Tag: ಕೋಲ್ಕತಾ ನೈಟ್ ರೈಡರ್ಸ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್

    ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (IPL) ಅದ್ಭುತ ಪ್ರದರ್ಶನ ತೋರುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ವೆಂಕಟೇಶ್ ಅಯ್ಯರ್ (Venkatesh Iyer), ಇದೀಗ ಜೀವನದ ಹೊಸ ಇನಿಂಗ್ಸ್ ಆರಂಭಿಸಿದ್ದು, ಬಹುಕಾಲದ ಗೆಳತಿ ಶೃತಿ ರಘುನಾಥನ್ (Shruti Raghunathan) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ವೆಂಕಟೇಶ್ ಅಯ್ಯರ್ ಹಾಗೂ ಶೃತಿಯವರ ಎಂಗೇಜ್‍ಮೆಂಟ್ 2023ರ ನ.21ರಂದು ನೆರವೇರಿತ್ತು. ಇದೀಗ ಅವರ ಮದುವೆ ನೆರವೇರಿದ್ದು, ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ವೆಂಕಟೇಶ್ ಅಯ್ಯರ್ 15 ಪಂದ್ಯಗಳನ್ನಾಡಿ 4 ಅರ್ಧಶತಕ ಸಹಿತ 370 ರನ್ ಸಿಡಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

    ಟೀಂ ಇಂಡಿಯಾ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 60 ರನ್‌ಗಳ ಭರ್ಜರಿ ಜಯ

  • ಪ್ಯಾಟ್ ಕಮ್ಮಿನ್ಸ್, ಚಕ್ರವರ್ತಿ ಬೌಲಿಂಗ್ ದಾಳಿಗೆ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ರಾಜಸ್ಥಾನ್

    ಪ್ಯಾಟ್ ಕಮ್ಮಿನ್ಸ್, ಚಕ್ರವರ್ತಿ ಬೌಲಿಂಗ್ ದಾಳಿಗೆ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ರಾಜಸ್ಥಾನ್

    – ಪ್ಲೇ ಆಫ್‍ಗಾಗಿ ನೆಟ್ ರನ್‍ರೇಟ್ ಕಾಯಬೇಕಾದ ಪರಿಸ್ಥಿತಿಯಲ್ಲಿ ಕೋಲ್ಕತ್ತಾ

    ದುಬೈ: ಇಂದು ನಡೆದ ಬೊಂಬಾಟ್ ಭಾನುವಾರದ ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 60 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿದ್ದು, ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಸದ್ಯ ಪ್ಲೇ ಆಫ್‍ಗಾಗಿ ಕೋಲ್ಕತ್ತಾ ನೆಟ್ ರನ್‍ರೇಟಿಗಾಗಿ ಕಾಯಬೇಕಿದೆ.

    ಇಂದು ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 54ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಾಯಕ ಇಯೊನ್ ಮೋರ್ಗಾನ್ ಅವರು ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ ಬರೋಬ್ಬರಿ 191 ರನ್ ಭಾರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಪ್ಯಾಟ್ ಕಮ್ಮಿನ್ಸ್ ಮತ್ತು ವರುಣ್ ಚಕ್ರವರ್ತಿ ಅವರ ಬೌಲಿಂಗ್ ದಾಳಿಗೆ ನಲುಗಿ ಸೋಲನ್ನು ಒಪ್ಪಿಕೊಂಡಿತು.

    ಕಮ್ಮಿನ್ಸ್, ಚಕ್ರವರ್ತಿ ಬೌಲಿಂಗ್ ಆಟ್ಯಾಕ್
    ಇಂದು ಕೋಲ್ಕತ್ತಾ ತಂಡ ಬ್ಯಾಟಿಂಗ್ ರೀತಿಯಲ್ಲೇ ಬೌಲಿಂಗ್‍ನಲ್ಲೂ ಕೂಡ ಮೋಡಿ ಮಾಡಿತು. ಆರಂಭದಿಂದಲೇ ದಾಳಿ ಮಾಡಿದ ವೇಗಿ ಪ್ಯಾಟ್ ಕಮ್ಮಿನ್ಸ್ ನಾಲ್ಕು ಓವರ್ ಬೌಲ್ ಮಾಡಿ ನಾಲ್ಕು ವಿಕೆಟ್ ಪಡೆದು, 34 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸ್ಪಿನ್ನರ್ ವರುಣ್ ಚಕ್ರವರ್ತಿ 4 ಓವರ್ ಬೌಲ್ ಮಾಡಿ 20 ರನ್ ನೀಡಿ ಎರಡು ವಿಕೆಟ್ ಕಿತ್ತರು. ಅಂತಯೇ ಶಿವಂ ಮಾವಿ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.

    ಕೋಲ್ಕತಾ ನೈಟ್ ರೈಡರ್ಸ್ ನೀಡದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಬಂದ ರಾಜಸ್ಥಾನ್ ರಾಯಲ್ಸ್ ಗೆ ಕೋಲ್ಕತ್ತಾ ವೇಗಿ ಪ್ಯಾಟ್ ಕಮ್ಮಿನ್ಸ್ ಆರಂಭಿಕ ಆಘಾತ ನೀಡಿದರು. ಆರು ರನ್ ಗಳಿಸಿದ್ದ ರಾಬಿನ್ ಉತ್ತಪ್ಪ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಬೆನ್ ಸ್ಟೋಕ್ಸ್ ಮತ್ತು ಸ್ಟೀವನ್ ಸ್ಮಿತ್ ಜೊತೆಯಾಗಿ ಉತ್ತಮ ಇನ್ನಿಂಗ್ಸ್ ಕಟ್ಟುವ ತವಕದಲ್ಲಿದ್ದರು. ಆದರೆ ಮತ್ತೆ ದಾಳಿಗೆ ಬಂದ ಪ್ಯಾಟ್ ಕಮ್ಮಿನ್ಸ್ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡಿದರು. 18 ರನ್‍ಗಳಿಸಿದ್ದ ಸ್ಟೋಕ್ಸ್ ದಿನೇಶ್ ಕಾರ್ತಿಕ್ ಹಿಡಿದ ಉತ್ತಮ ಕ್ಯಾಚಿಗೆ ಬಲಿಯಾದರು.

    ಆ ನಂತರ ನಾಯಕ ಸ್ಟೀವನ್ ಸ್ಮಿತ್ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಬೌಲ್ಡ್ ಆದರು. ನಂತರದ ಓವರಿನಲ್ಲಿ ಸಂಜು ಸ್ಯಾಮ್ಸನ್ ಅವರು ಶಿವಂ ಮಾವಿಗೆ ಔಟ್ ಆದರು. ಈ ಮೂಲಕ ಅರ್ಧ ಪವರ್ ಪ್ಲೇಯಲ್ಲೇ ರಾಜಸ್ಥಾನ್ ತನ್ನ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ ಬಂದ ರಿಯಾನ್ ಪರಾಗ್ ಏಳು ಬಾಲ್ ಆಡಿ ಸೊನ್ನೆ ಸುತ್ತಿ ಹೊರನಡೆದರು. ಪರಿಣಾಮ ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ ಐದು ವಿಕೆಟ್ ಕಳೆದುಕೊಂಡು 41 ರನ್ ಗಳಸಿತು.

    ನಂತರ ಬಟ್ಲರ್ ಮತ್ತು ತಿವಾಟಿಯಾ ಉತ್ತಮವಾಗಿ ಆಡಿದ್ದರು. ಆದರೆ 10ನೇ ಓವರ್ ನಾಲ್ಕನೇ ಬಾಲಿನಲ್ಲಿ 22 ಬಾಲಿಗೆ 35 ರನ್‍ಗಳಿಸಿದ್ದ ಜೋಸ್ ಬಟ್ಲರ್ ಅವರು ಔಟ್ ಆದರು. ನಂತರ ರಾಹುಲ್ ತಿವಾಟಿಯಾ ಅವರು ಕೂಡ ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ಕ್ಯಾಚ್ ಕೊಟ್ಟರು. ನಂತರ ಬಂದ ಜೋಫ್ರಾ ಆರ್ಚರ್ ಅವರು ಕೂಡ ಕಮಲೇಶ್ ನಾಗರಕೋಟಿ ಅವರ ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಕಾರ್ತಿಕ್ ತ್ಯಾಗಿ ಅವರು ಕ್ಯಾಚ್ ನೀಡಿದರು.

  • 5 ವಿಕೆಟ್ 20 ರನ್, ಚಕ್ರವರ್ತಿ ಮಿಸ್ಟ್ರಿ ಸ್ಪಿನ್‍ಗೆ ಡೆಲ್ಲಿ ತತ್ತರ – ಕೋಲ್ಕತ್ತಾಗೆ 59 ರನ್‍ಗಳ ಜಯ

    5 ವಿಕೆಟ್ 20 ರನ್, ಚಕ್ರವರ್ತಿ ಮಿಸ್ಟ್ರಿ ಸ್ಪಿನ್‍ಗೆ ಡೆಲ್ಲಿ ತತ್ತರ – ಕೋಲ್ಕತ್ತಾಗೆ 59 ರನ್‍ಗಳ ಜಯ

    – ಬೌಲಿಂಗ್‍ನಲ್ಲಿ ಅಬ್ಬರಿಸಿದ ದುಬಾರಿ ಆಟಗಾರ ಪ್ಯಾಟ್ ಕಮ್ಮಿನ್ಸ್

    ಅಬುಧಾಬಿ: ಇಂದು ನಡೆದ ಸೂಪರ್ ಶನಿವಾರದ ಮೊದಲನೇ ಮ್ಯಾಚಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 59 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.

    ಇಂದು ನಡೆದ ಐಪಿಎಲ್-2020ಯ 42 ಮ್ಯಾಚಿನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೊದಲು ಎಡವಿದರು, ಮಧ್ಯದಲ್ಲಿ ನರೈನ್ ಮತ್ತು ರಾಣಾ ಅವರ ಉತ್ತಮ ಜೊತೆಯಾಟದಿಂದ ನಿಗದಿತ 20 ಓವರಿನಲ್ಲಿ 194 ರನ್ ಸಿಡಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ನಿಗದಿತ 20 ಓವರಿನಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಸೇರಿಸಿ ಸೋಲನ್ನು ಒಪ್ಪಿಕೊಂಡಿತು.

    ಚಕ್ರವರ್ತಿ ಸೂಪರ್ ಬೌಲಿಂಗ್
    ಇಂದಿನ ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 20 ರನ್ ನೀಡಿ ಬರೋಬ್ಬರಿ ಐದು ವಿಕೆಟ್ ಪಡೆದರು. ಈ ಮೂಲಕ ಐಪಿಎಲ್-2020ಯಲ್ಲಿ ಐದು ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ಖ್ಯಾತಿ ಪಡೆದರು. ಇವರಿಗೆ ಉತ್ತಮ ಸಾಥ್ ನೀಡಿದ ದುಬಾರಿ ಆಟಗಾರ ಪ್ಯಾಟ್ ಕಮ್ಮಿನ್ಸ್ ನಾಲ್ಕು ಓವರ್ ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದು 17 ರನ್ ನೀಡಿ ಮಿಂಚಿದರು.

    195 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋಲ್ಕತಾ ನೈಟ್ ರೈಡರ್ಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಆರಂಭಿಕ ಆಘಾತ ನೀಡಿದರು. ಇನ್ನಿಂಗ್ಸ್ ಮೊದಲ ಬಾಲಿನಲ್ಲಿಯೇ ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡಿದರು. ಈ ಮೂಲಕ ರಹಾನೆ ಮತ್ತೆ ನಿರಾಸೆ ಮೂಡಿಸಿ ಶೂನ್ಯ ಸುತ್ತಿ ಹೊರನೆಡದರು. ಬಳಿಕ ಶಿಖರ್ ಧವನ್ ಅವರನ್ನು 2ನೇ ಓವರ್ ಮೂರನೇ ಬಾಲಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರೇ ಬೌಲ್ಡ್ ಮಾಡಿದರು.

    ಆ ನಂತರ ಒಂದಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ತಾಳ್ಮೆಯ ಆಟವಾಡಿ ತಂಡಕ್ಕಾಗಿ ಮೊತ್ತವನ್ನು ಪೇರಿಸುತ್ತಾ ಬಂದರು. ಹೀಗಾಗಿ ಪವರ್ ಪ್ಲೇ ಅಂತ್ಯದ ವೇಳೆಗೆ ಡೆಲ್ಲಿ ಎರಡು ವಿಕೆಟ್ ಕಳೆದುಕೊಂಡು ಕೇವಲ 36 ರನ್ ಪೇರಿಸಿತು. ನಂತರ 11ನೇ ಓವರ್ ಎರಡನೇ ಬಾಲಿನಲ್ಲಿ 33 ಬಾಲಿಗೆ 27 ರನ್ ಸಿಡಿಸಿ ಆಡುತ್ತಿದ್ದ ರಿಷಭ್ ಪಂತ್ ಔಟ್ ಆದರು. ನಂತರ ಬಂದ ಶಿಮ್ರಾನ್ ಹೆಟ್ಮಿಯರ್ ಅವರು ಕೂಡ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಗೆರೆಯ ಬಳಿ ಕ್ಯಾಚ್ ಕೊಟ್ಟರು.

    ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದ ನಾಯಕ ಶ್ರೇಯಸ್ ಐಯ್ಯರ್ 13ನೇ ಓವರ್ ಮೂರನೇ ಬಾಲಿನಲ್ಲಿ 38 ಬಾಲಿಗೆ 47 ರನ್ ಸಿಡಿಸಿ ಔಟ್ ಆದರು. ಈ ಮೂಲಕ 14ನೇ ಓವರ್ ಮುಕ್ತಾಯಕ್ಕೆ ಡೆಲ್ಲಿ ತಂಡ ಐದು ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತು. ನಂತರ ಅಬ್ಬರಿಸುವ ಸೂಚನೆ ನೀಡಿದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಮಾರ್ಕಸ್ ಸ್ಟೊಯಿನಿಸ್ ಅವರು ಕೂಡ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಮೋಡಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

    ಅದೇ ಓವರಿನಲ್ಲಿ ಆಕ್ಸರ್ ಪಟೇಲ್ ಅವರು ಕೂಡ ವರುಣ್ ಚಕ್ರವರ್ತಿ ಅವರಿಗೆ ಬೌಲ್ಡ್ ಆದರು. ನಂತರ 18ನೇ ಓವರಿನಲ್ಲಿ ಕಗಿಸೊ ರಬಾಡಾ ಅವರು 9 ರನ್ ಗಳಿಸಿ ಪ್ಯಾಟ್ ಕಮ್ಮಿನ್ಸ್ ಅವರಿಗೆ ಔಟ್ ಆದರು. ಇವರ ನಂತರ ತುಷಾರ್ ದೇಶಪಾಂಡೆ ಅವರು ಔಟ್ ಆದರು. ಈ ಮೂಲಕ ಡೆಲ್ಲಿ 20 ಓವರ್ ಆಡಿ 9 ವಿಕೆಟ್ ಕಳೆದುಕೊಂಡು ಕೇವಲ 135 ರನ್ ಪೇರಿಸಿ ಸೋತಿತು.

  • ಸೂಪರ್ ಓವರಿನಲ್ಲಿ ಹೈದರಾಬಾದ್ ಆಲೌಟ್ – ಫರ್ಗುಸನ್ ಬೌಲಿಂಗ್‍ ದಾಳಿಯಿಂದ ಕೋಲ್ಕತ್ತಾಗೆ ಜಯ

    ಸೂಪರ್ ಓವರಿನಲ್ಲಿ ಹೈದರಾಬಾದ್ ಆಲೌಟ್ – ಫರ್ಗುಸನ್ ಬೌಲಿಂಗ್‍ ದಾಳಿಯಿಂದ ಕೋಲ್ಕತ್ತಾಗೆ ಜಯ

    – ಸೂಪರ್ ಓವರಿನಲ್ಲಿ ಎರಡು ವಿಕೆಟ್ ಸಮೇತ ಐದು ವಿಕೆಟ್ ಪಡೆದ ಲಾಕಿ
    – ಐಪಿಎಲ್-2020ಯಲ್ಲಿ ಮೂರನೇ ಸೂಪರ್ ಓವರ್
    – ಕೊನೆಯ ಓವರಿನಲ್ಲಿ ಬೇಕಿತ್ತು 17 ರನ್
    – ವಿದೇಶಿ ಆಟಗಾರನಾಗಿ ವಾರ್ನರ್ ದಾಖಲೆ

    ಅಬುಧಾಬಿ: ಇಂದು ಸಂಡೇ ಧಮಾಕಾ ಮೊದಲನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯ ಟೈ ಆಗಿ ಸೂಪರ್ ಓವರ್ ತಲುಪಿತ್ತು. ಸೂಪರ್ ಓವರಿನಲ್ಲಿ ಭರ್ಜರಿ ಪ್ರದರ್ಶನ ತೋರಿದ ಕೋಲ್ಕತ್ತಾ ತಂಡ ಪಂದ್ಯವನ್ನು ಗೆದ್ದು ಬೀಗಿತು.

    ಡ್ರಾ ಆಗಿದ್ದು ಹೇಗೆ?
    ಕೊನೆಯ ಓವರಿನಲ್ಲಿ ಹೈದರಾಬಾದ್‍ಗೆ ಗೆಲ್ಲಲ್ಲು 17 ರನ್‍ಗಳ ಅವಶ್ಯಕತೆಯಿತ್ತು. ಆದರೆ ಆಂಡ್ರೆ ರಸ್ಸೆಲ್ ಅವರು ಮೊದಲ ಬಾಲನ್ನೇ ನೋಬಾಲ್ ಎಸೆದರು. ನಂತರ ಫ್ರೀ ಹಿಟ್ ಎದುರಿಸಿದ ರಶೀದ್ ಖಾನ್ ಅವರು ಒಂದು ರನ್ ತಂದರು ನಂತರ ಸ್ಟ್ರೈಕಿಗೆ ಬಂದ ವಾರ್ನರ್ ಅವರು, ಎರಡು, ಮೂರು ಮತ್ತು ನಾಲ್ಕನೇ ಬಾಲನ್ನು ಬೌಂಡರಿಗಟ್ಟಿದರು. ಆಗ ಎರಡು ಬಾಲಿಗೆ ನಾಲ್ಕು ರನ್‍ಗಳ ಅವಶ್ಯಕತೆ ಇತ್ತು. 5ನೇ ಬಾಲಿನಲ್ಲಿ ಎರಡು ರನ್ ಬಂತು. ಆದರೆ ಆರನೇ ಬಾಲಿನಲ್ಲಿ ಕೇವಲ ಒಂದು ರನ್ ಬಂದು ಪಂದ್ಯ ಟೈ ಆಯ್ತು.

    ಕೋಲ್ಕತ್ತಾದ ಪರ ಫರ್ಗುಸನ್ ಸೂಪರ್ ಓವರ್ ಬೌಲ್ ಮಾಡಿದರು. ಸೂಪರ್ ಓವರಿನ ಮೊದಲ ಬಾಲಿನಲ್ಲೇ ನಾಯಕ ಡೇವಿಡ್ ವಾರ್ನರ್ ಅವರು ಔಟ್ ಆದರು. ನಂತರ ಸಮದ್ ಅವರು ಎರಡು ರನ್ ತಂದರು. ನಂತರದ ಬಾಲಿನಲ್ಲಿ ಲಾಕಿ ಫರ್ಗುಸನ್ ಅವರಿಗೆ ಬೌಲ್ಡ್ ಆದರು ಈ ಮೂಲಕ ಆಲೌಟ್ ಆಗಿ ಕೇವಲ ಎರಡು ರನ್‍ಗಳ ಟಾರ್ಗೆಟ್ ನೀಡಿತು. ಈ ಸುಲಭ ಗುರಿ ಬೆನ್ನಟ್ಟಲು ಬಂದ ಇಯೊನ್ ಮೋರ್ಗಾನ್ ಮತ್ತು ದಿನೇಶ್ ಕಾರ್ತಿಕ್ ಅವರು ಎರಡು ಬಾಲ್ ಉಳಿಸಿಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಇಂದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಮತ್ತು ಇಯೋನ್ ಮೋರ್ಗನ್ ಅವರ ಕ್ಯಾಮಿಯೊಂ ಇನ್ನಿಂಗ್ಸ್ ನಿಂದ ನಿಗದಿತ 20 ಓವರಿನಲ್ಲಿ 163 ರನ್ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರು ಕೊನೆಯಲ್ಲಿ ಡೇವಿಡ್ ವಾರ್ನರ್ ಅವರ ಅದ್ಭುತ ಆಟವಾಡಿದರು. ಹೀಗಾಗಿ ಪಂದ್ಯ ಟೈ ಆಯ್ತು. ಸೂಪರ್ ಓವರಿನಲ್ಲಿ ಜಯ ಕೋಲ್ಕತ್ತಾ ಪಾಲಾಯ್ತು.

    ಫರ್ಗುಸನ್ ದಾಳಿಗೆ ಹೈದರಾಬಾದ್ ಥಂಡ
    ಇಂದು ಕೋಲ್ಕತ್ತಾ ಪರ ಸೂಪರ್ ಬೌಲ್ ಮಾಡಿದ ಫರ್ಗುಸನ್ ಮೂರು ಎಸೆತದಲ್ಲಿ ಎರಡು ವಿಕೆಟ್ ಕಿತ್ತು ಕೇವಲ 2 ರನ್ ನೀಡಿದರು. ಜೊತೆಗೆ ಇಂದಿನ ಪಂದ್ಯದಲ್ಲಿ ವೇಗಿ ಲಾಕಿ ಫರ್ಗುಸನ್ ಉತ್ತಮವಾಗಿ ಬೌಲ್ ಮಾಡಿದರು. ತಮ್ಮ ಕೋಟದ ನಾಲ್ಕು ಓವರ್ ಬೌಲ್ ಮಾಡಿದ ಲುಕಿ ಮೂರು ವಿಕೆಟ್ ಪಡೆದು ಕೇವಲ 15 ರನ್ ನೀಡಿದರು. ಈ ಮೂಲಕ ಒಟ್ಟು ಐದು ವಿಕೆಟ್ ಪಡೆದು ಕೋಲ್ಕತ್ತಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ವಿದೇಶಿ ಆಟಗಾರನಾಗಿ ವಾರ್ನರ್ ದಾಖಲೆ
    ಇಂದಿನ ಪಂದ್ಯದಲ್ಲಿ ವಿದೇಶಿ ಆಟಗಾರನಾಗಿ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವಿದೇಶಿ ಪ್ಲೇಯರ್ ಆಗಿ ಐಪಿಎಲ್‍ನಲ್ಲಿ ಐದು ಸಾವಿರ ರನ್ ಪೂರ್ಣಗೊಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 135 ಪಂದ್ಯಗಳಲ್ಲಿ ವಾರ್ನರ್ ಅವರು ಈ ಸಾಧನೆ ಮಾಡಿದ್ದಾರೆ. ಇವರಾದ ನಂತರ ವಿದೇಶಿ ಆಟಗಾರರ ಪೈಕಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್‍ಗಳಿಸಿರುವ ಪಟ್ಟಿಯಲ್ಲಿ 4,680 ರನ್ ಗಳಿಸಿದ ಎಬಿಡಿ ವಿಲಿಯರ್ಸ್ ಅವರು ಇದ್ದಾರೆ.

    ಕೋಲ್ಕತ್ತಾ ನೀಡಿದ ಸಾಧಾರಣ ಮೊತ್ತ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಭರ್ಜರಿ ಆರಂಭ ದೊರೆಯಿತು. ಇಂದು ಓಪನರ್ ಆಗಿ ಕಣಕ್ಕಿಳಿದ ಜಾನಿ ಬೈರ್‍ಸ್ಟೋವ್ ಮತ್ತು ಕೇನ್ ವಿಲಿಯಮ್ಸನ್ ಅದ್ಭುತವಾಗಿ ಬ್ಯಾಟ್ ಬೀಸಿದರು. ಈ ಮೂಲಕ 32 ಎಸೆತದಲ್ಲೇ ಮೊದಲನೇ ವಿಕೆಟ್‍ಗೆ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಜೊತೆಗೆ ಪವರ್ ಪ್ಲೇ ಮುಕ್ತಾಯದ ವೇಳಗೆ ಒಂದು ವಿಕೆಟ್ ಕಳೆದುಕೊಳ್ಳದೇ 57 ರನ್ ಸಿಡಿಸಿ ಮುನ್ನುಗುತ್ತಿತ್ತು.

    ಆದರೆ ಈ ವೇಳೆ ದಾಳಿಗಿಳಿದ ಲಾಕಿ ಫರ್ಗುಸನ್ ಅವರು 19 ಬಾಲಿಗೆ 29 ರನ್ ಸಿಡಿಸಿ ಆಡುತ್ತಿದ್ದ ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡಿದರು. ನಂತರ ಬಂದ ಪ್ರಿಯಮ್ ಗಾರ್ಗ್ ಅವರು 4 ರನ್ ಗಳಿಸಿ ಫರ್ಗುಸನ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ತಾಳ್ಮೆಯಿಂದ ಆರಂಭದಿಂದಲೂ ಆಡಿಕೊಂಡು ಬರುತ್ತಿದ್ದ ಜಾನಿ ಬೈರ್‍ಸ್ಟೋವ್ ಅವರು 28 ಬಾಲಿಗೆ 36 ರನ್ ಸಿಡಿಸಿ ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ಬಲಿಯಾದರು. ನಂತರ ಮನೀಶ್ ಪಾಂಡೆ ಫರ್ಗುಸನ್ ಬೌಲಿಗ್‍ಗೆ ಬೌಲ್ಡ್ ಆಗಿ ಹೊರನಡೆದರು.

    ಇದಾದ ನಂತರ 15ನೇ ಓವರ್ ಎರಡನೇ ಬಾಲಿನಲ್ಲಿ ವಿಜಯ್ ಶಂಕರ್ ಅವರು ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಕೊನೆಯಲ್ಲಿ ಅಬ್ದುಲ್ ಸಮದ್ ಅವರು ನಾಯಕ ಡೇವಿಡ್ ವಾರ್ನರ್ ಜೊತೆಗೂಡಿ ಉತ್ತಮವಾಗಿ ಬ್ಯಾಟ್ ಬೀಸಿದರು. ಆದರೆ 19ನೇ ಓವರಿನ ಕೊನೆಯ ಬಾಲಿನಲ್ಲಿ 23 ರನ್‍ಗಳಿಸಿದ್ದ ಅಬ್ದುಲ್ ಸಮದ್ ಬೌಡರಿ ಗೆರೆಯ ಬಳಿ ಲಾಕಿ ಫರ್ಗುಸನ್ ಹಿಡಿದು ಕ್ಯಾಚಿಗೆ ಬಲಿಯಾಗಿದರು.

    ಈ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ಸನ್‍ರೈಸರ್ಸ್ ಹೈದರಾಬಾದ್ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಯ್ತು. ಒಳ್ಳೆಯ ಆರಂಭ ಕಂಡರು ದೊಡ್ಡ ಮೊತ್ತದ ಗುರಿ ನೀಡುವಲ್ಲಿ ವಿಫಲವಾಗಿತ್ತು. ವಿಕೆಟ್ ಕಳೆದುಕೊಂಡು ಕಮ್ಮಿ ಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದ ಕೆಕೆಆರ್ ತಂಡಕ್ಕೆ ನಾಯಕ ಇಯೊನ್ ಮೋರ್ಗಾನ್ ಮತ್ತು ದಿನೇಶ್ ಕಾರ್ತಿಕ್ ಅವರು ಉತ್ತಮ ಕೊಡುಗೆ ನೀಡಿದರು. ಜೊತೆಗೆ ತಂಡವು 164 ರನ್ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

  • ನರೈನ್ ಬೌಲಿಂಗ್ ಜಾದು, ಕೊನೆ ಮೂರು ಓವರಿನಲ್ಲಿ ಪಂದ್ಯಕ್ಕೆ ಟ್ವಿಸ್ಟ್ – ಕೋಲ್ಕತ್ತಾಗೆ ಜಯ

    ನರೈನ್ ಬೌಲಿಂಗ್ ಜಾದು, ಕೊನೆ ಮೂರು ಓವರಿನಲ್ಲಿ ಪಂದ್ಯಕ್ಕೆ ಟ್ವಿಸ್ಟ್ – ಕೋಲ್ಕತ್ತಾಗೆ ಜಯ

    – ವ್ಯರ್ಥವಾದ ರಾಹುಲ್, ಅಗರ್ವಾಲ್ ಶತಕದ ಜೊತೆಯಾಟ
    – ಕೊನೆಯ 3 ಓವರಿನಲ್ಲಿ 19 ರನ್ ಬಿಟ್ಟುಕೊಟ್ಟ ಕೋಲ್ಕತ್ತಾ ಬೌಲರ್ಸ್

    ಅಬುಧಾಬಿ: ಇಂದು ಅಬುಧಾಬಿ ಸ್ಟೇಡಿಯಂನಲ್ಲಿ ನಡೆದ ವಿಕೇಂಡ್ ಧಮಾಕದ ಮೊದಲನೇ ಮ್ಯಾಚಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೊನೆಯ ಕ್ಷಣದಲ್ಲಿ ರೋಚಕ ಜಯವನ್ನು ಕಂಡಿದೆ.

    ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ನಾಯಕ ದಿನೇಶ್ ಕಾರ್ತಿಕ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 164 ರನ್‍ಗಳನ್ನು ಟಾರ್ಗೆಟ್ ಆಗಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಕಿತು. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟಿಗೆ 116 ರನ್‍ಗಳ ಜೊತೆಯಾಟವಾಡಿದರು. ಆದರೆ ಕೊನೆಯ ಮೂರು ಓವರಿನಲ್ಲಿ ರನ್ ಕಲೆಹಾಕಲು ಎಡವಿದ ಪಂಜಾಬ್ ಕೇವಲ ಎರಡು ರನ್ ಅಂತರದಲ್ಲಿ ಸೋತಿದೆ.

    ನರೈನ್, ಪ್ರಸೀದ್ ಕೃಷ್ಣ ಬೌಲಿಂಗ್ ಮೋಡಿ
    ಉತ್ತಮ ಆರಂಭ ಪಡೆದ ಪಂಜಾಬ್ ತಂಡ 17ನೇ ಓವರ್ ಮುಕ್ತಾಯಕ್ಕೆ 143 ಗಳಿಸಿ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ 18ನೇ ಓವರ್ ಬೌಲಿಂಗ್ ಮಾಡಲು ಬಂದ ನರೈನ್ ಅವರು ಆ ಓವರಿನಲ್ಲಿ ಕೇವಲ ಎರಡು ರನ್ ಕೊಟ್ಟು ಒಂದು ವಿಕೆಟ್ ಕಿತ್ತರು. ನಂತರ 19ನೇ ಓವರ್ ಬೌಲ್ ಮಾಡಿದ ಕನ್ನಡಿಗ ಪ್ರಸೀದ್ ಕೃಷ್ಣ ಕೇವಲ 6 ರನ್ ಕೊಟ್ಟು ನಾಯಕ ರಾಹುಲ್ ವಿಕೆಟ್ ಸೇರಿ ಎರಡು ವಿಕೆಟ್ ಕಿತ್ತರು. ನಂತರ ಕೊನೆಯ ಓವರಿಗೆ ಪಂಜಾಬಿಗೆ 14 ರನ್ ಬೇಕಿತ್ತು. ಆಗ ಬೌಲಿಂಗ್ ದಾಳಿಗಿಳಿದ ನರೈನ್ 11 ರನ್ ನೀಡಿ ಒಂದು ವಿಕೆಟ್ ಪಡೆದು ಕೋಲ್ಕತ್ತಾ ತಂಡಕ್ಕೆ ಜಯ ತಂದುಕೊಟ್ಟರು.

    ಕೋಲ್ಕತ್ತಾ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಬಂದ ಪಂಜಾಬ್ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರು ಮೊದಲಿಗೆ ತಾಳ್ಮೆಯಿಂದ ರನ್ ಕಲೆಹಾಕಿದರು. ಮೊದಲ ಆರು ಓವರಿನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್ ಮತ್ತು ಅಗರ್ವಾಲ್ ಅವರು, ಪವರ್ ಪ್ಲೇ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 47 ರನ್ ಪೇರಿಸಿದರು.

    ವಿಕೆಟ್ ಕಳೆದುಕೊಳ್ಳದೇ ಬ್ಯಾಟ್ ಬೀಸಿದ ರಾಹುಲ್ ಅಗರ್ವಾಲ್ ಜೋಡಿ 12 ಓವರ್ ಮುಕ್ತಾಯಕ್ಕೆ 94 ರನ್ ಸೇರಿಸಿತು. ಈ ನಡುವೆ 43 ಬಾಲಿಗೆ ನಾಯಕ ರಾಹುಲ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮಯಾಂಕ್ ಅಗರ್ವಾಲ್ ಅವರು 33 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಇದರ ಜೊತೆಗೆ 73 ಬಾಲಿಗೆ ಈ ಜೋಡಿ ಶತಕ ಜೊತೆಯಾಟವಾಡಿತು.

    ಆದರೆ 14ನೇ ಓವರಿನ 2ನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮಯಾಂಕ್ ಅಗರ್ವಾಲ್ ಅವರು 39 ಬಾಲಿಗೆ ಒಂದು ಸಿಕ್ಸರ್ ಮತ್ತು ಆರು ಫೋರ್ ಗಳ ಸಹಾಯದಿಂದ 56 ರನ್ ಸಿಡಿಸಿ ಪ್ರಸೀದ್ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ರಾಹುಲ್ ಜೊತೆ 116 ರನ್‍ಗಳ ಜೊತೆಯಾಟವಾಡಿದರು. ನಂತರ ಬಂದ ನಿಕೋಲಸ್ ಪೂರನ್ ಅವರು 10 ಬಾಲಿಗೆ 16 ರನ್ ಗಳಿಸಿ ಸುನಿಲ್ ನರೈನ್ ಅವರಿಗೆ ಬೌಲ್ಡ್ ಆದರು. ನಂತರ ಅಂಗಳಕ್ಕೆ ಬಂದ ಸಿಮ್ರಾನ್ ಸಿಂಗ್ ಅವರು 18ನೇ ಓವರಿನ 4ನೇ ಬಾಲಿನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ಇದಾದ ನಂತರ ನಾಯಕ ರಾಹುಲ್ ಔಟ್ ಆದರು. ನಂತರ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಕೊನೆ ಬಾಲಿನವರೆಗೂ ಕ್ರೀಸಿನಲ್ಲಿದ್ದರು ಪ್ರಯೋಜನವಾಗಲಿಲ್ಲ.

  • 22 ಬಾಲಿಗೆ ದಿನೇಶ್ ಕಾರ್ತಿಕ್ ಅರ್ಧಶತಕ – ರಾಹುಲ್ ಪಡೆಗೆ 165 ರನ್‍ಗಳ ಗುರಿ

    22 ಬಾಲಿಗೆ ದಿನೇಶ್ ಕಾರ್ತಿಕ್ ಅರ್ಧಶತಕ – ರಾಹುಲ್ ಪಡೆಗೆ 165 ರನ್‍ಗಳ ಗುರಿ

    – ಟೀಕೆಗಳಿಗೆ ಬ್ಯಾಟ್‍ನಿಂದ ಉತ್ತರ ಕೊಟ್ಟ ಕೆಕೆಆರ್ ನಾಯಕ

    ಅಬುಧಾಬಿ: ಇಂದು ವಿಕೇಂಡ್ ಧಮಾಕಾದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಎದುರಾಳಿ ಪಂಜಾಬ್ ತಂಡಕ್ಕೆ 165 ರನ್‍ಗಳ ಗುರಿಯನ್ನು ನೀಡಿದೆ.

    ಟೀಕೆಗಳಿಗೆ ಬ್ಯಾಟ್‍ನಿಂದ ಕಾರ್ತಿಕ್ ಉತ್ತರ
    ಇಂದು ಬೇಗನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕೋಲ್ಕತ್ತಾ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ ತಮ್ಮ ಸ್ಫೋಟಕ ಬ್ಯಾಟಿಂಗ್‍ನಿಂದ ನೆರವಾದರು. ಕೇವಲ 22 ಬಾಲಿಗೆ ಅರ್ಧಶತಕ ಪೂರ್ಣಗೊಳಿಸಿದ ದಿನೇಶ್ ಕಾರ್ತಿಕ್, ಅಂತಿಮವಾಗಿ 29 ಬಾಲಿಗೆ 58 ರನ್ ಸಿಡಿಸಿ ಔಟ್ ಆದರು. ಈ ಮೂಲಕ ನಾಯಕ ಮತ್ತು ಬ್ಯಾಟಿಂಗ್‍ನಲ್ಲಿ ಕಾರ್ತಿಕ್ ವಿಫಲರಾಗಿದ್ದಾರೆ. ಅವನ್ನು ನಾಯಕತ್ವದಿಂದ ಕೆಳಗಿಳಸಬೇಕು ಎಂದವರಿಗೆ ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ.

    ಪವರ್ ಪ್ಲೇನಲ್ಲಿ ಪಂಜಾಬ್ ವೇಗಿಗಳು ಮಿಂಚು
    ಕಳೆದ ಪಂದ್ಯಗಳಲ್ಲಿ ದುಬಾರಿಯಾಗಿ ಟೀಕೆಗೆ ಒಳಗಾಗುತ್ತಿದ್ದ ಪಂಜಾಬ್ ವೇಗಿಗಳು ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದರು. ಪವರ್ ಪ್ಲೇ ವೇಳೆ 23 ಡಾಟ್ ಬಾಲ್ ಎಸೆದ ವೇಗಿಗಳು ಎರಡು ವಿಕೆಟ್ ಕಿತ್ತು ಕೇವಲ 25 ರನ್ ನೀಡಿದರು. ಪಂಜಾಬ್ ಪರ ಮೊಹಮ್ಮದ್ ಶಮಿ, ಅರ್ಷ್‍ದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ಅವರು ತಲಾ ಒಂದು ವಿಕೆಟ್ ಪಡೆದುಕೊಂಡರು.

    ಟಾಸ್ ಗೆದ್ದು ಬ್ಯಾಟಿಂಗ್‍ಗೆ ಬಂದ ಕೋಲ್ಕತ್ತಾ ತಂಡಕ್ಕೆ ಮೂರನೇ ಓವರಿನಲ್ಲೇ ಮೊಹಮ್ಮದ್ ಶಮಿ ಶಾಕ್ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ರಾಹುಲ್ ತ್ರಿಪಾಠಿ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇವರ ನಂತರ ಕ್ರೀಸಿಗೆ ಬಂದ ನಿತೀಶ್ ರಾಣಾ ಅವರು ಇಲ್ಲದ ರನ್ ಕದಿಯಲು ಹೋಗಿ ಸಲುಭವಾಗಿ ರನ್‍ಔಟ್ ಆಗಿ ಹೊರ ನಡೆದರು. ಇನ್ನಿಂಗ್ಸ್ ಆರಂಭದಲ್ಲೇ ಪಂಜಾಬ್ ತಂಡ ಕೋಲ್ಕತ್ತಾದ ಮೇಲೆ ಒತ್ತಡ ಹಾಕಲು ಆರಂಭಿಸಿತು.

    ಪಂಜಾಬ್ ತಂಡದ ವೇಗಿಗಳ ಬಿಗಿ ಬೌಲಿಂಗ್ ದಾಳಿಗೆ ನಲುಗಿದ ಕೋಲ್ಕತ್ತಾ, ಪವರ್ ಪ್ಲೇ ಮುಕ್ತಾಯದ ವೇಳಗೆ ಎರಡು ವಿಕೆಟ್ ಕಳೆದುಕೊಂಡು ಕೇವಲ 25 ರನ್ ಪೇರಿಸಿತು. ನಂತರ ಒದಾದ ಶುಭ್‍ಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅವರು ನಿಧಾನವಾಗಿ ತಂಡಕ್ಕೆ ರನ್ ಸೇರಿಸುತ್ತಾ ಹೋದರು. ಪರಿಣಾಮ 10 ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ ತಂಡ ಎರಡು ವಿಕೆಟ್ ಕಳೆದುಕೊಂಡು 60 ರನ್ ಕಲೆ ಹಾಕಿತು. ಈ ಜೋಡಿ 42 ಬಾಲಿಗೆ 49 ರನ್‍ಗಳ ಜೊತೆಯಾಟವಾಡಿತು.

    ಆದರೆ 23 ಬಾಲಿಗೆ 24 ರನ್ ಸಿಡಿಸಿ ತಾಳ್ಮೆಯಿಂದ ಆಡುತ್ತಿದ್ದ ಇಯೊನ್ ಮೋರ್ಗಾನ್ ಅವರು 10ನೇ ಓವರಿನ ನಾಲ್ಕನೇ ಬಾಲಿನಲ್ಲಿ ಕ್ಯಾಚ್ ನೀಡಿ ಔಟ್ ಆದರು. ಆರಂಭದಿಂದಲೂ ಉತ್ತಮವಾಗಿ ಆಡಿದ ಶುಭ್‍ಮನ್ ಗಿಲ್ ಅವರು 42 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ನಾಯಕ ದಿನೇಶ್ ಕಾರ್ತಿಕ್ ಅವರು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಹೀಗಾಗಿ ಕಾರ್ತಿಕ್ ಗಿಲ್ ಜೋಡಿ 31 ಬಾಲಿಗೆ ಅರ್ಧಶತಕ ಜೊತೆಯಾಟವಾಡಿತು.

    ಇದೇ ವೇಳೆ ಸ್ಫೋಟಕ ಆಟಕ್ಕೆ ಮುಂದಾದ ನಾಯಕ ದಿನೇಶ್ ಕಾರ್ತಿಕ್ ಕೇವಲ 22 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. 17ನೇ ಓವರಿನ ಐದನೇ ಬಾಲಿನಲ್ಲಿ ಎರಡು ರನ್ ಓಡಲು ಹೋದ ಶುಭ್‍ಮನ್ ಗಿಲ್ ಅವರು 47 ಬಾಲಿಗೆ 57 ರನ್ ಸಿಡಿಸಿ ರನೌಟ್ ಆದರು. ನಂತರ ಬಂದ ಆಂಡ್ರೆ ರಸ್ಸೆಲ್ ಅವರು ಕೇವಲ 5 ರನ್‍ಗಳಿಸಿ 18ನೇ ಓವರಿನಲ್ಲಿ ಔಟ್ ಆದರು.

  • ಮ್ಯಾಜಿಕ್ ಮಾಡದ ಧೋನಿ, ಚೆನ್ನೈ ದಿಢೀರ್ ಕುಸಿತ – ಕೋಲ್ಕತ್ತಾಗೆ 10 ರನ್‍ಗಳ ರೋಚಕ ಜಯ

    ಮ್ಯಾಜಿಕ್ ಮಾಡದ ಧೋನಿ, ಚೆನ್ನೈ ದಿಢೀರ್ ಕುಸಿತ – ಕೋಲ್ಕತ್ತಾಗೆ 10 ರನ್‍ಗಳ ರೋಚಕ ಜಯ

    – ಉತ್ತಮ ಆರಂಭ ಕಂಡರೂ ಮಕಾಡೆ ಮಲಗಿದ ಕಿಂಗ್ಸ್

    ಅಬುಧಾಬಿ: ಇಂದು ನಡೆದ ಐಪಿಎಲ್-2020 21ನೇ ಮ್ಯಾಚಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ 10 ರನ್‍ಗಳ ರೋಚಕ ಜಯ ಸಾಧಿಸಿದೆ.

    ಇಂದು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ರಾಹುಲ್ ತ್ರಿಪಾಠಿಯವರ ಭರ್ಜರಿ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 167 ರನ್ ಸಿಡಿಸಿತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ತಂಡ ಉತ್ತಮ ಆರಂಭ ಪಡೆದರು ಕೂಡ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ನಿಗಧಿತ 20 ಓವರಿನಲ್ಲಿ 157 ರನ್ ಸಿಡಿಸಿತು. ಈ ಮೂಲಕ 10 ರನ್‍ಗಳಿಂದ ಕೋಲ್ಕತ್ತಾ ತಂಡ ಜಯಗಳಿಸಿತು.

    ಚೆನ್ನೈ ಮಿಡಲ್ ಆರ್ಡರ್ ಫ್ಲಾಪ್
    ಇಂದು ಮೊದಲ ವಿಕೆಟ್ ಬೇಗ ಬಿದ್ದರೂ ನಂತರ ಎರಡನೇ ವಿಕೆಟ್‍ಗೆ ಉತ್ತಮ ಜೊತೆಯಾಟವಾಡಿದ ಅಂಬಾಟಿ ರಾಯುಡು ಮತ್ತು ವ್ಯಾಟ್ಸನ್ ಅವರು ಚೆನ್ನೈ ತಂಡವನ್ನು ಉತ್ತಮ ಸ್ಥಿತಿಗೆ ತಂದಿದ್ದರು. ಆದರೆ ನಂತರ ರಾಯುಡು 30 ರನ್ ಗಳಿಸಿ ಔಟ್ ಆದರು. ಅವರ ನಂತರ 50 ರನ್ ಗಳಿಸಿದ್ದ ವ್ಯಾಟ್ಸನ್ ಕೂಡ ಪೆವಿಲಯನ್ ಸೇರಿದರು. ಆಗಲು ಕೂಡ 104 ರನ್‍ಗಳಿಸಿದ್ದ ಚೆನ್ನೈ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಆ ನಂತರ ಬಂದ ಆಟಗಾರರು ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ. ಧೋನಿ ಸ್ಯಾಮ್ ಕರ್ರನ್ ಅವರು ಔಟ್ ಆದರು. ಈ ಕಾರಣದಿಂದ ಚೆನ್ನೈ ಹೀನಾಯ ಸೋಲನ್ನು ಅನುಭವಿಸಿತು.

    ಕೋಲ್ಕತ್ತಾ ನೀಡಿದ ಟಾರ್ಗೆಟ್ ಅನ್ನು ಬೆನ್ನಟ್ಟಲು ಅನುಭವಿ ಓಪನರ್ ಗಳಾದ ಶೇನ್ ವ್ಯಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ಅವರು ಕಣಕ್ಕಿಳಿದಿದ್ದರು. ಕಳೆದ ಪಂದ್ಯದಲ್ಲಿ ಔಟ್ ಆಗದೇ ಆಟವಾಡಿದ್ದ ಈ ಜೋಡಿಯ ಮೇಲೆ ಭಾರಿ ನೀರಿಕ್ಷೆಗಳು ಇದ್ದವು. ಆದರೆ ಚೆನ್ನೈ ಆರಂಭಿಕ ಆಘಾತ ನೀಡಿದ ಯುವ ವೇಗಿ ಶಿವಂ ಮಾವಿ ಉತ್ತಮ ಲಯದಲ್ಲಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಔಟ್ ಸ್ವಿಂಗ್ ಎಸೆತದ ಮೂಲಕ ಔಟ್ ಮಾಡಿದರು. ಈ ಮೂಲಕ 17 ರನ್ ಗಳಿಸಿದ್ದ ಫ್ಲೆಸಿಸ್ ಅವರು ಔಟ್ ಆಗಿ ಹೊರನಡೆದರು.

    ನಂತರ ಅಂಬಾಟಿ ರಾಯುಡು ಹಾಗೂ ವ್ಯಾಟ್ಸನ್ ತಾಳ್ಮೆಯ ಆಟಕ್ಕೆ ಮುಂದಾದರು. ಪರಿಣಾಮ ಪವರ್ ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಂದು ವಿಕೆಟ್ ಕಳೆದುಕೊಂಡು 54 ರನ್ ಪೇರಿಸಿತ್ತು. ಉತ್ತಮ ಜೊತೆಯಾಟವಾಡಿದ ರಾಯುಡು ಹಾಗೂ ವ್ಯಾಟ್ಸನ್ 34 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿತು. ನಂತರ 27 ಬಾಲಿಗೆ ಮೂರು ಬೌಂಡರಿ ಸಮೇತ 30 ರನ್ ಭಾರಿಸಿದ್ದ ರಾಯುಡು 12ನೇ ಓವರಿನಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿದರು.

    ನಂತರ 39 ಬಾಲಿಗೆ ಅರ್ಧಶತಕ ಸಿಡಿಸಿದ ಶೇನ್ ವ್ಯಾಟ್ಸನ್ ಅವರು ನಂತರ ಎಸೆತದಲ್ಲಿ ಸುನಿಲ್ ನರೈನ್ ಅವರಿಗೆ ಔಟ್ ಆಗಿ ಹೊರನಡೆದರು. 40 ಎಸೆತದಲ್ಲಿ ಒಂದು ಸಿಕ್ಸ್ ಮತ್ತು ಆರು ಫೋರ್ ಸಿಡಿಸಿ 50 ರನ್ ಬಾರಿಸಿದ್ದ ವ್ಯಾಟ್ಸನ್ ಅವರು ತಂಡ 103 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿ ಇದ್ದಾಗ ಔಟ್ ಆದರು. ಇಂದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಧೋನಿ 16ನೇ ಓವರಿನ 3ನೇ ಬಾಲಿನಲ್ಲಿ ವರುಣ್ ಚಕ್ರವರ್ತಿ ಬೌಲ್ಡ್ ಆಗಿ ವಾಪಸ್ ಆದರು.

    ನಂತರ ಸ್ಫೋಟಕ ಆಟಕ್ಕೆ ಮುಂದಾದ ಸ್ಯಾಮ್ ಕರ್ರನ್ ಅವರು ಆಂಡ್ರೆ ರಸ್ಸೆಲ್ ಅವರ ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ಮೂರು ಓವರಿಗೆ 39 ರನ್ ಬೇಕಿದ್ದಾಗ ಒಂದಾದ ಕೇದರ್ ಜಾಧವ್ ಮತ್ತು ರವೀಂದ್ರ ಜಡೇಜಾ ಮೋಡಿ ಮಾಡಲಿಲ್ಲ. ಈ ಕಾರಣದಿಂದ ಚೆನ್ನೈ ಸುಲಭವಾಗಿ ಗೆಲ್ಲಬಹುದಿದ್ದ ಪಂದ್ಯವನ್ನು ಕೈಚೆಲ್ಲಿತು.

  • ತ್ರಿಪಾಠಿ ಸೂಪರ್ ಬ್ಯಾಟಿಂಗ್, ಮಧ್ಯಮ ಕ್ರಮಾಂಕದಲ್ಲಿ ಕೋಲ್ಕತ್ತಾ ಕುಸಿತ – ಚೆನ್ನೈಗೆ 168 ರನ್‍ಗಳ ಗುರಿ

    ತ್ರಿಪಾಠಿ ಸೂಪರ್ ಬ್ಯಾಟಿಂಗ್, ಮಧ್ಯಮ ಕ್ರಮಾಂಕದಲ್ಲಿ ಕೋಲ್ಕತ್ತಾ ಕುಸಿತ – ಚೆನ್ನೈಗೆ 168 ರನ್‍ಗಳ ಗುರಿ

    – ಕರಣ್ ಶರ್ಮಾ, ಶಾರ್ದುಲ್ ಠಾಕೂರ್ ಬೌಲಿಂಗ್ ಮೋಡಿ
    – ಡೆತ್ ಓವರಿನಲ್ಲಿ ಚೆನ್ನೈ ವೇಗಿಗಳ ಆರ್ಭಟ

    ಅಬುಧಾಬಿ: ಇಂದು ನಡೆಯುತ್ತಿರುವ ಐಪಿಎಲ್-2020ಯ 21ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 168 ರನ್‍ಗಳ ಟಾರ್ಗೆಟ್ ನೀಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ತಂಡ ಮೊದಲ ಹತ್ತು ಓವರಿನಲ್ಲಿ ಅದ್ಭುತವಾಗಿ ಆಡಿತು. ಸ್ಫೋಟಕ ಬ್ಯಾಟಿಂಗ್ ಮುಂದಾದ ಓಪನರ್ ರಾಹುಲ್ ತ್ರಿಪಾಠಿ ಸಿಕ್ಸ್ ಫೋರುಗಳ ಸುರಿಮಳೆಗೈದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕುಸಿದ ಕೋಲ್ಕತ್ತಾ ಮೊದಲ 10 ಓವರಿನಲ್ಲಿ 93 ರನ್ ಗಳಿಸಿದರು. ನಂತರ ಉತ್ತಮವಾಗಿ ಆಡಲಿಲ್ಲ. ಕೊನೆಯಲ್ಲಿ ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ ಮತ್ತು ಇಯೊನ್ ಮೊರ್ಗಾನ್ ಅವರ ವೈಫಲ್ಯ ತಂಡಕ್ಕೆ ಮುಳುವಾಗಿತು.

    ಡೆತ್ ಓವರಿನಲ್ಲಿ ಚೆನ್ನೈ ಬೌಲರ್ಸ್ ಆರ್ಭಟ
    ಮೊದಲಿನಲ್ಲಿ ಕೊಂಚ ದುಬಾರಿಯಾದರೂ ಡೆತ್ ಓವರ್ ಗಳಲ್ಲಿ ಚೆನ್ನೈ ತಂಡ ವೇಗಿಗಳು ಅದ್ಭುತವಾಗಿ ಬೌಲಿಂಗ್ ಮಾಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ನಾಲ್ಕು ಓವರ್ ಬೌಲ್ ಮಾಡಿ ಶಾರ್ದುಲ್ ಠಾಕೂರ್ ಅವರು 28 ರನ್ ನೀಡಿ ಎರಡು ವಿಕೆಟ್ ಗಬಳಿಸಿದರು. ಅಂತೆಯೇ ವೇಗಿಗಳಾದ ಸ್ಯಾಮ್ ಕರ್ರನ್ ಎರಡು ವಿಕೆಟ್ ಮತ್ತು ಡ್ವೇನ್ ಬ್ರಾವೋ ಮೂರು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಸ್ಪಿನ್ನರ್ ಕರಣ್ ಶರ್ಮಾ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಕೇವಲ 25 ರನ್ ನೀಡಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆರಂಭಿಕರಾದ ಶುಭ್‍ಮನ್ ಗಿಲ್ ಮತ್ತು ರಾಹುಲ್ ತ್ರಿಪಾಠಿ ಸಾಧಾರಣ ಆರಂಭ ನೀಡಿದರು. ಆದರೆ 11 ರನ್ ಗಳಿಸಿದ್ದ ಗಿಲ್ ಶಾರ್ದುಲ್ ಠಾಕೂರ್ ಅವರಿಗೆ ಔಟ್ ಆದರು. ನಂತರ ಜೊತೆಯಾದ ನಿತೀಶ್ ರಾಣಾ ಮತ್ತು ತ್ರಿಪಾಠಿ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಪರಿಣಾಮ ಆರು ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ ತಂಡ ಒಂದು ವಿಕೆಟ್ ಕಳೆದುಕೊಂಡು 52 ರನ್ ಸೇರಿಸಿತು.

    ನಂತರ ತ್ರಿಪಾಠಿ ಮತ್ತು ರಾಣಾ ತಾಳ್ಮೆಯಿಂದ ಆಡುತ್ತಿದ್ದರು. ಆದರೆ 8ನೇ ಓವರಿನ ಮೊದಲನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ರಾಣಾ, ಕರಣ್ ಶರ್ಮಾ ಅವರ ಎಸೆತದಲ್ಲಿ ರವೀಂದ್ರ ಜಡೇಜಾ ಅವರು ಹಿಡಿದು ಉತ್ತಮ ಕ್ಯಾಚಿಗೆ ಬಲಿಯಾದರು. ಇದೇ ವೇಳೆ ಆರಂಭದಿಂದಲೂ ಉತ್ತಮವಾಗಿ ಆಡುತ್ತಿದ್ದ ರಾಹುಲ್ ತ್ರಿಪಾಠಿಯವರು 31 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು.

    ನಂತರ ಬ್ಯಾಟ್ ಟು ಬ್ಯಾಕ್ ಬೌಂಡರಿ ಸಿಡಿಸುತ್ತಿದ್ದ ಸುನಿಲ್ ನರೈನ್ ಅವರು ಫಾಫ್ ಡು ಪ್ಲೆಸಿಸ್ ಮತ್ತು ರವೀಂದ್ರ ಜಡೇಜಾ ಜೋಡಿ ಸೇರಿ ಹಿಡಿದು ಸೂಪರ್ ಕ್ಯಾಚಿಗೆ ಬಲಿಯಾದರು. 13ನೇ ಓವರಿನಲ್ಲಿ 7 ರನ್ ಸಿಡಿಸಿ ಆಡುತ್ತಿದ್ದ ಇಯೊನ್ ಮೋರ್ಗಾನ್ ಅವರು ಸ್ಯಾಮ್ ಕರ್ರನ್ ಅವರ ಎಸೆತದಲ್ಲಿ ಧೋನಿಯವರಿಗೆ ಕ್ಯಾಚ್ ನೀಡಿ ಹೊರನಡೆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ, ತ್ರಿಪಾಠಿಯವರು ಬಾಲನ್ನು ಬೌಂಡರಿಗೆ ಅಟ್ಟತ್ತಲೇ ಇದ್ದರು. ಪರಿಣಾಮ ಕೋಲ್ಕತ್ತಾ 15 ಓವರ್ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 128 ರನ್ ಕಲೆ ಹಾಕಿತು.

    ನಂತರ ಸ್ಫೋಟಕ ಆಟಗಾರ ಆಂಡ್ರೆ ರಸ್ಸೆಲ್ ಅವರು 15ನೇ ಓವರಿನ ಮೊದಲ ಬಾಲಿನಲ್ಲಿ ಶಾರ್ದುಲ್ ಠಾಕೂರ್ ಅವರ ಬೌಲಿಂಗ್‍ನಲ್ಲಿ 2 ರನ್ ಗಳಿಸಿ ಕೀಪರ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಆರಂಭದಿಂದಲೂ ಸೂಪರ್ ಆಗಿ ಬ್ಯಾಟ್ ಬೀಸಿದ ರಾಹುಲ್ ತ್ರಿಪಾಠಿ 51 ಬಾಲಿಗೆ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ 81 ರನ್ ಸಿಡಿಸಿ 16ನೇ ಓವರಿನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ನಾಯಕ ದಿನೇಶ್ ಕಾರ್ತಿಕ್ ಅವರು ಕೂಡ ಕ್ಯಾಚ್ ನೀಡಿದರು. ನಂತರ ಶಿವಂ ಮಾವಿಯವರ ಔಟ್ ಆದರು.

  • ಇಬ್ಬರು ಡಕ್ ಔಟ್, ಗಿಲ್ ಅರ್ಧಶತಕ – ಕೋಲ್ಕತ್ತಾಗೆ ಮೊದಲ ಸುಲಭ ಜಯ

    ಇಬ್ಬರು ಡಕ್ ಔಟ್, ಗಿಲ್ ಅರ್ಧಶತಕ – ಕೋಲ್ಕತ್ತಾಗೆ ಮೊದಲ ಸುಲಭ ಜಯ

    – ಶುಭಮನ್, ಮೋರ್ಗಾನ್ ಆಟಕ್ಕೆ ತಲೆಬಾಗಿದ ರೈಸರ್ಸ್

    ಶಾರ್ಜಾ: ಯುವ ಆಟಗಾರ ಶುಭಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಫಲದಿಂದ ಕೋಲ್ಕತಾ ನೈಟ್ ರೈಡರ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಕೋಲ್ಕತ್ತಾ ತಂಡ ಐಪಿಎಲ್-2020ಯಲ್ಲಿ ಮೊದಲ ಗೆಲುವು ದಾಖಲಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ವೇಗಿಗಳ ದಾಳಿಗೆ ತತ್ತರಿಸಿ ಹೋಯ್ತು. ಕೊನೆಗೆ ಕನ್ನಡಿಗ ಮನೀಶ್ ಪಾಂಡೆಯವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 143 ರನ್ ಸೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಶುಭಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅವರ ಅದ್ಭುತ ಜೊತೆಯಾಟದಿಂದ ಇನ್ನೂ ಎರಡು ಓವರ್ ಬಾಕಿ ಇರುವಾಗಲೇ 145 ರನ್ ಚಚ್ಚಿದ ಕೋಲ್ಕತ್ತಾ 7 ವಿಕೆಟ್ ಗಳಿಂದ ಜಯ ಸಾಧಿಸಿತು.

    ಇದೇ ವೇಳೆ ಶುಭಮನ್ ಮತ್ತು ಮೋರ್ಗಾನ್, 70 ಬಾಲಿಗೆ 92 ರನ್‍ಗಳ ಉತ್ತಮ ಜೊತೆಯಾಟವಾಡಿದರು. ಇದರಲ್ಲಿ ಮೋರ್ಗಾನ್ ಅವರು 29 ಬಾಲಿಗೆ ಮೂರು ಫೋರ್ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿ ಮಿಂಚಿದರು. ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಗಿಲ್, 62 ಎಸೆತದಲ್ಲಿ 70 ರನ್ ಸಿಡಿಸಿದರು. ಗಿಲ್ ಈ ಇನ್ನಿಂಗ್ಸ್ ನಲ್ಲಿ 5 ಫೋರ್ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ ಕೋಲ್ಕತ್ತಾ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಕೋಲ್ಕತ್ತಾಗೆ ಆರಂಭಿಕ ಆಘಾತ ನೀಡಿದ ಹೈದರಾಬಾದ್ ವೇಗಿ ಖಲೀಲ್ ಅಹ್ಮದ್, ಸೊನ್ನೆ ಸುತ್ತಿ ಸುನಿಲ್ ನರೈನ್ ಪೆವಲಿಯನ್ ಸೇರಿದರು. ನಂತರ ಜೊತೆಯಾದ ಗಿಲ್ ಮತ್ತು ನಿತೀಶ್ ರಾಣಾ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಆದರೆ 4 ಓವರಿನ ನಾಲ್ಕನೇ ಬಾಲಿನಲ್ಲಿ ನಟರಾಜ್ ಅವರಿಗೆ ಔಟ್ ಆಗಿ 13 ಬಾಲಿಗೆ 26 ರನ್ ಗಳಿಸಿದ್ದ ನಿತೀಶ್ ರಾಣಾ ಔಟ್ ಆದರು. ಈ ಮೂಲಕ ಕೋಲ್ಕತ್ತಾ ಆರು ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 52 ರನ್ ಸೇರಿಸಿತ್ತು.

    ನಂತರ ಬಂದ ನಾಯಕ ದಿನೇಶ್ ಕಾರ್ತಿಕ್‍ಗೆ ರಶೀದ್ ಖಾನ್ ಅವರು ಮೂರನೇ ಬಾಲಿನಲ್ಲೇ ಶಾಕ್ ನೀಡಿದರು. ಮೂರು ಬಾಲುಗಳನ್ನು ಎದುರಿಸಿದ ಕಾರ್ತಿಕ್ ಡಾಕ್ ಔಟ್ ಆಗಿ ಹೊರನಡೆದರು. ಈ ಮೂಲಕ ಕೋಲ್ಕತ್ತಾದ ಇಬ್ಬರು ಪ್ರಮುಖ ಬ್ಯಾಟ್ಸ್ ಮ್ಯಾನ್‍ಗಳು ಡಾಕ್ ಔಟ್ ಆದರು. ಮೊದಲಿನಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಶುಭಮನ್ ಗಿಲ್ 42 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.

  • ಅರ್ಧಶತಕ ಸಿಡಿಸಿದ ಕನ್ನಡಿಗ ಮನೀಶ್ ಪಾಂಡೆ – ಕೋಲ್ಕತ್ತಾಗೆ 143 ರನ್‍ಗಳ ಗುರಿ

    ಅರ್ಧಶತಕ ಸಿಡಿಸಿದ ಕನ್ನಡಿಗ ಮನೀಶ್ ಪಾಂಡೆ – ಕೋಲ್ಕತ್ತಾಗೆ 143 ರನ್‍ಗಳ ಗುರಿ

    ಶಾರ್ಜಾ: ಕನ್ನಡಿಗ ಮನೀಶ್ ಪಾಂಡೆ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 143 ರನ್‍ಗಳ ಟಾರ್ಗೆಟ್ ನೀಡಿದೆ.

    ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಮನೀಶ್ ಪಾಂಡೆ ಅರ್ಧಶತಕ ಸಿಡಿಸಿ ಮಿಂಚಿದರು. ವಿಕೆಟ್ ಕಳೆದುಕೊಳ್ಳುತ್ತಿದ್ದ ಹೈದರಾಬಾದ್ ತಂಡಕ್ಕೆ ಆಸರೆಯಾಗಿ ನಿಂತ ಮನೀಶ್, 38 ಎಸೆತದಲ್ಲಿ 51 ರನ್ ಸಿಡಿಸಿ ತಂಡದ ಚೇತರಿಕೆಗೆ ಕಾರಣವಾದರು. ಮನೀಶ್ ಈ ಇನ್ನಿಂಗ್ಸ್ ನಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ವೃದ್ಧಿಮಾನ್ ಸಹಾ ಅವರು 31 ಎಸೆತಕ್ಕೆ 30 ರನ್ ಪೇರಿಸಿದರು.

    ಆರಂಭದಿಂದಲೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬೌಲರ್ ಗಳು ಶಿಶ್ತು ಬದ್ಧದಾಳಿಯನ್ನು ಮಾಡಿದರು. ಹೀಗಾಗಿ ಉತ್ತಮ ಲಯದಲ್ಲಿದ್ದ ಜಾನಿ ಬೈರ್‍ಸ್ಟೋವ್ ಅವರನ್ನು ವೇಗಿ ಪ್ಯಾಟ್ ಕಮ್ಮಿನ್ಸ್ ಅವರು 3ನೇ ಓವರಿನಲ್ಲಿ ಕ್ಲೀನ್ ಬೌಲ್ಡ್ ಮಾಡಿದರು. ನಂತರ ಜೊತೆಯಾದ ಮನೀಶ್ ಪಾಂಡೆ ಮತ್ತು ನಾಯಕ ಡೇವಿಡ್ ವಾರ್ನರ್ ಅವರು ತಾಳ್ಮೆಯಿಂದ ಜೊತೆಯಾಟವಾಡಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯಕ್ಕೆ ಹೈದರಾಬಾದ್ ಒಂದು ವಿಕೆಟ್ ಕಳೆದುಕೊಂಡು 40 ರನ್ ಸೇರಿಸಿತು.

    ನಂತರ ವಾರ್ನರ್ ಮತ್ತು ಪಾಂಡೆ ಮಂದಗತಿಯ ಆಟವಾಡಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಮೋಡಿಗೆ 30 ಎಸೆತಗಳಲ್ಲಿ 36 ರನ್ ಗಳಿಸಿದ್ದ ವಾರ್ನರ್ ಅವರು ಸಿಂಪಲ್ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ನಂತರ ವೃದ್ಧಿಮಾನ್ ಸಹಾ ಕಣ್ಣಕ್ಕಿಳಿದರು, ಸಹಾ ಮತ್ತು ಪಾಂಡೆ ಸೇರಿಕೊಂಡು 12 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 76ಕ್ಕೆ ಏರಿಸಿದರು.

    ಇದೇ ವೇಳೆ ಸಹಾ ಮತ್ತು ಪಾಂಡೆ ಅರ್ಧಶತಕದ ಜೊತೆಯಾಟವಾಡಿದರು. ಈ ಜೋಡಿ 41 ಬಾಲಿಗೆ 51 ರನ್ ಸಿಡಿಸಿತು. ಹೀಗಾಗಿ 16 ಓವರ್ ಮುಕ್ತಾಯದ ವೇಳೆಗೆ ಹೈದರಾಬಾದ್ ತಂಡ ಎರಡು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ಜೊತೆಗೆ 35 ಎಸೆತಗಳಲ್ಲಿ ಮನಿಷ್ ಪಾಂಡೆಯವರು ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ಆಂಡ್ರೆ ರಸ್ಸೆಲ್ ಅವರ ಬೌಲಿಂಗ್‍ಗೆ ಸುಲಭ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಸಹಾ ರನ್ ಔಟ್ ಆದರು.