Tag: ಕೋಡಿ ಶ್ರೀ

  • ಜನ, ಜನರ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗ್ತಾರೆ: ಕೋಡಿ ಶ್ರೀ

    ಜನ, ಜನರ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗ್ತಾರೆ: ಕೋಡಿ ಶ್ರೀ

    ಹಾಸನ: ಬಾಂಬ್‍ಗಳು, ಭೂಕಂಪ (EarthQuake), ಯುದ್ಧಭೀತಿ ಹೆಚ್ಚಾಗುತ್ತೆ, ಜನ ಜನರ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವರು ಎಂದು ಹಾಸನದ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Shree) ಭವಿಷ್ಯ ನುಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿ, ಮಧ್ಯಬಾಗಿಲಿನಿಂದ ಪ್ರಾರಂಭವಾಗಿ ಕಾರ್ತಿಕ ಮಾರ್ಗಶಿರ, ಜನವರಿ ಪ್ರಥಮದಲ್ಲಿಯೂ ಲೋಕಕ್ಕೆ ಕಂಟಕವಿದೆ. ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ, ಇರಬಹುದು, ಭೂಕಂಟಕ ಇರಬಹುದು, ರಾಜಬೀದಿ ಇರಬಹುದು,  ಜನ ಜನರ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು, ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ರೋಜ್‌ಗಾರ್ ಮೇಳಕ್ಕೆ ಮೋದಿ ಚಾಲನೆ- 75,000 ಯುವಕರಿಗೆ ಸಿಕ್ತು ಸರ್ಕಾರಿ ಉದ್ಯೋಗ

    ಜಾಗತಿಕ ದೋಷ, ರಾಷ್ಟ್ರೀಯ ದೋಷವೂ ಹೆಚ್ಚಾಗಿದೆ. ಎರಡು, ಮೂರು ತಿಂಗಳು ಮನುಷ್ಯರು ದೈವ, ಭಕ್ತಿಯಿಂದ, ನಂಬಿಕೆಯಿಂದ ಇರುವುದು ಬಹಳ ಮುಖ್ಯ. ಕಾರ್ತಿಕದವರೆಗೂ ಮಳೆ ಇರುತ್ತೆ. ಮಠದಲ್ಲಿ ಜನವರಿಯವರೆಗೂ ಬೆಳಿಗ್ಗೆ, ಸಂಜೆ, ಮಹಾರುದ್ರಜಪವನ್ನು ಪ್ರಾರಂಭ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಮೊದಲು ತಮ್ಮ ಮನೆ ಸರಿಮಾಡಿಕೊಳ್ಳಲಿ – ಕರಂದ್ಲಾಜೆ

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕೋವಿಡ್ ಕಾಟ ಕೊಡಲಿದೆ, ಕೊರೊನಾ ಹೋಗುವಾಗ ಹೆಚ್ಚು ತೊಂದರೆ ಕೊಡುತ್ತೆ: ಕೋಡಿ ಶ್ರೀ ಭವಿಷ್ಯ

    ಮತ್ತೆ ಕೋವಿಡ್ ಕಾಟ ಕೊಡಲಿದೆ, ಕೊರೊನಾ ಹೋಗುವಾಗ ಹೆಚ್ಚು ತೊಂದರೆ ಕೊಡುತ್ತೆ: ಕೋಡಿ ಶ್ರೀ ಭವಿಷ್ಯ

    ಬಳ್ಳಾರಿ: ಮತ್ತೆ ಕೊರೊನಾ ಕಾಟ ಕೊಡಲಿದೆ. ಕೊರೊನಾ ಹೋಗುವಾಗ ಹೆಚ್ಚು ಕಾಟ ಕೊಡಲಿದೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

    ಗಣಿನಾಡು ಬಳ್ಳಾರಿಗೆ ಇಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಆಗಮಿಸಿದ್ದರು. ಬಳ್ಳಾರಿಯ ಕಾಂಗ್ರೆಸ್ ಮುಖಂಡ ಸುನೀಲ್ ರಾವೂರ್ ಅವರ ಮನೆಗೆ ಆಗಮಿಸಿ, ಭಕ್ತಾದಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಕೊರೊನಾ ಕುರಿತು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

    ಕೊರೊನಾ ಒಂದೂವರೆ ವರ್ಷದಲ್ಲಿ ಹೋಗುತ್ತೆ. ಆದರೆ ಹೋಗುವಾಗ ತುಂಬಾ ಕಷ್ಟ ಕೊಟ್ಟು ಹೋಗುತ್ತೆ. ಜಗತ್ತಿನಾದ್ಯಂತ ಕುಡಿಯೋಕೆ ನೀರಿಲ್ಲದ ಹಾಗೆ ಆಗುತ್ತೆ. ಅಷ್ಟೊಂದು ನೋವನ್ನು ಕೊಡುತ್ತೆ ಎಂದು ಶ್ರೀಗಳು ತಿಳಿಸಿದ್ದಾರೆ.

    ಮೂರು ತಿಂಗಳ ಹಿಂದೆ ಹೇಳಿದ್ದೆ, ಮತ್ತೆ ಕೋವಿಡ್ ಬರುತ್ತೆ ಅಂತಾ. ಈಗ ಮತ್ತೆ ಕೋವಿಡ್ ಸೋಂಕು ಬಂದಿದೆ‌. ಕೋವಿಡ್‌ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಬಿಡುಗಡೆಯಾಗುತ್ತೆ. ಕೋವಿಡ್ ವಿಶೇಷವೇನೆಂದರೆ, ಮನುಷ್ಯ ಕಷ್ಟ ಬಂದಾಗ ದೇವರು, ಧರ್ಮ ಅಂತಾನೆ ಮತ್ತು ಪ್ರಾರ್ಥನೆ‌ ಮಾಡ್ತಾನೆ. ಕೋವಿಡ್ ನೇರವಾಗಿ ಬಂದು ದೇವರನ್ನೇ ಹಿಡಿದುಕೊಂಡು, ದೇವಸ್ಥಾನಗಳ ಬಾಗಿಲು ಹಾಕಿಸಿತು. ಆಮೇಲೆ ಜನರ ಮೇಲೆ ಬಂತು, ನೀರಿನ ಮೇಲೆ, ಭೂಮಿ ಮೇಲೆ ಬಂತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

  • ರಾಜ್ಯವಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲೂ ರಾಜಕೀಯ ಧ್ರುವೀಕರಣ ಸಾಧ್ಯತೆ: ಕೋಡಿಶ್ರೀ

    ರಾಜ್ಯವಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲೂ ರಾಜಕೀಯ ಧ್ರುವೀಕರಣ ಸಾಧ್ಯತೆ: ಕೋಡಿಶ್ರೀ

    ಹಾಸನ: ರಾಜ್ಯವಷ್ಟೇ ಅಲ್ಲ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

    ಶ್ರೀ ಕ್ಷೇತ್ರ ಕೋಡಿಮಠದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಜೊತೆಗೆ ಜಾಗತಿಕ ಮಟ್ಟದಲ್ಲಿಯೂ ಕೂಡ ಬದಲಾವಣೆಯ ಸಾಧ್ಯತೆ ಇದೆ. ಇದಕ್ಕೆಲ್ಲ ಕಾರಣ ಈಗ ಬಂದಿರುವ ಗ್ರಹಣಗಳ ಸಂಕೇತವೇ ಸಾಕ್ಷಿಯಾಗಿದೆ ಎಂದರು.

    ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಭವಿಷ್ಯ ಗೋಚರವಾಗಿರುವ ಪ್ರಕಾರ ನನ್ನ ಕಣ್ಣ ಮುಂದೆ ನೀರು ಕಾಣುತ್ತಿದೆ. ಅಂದರೆ ಅಕಾಲಿಕ ಮಳೆ ಅನಾಹುತಗಳ ಆಗುವ ಸಾಧ್ಯತೆ ಇದೆ. ಯಾವಾಗ ಬೇಕಾದರೂ ಮಳೆ ಆಗುವ ಸಂಭವವಿದೆ. ಕೊರೊನಾ ರೂಪಾಂತರ ಬಗ್ಗೆ ನಾನು ಎರಡು ತಿಂಗಳ ಹಿಂದೆಯೇ ಹೇಳಿದ್ದೆ. ಕೊರೊನಾ ಎಂಬ ಹೆಮ್ಮಾರಿ ಸಂಪೂರ್ಣವಾಗಿ ಹೋಗಲು ಇನ್ನೂ 10 ವರ್ಷ ಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

    ಭೂಮಿ ನಿಸ್ಸಾರಗೊಂಡಿದೆ ಅಂದರೆ ಅದರ ಸತ್ವವನ್ನು ಕಳೆದುಕೊಳ್ಳುತ್ತಿದೆ. ಈಗಿನ ಔಷಧಿಗಳು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಲಿದೆ. ಪ್ರತಿ ಕೃಷಿ ಚಟುವಟಿಕೆಗಳಿಗೂ ರಾಸಾಯನಿಕ ಔಷಧಿಗಳನ್ನು ಹಾಕುತ್ತಿರುವುದು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಮತ್ತೊಂದು ಕಾರಣ. ಯಂತ್ರಗಳು ಭೂಮಿಗೆ ಎಷ್ಟು ಮಲ ಸುರಿಸುತ್ತವೆ. ಗೋವುಗಳ ಮಲಮೂತ್ರದಿಂದ ಬೆಳೆದ ಆಹಾರ ರಾಸಾಯನಿಕ ಮುಕ್ತವಾಗಿದ್ದು, ಅದು ಮಾತ್ರ ಮನುಷ್ಯನನ್ನು ಕಾಪಾಡಬಲ್ಲದು, ಇಲ್ಲದಿದ್ದರೆ ಮತ್ತೊಂದು ಮಾರಣಾಂತಿಕ ಕಾಯಿಲೆ ಬಂದರೂ ಬರಬಹುದು ಎಂದು ಆಂತಕವಾಗಿಯೇ ನುಡಿದರು.

    ಅರಸ ಪ್ರಜಾ ವಿರೋಧಿ ಕಾಯ್ದೆ ತರುತ್ತಾನೆಂದು ಪ್ರಜೆ ವಿರೋಧ ಮಾಡಿ ಅರಸನ ಸಿಂಹಾಸನಕ್ಕೆ ತೊಂದರೆ ಕೊಡುತ್ತಾನೆ ಎಂದು ಹಿಂದೆಯೇ ಹೇಳಿದ್ದೆ. ಅದರಂತೆ ರೈತ ವಿರೋಧಿ ಕಾಯ್ದೆ ಜಾರಿ ಮಾಡಲು ಆಗುತ್ತಲೇ ಇಲ್ಲ ಎಂದು ತಮ್ಮ ಭವಿಷ್ಯವಾಣಿಯನ್ನು ಸಮರ್ಥನೆ ಮಾಡಿಕೊಂಡರು.

  • ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಭಾರಿಸಲಿದೆ: ಕೋಡಿಶ್ರೀ ಭವಿಷ್ಯ

    ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಭಾರಿಸಲಿದೆ: ಕೋಡಿಶ್ರೀ ಭವಿಷ್ಯ

    ಹಾಸನ: ಆಸ್ವೀಜ ಮಾಸ, ಕಾರ್ತಿಕ ಮಾಸದಲ್ಲಿ ಕೊರೊನಾ ಹೆಚ್ಚಾಗಲಿದ್ದು ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಭಾರಿಸಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ಮಾತನಾಡಿದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿ, ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು. ಜನರು ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.

    ಸ್ವಚ್ಛತೆ, ಸಾಮಾಜಿಕ ಅಂತರದ ಕಡೆ ಗಮನ ಕೊಡಬೇಕು. ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಕೊರೊನಾ ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ ಜನರು ಸುರಕ್ಷತೆ ಕಾಪಾಡಿದರೆ ಕೊರೊನಾದಿಂದ ಪಾರಾಗಬಹುದು. ಜನರು ಭಯ, ಆತಂಕ ಬಿಟ್ಟು ಸರ್ಕಾರದ ಜೊತೆ ಕೈಜೋಡಿಸಿ ಎಂದು ಸ್ವಾಮೀಜಿ ತಿಳಿಸಿದ್ದಾರೆ.

  • ಮುಂದೆ ಯುದ್ಧ ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ: ಕೋಡಿ ಶ್ರೀ ಭವಿಷ್ಯ

    ಮುಂದೆ ಯುದ್ಧ ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ: ಕೋಡಿ ಶ್ರೀ ಭವಿಷ್ಯ

    ಹಾಸನ: ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನಾದ್ಯಂತ ಪ್ರಸಾರವಾಗಿರುವ ಈ ಮಾರಕ ರೋಗ ಮನುಕುಲಕ್ಕೆ ಕಂಟಕ ಪ್ರಾಯವಾಗಿದೆ. ಇದು ದಿನ ದಿನಕ್ಕೆ ಹೆಚ್ಚುತ್ತಿರುವುದು ಶೋಚನೀಯ ಪ್ರಸಂಗ ಎಂದು ಆತಂಕ ಹೊರಹಾಕಿದರು.

    ಮನುಷ್ಯ ಸ್ವಾರ್ಥದಿಂದ ತಂದುಕೊಳ್ಳುತ್ತಿರುವ ಈ ರೋಗ ಕೇವಲ ಮನುಕುಲ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳ ಮೇಲೆ ಬರುವ ಅವಕಾಶವಿದೆ. ಆದರೂ ಇದು ವಿಶಾಲಬುದ್ಧಿಯಿಂದ ಹೋಗಿ ಮನುಷ್ಯರಿಂದಲೇ ಹುಷಾರಾಗುವ ಲಕ್ಷಣ ಇದೆ. ಈ ರೋಗ ತಡೆಯಲು ಸ್ವಚ್ಛತೆ ಬಹಳ ಮುಖ್ಯ. ನಮ್ಮಲ್ಲಿ ಅನೇಕ ಮದ್ದು, ಅನೇಕ ವೈದ್ಯರಿದ್ದಾರೆ. ಇದು ಯಾವುದೇ ಮಟ್ಟಕ್ಕೆ ಹೋದರೂ ಹೆದರುವ ಅವಶ್ಯಕತೆ ಇಲ್ಲ ಎಂದು ಶ್ರೀಗಳು ಧೈರ್ಯದ ಮಾತುಗಳನ್ನು ಹೇಳಿದ್ದಾರೆ.

    ಇತ್ತೀಚೆಗೆ ಕೋಡಿಮಠದ ಒಬ್ಬ ಯುವಕನಿಗೆ ರೋಗ ಹರಡಿದೆ ಎಂಬ ಸುದ್ದಿ ನಾವು ಕೇಳಿದ್ದೇವೆ. ಆ ಯುವಕನ ಹೆಸರು ಶಾಸ್ತ್ರಿ ನಮ್ಮ ಮಠದ ಶಿಷ್ಯನೇ. ಇಲ್ಲೇ ಪಕ್ಕದ ಜಾವಗಲ್ ಗ್ರಾಮದವನು. ಆತ ಮಠದಲ್ಲಿ ಇಲ್ಲ. ಬೆಂಗಳೂರಿನಲ್ಲಿ ಇದ್ದು, ಹೋಮ, ಪೂಜೆ ಮಾಡುತ್ತಿದ್ದಾನೆ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

    ಹಿಂದೆ ಕೊರೊನಾ ರೋಗದ ಬಗ್ಗೆ ಎಲ್ಲ ಹೇಳಿದ್ದೇವೆ. ಬರುವ ಹುಣ್ಣಿಮೆ ಕಳೆದ ತಕ್ಷಣ ಇದರ ಬಗ್ಗೆ ವಿಸ್ತಾರವಾಗಿ ಹೇಳುತ್ತೇನೆ ಎಂದು ತಿಳಿಸಿದರು.

  • ನಾನೂ ಭವಿಷ್ಯ ಹೇಳ್ತೀನಿ, ಮುಂದಿನ 15 ವರ್ಷ ಬಿಜೆಪಿ ಸರ್ಕಾರ ಇರುತ್ತೆ- ಪ್ರೀತಂ ಗೌಡ

    ನಾನೂ ಭವಿಷ್ಯ ಹೇಳ್ತೀನಿ, ಮುಂದಿನ 15 ವರ್ಷ ಬಿಜೆಪಿ ಸರ್ಕಾರ ಇರುತ್ತೆ- ಪ್ರೀತಂ ಗೌಡ

    ಹಾಸನ: ನಾನು ಕೂಡ ಭವಿಷ್ಯ ಹೇಳುತ್ತೇನೆ. ಮುಂದಿನ 15 ವರ್ಷದ ಬಿಜೆಪಿ ಸರ್ಕಾರವೇ ಇರುತ್ತದೆ ಎಂದು ಹೇಳುವ ಮೂಲಕ ಕೋಡಿ ಶ್ರೀಗಳಿಗೆ ಶಾಸಕ ಪ್ರೀತಂ ಗೌಡ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಭವಿಷ್ಯ ನುಡಿದಿದ್ದು ನಿಜವಾಗಿದೆ. ನಾನು ಗೆಲ್ತೀನಿ, ನಮ್ಮ ಸರ್ಕಾರ ಬರುತ್ತೆ ಎಂದಿದ್ದೆ. ಎಲ್ಲಾ ನಿಜವಾಗಿದೆ. ಮುಂದೆಯೂ ನಮ್ಮ ಸರ್ಕಾರ ಬರುತ್ತದೆ ಎಂದು ಹೇಳುತ್ತಿದ್ದೇನೆ. ಈಗ ಸರ್ಕಾರ ಪತನದ ಭವಿಷ್ಯ ಹೇಳಿರೋ ಸ್ವಾಮೀಜಿ ಹಿಂದಿನ ವಿಚಾರಗಳನ್ನ ನೋಡಿ. ಅವರದ್ದು ಗಾಳಿ ಬಂದಕಡೆ ತೂರಿಕೊಳ್ಳುವ ಗುಣವಾಗಿದೆ. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಕಿಡಿ ಕಾರಿದರು.

    ರಾಜ್ಯದ ವಿಚಾರದಲ್ಲಿ ಮೀಡಿಯಾ ಅಟ್ರಾಕ್ಷನ್ ಗೆ ಬಾಯಿಗೆ ಬಂದಹಾಗೆ ಮಾತಾಡೋದು ಬೇಡ. ಅವರು ಹಿರಿಯರು ಪಾದಕ್ಕೆ ನಮಸ್ಕಾರ ಮಾಡಿ ಹೇಳುತ್ತೇನೆ. ನೀವು ರಾಜಕಾರಣದ ಬಗ್ಗೆ ಸ್ವಲ್ಪ ದಿನ ಭವಿಷ್ಯ ಹೇಳೋದನ್ನ ಕಡಿಮೆ ಮಾಡಿದರೆ ಸಾರ್ವಜನಿಕ ಹಿತದಿಂದ ಒಳ್ಳೆಯದು ಎಂದು ಅಸಮಧಾನ ಹೊರ ಹಾಕಿದರು.

    ಇತ್ತ ಮಧ್ಯಂತರ ಚುನಾವಣೆಗೆ ತಯಾರಾಗಿ ಎಂದಿದ್ದ ಸಿದ್ದರಾಮಯ್ಯ ಅವರಿಗೂ ತಿರುಗೇಟು ನೀಡಿದ ಪ್ರೀತಂಗೌಡ, ತಿಂಗಳು ಲೆಕ್ಕದಲ್ಲಾದರೆ 48 ರಿಂದ 50 ತಿಂಗಳಲ್ಲಿ ಚುನಾವಣೆ ಬರುತ್ತದೆ. ವರ್ಷದ ಲೆಕ್ಕದಲ್ಲಿ ನಾಲ್ಕು ವರ್ಷ ಕಳೆದ ಬಳಿಕ ಚುನಾವಣೆ ಬರುತ್ತದೆ. ಸಿದ್ದರಾಮಯ್ಯ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಹಾಗೆ ಹೇಳಿರಬೇಕು ಎಂದು ಟಾಂಗ್ ನಿಡಿದರು.

    ನಾವೇನು ಐವತ್ತು ವರ್ಷ ಅಧಿಕಾರಕ್ಕೆ ಅಂಟಿಕೊಂಡು ಕೂತಿರಲ್ಲ. 2023ಕ್ಕೆ ಚುನಾವಣೆ ಬರುತ್ತದೆ ಬಿಜೆಪಿ ಒಳ್ಳೆಯ ಕೆಲಸ ಮಾಡಿದರೆ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ರಾಜ್ಯದಲ್ಲಿ ಮತ್ತೆ ದೊಡ್ಡ ಜಲಾಘಾತವಾಗಲಿದೆ- ಕೋಡಿಮಠದ ಶ್ರೀ ಭವಿಷ್ಯ

    ರಾಜ್ಯದಲ್ಲಿ ಮತ್ತೆ ದೊಡ್ಡ ಜಲಾಘಾತವಾಗಲಿದೆ- ಕೋಡಿಮಠದ ಶ್ರೀ ಭವಿಷ್ಯ

    ಗದಗ: ಮಹಾಮಳೆಯಿಂದ ಕರುನಾಡು ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ಮತ್ತೆ ವಿಪತ್ತು ಸಂಭವಿಸುತ್ತದೆ ಎಂದು ಗದಗದಲ್ಲಿ ಕೋಡಿಮಠದ ಶ್ರೀ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಸ್ವಾಮೀಜಿ, ರಾಜ್ಯ ಅಪಘಾತಕ್ಕೊಳಗಾಗಿದೆ. ಜಲ, ಭೂ, ವಾಯು ಆಘಾತದ ಲಕ್ಷಣಗಳು ಇನ್ನೂ ಬಹಳ ನಡೆಯಲಿವೆ. ಶ್ರಾವಣ ಮಾಸ ಮುಗಿಯುವುದರೊಳಗೆ ಮತ್ತೊಮ್ಮೆ ದೊಡ್ಡ ಜಲ ಆಘಾತವಾಗಲಿದೆ. ಕಾರ್ತಿಕ ಮಾಸದವರೆಗೆ ಅಲ್ಲಲ್ಲಿ ಆಗಾಗ ಅಪಘಾತಗಳು ಬಂದು ಹೋಗುವ ಸಾಧ್ಯತೆ ಎಂದು ಹೇಳಿದ್ದಾರೆ.

    ಅಲ್ಲದೆ ಭೂಕಂಪನದಿಂದ ಭೂ ಕುಸಿತ ನಡೆಯಲಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಆಘಾತವಾಗುತ್ತವೆ. ಈ ಸಂವತ್ಸರದಲ್ಲಿ ವಾಯು ಆಘಾತ ನಡೆಯಲಿದೆ. ಈಗಾಗಲೇ ಗಾಳಿಯಿಂದ ಆಘಾತವಾಗಿದೆ, ಬಹಳ ಎಚ್ಚರದಿಂದ ಇರಬೇಕು. ಜಗತ್ತು ಕಂಡರಿಯದ ಆಘಾತವೊಂದು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

    ಈಗಾಗಲೇ ರಾಜ್ಯದ ಸುಮಾರು 17 ಜಿಲ್ಲೆಗಳಲ್ಲಿ ಜಲಪ್ರವಾಹ ಹಾಗೂ ಭೂಕುಸಿತ ಉಂಟಾಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಶ್ರೀಗಳ ಭವಿಷ್ಯ ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ.

  • ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ ಬೆನ್ನಲ್ಲೇ ಕೋಡಿ ಶ್ರೀ ಭವಿಷ್ಯ

    ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ ಬೆನ್ನಲ್ಲೇ ಕೋಡಿ ಶ್ರೀ ಭವಿಷ್ಯ

    ಮೈಸೂರು: ಸರ್ಕಾರ ಭವಿಷ್ಯದ ಬಗ್ಗೆ ಇನ್ನೂ ಇರಡು ತಿಂಗಳು ಕಾಯಿರಿ. ಮುಂದೆ ಏನು ಆಗುತ್ತೆ ಅಂತಾ ಕಾದು ನೋಡಿ ಅಂತ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

    ಮೈಸೂರಿನ ರಾಜಮನೆತನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸ್ಥಿರತೆ ಕಾಲದ ಬಗ್ಗೆ ಭವಿಷ್ಯ ನುಡಿದ್ರು. ಮಹೇಶ್ ರಾಜೀನಾಮೆ ಬೆನ್ನಲ್ಲೇ ಕೋಡಿಶ್ರೀ ಭವಿಷ್ಯ ನುಡಿದಿರೋದ್ರಿಂದ ಕಾಂಗ್ರೆಸ್-ಜೆಡಿಎಸ್‍ನಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಸಚಿವ ಎನ್.ಮಹೇಶ್ ರಾಜೀನಾಮೆ ನೀಡಲು ಕಾರಣ ಏನು?

    ಈ ಬಾರಿ ವರ್ಷಪೂರ್ತಿ ಮಳೆ ಹೆಚ್ಚಿರುತ್ತೆ. ಕಾರ್ತಿಕ ಮಾಸದಲ್ಲಿ ಇನ್ನೂ ಹೆಚ್ಚು ಮಳೆಯಾಗಲಿದೆ. ಶತ್ರು ಸಂಹಾರದ ಸಂಕೇತ ದಸರಾ ಆಗಿದೆ ಅಂದ್ರು. ಇದನ್ನೂ ಓದಿ: ಸಚಿವ ಮಹೇಶ್ ರಾಜೀನಾಮೆ – ಎಲ್ಲವನ್ನೂ ಬಹಿರಂಗವಾಗಿ ಹೇಳೋಕಾಗಲ್ಲ: ಸಿಎಂ ಎಚ್‍ಡಿಕೆ

    ರಾಜೀನಾಮೆ ಬಳಿಕ ಮಹೇಶ್ ಹೇಳಿದ್ದೇನು?:
    ನಾನು ನನ್ನ ಕ್ಷೇತ್ರಗಳಿಗೆ ಭೇಟಿ ಆಗೋದಕ್ಕೆ ಸಮಯ ಸಿಗುತ್ತಿಲ್ಲ. ಹಾಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದೇನೆ. ನನ್ನನ್ನು ಸಚಿವರನ್ನಾಗಿ ಮಾಡಿದ್ದ ಮಾನ್ಯ ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಮುಂದೆ ಸರ್ಕಾರದ ಭಾಗವಾಗಿ ಇರಲ್ಲ, ಕೇವಲ ಕುಮಾರಸ್ವಾಮಿ ನೇತೃತ್ವ ಸರ್ಕಾರದ ಬೆಂಬಲಿಗನಾಗಿ ಇರುತ್ತೇನೆ. ನನ್ನ ಸಂಪೂರ್ಣ ಬೆಂಬಲ ಕುಮಾರಸ್ವಾಮಿ ಅವರಿಗಿದ್ದು, ಉಪ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಎನ್ ಮಹೇಶ್ ತಿಳಿಸಿದ್ದರು. ಇದನ್ನೂ ಓದಿ: ಸಚಿವರ ರಾಜೀನಾಮೆಯನ್ನು ಅಂಗೀಕರಿಸ್ತಾರೋ, ಇಲ್ಲ ಮಾಯಾವತಿ ಜೊತೆ ಮಾತಾಡ್ತಾರೋ ಗೊತ್ತಿಲ್ಲ: ಎಚ್.ಡಿ.ರೇವಣ್ಣ

    ಕೆಲವು ದಿನಗಳ ಹಿಂದೆ ಎನ್.ಮಹೇಶ್, ಕಾಂಗ್ರೆಸ್ ವಿರುದ್ಧವೇ ಮಾತನಾಡಿದ್ದರು. ಮಹೇಶ್ ಹೇಳಿಕೆಗೆ ಸಹಜವಾಗಿಯೇ ಎಲ್ಲ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದರು. ಇದರಿಂದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮಹಾಘಟಬಂಧನ್ ಗೆ ಬಿಎಸ್‍ಪಿ ಹಿಂದೆ ಸರಿಯುವ ಮುನ್ಸೂಚನೆ ನೀಡಿದೆ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳ ಜೊತೆ ಸೇರಿ ಕಾಂಗ್ರೆಸ್ ಮುನ್ನುಡಿ ಬರೆದಿತ್ತು. ಆದ್ರೆ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಸಹ ಮಹಾಘಟಬಂಧನ್ ದಿಂದ ದೂರ ಉಳಿದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂಬುದರ ಬಗ್ಗೆ ಸುಳಿವು ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ: ಕೋಡಿ ಶ್ರೀ ಭವಿಷ್ಯ

    ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ: ಕೋಡಿ ಶ್ರೀ ಭವಿಷ್ಯ

    ಹಾಸನ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ ಇದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

    ತಾಳೆಗರಿ ಮೂಲಕ ಭವಿಷ್ಯ ನುಡಿಯುವ ಶ್ರೀಗಳು ಬುಧವಾರ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಂಟಕವಿದ್ದು, ನವೆಂಬರ್ ತಿಂಗಳವರೆಗೂ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಿರುತ್ತದೆ. ಬೆಳಗಾವಿ ಸಹೋದರರಂತೆ ಅಧಿಕಾರಕ್ಕಾಗಿ ಮತ್ತೋರ್ವ ಅಣ್ಣ ಹುಟ್ಟಿಕೊಳ್ಳುತ್ತಾನೆ ನೋಡುತ್ತಿರಿ ಎಂದು ಹೇಳಿದ್ದಾರೆ.

    ದೇಶದಲ್ಲಿ ಪ್ರಾಕೃತಿಕ ವಿಕೋಪಗಳು ಇನ್ನೂ ಹೆಚ್ಚಾಗಲಿವೆ. ಭೂ-ಕಂಪನದ ಹೊಡೆತಕ್ಕೆ ದೊಡ್ಡ ದೊಡ್ಡ ನಗರಗಳು ತತ್ತರಿಸುತ್ತವೆ. ಸಾವು-ನೋವುಗಳ ಸರಣಿ ಹೆಚ್ಚಾಗಲಿದೆ. ರಾಜ್ಯದಲ್ಲಿಯೂ ಮಳೆಯ ಆರ್ಭಟ ಮುಂದವರಿಯಲಿದೆ ಎಂದು ಭವಿಷ್ಯ ನುಡಿದರು.

    ಈ ಮೊದಲು ಖಗ್ರಾಸ ಚಂದ್ರಗ್ರಹಣದ ವೇಳೆ `ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ ಪ್ರಸಂಗಕ್ಕೆ ಹಾನಿ, ಭ್ರಾತೃ ಬೆಂಕಿ ಹಿಡಿದಾನು. ರಾಜಕೀಯ ವಿಪ್ಲವವಾಗಲಿದೆ’ ಎಂದು ಒಗಟಾಗಿ ತಿಳಿಸಿದ್ದರು. ಅಂದರೆ `ಸಹೋದರ ಬೆಂಕಿ ಹಿಡಿದಾನು ಎಂದರೆ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಸಹೋದರ ಎಚ್.ಡಿ.ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರಾ ಎನ್ನುವ ವಿಶ್ಲೇಷಣೆ ಕೇಳಿಬಂದಿತ್ತು. ಅಲ್ಲದೇ ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಲಿದ್ದು, ಮುಂದಿನ ದಿನಗಳಲ್ಲಿ ಭೂಕಂಪನವಾಗಲಿದೆ. ಇನ್ನೂ ಹೆಚ್ಚು ಮಳೆಯಾಗಲಿದ್ದು, ಬರುವ ವಿಶೇಷ ದಿನಗಳು ಕಷ್ಟಕರವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಕೋಡಿ ಶ್ರೀ ಭವಿಷ್ಯ

    ಶ್ರೀಗಳ ಭವಿಷ್ಯದಂತೆ ದೇಶದಲ್ಲಿ ಮಳೆಯ ರೌದ್ರನರ್ತನ ಹೆಚ್ಚಾಗಿ ಅನೇಕ ಸಾವು-ನೋವುಗಳು ಸಂಭವಿಸಿದ್ದವು. ರಾಜ್ಯದಲ್ಲಿಯೂ ಸಹ ಕಂಡು ಕೇಳರಿಯದ ಭೀಕರ ಮಳೆಗೆ ಕೊಡುಗು ಜಿಲ್ಲೆ ತತ್ತರಿಸಿ ಹೋಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv