Tag: ಕೋಮುಗಲಾಟೆ

  • ಬೆಂಗಳೂರಿನಲ್ಲಿ ಗಲಭೆಗೆ ದೊಡ್ಡ ಸಂಚು – ಅಮೂಲ್ಯ ಮೂಲಕ ದಾಳ ಉದುರಿಸಿದ್ದ ಮಹಿಳೆ

    ಬೆಂಗಳೂರಿನಲ್ಲಿ ಗಲಭೆಗೆ ದೊಡ್ಡ ಸಂಚು – ಅಮೂಲ್ಯ ಮೂಲಕ ದಾಳ ಉದುರಿಸಿದ್ದ ಮಹಿಳೆ

    – ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಪ್ಲ್ಯಾನ್
    – ತನಿಖೆಯ ವೇಳೆ ಸ್ಫೋಟಕ ವಿಚಾರ ಬಯಲು
    – ವಿಚಾರಣೆಗೆ ಹಾಜರಾಗುವಂತೆ ಪೊಲೀಸರ ನೋಟಿಸ್

    ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದಿದ್ದ ಅಮೂಲ್ಯಳ ವಿಚಾರಣೆ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಬಯಲಿಗೆ ಬರುತ್ತಿದ್ದು, ಬೆಂಗಳೂರಿನಲ್ಲಿ ಕೋಮು ಗಲಭೆ ನಡೆಸಲು ಅತಿ ದೊಡ್ಡ ಸಂಚು ರೂಪಿಸಿದ್ದ ವಿಚಾರ ಈಗ ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಅಮೂಲ್ಯ ಮೂಲಕ ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬಳು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಅಮೂಲ್ಯಳ ಜೊತೆ ನಿಕಟ ಸಂಪರ್ಕದಲ್ಲಿದ್ದ ಈಕೆ ಸಿಎಎ, ಎನ್‌ಆರ್‌ಸಿ ವಿರೋಧಿ ಕಾರ್ಯಕ್ರಮದಲ್ಲಿ ಯಾವ ರೀತಿ ಮಾತನಾಡಬೇಕು, ಯಾವ ವಿಚಾರವನ್ನು ಪ್ರಸ್ತಾಪ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತಿದ್ದಳು.

    ನಿನ್ನ ಭಾಷಣಗಳು ಈಗಾಗಲೇ ಸಾಕಷ್ಟು ಜನರನ್ನು ತಲುಪಿದೆ. ಹೀಗೆ ಮಾತನಾಡಿದರೆ ನಿನ್ನ ಮಾತಿಗೆ ಬೆಲೆ ಸಿಗುತ್ತದೆ. ವಿಡಿಯೋಗಳ ಮೂಲಕ ನೀನು ಬಹಳ ಪ್ರಸಿದ್ಧ ಭಾಷಣಕಾರ್ತಿಯಾಗಬಹುದು ಎಂದು ಆ ಮಹಿಳೆ ಅಮೂಲ್ಯಳ ಬ್ರೇನ್ ವಾಶ್ ಮಾಡಿದ್ದಳು ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಈಕೆಯ ಜೊತೆ ಮತ್ತಷ್ಟು ಜನರಿದ್ದು ಈ ತಂಡಕ್ಕೆ ಅಮೂಲ್ಯ ಅಡ್ವೈಸರಿ ಕಮಿಟಿ(ಸಲಹಾ ಸಮಿತಿ) ಎಂದು ಹೆಸರನ್ನಿಟ್ಟಿದ್ದಳು. ಯಾವ ಊರಿಗೆ ಹೋದಾಗ ಏನು ಮಾತನಾಡಬೇಕು? ಏನು ಮಾತನಾಡಬಾರದು ಎನ್ನುವುದನ್ನು ಈ ಸಲಹಾ ಸಮಿತಿ ತಿಳಿಸುತ್ತಿತ್ತು.

     

    ನಾನು ಆಡಿದ ಮಾತುಗಳು ಇಷ್ಟೊಂದು ಪರಿಣಾಮ ಬೀರುತ್ತದೆ ಎಂದು ಅಮೂಲ್ಯ ಸಹ ಭಾವಿಸಿರಲಿಲ್ಲ. ಆ ಮಹಿಳೆ ತನ್ನ ಆಪ್ತ ವ್ಯಕ್ತಿ ಎಂದೇ ಅಮೂಲ್ಯ ತಿಳಿದುಕೊಂಡಿದ್ದಳು. ಆದರೆ ಈಗ ಈಕೆಯ ಷಡ್ಯಂತ್ರ ಏನು ಎನ್ನುವುದು ಅಮೂಲ್ಯಗೆ ಗೊತ್ತಾಗಿದೆ.

    ಮಹಿಳೆ ಅಮೂಲ್ಯ ಜೊತೆ ಮಾತನಾಡುವಾಗ ನಾನು ಹಿಂದೂ ಧರ್ಮದವಳು ಎಂದು ಪರಿಚಯಿಸಿಕೊಂಡಿದ್ದಳು. ಅಮೂಲ್ಯ ಹೇಳಿದ ಮಹಿಳೆ ಯಾರು? ಏನು ಮಾಡುತ್ತಿದ್ದಾಳೆ? ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ ಆಕೆ ಹಿಂದೂ ಧರ್ಮದವಳು ಅಲ್ಲ ಎನ್ನುವು ವಿಚಾರ ಪೊಲೀಸರಿಗೆ ಗೊತ್ತಾಗಿದೆ.

    ಅನ್ಯಧರ್ಮದ ಈ ಮಹಿಳೆ ಅಮೂಲ್ಯಳ ಮೂಲಕ ತನ್ನ ಕೆಲಸ ಮಾಡಲು ಪ್ಲ್ಯಾನ್ ಮಾಡಿದ್ದಳು. ಈ ಮಹಿಳೆ ಬೆಂಗಳೂರಿನಲ್ಲೇ ವಾಸವಾಗಿದ್ದು ಈಗ ಆಕೆಗೆ ಉಪ್ಪಾರ ಪೇಟೆ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

  • ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಅಮಿತ್ ಶಾ ಆಗಮನಕ್ಕೆ ನಿಷೇಧ?

    ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಅಮಿತ್ ಶಾ ಆಗಮನಕ್ಕೆ ನಿಷೇಧ?

    ಬೆಂಗಳೂರು: ಚುನಾವಣಾ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವೇಶವನ್ನು ನಿಷೇಧ ಮಾಡಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ಯಾ ಎನ್ನುವ ಪ್ರಶ್ನೆಯೊಂದು ಈಗ ಎದ್ದಿದೆ.

    ಹೌದು, ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾಗೆ ಹೇಗೆ ಈ ಹಿಂದೆ ಮಂಗಳೂರು ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತೋ ಅದೇ ರೀತಿಯಾಗಿ ಅಮಿತ್ ಶಾ ಅವರ ಕರ್ನಾಟಕ ಪ್ರವೇಶವನ್ನು ನಿಷೇಧಿಸಲು ಸರ್ಕಾರ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ಯಾ ಎನ್ನುವ ಅನುಮಾನ ಮೂಡಿದೆ.

    ಪರಿಷತ್ ಸದಸ್ಯ ಉಗ್ರಪ್ಪನವರು ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಿಂದಾಗಿ ಈ ಅನುಮಾನದ ಪ್ರಶ್ನೆ ಎದ್ದಿದೆ. ಉಗ್ರಪ್ಪನವರು ನೇರವಾಗಿ ಈ ವಿಚಾರವನ್ನು ತಿಳಿಸದೇ ಇದ್ದರೂ ಮೈಸೂರು ಪ್ರತಾಪ್ ಸಿಂಹ ಪ್ರಕರಣ, ಗುಜರಾತಿನ ಕೋಮು ಗಲಾಟೆಯ ವಿಚಾರವನ್ನು ಪ್ರಸ್ತಾಪ ಮತ್ತು ತೊಗಾಡಿಯ ಪ್ರಕರಣವನ್ನು ಉಲ್ಲೇಖಿಸಿ ಇದೇ ಅರ್ಥ ಬರುವಂತೆ ಉತ್ತರಿಸಿದ್ದರಿಂದ ಈ ಪ್ರಶ್ನೆ ಎದ್ದಿದೆ.

    ಮೈಸೂರಿನಲ್ಲಿ ನಡೆದ ಘಟನೆಗೆ ಅಮಿತ್ ಶಾ ನೇರ ಕಾರಣವಾಗಿದ್ದಾರೆ. ಗುಜರಾತ್ ನಲ್ಲಿ ಬೆಂಕಿ ದೊಂಬಿ, ನಕಲಿ ಎನ್‍ಕೌಂಟರ್ ಕೋಮುಗಲಾಟೆ ನಡೆಸಲು ಕಾರಣರಾದ ಅಮಿತ್ ಶಾ ಈಗ ಅದೇ ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲಿ ಪ್ರಯೋಗಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಅಧಿಕಾರ ಬರುವುದನ್ನು ತಪ್ಪಿಸಲು ಬಿಜೆಪಿಯ ಅಧ್ಯಕ್ಷರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಪ್ರತಾಪ್ ಸಿಂಹ ಅವರೇ ಅಮಿತ್ ಶಾ ಅವರು ಟಿಯರ್ ಗ್ಯಾಸ್ ಬಗ್ಗೆ ಹೇಳಿರುವುದನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ. ಚುನಾವಣೆ ಸಮಯದಲ್ಲಿ ಶಾಂತಿ ಕದಡಲು ಅಮಿತ್ ಶಾ ರಾಜ್ಯ ನಾಯಕರಿಗೆ ಪ್ರೇರಣೆ ನೀಡುತ್ತಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ನಡೆದಿರುವ ಪ್ರತಿಭಟನೆಗೆ ಅಮಿತ್ ಶಾ ಕುಮ್ಮಕ್ಕು ಕಾರಣವಾಗಿದ್ದು, ಅವರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

    ಈ ವೇಳೆ ಅಮಿತ್ ಶಾ ಪ್ರವೇಶಕ್ಕೆ ನೀವು ನಿರ್ಬಂಧ ಹೇರುತ್ತಿರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ತೊಗಾಡಿಯಾ ಪ್ರಕರಣದಲ್ಲಿ ಕೋಮು ಸೌಹಾರ್ದ ಕದಡುವ ವ್ಯಕ್ತಿಗಳಿಗೆ ಪ್ರವೇಶ ನೀಡುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಆಯಾ ಜಿಲ್ಲಾಡಳಿತ ಕೈಗೊಳ್ಳಬಹುದು ಎಂದು ಸ್ಪಷ್ಟವಾಗಿ ಸೂಚಿಸಿದೆ. ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಜಿಲ್ಲಾಡಳಿತದ ಆ ನಿರ್ಧಾರವನ್ನು ಸರ್ಕಾರ ಮತ್ತು ಕೋರ್ಟ್ ಮಧ್ಯೆ ಪ್ರವೇಶಿಸಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.

    ಉಗ್ರಪ್ಪ ನೀಡಿದ ಉತ್ತರಕ್ಕೆ ತೊಗಾಡಿಯಾಗೆ ಈ ಹಿಂದೆ ಮಂಗಳೂರು ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು, ಅದೇ ರೀತಿಯಾಗಿ ಅಮಿತ್ ಶಾಗೆ ನಿಷೇಧ ಹೇರುತ್ತಿರಾ ಎನ್ನುವ ಮರು ಪ್ರಶ್ನೆಗೆ, ಕೋಮುಗಲಾಟೆ ಸೃಷ್ಟಿಸುವ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸುವ ಅಧಿಕಾರ ಇರುವುದು ಜಿಲ್ಲಾಡಳಿತಕ್ಕೆ. ಈ ಕಾರಣಕ್ಕೆ ನಾನು ತೊಗಾಡಿಯಾ ಪ್ರಕರಣವನ್ನು ಉಲ್ಲೇಖಿಸಿದ್ದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ!

     

    https://youtu.be/Ul8qOT7O1BM

  • ರಮಾನಾಥ ರೈಗೆ ಸಿಗಬೇಕಿದ್ದ ಗೃಹ ಇಲಾಖೆ ಕೊನೆಕ್ಷಣದಲ್ಲಿ ರಾಮಲಿಂಗಾ ರೆಡ್ಡಿಗೆ ಸಿಕ್ಕಿದ್ದು ಹೇಗೆ?

    ರಮಾನಾಥ ರೈಗೆ ಸಿಗಬೇಕಿದ್ದ ಗೃಹ ಇಲಾಖೆ ಕೊನೆಕ್ಷಣದಲ್ಲಿ ರಾಮಲಿಂಗಾ ರೆಡ್ಡಿಗೆ ಸಿಕ್ಕಿದ್ದು ಹೇಗೆ?

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಾಮನಾಥ ರೈ ಅವರಿಗೆ ಗೃಹ ಇಲಾಖೆ ಸಿಗುತ್ತಿದ್ದರೂ ಕೊನೆಯ ಕ್ಷಣದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ಸಿಎಂ ಈ ಹುದ್ದೆಯ ಜವಾಬ್ದಾರಿಯನ್ನು ನೀಡಿದ್ದಾರೆ.

    ರಮಾನಾಥ ರೈಗೆ ಗೃಹಖಾತೆ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಎಚ್ಚರಿಸಿತ್ತು. ಬಿಜೆಪಿಯ ಬೆದರಿಕೆ ಬಗ್ಗಿ ಸರ್ಕಾರ ಕೊನೇ ಕ್ಷಣದಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಗೃಹಖಾತೆ ಜವಾಬ್ದಾರಿ ನೀಡಿದ್ಯಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಇಂದು ಏನಾಯ್ತು?
    ಸ್ವತಃ ರಮಾನಾಥ ರೈ ಗೃಹಖಾತೆ ಬೇಡ ಎಂದಿದ್ದರಂತೆ. ನಾನು ಗೃಹ ಸಚಿವನಾದರೆ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಕರಾವಳಿಯ ಅವಳಿ ಜಿಲ್ಲೆಯಲ್ಲಿ ಮತ್ತಷ್ಟು ಕೊಮು ಗಲಭೆಗೆ ಪ್ರಚೋದನೆ ನೀಡಬಹುದು. ಹೀಗಾಗಿ, ಎರಡು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವುದೇ ಕೆಲಸವಾಗುತ್ತದೆ ಎಂದು ಸಿಎಂ ಬಳಿ ರಮಾನಾಥ್ ರೈ ಹೇಳಿಕೊಂಡಿದ್ದರಂತೆ. ಹೀಗಾಗಿ ಮಧ್ಯಾಹ್ನವೇ ರಾಮಲಿಂಗಾರೆಡ್ಡಿ ಜೊತೆ ಸಿಎಂ ಒಂದು ಸುತ್ತಿನ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ರಮಾನಾಥ ರೈಗೆ ಗೃಹ ಖಾತೆ: ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದು ಹೀಗೆ

  • ಸರ್ಕಾರ ಒಂದು ಬಾರಿ ಏಳುತ್ತೆ, ಮತ್ತೊಮ್ಮೆ ಮಲಗುತ್ತೆ: ಸಿಎಂ ವಿರುದ್ಧ ಎಚ್‍ಡಿಕೆ ವಾಗ್ದಾಳಿ

    ಸರ್ಕಾರ ಒಂದು ಬಾರಿ ಏಳುತ್ತೆ, ಮತ್ತೊಮ್ಮೆ ಮಲಗುತ್ತೆ: ಸಿಎಂ ವಿರುದ್ಧ ಎಚ್‍ಡಿಕೆ ವಾಗ್ದಾಳಿ

    ಬೆಂಗಳೂರು: ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸೌಹಾರ್ಧತೆಗೆ ಧಕ್ಕೆ ಬಂದಿದೆ. ಹೀಗಾಗಿ ರಾಜ್ಯದಲ್ಲಿ ಸರ್ಕಾರ ಇದ್ಯಾ ಎಂದು ಪ್ರಶ್ನೆ ಮಾಡುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಒಂದು ಬಾರಿ ಏಳುತ್ತದೆ, ಮತ್ತೊಂದು ಬಾರಿ ಮಲಗುತ್ತಿದೆ ಹೀಗಾಗಿ ಸಿಎಂ ಸಿದ್ದರಾಮಯ್ಯ ಅನ್ನೋದಕ್ಕಿಂತ ಅವರನ್ನು ನಿದ್ದೆರಾಮಯ್ಯ ಎನ್ನುವ ವಿಶ್ಲೇಷಣೆಗಳು ಸಹ ಬರುತ್ತಿವೆ ಎಂದು ಎಚ್‍ಡಿಕೆ ಹೇಳಿದರು.

    ಬಿಜೆಪಿ, ಹಾಗೂ ಕಾಂಗ್ರೆಸ್ ನಾಯಕರು ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಮ್ಮ ರಾಜಕೀಯ ಲಾಭಕ್ಕೆ ಅಥವಾ ಶಕ್ತಿ ವೃದ್ಧಿಸಿಕೊಳ್ಳಲು ಅಮಾಯಕ ಕುಟುಂಬಗಳನ್ನು ಬಲಿ ತೆಗೆದುಕೊಳ್ಳಬೇಡಿ ಎಂದರು.

    ಗುಪ್ತಚರ ಇಲಾಖೆ ಡಿಜಿಪಿ ಮಂಗಳೂರಿನ ವಿಷಯವನ್ನ ಸಿಎಂ ಅವರಿಗೆ ತಿಳಿಸಿಲ್ವಾ, ಇದನ್ನು ಸರ್ಕಾರ ಅಂತ ಕರಿಬೇಕಾ.? ಕುಮಾರಸ್ವಾಮಿಗೆ ಜೈಲಿಗೆ ಕಳುಹಿಸ್ತಿನಿ ನನಗೆ ಅಧಿಕಾರ ಕೊಡಿ ಅಂತ ಹೇಳೋಕೆ ಗುಪ್ತಚರ ಇಲಾಖೆಯ ಐಜಿ ಇದ್ದಾರೋ ಅಥವಾ ಇಲ್ವಾ.? ಸುಳ್ಳು ಸರ್ಟಿಫಿಕೇಟ್ ಕೊಟ್ಟು ಕೆಲಸ ಗಿಟ್ಟಿಸಿಕೊಂಡ ಅವರನ್ನು ಸಭೆಯಲ್ಲಿ ಕುರಿಸಿಕೊಂಡು ಅಂಥವರಿಂದ ಆದೇಶ ಕೊಡಿಸ್ತಾ ಇದ್ದೀರಾ.? ಇದನ್ನು ಹಿರಿಯ ಅಧಿಕಾರಿಗಳು  ಕೇಳಬೇಕಾ.? ನನಗೆ ಕೆಲಸ ಮಾಡಲು ಆಗೋದಿಲ್ಲ ಎಂದು ವಿಆರ್‍ಎಸ್ ಕೊಟ್ಟವರಿಂದ ಪಲೀಸ್ ಇಲಾಖೆ ಆಡಳಿತ ನಡೆಸ್ತಾ ಇದ್ದೀರಾ.? ಎಂದು ಸಿಎಂ ಅವರನ್ನು ಪ್ರಶ್ನಿಸಿದರು.

    ಶೋಭಾ ಕರಂದ್ಲಾಜೆ ಅವರು ದಕ್ಷಿಣ ಕನ್ನಡದವರು. ತಾಯಿ ಹೃದಯ ಇರಬೇಕಾದ ಹೆಣ್ಣು ಮಗಳು ಷಂಡರಾ ಎನ್ನುವ ರೀತಿಯಲ್ಲಿ ಮಾತಾಡೋದು ಸರಿನಾ.? ಜನಪ್ರತಿನಿಧಿಗಳಾಗಿ ನೀವು ಸಾಮರಸ್ಯ ಮೂಡಿಸಬೇಕೆ ಹೊರತು ಹೇಳಿಕೆ ಕೊಟ್ಟು ಪ್ರೇರೇಪಿಸುವುದು ಅಲ್ಲ ಎಂದು ಕರಂದ್ಲಾಜೆ ಅವರ ಹೇಳಿಕೆಗೆ ಎಚ್‍ಡಿಕೆ ಪ್ರತಿಕ್ರಿಯಿಸಿದರು.

    ಮರಳು ದಂಧೆ, ಅಕ್ರಮ ಲಾಟರಿಗೆ ಕುಮ್ಮಕ್ಕು, ಮರಳು ದಂಧೆ ತಡೆಯಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ನಡೆದ್ರೂ ಅಂತಹ ಅಧಿಕಾರಿಗಳಿಗೆ ರಕ್ಷಣೆ ಕೊಟ್ಟಿದ್ದೀರಾ.? ಕಲ್ಲಪ್ಪ ಹಂಡಿಬಾಗ್ ರಕ್ಷಣೆ ಮಾಡಿದ್ರಾ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.

    ಸೋಮವಾರ ಕರಾವಳಿ ಕೋಮುಗಲಾಟೆಗೆ ಸಂಬಂಧಿಸಿದಂತೆ ಎಚ್‍ಡಿಕೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಪ್ರಕಟಿಸಿ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಕರಾವಳಿಯ ಕೋಮುದಳ್ಳುರಿಯಲ್ಲಿ ಬೇಳೆ ಬೇಯಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವ ರಾಷ್ಟ್ರೀಯ ಪಕ್ಷಗಳು.

    ಕೋಮು ವೈಷಮ್ಯದ ದಳ್ಳುರಿಗೆ ಸಿಲುಕಿರುವ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಅಗತ್ಯ ಪ್ರಯತ್ನ ಮಾಡಬೇಕು. ಇದಕ್ಕೆ ಆಡಳಿತ ಮತ್ತು ವಿರೋಧ ಪಕ್ಷಗಳೆಂಬ ವ್ಯತ್ಯಾಸವಿಲ್ಲ ಆದರೆ ಕರಾವಳಿಯಲ್ಲಿ ಕೋಮು ದಳ್ಳುರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳೋವುದಕ್ಕೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನ ಮಾಡುತ್ತಿವೆ. ಬಿಜೆಪಿ ಕೋಮು ನಡೆದರೆ ತನಗೆ ಲಾಭವೆಂದು ಯೋಚಿಸುತ್ತುದೆ. ಸಾವಿನಲ್ಲೂ ಇವರ ವಿಭಜನೆಯ ರಾಜಕಾರಣವಿದೆ.

    ಸದಾನಂದ ಗೌಡರವರು ಮುಖ್ಯಮಂತ್ರಿಗೆ, ಮೃತಪಟ್ಟ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ನ ತಂದೆಯ ಸ್ಥಾನದಲ್ಲಿ ಕಲ್ಪಿಸಿಕೊಂಡು ನ್ಯಾಯ ದೊರಕಿಸಿಕೊಡಲು ಕೋರಿದ್ದಾರೆ. ಶರತ್ ನ ತಂದೆಯ ಮುಖವನ್ನು ನೆನೆಸಿಕೊಂಡು ಸಂಕಟ ಪಟ್ಟಿದ್ದಾರೆ.ವಿಶ್ವ ಮಾನವನಾಗಿ ಹುಟ್ಟುವ ಮನುಷ್ಯ ಅಲ್ಪ ಮಾನವನಾಗಿ ಬೆಳೆದು, ಅಲ್ಪ ಮಾನವನಾಗಿ ಸಾಯಿಸಲು ಪ್ರಯತ್ನಿಸುತ್ತಿರುವ ಕರಾಳ ರಾಜಕೀಯ ವ್ಯವಸ್ಥೆ ಕರಾವಳಿಯಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿದೆ.

    ಕಳೆದ 3 ವರ್ಷಗಳಲ್ಲಿ ಕರಾವಳಿಯಲ್ಲಿ ಕೊಲೆಗೀಡಾದ ವಿನಾಯಕ ಬಾಳಿಗಾ, ಪ್ರವೀಣ್ ಪೂಜಾರಿ, ಪ್ರತಾಪ್ ಮುರಳಿ, ಭಾಸ್ಕರ್ ಕುಂಬ್ಳೆ, ಶ್ರೀನಿವಾಸ್ ಬಜಾಲ್, ಹರೀಶ್ ಬಂಡಾರಿ ಕುಳಾಯಿ, ಶಿವರಾಜ್ ಕೊಡಿಕೆರೆ, ಪ್ರಕಾಶ್ ಕುಳಾಯಿ, ಮಣಿಕಂಠ ಸೂರತ್ಕಲ್, ಹೇಮಂತ್ ಸೂರತ್ಕಲ್, ಕೇಶವ್ ಪೂಜಾರಿ ಸೂರಿಂಜೆ, ಹರೀಶ್ ಪೂಜಾರಿ ಬಂಟ್ವಾಳ, ನಾಸಿರ್ ಸಜೀಪ, ಮುಸ್ತಪಾ ಕಾವುರು, ಅಶ್ರಫ್ ಕಲಾಯಿ, ಜಲೀಲ್ ಕರೋಪಾಡಿ, ಶಾಹುಲ್ ಅಮೀತ್ ಮಡಿಕೇರಿ, ಸಪ್ಪಾನ್ ಪಿಲಾರ್, ಕಬೀರ್ ಕುದ್ರೋಳಿ,ಸುಲೆಮಾನ್ ಕಾರ್ಕಳ ಮತ್ತು ಕಬೀರ್ ಪೋಲಾಳಿ.. ಸತ್ತ ಇವರ್ಯಾರು ಯಾವುದೇ ರಾಜಕಾರಿಣಿ ಅಥವಾ ಕೋಮು ಸಂಘಟನೆಗಳ ಮುಖಂಡರ ಮಕ್ಕಳಲ್ಲ.ಕೊಲೆಗಡುಕರಿಗೆ ಯಾವುದೇ ಧರ್ಮವಿಲ್ಲ. ವಯಕ್ತಿಕ ಹಿತಾಸಕ್ತಿ ಅಷ್ಟೇ ಇಲ್ಲಿ ಪ್ರಾಧಾನ್ಯ.ಇವರೆಲ್ಲ ಅಮಾಯಕ ಬಡವರು.

    ಕೊಲೆಗಡುಕರನ್ನು ತಮ್ಮವರು ಎಂಬ ಕಾರಣಕ್ಕೆ ಬೆಂಬಲಿಸುವ ಈ ಎರಡು ಪಕ್ಷಗಳ ರಾಜಕಾರಣದಿಂದ ನೆತ್ತರು ಹರಿಯುತ್ತಿದೆ. ಸತ್ತವರ ಹೆಸರು ಮತ್ತು ಧರ್ಮವನ್ನು ನೋಡಿ, ಪ್ರತಿಕ್ರಿಯಿಸುವುದಕ್ಕಿಂತ ದೊಡ್ಡದಾದ ಕ್ರೌರ್ಯ ಬೇರೆ ಇಲ್ಲ .ಕೊಂದವನು ತನ್ನ ಧರ್ಮ ಅಥವಾ ತನ್ನ ಪಕ್ಷವೆಂಬ ಕಾರಣಕ್ಕೆ ಬೆಂಬಲಿಸಿದರೆ, ಅದರಂತಹ ಆತ್ಮ ವಂಚನೆ ಮತ್ತೊಂದಿಲ್ಲ.ಕೋಮು ಗಲಭೆ ಎಬ್ಬಿಸಿ, ಸತ್ತವರ ರಕ್ತದ ಮೇಲೆ ರಾಜಕಾರಣ ಮಾಡಹೊರಟಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಜನತೆ ಕೋಮು ಸೌಹಾರ್ದತೆಯಿಂದ ಬದುಕುವ ಮೂಲಕ ಪ್ರತ್ತ್ಯುತ್ತರ ನೀಡಬೇಕು. ನಿಷ್ಕ್ರಿಯ ಗೊಂಡಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲು ಸರ್ಕಾರ ಪ್ರಯತ್ನಿಸಲಿ.

  • ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇವತ್ತು ಕೊನೆಯ ದಿನ: ಮಂಗಳೂರು ಮುಸ್ಲಿಮ್ಸ್ ಪೇಜ್

    ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇವತ್ತು ಕೊನೆಯ ದಿನ: ಮಂಗಳೂರು ಮುಸ್ಲಿಮ್ಸ್ ಪೇಜ್

    ಮಂಗಳೂರು: “ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇಂದು ಕೊನೆಯ ದಿನ” ಎಂದು ಮಂಗಳೂರು ಮುಸ್ಲಿಮ್ ಹೆಸರಿನಲ್ಲಿರುವ ಫೇಸ್‍ಬುಕ್ ಪೇಜ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಆಗಿದೆ.

    ಭಯೋತ್ಪಾದಕ ಕಲ್ಲಡ್ಕ ಪ್ರಭಾಕರ ಭಟ್ಟ ಸತ್ತರೆ ಅವನಿಗೆ ರಾಷ್ಟ್ರ ಧ್ವಜ ಹಾಕಿ ಗೌರವಿಸುತ್ತಿರೋ ಇಲ್ಲಾ ಕೇಸರಿ ಧ್ವಜ ಹಾಕುತ್ತಿರೋ? ಇವತ್ತು ಅವನ ಕೊನೆಯ ದಿನ..ತೀರ್ಮಾನಿಸಿ ಎಂದು ಈ ಎಫ್‍ಬಿ ಪೇಜ್‍ನಲ್ಲಿ ಸ್ಟೇಟಸ್ ಹಾಕಲಾಗಿದೆ.

    ಈ ಪೇಜ್ ನಲ್ಲಿ ರಾಜ್ಯಸರ್ಕಾರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು, ಬಂಟ್ವಾಳದಲ್ಲಿ ಪ್ರತಿಭಟನೆ ಮುಂದಾದ ಸಂಘ ಪರಿವಾರದ ವ್ಯಕ್ತಿಗಳನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಲಾಗಿದೆ.

    ಪೋಸ್ಟ್ ನಲ್ಲಿ ಏನಿದೆ?
    ಕಲಾಯಿ ಅಸ್ರಫ್ ಅವರನ್ನು ಆರ್‍ಎಸ್‍ಎಸ್ ಸಂಘಪರಿವಾರದವರು ಭೀಕರವಾಗಿ ಕೊಲೆ ಮಾಡಿದನ್ನು ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ನಡೆಸಲು ತಯಾರಾದಾಗ, ಇಲ್ಲಿ ನಿಷೇಧಾಜ್ಞೆ ಇದೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಪ್ರತಿಭಟನೆಗೆ ಮುಂದಾದರೆ ಎಲ್ಲರನ್ನೂ ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಕಾಂಗ್ರೆಸ್ ಸರಕಾರದ ಪೋಲೀಸ್ ಇಲಾಖೆ ಹೇಳಿತ್ತು.

    ಈಗ ಏನು ಮಾಡುತ್ತಿದೆ? ಇಷ್ಟು ಸಂಖ್ಯೆಯಲ್ಲಿ ಸಂಘಪರಿವಾರ ದವರು ಪ್ರತಿಭಟನೆಗಾಗಿ ಬಿಸಿ ರೋಡ್ ಬಂದು ಸೇರಲು ಎಲ್ಲಾ ರೀತಿಯ ಸಹಕಾರ ಪೊಲೀಸ್ ಇಲಾಖೆ ಮಾಡುವಂತೆ ಮಾಡಿದ್ದು ಪ್ರಭಾಕರ ಭಟ್ಟನಾ ಇಲ್ಲ? ಉಸ್ತುವಾರಿ ಸಚಿವರಾ? ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಉತ್ತರಿಸಬೇಕು.

    ನಿಷೇಧಾಜ್ಞೆ ಯನ್ನು ಲೆಕ್ಕಿಸದೆ ಸರಕಾರಕ್ಕೆ ಕಾನೂನಿಗೆ ಸವಾಲೆಸೆದು ಪ್ರತಿಭಟನೆಗಾಗಿ ಅಲ್ಲಿ ಬಂದು ಸೇರಿದ ಪ್ರತಿಯೊಬ್ಬರ ಮೇಲೂ ಕೇಸು ದಾಖಲಿಸಿ ಜೈಲಿಗೆ ಕಳುಹಿಸುವ ಧೈರ್ಯ ಕಾಂಗ್ರೆಸ್ ಸರಕಾರಕ್ಕೆ ಇದೆಯಾ? ಕಾನೂನು ಕ್ರಮವೆಲ್ಲಾ ಮುಸ್ಲಿಮರ ಮೇಲೆ ಮಾತ್ರ ಪ್ರಯೋಗಿಸಲಿಕ್ಕಾಗಿ ಮಾತ್ರ ಇರುವುದಾ ಕಾಂಗ್ರೆಸ್ ನಾಯಕರೇ ಉತ್ತರಿಸಿ.

    ಈ ಪೋಸ್ಟಿಗೆ #ಅಕ್ರವಾಗಿ_ಪ್ರತಿಭಟನೆ_ನಡೆಸಿದ_ಸಂಘಪರಿವಾರದ_ಗೂಂಡಗಳ_ಮೇಲೆ_ಲಾಠಿ_ಬೀಸಲಾಗದ_ಪೋಲಿಸರೇನು_ಗಂಡಸರಲ್ಲವೇ ಎನ್ನುವ ಹ್ಯಾಶ್ ಟ್ಯಾಗ್ ಬಳಸಲಾಗಿದೆ. ಈ ಪೋಸ್ಟಿಗೆ ಸಾಕಷ್ಟು ಪರ ವಿರೋಧ ಪ್ರತಿಕ್ರಿಯೆಗಳು ಬಂದಿದೆ.