Tag: ಕೋಣ

  • ಕೋಣ ಚಿತ್ರದ ಹೊಸ ಅವತಾರದಲ್ಲಿ ಕೋಮಲ್: ಟ್ರೇಲರ್‌  ರಿಲೀಸ್

    ಕೋಣ ಚಿತ್ರದ ಹೊಸ ಅವತಾರದಲ್ಲಿ ಕೋಮಲ್: ಟ್ರೇಲರ್‌ ರಿಲೀಸ್

    ಹಜಾಭಿನಯದ ಮೂಲಕ ಮನೆ ಮಾತಾಗಿರುವ ಕೋಮಲ್ ಕುಮಾರ್ (Komal) ಇದೀಗ ಕೋಣ (Kona) ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿಯಾಗುತ್ತಿದ್ದಾರೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಕೋಣ ಚಿತ್ರದ ಟ್ರೇಲರ್ (Trailer) ಇದೀಗ ರಿಲೀಸ್ ಆಗಿದೆ. ಕಾಮಿಡಿ, ಆಕ್ಷನ್, ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಇಲ್ಲಿ ಕೋಮಲ್ ಹೊಸ ಅವತಾರದಲ್ಲಿ ಕಾಣಿಸುತ್ತಾರೆ.

    ನಿರ್ಮಾಣದಲ್ಲಿ ಕೈ ಜೋಡಿಸಿರುವ ತನಿಷಾ ಕುಪ್ಪಂಡ (Tanisha Kuppanda) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿರಾಜ್, ರಿತ್ವಿ ಜಗದೀಶ್, ನಮ್ರತಾ ಗೌಡ, ವಿನಯ್ ಗೌಡ, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.  ಇದನ್ನೂ ಓದಿ:  ಮೊದಲ ದಿನವೇ ಬುಕ್‌ಮೈಶೋದಲ್ಲಿ ದಾಖಲೆ ಬರೆದ ಕಾಂತಾರ

    ಡಾರ್ಕ್ ಕಾಮೆಡಿ ಶೈಲಿಯಲ್ಲಿ ‘ಕೋಣ’ ಸಿನಿಮಾ ಮೂಡಿಬರಲಿದೆ. ಜಗ್ಗೇಶ್ ನಟನೆಯ ‘8 MM’ ಸಿನಿಮಾಗೆ ನಿರ್ದೇಶನ ಮಾಡಿದ್ದ ಎಸ್. ಹರಿಕೃಷ್ಣ ಅವರು ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ನಾಗೇಶ್.ಎನ್ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಒಂದು ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದ್ದು ತೆರೆಗೆ ಬರಲು ಸಿದ್ಧವಾಗಿದೆ. ಕೋಮಲ್ ಕುಮಾರ್ ಅವರು ಈವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ‘ಕೋಣ’ ಸಿನಿಮಾದಲ್ಲಿ ನಿಭಾಯಿಸಿದ್ದಾರೆ. ಇದನ್ನೂ ಓದಿKantara: Chapter 1ಗೆ ಭರ್ಜರಿ ರೆಸ್ಪಾನ್ಸ್  ಮೊದಲ ದಿನವೇ 55 ಕೋಟಿ ಗಳಿಕೆ

    ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್ .ಎನ್ ಅವರು ‘ಕೋಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ನಾಗರಾಜ್ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದು ಇವರ ಜೊತೆ ವಿಶಾಲ್ ಗೌಡ ಸಹ ಕೈ ಜೋಡಿಸಿದ್ದಾರೆ. ಉಮೇಶ್ ಆರ್. ಬಿ. ಅವರ ಸಂಕಲನ ಚಿತ್ರಕ್ಕಿದೆ, ಸಾಹಸ ನಿರ್ದೇಶಕರಾಗಿ ವಿನೋದ್‌ ಕುಮಾರ್‌, ಮುರುಗನ್ ಅವರ ನೃತ್ಯ ನಿರ್ದೇಶನ ಹಾಗೂ ಶಶಿಕುಮಾರ್, ಸಂದೀಪ್ ಆಚಾರ್ಯ ಸಂಭಾಷಣೆ ಚಿತ್ರಕ್ಕಿದ್ದು ಕೋಣ ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು ಪ್ರೇಕ್ಷಕರನ್ನ ಸೆಳೆಯುವಲ್ಲಿ ಅನುಮಾನವೇ ಇಲ್ಲ.

  • ಬರೋಬ್ಬರಿ 1.15 ಲಕ್ಷಕ್ಕೆ ಕೋಣ ಮಾರಾಟ

    ಬರೋಬ್ಬರಿ 1.15 ಲಕ್ಷಕ್ಕೆ ಕೋಣ ಮಾರಾಟ

    ಚಿಕ್ಕೋಡಿ : ಮೇಕೆ, ಎಮ್ಮೆ, ಹಸು ದುಬಾರಿ ಹಣಕ್ಕೆ ಮಾರಾಟವಾಗಿರುವುದನ್ನು ಕೇಳಿರಬಹುದು. ಆದರೆ ಜಿಲ್ಲೆಯಲ್ಲಿ ಕೋಣವೊಂದು (Buffalo) 1.15 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಸುದ್ದಿ ಮಾಡಿದೆ.

    ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರಾಯಪ್ಪ ಚೌಗಲಾ ಎಂಬುವವರು ಸಾಕಿದ್ದ ಎರಡು ವರ್ಷದ ಕೋಣ ಬರೋಬ್ಬರಿ 1.15 ಲಕ್ಷ ರೂ.ಗಳಿಗೆ ಮಾರಾಟವಾಗಿದೆ.  ಇದನ್ನೂ ಓದಿ: 20 ಸಾವಿರಕ್ಕೆ ಮಾರಾಟ ಮತ್ತೆ 50 ಸಾವಿರಕ್ಕೆ ಖರೀದಿ – ಈಗ 1.48 ಲಕ್ಷಕ್ಕೆ 8 ತಿಂಗಳ ಟಗರು ಸೇಲ್‌!

    ಅಂದಾಜು 8.50 ಕ್ವಿಂಟಾಲ್ ತೂಕ ಹೊಂದಿರುವ ಕೋಣ ಸಂತಾನೋತ್ಪತ್ತಿಗೆ ಹೆಸರು ಮಾಡಿದೆ. ಕೋಣಕ್ಕೆ ದಿನನಿತ್ಯ 400 ರಿಂದ 500 ರೂ ವ್ಯಯಿಸುತ್ತಿದ್ದರು. ಇದನ್ನೂ ಓದಿ: ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್‌ ಕೇಸ್‌ ಬಗ್ಗೆ ಧನ್ವೀರ್ ಮಾತು

    ಇವರಿಗೆ ಕೋಣದ ಮೇಲೆ ಬಹಳ ಪ್ರೀತಿ ಇತ್ತು ಮತ್ತು ಮಾರಲು ಇಷ್ಟವಿರಲಿಲ್ಲ. ಆದರೆ ಮೇವಿನ ಕೊರತೆಯಿಂದ ಬಾಗಲಕೋಟ ಜಿಲ್ಲೆಯ ರಬಕವಿ ಪಟ್ಟಣದ ಜಾನವಾರಗಳ ವ್ಯಾಪರಸ್ಥರಿಗೆ ಮಾರಾಟ ಮಾಡಿದ್ದಾರೆ.

  • ದುರ್ಗಾದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ ನಾಪತ್ತೆ- ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

    ದುರ್ಗಾದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ ನಾಪತ್ತೆ- ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

    ಹಾವೇರಿ: ದುರ್ಗಾದೇವಿ (Durga Devi) ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ (Buffalo) ಕಾಣೆಯಾಗಿದ್ದು, ಕೋಣವನ್ನು ಹುಡುಕಿಕೊಡುವಂತೆ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹಾವೇರಿ (Haveri) ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.

    ಕಳೆದ ಕೆಲವು ವರ್ಷಗಳಿಂದ ಗ್ರಾಮದ ದೇವಿಗೆ ಹಬ್ಬದ ಕೋಣವನ್ನು ಬಿಡಲಾಗಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಕೋಣವನ್ನು ಹುಡುಕಾಡಿ ಸಿಗದೇ ಇದ್ದಾಗ ಕಾಣೆಯಾಗಿರುವ ದೇವರ ಕೋಣವನ್ನು ಹುಡುಕಿ ಕೊಡುವಂತೆ ರಟ್ಟೀಹಳ್ಳಿ ಠಾಣೆಗೆ ದೌಡಾಯಿಸಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಎಫೆಕ್ಟ್ – ಮಹಿಳಾ ಕಾರ್ಮಿಕರು ಸಿಗದೇ ರೈತರ ಪರದಾಟ

    ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರು ಹುಡುಕುವ ಕೆಲಸ ಮಾಡಿದ್ದಾರೆ. ಅದರೂ ಕೋಣ ಪತ್ತೆಯಾಗಿಲ್ಲ. ಗ್ರಾಮದ ಸುತ್ತಮುತ್ತಲಿನ ಗ್ರಾಮ ಸೇರಿದಂತೆ ಹಲವು ಗ್ರಾಮಕ್ಕೆ ಹೋಗಿ ಹುಡುಕಾಟ ಮಾಡಿದ್ದಾರೆ. ಆದರೂ ದೇವರ ಕೋಣ ಪತ್ತೆಯಾಗಿಲ್ಲ. ಹೀಗಾಗಿ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಪತ್ತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

  • ಕೋಮಲ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಶೀರ್ಷಿಕೆ ಲಾಂಚ್

    ಕೋಮಲ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಶೀರ್ಷಿಕೆ ಲಾಂಚ್

    ಮ್ಮ ಸಹಜ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ ಕೋಮಲ್ ಕುಮಾರ್ (Komal) ಅಭಿನಯದ  ‘ಕೋಣ’ (Kona) ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ (Poster) ಇತ್ತಿಚೆಗೆ ಅನಾವರಣವಾಯಿತು. ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಡಾರ್ಕ್ ಕಾಮಿಡಿ ಜಾನರ್ ಇರುವ  ಈ ಚಿತ್ರವನ್ನು ಈ ಹಿಂದೆ ಜಗ್ಗೇಶ್ ಅವರು ಅಭಿನಯಿಸಿದ್ದ 8 ಎಂಎಂ  ಚಿತ್ರವನ್ನು ನಿರ್ದೇಶಿಸಿದ್ದ  ಎಸ್ ಹರಿಕೃಷ್ಣ (S. Harikrishna) ನಿರ್ದೇಶಿಸುತ್ತಿದ್ದಾರೆ.

    ಇದೊಂದು ನೈಜ ಘಟನೆ ಆಧಾರಿತ  ಚಿತ್ರವಾಗಿದೆ. ಕೋಮಲ್ ಕುಮಾರ್ ಅವರು ಈವರೆಗೂ ಅಭಿನಯಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಆನೆ, ನಾಯಿ, ಕೋತಿ ಮೊದಲಾದ ಪ್ರಾಣಿಗಳನ್ನು ಬಳಸಿಕೊಂಡು ಸಾಕಷ್ಟು ಬಂದಿದ್ದು ಈ ಚಿತ್ರದಲ್ಲಿ ‘ಕೋಣ’(ಪ್ರಾಣಿ) ಮುಖ್ಯ ಪಾತ್ರವಾಗಿರುವುದು ವಿಶೇಷವಾಗಿರಲಿದೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಹರಿಕೃಷ್ಣ ಎಸ್ ತಿಳಿಸಿದ್ದಾರೆ.

    ತೇಜ್ವಿನ್ ಪ್ರೊಡಕ್ಷನ್ ಲಾಂಛನದಲ್ಲಿ ವಿನೋದ್ ಕುಮಾರ್ ಹಾಗೂ ಸೆಲ್ವನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಕುಮಾರ್ ಬಿ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಅವರ ಸಂಕಲನವಿರುವ ಈ ಚಿತ್ರಕ್ಕಿದೆ. ಸಂಜಯ್ ಹಾಗೂ ಉತ್ತಮ್ ಸ್ವರೂಪ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  • ಕಂಬಳದಲ್ಲಿ ಭಾಗವಹಿಸಲು 100ಕ್ಕೂ ಅಧಿಕ ಜೊತೆ ಕೋಣಗಳು ಬೆಂಗಳೂರಿಗೆ: ಅಶೋಕ್ ರೈ

    ಕಂಬಳದಲ್ಲಿ ಭಾಗವಹಿಸಲು 100ಕ್ಕೂ ಅಧಿಕ ಜೊತೆ ಕೋಣಗಳು ಬೆಂಗಳೂರಿಗೆ: ಅಶೋಕ್ ರೈ

    ಮಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇದೇ ಮೊತ್ತಮೊದಲ ಬಾರಿಗೆ ಕಂಬಳ (Kambala) ಆಯೋಜನೆಗೊಳ್ಳುತ್ತಿದೆ. ನವೆಂಬರ್ 25 ಮತ್ತು 26ರಂದು ನಡೆಯುವ ಕಂಬಳದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ 100ಕ್ಕೂ ಅಧಿಕ ಜೋಡಿ ಕೋಣಗಳು (Buffalo) ಮಂಗಳೂರಿನಿಂದ (Mangaluru) ಮೆರವಣಿಗೆ ಮೂಲಕ ಬೆಂಗಳೂರಿಗೆ ತೆರಳಲಿದೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಸಂಬಂಧಿಸಿದಂತೆ ಕಂಬಳ ಕೋಣಗಳ ಮಾಲೀಕರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನವೆಂಬರ್ 23ರಂದು ಮೆರವಣಿಗೆಯ ಮೂಲಕ ಕೋಣಗಳನ್ನು ಲಾರಿಯಲ್ಲಿ ಬೆಂಗಳೂರಿಗೆ ಕೊಂಡೊಯ್ಯಲಾಗುತ್ತದೆ. ಹಾಸನದಲ್ಲಿ ಎರಡು ಗಂಟೆಗಳ ಕಾಲ ಕೋಣಗಳಿಗೆ ವಿಶ್ರಾಂತಿ ಮತ್ತು ಆಹಾರ ನೀಡಲಾಗುತ್ತದೆ. ಬಳಿಕ ಚನ್ನರಾಯಪಟ್ಟಣ, ತುಮಕೂರಿನಲ್ಲಿ ವಿಶ್ರಾಂತಿ ಪಡೆದು ಬೆಂಗಳೂರಿಗೆ ಹೋಗಲಾಗುವುದು. ಹಾಸನ, ಚನ್ನರಾಯಪಟ್ಟಣ ಮತ್ತು ತುಮಕೂರಿನಲ್ಲಿ ಕರಾವಳಿಯ ಜನರು ಸೇರಿದಂತೆ ಸ್ಥಳೀಯರು ಕೋಣಗಳಿಗೆ ಸ್ವಾಗತಿಸಲಿದ್ದಾರೆ. ಈ ಕೋಣಗಳನ್ನು ಕೊಂಡೊಯ್ಯುವಾಗ ಪಶು ವೈದ್ಯಾಧಿಕಾರಿಗಳು ಮತ್ತು ಪಶು ಅಂಬುಲೆನ್ಸ್‌ಗಳು ಜೊತೆಗಿರಲಿದೆ ಎಂದರು. ಇದನ್ನೂ ಓದಿ: ಲಿಂಗಾಯತರ ವಿರುದ್ಧ ಸಿಎಂ ಪದೇ ಪದೇ ದ್ವೇಷ ಸಾಧಿಸುತ್ತಿದ್ದಾರೆ: ಬಿಜೆಪಿ ಟೀಕೆ

    125 ಜೋಡಿ ಕೋಣಗಳಿಗೆ ಬೆಂಗಳೂರಿನಲ್ಲಿ ಟೆಂಟ್ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಮಾಲೀಕರಿಗೆ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಕೋಣಗಳಿಗೆ ನೀರಿನ ವ್ಯತ್ಯಾಸವಾಗಬಾರದೆಂಬ ನೆಲೆಯಲ್ಲಿ ಮಂಗಳೂರಿನಿಂದಲೇ 5 ಟ್ಯಾಂಕರ್ ನೀರನ್ನು ಅಲ್ಲಿಗೆ ಕೊಂಡೊಯ್ಯಲಾಗುತ್ತದೆ. ಕೋಣಗಳಿಗೆ ಬೈಹುಲ್ಲು, ಹುರುಳಿಯನ್ನು ಇಲ್ಲಿಂದಲೇ ಕೊಂಡೊಯ್ದು ಅಲ್ಲಿಯೇ ತಯಾರಿಸಿ ಕೊಡಲಾಗುತ್ತದೆ. ಈ ವರ್ಷ ಆರಂಭಿಸಲಾದ ಕಂಬಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದರೆ ಇದನ್ನು ಪ್ರತೀ ವರ್ಷ ಮುಂದುವರಿಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ಕಾಂಗ್ರೆಸ್‌ನಲ್ಲಿ ಲಿಂಗಾಯತ ಬಾಂಬ್‌: ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗ್ತಾರಾ ಸಿಎಂ?

    ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದ್ದು, ಸ್ಯಾಂಡಲ್‌ವುಡ್, ಬಾಲಿವುಡ್ ಸ್ಟಾರ್ ನಟ-ನಟಿಯರು ಕಂಬಳಕ್ಕೆ ಬರುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ಪಕ್ಷಗಳ ಪ್ರಮುಖರು ಭಾಗಿಯಾಗಲಿದ್ದಾರೆ. ಈ ಕಂಬಳದಲ್ಲಿ 7 ರಿಂದ 8 ಲಕ್ಷ ಜನ ಸೇರುವ ನಿರೀಕ್ಷೆಯಿದೆ. 2,000 ಮಂದಿ ವಿಐಪಿಗಳಿಗೆ ಆಸನ ವ್ಯವಸ್ಥೆ ಮಾಡಲಾಗುತ್ತದೆ. 15 ಸಾವಿರ ಮಂದಿಗೆ ಗ್ಯಾಲರಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಒಂದೆಡೆ ಕಂಬಳ ನಡೆಯುತ್ತಿದ್ದರೆ, ಮತ್ತೊಂದೆಡೆ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ನೂರಕ್ಕೂ ಅಧಿಕ ಮಳಿಗೆಗಳಲ್ಲಿ ಕರಾವಳಿಯ ಆಹಾರ ಮಳಿಗೆಗಳನ್ನು ಅಳವಡಿಸಲಾಗುತ್ತದೆ ಎಂದರು. ಇದನ್ನೂ ಓದಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 209ರೂ. ಏರಿಕೆ

    ಕಂಬಳವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಬೆಂಗಳೂರು ಕಂಬಳವನ್ನು ಕರಾವಳಿಯಲ್ಲಿ ನಡೆಯುವ ಕಂಬಳದಂತೆ ಆಯೋಜಿಸಲಾಗುತ್ತದೆ. ಕಂಬಳಕ್ಕೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು, ಕಾನೂನುಗಳನ್ನು, ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸಿಕೊಂಡು ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 5ರಿಂದ 6 ಕೋಟಿ ರೂ. ವೆಚ್ಚದಲ್ಲಿ ಕಂಬಳ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅ.7 ರವರೆಗೆ 2,000 ರೂ. ನೋಟು ಬದಲಿಸಿಕೊಳ್ಳಲು ದಿನ ವಿಸ್ತರಿಸಿದ RBI

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಮ್ಮೆಗಳ ಜೊತೆ ಸೇರಲು ಬಿಡದಿದ್ದಕ್ಕೆ ಮಾಲೀಕನನ್ನೇ ಇರಿದು ಕೊಂದ ಕೋಣ

    ಎಮ್ಮೆಗಳ ಜೊತೆ ಸೇರಲು ಬಿಡದಿದ್ದಕ್ಕೆ ಮಾಲೀಕನನ್ನೇ ಇರಿದು ಕೊಂದ ಕೋಣ

    ದಾವಣಗೆರೆ: ಎಮ್ಮೆಗಳ ಜೊತೆ ಸೇರಲು ಬಿಡದಿದ್ದಕ್ಕೆ ಎಮ್ಮೆ ಮಾಲೀಕನನ್ನು ಕೋಣವೊಂದು (Buffalo) ಇರಿದು ಕೊಂದಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಎನ್ ಬಸವನಹಳ್ಳಿ (N basavanahalli) ಗ್ರಾಮದಲ್ಲಿ ನಡೆದಿದೆ.

    ಎನ್ ಬಸವನಹಳ್ಳಿ ಗ್ರಾಮದ ನಿವಾಸಿ ನೀರಗಂಟಿ ಜಯಣ್ಣ (48) ಕೋಣದ ದ್ವೇಷಕ್ಕೆ ಬಲಿಯಾದ ಎಮ್ಮೆ ಮಾಲೀಕ. ಲಿಂಗದಹಳ್ಳಿ ಗ್ರಾಮದ ಉಡುಸಲಾಂಭ ದೇವಿಗೆ ಬಿಟ್ಟ ಕೋಣ ಪಕ್ಕದ ಎನ್ ಬಸವನಹಳ್ಳಿಯ ಎಮ್ಮೆಗಳ ಜೊತೆ ಸೇರಿ ದಾಂಧಲೆ ಮಾಡುತ್ತಿತ್ತು. ಅಡಿಕೆ ತೋಟಗಳನ್ನು ಕೂಡ ಹಾಳು ಮಾಡಿತ್ತು. ಈ ವೇಳೆ ತನ್ನ ಎಮ್ಮೆಗಳ ಜೊತೆ ಸೇರಲು ಬಂದರೆ ಜಯಣ್ಣ ದೊಣ್ಣೆಯಿಂದ ಹೊಡೆದು ಪುಂಡ ಕೋಣವನ್ನು ಓಡಿಸುತ್ತಿದ್ದರು. ಎಮ್ಮೆ ಜೊತೆ ಸೇರಲು ಬಿಡದ ಜಯಣ್ಣನ ಮೇಲೆ ಕೋಣ ದ್ವೇಷ ಸಾಧಿಸಿತ್ತು. ಆತನ ಮೇಲೆ 3-4 ಬಾರಿ ದಾಳಿಯೂ ಮಾಡಿತ್ತು. ಜಯಣ್ಣ ಹಿಂದೆ ದಾಳಿಯಿಂದ ಪಾರಾಗಿದ್ದರು.

    ದುರಂತ ಎಂದರೆ ಕಳೆದ ದಿನ ಸಂಜೆ ಯಾರು ಇಲ್ಲದ್ದನ್ನು ನೋಡಿ ಕೋಣ ಜಯಣ್ಣನ ಮೇಲೆ ಮನಸೋ ಇಚ್ಚೆ ದಾಳಿ ಮಾಡಿ ಕೊಂದಿದೆ. ಜಯಣ್ಣನನ್ನು ಸಾಯಿಸಿದ ಕೋಣವನ್ನು ಎನ್ ಬಸವನಹಳ್ಳಿ ಗ್ರಾಮಸ್ಥರು ಕಟ್ಟಿ ಹಾಕಿ ಜಯಣ್ಣ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ. ಮೃತ ಜಯಣ್ಣನವರ ಪುತ್ರ ದೂರು ನೀಡಿದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡ ಚನ್ನಗಿರಿ ಪೋಲಿಸರು ಕೋಣವನ್ನು ವಶಕ್ಕೆ ಪಡೆದು ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಬೀದರ್ ಪೊಲೀಸರ ಕಾರ್ಯಾಚರಣೆ – 7 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

    ಲಿಂಗದಹಳ್ಳಿ ಗ್ರಾಮದ ಉಡುಸಲಾಂಭ ದೇವಿಗೆ ಬಿಟ್ಟಿರುವ ಕೋಣ ಎನ್ ಬಸವನಹಳ್ಳಿಯಲ್ಲಿ ಹಲವು ದಿನಗಳಿಂದ ತಿರುಗಾಡುತ್ತಿತ್ತು. ಈಗಾಗಲೇ 7-8 ಜನರ ಮೇಲೆ ದಾಳಿ ಮಾಡಿರುವ ಕೋಣದ ಬಗ್ಗೆ ಲಿಂಗದಹಳ್ಳಿ ದೇವಸ್ಥಾನದ ಕಮಿಟಿಯ ಗಮನಕ್ಕೆ ತರಲಾಗಿತ್ತು. ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಬಳಿಕ ಎನ್ ಬಸವನಹಳ್ಳಿ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ನಿರ್ಲಕ್ಷ್ಯವೇ ಜಯಣ್ಣನ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗದಿಂದ ಹಾರಿದ ಸ್ವದೇಶಿ ತಪಸ್ ಯುಎವಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ಯಶಸ್ವಿ ಲ್ಯಾಂಡಿಂಗ್

  • ಬೈದವರನ್ನು ಅಟ್ಟಾಡಿಸಿಕೊಂಡು ಸೇಡು ತೀರಿಸಿಕೊಳ್ಳುತ್ತಿರುವ ಕೋಣ – ಕಂಟೆಮ್ಮ ದೇವಿಯ ಪಾವಡಕ್ಕೆ ಹೈರಾಣಾದ ಗ್ರಾಮಸ್ಥ

    ಬೈದವರನ್ನು ಅಟ್ಟಾಡಿಸಿಕೊಂಡು ಸೇಡು ತೀರಿಸಿಕೊಳ್ಳುತ್ತಿರುವ ಕೋಣ – ಕಂಟೆಮ್ಮ ದೇವಿಯ ಪಾವಡಕ್ಕೆ ಹೈರಾಣಾದ ಗ್ರಾಮಸ್ಥ

    ಕೊಪ್ಪಳ: ದೇವರಿಗೆ ಹರಕೆಗೆಂದು ಬಿಟ್ಟಿರುವ ಕೋಣವೊಂದು ಬೈದು, ಹೊಡೆದ ಕಾರಣಕ್ಕಾಗಿ ವ್ಯಕ್ತಿಯೋರ್ವನಿಗೆ ಬೆಂಬಿಡದೆ ಕಾಡುತ್ತಿರುವ ವಿಚಿತ್ರ ಘಟನೆಯೊಂದು ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ.

    ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಗೆಂದು ಕೋಣವನ್ನು ಬಿಡಲಾಗಿತ್ತು. ಈ ಕೋಣ ಗ್ರಾಮದಲ್ಲಿ ಮೇವು ತಿನ್ನುತ್ತಿದ್ದ ವೇಳೆ ರೋಷನ್ ಎಂಬಾತ ಬೈದು ಓಡಿಸಿದ್ದಾನೆ. ಆ ಬಳಿಕ ಕೋಣ ಎಲ್ಲೆಂದರಲ್ಲಿ ರೋಷನ್  ಕಂಡೊಡನೆ ತಿವಿಯಲು ಅಟ್ಟಾಡಿಸಿಕೊಂಡು ಹೋಗುತ್ತಿದೆ. ಇದನ್ನೂ ಓದಿ: ದೇವರಿಗಾಗಿ ದೇವರಿಂದ್ಲೇ ಹುಡುಕಾಟ- ಹುತ್ತದಲ್ಲಿ ಸಿಕ್ಕೇ ಬಿಡ್ತು 200 ವರ್ಷದ ಹಿಂದಿನ ವಿಗ್ರಹ

    ದಾರಿಯಲ್ಲಿ ಸಿಕ್ಕರೆ ಅಟ್ಟಾಡಿಸಿಕೊಂಡು ಮನೆಯ ಮುಂದೆ ರೋಷನ್ ಹೊರಬರುವುದನ್ನೇ ಕಾಯುತ್ತಿರುವ ಕೋಣ ಕಳೆದ ಕೆಲ ದಿನಗಳಿಂದ ಕಾಟ ಕೊಡುತ್ತಿದೆ. ಇದರಿಂದ ರೋಷನ್ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ದೇವಿಗೆ ಹರಕೆಯಾಗಿ ಬಿಟ್ಟಿರುವ ಕೋಣ ಇದಾಗಿರುವುದರಿಂದ ಇದು ದೇವಿಯ ಪವಾಡ ಹಾಗಾಗಿ ಈ ರೀತಿ ತೊಂದರೆ ಕೊಡುತ್ತಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ರೋಷನ್ ಜೊತೆ ಕೋಣದೊಂದಿಗೆ ತಪ್ಪಾಯಿತು ಎಂದು ಬೇಡಿಕೊಳ್ಳಲು ಗ್ರಾಮಸ್ಥರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ – ಬೆಕ್ಕು ಸಾಕಿದ ಪೊಲೀಸರು

    Live Tv

  • ಮರಾಠಿಗರಿಂದಲೇ ಕರ್ನಾಟಕ ಕಿಂಗ್ ಅಂತ ಬಿರುದು ಪಡೆದ ಗಟ್ಟಿಗ ಗಜೇಂದ್ರ!

    ಮರಾಠಿಗರಿಂದಲೇ ಕರ್ನಾಟಕ ಕಿಂಗ್ ಅಂತ ಬಿರುದು ಪಡೆದ ಗಟ್ಟಿಗ ಗಜೇಂದ್ರ!

    ಚಿಕ್ಕೋಡಿ(ಬೆಳಗಾವಿ): ಸಖತ್ ಆಗಿ ಬಾಡಿ ಬಿಲ್ಡ್ ಮಾಡಲು, ಪೈಲ್ವಾನ್ ಗಳು ಕುಸ್ತಿ ಗೆಲ್ಲಲು ಕೆಲವೊಂದಿಷ್ಟು ಜನ ದಿನಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಇಲ್ಲೊಂದು ಕೋಣದ ಬಾಡಿ ಬಿಲ್ಡ್ ಮಾಡಲು ದಿನನಿತ್ಯ ಸಾವಿರಾರು ಖರ್ಚು ಮಾಡಲಾಗುತ್ತಿದೆ. ಕೋಣದ ಹೆಸರು ಗಜೇಂದ್ರ. ದಿನ ಬೆಳಗಾದ್ರೆ ಸಾಕು 15 ಲೀಟರ್ ಹಾಲು ಕುಡಿಯೋಕೇ ಬೇಕು. ಆತನ ಒಂದು ನೋಟ ಆತನ ಮೈಮಾಟಕ್ಕೆ ಫಿದಾ ಆಗದವರೇ ಇಲ್ಲ. ಸದ್ಯ ಕರ್ನಾಟಕ ಮಹಾರಾಷ್ಟ್ರದ ಜನರ ಹಾಟ್ ಫೇವರಿಟ್ ಆಗಿಬಿಟ್ಟಿದ್ದಾನೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ವಿಲಾಸ್ ನಾಯಿಕ್ ಎಂಬವರು ಬೆಳೆಸಿರೋ ಈತ ಮುರಾ ತಳಿಯ ಕೋಣ. ದಿನವೊಂದಕ್ಕೆ ಈತನಿಗೆ ಬರೊಬ್ಬರಿ 15 ಲೀಟರ್ ಹಾಲು ಹಾಗೂ 5 ಕೆಜಿ ಪಶು ಆಹಾರ ಕಬ್ಬು ಮೇವು ಹಾಕಿ ಕಳೆದ ನಾಲ್ಕು ವರ್ಷಗಳಿಂದ ವಿಲಾಸ್ ಅವರು ಇದನ್ನ ಪ್ರೀತಿಯಿಂದ ಬೆಳೆಸಿದ್ದಾರೆ. ಇತ್ತಿಚಿಗೆ ಮಹಾರಾಷ್ಟ್ರದ ಸಾಂಗ್ಲಿಯ ತಾಸಗಾಂವ್ ನಲ್ಲಿ ನಡೆದ ಪಶು ಪ್ರದರ್ಶನದಲ್ಲಿ ಈ ಗಜೇಂದ್ರನನ್ನ 80 ಲಕ್ಷ ರೂಪಾಯಿಗೆ ಬೇಡಿದ್ದರೂ ಸಹ ಮಾಲೀಕ ವಿಲಾಸ ಮಾರಟ ಮಾಡಿಲ್ಲ.

    ಈ ಕೋಣವನ್ನ ಪಾಲನೆ ಲಾಲನೆ ಮಾಡಲು ತಿಂಗಳಿಗೆ 45 ರಿಂದ 50 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. ದಿನನಿತ್ಯ ಹಾಲು, ಮೇವು ನೀಡಿ ಈ ಕೋಣವನ್ನ ಜಬರದಸ್ತ್ ಮಾಡಲಾಗಿದೆ. ಈ ಕೋಣವನ್ನ ಜಾತ್ರೆಗಳ ಸಂದರ್ಭದಲ್ಲಿ ಆಯೋಜಿಸಲಾಗುವ ಸ್ಪರ್ಧೆಗಳಲ್ಲಿ ಈ ಕೋಣ ನಂಬರ್ ಒನ್ ಪ್ರಶಸ್ತಿ ತರದೇ ಇರುವ ಮಾತಿಲ್ಲ. ಯಾಕೆಂದರೆ ಇದನ್ನ ನೋಡಿದ ಯಾವುದೇ ತೀರ್ಪುಗಾರ ನಂಬರ್ ಕೊಡಲೇಬೇಕು ಅಂಥ ಮೈ ಮಾಟವನ್ನೇ ಈ ಕೋಣ ಹೊಂದಿದೆ.

    2 ಕೋಟಿ ರೂ. ಹಣ ಬರುವ ನಿರೀಕ್ಷೆಯಲ್ಲಿ ಮಾಲೀಕ:
    ಜಾನುವಾರ ಪ್ರದರ್ಶನ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ಹೋದಾಗ ಬರೋಬ್ಬರಿ 80 ಲಕ್ಷ ಬೆಲೆ ಈ ಕೋಣವವನ್ನ ಖರೀದಿಗಾಗಿ ಕೇಳಿದ್ದರಂತೆ. ಆದರೆ ವಿಲಾಸ ಕುಟುಂಬ ಎರಡು ಕೋಟಿ ರೂ. ವರೆಗೂ ನಮ್ಮ ಕೋಣ ಮಾರಾಟವಾಗುತ್ತದೆ ಎನ್ನುವ ನಂಬಿಕೆಯಲ್ಲಿದ್ದಾರೆ. ಈ ಕೋಣ ನಮಗೆ ಅದೃಷ್ಟದ ಕೋಣವಾಗಿದ್ದು ಹೆಚ್ಚಿನ ಪ್ರೀತಿಯಿಂದ ಈ ಕುಟುಂಬದವರು ಈ ಕೋಣವನ್ನ ಸಾಕಿ ಸಲಹುತ್ತಿದ್ದಾರೆ.

    ಇನ್ನು ಸ್ವಂತವಾಗಿ ಗದ್ದೆಯೂ ಇರದೆ ನೀರಿನ ವ್ಯವಸ್ಥೆಯೂ ಸಹ ಇರದೆ ಇದ್ದರೂ ಸಹ ವಿಲಾಸ್ ಅವರು ಮೇವು ಖರೀದಿಸಿ, ಬರೊಬ್ಬರಿ 50ಕ್ಕೂ ಹೆಚ್ಚು ಎಮ್ಮೆಗಳನ್ನ ಸಾಕಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ. ಈ ಗಜೇಂದ್ರನ ತಾಯಿ ಎಮ್ಮೆಯನ್ನ ಕಳೆದ ನಾಲ್ಕು ವರ್ಷದ ಹಿಂದೆ ವಿಲಾಸ ಬರೋಬ್ಬರಿ 1 ಲಕ್ಷ 40 ಸಾವಿರ ಕೊಟ್ಟು ತಂದಿದ್ದರಂತೆ. ಅದು ಜನ್ಮ ನೀಡಿದ ಮರಿಯೇ ಸದ್ಯ ಹೀಗೆ ದೈತ್ಯವಾಗಿ ಬೆಳೆದಿರುವ ಈ ಗಜೇಂದ್ರ. ಇಷ್ಟು ತೂಕ ಇಷ್ಟು ಆಕರ್ಷಣಿಯವಾಗಿ ಗಜೇಂದ್ರ ಬೆಳೆಯುತ್ತಾನೆ ಎಂದು ಸ್ವತಃ ವಿಲಾಸ ಅವರೇ ಭಾವಿಸಿರಲಿಲ್ಲವಂತೆ, ಈ ಗಜೇಂದ್ರ ಕೋಣದ ಜೊತೆ ಹೈನುಗಾರಿಕೆ ಮಾಡುತ್ತಿರುವ ಇವರು ದಿನಂಪ್ರತಿ ನೂರರಿಂದ ನೂರೈವತ್ತು ಲೀಟರ್ ಡೈರಿಗೆ ಹಾಲು ಹಾಕುತ್ತಾರೆ. ಇದನ್ನೂ ಓದಿ: ವೇದಿಕೆ ಮೇಲೆ ನಿಂಬೆ ಹಣ್ಣು ಉರುಳಿಬಿಟ್ಟ ಹೆಚ್‍ಡಿ ರೇವಣ್ಣ!

    ಈ ಕೋಣಕ್ಕೆ ಯಾಕಿಷ್ಟು ಬೇಡಿಕೆ:
    ಮುರಾ ತಳಿಯ ಕೋಣಗಳಿಗೆ ಫುಲ್ ಡಿಮ್ಯಾಂಡ್ ಇದೆ. ಯಾಕಂದ್ರೆ ಈ ತಳಿಯ ಕೋಣಗಳನ್ನ ಸಂತಾನೋತ್ಪತ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ಈ ಕೋಣದಿಂದ ಸಂತಾನೋತ್ಪತ್ತಿ ಮಾಡಲು ಭಾರೀ ಡಿಮ್ಯಾಂಡ್. ಈ ತಳಿಯ ಎಮ್ಮೆಗಳು ಹೆಚ್ಚಿನ ಪ್ರಮಾಣದ ಹಾಲು ನೀಡುವ ಕಾರಣ ಬಹುತೇಕ ರೈತರು ಈ ಕೋಣದ ವಿರ್ಯವನ್ನ ಸಂತಾನೋತ್ಪತ್ತಿಗೆ ಬಳಿಸುತ್ತಾರೆ. ಇದರಿಂದ ಕಟ್ಟು ಮಸ್ತಾದ ಎಮ್ಮೆಗಳು ಹಾಗೂ ಕೋಣಗಳು ಜನಿಸುವ ಕಾರಣ ಸಾಕಷ್ಟು ಈ ಭಾಗದ ರೈತರು ತಮ್ಮ ಎಮ್ಮೆಗಳನ್ನ ಗಜೇಂದ್ರನ ಬಳಿ ಕರೆ ತರುತ್ತಾರೆ. ಹೀಗಾಗಿ ಮಾಲೀಕನಿಗೆ ಈ ಒಂದು ಕಸುಬಿನಿಂದ ಹೆಚ್ಚಿನ ಲಾಭ ಬರುವುದರ ಜೊತೆಗೆ ಜಾನುವಾರ ಪ್ರದರ್ಶನಗಳಲ್ಲಿ ಬರುವ ಪ್ರಶಸ್ತಿಗಳಿಂದ ಇನ್ನಷ್ಟು ಲಾಭ ಬರುತ್ತದೆ. ಹೀಗಾಗಿ ಮಾಲೀಕನಿಗೆ ತನ್ನ ಖರ್ಚಿಗೆ ತಕ್ಕಂತೆ ಈ ಕೋಣ ಲಾಭ ಮಾಡಿಕೊಡುವ ಕಾರಣ ಈ ಗಜೇಂದ್ರ ಎಲ್ಲರಿಗೆ ಅಚ್ಚು ಮೆಚ್ಚಾಗಿದ್ದಾನೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಿವಾಸ ಸಹಿತ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಬಾಡಿಗೆ ಬಾಕಿ – ಆರ್‌ಟಿಐ ಮಾಹಿತಿ ಬಹಿರಂಗ

    ಒಟ್ಟಿನಲ್ಲಿ ಈಗಿನ ಕಾಲದಲ್ಲಿ ಪೆಟ್ ಡಾಗ್ ಗಳ ಹೆಸರಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡೋ ಜನರಿಂತ ವಿಲಾಸ ಅಭಿರುಚಿ ಮತ್ತು ಗಜೇಂದ್ರನನ್ನು ಸಾಕಿರುವ ರೀತಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಫಿದಾ ಆಗಿದ್ದು ನಿತ್ಯ ನೂರಾರು ಮಂದಿ ಬಂದು ಗಜೇಂದ್ರನ ನೋಡಿಕೊಂಡು ಹೋಗ್ತಿದ್ದಾರೆ.

  • ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್

    ಕೋಣಕ್ಕೆ 3 ಕೆಜಿ ಚಿನ್ನ ಗಿಫ್ಟ್

    ಹೈದರಾಬಾದ್: ಒಂದುವರೆಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ವ್ಯಕ್ತಿ ಕೋಣವೊಂದಕ್ಕೆ ತೊಡಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಹರಿಯಾಣದಿಂದ ಒಂದು ಕೋಣವನ್ನು ತರಿಸಲಾಗಿದ್ದು, ಅದಕ್ಕೆ ಬಾಹುಬಲಿ ಕೋಣ ಎಂದು ಹೆಸರಿಡಲಾಗಿದೆ. ಹೈದರಾಬಾದ್‍ನ ಚಾಪೆಲ್ ಬಜಾರ್‍ನ ಲಡ್ಡು ಯಾದವ್ ಎಂಬಾತ ಕೋಣವನ್ನು ಹರಿಯಾಣದ ಬಲ್ವೀರ್ ಸಿಂಗ್ ಎಂಬಾತನಿಂದ ತಂದು, ಸದರ್ ಉತ್ಸವದಲ್ಲಿ ಪ್ರದರ್ಶಿಸಲು ಮುಂದಾಗಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಈ ಕೋಣವನ್ನು ಪ್ರದರ್ಶನಕ್ಕಾಗಿ ಮಾತ್ರ ತಂದಿದ್ದು, ಇದಕ್ಕೆ ಕೋಣದ ಮಾಲೀಕ ಬಲ್ವೀರ್ ಸಿಂಗ್ ಯಾವುದೇ ಹಣವನ್ನೂ ಪಡೆದಿಲ್ಲ. ಕೋಣ ತಂದ ಲಡ್ಡು ಯಾದವ್ ಸುಮಾರು 3 ಕೆ.ಜಿ ತೂಕವಿರುವ, ಒಂದೂವರೆ ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ಕೋಣಕ್ಕೆ ತೊಡಿಸಿದ್ದಾನೆ. ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

    ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಮೆರುಗು ನೀಡುವ ಕೋಣಗಳ ಉತ್ಸವವಾದ ಸದರ್ ಉತ್ಸವಕ್ಕೆ ಹೈದರಾಬಾದ್ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಹುಬಲಿ ಕೋಣ ಸಾಕಷ್ಟು ಗಮನ ಸೆಳೆಯುತ್ತಿದೆ.

  • ಕೋಣ ಓಡಿಸುತ್ತಿರೋವಾಗ್ಲೇ ಕುಸಿದು ಬಿದ್ದ ಕಂಬಳದ ಉಸೇನ್ ಬೋಲ್ಟ್

    ಕೋಣ ಓಡಿಸುತ್ತಿರೋವಾಗ್ಲೇ ಕುಸಿದು ಬಿದ್ದ ಕಂಬಳದ ಉಸೇನ್ ಬೋಲ್ಟ್

    ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶ್ರೀನಿವಾಸ ಗೌಡ ಈ ಬಾರಿಯ ಮೊದಲ ಕಂಬಳದಲ್ಲೇ ಕುಸಿದು ಬಿದ್ದು ಗಾಯಗೊಂಡಿದ್ದಾರೆ.

    ಕಳೆದ ವರ್ಷ ಇದೇ ದಿನ ಅಂದರೆ 2020ರ ಫೆಬ್ರವರಿ 1 ರಂದು ನಡೆದ ಐಕಳ ಕಂಬಳದಲ್ಲಿ 100 ಮೀಟರ್ ಕಂಬಳಗದ್ದೆಯ ದೂರವನ್ನು ಕೇವಲ 9.55 ಸೆಕೆಂಡ್ ನಲ್ಲಿ ಕ್ರಮಿಸಿದ್ದರು. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದ ಮಿಜಾರು ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ಗಿಂತಲೂ ವೇಗಿ ಎಂದು ಗುರುತಿಸಲ್ಪಟ್ಟಿದ್ದರು. ಆದರೆ ಈ ಬಾರಿ ಆರಂಭಗೊಂಡ ಮೊದಲ ಕಂಬಳವಾದ ಹೊಕ್ಕಾಡಿಗೋಳಿ ಕಂಬಳದ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ನೇಗಿಲು, ಹಿರಿಯ ವಿಭಾಗದ ಕೋಣಗಳನ್ನು ಓಡಿಸುತ್ತಿರುವಾಗ ಕರೆಯ ಮಧ್ಯಭಾಗಕ್ಕೆ ಶ್ರೀನಿವಾಸ ಗೌಡ ಡಿಕ್ಕಿ ಹೊಡೆದು ಅಲ್ಲೇ ಕುಸಿದು ಬಿದ್ದಿದ್ದರು.

    ಕೈ ಹಾಗೂ ಎದೆಯ ಭಾಗಕ್ಕೆ ಸ್ವಲ್ಪ ಪ್ರಮಾಣದ ಗಾಯಗಳಾಗಿದ್ದು ಬಳಿಕ ಯಾವುದೇ ಓಟದಲ್ಲಿ ಅವರು ಭಾಗಿಯಾಗಿಲ್ಲ. ಸಣ್ಣಪುಟ್ಟ ಗಾಯಗಳಾಗಿರೋದ್ರಿಂದ ಫೆ.6 ರಂದು ನಡೆಯುವ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ ಕೋಣಗಳನ್ನು ಓಡಿಸಲಿದ್ದಾರೆ ಎಂದು ಅವರ ಆಪ್ತರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕಳೆದ 2020ರ ಸೀಸನ್ ನಲ್ಲಿ 11 ಕಂಬಳದಲ್ಲಿ ಕೋಣ ಓಡಿಸಿದ ಶ್ರೀನಿವಾಸ ಗೌಡ ಬರೋಬ್ಬರಿ 32 ಪದಕ ಗಳಿಸಿ ಕಂಬಳದ ಇತಿಹಾಸದಲ್ಲೇ ಹೊಸ ದಾಖಲೆ ಮಾಡಿದ್ದರು.