Tag: ಕೋಮು ಗಲಭೆ

  • ರಾಜ್ಯದಲ್ಲಿ ಮತ್ತೋರ್ವ ಹಿಂದೂ ಕಾರ್ಯಕರ್ತನ ಕೊಲೆ

    ರಾಜ್ಯದಲ್ಲಿ ಮತ್ತೋರ್ವ ಹಿಂದೂ ಕಾರ್ಯಕರ್ತನ ಕೊಲೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬುಧವಾರದಂದು ಕ್ಷುಲ್ಲಕ ಕಾರಣಕ್ಕೆ ಕೋಮ ಗಲಭೆ ನೆಡೆದಾಗ ಘಟನಾ ಸ್ಥಳದಿಂದ ಕಾಣೆಯಾಗಿದ್ದ ಯುವಕ ಇಂದು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಹೊನ್ನಾವರ ನಿವಾಸಿ 19 ವರ್ಷದ ಪರೇಶ್ ಮೇಸ್ತ ಸಾವನ್ನಪ್ಪಿದ ಯುವಕ. ಪಟ್ಟಣದಲ್ಲಿ ಬುಧವಾರ ಕೋಮುಗಲಭೆ ಉಂಟಾಗಿತ್ತು. ಈ ವೇಳೆ ಪರೇಶ್ ಘಟನಾ ಸ್ಥಳದಿಂದ ನಾಪತ್ತೆಯಾಗಿದ್ದರು. ಇಂದು ಗಲಭೆ ನಡೆದ ಶನಿ ದೇವಸ್ಥಾನದ ಬಳಿ ಇರುವ ಶಟ್ಟಿ ಕೆರೆಯಲ್ಲಿ ಪರೇಶ್ ಶವ ಪತ್ತೆಯಾಗಿದೆ.

    ದುಷ್ಕರ್ಮಿಗಳು ಕೈಕಟ್ಟಿ ಹಲ್ಲೆ ಮಾಡಿ ಕೊಲೆ ಮಾಡಿ ನಂತರ ಶವವನ್ನು ಕೆರೆಗೆ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಆಗಮಿಸಿ ಶವವನ್ನು ಮೇಲಕ್ಕೆತಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಸಂಬಂಧ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://twitter.com/ShobhaBJP/status/938988228819877889

    https://twitter.com/ShobhaBJP/status/938984145786507264

  • #BurningKarnataka ಟ್ವಿಟ್ಟರ್‍ನಲ್ಲಿ ಟ್ರೆಂಡಿಗ್ ಆಗುತ್ತಿದೆ ಕರಾವಳಿಯ ಕೋಮುಗಲಾಟೆ

    #BurningKarnataka ಟ್ವಿಟ್ಟರ್‍ನಲ್ಲಿ ಟ್ರೆಂಡಿಗ್ ಆಗುತ್ತಿದೆ ಕರಾವಳಿಯ ಕೋಮುಗಲಾಟೆ

    ಬೆಂಗಳೂರು: ಕರ್ನಾಟಕದ ಕರಾವಳಿಯ ಕೋಮುಗಲಾಟೆ ಈಗ ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.

    ಕರ್ನಾಟಕದಲ್ಲಿ ನಡೆಯುತ್ತಿರುವ ಗಲಭೆ ಹಾಗೂ ಅನ್ಯಾಯಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‍ಗೆ ಹಾಗೂ ರಾಷ್ಟ್ರಪತಿಗಳ ಗಮನಕ್ಕೆ ತರಲು ಟ್ವಿಟ್ಟರ್ ನಲ್ಲಿ ಈ ಅಭಿಯಾನ ಆರಂಭವಾಗಿದೆ.

    #BurningKarnataka (ಬರ್ನಿಂಗ್ ಕರ್ನಾಟಕ) ಅನ್ನೋ ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡಿಂಗ್ ಟಾಪಿಕ್ ಆಗಿದೆ. ಗಲಭೆ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದು, ಆ ಬಳಿಕ ದಕ್ಷಣ ಕನ್ನಡದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇದಾದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು.