Tag: ಕೋಬ್ರಾ

  • ಚಿಯಾನ್ ವಿಕ್ರಮ್ ಜೊತೆ ನಟಿಸಲು ಶ್ರೀನಿಧಿ ಶೆಟ್ಟಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ಚಿಯಾನ್ ವಿಕ್ರಮ್ ಜೊತೆ ನಟಿಸಲು ಶ್ರೀನಿಧಿ ಶೆಟ್ಟಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ನ್ನಡತಿ ಶ್ರೀನಿಧಿ ಶೆಟ್ಟಿ `ಕೆಜಿಎಫ್ 2′ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದಾರೆ. ಸದ್ಯ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗಿ `ಕೋಬ್ರಾ’ ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ, ತಮ್ಮ ಸಂಭಾವನೆ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕೆಜಿಎಫ್ ಸಕ್ಸಸ್ ನಂತರ ʻಕೋಬ್ರಾʼ ಚಿತ್ರಕ್ಕೆ ಬರೋಬ್ಬರಿ ಎರಡು ಪಟ್ಟು ಜಾಸ್ತಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಯಶ್ ಜೊತೆ ಕೆಜಿಎಫ್‌ನಲ್ಲಿ ಮಿಂಚಿದ ನಂತರ ಈಗ ಚಿಯಾನ್ ವಿಕ್ರಮ್ ಜತೆ ಡ್ಯುಯೆಟ್ ಹಾಡಲು ಶ್ರೀನಿಧಿ ರೆಡಿಯಾಗಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಶ್ರೀನಿಧಿ ಶೆಟ್ಟಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿರುವ ಬಗ್ಗೆ ಸಖತ್ ಸುದ್ದಿಯಲ್ಲಿದ್ದಾರೆ. ತಮಿಳಿನ ʻಕೋಬ್ರಾʼ ಚಿತ್ರಕ್ಕೆ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:Breaking-ಬಿಗ್ ಬಾಸ್ ಸೀಸನ್ 8 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ

    `ಕೆಜಿಎಫ್ 2′ ಸಿನಿಮಾಗೆ 3 ಕೋಟಿ ಸಂಭಾವನೆ ಪಡೆದಿದ್ದ ಶ್ರೀನಿಧಿ ಶೆಟ್ಟಿ, ಈಗ ತಮಿಳಿನ ಚೊಚ್ಚಲ ಚಿತ್ರಕ್ಕೆ 6 ರಿಂದ 7 ಕೋಟಿ ಸಂಭಾವನೆ ಪಡೆದಿದ್ದಾರಂತೆ. ನಟಿಸಿರುವ ಎರಡು ಚಿತ್ರದಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ನಾಯಕಿ, ಈಗ ತಮ್ಮ ಸಂಭಾವನೆ ವಿಚಾರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಮೊದಲ ಬಾರಿಗೆ ಚಿಯಾನ್‌ ವಿಕ್ರಮ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಕೆಜಿಎಫ್‌ ನಟಿ ಶ್ರೀನಿಧಿ ನಟನೆಯ ಚಿತ್ರ ʻಕೋಬ್ರಾʼ ಆಗಸ್ಟ್ 11ರಂದು ತೆರೆಗೆ ಅಬ್ಬರಿಸುತ್ತಿದೆ.  ಇನ್ನು ಕಾಲಿವುಡ್‌ನಲ್ಲಿ ಶ್ರೀನಿಧಿ ಶೆಟ್ಟಿ ಅದೆಷ್ಟರ ಮಟ್ಟಿಗೆ ಸೌಂಡ್ ಮಾಡುತ್ತಾರೆ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • 5 ಸಾವಿರ ರೂ.ಗೆ ಹಾವು ಖರೀದಿಸಿ, ಪತ್ನಿಯ ಕೊಲೆಗೆ ಟ್ವಿಸ್ಟ್ ಕೊಟ್ಟಿದ್ದ ಪತಿ ಅರೆಸ್ಟ್

    5 ಸಾವಿರ ರೂ.ಗೆ ಹಾವು ಖರೀದಿಸಿ, ಪತ್ನಿಯ ಕೊಲೆಗೆ ಟ್ವಿಸ್ಟ್ ಕೊಟ್ಟಿದ್ದ ಪತಿ ಅರೆಸ್ಟ್

    ಭೋಪಾಲ್: ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಹಾವು ಕಚ್ಚಿ ಸಾವನ್ನಪ್ಪಿದಳು ಎಂದು ಬಿಂಬಿಸಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮಧ್ಯಪ್ರದೇಶದ ಇಂದೋರ್‍ನ ಕನಡಿಯಾ ಪ್ರದೇಶದಲ್ಲಿ ಘಟನೆ ನಡೆದಿದ್ದು, 36 ವರ್ಷದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಅಮಿತೇಶ್ ಪಟೇರಿಯಾ ತನ್ನ ಪತ್ನಿ ಶಿವಾನಿ(35) ಅವರನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಅನುಮಾನ ಬಾರದಿರಲೆಂದು ಆಕೆಯ ಕೈಯಲ್ಲಿ ಸತ್ತ ಕಾಳಿಂಗ ಸರ್ಪದ ಹಲ್ಲುಗಳನ್ನು ನೆಟ್ಟಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

    ಕೌಟುಂಬಿಕ ಕಲಹದಿಂದಾಗಿ ಪಟೇರಿಯಾ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಲೆ ಮಾಡಿದ ನಂತರ ಶವದ ಕೈಯಲ್ಲಿ ಸತ್ತ ಹಾವಿನ ಕೋರೆ ಹಲ್ಲುಗಳನ್ನು ನೆಟ್ಟಿದ್ದಾನೆ. ಈ ಮೂಲಕ ಹಾವು ಕಚ್ಚಿ ತನ್ನ ಪತ್ನಿ ಸಾವನ್ನಪ್ಪಿದಳು ಎಂದು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ.

    ಶವದ ಮರಣೋತ್ತರ ಪರೀಕ್ಷೆ ನಂತರ ಸತ್ಯ ತಿಳಿದಿದ್ದು, ಕತ್ತು ಹಿಸುಕಿದ್ದರಿಂದಾಗಿ ಶಿವಾನಿ ಸಾವನ್ನಪ್ಪಿದ್ದಾರೆ ಎಂದು ಬಹಿರಂಗವಾಗಿದೆ ಚೌಹಾಣ್ ತಿಳಿಸಿದ್ದಾರೆ.

    ಪತ್ನಿಯನ್ನು ಕೊಲ್ಲುವ ಸಲುವಾಗಿ ಪಟೇರಿಯಾ 11ದಿನಗಳ ಹಿಂದೆ ರಾಜಸ್ಥಾನದ ಅಲ್ವಾರ್‍ನಿಂದ ಮರುಭೂಮಿಯ ಕಪ್ಪು ನಾಗರಹಾವನ್ನು 5 ಸಾವಿರ ರೂ.ಗೆ ಖರೀದಿಸಿದ್ದ. ನಂತರ ಅದನ್ನು ಮನೆಯಲ್ಲಿನ ಬಿರುವಿನಲ್ಲಿ ಮುಚ್ಚಿಟ್ಟಿದ್ದ. ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ನಂತರ ಸಾಕ್ಷ್ಯ ನಾಶಪಡಿಸಲು ಹಾವನ್ನು ಸಹ ಸಾಯಿಸಿದ್ದಾನೆ ಎಂದು ಎಎಸ್‍ಪಿ ಮಾಹಿತಿ ನೀಡಿದ್ದಾರೆ.

    ಭಾರತೀಯ ದಂಡ ಸಂಹಿತೆ(ಐಪಿಸಿ)ಯ ವಿವಿಧ ಸೆಕ್ಷನ್‍ಗಳಡಿ ಹಾಗೂ ಹಾವು ಸಾಯಿಸಿದ್ದಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪಟೇರಿಯಾ ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅವನ ಸಹೋದರಿ ರಿಚಾ ಚತುರ್ವೇದಿ(38) ಹಾಗೂ ಅವನ ತಂದೆ ಓಂಪ್ರಕಾಶ್ ಪಟೇರಿಯಾ(73) ಅವರನ್ನು ಸಹ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.