Tag: ಕೋಲ್ಕತ್ತಾ ಟ್ರೈನಿ ವೈದ್ಯೆ ಕೇಸ್‌

  • Kolkata Horror | ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳಿ – ವೈದ್ಯರಿಗೆ ಸುಪ್ರೀಂ ಸೂಚನೆ!

    ಕೋಲ್ಕತ್ತಾ: ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ (Kolkata Doctor Case) ಸಂಬಂಧ ಸುಪ್ರೀಂ ಕೋರ್ಟ್ (Supreme Court) ವಿಚಾರಣೆ ಮುಂದುವರಿಸಿದೆ. ಘಟನೆ ಖಂಡಿಸಿ ಕಳೆದ ಕೆಲ ದಿನಗಳಿಂದ ನಡೆಸ್ತಿರುವ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳುವಂತೆ ವೈದ್ಯರಿಗೆ ಸೂಚನೆ ನೀಡಿದೆ.

    ಬಿಜೆಪಿ, ಟಿಎಂಸಿಗೆ ಬುದ್ಧಿವಾದ
    ವಿಚಾರಣೆ ವೇಳೆ ಘಟನೆಗೆ ಸಂಬಂಧಿಸಿದಂತೆ ಟಿಎಂಸಿ (TMC) ಮತ್ತು ಬಿಜೆಪಿಗೆ (BJP( ಬುದ್ಧಿವಾದ ಹೇಳಿದ ನ್ಯಾಯಾಲಯ ಇತ್ತ ಸಿಬಿಐ ಮತ್ತು ಪಶ್ಚಿಮ ಬಂಗಾಳ ಸರ್ಕಾರ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವುದನ್ನು ಟೀಕಿಸಿದೆ. ʻಮಮತಾ ಬ್ಯಾನರ್ಜಿ ಕಡೆಗೆ ಕೈತೋರುವವರ ಬೆರಳು ಕತ್ತರಿಸಲಾಗುವುದುʼ ಎಂಬ ಬಂಗಾಳ ಸಚಿವರೊಬ್ಬರ ಹೇಳಿಕೆಯನ್ನು ಸಿಬಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (SG) ತುಷಾರ್ ಮೆಹ್ತಾ ಪ್ರಸ್ತಾಪಿಸಿದರು.

    ಆಗ ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಗುಂಡು ಹಾರಿಸಲಾಗುವುದು ಅಂತ ಹೇಳಿರುವುದಾಗಿ ಕೋರ್ಟ್‌ ಗಮನಕ್ಕೆ ತಂದರು. ಆ ಸಂದರ್ಭದಲ್ಲಿ ನ್ಯಾಯಾಲಯ ಪರಿಸ್ಥಿತಿಯನ್ನು ರಾಜಕೀಯಗೊಳಿಸಬೇಡಿ ಕಾನೂನು ತನ್ನ ಹಾದಿಯನ್ನು ಕಂಡುಕೊಳ್ಳಲಿದೆ ಎಂಬುದಾಗಿ ತಿಳಿಸಿತು.

    ಕರ್ತವ್ಯ ಮಾಡುತ್ತಲೇ ಮುಷ್ಕರ ನಡೆಸ್ತಿರೋದಾಗಿ ವೈದ್ಯರ ಸಂಘ ತಿಳಿಸಿದೆ. ಇದೇ ವೇಳೆ ಯುವವೈದ್ಯೆಯ ಅತ್ಯಾಚಾರ ಪ್ರಕರಣದ ತನಿಖಾ ಪ್ರಗತಿಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಿಬಿಐ (CBI) ಸಲ್ಲಿಸಿದೆ. ಅತ್ಯಾಚಾರ & ಹತ್ಯೆ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಅಪ್ಪ-ಅಪ್ಪನಿಗೂ ಸರಿಯಾದ ಮಾಹಿತಿ ನೀಡದೇ ದಾರಿ ತಪ್ಪಿಸುವ ಪ್ರಯತ್ನವೂ ಆಗಿತ್ತು. ಶವ ದಹನದ ಬಳಿಕವೇ ಎಫ್‌ಐಆರ್ (FIR) ನಮೂದಿಸಿದ್ರು. ಘಟನಾ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನ ಧ್ವಂಸ ಮಾಡುವ ಪ್ರಯತ್ನಗಳು ನಡೆದಿವೆ ಎಂದು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ  ಓದಿ: ಟ್ರೈನಿ ವೈದ್ಯೆ ಮೇಲೆ ನಡೆದಿರೋದು ಗ್ಯಾಂಗ್‌ ರೇಪ್‌ ಅಲ್ಲ – ಪ್ರಾಥಮಿಕ ತನಿಖೆ ಬಳಿಕ CBI ಮೂಲಗಳಿಂದ ಮಾಹಿತಿ

    ಘಟನೆ ನಡೆದ 5ನೇ ದಿನ ತಮ್ಮ ಕೈಗೆ ತನಿಖಾ ವರದಿಯನ್ನು ಪೊಲೀಸರು ಸಲ್ಲಿಸಿದ್ರು. ಅಷ್ಟರೊಳಗೆ ಸಾಕಷ್ಟು ವರದಿಗಳನ್ನು ಬದಲಾಯಿಸಿದ್ರು ಎಂದು ಸಾಲಿಸಿಟರ್ ಜನರೆಲ್ ಆರೋಪಿಸಿದರು. ಆದ್ರೆ ಪ್ರತಿಯೊಂದರ ವಿಡಿಯೋ ಚಿತ್ರೀಕರಣ ನಡೆದಿದೆ ಎಂದು ಬಂಗಾಳ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ಸ್ಪಷ್ಟಪಡಿಸಿದ್ರು. ವೈದ್ಯರು ಒತ್ತಡ ತಂದಿದ್ದಕ್ಕೆ ವೀಡಿಯೋ ಚಿತ್ರೀಕರಣ ನಡೆದಿದೆ ಎಂದು ತುಷಾರ್ ಮೆಹ್ತಾ ಟಾಂಗ್ ಕೊಟ್ರು. ಈ ಮಧ್ಯೆಯೇ, ಯುವವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ. ಒಬ್ಬನೇ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಇದನ್ನೂ  ಓದಿ: ಧರ್ಮಗುರುಗಳ ಮೂಲಕ ಮುಸ್ಲಿಮರ ವಿವಾಹ ನೋಂದಣಿಗೆ ತಡೆ – ಹೊಸ ಮಸೂದೆಗೆ ಅಸ್ಸಾಂ ಕ್ಯಾಬಿನೆಟ್ ಅನುಮೋದನೆ

    ಕೋಲ್ಕತ್ತಾ ಪ್ರಕರಣ ಏನು?
    ಇದೇ ತಿಂಗಳ ಆ.9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸ್ ಸ್ವಯಂ ಸೇವಕನಾಗಿದ್ದ ಈತ 4 ಬಾರಿ ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು. ಸದ್ಯ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿದೆ. ಈ ಬೆನ್ನಲ್ಲೇ ಸ್ವಯಂಪ್ರೇರಿತವಾಗಿ ದೂರು ದಾಖಳಿಸಿಕೊಂಡ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಇದನ್ನೂ  ಓದಿ: J&K Assembly Polls | ಎನ್‌ಸಿ-ಕಾಂಗ್ರೆಸ್ ಮೈತ್ರಿ ಬಹುತೇಕ ಖಚಿತ; ಮುಂದುವರಿದ ಸೀಟು ಹಂಚಿಕೆ ಮಾತುಕತೆ

  • ಟ್ರೈನಿ ವೈದ್ಯೆ ಮೇಲೆ ನಡೆದಿರೋದು ಗ್ಯಾಂಗ್‌ ರೇಪ್‌ ಅಲ್ಲ – ಪ್ರಾಥಮಿಕ ತನಿಖೆ ಬಳಿಕ CBI ಮೂಲಗಳಿಂದ ಮಾಹಿತಿ

    ಟ್ರೈನಿ ವೈದ್ಯೆ ಮೇಲೆ ನಡೆದಿರೋದು ಗ್ಯಾಂಗ್‌ ರೇಪ್‌ ಅಲ್ಲ – ಪ್ರಾಥಮಿಕ ತನಿಖೆ ಬಳಿಕ CBI ಮೂಲಗಳಿಂದ ಮಾಹಿತಿ

    ನವದೆಹಲಿ: ಕೋಲ್ಕತ್ತಾದ ಆರ್‌.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ (Kolkata Doctor Case) ಮೇಲೆ‌ ನಡೆದ ಅತ್ಯಾಚಾರ ಸಾಮೂಹಿಕ ಅತ್ಯಚಾರವಲ್ಲ. ಇದು ಓರ್ವ ವ್ಯಕ್ತಿಯಿಂದ ನಡೆದಿದೆ ಎಂದು ಸಿಬಿಐ (CBI) ಮೂಲಗಳು ಹೇಳಿವೆ.

    5 ದಿನಗಳ ಪ್ರಾಥಮಿಕ ತನಿಖೆಯಲ್ಲಿ ಈ ಮಾಹಿತಿ ಲಭ್ಯವಾಗಿದ್ದು ಆಸ್ಪತ್ರೆಯಲ್ಲಿದ್ದ ನಾಗರಿಕ ಸ್ವಯಂ ಸೇವಕ ಸಂಜೋಯ್ ರಾಯ್ ಎಂಬ ವ್ಯಕ್ತಿ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: Valmiki Scam | ಜೈಲಿಗೆ ಹೋಗೋ ಭಯಕ್ಕೆ ಚಂದ್ರಶೇಖರ್‌ ಆತ್ಮಹತ್ಯೆ

    ನಾಗರಿಕ ಸ್ವಯಂ ಸೇವಕ ಸಂಜೋಯ್ ರಾಯ್ ಎಂಬಾತ ವೈದ್ಯರ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದಾನೆ ಎಂದು ವಿಧಿವಿಜ್ಞಾನ ವರದಿಯೂ ಸೂಚಿಸಿದೆ. ಒಬ್ಬ ವ್ಯಕ್ತಿಯ ಕೈವಾಡವನ್ನು ಡಿಎನ್‌ಎ ವರದಿಯೂ (DNA Report) ದೃಢಪಡಿಸಿದೆ. ವೈದ್ಯೆಯನ್ನು ಹತ್ಯೆಗೈದ ಕಟ್ಟಡಕ್ಕೆ ರಾಯ್ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನ ಸಿಬಿಐ ಪರಿಶೀಲಿಸಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ನರ್ಸರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ಭುಗಿಲೆದ್ದ ಹಿಂಸಾಚಾರ; 72 ಮಂದಿ ಅರೆಸ್ಟ್‌!

    ಕೌಟುಂಬಿಕ ದೌರ್ಜನ್ಯದ ಇತಿಹಾಸ ಹೊಂದಿರುವ ಮತ್ತು ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಪ್ರವೇಶವನ್ನು ಹೊಂದಿದ್ದ ರಾಯ್ ಅವರ ಬ್ಲೂಟೂತ್ ಹೆಡ್‌ಸೆಟ್ ಅಪರಾಧದ ಸ್ಥಳದಲ್ಲಿ ಪತ್ತೆಯಾದ ನಂತರ ಅವರನ್ನು ಬಂಧಿಸಲಾಯಿತು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಕುರಿತು ಸಿಬಿಐ ತನಿಖೆಯನ್ನು ಇನ್ನೂ ಮುಕ್ತಾಯಗೊಳಿಸಿಲ್ಲ. ಅಂತಿಮ ಅಭಿಪ್ರಾಯ ಪಡೆಯಲು ಸ್ವತಂತ್ರ ತಜ್ಞರಿಗೆ ಫೊರೆನ್ಸಿಕ್ ವರದಿಯನ್ನು ಕಳುಹಿಸುವ ಸಾಧ್ಯತೆಯಿದೆ.

    ಈ ಹಿಂದೆ ಸಂತ್ರಸ್ಥೆಯ ಯೋನಿ ಸ್ವ್ಯಾಬ್ ಪರೀಕ್ಷೆಯಲ್ಲಿ 151 ಗ್ರಾಂ ದ್ರವ ಕಂಡು ಬಂದಿದ ಹಿನ್ನಲೆ ಸಾಮೂಹಿಕ ಅತ್ಯಾಚಾರ ನಡೆದಿರಬಹುದು ಎಂದು ವೈದ್ಯರು ಹೇಳಿದ್ದರು. ಸಂತ್ರಸ್ತೆಯ ಪೋಷಕರು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಇದೇ ಅಂಶವನ್ನು ಮುಖ್ಯವಾಗಿ ವಾದವನ್ನು ಮಂಡಿಸಿದ್ದರು. ಪ್ರಶಿಕ್ಷಣಾರ್ಥಿ ವೈದ್ಯರ ಮೇಲೆ ಉಂಟಾಗುವ ಗಾಯಗಳ ಸ್ವರೂಪವು ಒಬ್ಬ ವ್ಯಕ್ತಿಯ ಕೈಕೆಲಸವಾಗಿರಲು ಸಾಧ್ಯವಿಲ್ಲ ಎಂದು ಡಾ. ಸುವರ್ಣ ಗೋಸ್ವಾಮಿ ಅಭಿಪ್ರಾಯಪಟ್ಟಿದ್ದರು. ಇದನ್ನೂ ಓದಿ: Bharat Bandh| ಮಕ್ಕಳಿದ್ದ ಶಾಲಾ ಬಸ್ಸಿಗೆ ಬೆಂಕಿ ಹಚ್ಚಲು ಮುಂದಾದ ಪ್ರತಿಭಟನಾಕಾರರು

  • Kolkata Horror | ʻಹತ್ಯಾʼಚಾರಿಗೆ ಸುಳ್ಳುಪತ್ತೆ ಪರೀಕ್ಷೆ – ಆಸ್ಪತ್ರೆಗಳಲ್ಲಿ ಶೇ.25 ಭದ್ರತೆ ಹೆಚ್ಚಳಕ್ಕೆ ಸೂಚನೆ!

    – ದೀದಿ ನಿಂದಕರ ಬೆರಳು ಕತ್ತರಿಸಿ ಎಂದು ನಾಲಿಗೆ ಹರಿಬಿಟ್ಟ ಟಿಎಂಸಿ ಸಚಿವ

    ಕೋಲ್ಕತ್ತಾ: ದೇಶದಲ್ಲಿ ಭಾರೀ ಸಂಚಲನಕ್ಕೆ ಕಾರಣವಾದ ಬಂಗಾಳದ ಯುವವೈದ್ಯೆ ಹತ್ಯಾಚಾರ ಪ್ರಕರಣ ದಿನೇ ದಿನೇ ಹೊಸ ಆಯಾಮ ಪಡೆದುಕೊಳ್ತಿದೆ. ತಮ್ಮ ಪುತ್ರಿಯ ಡೈರಿಯಲ್ಲಿ ಒಂದು ಪುಟ ಕಾಣೆಯಾಗಿದೆ ಎಂದು ಮೃತರ ತಂದೆ ಆರೋಪ ಮಾಡಿದ್ದಾರೆ.

    ಮೃತರ ಶರೀರದ ಮೇಲೆ 14 ಗಾಯಗಳು ಕಂಡುಬಂದಿವೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ ಅಂತಾ ಹೇಳಲಾಗಿದೆ. ಆರೋಪಿಯನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಹೈಕೋರ್ಟ್ ಅನುಮತಿ ನೀಡಿದೆ. ಮೆಡಿಕಲ್ ಕಾಲೇಜ್ ಮಾಜಿ ಪ್ರಾಂಶುಪಾಲನನ್ನು ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ. ಇನ್ನೂ ಬಂಗಾಳ ಹೆಣ್ಮಕ್ಕಳಿಗೆ ಸುರಕ್ಷಿತವಲ್ಲ.. ಈ ವಿಚಾರದಲ್ಲಿ ಮಮತಾ ಸರ್ಕಾರ ವಿಫಲವಾಗಿದೆ ಎಂದು ರಾಜ್ಯಪಾಲ ಆನಂದ್ ಬೋಸ್ ಆಕ್ರೋಶ ಹೊರಹಾಕಿದ್ದಾರೆ.

    ಮಮತಾ ಬ್ಯಾನರ್ಜಿ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಆದ್ರೆ, ಅಭಿಷೇಕ್ ಬ್ಯಾನರ್ಜಿ ಸದ್ದು ಇಲ್ಲದೇ ಇರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹೊತ್ತಲ್ಲೇ ದೀದಿ ನಿಂದಕರ ಬೆರಳು ಕತ್ತರಿಸಿ ಎಂದು ಟಿಎಂಸಿ ಸಚಿವ ಉದ್ಯಾನ್ ಗುಹಾ ಪ್ರಚೋದನೆ ನೀಡಿದ್ದಾರೆ. ಇನ್ನೂ ಸೋಷಿಯಲ್ ಮೀಡಿಯಾ ಮೂಲಕ ಸಿಎಂಗೆ ಬೆದರಿಕೆ ಹಾಕಿದ್ದ ಬಿಕಾಂ ವಿದ್ಯಾರ್ಥಿಯೊಬ್ಬನನ್ನು ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನು ಸಿಬಿಐ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದ ಸುವೆಂದು ಶೇಖರ್‌ಗೆ ಸಮನ್ಸ್ ಜಾರಿಯಾಗಿದೆ.

    ಹೀಗಾಗಿ ಬಂಧನದಿಂದ ರಕ್ಷಣೆ ಕೋರಿ ಸುವೆಂದು ಶೇಖರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಂದ ಹಾಗೆ, ಕೋಲ್ಕತ್ತಾ ಪ್ರಕರಣವನ್ನು ಸುಮೋಟೋ ಆಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮಂಗಳವಾರ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.25 ಭದ್ರತೆ ಹೆಚ್ಚಳ:
    ಟ್ರೈನಿ ವೈದ್ಯೆ ಖಂಡಿಸಿ ದೇಶವ್ಯಾಪಿ ಪ್ರತಿಭಟನೆ ಭುಗಿಲೆದ್ದಿರುವ ಹೊತ್ತಿನಲ್ಲೇ ಕೇಂದ್ರ ಸಚಿವಾಲಯವು ಎಲ್ಲಾ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಶೇ.25 ರಷ್ಟು ಹೆಚ್ಷಿಸಲು ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಟ್ಯಾಂಡರ್ಡ್ ಸೆಕ್ಯುರಿಟಿ ಪ್ರೋಟೋಕಾಲ್‌ ಹೊರತಾಗಿ, ಸರ್ಕಾರಿ ಆಸ್ಪತ್ರೆಗಳು ತಮ್ಮ ಭದ್ರತಾ ಮೌಲ್ಯಮಾಪನವನ್ನು ನಡೆಸಿದ ನಂತರ ವೈಯಕ್ತಿಕ ಬೇಡಿಕೆಗಳ ಆಧಾರದ ಮೇಲೆ ಮಾರ್ಷಲ್‌ಗಳ ನಿಯೋಜನೆಗೆ ಅನುಮೋದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನೂ ರಾಷ್ಟ್ರವ್ಯಾಪಿ ಪ್ರತಿಭಟನೆ ಬೆನ್ನಲ್ಲೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್‌ ಮಂಗಳವಾರ (ಆ.20) ಪ್ರಕರಣದ ವಿಚಾರಣೆ ನಡೆಸಲಿದೆ.

  • ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ನವದೆಹಲಿ: ಕೋಲ್ಕತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ (RG Kar Medical College) ನಡೆದಿರುವ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಈ ಹೊತ್ತಿನಲ್ಲೇ ಸುಪ್ರೀಂ ಕೋರ್ಟ್‌ (Supreme Court) ಮಧ್ಯ ಪ್ರವೇಶ ಮಾಡಿದ್ದು, ಸ್ವಪ್ರೇರಿತವಾಗಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ.

    ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ತ್ರಿಸದಸ್ಯ ಪೀಠವು ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈಗಾಗಲೇ ಈ ಪ್ರಕರಣವನ್ನು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ (Kolkata High Court) ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಸಿಬಿಐ ಸಹ ಪ್ರಕರಣದ ಬೆನ್ನುಹತ್ತಿದೆ.

    ಕೋಲ್ಕತ್ತಾ ಪ್ರಕರಣ ಏನು?
    ಕಳೆದ ಆ.9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಹಿಂದೆ ಪೊಲೀಸ್ ಸ್ವಯಂಸೇವಕನಾಗಿದ್ದ ಈತ 4 ಬಾರಿ ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿದೆ.

    ಪೊಲೀಸರ ವಿರುದ್ಧ ಬಿಜೆಪಿ ಆರೋಪ:
    ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸರು ತಪ್ಪಿತಸ್ಥರನ್ನು ರಕ್ಷಿಸುವ ದಂಧೆಯಲ್ಲಿ ತೊಡಗಿದ್ದಾರೆ, ಇತರ ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಅಲ್ಲದೇ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಮಾಹಿತಿಯನ್ನು ಕೇಂದ್ರೀಯ ತನಿಖಾ ದಳ ಪ್ರಧಾನ ಕಚೇರಿ ಖಾತೆಗೆ ಟ್ಯಾಗ್‌ ಮಾಡಿದ್ದಾರೆ.

    ನಿರ್ಭಯಾ ತಾಯಿ ಆಕ್ರೋಶ:
    ಪಶ್ವಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಡೆಸುವ ಮೂಲಕ ಜನರ ಗಮನ ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದ್ದಾರೆ ಎಂದು ನಿರ್ಭಯಾ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ತಮ್ಮ ಬೆಂಬಲಿಗರೊಂದಿಗೆ ಟ್ರೈನಿ ವೈದ್ಯೆಯ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ತಮ್ಮ ಅಧಿಕಾರ ಬಳಸಿ ಅಪರಾಧಿಯ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮಮತಾ ಬ್ಯಾನರ್ಜಿ ಪ್ರತಿಭಟನೆಯ ಹೆಸರಿನಲ್ಲಿ ಜನರ ಗಮನ ಬೇರೆಡೆ ತಿರುಗಿಸಲು ಯತ್ನಿಸುತ್ತಿದ್ದಾರೆ ಎಂದು ನಿರ್ಭಯಾ ತಾಯಿ ಟೀಕಿಸಿದ್ದಾರೆ.