Tag: ಕೋಲ್ಕತ್ತಾ ನೈಟ್ ರೈಡರ್ಸ್

  • 1 ರನ್‌ ಅಗತ್ಯವಿದ್ದಾಗ ಕೊಹ್ಲಿ 2 ರನ್‌ ಓಡಿದ್ದು ಯಾಕೆ?

    1 ರನ್‌ ಅಗತ್ಯವಿದ್ದಾಗ ಕೊಹ್ಲಿ 2 ರನ್‌ ಓಡಿದ್ದು ಯಾಕೆ?

    ಅಬುಧಾಬಿ: ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಕೊನೆಗೆ 2 ರನ್‌ ಓಡಿದ್ದಕ್ಕೆ ಜನ ಸ್ವಾರಸ್ಯಕರ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಕೆಕೆಆರ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 84 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಬೆಂಗಳೂರು 13.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 85 ರನ್‌ ಗಳಿಸಿತು.

    https://twitter.com/Kh14245350Adnan/status/1318961443161530369

    ಕೊನೆಗೆ ಒಂದು ರನ್‌ ಬೇಕಿದ್ದಾಗ ವಿರಾಟ್‌ ಕೊಹ್ಲಿ ಸ್ಟ್ರೈಕ್‌ನಲ್ಲಿದ್ದರು. ಕೃಷ್ಣ ಎಸೆದ ಬಾಲನ್ನು ಕೊಹ್ಲಿ ಥರ್ಡ್‌ ಮ್ಯಾನ್‌ ಕಡೆಗೆ ಹೊಡೆದರು. ಈ ವೇಳೆ ಒಂದು ರನ್‌ ಓಡುವುದರ ಜೊತೆಗೆ ಕೊಹ್ಲಿ ಎರಡು ರನ್‌ ಓಡಿದ್ದಾರೆ. ಆದರೆ ಒಂದು ರನ್‌ ಮಾತ್ರ ಪರಿಗಣಿಸಲಾಯಿತು. ಇದನ್ನೂ ಓದಿ: ಪಂದ್ಯ ಒಂದು ಆರ್‌ಸಿಬಿ ಬೌಲರ್‌ಗಳ ದಾಖಲೆ ಹಲವು

    ಈಗ ಎರಡು ರನ್‌ ಓಡಿದ್ದರ ಬಗ್ಗೆ ಜನ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕೊಹ್ಲಿಗೆ 2 ರನ್‌ ಓಡಿ ಅಭ್ಯಾಸ ಆಗಿರಬೇಕು ಎಂದಿದ್ದಾರೆ.

    ಇನ್ನು ಕೆಲವರು ಕೊನೆಗೆ 1 ರನ್‌ ಇದ್ದಾಗ ಸಿಕ್ಸ್‌ ಹೊಡೆದರೆ ಅದು ತಂಡದ ಒಟ್ಟು ರನ್‌ಗೆ ಸೇರ್ಪಡೆಯಾಗುತ್ತದೆ. ಹೀಗಿರುವಾಗ 2 ರನ್‌ ಓಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    https://twitter.com/27_pratik/status/1318961990207897601

    ಪಂದ್ಯದಲ್ಲಿ ಪಡಿಕ್ಕಲ್‌ 25 ರನ್‌, ಫಿಂಚ್‌ 16 ರನ್‌, ಗುರುಕೀರತ್‌ ಸಿಂಗ್‌ ಔಟಾಗದೇ 21, ಕೊಹ್ಲಿ ಔಟಾಗದೇ 18 ರನ್‌ ಹೊಡೆದರು. 4 ಓವರ್‌ನಲ್ಲಿ 2 ಮೇಡನ್‌ ಮಾಡಿ 8 ರನ್‌ ನೀಡಿ 3 ವಿಕೆಟ್‌ ಕಿತ್ತ ಮೊಹಮ್ಮದ್‌ ಸಿರಾಜ್‌ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

  • ರನ್ ರೇಟಿನಲ್ಲಿ ಆರ್‌ಸಿಬಿ ಸೂಪರ್ ಜಂಪ್ – ಕೊಹ್ಲಿ ಪಡೆಗೆ 8 ವಿಕೆಟ್‍ಗಳ ಸುಲಭ ಜಯ

    ರನ್ ರೇಟಿನಲ್ಲಿ ಆರ್‌ಸಿಬಿ ಸೂಪರ್ ಜಂಪ್ – ಕೊಹ್ಲಿ ಪಡೆಗೆ 8 ವಿಕೆಟ್‍ಗಳ ಸುಲಭ ಜಯ

    – 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದ ರೆಡ್ ಆರ್ಮಿ

    ಅಬುಧಾಬಿ: ಇಂದು ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್‍ಗಳ ಭಾರೀ ಅಂತರದಿಂದ ಗೆದ್ದು, ರನ್ ರೇಟಿನಲ್ಲಿ ಚೇತರಿಕೆ ಕಂಡಿದೆ.

    ಇಂದು ಅಬುಧಾಬಿ ಮೈದಾನದಲ್ಲಿ ನಡೆದ ಐಪಿಎಲ್-2020ಯ 39ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಬೆಂಗಳೂರು ಬೌಲರ್ ಗಳ ಮಾರಕ ದಾಳಿಗೆ ತತ್ತರಸಿ ನಿಗದಿತ 20 ಓವರಿನಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 84 ರನ್ ಪೇರಿಸಿತು. ಈ ಸುಲಭ ಗುರುಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಇನ್ನೂ 6.3 ಓವರ್ ಬಾಕಿ ಇರುವಂತೆ 8 ವಿಕೆಟ್‍ಗಳ ಅಂತರದಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ.

    ರನ್ ರೇಟ್ ಜಿಗಿತ
    ಪಂದ್ಯಗಳನ್ನು ಗೆಲ್ಲುತ್ತಾ ಬಂದಿದ್ದರು ಬೆಂಗಳೂರು ತಂಡ ಭಾರೀ ಅಂತರದ ಸೋಲು ಮತ್ತು ಆಲೌಟ್ ಆಗಿ ರನ್‍ರೇಟಿನಲ್ಲಿ ಕೊಂಚ ಕೆಳಗೆ ಇತ್ತು. ಈ ಪಂದ್ಯಕ್ಕೂ ಮುನ್ನ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು, ಮೂರರಲ್ಲಿ ಸೋತಿದ್ದ ಕೊಹ್ಲಿ ಪಡೆ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು. ರನ್ ರೇಟ್ -0.096 ಇತ್ತು. ಆದರೆ ಇಂದು ಭಾರೀ ಅಂತರದಲ್ಲಿ ಗೆದ್ದ ಕಾರಣ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಹೋಗುವ ಮೂಲಕ, +0.182 ರನ್‍ರೇಟ್ ಪಡೆದುಕೊಂಡಿದೆ.

    ಕೋಲ್ಕತ್ತಾ ಕೊಟ್ಟ 85 ರನ್‍ಗಳ ಕಡಿಮೆ ಗುರಿಯನ್ನು ಬ್ನೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭಿಕರಾದ ದೇವದತ್ ಪಡಿಕ್ಕಲ್ ಮತ್ತು ಆರೋನ್ ಫಿಂಚ್ ಉತ್ತಮ ಆರಂಭ ನೀಡಿದರು. ಪವರ್ ಪ್ಲೇ ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಈ ಜೋಡಿ ಆರು ಓವರ್ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಳ್ಳದೇ 44 ರನ್ ಸೇರಿಸಿತು. ನಂತರ 6ನೇ ಓವರ್ ಎರಡನೇ ಬಾಲಿನಲ್ಲಿ 16 ರನ್ ಗಳಿಸಿದ್ದ ಫಿಂಚ್ ಅವರು ಔಟ್ ಆದರು.

    ಫಿಂಚ್ ನಂತರ 17 ಬಾಲಿಗೆ 25 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ದೇವದತ್ ಪಡಿಕ್ಕಲ್ ಅವರು ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ನಂತರ ಒಂದಾದ ನಾಯಕ ವಿರಾಟ್ ಕೊಹ್ಲಿ ಮತ್ತು ಗುರ್ಕೀರತ್ ಸಿಂಗ್ ಮನ್ ಆರ್‌ಸಿಬಿಯನ್ನು ಗೆಲುವಿನ ದಡ ಸೇರಿಸಿದರು. ಇದರಲ್ಲಿ ಕೊಹ್ಲಿ 17 ಬಾಲಿಗೆ 18 ರನ್ ಹೊಡೆದರೆ, ಗುರ್ಕೀರತ್ 26 ಬಾಲಿಗೆ 21 ರನ್ ಹೊಡೆದರು. ಈ ಮೂಲಕ ಬೆಂಗಳೂರು ತಂಡ 8 ವಿಕೆಟ್‍ಗಳ ಜಯ ಸಾಧಿಸಿತು.

    ಆರ್‌ಸಿಬಿ ಬೌಲರ್‌ಗಳ ದಾಖಲೆ: ಇಂದಿನ ಪಂದ್ಯದಲ್ಲಿ ಅದ್ಭುತವಾಗಿ ಬೌಲ್ ಮಾಡಿದ ವೇಗಿ ಮೊಹಮ್ಮದ್ ಸಿರಾಜ್ ಅವರು ಎರಡು ಓವರ್ ಬೌಲ್ ಮಾಡಿ ಒಂದು ರನ್ ನೀಡದೇ ಮೇಡನ್ ಮಾಡಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ಐಪಿಎಲ್‍ನ ಒಂದೇ ಪಂದ್ಯದಲ್ಲಿ ಎರಡು ಮೇಡನ್ ಓವರ್ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇವರ ಜೊತೆಗೆ ಐದನೇ ಓವರ್ ಅನ್ನು ಕೂಡ ಕ್ರಿಸ್ ಮೋರಿಸ್ ಮೇಡನ್ ಮಾಡಿದರು. ನಂತರ 12ನೇ ಓವರ್ ಅನ್ನು ವಾಷಿಂಗ್ಟನ್ ಸುಂದರ್ ಅವರು ಮೇಡನ್ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಮೇಡನ್ ಓವರ್ ಮಾಡಿದ ತಂಡ ಎಂಬ ಹೆಗ್ಗಳಿಕೆ ಆರ್‍ಸಿಬಿ ಪಾತ್ರವಾಗಿದೆ.

    ಭರ್ಜರಿ ಬೌಲಿಂಗ್: ಇಂದಿನ ಪಂದ್ಯದಲ್ಲಿ ಆರ್‍ಸಿಬಿ ತಂಡದ ಎಲ್ಲ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಇಂದು ಸೂಪರ್ ಆಗಿ ಬೌಲ್ ಮಾಡಿದ ಮೊಹಮ್ಮದ್ ಸಿರಾಜ್ ಅವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದು ಕೇವಲ ಎಂಟು ರನ್ ನೀಡಿದರು. ಜೊತೆಗೆ ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಯುಜ್ವೇಂದ್ರ ಚಹಲ್ ಅವರು ಎರಡು ವಿಕೆಟ್ ಕಿತ್ತು ಕೇವಲ 15 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದು ಮಿಂಚಿದರು.

  • ಮೊದಲ 4 ಓವರಿಗೆ 4 ವಿಕೆಟ್, ಒಂದೇ ಪಂದ್ಯದಲ್ಲಿ ನಾಲ್ಕು ಮೇಡನ್ – ಕೊಹ್ಲಿ ಪಡೆಗೆ 85 ರನ್‍ಗಳ ಗುರಿ

    ಮೊದಲ 4 ಓವರಿಗೆ 4 ವಿಕೆಟ್, ಒಂದೇ ಪಂದ್ಯದಲ್ಲಿ ನಾಲ್ಕು ಮೇಡನ್ – ಕೊಹ್ಲಿ ಪಡೆಗೆ 85 ರನ್‍ಗಳ ಗುರಿ

    – 2 ಮೇಡಿನ್, 3 ವಿಕೆಟ್ ಸಿರಾಜ್ ದಾಖಲೆಯ ಬೌಲಿಂಗ್ ಮೋಡಿ
    – ಒಂದೇ ಪಂದ್ಯದಲ್ಲಿ ಆರ್‌ಸಿಬಿಯಿಂದ ದಾಖಲೆಗಳ ಮೇಲೆ ದಾಖಲೆ

    ಅಬುಧಾಬಿ: ಇಂದು ನಡೆದ ಐಪಿಎಲ್-2020ಯ 39ನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬೆಂಗಳೂರು ತಂಡಕ್ಕೆ 85 ರನ್‍ಗಳ ಸಾಧಾರಣ ಗುರಿ ನೀಡಿದೆ.

    ಆರ್‌ಸಿಬಿ ಬೌಲರ್‌ಗಳ ದಾಖಲೆ: ಇಂದಿನ ಪಂದ್ಯದಲ್ಲಿ ಅದ್ಭುತವಾಗಿ ಬೌಲ್ ಮಾಡಿದ ವೇಗಿ ಮೊಹಮ್ಮದ್ ಸಿರಾಜ್ ಅವರು ಎರಡು ಓವರ್ ಬೌಲ್ ಮಾಡಿ ಒಂದು ರನ್ ನೀಡದೇ ಮೇಡಿನ್ ಮಾಡಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ಐಪಿಎಲ್‍ನ ಒಂದೇ ಪಂದ್ಯದಲ್ಲಿ ಎರಡು ಮೇಡನ್ ಓವರ್ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇವರ ಜೊತೆಗೆ ಐದನೇ ಓವರ್ ಅನ್ನು ಕೂಡ ಕ್ರಿಸ್ ಮೋರಿಸ್ ಮೇಡನ್ ಮಾಡಿದರು. ನಂತರ 12ನೇ ಓವರ್ ಅನ್ನು ವಾಷಿಂಗ್ಟನ್ ಸುಂದರ್ ಅವರು ಮೇಡನ್ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಮೇಡಿನ್ ಓವರ್ ಮಾಡಿದ ತಂಡ ಎಂಬ ಹೆಗ್ಗಳಿಕೆ ಆರ್‌ಸಿಬಿ ಪಾತ್ರವಾಗಿದೆ.

    ಭರ್ಜರಿ ಬೌಲಿಂಗ್
    ಇಂದಿನ ಪಂದ್ಯದಲ್ಲಿ ಆರ್‍ಸಿಬಿ ತಂಡದ ಎಲ್ಲ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಇಂದು ಸೂಪರ್ ಆಗಿ ಬೌಲ್ ಮಾಡಿದ ಮೊಹಮ್ಮದ್ ಸಿರಾಜ್ ಅವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದು ಕೇವಲ ಎಂಟು ರನ್ ನೀಡಿದರು. ಜೊತೆಗೆ ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಯುಜ್ವೇಂದ್ರ ಚಹಲ್ ಅವರು ಎರಡು ವಿಕೆಟ್ ಕಿತ್ತು ಕೇವಲ 15 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದು ಮಿಂಚಿದರು.

    ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ತಂಡದ ನಾಯಕ ಇಯೊನ್ ಮೋರ್ಗಾನ್ ಅವರು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಅಂತಯೇ ಓಪನರ್ ಆಗಿ ಶುಭ್‍ಮನ್ ಗಿಲ್ ಮತ್ತು ರಾಹುಲ್ ತ್ರಿಪಾಠಿ ಕಣಕ್ಕಿಳಿದರು. ಆದರೆ ಎರಡನೇ ಓವರ್ ಮಾಡಲು ಬಂದ ಆರ್‌ಸಿಬಿ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮೊದಲು ತ್ರಿಪಾಠಿಯವರನ್ನು 2ನೇ ಓವರ್ ಮೂರನೇ ಬಾಲಿನಲ್ಲಿ ಔಟ್ ಮಾಡಿದರು. ನಂತರ ನಾಲ್ಕನೇ ಬಾಲಿನಲ್ಲಿ ನಿತೀಶ್ ರಾಣಾ ಅವರನ್ನು ಬೌಲ್ಡ್ ಮಾಡಿ ಕೋಲ್ಕತ್ತಾಗೆ ಆರಂಭಿಕ ಆಘಾತ ನೀಡಿದರು.

    ನಂತರ ಮೂರನೇ ಓವರ್ ಬೌಲಿಂಗ್‍ಗೆ ಬಂದ ನವದೀಪ್ ಸೈನಿ ಮ್ಯಾಜಿಕ್ ಮಾಡಿದರು. ಆರಂಭಿಕನಾಗಿ ಬಂದು ಆಡುತ್ತಿದ್ದ ಶುಭ್‍ಮನ್ ಗಿಲ್ ಅವರನ್ನು ಸೈನಿಯವರು ಔಟ್ ಮಾಡಿ ಪೆವಿಲಿಯನ್ ಸೇರಿಸಿದರು. ನಂತರ ನಾಲ್ಕನೇ ಓವರ್ ಬೌಲಿಂಗ್‍ಗೆ ಬಂದ ಸಿರಾಜ್ ಮತ್ತೆ ಟಾಮ್ ಬಾಂಟನ್ ಅವರನ್ನು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು. ಈ ಮೂಲಕ ನಾಲ್ಕು ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ ನಾಲ್ಕು ವಿಕೆಟ್ ಕಳೆದುಕೊಂಡು ಕೇವಲ 14 ರನ್ ಪೇರಿಸಿತು.

    ನಂತರ ನಾಯಕ ಇಯೊನ್ ಮೋರ್ಗಾನ್ ಮತ್ತು ದಿನೇಶ್ ಕಾರ್ತಿಕ್ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ 8ನೇ ಓವರ್ ನಾಲ್ಕನೇ ಬಾಲಿನಲ್ಲಿ ಜಾದು ಮಾಡಿದ ಯುಜ್ವೇಂದ್ರ ಚಹಲ್ ಅವರು, 14 ಬಾಲಿಗೆ 4 ರನ್ ಸಿಡಿಸಿ ಆಡುತ್ತಿದ್ದ ಕಾರ್ತಿಕ್ ಅವರನ್ನು ಔಟ್ ಮಾಡಿದರು. 12ನೇ ಓವರ್ ಮೂರನೇ ಬಾಲಿನಲ್ಲಿ ಚಹಲ್ ಮತ್ತೆ ಮ್ಯಾಜಿಕ್ ಮಾಡಿದರು. 17 ಬಾಲಿಗೆ 4 ರನ್ ಗಳಿಸಿದ್ದ ಪ್ಯಾಟ್ ಕಮ್ಮಿನ್ಸ್ ಅವರನ್ನು ಔಟ್ ಮಾಡಿದರು. ಈ ಮೂಲಕ ಕೋಲ್ಕತ್ತಾ 13ನೇ ಓವರ್ ಮುಕ್ತಾಯಕ್ಕೆ ಕೇವಲ 46 ರನ್‍ಗಳಿಸಿ ಆರು ವಿಕೆಟ್ ಕಳೆದುಕೊಂಡಿತ್ತು.

    ಕ್ರೀಸಿಗೆ ಬಂದ ಸಮಯದಿಂದಲೂ ತಾಳ್ಮೆಯಿಂದ ಆಡುತ್ತಿದ್ದ ನಾಯಕ ಇಯೊನ್ ಮೋರ್ಗಾನ್ ಅವರು 34 ಬಾಲಿಗೆ 30 ರನ್‍ಗಳಿ 15ನೇ ಓವರಿನ ನಾಲ್ಕನೇ ಬಾಲಿನಲ್ಲಿ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಜೊತೆಯಾದ ಲಾಕಿ ಫರ್ಗುಸನ್ ಮತ್ತು ಕುಲದೀಪ್ ಯಾದವ್ ಅವರು 25 ಬಾಲಿಗೆ 26 ರನ್‍ಗಳ ಜೊತೆಯಾಟವಾಡಿದರು. ಆದರೆ ಕೊನೆಯ ಬಾಲಿನಲ್ಲಿ ಯಾದವ್ ಅವರು ರನೌಟ್ ಆದರು.

  • 8 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಮೊದಲ ಸ್ಥಾನಕ್ಕೆ ಏರಿದ ಮುಂಬೈ

    8 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಮೊದಲ ಸ್ಥಾನಕ್ಕೆ ಏರಿದ ಮುಂಬೈ

    ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಭರ್ಜರಿ ಜಯ ಪಡೆದಿದ್ದು, ಆ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

    ಕೆಕೆಆರ್ ನೀಡಿದ 149 ರನ್‍ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ 16.5 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿ ಜಯ ಪಡೆಯಿತು. ಪಂದ್ಯದಲ್ಲಿ 44 ಎಸೆತಗಳಲ್ಲಿ 78 ರನ್ ಸಿಡಿಸಿದ ಡಿ ಕಾಕ್ ಮುಂಬೈ ಗೆಲುವಿಗೆ ಮಹತ್ವ ಕಾಣಿಕೆ ನೀಡಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 35 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. 11 ಎಸೆತಗಳಲ್ಲಿ 21 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಅಜೇಯರಾಗಿ ಉಳಿದರು.

    2019ರಿಂದ ಮುಂಬೈ ಇಂಡಿಯನ್ಸ್ ಪರ ಡಿ ಕಾಕ್ 7 ಅರ್ಧ ಶತಕಗಳನ್ನು ಗಳಿಸಿದರೆ, ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ತಲಾ 4 ಅರ್ಧ ಶತಗಳನ್ನು ಗಳಿಸಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 149 ಗಳಿಸಿತ್ತು. ಕೋಲ್ಕತ್ತಾ ಪರ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕಮ್ಮಿನ್ಸ್ ಸ್ಫೋಟಕ ಅರ್ಧ ಶತಕ ಸಿಡಿದರು. 36 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಕಮ್ಮಿನ್ಸ್ ಗೆ ಉತ್ತಮ ಸಾಥ್ ನೀಡಿದ ನಾಯಕ ಇಯಾನ್ ಮಾರ್ಗನ್ 29 ಎಸೆತಗಳಲ್ಲಿ 39 ರನ್ ಗಳಸಿ ಅಜೇಯರಾಗಿ ಉಳಿದರು. ಈ ಜೋಡಿ 6ನೇ ವಿಕೆಟ್‍ಗೆ 87 ರನ್ ಕಾಣಿಕೆ ನೀಡಿತ್ತು.

    ಉಳಿದಂತೆ ಆರಂಭಿಕ ಶುಭ್‍ಮನ್ ಗಿಲ್ 21 ಗಳಿಸಿದ್ದರೆ, ಬೇರೆ ಯಾವುದೇ ಆಟಗಾರ ಮುಂಬೈ ಬೌಲರ್ ಗಳ ದಾಳಿಯನ್ನು ಎದುರಿಸಲು ಯಶಸ್ವಿಯಾಗಲಿಲ್ಲ. ತ್ರಿಪಾಠಿ 7, ರಾಣಾ 5, ದಿನೇಶ್ ಕಾರ್ತಿಕ್ 4, ರುಸೇಲ್ 12 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.

    ಮುಂಬೈ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ರಾಹುಲ್ ಚಹರ್ 4 ಓವರ್ ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್, ಬುಮ್ರಾ, ನಾಥನ್ ಕೌಲ್ಟರ್ ನೈಲ್ ತಲಾ 1 ವಿಕೆಟ್ ಪಡೆದರು. ಆದರೆ ನಾಥನ್ ಕೌಲ್ಟರ್ ನೈಲ್ ಪಂದ್ಯದಲ್ಲಿ 51 ರನ್ ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಯುಎಇನಲ್ಲಿ ಮುಂಬೈ ತಂಡದ ಬೌಲರ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಬೇಡದ ದಾಖಲೆ ಬರೆದರು. ಈ ಹಿಂದೆ ಬೆಂಗಳೂರು ತಂಡದ ವಿರುದ್ಧ ಜೇಮ್ಸ್ ಪ್ಯಾಟಿನ್‍ಸನ್ 33 ರನ್ ನೀಡಿದ್ದರು.

  • ಆರ್‌ಸಿಬಿ ವಿರುದ್ಧ ಕೆಕೆಆರ್ ಸುನಿಲ್ ನರೈನ್‍ನನ್ನು ಕೈಬಿಟ್ಟಿದ್ದೇಕೆ?

    ಆರ್‌ಸಿಬಿ ವಿರುದ್ಧ ಕೆಕೆಆರ್ ಸುನಿಲ್ ನರೈನ್‍ನನ್ನು ಕೈಬಿಟ್ಟಿದ್ದೇಕೆ?

    ಶಾರ್ಜಾ: ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಸುನಿಲ್ ನರೈನ್ ಬೌಲಿಂಗ್ ಶೈಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ. ಪಂಜಾಬ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ನರೈನ್ ಅವರನ್ನು ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ 11ರ ಬಳಗದಿಂದ ಕೈಬಿಟ್ಟಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.

    ಕೆಕೆಆರ್ ತಂಡ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯಲು ನರೈನ್ ಅವರ ಬೌಲಿಂಗ್ ಪ್ರಮುಖ ಕಾರಣವಾಗಿತ್ತು. ಪಂದ್ಯದಲ್ಲಿ ನಿಕೂಲಸ್ ಪೂರನ್ ವಿಕೆಟ್ ಪಡೆದ ನರೈನ್ ಪ್ರಮುಖ ತಿರುವು ನೀಡಿದ್ದರು. ಆದರೆ ಪಂದ್ಯದ ಬಳಿಕ ನರೈನ್ ಅವರ ಬೌಲಿಂಗ್ ಶೈಲಿಯ ಕುರಿತು ಅಂಪೈರ್ ಗಳು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಎಲ್ ಅಧಿಕಾರಿಗಳು ಕೂಡ ಕೆಕೆಆರ್ ತಂಡಕ್ಕೆ ಮಾಹಿತಿ ನೀಡಿದ್ದರು.

    ನರೈನ್ ಅವರ ಬೌಲಿಂಗ್ ಶೈಲಿಯ ವಿರುದ್ಧ ಐಪಿಎಲ್ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಹೇಳಿಕೆಯಲ್ಲಿ ಆನ್‍ಫೀಲ್ಡ್ ಅಂಪೈರ್ ಗಳು ಬೌಲಿಂಗ್ ಶೈಲಿಯ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ನಿಯಮಗಳ ಅನ್ವಯ ನರೈನ್ ಅವರ ಹೆಸರನ್ನು ವಾರ್ನಿಂಗ್ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಆದರೆ ಇದೇ ಬೌಲಿಂಗ್ ಮುಂದುವರಿದರೇ ಮುಂದಿನ ಕ್ರಮ ನಡೆಯುವವರೆಗೂ ಅವರನ್ನು ಟೂರ್ನಿಯಿಂದ ಹೊರಗಿಡಲಾಗುವುದು ಎಂದು ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ಪೂರನ್‌ ಬೌಲ್ಡ್‌ , ನರೈನ್‌ಗೆ ಸಂಕಷ್ಟ – ಸ್ಪಷ್ಟನೆ ನೀಡಿದ ಕೋಲ್ಕತ್ತಾ

    ಟಾಸ್ ಸಂದರ್ಭದಲ್ಲಿ ನರೈನ್ ಅವರನ್ನು ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್, ಫ್ರಾಂಚೈಸಿಗಳು ಈಗಾಗಲೇ ಈ ಕುರಿತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ನಾವು ನಮ್ಮ ಮನವಿಯನ್ನು ಮಾಡಿದ್ದು, ನೀವು ಇದನ್ನು ಗಮನಿಸಬಹುದು. ಅದರಲ್ಲಿ ನಮ್ಮ ಹೇಳಿಕೆಯನ್ನು ತಿಳಿಸಿದ್ದೇವೆ ಎಂದು ಹೇಳಿದ್ದರು.

    ಉಳಿದಂತೆ ಬೆಂಗಳೂರು ವಿರುದ್ಧ ಪಂದ್ಯದಲ್ಲಿ ನರೈನ್ ಅವರನ್ನು ಕೈಬಿಟ್ಟಿದ್ದ ಕೆಕೆಆರ್ ಟಾಮ್ ಬ್ಯಾಂಟನ್‍ಗೆ ಅವಕಾಶ ನೀಡಿತ್ತು. ಒಂದೊಮ್ಮೆ ಪಂದ್ಯದಲ್ಲಿ ನರೈನ್ ಗೆ ಅವಕಾಶ ನೀಡಿ, ಮತ್ತೆ ಅನುಮಾಸ್ಪದ ಬೌಲಿಂಗ್ ಮಾಡಿದ್ದರೇ ಟೂರ್ನಿಯಿಂದಲೇ ಹೊರಗುಳಿಯ ಬೇಕಾದ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿಯೇ ಕೆಕೆಆರ್ ತಂಡ ನರೈನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿತ್ತು.

    ಇದೇ ಮೊದಲಲ್ಲ: ಸುನಿಲ್ ನರೈನ್ ವಿರುದ್ಧ ಇದೇ ಮೊದಲ ಬಾರಿಗೆ ಅನುಮಾನ್ಪದ ಬೌಲಿಂಗ್ ಆರೋಪ ಕೇಳಿ ಬಂದಿಲ್ಲ. 2015ರಲ್ಲೇ ಐಸಿಸಿ, ನರೈನ್ ಅವರಿಗೆ ನಿಷೇಧ ವಿಧಿಸಿತ್ತು. ಒಂದು ವರ್ಷದ ಅವಧಿಯಲ್ಲಿ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದ ನರೈನ್ ಮತ್ತೆ ರೀ ಎಂಟ್ರಿ ನೀಡಿದ್ದರು.

    ಮುಂಬೈ ಶುಕ್ರವಾರ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಸದ್ಯ ಲಭ್ಯವಾಗಿರುವ ಅವಧಿಯಲ್ಲಿ ನರೈನ್ ಬೌಲಿಂಗ್ ಶೈಲಿಯಲ್ಲಿ ಮಾಡಿಕೊಳ್ಳಲಿದ್ದರೆಯೇ ಎಂಬ ಅನುಮಾನ ಮೂಡಿದೆ.

  • ಪೂರನ್‌ ಬೌಲ್ಡ್‌ , ನರೈನ್‌ಗೆ ಸಂಕಷ್ಟ – ಸ್ಪಷ್ಟನೆ ನೀಡಿದ ಕೋಲ್ಕತ್ತಾ

    ಪೂರನ್‌ ಬೌಲ್ಡ್‌ , ನರೈನ್‌ಗೆ ಸಂಕಷ್ಟ – ಸ್ಪಷ್ಟನೆ ನೀಡಿದ ಕೋಲ್ಕತ್ತಾ

    ದುಬೈ: ಸ್ಪಿನ್ನರ್‌ ಸುನಿಲ್‌ ನರೈನ್‌ ಬೌಲಿಂಗ್‌ ಶೈಲಿಯ ಬಗ್ಗೆ ಎದ್ದ ಪ್ರಶ್ನೆಗಳಿಗೆ ಈಗ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಈಗ ಸ್ಪಷ್ಟನೆ ನೀಡಿದೆ.

    ಅ.10 ರಂದು ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಅಧಿಕಾರಿಗಳು ಬೌಲಿಂಗ್‌ ಶೈಲಿಯನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಈಗ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

    ಹೇಳಿಕೆಯಲ್ಲಿ ಏನಿದೆ?‌
    2012ರಿಂದ 115 ಐಪಿಎಲ್ ಪಂದ್ಯ 2015ರಿಂದ 68 ಪಂದ್ಯ ಆಡಿರುವ ನರೈನ್‌ ಅವರ ಬೌಲಿಂಗ್‌ ಶೈಲಿಯ ಬಗ್ಗೆ ಅನುಮಾನ ಮೂಡಿರುವುದು ಅಚ್ಚರಿ ತಂದಿದೆ. ಈ ಹಿಂದೆ ಬೌಲಿಂಗ್‌ ಶೈಲಿಯ ಬಗ್ಗೆ ಅನುಮಾನ ಬಂದಾಗ ಐಸಿಸಿಯ ಎಸ್‌ಆರ್‌ಎಎಸ್‌ಎಸ್‌ಸಿನಲ್ಲಿ ತೇರ್ಗಡೆಯಾಗಿದ್ದಾರೆ.

    ಈ ವಿಚಾರ ಸಂಬಂಧ ಐಪಿಎಲ್‌ ನಡೆಸುವ ಎಲ್ಲ ಪ್ರಕ್ರಿಯೆಗಳಿಗೆ ನಾವು ಸಹಕಾರ ನೀಡುತ್ತೇವೆ. ಈ ವಿಚಾರ ಶೀಘ್ರವೇ ಇತ್ಯರ್ಥವಾಗಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಫಿಕ್ಸಿಂಗ್? – ಭಾರೀ ಚರ್ಚೆಗೆ ಗ್ರಾಸವಾಗಿದೆ ಮುಂಬೈ ಇಂಡಿಯನ್ಸ್ ಟ್ವೀಟ್

    ಯಾಕೆ ಅನುಮಾನ?
    ಕ್ರಿಕೆಟ್‌ನಲ್ಲಿ ಬೌಲರ್‌ ಬಾಲ್‌ ಎಸೆಯುವುದಕ್ಕೆ ನಿಷೇಧವಿದೆ. ಈಗ ನರೈನ್‌ ಬಾಲ್‌ ಎಸೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪ ಬರಲು ಕಾರಣವಾಗಿದ್ದು ಶನಿವಾರ ನಡೆದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧ ನಡೆದ ಪಂದ್ಯ.

    165 ರನ್‌ಗಳ ಸುಲಭ ಸವಾಲು ಪಡೆದ ಪಂಜಾಬ್‌ ಪಂದ್ಯವನ್ನು ಗೆಲ್ಲಬಹುದು ಎಂದೇ ಭಾವಿಸಲಾಗಿತ್ತು. ಕೊನೆಯ 18 ಎಸೆತಗಳಲ್ಲಿ ಪಂಜಾಬ್‌ ತಂಡಕ್ಕೆ ಗೆಲ್ಲಲು 22 ರನ್‌ಗಳ ಅಗತ್ಯವಿತ್ತು.

    18ನೇ ಓವರ್‌ ಮಾಡಿದ್ದ ನರೈನ್‌ ಅವರು ನಿಕೂಲಸ್‌ ಪೂರನ್‌ ಅವರನ್ನು ಬೌಲ್ಡ್‌ ಮಾಡಿದ್ದರು. ಈ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರೂ ಈ ಬೌಲಿಂಗ್‌ ಶೈಲಿಯೇ ಈಗ ನರೈನ್‌ ಅವರಿಗೆ ಸಂಕಷ್ಟ ತಂದಿಟ್ಟಿದೆ. ಈ ಓವರ್‌ನಲ್ಲಿ 2 ರನ್‌ ನೀಡಿ 1 ವಿಕೆಟ್‌ ಪಡೆಯುವ ಮೂಲಕ ನರೈನ್‌ ಪಂದ್ಯವನ್ನು ಕೋಲ್ಕತ್ತಾ ಪರ ವಾಲುವಂತ ಮಾಡಿದರು. ಅಂತಿಮವಾಗಿ ಕೋಲ್ಕತ್ತಾ 2 ರನ್‌ನಿಂದ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿತ್ತು.

    ಪಂದ್ಯದ ನಂತರ ನರೈನ್ ಅವರ ಅನುಮಾನಾಸ್ಪದ  ಬೌಲಿಂಗ್ ಕ್ರಮದ ಬಗ್ಗೆ ಆನ್-ಫೀಲ್ಡ್ ಅಂಪೈರ್‌ಗಳು ದೂರು ನೀಡಿದ್ದರು. ನರೈನ್ ಒಂದು ವೇಳೆ ಮತ್ತೆ ಅದೇ ರೀತಿಯಲ್ಲಿ ಥ್ರೋ ಮಾಡಿದ್ದಲ್ಲಿ ಬೌಲಿಂಗ್‌ನಿಂದ ಅಮಾನತಾಗಲಿದ್ದಾರೆ. ಮತ್ತೆ ನರೈನ್ ಬೌಲಿಂಗ್ ಮಾಡಬೇಕಾದರೆ ಬಿಸಿಸಿಐ ಅನುಮತಿ ನೀಡಬೇಕಾಗುತ್ತದೆ.

  • ಸಿಕ್ಸರ್, ಬೌಂಡರಿಗಳ ಸುರಿಮಳೆ – ಕೊನೆಯವರೆಗೆ ಹೋರಾಡಿ ಸೋತಿತು ಕೋಲ್ಕತ್ತಾ

    ಸಿಕ್ಸರ್, ಬೌಂಡರಿಗಳ ಸುರಿಮಳೆ – ಕೊನೆಯವರೆಗೆ ಹೋರಾಡಿ ಸೋತಿತು ಕೋಲ್ಕತ್ತಾ

    – ಡೆಲ್ಲಿಗೆ 18 ರನ್ ಗಳ ಜಯ
    – ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ ಡೆಲ್ಲಿ

    ಶಾರ್ಜಾ: ಸಿಕ್ಸರ್, ಬೌಂಡರಿಗಳ ಸುರಿಮಳೆಯಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 18 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಡೆಲ್ಲಿ ಮೊದಲ ಸ್ಥಾನಕ್ಕೆ ಏರಿದರೆ, ಬೆಂಗಳೂರು ಎರಡನೇ ಸ್ಥಾನಕ್ಕೆ ಜಾರಿದೆ.

    ಗೆಲ್ಲಲು 229 ರನ್ ಗಳ ಕಠಿಣ ಗುರಿಯನ್ನು ಪಡೆದ ಕೋಲ್ಕತ್ತಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತು. ಈ ಪಂದ್ಯದಲ್ಲಿ ಕೋಲ್ಕತ್ತಾ ಪರ 14 ಸಿಕ್ಸ್, 12 ಬೌಂಡರಿ ಬಂದರೆ ಡೆಲ್ಲಿ ಪರ14 ಸಿಕ್ಸ್, 18 ಬೌಂಡರಿ ಸಿಡಿಯಲ್ಪಟ್ಟಿತ್ತು.

    ತಂಡದ ಮೊತ್ತ 117 ರನ್ ಆಗಿದ್ದಾಗ ಬೌಲರ್ ಹರ್ಷಲ್ ಪಟೇಲ್ ನಿತೀಶ್ ರಾಣಾ ಮತ್ತು ದಿನೇಶ್ ಕಾರ್ತಿಕ್ ಅವರ ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಕೊನೆಯಲ್ಲಿ ಮಾರ್ಗನ್ ಮತ್ತು ತ್ರಿಪಾಠಿ ಸಿಕ್ಸ್ ಬೌಂಡರಿಗಳನ್ನು ಸಿಡಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ತಂಡದ ಮೊತ್ತ 200 ಆಗಿದ್ದಾಗ ಮಾರ್ಗನ್ 44 ರನ್ (18 ಎಸೆತ, 1 ಬೌಂಡರಿ, 5 ಸಿಕ್ಸ್) ಹೊಡೆದು ಕ್ಯಾಚ್ ನೀಡಿ ಔಟಾದರೆ 207 ರನ್ ಆಗಿದ್ದಾಗ 36ರನ್ (16 ಎಸೆತ, 3 ಬೌಂಡರಿ, 3 ಸಿಕ್ಸರ್) ಸಿಡಿಸಿದ್ದ ತ್ರಿಪಾಠಿ ಔಟದರು.

    ಡೆಲ್ಲಿ ಕ್ಯಾಪಿಟಲ್ಸ್ ತಂಡದ 229 ರನ್‍ಗಳ ಭರ್ಜರಿ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ಎರಡನೇ ಓವರಿನಲ್ಲೇ ವಿಕೆಟ್ ಕಳೆದುಕೊಂಡು ಮುಗ್ಗರಿಸಿತು. ಪವರ್ ಪ್ಲೇ ಹಂತ ಮುಕ್ತಾಯವಾಗುವಷ್ಟರಲ್ಲಿ 59 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು.

    ನಿತೀಶ್ ರಾಣಾ (35 ಬಾಲ್‍ಗೆ 58 ರನ್) ಅರ್ಧ ಶತಕ ಬಾರಿಸಿ ಭರವಸೆ ಮೂಡಿಸಿದರು. 58 ರನ್‍ಗಳ ಪೈಕಿ 4 ಸಿಕ್ಸ್ ಹಾಗೂ 4 ಬೌಂಡರಿ ಚೆಚ್ಚಿದ್ದರು. 12.4ನೇ ಓವರಿನಲ್ಲಿ ರಾಣಾ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಸೋಲಿನ ಸುಳಿಗೆ ದೂಡಿದರು. ರಾಣಾ ಔಟಾಗುತ್ತಿದ್ದಂತೆ ಮುಂದಿನ ಬಾಲ್‍ಗೆ ದಿನೇಶ್ ಕಾರ್ತಿಕ್ ಸಹ ವಿಕೆಟ್ ಒಪ್ಪಿಸಿದರು.

    ಭರ್ಜರಿ 229 ಟಾರ್ಗೆಟ್ ನೀಡಿದ್ದರೂ, ಬೌಲಿಂಗ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಡವಿತು. ಎನ್ರಿಚ್ ನಾಟ್ರ್ಜ್ ಮೂರು ವಿಕೆಟ್ ಕಬಳಿಸುವ ಮೂಲಕ ಮಿಂಚಿದರೆ, ಹರ್ಷಲ್ ಪಟೇಲ್ 2, ಅಮಿತ್ ಮಿಶ್ರಾ, ಕಗಿಸೊ ರಬಾಡ, ಮಾರ್ಕಸ್ ಸ್ಟೊಯ್ನಿಸ್ ತಲಾ ಒಂದು ವಿಕೆಟ್ ಕಬಳಿಸಿದರು.

    ಮಾರ್ಗನ್ ಅಬ್ಬರದ ಆಟ:
    ತಂಡ ಸಂಕಷ್ಟದಲ್ಲಿದ್ದಾಗ 13.5ನೇ ಓವರಿಗೆ ಆಗಮಿಸಿದ ಇಯಾನ್ ಮಾರ್ಗನ್ ತಂಡವನ್ನು ಗೆಲ್ಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಸ್ಟ್ರೈಕ್‍ಗೆ ಬರುತ್ತಿದ್ದಂತೆ ಮೊದಲ ಬಾಲ್ ಸಿಕ್ಸ್ ಚೆಚ್ಚಿದರು. ಆದರೆ ಕೊನೆಯ ಹಂತದಲ್ಲಿ 18.3ನೇ ಓವರಿನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಮಾರ್ಗನ್ ಕೇವಲ 18 ಬಾಲ್‍ಗೆ 44 ರನ್ ಸಿಡಿಸಿದ್ದರು. 5 ಸಿಕ್ಸ್ 1 ಬೌಂಡರಿ ಚಚ್ಚುವ ಮೂಲಕ ಗೆಲುವಿನ ಆಸೆ ಮೂಡಿಸಿದರು.

    ರಾಣಾ ಪವರ್ಫುಲ್ ಬ್ಯಾಟಿಂಗ್:
    ಶುಭಮನ್ ಗಿಲ್ ಔಟಾಗುತ್ತಿದ್ದಂತೆ 8.2 ಓವರಿಗೆ ಆಗಮಿಸಿದ ರಾಣಾ 35 ಬಾಲ್‍ಗೆ 58 ರನ್ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ರಾಣಾ ತಂಡ 117 ರನ್ ಗಳಿಸಿದ ಸಂದರ್ಭದಲ್ಲಿ 12 ಓವರಿನ 4ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.

    ಮಾರ್ಗನ್, ತ್ರಿಪಾಠಿ ಜೊತೆಯಾಟ:
    ಮಾರ್ಗನ್ ಹಾಗೂ ತ್ರಿಪಾಠಿ ಇಬ್ಬರೂ ಭರ್ಜರಿ ಜೊತೆಯಾಟ ಆರಂಭಿಸಿದ್ದರು. ಕೇವಲ 31 ಬಾಲ್‍ಗೆ 78 ರನ್ ಸಿಡಿಸುವ ಮೂಲಕ ತಂಡದ ದಿಕ್ಕನ್ನೇ ಬದಲಿಸಿದ್ದರು. 13ನೇ ಓವರಿಗೆ ಕಮ್ಮಿನ್ಸ್ ಔಟಾದ ಬಳಿಕ ಆಗಮಿಸಿದ್ದ ತ್ರಿಪಾಠಿ, ಮಾರ್ಗನ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದ್ದರು. ಇಬ್ಬರ ಜೊತೆಯಾಟದಲ್ಲಿ ಬರೋಬ್ಬರಿ 8 ಸಿಕ್ಸ್ 4 ಬೌಂಡರಿ ಚೆಚ್ಚಿದ್ದರು.

    ನಿತೀಶ್ ರಾಣಾ, ಶುಭಮನ್ ಗಿಲ್ ಜೊತೆಯಾಟ:
    ರಾಣಾ ಹಾಗೂ ಗಿಲ್ ತಮ್ಮ ಜೊತೆಯಾಟದಲ್ಲಿ 41 ಬಾಲ್‍ಗೆ 64 ರನ್ ಗಳಿಸಿದರು. ಇದರಲ್ಲಿ 5 ಸಿಕ್ಸ್ 6 ಬೌಂಡರಿ ಚಚ್ಚಿದ್ದರು. 8ನೆ ಓವರ್ ಆರಂಭವಾಗುತ್ತಿದ್ದಂತೆ ಗಿಲ್ ವಿಕೆಟ್ ಒಪ್ಪಿಸಿದರು.

    ಶುಭಮನ್ ಗಿಲ್ 22 ಬಾಲ್‍ಗೆ 28 ರನ್ ಗಳಿಸಿ ಔಟಾಗುತ್ತಿದ್ದಂತೆ 9.5ನೇ ಓವರ್ನಲ್ಲಿ ಆಂಡ್ರೆ ರಸೆಲ್ ಸಹ 8 ಬಾಲ್‍ಗೆ 13 ಹೊಡೆದು ವಿಕೆಟ್ ಒಪ್ಪಿಸಿದರು. ಹೀಗೆ ಡೆಲ್ಲಿ ತಂಡ ವೇಗವಾಗಿ ವಿಕೆಟ್ ಕಳೆದುಕೊಂಡಿತು. 13.3ನೇ ಓವರಿಗೆ ಪ್ಯಾಟ್ ಕಮ್ಮಿನ್ಸ್ ಸಹ 4 ಬಾಲ್‍ಗೆ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

  • 38 ಬಾಲ್‍ಗೆ 88 ರನ್, ಶ್ರೇಯಸ್ ಮಿಂಚಿನಾಟ- ಕೋಲ್ಕತ್ತಾಗೆ 229 ರನ್‍ಗಳ ಭರ್ಜರಿ ಟಾರ್ಗೆಟ್

    38 ಬಾಲ್‍ಗೆ 88 ರನ್, ಶ್ರೇಯಸ್ ಮಿಂಚಿನಾಟ- ಕೋಲ್ಕತ್ತಾಗೆ 229 ರನ್‍ಗಳ ಭರ್ಜರಿ ಟಾರ್ಗೆಟ್

    ಶಾರ್ಜಾ: ಮಿಂಚಿನ ಆಟವಾಡುವ ಮೂಲಕ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ಬೌಲರ್ ಗಳ ಬೆವರಿಳಿಸಿದ್ದು, 38 ಬಾಲ್‍ಗೆ ಬರೋಬ್ಬರಿ 88 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್‍ಗೆ 229 ರನ್‍ಗಳ ಭರ್ಜರಿ ಟಾರ್ಗೆಟ್ ನೀಡಿತು.

    ಶಿರ್ಜಾದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 16ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸಿಕ್ಸ್, ಫೋರ್ ಗಳ ಸುರಿಮಳೆಯೊಂದಿಗೆ ಕೋಲ್ಕತ್ತಾಗೆ ಸ್ಪರ್ಧಾತ್ಮಕ ಮೊತ್ತವನ್ನು ಟಾರ್ಗೆಟ್ ನೀಡಿದೆ. ಈ ಇನ್ನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಹಾಗೂ ಪೃಥ್ವಿ ಶಾ ಕೋಲ್ಕತ್ತಾಗೆ ಭರ್ಜರಿ ಮೊತ್ತದ ಟಾರ್ಗೆಟ್ ನೀಡಿದರು.

    ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್, ಸಿಕ್ಸ್ ಫೋರ್ ಸಿಡಿಸುವ ಮೂಲಕ ಕೋಲ್ಕತ್ತಾ ಬೌಲರ್ ಗಳ ಬೆವರಿಳಿಸಿದರು. ಔಟಾಗದೆ 38 ಬಾಲ್‍ಗೆ ಬರೋಬ್ಬರಿ 88 ರನ್ ಸಿಡಿಸುವ ಮೂಲಕ ತಂಡದ ದಿಕ್ಕನ್ನೇ ಬದಲಿಸಿದರು. ಈ ಮೂಲಕ ಆರಂಭದಿಂದಲೂ ಉತ್ತಮವಾಗಿ ಆಟವಾಡಿಕೊಂಡು ಬಂದಿದ್ದ ತಂಡದ ಮೊತ್ತವನ್ನು ಇನ್ನೂ ಹೆಚ್ಚಿಸಿದರು. ಒಟ್ಟು 88 ರನ್‍ಗಳಲ್ಲಿ ಶ್ರೇಯಸ್ 6 ಸಿಕ್ಸ್ ಹಾಗೂ 7 ಬೌಂಡರಿ ಚೆಚ್ಚುವ ಮೂಲಕ ಮಿಂಚಿನ ಆಟವಾಡಿದರು.

    ಆರಂಭದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಹಾಗೂ ಪೃಥ್ವಿ ಉತ್ತಮ ಜೊತೆಯಾಟವಾಡಿದರೂ ಪೃಥ್ವಿ 66 ರನ್ ಗಳಿಸಿ ಔಟಾದರು. ಇದರಲ್ಲಿ 4 ಸಿಕ್ಸ್ ಹಾಗೂ 4 ಫೋರ್ ಚಚ್ಚಿ ಮಿಂಚಿದರು.

    ಪೃಥ್ವಿ, ಶ್ರೇಯಸ್ ಜೊತೆಯಾಟ:
    ಶಿಖರ್ ಧವನ್ ಆರಂಭದಲ್ಲಿ ಉತ್ತಮವಾಗಿ ಆಟವಾಡಿದರು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 5ನೇ ಓವರ್ ನ ಅಂತ್ಯದ ವೇಳೆ ಔಟಾದರು. ಧವನ್ 16 ಬಾಲ್‍ಗೆ 26ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಪೃಥ್ವಿ ಹಾಗೂ ಶ್ರೇಯಸ್ ಜೊತೆಯಾಟದಲ್ಲಿ 73 ರನ್ ಕಲೆ ಹಾಕಿದರು. ಪೃಥ್ವಿ ಹಾಗೂ ಶ್ರೇಯಸ್ ತಮ್ಮ ಮಿಂಚಿನಾದಿಂದಾಗಿ ಸಿಕ್ಸರ್, ಫೋರ್ ಗಳನ್ನು ಚಚ್ಚಿದರು. 41 ಬಾಲ್‍ಗೆ 73 ರನ್ ಕಲೆ ಹಾಕಿದರು. ನಂತರ ಪಂದ್ಯ ಒಂದು ಹಂತಕ್ಕೆ ತಲುಪಿತು. ಆಕ್ರಮಣಕಾರಿ ಆಟವಾಡಿದ್ದ ಪೃಥ್ವಿ 41 ಬಾಲ್‍ಗೆ 66 ರನ್ ಬಾರಿಸಿದ್ದರು. ವಿಕೆಟ್ ಕಾಯ್ದುಕೊಂಡಿದ್ದ ಪೃಥ್ವಿ, 12ನೇ ಓವರ್ ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಕ್ಯಾಚ್ ನೀಡಿದರು.

    ಶ್ರೇಯಸ್, ರಿಷಬ್ ಪಂತ್ ಜೊತೆಯಾಟ:
    ಪೃಥ್ವಿ ಅವರು ಔಟಾದ ಬಳಿಕ ಶ್ರೇಯಸ್ ಅವರಿಗೆ ಜೊತೆಯಾದ ರಿಷಬ್ ಪಂತ್, ಉತ್ತಮ ಪ್ರದರ್ಶನ ನೀಡಿದರು. ಇಬ್ಬರ ಜೊತೆಯಾಟದಲ್ಲಿ 31 ಬಾಲ್‍ಗೆ 72 ರನ್ ಸಿಡಿಸಿದರು. ನಂತರ 17ನೇ ಓವರ್ ಮುಗಿಯುವಷ್ಟರಲ್ಲಿ ಪಂತ್ 17 ಬಾಲ್‍ಗೆ 38 ರನ್ ಸಿಡಿಸಿ ಔಟಾದರು.

    ಆರಂಭದಲ್ಲಿ ಉತ್ತಮ ಆಟವಾಡಿದ್ದ ಧವನ್ ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡಿದರು. ಧವನ್ 5ನೇ ಓವರ್ ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಪೃಥ್ವಿ ಹಾಗೂ ಶ್ರೇಯಸ್ ಅಬ್ಬರದ ಆಟವಾಡಿ, ಪವರ್ ಪ್ಲೇ ಮುಕ್ತಾಯದ ವೇಳೆಗೆ 61ರನ್ ಗಳಿಸಿದರು. ಈ ಮೂಲಕ ಪಂದ್ಯವನ್ನು ಗೆಲುವಿನ ಹಂತಕ್ಕೆ ತಂದರು. ಇದೇ ಸಂದರ್ಭದಲ್ಲಿ 12ನೇ ಓವರ್ ವೇಳೆಗೆ ಕಮಲೇಶ್ ನಾಗರಕೋಟಿ ಪೃಥ್ವಿಯರನ್ನು ಔಟ್ ಮಾಡಿದರು. ಈ ಮೂಲಕ 41 ಬಾಲ್‍ಗೆ 66 ರನ್ ಗಳಿಸಿ ಪೃಥ್ವಿ ಶಾ ಔಟಾದರು. ನಂತರ ಜೊತೆಯಾಟವಾಡಿದ ರಿಷಭ್ ಪಂತ್ ಹಾಗೂ ಶ್ರೇಯಸ್ ಐಯ್ಯರ್ 16 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 169ಕ್ಕೆ ಏರಿಸಿದ್ದರು.

    ವಿಕೆಟ್ ಕಾಯ್ದುಕೊಂಡು ಶ್ರೇಯಸ್ ಜೊತೆ ಉತ್ತಮ ಆಟವಾಡುತ್ತಿದ್ದ ರಿಷಬ್ ಪಂತ್ 17ನೇ ಓವರ್ ಮುಕ್ತಾಯದ ವೇಳೆಗೆ 17 ಬಾಲ್‍ಗೆ 38 ರನ್ ಸಿಡಿಸಿ ಔಟಾದರು. ಸಿಕ್ಸರ್ ಹಾಗೂ 5 ಬೌಂಡರಿ ಚೆಚ್ಚುವ ಮೂಲಕ ಶ್ರೇಯಸ್ ಅವರಿಗೆ ಸಾಥ್ ನೀಡಿದ್ದರು. ಆದರೆ 17ನೇ ಓವರ್ ಮುಕ್ತಾಯದ ವೇಳೆಗೆ ಆಂಡ್ರೆ ರಸಲ್ ಔಟ್ ಮಾಡಿದರು. ಈ ಮೂಲಕ ಕ್ಯಾಚ್ ನೀಡಿ ಪಂತ್ ಪೆವಿಲಿಯನ್ ಕಡೆ ನಡೆದರು. ನಂತರ ಆಗಮಿಸಿದ ಮಾರ್ಕಸ್ ಸ್ಟೊಯ್ನಿಸ್, 3 ಬಾಲ್‍ಗೆ 1 ರನ್ ಗಳಿಸಿ ಔಟಾದರು.

    ಆಂಡ್ರೆ ರಸಲ್ ಎಷ್ಟೇ ಪ್ರಯತ್ನಿಸಿದರೂ ಡೆಲ್ಲಿ ಆಟವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆದರೂ ಎರಡು ವಿಕೆಟ್ ಪಡೆದು ಸಮಾಧಾನ ಪಟ್ಟುಕೊಳ್ಳುವಂತೆ ಮಾಡಿದರು. ವರುಣ್ ಚಕ್ರವರ್ತಿ ಹಾಗೂ ಕಮಲೇಶ್ ನಾಗರಕೋಟಿ ತಲಾ ಒಂದು ವಿಕೆಟ್ ಪಡೆದರು.

  • ಐಪಿಎಲ್‍ನಲ್ಲಿ ದೇಶೀಯ ಆಟಗಾರರ ಕಮಾಲ್ – ಯಾರು ಈ ಶಿವಂ ಮಾವಿ, ನಾಗರಕೋಟಿ

    ಐಪಿಎಲ್‍ನಲ್ಲಿ ದೇಶೀಯ ಆಟಗಾರರ ಕಮಾಲ್ – ಯಾರು ಈ ಶಿವಂ ಮಾವಿ, ನಾಗರಕೋಟಿ

    – ನಾಗರಕೋಟಿ ಬಗ್ಗೆ ದ್ರಾವಿಡ್ ಹೇಳಿದ್ದೇನು?

    ನವದೆಹಲಿ: ಐಪಿಎಲ್‍ನಲ್ಲಿ ಈ ಬಾರಿ ಭಾರತದ ಸ್ಥಳೀಯ ಆಟಗಾರರೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಭಾರತದ ಯುವ ಆಟಗಾರರು ಐಪಿಎಲ್ ವೇದಿಕೆಯನ್ನು ಚೆನ್ನಾಗಿ ಬಳಿಸಿಕೊಳ್ಳುತ್ತಿದ್ದು, ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ.

    ಈಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಲ್ಲಿ ಇಬ್ಬರು ದೇಶೀಯ ಬೌಲರ್ ಗಳು ಕಮಾಲ್ ಮಾಡುತ್ತಿದ್ದಾರೆ. ನಿನ್ನೆ ನಡೆದ ರಾಜಸ್ಥಾನದ ವಿರುದ್ಧದ ಪಂದ್ಯದಲ್ಲಿ ಶಿವಂ ಮಾವಿ ನಾಲ್ಕು ಓವರ್ ಬೌಲ್ ಮಾಡಿ ಪ್ರಮುಖ ಎರಡು ವಿಕೆಟ್ ಕಿತ್ತು ಕೇವಲ 20 ರನ್ ನೀಡಿದ್ದಾರೆ. ಈ ವೇಳೆ ಕೇವಲ 2 ಓವರ್ ಬೌಲ್ ಮಾಡಿದ ಕಮಲೇಶ್ ನಾಗರಕೋಟಿ ಎರಡು ವಿಕೆಟ್ ಕಿತ್ತು ಕೇವಲ 13 ರನ್ ನೀಡಿ ಕೋಲ್ಕತ್ತಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಶಿವಂ ಮಾವಿ
    ಶಿವಂ ಮಾವಿ ಉತ್ತರ ಪ್ರದೇಶ ರಾಜ್ಯ ತಂಡದ ಪ್ರಮುಖ ಆಲ್‍ರೌಂಡರ್ ಆಗಿದ್ದಾರೆ. ಜೊತೆಗೆ ಇವರು 2018ರಲ್ಲಿ ನಡೆದ ಅಂಡರ್-19 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅಲ್ಲಿ ಉತ್ತಮವಾಗಿ ಆಡಿದ ನಂತರ, 2018ರ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ತಂಡ ಮೂರು ಕೋಟಿ ನೀಡಿ ಖರೀದಿ ಮಾಡಿತ್ತು. ರಾಜ್ಯ ತಂಡದಲ್ಲಿ ಉತ್ತಮ ಆಲ್‍ರೌಂಡರ್ ಆಗಿರುವ ಮಾವಿ ಸದ್ಯ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ವೇಗಿಯಾಗಿದ್ದಾರೆ.

    2018ರ ಅಂಡರ್-19 ವಿಶ್ವಕಪ್‍ನಲ್ಲಿ ಭರ್ಜರಿಯಾಗಿ ಬೌಲ್ ಮಾಡಿದ್ದ ಶಿವಂ ಮಾವಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 3 ವಿಕೆಟ್ 45 ರನ್, ಪಪುವಾ ನ್ಯೂಗಿನಿ ವಿರುದ್ಧ 2 ವಿಕೆಟ್ 16 ರನ್ ಮತ್ತು ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ 2 ವಿಕೆಟ್ 27 ರನ್ ನೀಡಿ ಸ್ಥಿರತೆಯನ್ನು ಪ್ರದರ್ಶನ ಮಾಡಿದ್ದರು. ಆದರೆ 2019ರಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದ ಮಾವಿ ಐಪಿಎಲ್ ಆಡಿರಲಿಲ್ಲ. ಆದರೆ ಐಪಿಎಲ್-2020ಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ.

    ಕಮಲೇಶ್ ನಾಗರಕೋಟಿ
    ಕಮಲೇಶ್ ನಾಗರಕೋಟಿ ಅವರು 2017ರ ಫೆಬ್ರವರಿ 26ರಂದು ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜಸ್ಥಾನದ ಪರವಾಗಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಈ ಪಂದ್ಯದ ಎರಡು ದಿನಗಳ ನಂತರ ನಡೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದರು. ಈ ಮೂಲಕ ಲಿಸ್ಟ್-ಎ ಪಂದ್ಯಗಳಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ಮಾಡಿದರು. ನಂತರ ಅವರು 2018ರಲ್ಲಿ ನಡೆದ ಅಂಡರ್-19 ವಿಶ್ವಕಪ್‍ಗೆ ಆಯ್ಕೆಯಾಗಿದ್ದರು.

    2018ರ ವಿಶ್ವಕಪ್‍ನಲ್ಲಿ ನಾಗರಕೋಟಿ ಅವರು ಗಂಟೆಗೆ 140 ಕಿಮೀ ವೇಗದಲ್ಲಿ ಬೌಲ್ ಮಾಡಿದ್ದರು. ತಾನು ಆಡಿದ ನಾಲ್ಕೇ ಪಂದ್ಯದಲ್ಲಿ 7 ವಿಕೆಟ್ ಕಿತ್ತು ಎಲ್ಲರ ಗಮನ ಸೆಳೆದಿದ್ದರು. ಅಂದು ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಈತ ಮುಂದೊಂದು ದಿನ ಭಾರತಕ್ಕೆ ಉತ್ತಮ ಬೌಲರ್ ಮತ್ತು ಫೀಲ್ಡರ್ ಆಗುತ್ತಾನೆ. ಜೊತೆಗೆ ರವೀಂದ್ರ ಜಡೇಜಾ ಅವರಿಗೆ ಸ್ಫರ್ಧೆ ನೀಡುತ್ತಾನೆ ಎಂದು ಹೇಳಿದ್ದರು. ಕೋಲ್ಕತ್ತಾ ಈತನನ್ನು 2018 ಹಾರಾಜಿನಲ್ಲಿ ಬರೋಬ್ಬರಿ 3.2 ಕೋಟಿ ನೀಡಿ ಖರೀದಿ ಮಾಡಿತ್ತು.

  • ಕರ್ರನ್ ತಾಳ್ಮೆಯ ಆಟ, ಅರ್ಧ ಶತಕ ವಿಫಲ- ಕೋಲ್ಕತ್ತಾಗೆ 37 ರನ್‍ಗಳ  ಗೆಲುವು

    ಕರ್ರನ್ ತಾಳ್ಮೆಯ ಆಟ, ಅರ್ಧ ಶತಕ ವಿಫಲ- ಕೋಲ್ಕತ್ತಾಗೆ 37 ರನ್‍ಗಳ ಗೆಲುವು

    – ಕೊನೆಯ 2 ಓವರ್ ನಲ್ಲಿ ಅಬ್ಬರಿಸಿದ ಕರ್ರನ್

    ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳುವ ಮೂಲಕ ಕಡಿಮೆ ರನ್ ಗಳಿಸಿದರೂ ರಾಜಸ್ಥಾನ ರಾಯಲ್ಸ್  ವಿರುದ್ಧ 37 ರನ್‌ ಗಳಿಂದ ಗೆದ್ದುಕೊಂಡಿದೆ.

    ಅರ್ಧ ಶತಕ ವಂಚಿತ ಶುಭಮನ್ ಗಿಲ್, ಐಯಾನ್ ಮಾರ್ಗನ್ ಹಾಗೂ ಆಂಡ್ರೆ ರಸಲ್ ಅವರ ಅಬ್ಬರದ ಆಟ ಹಾಗೂ ಬೌಲರ್ ಗಳಾದ ಶಿವಂ ಮಾವಿ, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಇದರಿಂದಾಗಿ ಸುಲಭವಾಗಿ ರಾಜಸ್ಥಾನದ ವಿರುದ್ಧ ಗೆಲುವು ಸಾಧಿಸಲು ಅನುಕೂಲವಾಯಿತು. ಶುಭಮನ್ ಗಿಲ್ 34 ಎಸೆತಕ್ಕೆ 47 ರನ್ ಗಳಿಸುವ ಮೂಲಕ ಉತ್ತಮ ಆರಂಭಿಕ ಆಟವಾಡಿದರೂ, ಅರ್ಧ ಶತಕ ವಂಚಿತರಾದರು. ನಂತರ ನಿತೀಶ್ ರಾಣಾ ಆಗಮಿಸಿ 17 ಬಾಲ್‍ಗೆ 22ರನ್ ಸಿಡಿಸುವ ಮೂಲಕ ಉತ್ತಮ ಆಟವಾಡುವ ಭರವಸೆ ನೀಡಿದರೂ ನಂತರ ವಿಕೆಟ್ ಒಪ್ಪಿಸಿದರು.

    11ನೇ ಓವರ್ ಗೆ ಆಂಡ್ರೆ ರಸಲ್ ಆಗಮಿಸಿ 3 ಸಿಕ್ಸ್ ಬಾರಿಸುವ ಮೂಲಕ ಅಬ್ಬರದ ಆಟವಾಡಿ 14 ಬಾಲ್‍ಗೆ 24 ರನ್ ಗಳಿಸಿ ತಂಡವನ್ನು ಒಂದು ಹಂತಕ್ಕೆ ತಂದಿದ್ದರು. ನಂತರ ಐಯಾನ್ ಮಾರ್ಗನ್ 23 ಬಾಲ್‍ಗೆ 34 ರನ್ ಗಳಿಸಿ, ರಾಜಸ್ಥಾನ ರಾಯಲ್ಸ್‍ಗೆ 175 ರನ್‍ಗಳ ಗುರಿಯನ್ನು ನೀಡಲಾಗಿತ್ತು.

    ಕೋಲ್ಕತ್ತಾ ನೀಡಿದ್ದ 175 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ, ಪವರ್ ಪ್ಲೇ ಹಂತದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡಿತು. ಕೊನೆಯವರೆಗೂ ತಾಳ್ಮೆ ಕಳೆದುಕೊಳ್ಳದೇ ಆಡುವ ಮೂಲಕ ಅರ್ಧ ಶತಕ ಬಾರಿಸಿದ ಟಾಮ್ ಕರ್ರನ್ ಅವರ ಪಂದ್ಯ ಗೆಲ್ಲಿಸುವ ಪ್ರಯತ್ನ ವಿಫಲವಾಗಿದ್ದು, ಈ ಮೂಲಕ 37 ರನ್‍ಗಳ ಅಂತರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದೆ.

    ಕೋಲ್ಕತ್ತಾ ತಂಡ ಬೌಲಿಂಗ್ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ತಂಡದ ಬಹುತೇಕ ದಾಂಡಿಗರು ಸಿಂಗಲ್ ಡಿಜಿಟ್‍ಗೆ ಔಟಾಗಿದ್ದಾರೆ. ವಿಕೆಟ್ ಕಬಳಿಸುವ ತನ್ನ ಓಟವನ್ನು ಮುಂದುವರಿಸಿದ್ದ ಬೌಲರ್ ಗಳು ಬಹುತೇಕರನ್ನು ಒಂದಂಕಿಗೇ ಪೆವಿಲಿಯನ್‍ಗೆ ಕಳುಹಿಸಿದ್ದರು. ಇದರಿಂದಾಗಿ ರಾಜಸ್ಥಾನ ತಂಡಕ್ಕೆ ತೀವ್ರ ಆಘಾತವಾಯಿತು.

    ಈ ಮೂಲಕ ಕಡಿಮೆ ಟಾರ್ಗೆಟ್ ನೀಡಿದರೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪಂದ್ಯವನ್ನು ತನ್ನದಾಗಿಸಿಕೊಂಡಿದೆ. ಟಾಮ್ ಕರ್ರನ್ ತಾಳ್ಮೆಯ ಆಟವಾಡಿ 3 ಸಿಕ್ಸ್, 2 ಫೋರ್ ಚೆಚ್ಚುವ ಮೂಲಕ 36 ಬಾಲ್‍ಗೆ 54ರನ್ ಹೊಡೆದು ತಂಡವನ್ನು ಗೆಲ್ಲಿಸಲು ಯತ್ನಿಸಿದರು. ಆದರೆ ಅಂತರ ತುಂಬಾ ಇದ್ದಿದ್ದರಿಂದ ಸಾಧ್ಯವಾಗಲಿಲ್ಲ. ಆದರೆ ರಾಜಸ್ಥಾನ ಹೀನಾಯವಾಗಿ ಸೋಲುವುದನ್ನು ತಡೆದರು.

    ಹತ್ತನೇ ಓವರ್ ಗೆ ಬರುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸೋಲುವ ಮುನ್ಸೂಚನೆಯನ್ನು ರಾಜಸ್ಥಾನ ನೀಡಿತು. ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಎಷ್ಟೇ ಪ್ರಯತ್ನಿಸಿದರು ಹೆಚ್ಚು ರನ್ ಚೆಚ್ಚಲು ಸಾಧ್ಯವಾಗಲಿಲ್ಲ. 16 ಬಾಲ್‍ಗೆ ಕೇವಲ 21ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಹಿಂದೆಯೇ ಸ್ಟೀವನ್ ಸ್ಮಿತ್ ಸಹ 7 ಬಾಲ್‍ಗೆ 3 ರನ್ ಗಳಿಸಿ ಪೆವಿಲಿಯನ್ ಸೇರಿದರು ಈ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

    ನಂತರ ಬಂದ ಸಂಜು ಸ್ಯಾಮ್ಸನ್(9 ಬಾಲ್‍ಗೆ 8 ರನ್), ರಾಬಿನ್ ಉತ್ತಪ್ಪ (7 ಬಾಲ್‍ಗೆ 2ರನ್), ರಿಯಾನ್ ಪರಾಗ್(6 ಬಾಲ್‍ಗೆ 1ರನ್), ರಾಹುಲ್ ತೆವಾಟಿಯಾ (10 ಬಾಲ್‍ಗೆ 14ರನ್), ಶ್ರೀಯಾಸ್ ಗೋಪಾಲ್(7 ಬಾಲ್‍ಗೆ 5 ರನ್), ಜಯದೇವ್ ಉನಾದ್ಕಟ್(5 ಬಾಲ್‍ಗೆ 4ರನ್) ಸಹ ಉತ್ತಮ ಪ್ರದರ್ಶನ ತೋರಲಿಲ್ಲ ಹೀಗಾಗಿ ಹೀನಾಯವಾಗಿ ಪಂದ್ಯವನ್ನು ಸೋಲಬೇಕಾಯಿತು.

    ಬಟ್ಲರ್, ತೆವಾಟಿಯಾ, ಕರ್ರನ್ ಹೊರತು ಪಡಿಸಿದರೆ ಉಳಿದೆಲ್ಲರೂ ಸಿಂಗಲ್ ಡಿಜಿಟ್‍ಗೆ ಔಟಾಗುವ ಮೂಲಕ ಪಂದ್ಯವನ್ನು ಸೋಲಿನ ಸುಳಿಗೆ ಸಿಲುಕಿಸಿದರು. 18 ಓವರ್ ಮುಗಿಯುವ ಹೊತ್ತಿಗೆ ಅಬ್ಬರ ಆಟ ಆಡುವ ಪ್ರಯತ್ನದಲ್ಲಿ ಸಿಕ್ಸರ್ ಬಾರಿಸಲು ಹೋಗಿ ಜಯದೇವ್ ಉನಾದ್ಕಟ್ ಕ್ಯಾಚ್ ನೀಡಿದರು.

    ಕೋಲ್ಕತ್ತಾ ಬೌಲರ್ಸ್ ಶಿವಂ ಮಾವಿ, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಉಳಿದಂತೆ ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್ ಹಾಗೂ ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಕಬಳಿಸಿದರು.