Tag: ಕೋಲು

  • ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ಗೆಳತಿಗೆ ಕೋಲಿನಿಂದ ಥಳಿಸಿ ಕೊಂದ

    ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ಗೆಳತಿಗೆ ಕೋಲಿನಿಂದ ಥಳಿಸಿ ಕೊಂದ

    ರಾಯ್ಪುರ್‌: ಗೆಳೆಯನೊಬ್ಬ ತನ್ನ ಗೆಳತಿಗೆ (Girlfriend) ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೋಲಿನಿಂದ ಥಳಿಸಿ ಕೊಂದ ಘಟನೆ ಛತ್ತಿಸ್‌ಗಢದ (Chhattisgarh) ಧಮ್ತಾರಿ ಜಿಲ್ಲೆಯಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ರೇಶಮಿ ಸಾಹು (25) ಎಂದು ಗುರುತಿಸಲಾಗಿದೆ. ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ಟೀ ಸ್ಟಾಲ್‌ನಲ್ಲಿ ಈ ಘಟನೆ ನಡೆದಿದೆ. ರೇಶಮಿ ಜೀವನೋಪಾಯಕ್ಕಾಗಿ ಮಗರ್‌ಲೋಡ್ ನಗರ ಪಂಚಾಯತ್ ಕಚೇರಿ ಬಳಿ ಟೀ ಸ್ಟಾಲ್‌ ನಡೆಸುತ್ತಿದ್ದಳು. ಈಕೆಗೆ ಖಿಸೋರಾ ಗ್ರಾಮದ ನಿವಾಸಿಯೊಬ್ಬನ ಪರಿಚಯವಾಗಿ ಪ್ರೀತಿಗೆ ಬದಲಾಗಿತ್ತು. ಇಬ್ಬರು 4 ವರ್ಷದಿಂದ ಸಂಬಂಧವನ್ನು ಹೊಂದಿದ್ದರು.

    ಆದರೆ ರೇಶಮಿಯ ಗೆಳೆಯ ಆಕೆಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದ. ಅಷ್ಟೇ ಅಲ್ಲದೇ ಈ ವಿಷಯಕ್ಕೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಜಗಳ ತೀವ್ರಗೊಂಡಿದ್ದು, ರೇಶಮಿ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ಅದಾದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮಹಾ-ಕರ್ನಾಟಕ ಗಡಿ ವಿವಾದ; ಇಂದು ಮುಖಾಮುಖಿಯಾಗ್ತಾರೆ ಎರಡೂ ರಾಜ್ಯಗಳ ಸಿಎಂ

    CRIME 2

    ಆತ ನಡೆಸಿದ ಹಲ್ಲೆಯಿಂದಾಗಿ ತಲೆಗೆ ಗಂಭೀರ ಗಾಯವಾಗಿತ್ತು. ರೇಶಮಿಯಾಳ ತಲೆಗೆ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿ ಮಗರಲೋಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (Arrest) ಇದನ್ನೂ ಓದಿ:  ಬೆಳಗಾವಿಯ ಲಾಡ್ಜ್‌ನಲ್ಲಿ ವ್ಯಕ್ತಿ ಅನುಮಾನಸ್ಪದವಾಗಿ ಸಾವು

    Live Tv
    [brid partner=56869869 player=32851 video=960834 autoplay=true]

  • ಶ್ವಾನದ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಖಾಸಗಿ ಅಂಗಕ್ಕೆ ಕೋಲು ತುರುಕಿದ ಪಾಪಿಗಳು!

    ಶ್ವಾನದ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಖಾಸಗಿ ಅಂಗಕ್ಕೆ ಕೋಲು ತುರುಕಿದ ಪಾಪಿಗಳು!

    – 11 ಇಂಚಿನ ಕೋಲು ಹೊರತೆಗೆದ ವೈದ್ಯರು
    – ಸಾವು- ಬದುಯಕಿನ ಮಧ್ಯೆ ನೂರಿ ಹೋರಾಟ

    ಮುಂಬೈ: ಪ್ರಾಣಿ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ಮುಂಬೈನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

    ಹೌದು. 8 ವರ್ಷದ ನೂರಿ ಎಂಬ ಹೆಣ್ಣು ಶ್ವಾನದ ಮೇಲೆ ಪಾಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮುಂಬೈನ ಪೊವಾಯ್ ಶಾಪಿಂಗ್ ಕಾಂಪ್ಲೆಕ್ಸ್ ಒಳಗಡೆ ಈ ಆಘಾತಕಾರಿ ಘಟನೆ ನಡೆದಿದೆ.

    ಮಹಿಳೆಯೊಬ್ಬರು ಪ್ರಾಣಿಗಳಿಗೆ ಪ್ರತಿದಿನ ಆಹಾರ ಮತ್ತು ಔಷಧಿ ನೀಡುತ್ತಿದ್ದಾರೆ. ಹೀಗೆ ಅವರು ಗುರುವಾರ ಬಂದಾಗ ನಾಯಿಯ ಖಾಸಗಿ ಅಂಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ಸ್ಥಳೀಯ ಪಶು ವೈದ್ಯರ ಬಳಿ ಶ್ವಾನವನ್ನು ಕರೆದುಕೊಂಡು ಹೋಗಿದ್ದಾರೆ.

    ಪರೀಕ್ಷೆ ನಡೆಸಿದ ವೈದ್ಯರು ಯಾವುದೋ ಒಂದು ಬಲವಾದ ವಸ್ತು ಶ್ವಾನದ ದೇಹದೊಳಗೆ ಹೊಕ್ಕಿದೆ. ಪರಿಣಾಮ ಈ ರೀತಿ ರಕ್ತಸ್ರಾವವಾಗುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಅಲ್ಲದೆ ಕಿಡಿಗೇಡಿಗಳು ಶ್ವಾನದ ಖಾಸಗಿ ಅಂಗದ ಮೂಲಕ 11 ಇಂಚಿನ ಕೋಲು ತುರುಕಿರುವುದು ಬೆಳಕಿಗೆ ಬಂದಿದ್ದು, ಅದನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.

    ನೂರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ದೇವಿ ಶೆತ್ ಮಾಧ್ಯಮಗಳ ಜೊತೆ ಮಾತನಾಡಿ, ಆಕೆ(ಶ್ವಾನ) ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕರೆದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರಿಂದ ಆಕೆ ನೋವಿನಿಂದ ಬಳಲುತ್ತಿರುವುದು ಗಮನಕ್ಕೆ ಬಂತು. ನಾನು ಆಕೆಯ ಸ್ಥಿತಿಯನ್ನು ನೋಡಿದ ಸಂದರ್ಭದಲ್ಲಿ ಆಕೆಯ ಬಳಿಯಿಂದಲೇ ಹಲವಾರು ಮಂದಿ ಓಡಾಡುತ್ತಿದ್ದರು. ಬೀದಿ ನಾಯಿಗಳ ಮೇಲೂ ನಮಗೆ ಜವಾಬ್ದಾರಿ ಇದೆ. ಆದರೆ ಆಕೆ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದರೂ, ಆಕೆಗೆ ಏನೂ ಆಗಿಲ್ಲ ಎಂಬಂತೆ ಜನ ವರ್ತಿಸಿದರು. ಈ ಮೂಲಕ ಅವುಗಳನ್ನು ಜನ ತಿರಸ್ಕರಿಸುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಸದ್ಯ ನೂರಿಯ ಖಾಸಗಿ ಅಂಗದಿಂದ ಕೋಲನ್ನು ಹೊರತೆಗೆದಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಯಾಕೆಂದರೆ ಆಕೆಯ ಕರುಳಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ದೇಹದ ಇತರ ಅಂಗಗಳು ಕೂಡ ಹಾನಿಗೊಳಗಾಗಿವೆ. ಹೀಗಾಗಿ ಆಕೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಇತ್ತ ಆಕೆಯ ಜೀವ ಉಳಿಸಲು ಎನ್‍ಜಿಓ ಒಂದು ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿದೆ ಎಂದು ದೇವಿ ತಿಳಿಸಿದರು.

    ಘಟನೆ ಸಂಬಂಧ ಪೊವಾಯ್ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 377(ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.