ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್‌ಗೆ (Lucknow Super Giants) ಗುಡ್‌ಬೈ ಹೇಳಿದ್ದಾರೆ.
ಅಧಿಕೃತವಾಗಿ ಎಲ್‌ಎಸ್‌ಜಿ (LSG) ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಮತ್ತೆ ಮರಳಿದ್ದಾರೆ. ಕೆಕೆಆರ್ ತಂಡದಲ್ಲಿದ್ದಾಗ ನಾಯಕರಾಗಿ ಎರಡು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ಕೆಕೆಆರ್‌ನ ಸಿಇಒ ವೆಂಕಿ ಮೈಸೂರು (Venky Mysuru) ಅವರು ಬುಧವಾರ ಈ ಸಂಬಂಧ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್ ಬಗ್ಗೆ ಅಖಿಲೇಶ್ ಟೀಕೆ
ಗಂಭೀರ್ ಎರಡು ವರ್ಷಗಳ ಕಾಲ LSG ಯ ಸಲಹೆಗಾರರಾಗಿ ಪಾತ್ರ ನಿರ್ವಹಿಸಿದ್ದರು. IPL 2022 ಆವೃತ್ತಿಯಲ್ಲಿ ತಂಡ ಫೈನಲ್ ತಲುಪಲು ಅಪಾರ ಶ್ರಮಿಸಿದ್ದರು. 2023 ರ ಆವೃತ್ತಿಯಲ್ಲಿ LSG ಲೀಗ್ ಸ್ಟ್ಯಾಂಡಿಂಗ್‌ನಲ್ಲಿ ಮೂರನೇ ಸ್ಥಾನ ಗಳಿಸಿತು. ಆದರೆ ಸತತವಾಗಿ ಎರಡನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ವಿಶ್ವಕಪ್ ಮುಗೀತು, T20 ಹಂಗಾಮ ಶುರು – ಟೀಂ ಇಂಡಿಯಾದ ಮುಂದಿದೆ ಸಾಲು ಸಾಲು ಸರಣಿ!
ಭಾವನಾತ್ಮಕ ಪೋಸ್ಟ್ ಮೂಲಕ ಗಂಭೀರ್ ಲಕ್ನೋ ತಂಡದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ. “ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗಿನ ನನ್ನ ಪ್ರಯಾಣದ ಅಂತ್ಯವನ್ನು ನಾನು ಘೋಷಿಸುತ್ತಿದ್ದೇನೆ. ಈ ಪ್ರಯಾಣವನ್ನು ಸ್ಮರಣೀಯವಾಗಿಸಿದ ಎಲ್ಲಾ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಪ್ರತಿಯೊಬ್ಬರ ಬಗ್ಗೆಯೂ ಅಪಾರ ಪ್ರೀತಿಯಿದ್ದು, ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಈ ಗಮನಾರ್ಹ ಫ್ರಾಂಚೈಸ್ ಅನ್ನು ರಚಿಸುವಾಗ ಸ್ಪೂರ್ತಿದಾಯಕ ನಾಯಕತ್ವಕ್ಕಾಗಿ ಮತ್ತು ನನ್ನ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಾನು ಡಾ. ಸಂಜೀವ್ ಗೋಯೆಂಕಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ತಂಡವು ಭವಿಷ್ಯದಲ್ಲಿ ಅದ್ಭುತಗಳನ್ನು ಮಾಡುತ್ತದೆ. ಪ್ರತಿಯೊಬ್ಬ LSG ಅಭಿಮಾನಿಯನ್ನು ಹೆಮ್ಮೆಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಆಲ್ ದಿ ಬೆಸ್ಟ್ LSG ಬ್ರಿಗೇಡ್” ಎಂದು ಎಕ್ಸ್‌ನಲ್ಲಿ ಗಂಭೀರ್ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: 3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ – ಕೋಪವನ್ನೇ ಶಕ್ತಿಯಾಗಿಸಿ ಪಿಚ್‌ಗೆ ಇಳಿದಿದ್ದೇ ರೋಚಕ!
ಚೆನ್ನೈ: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಕೋಲ್ಕತ್ತಾ 18.3 ಓವರ್‌ಗಳಲ್ಲಿ 147 ರನ್ ಗಳಿಸಿ ಗೆಲುವು ಸಾಧಿಸಿತು.
ಕೋಲ್ಕತ್ತಾ 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡರೂ ನಾಲ್ಕನೇ ವಿಕೆಟಿಗೆ ನಿತೀಶ್ ರಾಣಾ ಮತ್ತು ರಿಂಕು ಸಿಂಗ್ 4ನೇ ವಿಕೆಟಿಗೆ 76 ಎಸೆತಗಳಲ್ಲಿ 99 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹತ್ತಿರ ತಂದು ನಿಲ್ಲಿಸಿದರು. ರಿಂಕು ಸಿಂಗ್ 54 ರನ್(43 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ರನೌಟ್ ಆದರು. ನಾಯಕ ನಿತೀಶ್ ರಾಣಾ ಔಟಾಗದೇ 57 ರನ್(44 ಎಸೆತ, 6 ಬೌಂಡರಿ, 1 ಸಿಕ್ಸರ್) ಹೊಡೆದರು.
ಕೋಲ್ಕತ್ತಾ: ಯವ ಆಟಗಾರ ಯಶಸ್ವಿ ಜೈಸ್ವಾಲ್ ದಾಖಲೆಯ ವೇಗದ ಅರ್ಧಶತಕ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಆಟದಿಂದಾಗಿ ರಾಜಯಸ್ಥಾನ ರಾಯಲ್ಸ್ (Rajasthan Royals ) ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders ) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಗೆಲ್ಲಲು 150 ರನ್‌ಗಳ ಗುರಿಯನ್ನು ಪಡೆದ ರಾಜಸ್ಥಾನ 13.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 151 ರನ್ ಹೊಡೆಯುವ ಮೂಲಕ ಗೆಲುವಿನ ನಗೆ ಬೀರಿತು.
21 ವರ್ಷದ ಯುವ ಆಟಗಾರ ಜೈಸ್ವಾಲ್ (Yashasvi Jaiswal ) ಕೇವಲ 13 ಎಸೆತಗಳಲ್ಲಿ 50 ರನ್ (6 ಬೌಂಡರಿ, 3 ಸಿಕ್ಸ್) ಚಚ್ಚುವ ಮೂಲಕ ಕೆಎಲ್ ರಾಹುಲ್ (KL Rahul) ಅವರ ಹೆಸರಿನಲ್ಲಿದ್ದ ವೇಗದ ಅರ್ಧಶತಕ ದಾಖಲೆಯನ್ನು ಮುರಿದರು. ಈ ಮೊದಲು 2018ರ ಆವೃತ್ತಿಯಲ್ಲಿ ರಾಹುಲ್14 ಎಸೆತಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಇದನ್ನೂ ಓದಿ: IPL 2023: ಪ್ಲೇ ಆಫ್ ಲೆಕ್ಕಾಚಾರ ಏನು? – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ RCB ಫ್ಯಾನ್ಸ್
ಮೊದಲ ವಿಕೆಟಿಗೆ 30 ರನ್ ಬಂದರೂ ಬಟ್ಲರ್ ಕೊಡುಗೆ ಶೂನ್ಯ. ಮುರಿಯದ ಎರಡನೇ ವಿಕೆಟಿಗೆ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ (Sanju Samson) 69 ಎಸೆತಗಳಲ್ಲಿ 121 ರನ್ ಜೊತೆಯಾಟವಾಡಿದರು.
ಅಂತಿಮವಾಗಿ ಜೈಸ್ವಾಲ್ ಔಟಾಗದೇ 98 ರನ್ (47 ಎಸೆತ, 12 ಬೌಂಡರಿ, 5 ಸಿಕ್ಸರ್), ಸಂಜು ಸ್ಯಾಮ್ಸನ್ ಔಟಾಗದೇ 48 ರನ್ (29 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು. 16 ಎಸೆತಗಳಲ್ಲಿ ರಾಜಸ್ಥಾನದ ಮೊದಲ 50 ರನ್ ಬಂದಿದ್ದರೆ 49 ಎಸೆತಗಳಲ್ಲಿ 100 ರನ್ ಗಡಿ ದಾಟಿತ್ತು. ಪಂದ್ಯವನ್ನು ಗೆಲ್ಲುವ ಮೂಲಕ 5ನೇ ಸ್ಥಾನದಲ್ಲಿದ್ದ ರಾಜಸ್ಥಾನ 3ನೇ ಸ್ಥಾನಕ್ಕೆ ಜಿಗಿದರೆ 6ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ 7ನೇ ಸ್ಥಾನಕ್ಕೆ ಜಾರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ವೆಂಕಟೇಶ್ ಅಯ್ಯರ್ 57 ರನ್(42 ಎಸೆತ, 2 ಬೌಂಡರಿ, 4 ಸಿಕ್ಸರ್) ನಾಯಕ ನಿತೀಶ್ ರಾಣಾ 22 ರನ್ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.
ಚಹಲ್ 25 ರನ್ ನೀಡಿ 4 ವಿಕೆಟ್ ಕಿತ್ತರೆ ಬೌಲ್ಟ್ 2 ವಿಕೆಟ್, ಸಂದೀಪ್ ಶರ್ಮಾ ಮತ್ತು ಆಸೀಫ್ ತಲಾ ಒಂದೊಂದು ವಿಕೆಟ್ ಪಡೆದರು.
ಕೋಲ್ಕತ್ತಾ: ಕೊನೆಯಲ್ಲಿ ಆ್ಯಂಡ್ರೆ ರಸೆಲ್ (Andre Russell) ಮತ್ತು ರಿಂಕು ಸಿಂಗ್ (Rinku Singh ) ಅವರ ಸ್ಫೋಟಕ ಆಟದಿಂದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಪಂಜಾಬ್ ಕಿಂಗ್ಸ್ (Punjab Kings ) ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
180 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ ಪರ ರಿಂಕು ಸಿಂಗ್ 20ನೇ ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.
ಕೊನೆಯ 24 ಎಸೆತಗಳಲ್ಲಿಕೋಲ್ಕತ್ತಾ ಜಯಗಳಿಸಲು 54 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 15 ರನ್ ಬಂದರೆ 18ನೇ ಓವರ್‌ನಲ್ಲಿ 10 ರನ್ ಬಂದಿತ್ತು. ಕೊನೆಯ 12 ಎಸೆತಗಳಲ್ಲಿ 26 ರನ್ ಬೇಕಿತ್ತು. ಸ್ಯಾಮ್ ಕರ್ರನ್ ಎಸೆದ 19ನೇ ಓವರ್‌ನಲ್ಲಿ ರಸೆಲ್ 3 ಸಿಕ್ಸ್ ಸಿಡಿಸಿದರು. ಈ ಓವರ್‌ನಲ್ಲಿ ಎರಡು ಸಿಂಗಲ್ ಸೇರಿ 20 ರನ್ ಬಂತು.
ಕೊನೆಯ ಓವರನ್‌ಲ್ಲಿ 6 ರನ್ ಬೇಕಿತ್ತು. ಅರ್ಶದೀಪ್ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ನಂತರದ ಎರಡು ಎಸೆತದಲ್ಲಿ ಸಿಂಗಲ್ ರನ್ ನಾಲ್ಕನೇ ಎಸೆತದಲ್ಲಿ 2 ರನ್ ಬಂತು. 5ನೇ ಎಸೆತ ಬ್ಯಾಟ್ ತಾಗದ ಬಾಲ್ ಕೀಪರ್ ಕೈಸೇರಿತು. ಈ ವೇಳೆ ರನ್ ಓಡಿದ ಪರಿಣಾಮ ರಸೆಲ್ ನಾನ್‌ಸ್ಟ್ರೈಕ್‌ನಲ್ಲಿ ರನೌಟ್ ಆದರು. ಕೊನೆಯ ಎಸೆತವನ್ನು ರಿಂಕು ಸಿಂಗ್ ಬೌಂಡರಿಗೆ ಅಟ್ಟಿದ ಪರಿಣಾಮ ಕೋಲ್ಕತ್ತಾ 5 ವಿಕೆಟ್ ನಷ್ಟಕ್ಕೆ 182 ರನ್ ಹೊಡೆಯುವ ಮೂಲಕ ಜಯಗಳಿಸಿತು. ಇದನ್ನೂ ಓದಿ: ಚುನಾವಣಾ ದಿನ ನಂದಿಗಿರಿಧಾಮ ಸಂಪೂರ್ಣ ಬಂದ್
ರಸೆಲ್ 42 ರನ್(23 ಎಸೆತ, 3 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರೆ ರಿಂಕು ಸಿಂಗ್ ಔಟಾಗದೇ 21 ರನ್(10 ಎಸೆತ, 2 ಬೌಂಡರಿ, 1 ಸಿಕ್ಸರ್) ಚಚ್ಚಿದರು. ಕೋಲ್ಕತ್ತಾ ಪರ ಜೇಸನ್ ರಾಯ್ 38 ರನ್(24 ಎಸೆತ, 8 ಬೌಂಡರಿ), ನಾಯಕ ನಿತೀಶ್ ರಾಣಾ 51 ರನ್(38 ಎಸೆತ, 6 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 53 ರನ್ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ವಿಕೆಟ್ ಕಳೆದುಕೊಂಡಿದ್ದರೂ ನಾಯಕ ಶಿಖರ್ ಧವನ್ 57 ರನ್(47 ಎಸೆತ, 9 ಬೌಂಡರಿ, 1 ಸಿಕ್ಸರ್) ಹೊಡೆದು ತಂಡವನ್ನು ಮೇಲೆತ್ತಿದ್ದರು.
ಲಿವಿಂಗ್‌ಸ್ಟೋನ್ 15 ರನ್, ಜಿತೇಶ್ ಶರ್ಮಾ 21 ರನ್, ರಿಶಿ ಧವನ್ 19 ರನ್ (11 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದು ಔಟದರು. ಕೊನೆಯಲ್ಲಿ ಶಾರೂಖ್ ಖಾನ್ ಔಟಾಗದೇ 21 ರನ್(8 ಎಸೆತ, 3 ಬೌಂಡರಿ, 1 ಸಿಕ್ಸರ್), ಹಪ್ರೀತ್ ಬ್ರಾರ್ ಔಟಾಗದೇ 17 ರನ್ (9 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದ ಕಾರಣ ಪಂಜಾಬ್ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.
ಮುಂಬೈ: ಕೊನೆಯ ಎಸೆತದಲ್ಲಿ ಕೆಕೆಆರ್ ಗೆಲುವಿಗೆ 3 ರನ್ ಬೇಕಾಗಿದ್ದ ವೇಳೆ ಲಕ್ನೋ ಗೆಲುವಿಗಾಗಿ ಮಾರ್ಕಸ್ ಸ್ಟೋಯಿನಿಸ್ ಎಸೆದ ಕೊನೆಯ ಎಸೆತದಲ್ಲಿ ಉಮೇಶ್ ಯಾದವ್ ಬೌಲ್ಡ್ ಆಗುವ ಮೂಲಕ ಸ್ಟನಿಂಗ್ ವಿನ್ನಿಂಗ್ ಮೂಮೆಂಟ್ ಲಕ್ನೋ ಪಾಲಾಯಿತು. ಈ ಮೂಲಕ ಲಕ್ನೋ ಪ್ಲೇ ಆಫ್‍ಗೆ ಎರಡನೇ ತಂಡವಾಗಿ ಎಂಟ್ರಿಕೊಟ್ಟಿದೆ.
ಗೆದ್ದಿದ್ದು ಹೇಗೆ?
19 ಓವರ್‌ನಲ್ಲಿ ಕೋಲ್ಕತ್ತಾಗೆ 17 ರನ್ ಹರಿದುಬಂತು. ಕೊನೆಯ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 21 ರನ್ ಬೇಕಾಗಿತ್ತು. ಸ್ಟೋಯಿನಿಸ್ ಎಸೆದ ಮೊದಲ ಎಸೆತವನ್ನೇ ರಿಂಕು ಸಿಂಗ್ ಬೌಂಡರಿಗಟ್ಟಿದರು, ಆ ಬಳಿಕ ಸತತ ಎರಡು ಎಸೆತಗಳನ್ನು ಸಿಕ್ಸ್ ಬಾರಿಸಿದರು. 4 ನೇ ಎಸೆತದಲ್ಲಿ 2 ರನ್ ಬಂತು. 5ನೇ ಎಸೆತದಲ್ಲಿ ರಿಂಕು ಸಿಂಗ್ ಔಟ್ ಆದರು. ಕೊನೆಯ ಎಸೆತದಲ್ಲಿ ಕೆಕೆಆರ್ ಗೆಲುವಿಗೆ 3 ರನ್ ಬೇಕಾಗಿತ್ತು. ಉಮೇಶ್ ಯಾದವ್ ಕ್ರೀಸ್‍ನಲ್ಲಿದ್ದರು. ಆದರೆ ಸ್ಟೋಯಿನಿಸ್ ಎಸೆದ ಯಾರ್ಕರ್ ಎಸೆತವನ್ನು ಜಡ್ಜ್ ಮಾಡಲು ಎಡವಿದ ಯಾದವ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಕೆಕೆಆರ್ ಸೋತರೆ, ಲಕ್ನೋ 2 ರನ್‍ಗಳ ರೋಚಕ ಜಯ ಸಾಧಿಸಿತು.
ಲಕ್ನೋ ನೀಡಿದ 211 ರನ್‍ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಕೆಕೆಆರ್ ಆರಂಭದಲ್ಲಿ ನಿಧಾನವಾಗಿ ಕಂಡರು, ಕೊನೆಯಲ್ಲಿ ರೋಚಕವಾಗಿತ್ತು. ಕೋಲ್ಕತ್ತಾ ಪರ ನಿತೀಶ್ ರಾಣಾ 42 ರನ್ (22 ಎಸೆತ, 9 ಬೌಂಡರಿ), ಶ್ರೇಯಸ್ ಅಯ್ಯರ್ 50 ರನ್ (29 ಎಸೆತ, 4 ಬೌಂಡರಿ, 3 ಸಿಕ್ಸ್) ಮತ್ತು ಬಿಲ್ಲಿಂಗ್ಸ್ 36 ರನ್ (24 ಎಸೆತ, 2 ಬೌಂಡರಿ, 3 ಸಿಕ್ಸ್) ಬಾರಿಸಿ ಔಟ್ ಆದರು. ಆ ಬಳಿಕ ರಿಂಕು ಸಿಂಗ್ 40 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ಚಚ್ಚಿ ಹೋರಾಡಿ ಕೊನೆಯಲ್ಲಿ ವಿಕೆಟ್ ಕೈ ಚೆಲ್ಲಿ ಕೆಕೆಆರ್ ಸೋಲುವಂತಾದರು.
ಈ ಮೊದಲು ಟಾಸ್‍ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ರಾಹುಲ್ ನಿರ್ಧಾರಕ್ಕೆ ಆರಂಭದಿಂದಲೇ ಬೆಂಬಲವಾಗಿ ಕ್ವಿಂಟನ್ ಡಿ ಕಾಕ್ ನಿಂತರು.
ರಾಹುಲ್, ಡಿಕಾಕ್ ದಾಖಲೆಯ ಆಟ
ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ಈ ಜೋಡಿ ಕೆಲ ಓವರ್‌ಗಳ ಆಟದ ಬಳಿಕ ಇಬ್ಬರೂ ಕೂಡ ಕೆಕೆಆರ್ ಬೌಲರ್‌ಗಳ ಮೇಲೆ ಸವಾರಿ ಆರಂಭಿಸಿದರು. ಡಿಕಾಕ್ ಅಂತೂ ಬೌಂಡರಿ, ಸಿಕ್ಸ್ ಸಿಡಿಸಿ ಕೆಕೆಆರ್ ಬೌಲರ್‌ಗಳ ಬೆವರಿಳಿಸಿದರು.
ಕೋಲ್ಕತ್ತಾದ 6 ಮಂದಿ ಬೌಲರ್‌ಗಳು ದಾಳಿಗಿಳಿದರೂ ರನ್ ವೇಗಕ್ಕೆ ಬ್ರೇಕ್ ಹಾಕುವಲ್ಲಿ ಸಾಧ್ಯವಾಗಲಿಲ್ಲ. ಮೊದಲ ಎಸೆತದಿಂದ ಕೊನೆಯ ಎಸೆತದ ವರೆಗೆ ಕೆಕೆಆರ್ ತಂಡವನ್ನು ಕಾಡಿದ ಈ ಜೋಡಿ ಅಜೇಯ 210 ರನ್ (120 ಎಸೆತ) ಗಳಿಂದ ಮೊದಲನೇ ವಿಕೆಟ್‍ಗೆ ದಾಖಲೆಯ ಜೊತೆಯಾಟವಾಡಿ ಮಿಂಚಿತು.
ಡಿಕಾಕ್ ಅಜೇಯ 140 ರನ್ (70 ಎಸೆತ, 10 ಬೌಂಡರಿ, 10 ಸಿಕ್ಸ್) ಮತ್ತು ರಾಹುಲ್ 68 ರನ್ (51 ಎಸೆತ, 3 ಬೌಂಡರಿ, 4 ಸಿಕ್ಸ್) ಚಚ್ಚಿ ಬಿಸಾಕಿದರು. ಈ ಮೂಲಕ ಲಕ್ನೋ ವಿಕೆಟ್ ನಷ್ಟವಿಲ್ಲದೆ 20 ಓವರ್‌ಗಳಲ್ಲಿ 210 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಇತ್ತ ಕೆಕೆಆರ್ ಬೌಲರ್‌ಗಳ ಪಾಡಂತೂ ಹೇಳತೀರದಾಯಿತು. ಒಂದು ವಿಕೆಟ್ ಪಡೆಯಲಾಗದೆ, ಭರ್ಜರಿ ರನ್ ನೀಡಿ ದುಬಾರಿ ಎನಿಸಿಕೊಂಡರು.
ರನ್ ಏರಿದ್ದು ಹೇಗೆ?
44 ಎಸೆತ 50 ರನ್
77 ಎಸೆತ 100 ರನ್
104 ಎಸೆತ 150 ರನ್
200 ಎಸೆತ 118 ರನ್
210 ಎಸೆತ 120 ರನ್
ಮುಂಬೈ: ಸತತ ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಮುಂಬೈ ಇಂಡಿಯನ್ಸ್ ಆಸೆಗೆ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ತಣ್ಣೀರು ಎರಚಿದೆ. 165 ರನ್‌ಗಳ ಸಾಧಾರಣ ಮೊತ್ತ ಗಳಿಸಿದರೂ ಕೆಕೆಆರ್ ತಂಡವು ಮುಂಬೈ ವಿರುದ್ಧ 52 ರನ್‌ಗಳ ಭರ್ಜರಿ ಜಯ ಸಾಧಿಸಿ, ಪ್ಲೇ ಆಫ್ ಕನಸು ಜೀವಂತವಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ, 166 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 17.3 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 113 ರನ್‌ಗಳಿಸಿ, ಸೋಲನ್ನು ಒಪ್ಪಿಕೊಂಡಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡವು (MI) ಐಪಿಎಲ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಚೊಚ್ಚಲ 5 ವಿಕೆಟ್ (10ಕ್ಕೆ 5) ಸಾಧನೆ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 165 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಬ್ಯಾಟ್ಸ್ಮನ್‌ಗಳ ವೈಫಲ್ಯ ಕಂಡಿತು. ಮತ್ತೆ ಫಾರ್ಮ್ ಕಳೆದುಕೊಂಡ ರೋಹಿತ್ ಶರ್ಮಾ 2 ರನ್‌ಗಳಿಗೆ ಮಂಡಿಯೂರಿದರು.
ಇದರ ಬೆನ್ನಲ್ಲೇ ತಿಲಕ್‌ವರ್ಮಾ 6 ರನ್, ರಮಣದೀಪ್ ಸಿಂಗ್ 12 ರನ್, ಟಿಮ್ ಡೇವಿಡ್ 13 ರನ್‌ಗಳಿಸಿ ಹೊರ ನಡೆದರು. ಆದರೂ ಕೆಕೆಆರ್ ವಿರುದ್ಧ ಸತತ ಹೋರಾಟ ನಡೆಸಿದ ಇಶಾನ್ ಕಿಶನ್ ಜವಾಬ್ದಾರಿ ಅರ್ಧಶತಕ ಗಳಿಸಿದರು. 42 ಎಸೆತಗಳಲ್ಲಿ 51 ರನ್ (1 ಸಿಕ್ಸರ್, 5 ಬೌಂಡರಿ) ಗಳಿಸಿ 43ನೇ ಎಸೆತದಲ್ಲಿ ಬೌಂಡರಿ ಕ್ಯಾಚ್ ನೀಡಿದರು. ಆದರೂ ಕಿರನ್ ಪೋಲಾರ್ಡ್ ಅವರ ನಿಲುವಿನಿಂದ ಗೆಲುವಿನ ಕನಸು ಉಳಿಸಿಕೊಂಡಿದ್ದ ಮುಂಬೈ 17ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸ್ ಎತ್ತುವ ಪ್ರಯತ್ನದಲ್ಲಿ ಕೀಪರ್ ಕ್ಯಾಚ್ ನೀಡಿದರು. ಇದರಿಂದ ಮುಂಬೈ ಸಂಪೂರ್ಣ ಗೆಲುವಿನ ಭರವಸೆ ಕಳೆದುಕೊಂಡಿತು. ಪೊಲಾರ್ಡ್ 15 ರನ್‌ಗಳಿಸಿ ಹೊರನಡೆದರು.
ಬೂಮ್ರಾ ಮಾರಕ ದಾಳಿ: ಪವರ್‌ಪ್ಲೇ ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 60 ರನ್ ಕಲೆಹಾಕಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ (ಕೆಕೆಆರ್)ಗೆ ಕಡಿವಾಣ ಹಾಕಿದ್ದು ಮುಂಬೈ ಪ್ರೈಮ್ ಬೌಲರ್ ಜಸ್ಪಿತ್ ಬುಮ್ರಾ. 18ನೇ ಓವರ್‌ನಲ್ಲಿ ಮೇಡನ್ ಸೇರಿದಂತೆ 3 ವಿಕೆಟ್ ಕಬಳಿಸಿದ ಜಸ್ಪಿತ್ ಬುಮ್ರಾ ಐಪಿಎಲ್‌ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದು ಕೇವಲ ಐಪಿಎಲ್ ಅಷ್ಟೇ ಅಲ್ಲದೆ ಟಿ20 ಫಾರ್ಮೆಟ್‌ನಲ್ಲಿ ಬುಮ್ರಾ ಬೆಸ್ಟ್ ಬೌಲರ್ ಆಗಿ ಮಿಂಚಿದ್ದಾರೆ.
4 ಓವರ್‌ಗೆ ಕೇವಲ 10 ರನ್ ನೀಡಿ 1 ಮೇಡನ್ ಸೇರಿದಂತೆ 5 ವಿಕೆಟ್ ಪಡೆದ ದಾಖಲೆಯನ್ನ ಬುಮ್ರಾ ಮಾಡಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ ಕೇವಲ 1 ರನ್ ನೀಡಿದ ಬುಮ್ರಾ ಬೌಲಿಂಗ್ ದಾಳಿಗೆ ಕೆಕೆಆರ್ 165 ರನ್ ಗಳಿಸಲಷ್ಟೇ ಶಕ್ತವಾಯಿತು. 2020ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್ ನೀಡಿ 4 ವಿಕೆಟ್ ಪಡೆದಿದ್ದು ಬುಮ್ರಾರ ಇದುವರೆಗಿನ ಬೆಸ್ಟ್ ಬೌಲಿಂಗ್ ಆಗಿತ್ತು. ಈ ಮೂಲಕ ಬೂಮ್ರಾ 10 ರನ್ ನೀಡಿ ಐಪಿಎಲ್‌ನಲ್ಲಿ 5 ವಿಕೆಟ್ ಸಾಧನೆ ಮಾಡಿದರು.
15ನೇ ಓವರ್‌ನಲ್ಲಿ ರಸೆಲ್ ಜೊತೆಗೆ ನಿತೀಶ್ ರಾಣಾ ಅವರನ್ನು ತಮ್ಮ ಮಿಂಚಿನ ಬೌಲಿಂಗ್ ದಾಳಿಯಿಂದ ಹೊರ ದಬ್ಬಿದರು. ಪರಿಣಾಮ 14.5 ಓವರ್‌ಗಳಲ್ಲಿ 139 ರನ್ನಿಗೆ 5 ವಿಕೆಟ್ ಕಳೆದುಕೊಂಡಿತು. 26 ಎಸೆತಗಳನ್ನು ಎದುರಿಸಿದ ರಾಣಾ 43 ರನ್ (4 ಸಿಕ್ಸರ್, 3 ಬೌಂಡರಿ) ಗಳಿಸಿ ಹೊರನಡೆದರು. 18ನೇ ಓವರ್‌ನಲ್ಲಿ ಮತ್ತೆ 3 ವಿಕೆಟ್ ಗಳಿಸಿದ ಬೂಮ್ರಾ ಬಲವಾದ ಪೆಟ್ಟು ನೀಡಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೋಲ್ಕತ್ತ ಪರ ನಿತೀಶ್ ರಾಣಾ ಹಾಗೂ ವೆಂಕಟೇಶ್ ಅಯ್ಯರ್ ತಲಾ 43 ರನ್ ಗಳಿಸಿದರು. ಇಬ್ಬರ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಈ ಪಂದ್ಯಕ್ಕಾಗಿ ಕೆಕೆಆರ್ ತಂಡದಲ್ಲಿ 5 ಬದಲಾವಣೆಗಳನ್ನು ತರಲಾಗಿತ್ತು. ಮಗದೊಮ್ಮೆ ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಹಾಗೂ ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 60 ರನ್ ಪೇರಿಸಿದರು. ಅಜಿಂಕ್ಯಾ ರಹಾನೆ 24 ಎಸೆತಗಳಲ್ಲಿ 25 ರನ್ ಬಾರಿಸಿದರೆ, ವೆಂಕಟೇಶ್ 24 ಎಸೆತಗಳಲ್ಲಿ 43 ರನ್ (4 ಸಿಕ್ಸರ್, 3 ಬೌಂಡರಿ) ಸಿಡಿಸಿ ಮಿಂಚಿದರು.
ಭರವಸೆಯ ಆಟಗಾರ ಆಂಡ್ರೆ ರಸೆಲ್ (9 ರನ್), ನಾಯಕ ಶ್ರೇಯಸ್ ಅಯ್ಯರ್ (6ರನ್) ಇಬ್ಬರ ಬ್ಯಾಟಿಂಗ್ ವೈಫಲ್ಯ ತಂಡವನ್ನು 170 ಗಡಿಯೊಳಗೇ ಕಟ್ಟಿಹಾಕಿತು. 13ನೇ ಓವರ್ ಮುಕ್ತಾಯದ ವೇಳೆಗೆ 131 ರನ್‌ಗಳಿದ್ದರೂ ಸಹ ನಂತರ ಪ್ರಮುಖ ಬ್ಯಾಟ್ಸ್ಮನ್‌ಗಳ ಬ್ಯಾಟಿಂಗ್ ವೈಫಲ್ಯ ತಂಡವನ್ನು ಅತೀ ಕಡಿಮೆ ರನ್‌ಗಳಲ್ಲೇ ಕಟ್ಟಿ ಹಾಕಿತು.
ಶೆಲ್ಡನ್ ಜ್ಯಾಕ್ಸನ್ 5 ರನ್ ಗಳಿಸಿದರೆ, ಪ್ಯಾಟ್ ಕಮಿನ್ಸ್ ಹಾಗೂ ಸುನಿಲ್ ನಾರಾಯಣ್ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರೆ, ವರುಣ್ ಚಕ್ರವರ್ತಿ ಯಾವುದೇ ರನ್ ಕಲೆ ಹಾಕದೆ ಅಜೇಯರಾಗಿ ಉಳಿದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ 19 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದರು. ಒಟ್ಟಿನಲ್ಲಿ ಕೆಕೆಆರ್ ತಂಡದ ಪರ ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿಯೇ ಕೆಕೆಆರ್ 20 ಓವರ್‌ಗಳಲ್ಲಿ ಸಾಧಾರಣ ಮೊತ್ತ ದಾಖಲಿಸಿತು.
ಕಮಿನ್ಸ್, ರಸೆಲ್ ಬೌಲಿಂಗ್ ಕಮಾಲ್: ಪ್ರಮುಖ ಬ್ಯಾಟ್ಸ್ಮನ್‌ಗಳ ವೈಫಲ್ಯ ಎದುರಿಸಿದ ಕೆಕೆಆರ್ ತಂಡದಲ್ಲಿ ಪ್ಯಾಟ್ ಕಮಿನ್ಸ್, ಆಂಡ್ರೆ ರಸೆಲ್ ಬೌಲಿಂಗ್‌ನಲ್ಲಿ ಕಮಾಲ್ ಮಾಡಿದರು. 2 ಓವರ್‌ಗಳಲ್ಲಿ 21 ರನ್ ನೀಡಿದ ರಸೆಲ್ 2 ವಿಕೆಟ್ ಪಡೆದರೆ, ಕಮಿನ್ಸ್ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಉರುಳಿಸಿದರು.
ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ಆಟಕ್ಕೆ ಸ್ಟನ್ ಆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗೆಲುವಿಗೆ 75 ರನ್ ಬೇಕಿರುವಾಗಲೇ ಅಲೌಟ್ ಆಗಿ ಹೀನಾಯ ಸೋಲನುಭವಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್‍ಗಳ ಸವಾಲಿನ ಗುರಿ ನೀಡಿತ್ತು.
ಕೆ.ಎಲ್ ರಾಹುಲ್ ಪಡೆಗೆ ಆರಂಭಿಕ ಆಘಾತ ಎದುರಾಗಿತ್ತು. ನಾಯಕ ಕೆ.ಎಲ್. ರಾಹುಲ್ ಖಾತೆ ತೆರೆಯುವ ಮುನ್ನವೇ ಔಟ್ ಆಗಿ ಶೂನ್ಯ ಸುತ್ತಿದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‍ನಲ್ಲಿ ಮೂರನೇ ಬಾರಿಗೆ ಶೂನ್ಯ ಸುತ್ತಿದರು.
ಎರಡನೇ ವಿಕೆಟ್‍ಗೆ ಕ್ವಿಂಟನ್ ಡಿ ಕಾಕ್ ಹಾಗೂ ದೀಪಕ್ ಹೂಡಾ ಅರ್ಧಶತಕದ (71) ಜೊತೆಯಾಟವನ್ನು ಆಡಿದರು. ಇವರಿಬ್ಬರು ಕೆಕೆಆರ್ ಬೌಲರ್‍ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಡಿ ಕಾಕ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. 29 ಎಸೆತಗಳನ್ನು ಎದುರಿಸಿದ ಡಿ ಕಾಕ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು.
ಹೂಡಾ ಕೂಡ 41 ರನ್‍ಗಳ (27 ಎಸೆತ, 4 ಬೌಂಡರಿ, 2 ಸಿಕ್ಸರ್) ಮೂಲಕ ಉತ್ತಮವಾದ ಇನ್ನಿಂಗ್ಸ್ ಕಟ್ಟಿದರು. ಇನ್ನಿಂಗ್ಸ್‍ನ ಕೊನೆಯಲ್ಲಿ ಕೃಣಾಲ್ ಪಾಂಡ್ಯ (25) ಹಾಗೂ ಮಾರ್ಕಸ್ ಸ್ಟೋಯಿನಿಸ್ (28 ರನ್, 14 ಎಸೆತ) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಅಂತಿಮವಾಗಿ ಲಖನೌ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಹೋಲ್ಡರ್ 13 ರನ್ ಗಳಿಸಿದರು. ಕೆಕೆಆರ್ ಪರ ಆಂಡ್ರೆ ರಸೆಲ್ ಎರಡು ಹಾಗೂ ಸುನಿಲ್ ನಾರಾಯಣ್ ಒಂದು ವಿಕೆಟ್ ಕಬಳಿಸಿದರು. ಇದೇ ಮೊದಲ ಬಾರಿ ಆಡುತ್ತಿರುವ ಲಕ್ನೋ, ಇದುವೆರೆಗೆ 11 ಪಂದ್ಯಗಳಲ್ಲಿ ಏಂಟರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಒಟ್ಟು 16 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
11 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಎಂಟು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಈ ಮೂಲಕ ಶ್ರೇಯಸ್ ಪಡೆಗೆ ಪ್ಲೇ ಆಫ್ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ.
ನಂತರದಲ್ಲಿ ಲಕ್ನೋ 176 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡವು ಖಾತೆ ತೆರೆಯುವ ಮುಂಚೆಯೇ ಶೂನ್ಯಕ್ಕೆ ಬಾಬಾ ಇಂದ್ರಜೀತ್ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು. ನಂತರದಲ್ಲಿ 25 ರನ್ ಗಳಿಸುವಷ್ಟರಲ್ಲಿಯೇ 3 ವಿಕೆಟ್‍ಗಳನ್ನು ಕಳೆದುಕೊಂಡು ಪೆವಿಲಿಯನ್‍ನತ್ತ ಪರೇಡ್ ನಡೆಸಿದರು. ತಂಡದ ನಾಯಕ ಶ್ರೇಯಸ್ ಆಯ್ಯರ್ ಕೂಡಾ ಹೇಳಿಕೊಳ್ಳುವಷ್ಟೇನು ಬ್ಯಾಟ್ ಬೀಸದೆ 9 ಎಸೆತಗಳಲ್ಲಿ 6 ರನ್ ಗಳಿಸುವಷ್ಟರಲ್ಲಿ ಚಾಮೀರಾಗೆ ವಿಕೆಟ್ ಒಪ್ಪಿಸಿದರು.
6ನೇ ವಿಕೆಟ್‍ಗೆ ಜೊತೆಯಾದ ಜಮೈಕಾದ ದೈತ್ಯ ಆಟಗಾರರಾದ ರಸೆಲ್ 45 ಕೇವಲ (19 ಎಸೆತ, 3 ಬೌಂಡರಿ, 5 ಸಿಕ್ಸರ್) ಹೊಡೆದು ತಂಡದ ಗೆಲುವಿನ ಆಸೆಯನ್ನು ಕೊಂಚ ಚಿಗುರಿಸಿದರು. ನಂತರದಲ್ಲಿ ಆವೇಶ್ ಖಾನ್‍ಗೆ ವಿಕೆಟ್ ನೀಡಿ ನಿರ್ಗಮಿಸಿದರು. ಅದೇ ರೀತಿ ಸುನಿಲ್ ನರೈನ್ 22 ರನ್‍ಗಳನ್ನು ಬಾರಿಸಿ 3 ಬೌಂಡರಿ ಒಂದು ಸಿಕ್ಸರ್ ಬಾರಿಸಿ ಜೇಸನ್ ಹೋಲ್ಡರ್ ಅವರ ಬೌಲಿಂಗ್‍ನಲ್ಲಿ ಕೃಣಾಲ್ ಪಾಂಡ್ಯಗೆ ಕ್ಯಾಚ್ ನೀಡಿ ಪೆವಿಲಿಯನ್‍ನತ್ತ ಮುಖ ಮಾಡಿದರು.
ಮುಂಬೈ: ಕೋಲ್ಕತ್ತಾ ಗೆಲುವಿಗಾಗಿ ಬ್ಯಾಟಿಂಗ್‍ನಲ್ಲಿ ರಿಂಕು ಸಿಂಗ್ ಮತ್ತು ನಿತೇಶ್ ರಾಣಾ ಹೋರಾಟ ಕಡೆಗೂ ಯಶಸ್ವಿ ಕಂಡು ರಾಜಸ್ಥಾನ ವಿರುದ್ಧ 7 ವಿಕೆಟ್ಗಳ ಜಯ ದಾಖಲಿಸಿತು.
ರಾಜಸ್ಥಾನ ನೀಡಿದ 153 ರನ್‍ಗಳ ಸಣ್ಣ ಮೊತ್ತವನ್ನು ಬೆನ್ನಟ್ಟಲು ತಿಣುಕಾಡಿದ ಕೋಲ್ಕತ್ತಾ ತಂಡ ಕಡೆಗೆ ರಾಣಾ ಅಜೇಯ 48 ರನ್ (37 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ರಿಂಕು ಸಿಂಗ್ 42 ರನ್ (23 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿದ ನೆರವಿನಿಂದ ಸೋಲಿನ ಸುಳಿಯಿಂದ ತಪ್ಪಿಸಿಕೊಂಡಿತು. ಕೊನೆಯ ಹಂತದಲ್ಲಿ ರಾಜಸ್ಥಾನ ತಂಡದ ಬೌಲರ್‌ಗಳ ಮುಂದೆ ಮೇಲುಗೈ ಸಾಧಿಸಿದ ಕೋಲ್ಕತ್ತಾ 3 ವಿಕೆಟ್ ಕಳೆದುಕೊಂಡು 158 ರನ್ ಸಿಡಿಸಿ ಇನ್ನೂ 5 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಅಂತರದ ಗೆಲುವಿನ ಸಂಭ್ರಮ ಆಚರಿಸಿತು.
ಸಣ್ಣ ಮೊತ್ತವನ್ನು ಚೇಸ್ ಮಾಡುವ ಹುಮ್ಮಸ್ಸಿನಲ್ಲಿ ಕಣಕ್ಕಿಳಿದ ಕೋಲ್ಕತ್ತಾ ಬ್ಯಾಟ್ಸ್‌ಮ್ಯಾನ್‌ಗಳು ರಾಜಸ್ಥಾನ ಸ್ಥಾನದ ಬೌಲರ್‌ಗಳ ಮುಂದೆ ಕೇವಲ 32 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡರು. ನಂತರ ಒಂದಾದ ಶ್ರೇಯಸ್ ಅಯ್ಯರ್ ಮತ್ತು ನಿತೇಶ್ ರಾಣಾ ರಾಜಸ್ಥಾನ ಬೌಲರ್‌ಗಳಿಗೆ ತಿರುಗೇಟು ನೀಡಿದರು. 3ನೇ ವಿಕೆಟ್‍ಗೆ ಈ ಜೋಡಿ 60 ರನ್ (43 ಎಸೆತ) ಒಟ್ಟುಗೂಡಿಸಿ ಬೇರ್ಪಟ್ಟಿತು. ಅಯ್ಯರ್ ಉಪಯುಕ್ತ 34 ರನ್ (32 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಈ ಗೆಲುವಿನಲ್ಲಿ ರಿಂಕು, ರಾಣಾ ಜೋಡಿ 4ನೇ ವಿಕೆಟ್‍ಗೆ 66 ರನ್ (38 ಎಸೆತ) ಜೊತೆಯಾಟವಾಡಿದ್ದು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ತಂಡ ಈ ಬಾರಿ ಉತ್ತಮ ಆರಂಭ ಪಡೆಯುವಲ್ಲಿ ಎಡವಿತು. ದೇವದತ್ ಪಡಿಕ್ಕಲ್ 2 ರನ್‍ಗಳಿಗೆ ಗಂಟು ಮೂಟೆ ಕಟ್ಟಿದರು. ಬಟ್ಲರ್ ನಿಧಾನವಾಗಿ ಅಬ್ಬರಿಸುವ ಸೂಚನೆ ನೀಡಿದರೂ ಅವರ ಆಟ 22 ರನ್ (25 ಎಸೆತ, 3 ಬೌಂಡರಿ)ಗೆ ಅಂತ್ಯವಾಯಿತು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಏಕಾಂಗಿಯಾಗಿ ನಿಂತು ಹೋರಾಟ ನಡೆಸಿದ ಸಂಜು ಸ್ಯಾಮ್ಸನ್ 54 ರನ್ (49 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚಿ ಕೆಲ ಹೊತ್ತು ರಾಜಸ್ಥಾನದ ರನ್ ಏರಿಕೆಗೆ ಮುಂದಾದರು.
ನಂತರ ಕೆಲ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಅಜೇಯ 27 ರನ್ (13 ಎಸೆತ, 1 ಬೌಂಡರಿ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ 150ರ ಗಡಿದಾಟಿತು. ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಕೆಕೆಆರ್ ಬೌಲರ್‌ಗಳು ರಾಜಸ್ಥಾನ ತಂಡದ 5 ವಿಕೆಟ್ ಕಿತ್ತು 152 ರನ್‍ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಮುಂಬೈ: ಭಾನುವಾರ ಕೆಕೆಆರ್ ಮತ್ತು ಡೆಲ್ಲಿ ತಂಡದ ನಡುವೆ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಕೋಲ್ಕತ್ತಾ ತಂಡವನ್ನು ಕಟ್ಟಿಹಾಕಿದ ಡೆಲ್ಲಿ ತಂಡ 44 ರನ್‍ಗಳ ಅಂತರದ ಜಯ ಸಾಧಿಸಿತ್ತು. ಈ ಜಯವನ್ನು ಡೆಲ್ಲಿ ಟೀಂ ಡ್ರೇಸಿಂಗ್ ರೂಮ್‍ನಲ್ಲಿ ಸಂಭ್ರಮಿಸಿಕೊಂಡಿದೆ.
ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್‍ನ ತಂಡದ ಪರ ಆಡುತ್ತಿದ್ದ ಓಪನರ್ ಡೇವಿಡ್ ವಾರ್ನರ್ ಡ್ರೆಸಿಂಗ್ ರೂಮ್‍ನಲ್ಲಿ ಹೌ ಈಸ್ ದಿ ಜೋಶ್ ಎಂದು ತಂಡವನ್ನು ಹುರಿದುಂಬಿಸಿದರು.
ಈ ಬಗ್ಗೆ ಡೆಲ್ಲಿ ತಂಡದ ಅಧಿಕೃತ ಇನ್ಸ್‌ಸ್ಟಾಗ್ರಾಮ್ ಖಾತೆ ವೀಡಿಯೋ ತುಣುಕನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ವಾರ್ನರ್ ಹೌ ಈಸ್ ದಿ ಜೋಶ್ ಎಂದು ಕೇಳುತ್ತಾರೆ. ಅದಕ್ಕೆ ತಂಡದ ಉಳಿದ ಆಟಗಾರರು ಹೈ ಸರ್ ಎನ್ನುತ್ತಾರೆ. ಈ ಡೈಲಾಗ್ ಹಿಂದಿ ಸಿನಿಮಾ ಉರಿಯದ್ದಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಳಿ ತಂಡ ಡೆಲ್ಲಿಯನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಮನಬಂದಂತೆ ಬ್ಯಾಟ್ ಬೀಸಿದರು. ಕೋಲ್ಕತ್ತಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 93 ರನ್ (52 ಎಸೆತ)ಗಳ ಜೊತೆಯಾಟವಾಡಿದರು. ಪೃಥ್ವಿ ಶಾ 51 ರನ್ (29 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು. ಇದನ್ನೂ ಓದಿ:ಡೆಲ್ಲಿ ದರ್ಬಾರ್‌ಗೆ ಕೆಕೆಆರ್ ಢಮಾರ್ – ಮಿಂಚಿದ ವಾರ್ನರ್
ಆ ಬಳಿಕ ಪಂತ್ ಜೊತೆಗೂಡಿದ ವಾರ್ನರ್ ಮತ್ತಷ್ಟು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಅಂತಿಮವಾಗಿ ವಾರ್ನರ್ 61 ರನ್ (45 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ರಿಷಭ್ ಪಂತ್ 27 ರನ್ (14 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ 2ನೇ ವಿಕೆಟ್‍ಗೆ 55 ರನ್ (27 ಎಸೆತ) ಒಟ್ಟು ಸೇರಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ:ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ
ಮುಂಬೈ: ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಕೋಲ್ಕತ್ತಾ ತಂಡವನ್ನು ಕಟ್ಟಿಹಾಕಿದ ಡೆಲ್ಲಿ ತಂಡ 44 ರನ್‍ಗಳ ಅಂತರದ ಜಯ ಸಾಧಿಸಿದೆ.
ಡೆಲ್ಲಿ ನೀಡಿದ 216 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ಪರ ಶ್ರೇಯಸ್ ಅಯ್ಯರ್ 54 ರನ್ (33 ಎಸೆತ, 5 ಬೌಂಡರಿ, 2 ಸಿಕ್ಸ್), ನಿತೇಶ್ ರಾಣಾ 30 ರನ್ (20 ಎಸೆತ, 3 ಸಿಕ್ಸ್), ಆಂಡ್ರೆ ರಸೆಲ್ 24 ರನ್ (21 ಎಸೆತ, 3 ಬೌಂಡರಿ) ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲರಾದರು. ಇದನ್ನೂ ಓದಿ: ಮುಂಬೈ ವಿರುದ್ಧದ ಗೆಲುವಿನ ಬಳಿಕ ಆರ್ಸಿಬಿಗೆ ಶಾಕ್ – ಬಯೋ ಬಬಲ್ ತೊರೆದ ಹರ್ಷಲ್ ಪಟೇಲ್
ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಳಿ ತಂಡ ಡೆಲ್ಲಿಯನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಮನಬಂದಂತೆ ಬ್ಯಾಟ್ ಬೀಸಿದರು. ಕೋಲ್ಕತ್ತಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 93 ರನ್ (52 ಎಸೆತ)ಗಳ ಜೊತೆಯಾಟವಾಡಿದರು. ಪೃಥ್ವಿ ಶಾ 51 ರನ್ (29 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು.
ಆ ಬಳಿಕ ಪಂತ್ ಜೊತೆಗೂಡಿದ ವಾರ್ನರ್ ಮತ್ತಷ್ಟು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಅಂತಿಮವಾಗಿ ವಾರ್ನರ್ 61 ರನ್ (45 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ರಿಷಭ್ ಪಂತ್ 27 ರನ್ (14 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ 2ನೇ ವಿಕೆಟ್‍ಗೆ 55 ರನ್ (27 ಎಸೆತ) ಒಟ್ಟು ಸೇರಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಸ್ಲಾಗ್ ಓವರ್‌ಗಳಲ್ಲಿ ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಬೌಂಡರಿ, ಸಿಕ್ಸರ್‌ಗಳ ಅಸಲಿ ಆಟ ಶುರು ಹಚ್ಚಿಕೊಂಡು ತಂಡದ ಮೊತ್ತವನ್ನು 210ರ ಗಡಿದಾಟಿಸಿದರು. ಅಕ್ಷರ್ ಪಟೇಲ್ ಅಜೇಯ 22 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಠಾಕೂರ್ 29 ರನ್ (11 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ಮಿಂಚಿದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 215 ರನ್‍ಗಳ ಬೃಹತ್ ಮೊತ್ತ ಪೇರಿಸಿತು.
ರನ್ ಏರಿದ್ದು ಹೇಗೆ?
24 ಎಸೆತ 50 ರನ್
59 ಎಸೆತ 100 ರನ್
82 ಎಸೆತ 150 ರನ್
118 ಎಸೆತ 200 ರನ್
220 ಎಸೆತ 215 ರನ್