Tag: ಕೋರ್ಬಾ

  • ತಾಯಿಯನ್ನೇ ಕೊಂದು ಆಕೆಯ ರಕ್ತ ಕುಡಿದ ನರಭಕ್ಷಕ ಮಗ!

    ತಾಯಿಯನ್ನೇ ಕೊಂದು ಆಕೆಯ ರಕ್ತ ಕುಡಿದ ನರಭಕ್ಷಕ ಮಗ!

    ರಾಯ್‍ಪುರ: ನರಭಕ್ಷಕ ಮಗನೊಬ್ಬ ತನ್ನ ತಾಯಿಯನ್ನೇ ತುಂಡು ತುಂಡಾಗಿ ಕತ್ತರಿಸಿ ಆಕೆಯ ರಕ್ತ ಕುಡಿದಿರುವ ಭಯಾನಕ ಘಟನೆ ಛತ್ತಿಸ್‍ಗಢದ ಕೋರ್ಬಾ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ದಿಲೀಪ್ ಯಾದವ್(27) ಈ ಭಯಾನಕ ಕೃತ್ಯವೆಸಿಗಿದ್ದಾನೆ. ಸುಮಾರಿಯಾ(50) ಮೃತ ದುರ್ದೈವಿ. ಡಿಸೆಂಬರ್ 31ರಂದು ಈ ಭಯಂಕರ ಘಟನೆ ನಡೆದಿದೆ. ಆರೋಪಿ ಮನೆಗೆ ಯಾವಾಗಲು ನೆರೆಮನೆಯಲ್ಲಿದ್ದ ಸಮೀರನ್ ಎಂಬ ಮಹಿಳೆ ದಿಲೀಪ್ ತಾಯಿಯನ್ನು ಮಾತನಾಡಿಸಲು ಬರುತ್ತಿದ್ದರು. ಎಂದಿನಂತೆ ಘಟನೆ ನಡೆದ ದಿನವು ಬಂದಿದ್ದಾರೆ. ಆಗ ದಿಲೀಪ್ ತನ್ನ ತಾಯಿಯನ್ನೇ ತುಂಡು ತುಂಡಾಗಿ ಕತ್ತರಿಸಿ ಆಕೆಯ ರಕ್ತ ಕುಡಿದು, ನಂತರ ಮನೆಯೊಳಗೆ ಮೃತದೇಹದ ತುಂಡುಗಳನ್ನು ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟಿದ್ದನ್ನು ನೋಡಿ ಭಯಬಿದ್ದು ಅಲ್ಲಿಂದ ಮನೆಗೆ ಓಡಿಹೋಗಿದ್ದಾರೆ.

    ಈ ಘಟನೆಯಿಂದ ಭಯಬಿದ್ದಿದ್ದ ಮಹಿಳೆ ಯಾರ ಬಳಿಯೂ ದಿಲೀಪ್ ವಿಚಾರವನ್ನು ಹೇಳಲು ಮುಂದೆ ಬಂದಿರಲಿಲ್ಲ. ಆದ್ರೆ ಸ್ವಲ್ಪ ದಿನಗಳ ಬಳಿಕ ಈ ಭಯದಿಂದ ಚೇತರಿಸಿಕೊಂಡ ನಂತರ ಪೊಲೀಸರ ಬಳಿ ಘಟನೆ ಕುರಿತು ತಿಳಿಸಿದ್ದಾರೆ. ಮಹಿಳೆಯ ದೂರಿನ ಮೆರೆಗೆ ಪೊಲೀಸರು ದಿಲೀಪ್‍ನನ್ನು ಬಂಧಿಸಲು ಹೋದಾಗ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

    ಬಳಿಕ ಆತನ ಕುರಿತು ಗ್ರಾಮಸ್ಥರಲ್ಲಿ ಪೊಲೀಸರು ವಿಚಾರಿಸಿದಾಗ ಆತ ತಾಂತ್ರಿಕ ವಿದ್ಯೆಯನ್ನು ತಿಳಿದಿದ್ದನು. ಅಲ್ಲದೆ ಯಾವಾಗಲು ತನ್ನ ತಂದೆ ಹಾಗೂ ಸಹೋದರನ ಸಾವಿಗೆ ನೀನೆ ಕಾರಣ ಎಂದು ತಾಯಿಯ ಬಳಿ ಜಗಳವಾಡುತ್ತಿದ್ದನು. ಅಲ್ಲದೆ ಯಾವಾಗಲು ನರಬಲಿ ಹಾಗೂ ಇತರೇ ವಿಚಿತ್ರ ವಿಷಯವನ್ನೇ ಮಾತನಾಡುತ್ತಿದ್ದನು ಎಂದು ತಿಳಿಸಿದ್ದಾರೆ.

    ಬಹುಶಃ ತಾಯಿಯ ಮೇಲಿನ ಸಿಟ್ಟಿಗೆ ಆಕೆಯನ್ನು ಕೊಂದಿರಬಹುದು ಅಥವಾ ನರಬಲಿ ಎಂದು ಹೆತ್ತವಳನ್ನು ಬಲಿ ಪಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv