Tag: ಕೋಲಾರ

  • Kolar | ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಕಾರು ಅಪಘಾತ – ತಾಯಿ ಸಾವು, ಮಗ ಗಂಭೀರ

    Kolar | ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಕಾರು ಅಪಘಾತ – ತಾಯಿ ಸಾವು, ಮಗ ಗಂಭೀರ

    ಕೋಲಾರ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಹೈವೇಯಲ್ಲಿ (Chennai-Bengaluru Expressway) ಭೀಕರ ಕಾರು ಅಪಘಾತವಾದ ಪರಿಣಾಮ ಕಾರಿನಲ್ಲಿದ್ದ ತಾಯಿ ಸಾವನ್ನಪ್ಪಿದ್ದು, ಮಗ ಗಂಭೀರ ಗಾಯಗೊಂಡ ಘಟನೆ ಕೋಲಾರ (Kolar) ಜಿಲ್ಲೆ ಮಾಲೂರು (Malur) ತಾಲೂಕಿನ ಆನೇಪುರ ಗ್ರಾಮದ ಬಳಿ ನಡೆದಿದೆ.

    ಕೆಜಿಎಫ್ ಮೂಲದ ಪುಷ್ಪಲತಾ (70) ಮೃತ ಮಹಿಳೆ. ಘಟನೆಯಲ್ಲಿ ಪುಷ್ಪಲತಾ ಪುತ್ರ ಮಂಜುನಾಥ್ ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ 3ನೇ ವ್ಯಕ್ತಿಯ ಪಾತ್ರವಿಲ್ಲ – ಮೋದಿ

    ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. ಇದನ್ನೂ ಓದಿ: ಕೆಸಿಇಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸುಮಂತ್ ರಾಜ್ಯಕ್ಕೆ 4ನೇ ರ‍್ಯಾಂಕ್

  • Kolar | ವಿದ್ಯುತ್ ತಂತಿ ಸ್ಪರ್ಶಿಸಿ ಸಾರಿಗೆ ನೌಕರ ಸಾವು

    Kolar | ವಿದ್ಯುತ್ ತಂತಿ ಸ್ಪರ್ಶಿಸಿ ಸಾರಿಗೆ ನೌಕರ ಸಾವು

    ಕೋಲಾರ: ಗಾಳಿ ಮಳೆಯಿಂದ ವಿದ್ಯುತ್ ಕಂಬ ನೆಲಕ್ಕುರಳಿದ್ದನ್ನು ಗಮನಿಸದೇ ಬೈಕ್ ಚಾಲನೆ ಮಾಡಿದ ಸಾರಿಗೆ ನೌಕರ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ರಾಜೇಂದ್ರ ಹಳ್ಳಿಯಲ್ಲಿಂದು ಮುಂಜಾನೆ ಈ ಘಟನೆ ನಡೆದಿದ್ದು, ಗ್ರಾಮದ ರೆಡ್ಡಪ್ಪ (58) ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಕಳೆದ ರಾತ್ರಿ ಬಿರುಗಾಳಿ ಮಳೆಯಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿದ್ದವು. ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಇಂದು ಮುಂಜಾನೆ ಎದ್ದು ಎಂದಿನಂತೆ ತೋಟಕ್ಕೆ ತೆರಳುವ ವೇಳೆ ಬೈಕ್‌ಗೆ ತಂತಿ ಸ್ಪರ್ಶವಾಗಿ ರೆಡ್ಡಪ್ಪ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಮಾನ, ಮರ್ಯಾದೆ ಇದ್ರೆ ಕೂಡ್ಲೇ ಮಂಜುನಾಥ್ ಉಚ್ಚಾಟಿಸಿ: ಶರಣು ಸಲಗರ್

    ರೆಡ್ಡಪ್ಪ ಮುಳಬಾಗಿಲು ಕೆಎಸ್‌ಆರ್‌ಟಿಸಿ ಘಟಕದಲ್ಲಿ ಸಂಚಾರಿ ನಿಯಂತ್ರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಬೆಸ್ಕಾಂ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ವಿದ್ಯುತ್ ತಂತಿಗಳ ತೆರವು ಕಾರ್ಯ ಮಾಡಲಾಗಿದೆ. ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ ಎಂದು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊತ್ತೂರು ಮಂಜುನಾಥ್ ಅಬ್‌ನಾರ್ಮಲ್ ಪರ್ಸನ್, ಕಾಂಗ್ರೆಸ್ ಸಸ್ಪೆಂಡ್ ಮಾಡ್ಬೇಕು: ಎನ್.ಮಹೇಶ್ ಆಗ್ರಹ

  • ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ: ಮಂಜುನಾಥ್ ಸ್ಪಷ್ಟನೆ

    ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ: ಮಂಜುನಾಥ್ ಸ್ಪಷ್ಟನೆ

    ಕೋಲಾರ: ಆಪರೇಷನ್ ಸಿಂಧೂರದ(Operation Sindoor) ಹಾಗೂ ಸೇನೆ ಬಗ್ಗೆ ಹಗುರವಾಗಿ ಮಾತನಾಡಿದಲ್ಲ. ಆಪರೇಷನ್ ಸಿಂಧೂರ ಯಾರಿಗೂ ಸಮಾಧಾನ ತಂದಿಲ್ಲ ಎಂದು ಹೇಳಿದ್ದು ಎಂದು ಶಾಸಕ ಕೊತ್ತೂರು ಮಂಜುನಾಥ್(Kothur Manjunath) ಸ್ಪಷ್ಟನೆ ನೀಡಿದರು.

    ಕೋಲಾರದಲ್ಲಿ(Kolar) ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಾರ್ವಜನಿಕರು ಸೇರಿ ಬಿಜೆಪಿ ನಾಯಕರಿಗೂ ಇದು ಸಮಧಾನ ಇಲ್ಲ. ಸಾರ್ವಜನಿಕರ ಮುಂದೆಯೇ ಉಗ್ರರನ್ನ ನೆಲಸಮ ಮಾಡಬೇಕು ಅನ್ನೋದು ನಮ್ಮ ಉದ್ದೇಶ ಎಂದರು. ಇದನ್ನೂ ಓದಿ: ಇಡೀ ದೇಶ, ಸೇನೆ, ಸೈನಿಕರು ಮೋದಿ ಪಾದಗಳಿಗೆ ನಮಸ್ಕರಿಸುತ್ತಾರೆ: ಡಿಸಿಎಂ ವಿವಾದಾತ್ಮಕ ಹೇಳಿಕೆ

    ಪಹಲ್ಗಾಮ್‌ಗೆ ಬಂದು ನಮ್ಮ ಹೆಣ್ಣುಮಕ್ಕಳ ಮುಂದೆ ದಾಳಿ ಮಾಡ್ತಾರೆ ಎಂದರೆ ಹೇಗೆ. ನಮ್ಮ ಸೇನೆ ಬಲಿಷ್ಟವಾಗಿದೆ ಎಂಬುದು ಆಪರೇಷನ್ ಸಿಂಧೂರದಿಂದ ತಿಳಿದಿದೆ. ಇಂತಹ ಶಕ್ತಿವಂತ ದೇಶದ ಮೇಲೆ ಪದೇಪದೇ ದಾಳಿಗಳಾಗುತ್ತವೆ ಎಂದರೆ ಅದು ಹೇಗೆ ಸಾಧ್ಯ. ಅದಕ್ಕೆ ಸೇನೆಗೆ ಫ್ರೀ ಹ್ಯಾಂಡ್ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಟರ್ಕಿಗೆ ಬೆಂಗಳೂರು ಶಾಕ್‌ – ಸೆಲೆಬಿ ಏವಿಯೇಷನ್‌ ಏರ್‌ಪೋರ್ಟ್‌ ಸೇವೆ ಸ್ಥಗಿತ

    ಪಹಲ್ಗಾಮ್ ದಾಳಿಗೆ(Pahalgam Attack) ಕಾರಣರಾದ ಉಗ್ರಗಾಮಿಗಳನ್ನ ಹೊಡೆಯಬೇಕು. ಇಲ್ಲಿರುವ ಉಗ್ರರನ್ನ ಮೊದಲಿಗೆ ಹೊಡೆಯಬೇಕು. ಆದರೆ ಎಲ್ಲೋ ಹೊಡೆದಿದ್ದೇವೆ ಅನ್ನೋದೆ ನಮಗೆ ಬೇಸರ. ನಮ್ಮ ನಿರೀಕ್ಷೆ ಹುಸಿಯಾಗಿದೆ. ಮತ್ತಷ್ಟು ದಾಳಿಯ ನಿರೀಕ್ಷೆ ಇತ್ತು ಎಂದರು.

  • ಕೋಲಾರ | ಸರ್ವೇ ಸೂಪರ್‌ವೈಸರ್ ಮನೆ ಮೇಲೆ ಲೋಕಾ ದಾಳಿ – 8.18 ಕೋಟಿ ಮೌಲ್ಯದ ಆಸ್ತಿ ಪತ್ತೆ

    ಕೋಲಾರ | ಸರ್ವೇ ಸೂಪರ್‌ವೈಸರ್ ಮನೆ ಮೇಲೆ ಲೋಕಾ ದಾಳಿ – 8.18 ಕೋಟಿ ಮೌಲ್ಯದ ಆಸ್ತಿ ಪತ್ತೆ

    – ಆದಾಯಕ್ಕಿಂತ 145% ಹೆಚ್ಚಿನ ಆಸ್ತಿ ಗಳಿಕೆ

    ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕೋಲಾರ ತಾಲೂಕು ಭೂ ದಾಖಲೆಗಳ ಇಲಾಖೆಯ ಸರ್ವೇ ಸೂಪರ್‌ವೈಸರ್ ಸುರೇಶ್ ಬಾಬುಗೆ ನಾಲ್ಕು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಲೋಕಾಯುಕ್ತ ದಾಳಿ ನಡೆಸಿದೆ. ಗುರುವಾರ ಮಧ್ಯ ರಾತ್ರಿವರೆಗೂ ಮಾಲೂರು, ಕೋಲಾರ, ಹೊಸಕೋಟೆ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರ ಅಧಿಕೃತ ಗಳಿಕೆಗಿಂತ 145% ರಷ್ಟು ಅಂದರೆ ಸುಮಾರು 8.18 ಕೋಟಿ ರೂ.ಗೂ ಅಧಿಕ ಆಸ್ತಿ ಪತ್ತೆಯಾಗಿದೆ.

    ಸುರೇಶ್ ಬಾಬು ಮತ್ತು ಅವರ ಅಪ್ತರ 6 ಕಡೆಗಳಲ್ಲಿ ದಾಳಿ ನಡೆದಿದ್ದು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಲೋಕಾಯುಕ್ತ ಸಿಬ್ಬಂದಿಯನ್ನು ದಾಳಿಗೆ ಬಳಸಿಕೊಳ್ಳಲಾಗಿತ್ತು. ಇದನ್ನೂ ಓದಿ: ʻಆಪರೇಷನ್ ಅಭ್ಯಾಸ್ʼ – KRS ನಲ್ಲಿ ಮೇ 11 ರಂದು ಮಾಕ್ ಡ್ರಿಲ್

    ದಾಳಿಯ ವೇಳೆ ಸುಮಾರು 30 ಲಕ್ಷ ರೂ. ಮೌಲ್ಯದ 3 ನಿವೇಶನಗಳು, 2.81 ಕೋಟಿ ರೂ. ಮೌಲ್ಯದ ಐದು ಮನೆಗಳು, 3.38 ಕೋಟಿ ರೂ. ಬೆಲೆಯ ಐದು ಕೃಷಿ ಭೂಮಿ ಸೇರಿದಂತೆ ಒಟ್ಟು 6.50 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಅದೇ ರೀತಿ 3 ಲಕ್ಷ ರೂ. ನಗದು ಹಣ, 18.24 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣ, 80 ಲಕ್ಷ ರೂ. ಬೆಲೆಯ 9 ವಾಹನಗಳು ಹಾಗೂ ಇತರೆ 66.87 ಲಕ್ಷ ರೂ. ಮೌಲ್ಯದ ವಸ್ತುಗಳು ಸೇರಿದಂತೆ ಒಟ್ಟು 1.68 ಕೋಟಿ ರೂ. ಚರಾಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಗಡಿಯಲ್ಲಿ ಬುಲ್ಡೋಜರ್ ಘರ್ಜನೆ – 28 ಮದರಸಾ, 9 ಮಸೀದಿ, 6 ದೇವಾಲಯ, 1 ಈದ್ಗಾ ನೆಲಸಮ

    ಚರ ಮತ್ತು ಸ್ಥಿರಾಸ್ತಿಗಳ ಒಟ್ಟು ಮೊತ್ತ 8.18 ಕೋಟಿ ರೂ.ಗಳಾಗಿದ್ದು, ಇದು ಅವರ ಆದಾಯಕ್ಕಿಂತ 145% ರಷ್ಟು ಹೆಚ್ಚಾಗಿದೆ. ಇದನ್ನು ಆದಾಯ ಮೀರಿದ ಅಕ್ರಮ ಆಸ್ತಿ ಎಂದು ಪರಿಗಣಿಸಿ ಲೋಕಾಯುಕ್ತದಲ್ಲಿ ಕೇಸು ದಾಖಲಿಸಲಾಗಿದೆ. ಕೋಲಾರದಲ್ಲಿರುವ ಸುರೇಶ್ ಬಾಬು ಮನೆ ಮತ್ತು ಕಚೇರಿ, ಮಾಲೂರು ತಾಲೂಕು ನಿಡಘಟ್ಟದಲ್ಲಿರುವ ಅವರ ಮನೆ ಮತ್ತು ಜಮೀನುಗಳು ಹಾಗೂ ಸ್ನೇಹಿತರ ಮನೆ ಸೇರಿ 6 ಕಡೆಗಳಲ್ಲಿ ಗುರುವಾರ ಇಡೀ ದಿನ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನ ಸ್ಥಿತಿ; ದೆಹಲಿ ಏರ್‌ಪೋರ್ಟ್‌ನಲ್ಲಿ 138 ವಿಮಾನ ಹಾರಾಟ ರದ್ದು

    ಸುರೇಶ್ ಬಾಬು ಅವರ ಇಬ್ಬರು ಅಣ್ಣಂದಿರ ಮನೆ, ತಮ್ಮ ವೈದ್ಯನ ಮನೆ, ಗೆಳೆಯನಾದ ನಿವೃತ್ತ ಪಿಡಿಒ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿತ್ತು. ನಾಲ್ಕು ತಿಂಗಳ ಹಿಂದೆಯಷ್ಟೆ ಸುರೇಶ್ ಬಾಬು ಮನೆ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ನೂರಾರು ಸರ್ಕಾರಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ಇನ್ನೂ ಮುಂದುವರೆದಿರುವಾಗಲೇ ಆದಾಯ ಮೀರಿದ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಗುರುವಾರ ಎರಡನೇ ದಾಳಿ ನಡೆಸಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಯಶಸ್ವಿಯಾಗಲೆಂದು ವೀರೇಂದ್ರ ಹೆಗ್ಗಡೆ ವಿಶೇಷ ಪೂಜೆ

  • ಭಾರತೀಯ ಯೋಧರಿಗೆ ಶಕ್ತಿ ತುಂಬಲು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

    ಭಾರತೀಯ ಯೋಧರಿಗೆ ಶಕ್ತಿ ತುಂಬಲು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

    – ವೀರ ಯೋಧರಿಗೆ ಹೋರಾಡಲು ಅಲ್ಲಾ ಶಕ್ತಿ ನೀಡಿಲಿ ಎಂದು ಪ್ರಾರ್ಥಿಸಿದ ಮುಸ್ಲಿಂ ಬಾಂಧವರು

    ಬೀದರ್/ಕೋಲಾರ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರಿಗೆ ಶಕ್ತಿ ತುಂಬಲು ಇಂದು ಮಸೀದಿಗಳಲ್ಲಿ (Mosque) ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಗಡಿ ಜಿಲ್ಲೆ ಬೀದರ್‌ನಲ್ಲಿ ವಕ್ಫ್‌ಗೆ ಸೇರಿದ ಹಾಗೂ ಇತರೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಜಾಮಿಯಾ, ಅಬ್ಧುಲ್ ಫೈಜಾ ಮಸೀದಿ ಸೇರಿದಂತೆ ಎಲ್ಲಾ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಬೀದರ್‌ನ ಚಿದ್ರಿ, ಓಲ್ಡ್ ಸಿಟಿ, ನ್ಯೂ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಇಡೀ ದೇಶದ ಸ್ವಾಭಿಮಾನ, ಧೈರ್ಯ ಹೆಚ್ಚಿಸಿದೆ: ಆರ್‌ಎಸ್‌ಎಸ್

    ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ ಶಾಂತಿಯ ಸಂದೇಶ ನೀಡುತ್ತಿರುವ ಭಾರತೀಯ ವೀರ ಯೋಧರಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಪರೇಷನ್ ಸಿಂಧೂರ ಮೂಲಕ ಭಾರತೀಯ ಯೋಧರು ತಮ್ಮ ತಾಕತ್ತು ತೋರಿಸಿದ್ದು, ಭಾರತ ಇಂದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ವೀರ ಯೋಧರಿಗೆ ಅಲ್ಲಾ ಹೋರಾಡಲು ಶಕ್ತಿ ನೀಡಿಲಿ ಎಂದು ಮಸೀದಿಯ ಪ್ರಾರ್ಥನೆ ವೇಳೆ ಮೌಲ್ವಿ ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಉಗ್ರರ ನಾಶಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಭಾರತ ಸೇನೆಗೆ 10 ಲಕ್ಷ ದೇಣಿಗೆ

    ಇನ್ನು ದೇಶದ ಸೈನ್ಯ ಮತ್ತು ಸೈನಿಕರ ಆರೋಗ್ಯಕ್ಕೆ ಕೊಲಾರದ ಹಲವು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮುಸ್ಲಿಂ ಸಮುದಾಯದವರು ಶುಭ ಹಾರೈಸಿದರು. ಶುಕ್ರವಾರದ ಸಾಮೂಹಿಕ ನಮಾಜ್‌ನಲ್ಲಿ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ ಮಾಡಿ ಪಾಕಿಸ್ತಾನದ ವಿರುದ್ಧ ಸೈನಿಕರಿಗೆ ಶಕ್ತಿ ನೀಡಲು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ; ಚಂಡೀಗಢ ಸರ್ಕಾರದಿಂದ 2 ತಿಂಗಳು ಪಟಾಕಿ ಬ್ಯಾನ್

  • Kolar | ಸರ್ವೇ ಸೂಪರ್‌ವೈಸರ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

    Kolar | ಸರ್ವೇ ಸೂಪರ್‌ವೈಸರ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

    – ಚಿತ್ರದುರ್ಗ, ದಾವಣಗೆರೆಯಲ್ಲೂ ಲೋಕಾ ದಾಳಿ

    ಕೋಲಾರ: ಸರ್ವೇ ಸೂಪರ್‌ವೈಸರ್ (Survey Superviosr) ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರದ ಜಿಲ್ಲಾಧಿಕಾರಿ ಕಚೇರಿ ಭೂ ದಾಖಲೆಗಳ ವಿಭಾಗದ ಸರ್ವೇ ಸೂಪರ್ ವೈಸರ್ ಸುರೇಶ್ ಬಾಬುಗೆ ಸೇರಿದ 6 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ಬರು ಅಣ್ಣಂದಿರ ಮನೆ, ತಮ್ಮನ ಮನೆ, ನಿವೃತ್ತ ಪಿಡಿಓ ಹಾಗೂ ಪಿಡಿಓ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೇ ಅಣ್ಣಂದಿರಾದ ಲಕ್ಷ್ಮೀ ನಾರಾಯಣ, ವಿಜಯ್ ಕುಮಾರ್ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಿಡುಘಟ್ಟ ಗ್ರಾಮದ ಮನೆಗೆ ಲೊಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರದ ವೈದ್ಯ ಪ್ರಸನ್ನಕುಮಾರ್ ಮನೆ, ಕೋಲಾರ ನಗರದ ನಿವೃತ್ತ ಪಿಡಿಓ ನಾಗರಾಜ್ ಮನೆ ಹಾಗೂ ಸರ್ವೇ ಸೂಪರ್‌ವೈಸರ್ ಸುರೇಶ್ ಬಾಬು ಮನೆ ಸೇರಿ 6 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಮೇ 11ರಂದು ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ – ಪಾಕ್‌ಗೆ ಶುರುವಾಯ್ತು ನಡುಕ

    ಕಳೆದ 6 ತಿಂಗಳ ಹಿಂದೆಯಷ್ಟೆ ಒಂದು ಲೋಕಾಯುಕ್ತ ದಾಳಿ ನಡೆದಿತ್ತು. ಹಣ ಸೇರಿದಂತೆ ಸರ್ಕಾರಿ ಆಸ್ತಿ ಪತ್ರಗಳು, ಹಲವು ದಾಖಲೆಗಳು ಸಿಕ್ಕಿತ್ತು. ಮತ್ತೆ ಹಲವು ದೂರುಗಳು ಬಂದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನು ಜಗತ್ತಿಗೆ ವಿವರಿಸಿದ್ದ ಕರ್ನಲ್ ಸೋಫಿಯಾ ಬೆಳಗಾವಿಯ ಸೊಸೆ!

    ಇನ್ನು ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿಮುಟ್ಟಿಸಿದ್ದಾರೆ. ದಾವಣಗೆರೆ ನಗರ ನೀರು ಸರಬರಾಜು ಇಲಾಖೆಯ ಸಹಾಯಕ ಇಂಜಿನಿಯರ್ ಬಿ.ರವಿ ಕಚೇರಿ ಹಾಗೂ ಅವರ ತಾಯಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆ ಬಕ್ಕೇಶ್ವರ ಶಾಲೆ ಬಳಿ ಇರುವ ಕಚೇರಿ ಹಾಗೂ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಇರುವ ಅವರ ತಾಯಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್ಪಿ ಕಲಾವತಿ ತಂಡದಿಂದ ದಾಳಿ ನಡೆಸಲಾಗಿದೆ. ಅಲ್ಲದೇ ಚಿತ್ರದುರ್ಗದಲ್ಲಿರುವ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗದ ಹಳೇ ಬೆಂಗಳೂರು ರಸ್ತೆಯಲ್ಲಿನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಫೇಲ್‌ ಬಗ್ಗೆ ಸುಳ್ಳು ಹೇಳಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕಿಸ್ತಾನ!

  • ಸೈನಿಕರಿಗೆ ಮೋದಿ ಆತ್ಮಸ್ಥೈರ್ಯ, ಉಗ್ರರಿಗೆ ಇದು ಎಚ್ಚರಿಕೆ: ಬಿ.ವೈ ವಿಜಯೇಂದ್ರ

    ಸೈನಿಕರಿಗೆ ಮೋದಿ ಆತ್ಮಸ್ಥೈರ್ಯ, ಉಗ್ರರಿಗೆ ಇದು ಎಚ್ಚರಿಕೆ: ಬಿ.ವೈ ವಿಜಯೇಂದ್ರ

    ಕೋಲಾರ: ಮೋದಿಯವರ ದಿಟ್ಟ ನಾಯಕತ್ವದಿಂದ ನಮ್ಮ ದೇಶದ ಯೋಧರಿಗೆ ದೊಡ್ಡ ಶಕ್ತಿ ತಂದುಕೊಟ್ಟಿದೆ. ಹಾಗಾಗಿ ಇಂದು ಯೋಧರು ನಿರ್ಭೀತಿಯಿಂದ ಉಗ್ರರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ(B Y Vijayendra) ಹೇಳಿದರು.

    ಕೋಲಾರದ(Kolar) ಜನಾಕ್ರೋಶ ರ‍್ಯಾಲಿಗೂ ಮುನ್ನ ಕೋಲಾರಮ್ಮ ದೇವಾಲಯದಲ್ಲಿ `ಆಪರೇಷನ್ ಸಿಂಧೂರ'(Operation Sindoor) ಯಶಸ್ವಿಯಾದ ಹಿನ್ನಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಉಗ್ರರ ಮೇಲೆ ಕಳೆದ ರಾತ್ರಿಯಿಂದ ದಾಳಿ ಆರಂಭವಾಗಿದೆ. ಯಶಸ್ಸು ಸಿಗಲಿ ಎಂದು ತಾಯಿ ಕೋಲಾರಮ್ಮ ಬಳಿ ಪ್ರಾರ್ಥನೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಆಪರೇಷನ್ ಸಿಂಧೂರ | ಇದು ಭಾರತೀಯ ಸೇನೆಯ ನಿಜವಾದ ಮುಖ: ಶಿವಕಾರ್ತಿಕೇಯನ್

    ದೇಶದಲ್ಲಿ ಈ ಕಾಂಗ್ರೆಸ್‌ನ ದ್ವಂದ್ವ ಮತ್ತು ದೇಶ ವಿರೋಧಿ ನೀತಿಯಿಂದ ಉಗ್ರಗಾಮಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಕಾಂಗ್ರೆಸ್‌ನ ಈ ನೀತಿಯಿಂದಲೇ ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಹಿಂದೂ ಕುಟುಂಬಗಳು ಮನೆ ಮಠ ಕಳೆದುಕೊಂಡಿದ್ದಾರೆ. ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಿಯಲ್ ಹೀರೋಗಳು ನೀವೇ – ‘ಆಪರೇಷನ್ ಸಿಂಧೂರ’ಕ್ಕೆ ಮಮ್ಮುಟ್ಟಿ ಮೆಚ್ಚುಗೆ

    ನಮಗೆ ಸಂಪೂರ್ಣ ವಿಶ್ವಾಸ ಇದೆ. ಉಗ್ರಗಾಮಿಗಳ ವಿರುದ್ಧ ಹೋರಾಟದಲ್ಲಿ ಯಶಸ್ಸು ಸಿಗುತ್ತದೆ. ಇಂತಹ ಯುದ್ಧದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬೆಂಬಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನವರು ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲಿಸಬಾರದು. ದೇಶದ ಪರ ಗಟ್ಟಿಯಾಗಿ ನಿಲ್ಲಬೇಕು ಎಂದರು. ಇದನ್ನೂ ಓದಿ: LIVE – ʼಆಪರೇಷನ್‌ ಅಭ್ಯಾಸ್ʼ ಹೆಸರಲ್ಲಿ ದೇಶಾದ್ಯಂತ ಮಾಕ್‌ ಡ್ರಿಲ್‌

    ಯುದ್ಧದ ಸಂದರ್ಭದಲ್ಲಿ ಕಾಂಗ್ರೆಸ್‌ನವರ(Congress) ಶಾಂತಿ ಸ್ಥಾಪನೆ ನಿಲುವು ಸರಿಯಲ್ಲ. ಇದನ್ನು ಬದಿಗಿಟ್ಟು ಸೈನಿಕರ ಪರವಾಗಿ ನಿಲ್ಲಬೇಕು. ನಮ್ಮ ಯೋಧರು ಪಾಕಿಸ್ತಾನದ ವಿರುದ್ಧ ಹೋರಾಟ ಆರಂಭಿಸಿದ್ದು, ಈ ಯುದ್ಧದಲ್ಲಿ ಭಾರತಕ್ಕೆ ವಿಜಯ ಸಿಗಬೇಕು. ಉಗ್ರರು ಇಡೀ ಜಗತ್ತಿಗೆ ಮಾರಕವಾಗಿ ರಕ್ತದೋಕುಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವ ದಿಟ್ಟ ನಿರ್ಧಾರವನ್ನು ಮೋದಿಯವರು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

  • ಪಾಕಿಸ್ತಾನಕ್ಕೆ ಒಂದೇ ಒಂದು ಟೊಮ್ಯಾಟೊ ನೀಡಲ್ಲ – ಕೋಲಾರ ರೈತರ ಶಪಥ

    ಪಾಕಿಸ್ತಾನಕ್ಕೆ ಒಂದೇ ಒಂದು ಟೊಮ್ಯಾಟೊ ನೀಡಲ್ಲ – ಕೋಲಾರ ರೈತರ ಶಪಥ

    ಕೋಲಾರ: ಪಹಲ್ಗಾಮ್‌ ಉಗ್ರ ದಾಳಿ (Pahalgam Terror Attack) ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತ ಸಿಂಧೂ ನದಿ ನೀರು ಒಪ್ಪಂದ ಅಮಾನತು ಮಾಡಿ ಪಾಕ್‌ಗೆ ಜಲಾಘಾತ ನೀಡಿತು. ಇದೇ ಮಾದರಿಯಲ್ಲಿ ಕೋಲಾರ ರೈತರು ಪಾಕಿಸ್ತಾನಕ್ಕೆ ಟಾಂಗ್‌ ಕೊಟ್ಟಿದ್ದಾರೆ. ಪಾಕ್‌ಗೆ ಟೊಮ್ಯಾಟೊ ಸರಬರಾಜು ನಿಲ್ಲಿಸಿ ಶಾಕ್‌ ಕೊಟ್ಟಿದ್ದಾರೆ.

    ಕೋಲಾರದಿಂದ (Kolar) ಪಾಕಿಸ್ತಾನಕ್ಕೆ (Pakistan) ಸರಬರಾಜು ಮಾಡುತ್ತಿದ್ದ ಟನ್ ಗಟ್ಟಲೇ ಟೊಮ್ಯಾಟೊವನ್ನು ಈಗಾಗಲೇ ನಿಲ್ಲಿಸಲಾಗಿದೆ. ಪೆಹಲ್ಗಾಮ್ ದಾಳಿ ಬಳಿಕ ಟೊಮ್ಯಾಟೊ ನೀಡದೆ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಬದ್ಧ ಎನ್ನುತ್ತಿದ್ದಾರೆ. ಈ ಹಿಂದೆ ಉಗ್ರರು ಹಾಗೂ ಪಾಕಿಸ್ತಾನ ದಾಳಿ ಮಾಡಿದ್ರು. ಮಾನವೀಯ ದೃಷ್ಟಿಯಿಂದ ಟೊಮ್ಯಾಟೊ ಕೊಡುತ್ತಿದ್ದೇವೆ. ಆದರೆ, ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ನರಮೇಧ ಬೆನ್ನಲ್ಲೇ ಕೋಲಾರದ ರೈತರು ಪಾಕಿಸ್ತಾನಕ್ಕೆ ಟೊಮ್ಯಾಟೊ ಸರಬರಾಜು ಮಾಡದಿರಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಅಫ್ಘಾನ್‍ನಿಂದ ಭಾರತಕ್ಕೆ ಸರಕು ಸಾಗಾಟ – ಪಾಕ್‍ನಿಂದ ಅನುಮತಿ

    ಪ್ರತಿ ದಿನ 800 ರಿಂದ 900 ಟನ್ ಟೊಮ್ಯಾಟೊ ಸರಬರಾಜು ಮಾಡುತ್ತಿದ್ದ ರೈತರು, ನಮಗೆ ನಷ್ಟ ಆದ್ರೂ ಪರವಾಗಿಲ್ಲ ಎನ್ನುತ್ತಿದ್ದಾರೆ. ಅಲ್ಲದೇ, ಜೂನ್‌ನಲ್ಲಿ ಅತಿ ಹೆಚ್ಚು ಟೊಮ್ಯಾಟೊ ರಪ್ತು ಮಾಡುತ್ತಿದ್ದ ರೈತರು, ಬೆಲೆ ಕುಸಿತವಾದ್ರೂ ಪರವಾಗಿಲ್ಲ. ಪಾಕಿಸ್ತಾನಕ್ಕೆ ಒಂದೇ ಒಂದು ಟೊಮ್ಯಾಟೊ ಸಹ ಕೊಡಲ್ಲ ಎನ್ನುತ್ತಿದ್ದಾರೆ. ಈಗಾಗಲೇ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ಪೆಟ್ಟು ನೀಡಿತ್ತು. ಕೋಲಾರದ ರೈತರ ಈ ನಿರ್ಧಾರ ಪಾಕ್‌ಗೆ ಮತ್ತೊಂದು ಶಾಕ್ ಎನ್ನಲಾಗಿದೆ.

  • Kolar | ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು

    Kolar | ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು

    ಕೋಲಾರ: ಮನೆಯಲ್ಲಿ ತಂದೆ ತಾಯಿ ಬುದ್ಧಿವಾದ ಹೇಳಿದ ಹಿನ್ನೆಲೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಮುಳಬಾಗಿಲು (Mulabagilu) ಪಟ್ಟಣದ ಕುಂಬಾರಪಾಳ್ಯದಲ್ಲಿ (Kumbarapalya) ಕಳೆದ ರಾತ್ರಿ ಈ ಘಟನೆ ನಡೆದಿದೆ. ಬೆಳದು ನಿಂತಿದ್ದ ಮಗ ಜವಾಬ್ದಾರಿ ಇಲ್ಲದೇ ಸ್ನೇಹಿತರೊಂದಿಗೆ ಸೇರಿಕೊಂಡು ಬೇಕಾಬಿಟ್ಟಿ ಜೀವನ ನಡೆಸುತ್ತಿದ್ದ. ಇದನ್ನು ಪ್ರಶ್ನೆ ಮಾಡಿದ ತಂದೆ ತಾಯಿ ಮಾತಿನಿಂದ ಬೇಸತ್ತು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ಮುಳಬಾಗಿಲು ಪಟ್ಟಣದ ಕುಂಬಾರಪಾಳ್ಯ ನಿವಾಸಿ ಗಣೇಶ್ (29) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಗಣೇಶ್ ಮದುವೆಯಾಗಿ ಒಂದು ವರ್ಷ ಕಳೆದಿತ್ತು. ಹೆಂಡತಿ ಮಕ್ಕಳನ್ನ ಚನ್ನಾಗಿ ನೋಡಿಕೋ, ಜವಾಬ್ದಾರಿಯಿಂದಿರು ಎಂದಿದ್ದ ತಂದೆ ತಾಯಿ ಮಾತಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಪಹಲ್ಗಾಮ್‌ಗೆ ಹೋಗಿದ್ರೆ ಜಮೀರ್, ಖಾದರ್ ಬಿಟ್ಟು ಸಿದ್ದರಾಮಯ್ಯಗೆ ಗುಂಡು ಹೊಡೆಯುತ್ತಿದ್ರು: ಮುತಾಲಿಕ್

    ಘಟನೆ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಸಾವಿನ ಕುರಿತು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮೋದಿ ಜೊತೆಗೆ ನಾವಿದ್ದೇವೆ, ಪಾಕ್‌ ವಿರುದ್ಧ ಇಂದಿರಾ ಗಾಂಧಿಯಂತೆ ಕ್ರಮ ಕೈಗೊಳ್ಳಬೇಕು: ಎಂ.ಬಿ ಪಾಟೀಲ್‌

  • ಕೋಲಾರದಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ – ಬೆಂಗಳೂರು ಮೂಲದ ವ್ಯಕ್ತಿ ಸಾವು!

    ಕೋಲಾರದಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ – ಬೆಂಗಳೂರು ಮೂಲದ ವ್ಯಕ್ತಿ ಸಾವು!

    ಕೋಲಾರ: ಮೂರು ಕಾರುಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ (Series Accident) ಬೆಂಗಳೂರು ಮೂಲದ ವ್ಯಕ್ತಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಕೋಲಾರ (Kolara) ತಾಲೂಕಿನ ನರಸಾಪುರ ಬಳಿಯ ಬೆಳ್ಳೂರು ಬ್ರಿಡ್ಜ್ ನಡೆದಿದೆ.

    ಬೆಂಗಳೂರಿನ ಆರ್‌.ಟಿ ನಗರದ (Bengaluru RT Nagara) ನಿವಾಸಿ ಅಫ್ರೋಜ್ ಮೃತ ದುರ್ದೈವಿ. ಬೆಳ್ಳೂರು ಗೇಟ್‌ ಬಳಿಯ ಚೆನ್ನೈ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 76ರಲ್ಲಿ ಇಂಡಿಕಾ, ಫಾರ್ಚುನರ್‌ ಹಾಗೂ ಪೊಲೋ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಇದನ್ನೂ ಓದಿ: Pahalgam Attack | AK-47, M4 ರೈಫಲ್‌ ಹೊತ್ತು, ದಟ್ಟ ಕಾಡಿನಲ್ಲಿ 22 ಗಂಟೆ ನಡೆದುಕೊಂಡೇ ಬಂದಿದ್ದ ಉಗ್ರರು

    ಈ ವೇಳೆ ಪೊಲೋ ಕಾರಿನಲ್ಲಿದ್ದ ಬೆಂಗಳೂರು ಆರ್‌.ಟಿ ನಗರದ ನಿವಾಸಿ ಅಫ್ರೂಜ್‌ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಅಫ್ರೂಜ್‌ ಮುಳಬಾಗಿಲಿನ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದರು. ಇನ್ನೂ ಘಟನೆಯಲ್ಲಿ ಗಾಯಗೊಂಡ ಐವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಬಾರ್‌ನಲ್ಲಿ ಸೈಲೆನ್ಸ್ ಎಂದವನ ಕೊಲೆ – ನಾಲ್ವರ ಬಂಧನ

    ಸ್ಥಳಕ್ಕೆ ವೇಮಗಲ್ ಠಾಣೆಯ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಾಯಚೂರು | ಸಿಡಿಲು ಬಡಿದು ವ್ಯಕ್ತಿ ಸಾವು – ಆಲಿಕಲ್ಲು ಮಳೆಗೆ ಕೋಟ್ಯಂತರ ರೂ. ಮೌಲ್ಯದ ಭತ್ತ ಹಾನಿ