Tag: ಕೋಲಾರ ಕ್ಷೇತ್ರ

  • ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ – ಅಂಥವರಿಗೆ ಕೋಲಾರದ ಜನ ಮರುಳಾಗ್ಬೇಡಿ: HDK

    ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ – ಅಂಥವರಿಗೆ ಕೋಲಾರದ ಜನ ಮರುಳಾಗ್ಬೇಡಿ: HDK

    – ಮುಸ್ಲಿಮರೂ ನನ್ನ ಪಕ್ಷವನ್ನ ನಂಬಿ ಬನ್ನಿ ಎಂದ ಮಾಜಿ ಸಿಎಂ

    ಕೋಲಾರ: ಈಗಿನ ರಾಜಕಾರಣಿಗಳು ಕೋಲಾರ (Kolar) ಜಿಲ್ಲೆಯ ಜನತೆಯೊಂದಿಗೆ ಚೆಲ್ಲಾಟ ಆಡಿದ್ದಾರೆ. ಬಹಳ ಹರಿಶ್ಚಂದ್ರರಂತೆ ಮಾತನಾಡ್ತಾರೆ. ನೀರಿನ ಹೆಸರು ಹೇಳಿಕೊಂಡು ಚುನಾವಣೆಗೆ ಜೇಬು ತುಂಬಿಸಿಕೊಂಡಿದ್ದಾರೆ. ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ. ಅಂಥವರ ಮಾತಿಗೆ ಕೋಲಾರದ ಜನ ಮರುಳಾಗಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಮಾಜಿ ಸ್ಪೀಕರ್ ರಮೇಶ್ ಕುಮಾರ್  (Ramesh Kumar) ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಶಿನಿಗೇನಹಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯರಗೋಳ್ ಜಲಾಶಯದಲ್ಲಿ ನೀರು ಬರಲು ದಿವಂಗತ ಆಲಂಗೂರು ಶ್ರೀನಿವಾಸ್ ಅವರೇ ಕಾರಣ. ನನ್ನ ಹೋರಾಟವೂ ಕೋಲಾರ ಜಿಲ್ಲೆಗೆ ಉಪಯುಕ್ತ ಕುಡಿಯುವ ನೀರು ಕೊಡಬೇಕೆಂಬುದೇ ಆಗಿದೆ. ಆದ್ರೆ ಕೆಲವರಿಂದ ಹಂತ-ಹಂತವಾಗಿ ಈ ಜಿಲ್ಲೆಯ ಜನತೆಗೆ ವಿಷ ಕೊಡುವ ಕೆಲಸ ಆಗ್ತಿದೆ. ಕೆ.ಸಿ.ವ್ಯಾಲಿ ನೀರು ಕೊಟ್ಟು ವಿಷ ನೀಡುತ್ತಿದ್ದಾರೆ. ಈ ಬಾರಿ 6ಕ್ಕೆ 6 ಕ್ಷೇತ್ರಗಳಲ್ಲಿ ಕೋಲಾರದ ಜನತೆ ಜೆಡಿಎಸ್ ಪಕ್ಷವನ್ನ ಗೆಲ್ಲಿಸಿದ್ರೆ, ಮುಂದಿನ 5 ವರ್ಷದೊಳಗೆ ಪರಿಶುದ್ಧ ಕುಡಿಯುವ ನೀರು ಸಿಗುವಂತೆ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.

    ಈಗಿನ ರಾಜಕಾರಣಿಗಳು ಕೋಲಾರ ಜಿಲ್ಲೆಯ ಜನತೆಯೊಂದಿಗೆ ಚೆಲ್ಲಾಟ ಆಡಿದ್ದಾರೆ. ಬಹಳ ಹರಿಶ್ಚಂದ್ರರಂತೆ ಮಾತನಾಡ್ತಾರೆ. ನೀರಿನ ಹೆಸರು ಹೇಳಿಕೊಂಡು ಚುನಾವಣೆಗೆ ಜೇಬು ತುಂಬಿಸಿಕೊಂಡಿದ್ದಾರೆ. ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ. ಅಂಥವರ ಮಾತಿಗೆ ಕೋಲಾರ ಜನ ಮರುಳಾಗಬೇಡಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೆರಿಟೇಜ್, ಡೂಡ್ಲ, ಆರೋಕ್ಯ ಹಾಲಿನ ಬ್ರಾಂಡ್‍ಗಳು ನಂದಿನಿಯ ಅಕ್ಕತಂಗಿಯರಾ?: ಪ್ರತಾಪ್ ಸಿಂಹ

    ಜೆಡಿಎಸ್ (JDS) ಪಕ್ಷಕ್ಕೆ ಒಳ್ಳೆಯ ದಿನ ಬರುವ ನಂಬಿಕೆಯಿದೆ. ಕಾಂಗ್ರೆಸ್ (Congress) ತೊರೆದು ಪ್ರಮುಖ ಮುಖಂಡರು ನಮ್ಮ ಪಕ್ಷ ಸೇರಿದ್ದಾರೆ. ಪಕ್ಷಕ್ಕೆ ಸೇರುವವರಿಗೆ ನಾನು ಅಬಾರಿಯಾಗಿದ್ದೇನೆ. 2(0) ಯಿಂದ 3(0)ಗೆ ಹಾಕಿರುವ ಬಣಜಿಗ ಸಮುದಾಯದ ಪರವಾಗಿ ನಾನಿದ್ದೇನೆ. ಅವರ ಸಮಸ್ಯೆ ಸರಿಪಡಿಸುವ ಕೆಲಸ ಮಾಡ್ತೇವೆ. ಮುಸ್ಲಿಮರೂ ಸಹ ನನ್ನ ಪಕ್ಷವನ್ನ ನಂಬಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೂಲಭೂತ ಸೌಕರ್ಯ ಕೊಡದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ: ನಿಖಿಲ್‌ಗೆ ಮಹಿಳೆಯರಿಂದ ತರಾಟೆ

  • ನನ್ನ ಕೊನೆ ಚುನಾವಣೆ ಹುಟ್ಟೂರಿನಲ್ಲಿ ಆಗಬೇಕೆಂಬ ಆಸೆ: ಸಿದ್ದರಾಮಯ್ಯ

    ನನ್ನ ಕೊನೆ ಚುನಾವಣೆ ಹುಟ್ಟೂರಿನಲ್ಲಿ ಆಗಬೇಕೆಂಬ ಆಸೆ: ಸಿದ್ದರಾಮಯ್ಯ

    ಮೈಸೂರು: ನನ್ನ ಕೊನೆ ಚುನಾವಣೆ ಹುಟ್ಟೂರುನಲ್ಲಿ ಆಗಬೇಕೆಂಬ ಆಸೆ. ವರುಣಾ ಜೊತೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಕೋಲಾರ ಕ್ಷೇತ್ರದ ಜನರಿಂದ ಹೆಚ್ಚು ಒತ್ತಡ ಬರುತ್ತಿದೆ. ಈ ಬಾರಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದರು.

    ಎಚ್‍ಡಿ ಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮ್ಯಾಚ್ ಫಿಕ್ಸ್ ಮಾಡಿಕೊಂಡಿತ್ತು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಅಚ್ಚರಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಕುರಾನ್ ಜಿಂದಾಬಾದ್ ಘೋಷಣೆ – ಯುವಕನ ಬಂಧನ

    ವರುಣಾ ಕ್ಷೇತ್ರ (Varuna Constituency) ಸಿದ್ದರಾಮಯ್ಯಗೆ ಲಕ್ಕಿ ಕ್ಷೇತ್ರ ವಿಚಾರದ ಕುರಿತು ಮಾತನಾಡಿ, ವರುಣಾ ಕ್ಷೇತ್ರದಿಂದ ಗೆದ್ದಾಗಲೇ ನಾನು ಸಿಎಂ ಆಗಿದ್ದು. ಯಾವುದೇ ಒಂದು ಕ್ಷೇತ್ರ ಲಕ್ಕಿ ಅಂತ ಇಲ್ಲ. ವರುಣಾ ನನ್ನ ಹುಟ್ಟೂರು. ವರುಣಾ ಹೋಬಳಿ ಕಾರಣಕ್ಕೆ ವರುಣಾ ಕ್ಷೇತ್ರ ಅಂಥಾ ಕರೆಯುತ್ತಿದ್ದಾರೆ ಎಂದರು.

    ಹೈಕಮಾಂಡ್ ಗಳ ಜೊತೆ ಮಾತನಾಡಿದ್ದೇನೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮ್ಮ ಹೈಕಮಾಂಡ್ ಜೊತೆಗೆ ಯಾರೂ ಮಾತನಾಡಿಲ್ಲ. ಈ ಬಾರಿ ನಾವು ಯಾರ ಜೊತೆಯೂ ಮಾತುಕತೆ ಮಾಡಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ ಎಂದು ತಿರುಗೇಟು ನೀಡಿದರು.

  • ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧಿಸೋದು ಖಚಿತ – ಯತೀಂದ್ರ ಸಿದ್ದರಾಮಯ್ಯ

    ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧಿಸೋದು ಖಚಿತ – ಯತೀಂದ್ರ ಸಿದ್ದರಾಮಯ್ಯ

    ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರ ಹಾಗೂ ವರುಣಾ ಎರಡೂ ಕ್ಷೇತ್ರದಿಂದ ಸ್ವರ್ಧಿಸಲು ನಿರ್ಧರಿಸಿದ್ದಾರೆ ಎಂದು ಶಾಸಕರೂ ಆಗಿರುವ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಖಚಿತಪಡಿಸಿದ್ದಾರೆ.

    ಮೈಸೂರಿನಲ್ಲಿ (Mysuru) `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಕೋಲಾರ (Kolar) ಬೇಡ ವರುಣಾದಲ್ಲಿ (Varuna) ಸ್ಪರ್ಧಿಸಿ ಅಂತಾ ಹೇಳಿತ್ತು. ಈ ಸಮಯದಲ್ಲಿ ಕೋಲಾರ ಕ್ಷೇತ್ರದಿಂದ ಹಿಂದೆ ಸರಿದರೆ ಕಾಂಗ್ರೆಸ್‌ಗೆ (Congress) ಹಿನ್ನಡೆಯಾಗುತ್ತೆ ಅಂತಾ ಅಲ್ಲಿನ ನಾಯಕರು ಹೇಳಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ಕೋಲಾರ ಬಿಡುವಂತಿಲ್ಲ. ಹೈಕಮಾಂಡ್ ಸೂಚನೆಯಂತೆ ವರುಣಾ ಕ್ಷೇತ್ರ (Varuna Constituency) ಬಿಡಲೂ ಆಗಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಕೋಲಾರ – ವರುಣಾ ಎರಡೂ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾನು ಕ್ಷೇತ್ರ ಹುಡುಕಾಡ್ತಿಲ್ಲ, ನನ್ನನ್ನ ಕ್ಷೇತ್ರಕ್ಕೆ ಕರೆಯುವವರ ಸಂಖ್ಯೆ ಹೆಚ್ಚಾಗಿದೆ – ಸಿದ್ದರಾಮಯ್ಯ

    ವರುಣಾ ಒಂದರಲ್ಲಿ ನಿಂತುಕೊಳ್ಳಿ ಅಂತಾ ನಾನು ಮೊದಲು ಸಲಹೆ ಕೊಟ್ಟಿದ್ದೆ. ಸಿದ್ದರಾಮಯ್ಯ ಅವರು ಯಾವುದೇ ಕ್ಷೇತ್ರದಲ್ಲಿ ನಿಂತರೂ ಅವರ ವೈರಿಗಳು ಒಂದಾಗಿ ಸೋಲಿಸಲು ಯತ್ನಿಸುತ್ತಾರೆ. ಸಿದ್ದರಾಮಯ್ಯ ವಿರುದ್ಧ ಅವರ ಶತ್ರುಗಳು ಹಣದ ಹೊಳೆ ಹರಿಸುತ್ತಾರೆ. ಎಲ್ಲಿ ನಿಂತರೂ ಶತ್ರುಗಳು ಒಂದಾಗುತ್ತಾರೆ. ಇದಕ್ಕೆಲ್ಲ ಹೆದರೋಕೆ ಆಗಲ್ಲ. ಸಿದ್ದರಾಮಯ್ಯ ಮಾಸ್ ಲೀಡರ್. ಆಕಸ್ಮಾತ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುತ್ತಾರೆ. ಇದನ್ನು ಸಹಿಸಲು ಬಲಪಂಥೀಯರಿಗೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸದರಾಗಲು ಹೊರಟಿದ್ದ ಸಿದ್ದರಾಮಯ್ಯ ಸಿಎಂ ಆಗಿದ್ದು ಹೇಗೆ?  

  • ಸಿದ್ದರಾಮಯ್ಯ ಅಲ್ಲ ಯಾರೇ ಬಂದ್ರೂ ನಾನು ಗೆದ್ದಾಗಿದೆ: ವರ್ತೂರು ಪ್ರಕಾಶ್

    ಸಿದ್ದರಾಮಯ್ಯ ಅಲ್ಲ ಯಾರೇ ಬಂದ್ರೂ ನಾನು ಗೆದ್ದಾಗಿದೆ: ವರ್ತೂರು ಪ್ರಕಾಶ್

    ಕೋಲಾರ: ಸಿದ್ದರಾಮಯ್ಯ ಅಲ್ಲ ಯಾರೇ ಬಂದ್ರೂ ನಾನು ಗೆದ್ದಾಗಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ಹೇಳಿದರು.

    ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಧೈರ್ಯ ಮಾಡಿ ಕೋಲಾರವನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಗಟ್ಟಿ ಮನುಷ್ಯ, ಕೋಲಾರದಲ್ಲಿ ತೊಡೆ ತಟ್ಟಿದ ಮೇಲೆ ಹಿಂದೆ ಹೋಗಲ್ಲ. ಅಷ್ಟು ಕೀಳಮಟ್ಟದ ರಾಜಕಾರಣಿ ಅವರಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು.

    ಇತ್ತೀಚೆಗೆ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನಾನು ನಮ್ಮ ಸಮುದಾಯದ ಸ್ವಾಮೀಜಿ ಜೊತೆ ಸಂಧಾನ ಮಾತುಕತೆ ಮಾಡಿಲ್ಲ ಎಂದು ಕೋಲಾರದಲ್ಲಿ ಹರಿದಾಡುತ್ತಿರುವ ಅಪಪ್ರಚಾರಕ್ಕೆ ಟಾಂಗ್ ಕೊಟ್ರು. ನಾನು ನೇರವಾಗಿ ಸಿದ್ದರಾಮಯ್ಯ ಮೇಲೆ ಸ್ಪರ್ಧೆ ಮಾಡುವೆ. ಯಾವುದೇ ಮಾತುಕತೆ ಮತ್ತು ಈ ರೀತಿಯ ಚಟುವಟಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: 2 ಪಕ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರ ನಡೀತಿದೆ: ಸಂಡೂರಿನಲ್ಲಿ ಚಾಣಕ್ಯ ಕಿಡಿ

    ಕಾಂಗ್ರೆಸ್‍ (Congress) ನಲ್ಲಿ ಸಿದ್ದರಾಮಯ್ಯ, ಜೆಡಿಎಸ್‍ನಲ್ಲಿ ಸಿಎಂಆರ್ ಶ್ರೀನಾಥ್ ಮತ್ತು ಬಿಜೆಪಿಯಲ್ಲಿ ನಾನು ಕಣದಲ್ಲಿರುತ್ತವೆ. ಆದರೆ ಇತ್ತೀಚೆಗೆ ಕೋಲಾರದಲ್ಲಿ ಸ್ಪರ್ಧೆ ಮಾಡಲು ಸಚಿವ ಮುನಿರತ್ನ, ವೈ.ಎ. ನಾರಾಯಣಸ್ವಾಮಿ ಅವರ ಹೆಸರುಗಳು ಕೇಳಿ ಬರುತ್ತಿದ್ದು, ಸ್ವಾಗತ ಮಾಡುವೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಪಕ್ಷ ಯಾರೇ ನಿಂತರೂ ಅವರಿಗೆ ಕೆಲಸ ಮಾಡುವೆ. ಕೋಲಾರದಲ್ಲಿ ಜೆಡಿಎಸ್ (JDS) ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು ಇಲ್ಲಿ ಈಗಾಗಲೇ ಫಲಿತಾಂಶ ಬಂದಿದೆ. ನಾನು ಸಿದ್ದರಾಮಯ್ಯ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ ಎಂದರು.

    ಕೆಲ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರ ಸೇರ್ಪಡೆಯಾಗಿದೆ. ಕೃಷ್ಣಬೈರೇಗೌಡ ಊಟ ಹಾಕಿದ ಪ್ರಯತ್ನದಿಂದ ಕಾಂಗ್ರೆಸ್ ಪಕ್ಷ ತಲೆ ಎತ್ತಿದೆ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಡಿಪಾಸಿಟ್ ಸಹ ಬರುತ್ತಿರಲಿಲ್ಲ. ಕಾಂಗ್ರೆಸ್ ನವರು ಶ್ರೀನಿವಾಸಗೌಡ ಅವರನ್ನು ಕರೆದುಕೊಂಡು ಹಳ್ಳಿಗಳಿಗೆ ಹೋದರೆ ಒಳ್ಳೆಯದು, ಆದರೆ ಅವರನ್ನು ಬಿಟ್ಟು ಪ್ರಚಾರಕ್ಕೆ ಹೋಗುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ನನ್ನ ಪಡೆ ಇದೆ. ಹೊಸದಾಗಿ ಕಟ್ಟುವ ಅವಶ್ಯಕತೆ ಇಲ್ಲ ಎಂದ್ರು.

    ಸಿದ್ದರಾಮಯ್ಯ ಬಂದು ಪಡೆ ಕಟ್ಟಬೇಕಾಗಿದೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದಾರೆ, ಜೆಡಿಎಸ್ ಪಕ್ಷ ಅವರನ್ನು ಹಿಡಿದಿಟ್ಟು ಕೊಳ್ಳಬೇಕಾಗಿದೆ, ನಾನು ಹಿಂದುತ್ವ ಮೇಲೆ ಚುನಾವಣೆ ಮಾಡುವೆ ಎಂದ್ರು. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ದಿಢೀರ್ ಬೆಳಗಾವಿ ಪ್ರವಾಸ ಫಿಕ್ಸ್ ಆಗಿದ್ದೇಕೆ?

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k