಂಬಲ ಕೊಟ್ಟಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಓಪಿಡಿ ಬಂದ್ ಆಗಲಿದೆ. ಅಂದರೆ 24 ಗಂಟೆಗಳ ಕಾಲ ಓಪಿಡಿ ಸೇವೆ ಸ್ಥಗಿತ ಆಗಲಿದೆ. ಇದನ್ನೂ ಓದಿ: ಸುಡಾನ್ ಅರೆಸೇನಾ ಪಡೆಯಿಂದ ನಾಗರಿಕರ ಮೇಲೆ ದಾಳಿ – 80 ಜನರ ಬಲಿ

    ಓಪಿಡಿ ಸೇವೆ ಬಂದ್ ಆಗುವ ಕಾರಣ ರೋಗಿಗಳು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗುವುದಿಲ್ಲ. ತುರ್ತು ಸೇವೆ ಮಾತ್ರ ಲಭ್ಯವಿರಲಿದೆ. ಬೆಂಗಳೂರಿನಲ್ಲಿ ಇರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಪ್ರತಿಭಟನೆ ಕಾವು ಜೋರಾಗಿ ಇರಲಿದೆ.

    ಇಂದಿನ ವೈದ್ಯರ ಪ್ರತಿಭಟನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಪ್ರತಿಭಟನೆ ಉದ್ದೇಶ ಸರಿ ಇದೆ. ಅವರ ಹಕ್ಕನ್ನ ಅವರು ವ್ಯಕ್ತಪಡಿಸಲಿ. ಸಾರ್ವಜನಿಕರಿಗೆ ತೊಂದರೆ ಆಗದೇ ಇರೋಥರ ಮಾಡಲಿ ಎಂದಿದ್ದಾರೆ. ಜೊತೆಗೆ ಪ್ರತಿಭಟನೆ ಇರುವ ಹಿನ್ನೆಲೆ ಇಂದು ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಸರ್ಕಾರ ಕೂಡ ಆದೇಶ ಮಾಡಿದೆ. ಇದನ್ನೂ ಓದಿ: ಐಫೋನ್ ತಯಾರಕ ಫಾಕ್ಸ್‌ಕಾನ್ ಕಂಪನಿ ಮುಖ್ಯಸ್ಥನ ಜೊತೆ ಸಿಎಂ, ಡಿಸಿಎಂ ಡಿನ್ನರ್

    ಪ್ರತಿಭಟನೆಗೆ ಯರ‍್ಯಾರ ಬೆಂಬಲ?
    ರಾಜ್ಯಾದ್ಯಂತ ಐಎಂಎ ವ್ಯಾಪ್ತಿಯಲ್ಲಿ 30,000 ವೈದ್ಯರಿದ್ದು, ಪ್ರತಿಭಟನೆಗೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಶನ್, ಮಕ್ಕಳ ವೈದ್ಯರ ಅಸೋಸಿಯೇಶನ್, ಅರ್ಥೋಪಿಡಿಕ್ ಅಸೋಸಿಯೇಶನ್, ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಶನ್, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

  • ವೈದ್ಯೆ ಅತ್ಯಾಚಾರ, ಕೊಲೆ ಖಂಡಿಸಿ ರೊಚ್ಚಿಗೆದ್ದ ಪ್ರತಿಭಟನಾಕಾರರು – ಆಸ್ಪತ್ರೆಗೆ ನುಗ್ಗಿ ದಾಂಧಲೆ

    ವೈದ್ಯೆ ಅತ್ಯಾಚಾರ, ಕೊಲೆ ಖಂಡಿಸಿ ರೊಚ್ಚಿಗೆದ್ದ ಪ್ರತಿಭಟನಾಕಾರರು – ಆಸ್ಪತ್ರೆಗೆ ನುಗ್ಗಿ ದಾಂಧಲೆ

    – ಆಸ್ಪತ್ರೆ ಬೆಡ್‌, ಪೀಠೋಪಕರಣಗಳು ಉಡೀಸ್‌; 9 ಮಂದಿ ಅರೆಸ್ಟ್

    ಕೋಲ್ಕತ್ತಾ: ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆ (Kolkata Hospital) ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.

    ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ನುಗ್ಗಿದ ಪ್ರತಿಭಟನಾಕಾರರು ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಅಲ್ಲದೇ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಹಿಂಸಾಚಾರ – ಹಿಂದೂಗಳ ಸುರಕ್ಷತೆ ಬಗ್ಗೆ ಮೋದಿ ಕಳವಳ

    ನಿನ್ನೆ ತಡರಾತ್ರಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಲಾಠಿ ಚಾರ್ಜ್ ಕೂಡ ನಡೆಸಿದರು. ಆಸ್ಪತ್ರೆಯ ಆವರಣದ ಮೇಲೆ ಕಲ್ಲು ನಡೆಸಿದ್ದರು. ಕಲ್ಲೇಟಿಗೆ ಪೊಲೀಸರು ಗಾಯಗೊಂಡಿದ್ದಾರೆ. ಉದ್ರಿಕ್ತರ ಗುಂಪು ಆಸ್ಪತ್ರೆಗೆ ನುಗ್ಗಲು ಪ್ರಯತ್ನಿಸಿತು. ಆದರೆ ನಮ್ಮ ಪೊಲೀಸರು ತಡೆದಿದ್ದಾರೆ. ಈ ವೇಳೆ ತಡೆಯಲು ಮುಂದಾದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದರು.

    ಆಸ್ಪತ್ರೆಯ ಹೊರಗೆ ಬೈಕ್‌ಗೆ ಬೆಂಕಿ ಹಚ್ಚಿಲಾಗಿದೆ. ಕನಿಷ್ಠ ಎರಡು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಪ್ರತಿಭಟನೆಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನದ ಸಂಭ್ರಮ – ದೇಶಭಕ್ತಿ ಮೆರೆದ ಟೀಂ ಇಂಡಿಯಾ ಸ್ಟಾರ್ಸ್‌!

    ದೇಶವನ್ನೇ ಬೆಚ್ಚಿಬೀಳಿಸುವ ಘಟನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

  • ನಮ್ಮ ಮೇಲೆ ಅತ್ಯಾಚಾರ ಮಾಡೋದನ್ನ ಈಗಲಾದ್ರೂ ನಿಲ್ಲಿಸಿ; ಟ್ರೈನಿ ವೈದ್ಯೆ ಕೇಸ್‌ ಬಗ್ಗೆ ಪೂನಂ ಪಾಂಡೆ ಪ್ರತಿಕ್ರಿಯೆ

    ನಮ್ಮ ಮೇಲೆ ಅತ್ಯಾಚಾರ ಮಾಡೋದನ್ನ ಈಗಲಾದ್ರೂ ನಿಲ್ಲಿಸಿ; ಟ್ರೈನಿ ವೈದ್ಯೆ ಕೇಸ್‌ ಬಗ್ಗೆ ಪೂನಂ ಪಾಂಡೆ ಪ್ರತಿಕ್ರಿಯೆ

    – ನಾವು ಹೇಗೆ ಬಟ್ಟೆ ಹಾಕ್ತೀವಿ? ನಡೆಯುತ್ತೇವೆ? ಮಾತಾಡ್ತೇವೆ? ಎಲ್ಲವನ್ನೂ ಕೇಳೋದೇಕೆ?

    ಮುಂಬೈ: ದಯವಿಟ್ಟು ನಮ್ಮ ಮೇಲೆ ಅತ್ಯಾಚಾರ ಮಾಡೋದನ್ನ ಈಗಲಾದ್ರೂ ನಿಲ್ಲಿಸಿ ಎಂದು ಮಾದಕ ನಟಿ ಪೂನಂ ಪಾಂಡೆ (Poonam Pandey) ಭಾವುಕ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ.

    ಕೋಲ್ಕತ್ತಾದಲ್ಲಿ ಇತ್ತೀಚೆಗೆ ತರಬೇತಿ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ (Kolkata Rape Murder Case) ಕುರಿತು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಆರೋಪಿಯ ಹೊಡೆತಕ್ಕೆ ಕನ್ನಡಕ ಒಡೆದು ಬಿದ್ದ ಗಾಜಿನಿಂದ ಕಣ್ಣಲ್ಲಿ ರಕ್ತ!

     

    View this post on Instagram

     

    A post shared by Poonam Pandey (@poonampandeyreal)

    ಪೂನಂ ಪಾಂಡೆ ಇನ್‌ಸ್ಟಾದಲ್ಲಿ ಏನಿದೆ?
    ನಾಚಿಕೆಯಾಗಬೇಕು ನಮಗೆ?…
    ಅತ್ಯಾಚಾರಿಗಳು ಮುಕ್ತವಾಗಿ ನಡೆಯುವ, ಹಿಂಬಾಲಕರು ಕತ್ತಲಲ್ಲಿ ಅಡಗಿರುವ ಹಾಗೂ ಮಹಿಳೆಯರು ನಿರಂತರವಾಗಿ ಅಸುರಕ್ಷಿತರಾಗಿರುವ ಈ ಜಗತ್ತಿನಲ್ಲಿ ನಾವು ಏಕೆ ವಾಸಿಸುತ್ತಿದ್ದೇವೆ? ನಾವು ಇದನ್ನ ಪ್ರತಿದಿನ ಸಹಿಸಿಕೊಳ್ಳಲು ಏಕೆ ಒತ್ತಾಯಿಸಲ್ಪಡುತ್ತೇವೆ? ಅಸುರಕ್ಷತೆ ನಮಗೆ ಸಂಭವಿಸುತ್ತಿದೆ ಅದಕ್ಕೆ ನಾವು ದೂಷಿಸುತ್ತೇವೆ? ಇದನ್ನೂ ಓದಿ: ದೇಶ ಮೊದಲು.. ಭಾರತವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ: ಪ್ರಧಾನಿ ಮೋದಿ ಪ್ರತಿಜ್ಞೆ

    ನಾವು ಹೇಗೆ ಬಟ್ಟೆ ಧರಿಸುತ್ತೇವೆ? ಹೇಗೆ ನಡೆಯುತ್ತೇವೆ? ಹೇಗೆ ಮಾತನಾಡುತ್ತೇವೆ ಎಂಬುದನ್ನು ಕೇಳುತ್ತಾರೆ? ಏನು ಮಾಡಬೇಕು ಎಂಬುದನ್ನು ಹೇಳುತ್ತಾರೆ? ಆದ್ರೆ ನಾವು ಭಯವಿಲ್ಲದೇ ಬದುಕುವುದಕ್ಕೆ ಏಕೆ ಸಾಧ್ಯವಿಲ್ಲ? ಕಿರುಕುಳ ಅನುಭವಿಸದೇ ಏಕೆ ಅಸ್ತಿತ್ವದಲ್ಲಿರಲು ಧ್ಯವಿಲ್ಲ? ನಾವು ಸುರಕ್ಷತೆ, ಘನತೆ ಮತ್ತು ಗೌರವ ಬಯಸಿದಾಗ ನಮ್ಮ ಧ್ವನಿಯನ್ನು ಏಕೆ ಮೌನಗೊಳಿಸುತ್ತಾರೆ? ಇದನ್ನೂ ಓದಿ: Independence Day: ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ – ಧ್ವಜಾರೋಹಣ ನೆರವೇರಿಸಿದ ಪ್ರಧಾನಿ

    ನಾವು ಬೇಡುವುದು ಒಂದೇ.. ದಯವಿಟ್ಟು ಇನ್ನಾದರೂ ನಮ್ಮ ಮೇಲೆ ಅತ್ಯಾಚಾರ ಮಾಡುವುದನ್ನು ನಿಲ್ಲಿಸಬಹುದೇ? ನಮ್ಮನ್ನು ಹಿಂಬಾಲಿಸುವುದನ್ನ ನಿಲ್ಲಿಸಬಹುದೇ? ದಯವಿಟ್ಟು ನಮಗೆ ಕಿರುಕುಳ ನೀಡೋದನ್ನ ನಿಲ್ಲಿಸಬಹುದೇ? ನಾವು ಭಯದಿಂದ ಬದುಕಲು ಬೇಸತ್ತಿದ್ದೇವೆ, ನಮ್ಮ ವಿರುದ್ಧ ಹಿಂಸಾಚಾರ ನಡೆದರೂ ಅಂತ್ಯವಿಲ್ಲದ ಸಮರ್ಥನೆಗಳಿಂದ ಬೇಸತ್ತಿದ್ದೇವೆ. ಇದೆಲ್ಲವೂ ನಿಲ್ಲಬೇಕಾದ ಅಗತ್ಯವಿದೆ. ಏಕೆಂದರೆ ನಾವು ಸಹ ಎಲ್ಲರಂತೆ ಯಾವುದೇ ಬೆದರಿಕೆಯಿಲ್ಲದೇ ಸರಳವಾಗಿ ಬದುಕಲು ಅರ್ಹರಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

    ಕೋಲ್ಕತ್ತಾ ಪ್ರಕರಣ ಏನು?
    ಕಳೆದ ಆ.9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಹಿಂದೆ ಪೊಲೀಸ್ ಸ್ವಯಂಸೇವಕನಾಗಿದ್ದ ಈತ 4 ಬಾರಿ ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿದೆ.

  • ನನಗೂ ಮಗಳಿದ್ದಾಳೆ: ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧ ಹೋರಾಟಕ್ಕೆ ಟಿಎಂಸಿ ಸಂಸದ ಬೆಂಬಲ

    ನನಗೂ ಮಗಳಿದ್ದಾಳೆ: ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧ ಹೋರಾಟಕ್ಕೆ ಟಿಎಂಸಿ ಸಂಸದ ಬೆಂಬಲ

    ಕೋಲ್ಕತ್ತಾ: ನನಗೂ ಮಗಳು, ಮೊಮ್ಮಗಳಿದ್ದಾಳೆ. ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧದ ಹೋರಾಟಕ್ಕೆ ಟಿಎಂಸಿ ರಾಜ್ಯಸಭಾ ಸಂಸದ ಸುಕೇಂದು ಶೇಖರ್‌ ರಾಯ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

    ನಾಳೆ ನಾನು ಪ್ರತಿಭಟನಾಕಾರರೊಂದಿಗೆ ಸೇರಲಿದ್ದೇನೆ. ಲಕ್ಷಾಂತರ ಬಂಗಾಳಿ ಕುಟುಂಬಗಳಂತೆ ನನಗೆ ಮಗಳು ಮತ್ತು ಪುಟ್ಟ ಮೊಮ್ಮಗಳು ಇದ್ದಾರೆ. ಮಹಿಳೆಯರ ವಿರುದ್ಧದ ಕ್ರೌರ್ಯ ಸಾಕು. ನಾವು ಒಟ್ಟಾಗಿ ವಿರೋಧಿಸೋಣ ಎಂದು ರಾಯ್‌ ಎಕ್ಸ್‌ನಲ್ಲಿ ಮಂಗಳವಾರ ಪೋಸ್ಟ್‌ ಹಾಕಿದ್ದರು.

    ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಬರ್ಬರ ಹತ್ಯೆ ಮತ್ತು ಅತ್ಯಾಚಾರದ ವಿರುದ್ಧ ದೇಶಾದ್ಯಂತ ವೈದ್ಯರು ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಕಾನೂನು ಜಾರಿಗೆ ತರುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

    ತೀವ್ರ ಪ್ರತಿಭಟನೆಯ ಪರಿಣಾಮವಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಮಂಗಳವಾರ ಈ ಆದೇಶ ಹೊರಬಿದ್ದ ಬೆನ್ನಲ್ಲೇ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ತಲಾ ಪೊಲೀಸ್‌ ಠಾಣೆಗೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಪೊಲೀಸರು ಸಂಗ್ರಹಿಸಿರುವ ತನಿಖಾ ವರದಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಿಬಿಐಗೆ ಒಪ್ಪಿಸುವಂತೆ ಸೂಚಿಸಲಾಗಿದೆ.

  • ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ದೇಶದ್ಯಾಂತ ಪ್ರತಿಭಟನೆ

    ನವದೆಹಲಿ: ಕೋಲ್ಕತ್ತಾದ (Kolkata Doctor Rape-Murder) ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಮಹಿಳಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಸೋಮವಾರ ದೆಹಲಿ ಸೇರಿದಂತೆ ದೇಶದ್ಯಾಂತ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು‌.

    ದೆಹಲಿಯ (Delhi) ಏಮ್ಸ್‌ನ (AIIMS) ನಿವಾಸಿ ವೈದ್ಯರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಆರು ಬೇಡಿಕೆಗಳನ್ನು ಮುಂದಿಟ್ಟರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಪ್ರಾಂಶುಪಾಲರ ವಜಾ ಆಗಬೇಕು ಮತ್ತು ಆಸ್ಪತ್ರೆಯ ಭದ್ರತಾ ಉಸ್ತುವಾರಿ, ವೈದ್ಯರಿಗೆ ಕೇಂದ್ರ ರಕ್ಷಣಾ ಕಾಯಿದೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ನೀಡಬೇಕು. ಜೊತೆಗೆ ಸಂಸ್ಥೆಯಲ್ಲಿ ಕಟ್ಟಡ ಅಥವಾ ಗ್ರಂಥಾಲಯಕ್ಕೆ ಸಂತ್ರಸ್ತೆಯ ಹೆಸರಿಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    ಏಮ್ಸ್ ಮಾತ್ರವಲ್ಲದೇ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಸೇರಿದಂತೆ ದೆಹಲಿಯ ಹತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಮುಷ್ಕರ ನಡೆಸಿದರು. ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು, ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು, ವಿಎಂಎಂಸಿ ಮತ್ತು ಸಫ್ದರ್‌ಜಂಗ್ ಆಸ್ಪತ್ರೆ, ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ, ಜಿಟಿಬಿ, ಐಎಚ್‌ಬಿಎಎಸ್, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ರಾಷ್ಟ್ರೀಯ ಟಿಬಿ ಮತ್ತು ಉಸಿರಾಟದ ಕಾಯಿಲೆಗಳ ಆಸ್ಪತ್ರೆಯ ವೈದ್ಯರು ಮುಷ್ಕರದಲ್ಲಿ ಭಾಗವಹಿದ್ದರು.

    ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮುಖ್ಯಸ್ಥ ಡಾ. ಘೋಷ್ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಘೋಷ್, ಘೋರ ಅಪರಾಧದ ಬಳಿಕ ‘ಸಾಮಾಜಿಕ ಮಾಧ್ಯಮದಲ್ಲಿ ನನ್ನ ಮಾನನಷ್ಟವಾಗುತ್ತಿದೆ’ ಬಲಿಪಶು ಯುವತಿ ‘ನನ್ನ ಮಗಳಂತೆ’ ಪೋಷಕನಾಗಿ, ನಾನು ರಾಜೀನಾಮೆ ನೀಡುತ್ತೇನೆ. ಭವಿಷ್ಯದಲ್ಲಿ ಇದು ಯಾರಿಗೂ ಸಂಭವಿಸಬಾರದು ಎಂದು ಅವರು ಹೇಳಿದರು. ಇದನ್ನೂ ಓದಿ: ಪೂಜಾ ಖೇಡ್ಕರ್‌ಗೆ ತಾತ್ಕಾಲಿಕ ರಿಲೀಫ್ – ಬಂಧಿಸದಂತೆ ದೆಹಲಿ ಹೈಕೋರ್ಟ್ ಸೂಚನೆ

    ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಬಳಿ ಕಳೆದ ಮೂರು ದಿನದಿಂದ ಪ್ರತಿಭಟನೆ ಮುಂದುವರಿದಿದ್ದು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಆರ್‌ಜಿ ಕರ್ ಕಾಲೇಜು ಮತ್ತು ಆಸ್ಪತ್ರೆಯ ಹೊರಾಂಗಣ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಇದರಿಂದ ರೋಗಿಗಳು ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಮೂರು ದಿನಗಳಿಂದ ಕಿರಿಯ ವೈದ್ಯರು ತುರ್ತು ಕರ್ತವ್ಯಗಳಿಗೆ ಹಾಜರಾಗುತ್ತಿದ್ದರು. ಆದರೆ ಸೋಮವಾರ ಬೆಳಗ್ಗೆ, ಅವರು ಆ ಕರ್ತವ್ಯಕ್ಕೆ ಬರುವುದು ನಿಲ್ಲಿಸಿದ್ದಾರೆ.

    ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ವೈದ್ಯರು ಮತ್ತು ಒಬ್ಬ ಹೌಸ್‌ಕೀಪಿಂಗ್ ಸಿಬ್ಬಂದಿಯನ್ನು ಕೋಲ್ಕತ್ತಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆ ನಡೆದ ದಿನ ಈ ನಾಲ್ವರು ರಾತ್ರಿ ಕರ್ತವ್ಯದಲ್ಲಿದ್ದರು. ಘಟನೆಯು ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.