Tag: ಕೋಣೆ

  • ಮಕ್ಕಳಾಗ್ತಿಲ್ಲವೆಂದು ಸೊಸೆ ಕೋಣೆಗೆ ಇಬ್ಬರು ಪುತ್ರರನ್ನು ಬಿಟ್ಟ ಪಾಪಿ ಅತ್ತೆ!

    ಮಕ್ಕಳಾಗ್ತಿಲ್ಲವೆಂದು ಸೊಸೆ ಕೋಣೆಗೆ ಇಬ್ಬರು ಪುತ್ರರನ್ನು ಬಿಟ್ಟ ಪಾಪಿ ಅತ್ತೆ!

    ಲಕ್ನೋ: ಮಕ್ಕಳಾಗುತ್ತಿಲ್ಲವೆಂದು ಪಾಪಿ ಅತ್ತೆಯೊಬ್ಬಳು ಸೊಸೆಯಿದ್ದ ಕೋಣೆಗೆ ತನ್ನ ಮತ್ತಿಬ್ಬರ ಪುತ್ರರಿಬ್ಬರನ್ನು ಕಳುಹಿಸಿ ಅತ್ಯಾಚಾರ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ.

    police (1)

    ಪಾಪಿ ಅತ್ತೆಗೆ ಮೂವರು ಗಂಡು ಮಕ್ಕಳು. ಓರ್ವ ಮಗನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆ ತನ್ನ ಸೊಸೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾಳೆ. ಇದರ ಸಲುವಾಗಿ ಸೊಸೆ ಮಲಗಿದ್ದ ಸಂದರ್ಭದಲ್ಲಿ ತನ್ನ ಇಬ್ಬರು ಪುತ್ರರನ್ನು ಆಕೆಯ ಕೋಣೆಗೆ ಕುಳಹಿಸಿದ್ದಾಳೆ. ಈ ಮೂಲಕ ಸೊಸೆಯ ಮೇಲೆ ಅತ್ಯಾಚಾರ ಮಾಡಲು ಪ್ರೇರೇಪಿಸಿದ್ದಾಳೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ

    ಘಟನೆಯ ಬಳಿಕ ಸೊಸೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದೂರಿನಲ್ಲಿ ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೈದುನರಿಬ್ಬರು 2 ದಿನ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ- ಕೊಲೆ ಆರೋಪ

    ಈ ಬಗ್ಗೆ ತನಿಖೆ ನಡೆಸಿದಾಗ ಮೊಮ್ಮಗ ಬೇಕೆಂಬ ಆಸೆಗೆ ಮಹಿಳೆ ತನ್ನ ಸೊಸೆಯೊಂದಿಗೆ ಈ ದುಷ್ಕøತ್ಯ ಎಸಗಿರುವುದು ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಎಸ್ಪಿ ಸಿಟಿ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಘಟನೆಯ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

  • ರಹಸ್ಯ ಕೋಣೆಯಲ್ಲಿದ್ದ ಮಹಿಳೆಯರ ರಕ್ಷಣೆ

    ರಹಸ್ಯ ಕೋಣೆಯಲ್ಲಿದ್ದ ಮಹಿಳೆಯರ ರಕ್ಷಣೆ

    ಮುಂಬೈ: ಡ್ಯಾನ್ಸ್ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿ ರಹಸ್ಯ ಕೋಣೆಯಲ್ಲಿದ್ದ ಮಹಿಳೆಯರನ್ನು ರಕ್ಷಿಸಿದ ಘಟನೆ ಅಂಧೇರಿ ಏರಿಯಾದಲ್ಲಿ ಬೆಳಕಿಗೆ ಬಂದಿದೆ.

    ರಹಸ್ಯ ಕೋಣೆಯೊಂದರಲ್ಲಿ ಕೂಡಿಟ್ಟಿದ್ದ 17 ಮಹಿಳೆಯರನ್ನು ಗ್ರಾಹಕರ ಮುಂದೆ ನೃತ್ಯ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಬಾರ್ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ ವೇಳೆ ಈ ಘಟನೆ ಬಯಲಿಗೆ ಬಂದಿದೆ.

    ಬಾರ್ ಡಾನ್ಸ್ ನಡೆಸುತ್ತಿದ್ದ ವ್ಯಕ್ತಿ ಮಹಿಳೆಯರನ್ನು ರಹಸ್ಯ ಕೋಣೆಯಲ್ಲಿ ಕೂಡಿಟ್ಟಿದ್ದ. ಪೊಲೀಸರು ದಾಳಿ ನಡೆಸುತ್ತಾರೆ ಎಂದು ಗೊತ್ತಾದ ಬೆನ್ನಲ್ಲೇ ರಹಸ್ಯ ಕೋಣೆಗೆ ತಂತ್ರಜ್ಞಾನದ ಸಹಾಯದಿಂದ ಲಾಕ್ ಮಾಡಿದ್ದ. ದಾಳಿ ನಡೆಸಿದ ಪೊಲೀಸರು ಬಾರ್‌ನ್ನು ಶೋಧಿಸಿದರೂ ಮಹಿಳೆಯರ ಪತ್ತೆಯಾಗಲಿಲ್ಲ. ಕ್ಯಾಶಿಯರ್, ಮ್ಯಾನೇಜರ್, ವೇಟರ್‌ನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆರೋಪವನ್ನು ನಿರಾಕರಿಸಿದ್ದರು. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ

    ಆದರೆ ಮೇಕಪ್ ರೂಮ್‌ನಲ್ಲಿ ಒಂದು ದೊಡ್ಡ ಕನ್ನಡಿ ನೇತು ಹಾಕಿರುವುದನ್ನು ಪೊಲೀಸರು ಗಮನಿಸಿದರು. ಅದನ್ನು ತೆರವು ಮಾಡಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದಿದ್ದಾಗ ಅದನ್ನು ಒಡೆದು ಹಾಕಿದರು. ಅಲ್ಲಿ ಪೊಲೀಸರಿಗೆ ರಹಸ್ಯ ರೂಂ ಒಂದು ಕಾಣಿಸಿದೆ. ಅದರಲ್ಲಿ ಮಹಿಳೆಯರು ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

    ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ರೂಮ್‌ನಲ್ಲಿದ್ದ 17 ಮಹಿಳೆಯರನ್ನು ರಕ್ಷಿಸಲಾಗಿದೆ. ಈ ರೂಂ ಎಸಿಯಿಂದ ಕೂಡಿದ್ದು, ಸಂಪೂರ್ಣ ಸೌಲಭ್ಯವನ್ನು ಹೊಂದಿದೆ. ಪೊಲೀಸರು ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪ್ರೀತಿ ಉಳಿಸಿಕೊಳ್ಳಲು 10 ವರ್ಷ ಪ್ರಿಯತಮೆಯನ್ನು ಕೋಣೆಯಲ್ಲೇ ಬಚ್ಚಿಟ್ಟ ಪಾಗಲ್ ಪ್ರೇಮಿ..!

    ಪ್ರೀತಿ ಉಳಿಸಿಕೊಳ್ಳಲು 10 ವರ್ಷ ಪ್ರಿಯತಮೆಯನ್ನು ಕೋಣೆಯಲ್ಲೇ ಬಚ್ಚಿಟ್ಟ ಪಾಗಲ್ ಪ್ರೇಮಿ..!

    – ಲವ್ ಸ್ಟೋರಿ ಬೆಳಕಿಗೆ ಬಂದಿದ್ದು ಹೇಗೆ..?

    ಪಾಲಕ್ಕಾಡ್(ಕೇರಳ): ವ್ಯಕ್ತಿಯೊಬ್ಬ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಪ್ರಿಯತಮೆಯನ್ನು ಬರೋಬ್ಬರಿ 10 ವರ್ಷಗಳ ಕಾಲ ಕೋಣೆಯಲ್ಲೇ ಬಂಧಿಸಿಟ್ಟಿದ್ದ ವಿಚಿತ್ರ ಹಾಗೂ ಅಪರೂಪದ ಘಟನೆಯೊಂದು ಕೇರಳದ ಪಾಲಕ್ಕಾಡ್ ನಲ್ಲಿ ಬೆಳಕಿಗೆ ಬಂದಿದೆ.

    ಹೌದು, ಪಾಲಕ್ಕಾಡ್ ಜಿಲ್ಲೆಯ ಅಯಲೂರಿನ ನಿವಾಸಿ 18 ವರ್ಷದ ಸಂಜಿತಾ ತನ್ನ ಮನೆಯ ಪಕ್ಕದ ರೆಹಮಾನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದರಿಂದ ಇಬ್ಬರ ಪ್ರೀತಿ ಮನೆಯವರಿಗೆ ತಿಳಿದಿರಲಿಲ್ಲ. ಹೀಗಾಗಿ ತಮ್ಮಿಬ್ಬರ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾದರೆ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಭಾವಿಸಿ ಹೇಗಾದರೂ ನಾವಿಬ್ಬರು ಒಂದಾಗಲೇ ಬೇಕು ಎಂದು ಒಂದು ದಿಟ್ಟ ನಿರ್ಧಾರಕ್ಕೆ ಬಂದಿದ್ದಾರೆ.

    ಸುಮಾರು 10 ವರ್ಷಗಳ ಹಿಂದೆ ಒಂದು ದಿನ ಸಂಜಿತಾ ಮನೆಯಿಂದ ಇದ್ದಕ್ಕಿದದತೆ ನಾಪತ್ತೆಯಾಗಿದ್ದಳು. ಇತ್ತ ಮಗಳಿಗಾಗಿ ಮನೆ ಮಂದಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಸಂಜಿತಾ ಮಾತ್ರ ಪತ್ತೆಯಾಗಲೇ ಇಲ್ಲ. ಕೊನೆಗೆ ಅನುಮಾನಗೊಂಡ ಪೋಷಕರು ಆಕೆ ಯಾರದ್ದೋ ಜೊತೆ ಓಡಿ ಹೋಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು.

    ವಿಭಿನ್ನ ಜಾತಿಯಾಗಿದ್ದರಿಂದ ಮನೆಯವರು ವಿರೋಧ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಸಂಜಿತಾ ಆಕೆಯ ಮನೆ ಪಕ್ಕದಲ್ಲಿರೋ ರೆಹಮಾನ್ ಮನೆಯ ಸಣ್ಣ ಕೋಣೆಯಲ್ಲಿ ಬಂಧಿಯಾಗಿದ್ದಳು. ಪೈಂಟರ್ ಕೆಲಸ ಮಾಡುತ್ತಿದ್ದ ರೆಹಮಾನ್ ಬೆಳಗ್ಗೆ ಹೋಗಿ ಸಂಜೆ ಮನೆಗೆ ವಾಪಸ್ಸಾಗುತ್ತಿದ್ದ. ಇದೇ ಮನೆಯಲ್ಲಿ ರೆಹಮಾನ್ ತಾಯಿ ಹಾಗೂ ಅಣ್ಣ ಇದ್ದು, ಅವರಿಗೂ ಸಂಜಿತಾ ಇರೋ ವಿಚಾರ ಗೊತ್ತೇ ಇರಲಿಲ್ಲ. ಯಾಕೆಂದರೆ ರೆಹಮಾನ್ ತುಂಬಾ ಕೋಪಿಷ್ಠನಾಗಿರುವುದರಿಂದ ಯಾರೂ ಆತನ ಕೋಣೆಗೆ ಹೋಗುತ್ತಿರಲಿಲ್ಲ. ಅಲ್ಲದೆ ನಿತ್ಯವೂ ಕೆಲಸಕ್ಕೆ ಹೋಗುವಾಗ ರೆಹಮಾನ್ ತನ್ನ ರೂಮ್ ಲಾಕ್ ಮಾಡಿಕೊಂಡು ಹೋಗುತ್ತಿದ್ದನು. ಹೀಗಾಗಿ ಮನೆಯವರಿಗೆ ಯಾವೊಂದು ವಿಚಾರವು ತಿಳಿದಿರಲಿಲ್ಲ.

    ಇತ್ತ ರೆಹಮಾನ್ ತಾಯಿ ಹಾಗೂ ಅಣ್ಣ ಕೂಡ ಕೆಲಸಕ್ಕೆ ಹೋಗುತ್ತಿದ್ದರು. ಅವರು ಕೆಲಸಕ್ಕೆ ತೆರಳಿದ ಬಳಿಕ ಸಂಜಿತಾ ಕಿಟಕಿ ಸರಿಸಿ ಕೋಣೆಯಿಂದ ಹೊರಬಂದು ತನ್ನ ನಿತ್ಯ ಕರ್ಮಗಳನ್ನು ಮುಗಿಸುತ್ತಿದ್ದಳು. ಹೀಗೆ ಸುಮಾರು 10 ವರ್ಷಗಳ ಕಾಲ ಇಬ್ಬರ ಪ್ರೀತಿ ಸಣ್ಣ ರೂಮಿನಲ್ಲಿಯೇ ನಡೆಯುತ್ತಿತ್ತು. ಇದೀಗ ಸಂಜಿತಾಗೆ 29 ವರ್ಷವಾದ್ರೆ ರೆಹಮಾನ್ ಗೆ 34 ವರ್ಷ. 10 ವರ್ಷ ಸಂಜಿತಾ ತನ್ನ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿರೋ ರೆಹಮಾನ್ ಮನೆಯಲ್ಲಿರುವ ವಿಚಾರ ಆಕೆಯ ಪೋಷಕರಿಗೆ ಗೊತ್ತೇ ಆಗಿರಲಿಲ್ಲ.

    ಬೆಳಕಿಗೆ ಬಂದಿದ್ದು ಹೇಗೆ..?
    ಕಳೆದ ಮೂರು ತಿಂಗಳಿನಿಂದ ರೆಹಮಾನ್ ನಾಪತ್ತೆಯಾಗಿದ್ದನು. ಹೀಗಾಗಿ ರೆಹಮಾನ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಹುಡುಕಾಟ ನಡೆಸಿದಾಗ ರೆಹಮಾನ್ ಜೊತೆ ಸಂಜಿತಾ ಕೂಡ ಪತ್ತೆಯಾಗಿದ್ದಳು. ಸಂಜಿತಾ ನೋಡಿದ ಪೋಷಕರೇ ಒಂದು ಬಾರಿ ದಂಗಾದರು. ನಂತರ ಪೊಲೀಸರ ಮುಂದೆ ಇಬ್ಬರು ತಮ್ಮ ಪ್ರೇಮ ಕಥೆಯನ್ನು ಬಿಚ್ಚಿಟ್ಟರು.

    ಸದ್ಯ ಪೊಲೀಸರು ಇಬ್ಬರನ್ನೂ ಜಡ್ಜ್ ಮುಂದೆ ತಂದು ನಿಲ್ಲಿಸಿದಾಗ 10 ವರ್ಷಗಳ ಕಾಲ ನಡೆದ ವಿಚಾರಗಳನ್ನು ತಿಳಿಸಿರುವ ಸಂಜಿತಾ, ತಾನು ರೆಹಮಾನ್ ನನ್ನು ಮದುವೆಯಾಗಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾಳೆ. ಈ ವಿಷಯ ಕೇಳುತ್ತಿದ್ದಂತೆಯೇ ಕೋರ್ಟ್ ನಲ್ಲಿದ್ದವರು ಕೂಡ ಶಾಕ್ ಆದರು. ಸುಮಾರು 11 ವರ್ಷಗಳ ಕಾಲ ಪುಟ್ಟ ಕೋಣೆಯನ್ನೇ ಪ್ರಪಂಚವನ್ನಾಗಿಸಿಕೊಂಡು ಬದುಕುತ್ತಿದ್ದ ಸಂಜಿತಾ ಪ್ರೀತಿ ಕಂಡು ಅಚ್ಚರಿಗೊಳಗಾಗಿದ್ದಾರೆ.

  • ಇಲಿ ಓಡಿಸಲು ನಿರಾಕರಿಸಿದ ಪತಿಯ ಜನನಾಂಗವನ್ನೇ ಕಚ್ಚಿದಳು!

    ಇಲಿ ಓಡಿಸಲು ನಿರಾಕರಿಸಿದ ಪತಿಯ ಜನನಾಂಗವನ್ನೇ ಕಚ್ಚಿದಳು!

    ಲುಸಾಕಾ(ಪೂರ್ವ ಆಫ್ರಿಕಾ): ಮಹಿಳೆಯೊಬ್ಬರು 52 ವರ್ಷದ ತನ್ನ ಪತಿಯ ಜನನಾಂಗವನ್ನೇ ಕಚ್ಚಿದ ಅಚ್ಚರಿಯ ಘಟನೆಯೊಂದು ಜಾಂಬಿಯಾದ ಕಿಟ್ವೆ ಪಟ್ಟಣದಲ್ಲಿ ನಡೆದಿದೆ.

    ಮಹಿಳೆಯನ್ನು ಮುಕುಪಾ(40) ಎಂದು ಗುರುತಿಸಲಾಗಿದೆ. ಈಕೆ ತನ್ನ ಬೆಡ್ ರೂಂನಲ್ಲಿದ್ದ ಇಲಿಯನ್ನು ಓಡಿಸಲು ನಿರಾಕರಿಸಿದ ಪತಿಗೆ ಈ ರೀತಿಯ ಶಿಕ್ಷೆ ನೀಡಿದ್ದಾಳೆ.

    ಮಹಿಳೆ ತನ್ನ ಗೆಳೆಯರ ಜೊತೆ ಪಾರ್ಟಿ ಮಾಡಿ ಮದ್ಯದ ಅಮಲಿನಲ್ಲಿ ಮನೆಗೆ ಹಿಂದಿರುಗಿದ್ದಾಳೆ. ಈ ವೇಳೆ ಬೆಡ್ ರೂಮಿನಲ್ಲಿ ಇಲಿ ಓಡಾಡುತ್ತಿರುವನ್ನು ಕಂಡಿದ್ದಾಳೆ. ಅಲ್ಲದೆ ಇಲಿ ಓಡಾಡುತ್ತಿರುವುದರಿಂದ ನಿದ್ದೆಯೂ ಬರುತ್ತಿರಲಿಲ್ಲ. ಇದರಿಂದ ಕಂಗಾಲಾದ ಆಕೆ ತನ್ನ ಪತಿಯ ಬಳೀ ಹೋಗಿ ಇಲಿ ಓಡಿಸುವಂತೆ ಹೇಳಿದ್ದಾಳೆ.

    ಇತ್ತ ನಿದ್ದೆಯ ಮಂಪರಿನಲ್ಲಿದ್ದ ಪತಿ, ಪತ್ನಿ ಮಾತನ್ನು ನಿರಾಕರಿಸಿದ್ದಾನೆ. ಹೀಗಾಗಿ ಇಲಿ ಓಡಾಡುತ್ತಾ ಮಹಿಳೆಯ ಕ್ವಾಟ್ಲೆ ಕೊಡುವುದನ್ನು ಮುಂದವರಿಸಿತ್ತು. ಇದರಿಂದ ಸಿಟ್ಟಿಗೆದ್ದ ಮಹಿಳೆ ತನ್ನ ಪತಿಯ ಜೊತೆ ವಾಗ್ವಾದಕ್ಕಿಳಿದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಪತಿಯ ಜನನಾಂಗವನ್ನೇ ಕಚ್ಚುವ ಮೂಲಕ ಶಿಕ್ಷೆ ನೀಡಿದ್ದಾಳೆ.

    ಘಟನೆಯಿಂದ ಗಾಯಗೊಂಡ ಪತಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಒಂದೇ ಮನೆಯಲ್ಲಿದ್ದರೂ ಪತಿ ಹಾಗೂ ಪತ್ನಿ ಬೇರೆ ಬೇರೆ ರೂಮಿನಲ್ಲಿ ಇರುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

  • ಪ್ರಾಂಶುಪಾಲರ ಕೋಣೆಯಲ್ಲಿ ಕಿಡಿಗೇಡಿಗಳ ಅಸಭ್ಯ ವರ್ತನೆ

    ಪ್ರಾಂಶುಪಾಲರ ಕೋಣೆಯಲ್ಲಿ ಕಿಡಿಗೇಡಿಗಳ ಅಸಭ್ಯ ವರ್ತನೆ

    ವಿಜಯಪುರ: ಸರ್ಕಾರಿ ಶಾಲೆಯ ಪ್ರಾಂಶುಪಾಲರ ಕೋಣೆಯಲ್ಲಿ ಕೆಲ ಪುಡಾರಿಗಳು ದೇಹದ ಕೂದಲನ್ನು ತಗೆದು ಬಿಸಾಕಿದ ಘಟನೆ ವಿಜಯಪುರದ ಜುಮ್ನಾಳ ಗ್ರಾಮದಲ್ಲಿ ನಡೆದಿದೆ.

    ಜುಮ್ನಾಳ ಸರ್ಕಾರಿ ಗಂಡು ಮಕ್ಕಳ ಶಾಲೆಯ ಪ್ರಾಂಶುಪಾಲರ ಕೋಣೆಯ ಗುರುವಾರ ರಾತ್ರಿ ಬೀಗ ಒಡೆದು ಕೋಣೆಯ ಮೇಜಿನ ಮೇಲೆ ದೇಹದ ಕೂದಲು ಮತ್ತು ಅದನ್ನು ತಗೆಯುವುದಕ್ಕೆ ಬಳಸಿದ ಬ್ಲೇಡ್ ಸೇರಿದಂತೆ ಸಾಮಗ್ರಿಗಳನ್ನು ಅಲ್ಲಿಯೇ ಬಿಸಾಡಿದ್ದಾರೆ. ಅಲ್ಲದೆ ಗುಟ್ಕಾ ಚೀಟಿಗಳನ್ನು ಎಸೆದು ಪರಾರಿಯಾಗಿದ್ದಾರೆ.

    ಇಂದು ಶಾಲೆಯ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಶಾಲಾ ಮಕ್ಕಳು ಸೇರಿದಂತೆ ಶಾಲಾ ಸಿಬ್ಬಂದಿ ಭಯ ಭೀತರಾಗಿದ್ದು, ಕಿಡಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಕಿಡಿಗೇಡಿಗಳು ಪ್ರಾಂಶುಪಾಲರ ಕೋಣೆಯಲ್ಲಿ ಈ ರೀತಿ ಕೃತ್ಯ ಎಸಗಿರುವುದು ವಿಚಿತ್ರ ಎಂದು ಎನಿಸುತ್ತದೆ. ಈ ಕೆಲಸ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಸ್ಥಳೀಯರಾದ ಜಿತೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಯಲ್ಲಿ ತಪ್ಪು ಮಾಡಿದ್ದಾಳೆಂದು 20 ವರ್ಷದಿಂದ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಪೋಷಕರು

    ಶಾಲೆಯಲ್ಲಿ ತಪ್ಪು ಮಾಡಿದ್ದಾಳೆಂದು 20 ವರ್ಷದಿಂದ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಪೋಷಕರು

    ಮಂಗಳೂರು: ಶಾಲೆಯಲ್ಲಿ ತಪ್ಪು ಮಾಡಿದಳೆಂಬ ಕಾರಣಕ್ಕಾಗಿ ಯುವತಿಯನ್ನು 20 ವರ್ಷದಿಂದ ಮನೆಯ ಕತ್ತಲೆ ಕೋಣೆಯೊಳಗೆ ಕೂಡಿ ಹಾಕಿ ಮನೆ ಮಂದಿ ಅಮಾನವೀಯತೆ ಮೆರೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪದಲ್ಲಿ ನಡೆದಿದೆ.

    ಮಲ್ಲಿಕಾ (35) ಕತ್ತಲೆ ಕೋಣೆಯಲ್ಲಿದ್ದ ಯುವತಿ. ಕಳೆದ 20 ವರ್ಷದ ಹಿಂದೆ ಶಾಲೆಯಲ್ಲಿ ತಪ್ಪು ಮಾಡಿದಳೆಂಬ ಕಾರಣಕ್ಕಾಗಿ ಮಲ್ಲಿಕಾ ತಂದೆ ಮನೆಯ ಕೋಣೆಯ ಒಳಗೆ ಕೂಡಿ ಹಾಕಿದ್ದು, ಅಂದಿನಿಂದ ಇಂದಿನವರೆಗೆ ಮನೆ ಒಳಗೆಯೇ ಇದ್ದಾಳೆ. ಮಲ್ಲಿಕಾ ಬೆಳಕು ಕಾಣದೆ 20 ವರ್ಷ ಆಗಿತ್ತು.

    ಮಲ್ಲಿಕಾ ಅಕ್ಕ ದಿನಕ್ಕೆ ಒಂದು ಬಾರಿ ಆಕೆಗೆ ಊಟ ಕೊಟ್ಟು ಬಾಗಿಲು ಹಾಕಿ ಹೋಗುತ್ತಿದ್ದರು. 20 ವರ್ಷದಿಂದ ಇದೇ ಪರಿಪಾಟ ನಡೆಯುತ್ತಿದೆ. ಭಾನುವಾರದಂದು ಸ್ಥಳೀಯರು ಮನೆ ಬಳಿ ಹೋದಾಗ ವಿಷಯ ಗೊತ್ತಾಗಿದೆ. ಮನೆ ಮಂದಿ ಕೇಳಿದರೆ ಇದು ಕೌಟುಂಬಿಕ ವಿಚಾರ ಎಂದು ಗದರಿಸಿದ್ದಾರೆ.

    ಸ್ಥಳೀಯರು ಇಂದು ಮತ್ತೆ ಮನೆ ಬಳಿ ಹೋದಾಗ ಮಲ್ಲಿಕಾಳನ್ನು ಒಬ್ಬಂಟಿಯಾಗಿ ಬಿಟ್ಟು ಬಾಗಿಲು ಹಾಕಿ ಹೋಗಿದ್ದಾರೆ. ಮಾನವ ಹಕ್ಕುಗಳ ಆಯೋಗಕ್ಕೆ ಸ್ಥಳೀಯರು ಮಾಹಿತಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಮಲ್ಲಿಕಾ ತಂದೆ ತೀರಿ ಹೋಗಿದ್ದು, ತಾಯಿಗೆ ಹುಷಾರಿಲ್ಲದೇ ಮಗಳ ಮನೆ ಸೇರಿದ್ದಾರೆ.