Tag: ಕೋನಪ್ಪನ ಅಗ್ರಹಾರ

  • ಬೆಂಗಳೂರು | ಗುರಾಯಿಸಿದ್ದಕ್ಕೆ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ

    ಬೆಂಗಳೂರು | ಗುರಾಯಿಸಿದ್ದಕ್ಕೆ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ

    ಬೆಂಗಳೂರು: ಟೀ ಅಂಗಡಿ ಬಳಿ ಗುರಾಯಿಸಿದ್ದಕ್ಕೆ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆಗೈದಿರುವ ಘಟನೆ ಬೆಂಗಳೂರಿನ (Bengaluru) ಕೋನಪ್ಪನ ಅಗ್ರಹಾರ (Konappana Agrahara) ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ನೂರುಲ್ಲಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ

    ಮೃತ ನೂರುಲ್ಲಾ ಆತನ ಗೆಳೆಯ ಮಣಿಕಂಠನ ಜೊತೆ ಟೀ ಅಂಗಡಿಗೆ ತೆರಳಿದ್ದ. ಈ ವೇಳೆ ಟೀ ಕುಡಿಯುವಾಗ ಅಲ್ಲಿದ್ದ ಗುಂಪೊಂದು ಕಿರಿಕ್ ಮಾಡಿದೆ. ಅದಕ್ಕೆ ಏನೋ ಗುರಾಯಿಸ್ತೀರಾ ಎಂದು ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ಮಧ್ಯೆ ಇನ್ನೊಂದು ಗುಂಪಿನವರು ನೂರುಲ್ಲಾಗೆ ರಾಡ್‌ನಿಂದ ತಲೆಗೆ ಹೊಡೆದಿದ್ದಾರೆ. ಇದರಿಂದ ತಲೆಗೆ ಏಟು ಬಿದ್ದು ಪರಿಣಾಮ ನೂರುಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು.

    ಆಸ್ಪತ್ರೆಯಲ್ಲಿ ಎರಡು ದಿನ ಕೋಮಾದಲ್ಲಿದ್ದು, ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ (HSR Layout) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮಹಾ ಕುಂಭಮೇಳದಿಂದ ಹಿಂದಿರುಗುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು

     

  • ಕುಡಿದ ಮತ್ತಿನಲ್ಲಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ಬರ್ಬರ ಕೊಲೆ

    ಕುಡಿದ ಮತ್ತಿನಲ್ಲಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ಬರ್ಬರ ಕೊಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಗರದ ಕೋನಪ್ಪನ ಅಗ್ರಹಾರ (Konappana Agrahara) ಸರ್ಕಲ್ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ (Uttara Pradesh) ಜಾನ್ಸಿ ಜಿಲ್ಲೆಯ ಸರ್ವೇಶ್ (28) ಎಂದು ಗುರುತಿಸಲಾಗಿದ್ದು, ಪತ್ನಿ ದೀಪಿಕಾ ಹಾಗೂ ಮಗು ಜೊತೆ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದ.ಇದನ್ನೂ ಓದಿ: ಜಮ್ಮು-ಕಾಶ್ಮೀರದ ಉಗ್ರದಾಳಿಯ ಹೊಣೆ ಹೊತ್ತ ಪಾಕ್ ಟಿಆರ್‌ಎಫ್ ಸಂಘಟನೆ

    ಹೊಸೂರು-ಬೆಂಗಳೂರು (Hosuru-Bengaluru) ಮುಖ್ಯ ರಸ್ತೆಯ ಕೋನಪ್ಪನ ಅಗ್ರಹಾರದ ಪುರಸಭೆ ಎದುರು ಸರ್ವೇಶ್ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದ. ನಿನ್ನೆ (ಅ.20 ರಂದು) ರಾತ್ರಿ ಅಂಗಡಿ ವ್ಯಾಪಾರ ಮುಗಿಸಿ, ಹೊರಡುವಾಗ ಮದ್ಯ ಖರೀದಿ ಮಾಡಿದ್ದ. ಈ ವೇಳೆ ಬಾರ್ ಎದುರಿಗಿದ್ದ ಯುವಕರ ಜೊತೆ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ಮಾಡಿ ಹೆದ್ದಾರಿ ದಾಟಿ ಬಂದು ಖಾಲಿಯಿರುವ ಜಾಗದಲ್ಲಿ ಕುಳಿತು ಮದ್ಯ ಸೇವಿಸಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ.

    ಹೆದ್ದಾರಿಯ ಬಸ್ ನಿಲ್ದಾಣ ಪಕ್ಕದಲ್ಲಿ ಕೊಲೆ ಮಾಡಿ, ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿ.ಸಿ.ಪಿ ಸಾರಾ ಫಾತಿಮ ಭೇಟಿ ನೀಡಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ (Electronic City Police Station) ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಮಾಸ್‌ ರೇಪಿಸ್ಟ್‌ ಎಂದ ರಾಹುಲ್‌ಗೆ ರಿಲೀಫ್‌ – ಅರ್ಜಿ ವಜಾ, 25 ಸಾವಿರ ದಂಡ