Tag: ಕೋಡಿ ಮಠ

  • ರಾಜ್ಯ, ಕೇಂದ್ರ ಸರ್ಕಾರದ ಬಗ್ಗೆ ಕೋಡಿಮಠದ ಶ್ರೀಗಳ ಭವಿಷ್ಯವಾಣಿ ಏನು?

    ರಾಜ್ಯ, ಕೇಂದ್ರ ಸರ್ಕಾರದ ಬಗ್ಗೆ ಕೋಡಿಮಠದ ಶ್ರೀಗಳ ಭವಿಷ್ಯವಾಣಿ ಏನು?

    ಹಾಸನ: ಈಗಿನ ಕಾಲದಲ್ಲಿ ಕೃಷ್ಣ ಇಲ್ಲದೇ ದುರ್ಯೋಧನ ಗೆಲ್ಲುತ್ತಾನೆ. ರಾಜ್ಯ ಮತ್ತು ಕೇಂದ್ರದಲ್ಲಿ ಇದೇ ಆಗೋದು ಎಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ (Rajendra Mahaswamiji) ಭವಿಷ್ಯ ನುಡಿದಿದ್ದಾರೆ.

    ಜಿಲ್ಲೆಯ ಅರಸೀಕೆರೆ (Arsikere) ತಾಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದಲ್ಲಿ ಮಾತನಾಡಿದ ಅವರು, ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕತ್ತರಿಸಿದ್ದರು. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮಾ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ಲುತ್ತಾನೆ. ಸೆಂಟ್ರಲ್‌ನಲ್ಲೂ, ಸ್ಟೇಟ್‌ಲ್ಲೂ ಆಗೋದು ಎಂದು ಪರೋಕ್ಷವಾಗಿ ಹೇಳಿದ್ದಾರೆ.ಇದನ್ನೂ ಓದಿ: ಪೋಕ್ಸೋ ಕೇಸ್ – ಬಿಎಸ್‍ವೈಗೆ ತಾತ್ಕಾಲಿಕ ರಿಲೀಫ್

    ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಎಂದು ಹೆಂದೆಯೇ ಹೇಳಿದ್ದೆ ಎಂದು ತಿಳಿಸಿದ್ದಾರೆ. ಪ್ರಕೃತಿ ವಿಕೋಪ ಕುರಿತು ಮಾತನಾಡಿ, ಮಳೆ ಇನ್ನೂ ಮುಂದುವರೆಯಲಿದೆ. ಜಾಸ್ತಿ ತೊಂದರೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    ಪ್ರಾಕೃತಿಕ ದೋಷವಿದ್ದು ಭೂಮಿ, ಅಗ್ನಿ, ವಾಯು, ಆಕಾಶದಿಂದ ಎಲ್ಲಾ ಕಡೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಜನ ಇದ್ದಂಗೆ ಸಾಯ್ತಾರೆ. ಭೂಮಿ ಬಿರುಕು ಬಿಡುತ್ತದೆ. ಗುಡ್ಡ ಕುಸಿದು ಹೋಗುತ್ತದೆ. ಪ್ರವಾಹದಲ್ಲಿ ಜಗತ್ತು ಮುಳುಗುತ್ತದೆ ಎಂದು ಹಿಂದೊಮ್ಮೆ ನಾನು ಹೇಳಿದ್ದೇನೆ. ಇನ್ನೂ ಮಳೆಯಾಗಲಿದೆ. ಅದರಿಂದ ಅನಾಹುತ ಸಂಭವಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಮೃತ ವೈದ್ಯೆ ಕುಟುಂಬಕ್ಕೆ ಹಣ ನೀಡಲು ಪ್ರಯತ್ನಿಸಿಲ್ಲ, ಇದು ಹಸಿ ಸುಳ್ಳು: ಮಮತಾ ಬ್ಯಾನರ್ಜಿ ತಿರುಗೇಟು

  • ನಾನು ಭವಿಷ್ಯ ನುಡಿದಂತೆ ರೈಲು ದುರಂತ ಆಗಿದೆ; ದೇಶಕ್ಕೆ ಇನ್ನೊಂದು ಗಂಡಾಂತರ ಕಾದಿದೆ – ಕೋಡಿ ಮಠ ಶ್ರೀ ಭವಿಷ್ಯ

    ನಾನು ಭವಿಷ್ಯ ನುಡಿದಂತೆ ರೈಲು ದುರಂತ ಆಗಿದೆ; ದೇಶಕ್ಕೆ ಇನ್ನೊಂದು ಗಂಡಾಂತರ ಕಾದಿದೆ – ಕೋಡಿ ಮಠ ಶ್ರೀ ಭವಿಷ್ಯ

    – ಸಿಎಂ ಸಿದ್ದು ಸರ್ಕಾರ ಶುಭ ಸೂಚನೆ ನೀಡಿದ ಸ್ವಾಮೀಜಿ

    ಕೋಲಾರ: ದೇಶಕ್ಕೆ ಇನ್ನೂ ಒಂದು ಗಂಡಾಂತರ ಕಾದಿದೆ. ಈ ವರ್ಷ ಅಚಾನಕ್ಕಾಗಿ ಗುಡುಗು, ಮಿಂಚಿನ ಸಹಿತ ಮಳೆ ಬರಲಿದ್ದು, ಎರಡು-ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ (Kodi Mutt Shree) ಮತ್ತೊಂದು ಭವಿಷ್ಯ ನುಡಿದಿದ್ದಾರೆ.

    ಕೋಲಾರ (Kolara) ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ. ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: 1 ಫೋನ್‌ ಕರೆ.. 9 ಅಧಿಕಾರಿಗಳು..; ಒಡಿಶಾ ರೈಲು ದುರಂತದ ಬಳಿಕ ಏನೇನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಎಲ್ಲೋ ನಡೆದ ಬಾಂಬ್ ದಾಳಿಯಿಂದ ನಮಗೆ ಸಾಕಷ್ಟು ಅನಾಹುತ ಸಂಭವಿಸಲಿದೆ. ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೆ ಸಿಕ್ಕಿದೆ. ಅದರಂತೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ಆಧ್ಯಾತ್ಮಿಕವಾಗಿ ಅವರು (ಸರ್ಕಾರ) ನಡೆಯುತ್ತಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯದಾಗಲಿ. ಅಧ್ಯಾತ್ಮ ಬಿಟ್ಟು ಹೋದ್ರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ಸ್ವಾಮೀಜಿಗಳು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ

  • ಜಾತ್ಯಾತೀತ ಶಕ್ತಿಗಳು ಒಂದಾದ್ರೆ ಕೋಮುವಾದಿ ಶಕ್ತಿಗಳು ಸೋಲುತ್ತವೆ: ಎಚ್.ಕೆ ಪಾಟೀಲ್

    ಜಾತ್ಯಾತೀತ ಶಕ್ತಿಗಳು ಒಂದಾದ್ರೆ ಕೋಮುವಾದಿ ಶಕ್ತಿಗಳು ಸೋಲುತ್ತವೆ: ಎಚ್.ಕೆ ಪಾಟೀಲ್

    ಗದಗ: ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕು ಅನ್ನೋ ತತ್ವ, ಚಿಂತನೆಗೆ ಗೆಲುವಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಮಹಾನಗರ ಪಾಲಿಕೆಯೇ ಇರಲಿ, ಮತ್ತೊಂದೇ ಇರಲಿ ಕೋಮುವಾದಿ ಶಕ್ತಿಗಳು ಸೋಲಬೇಕಾದರೆ ಜಾತ್ಯಾತೀತ ಶಕ್ತಿಗಳು ಕಾಂಗ್ರೆಸ್ ಜೊತೆ ಹೊಂದಿಕೊಳ್ಳಬೇಕು, ಹೊಂದಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಬಿಜೆಪಿಗೆ ಬರುವ ಮುನ್ನ ದುಡ್ಡಿನ ಆಫರ್ ಕೊಟ್ಟಿದ್ದು ನಿಜ: ಶ್ರೀಮಂತ ಪಾಟೀಲ್

    ಕೋಡಿಮಠದ ಶ್ರೀಗಳ ಹತ್ತಿರ ಭವಿಷ್ಯ ಕೇಳಲು ಸಿದ್ದರಾಮಯ್ಯ ಭೇಟಿ ಎಂಬ ಸಚಿವ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಸ್ವಾಮೀಜಿಗಳನ್ನು ಭೇಟಿ ಮಾಡುತ್ತಿರುವುದು ಹೊಸದೇನಲ್ಲ. ಈ ಹಿಂದೆಯೂ ಅವರು ಅನೇಕ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ. ಮಠ-ಮಾನ್ಯಗಳಿಗೆ ಹೋಗುತ್ತಾರೆ. ಗದುಗಿನ ಸ್ವಾಮೀಜಿಗಳ ಜೊತೆಯೂ ಸಿದ್ದರಾಮಯ್ಯ ಉತ್ತಮ ಸಂಬಂಧಗಳನ್ನು ಹೊಂದಿದ್ದಾರೆ ಎಂದರು.  ಇದನ್ನೂ ಓದಿ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ

    ಕೋಡಿಮಠದ ಶ್ರೀಗಳ ಹತ್ತಿರ ಬರೀ ಭವಿಷ್ಯ ಕೇಳಲು ಹೋಗಬೇಕು ಅಂತೇನಿಲ್ಲ. ಭಕ್ತಿಯಿಂದಲೂ ಹೋಗಬಹುದು. ಶ್ರೀಗಳು ಭವಿಷ್ಯ ಹೇಳುವುದಲ್ಲಿ ಪ್ರಖ್ಯಾತರು. ಸಿದ್ದರಾಮಯ್ಯ ಭವಿಷ್ಯ ಕೇಳಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

     

  • 3-4 ತಿಂಗ್ಳಲ್ಲಿ ಸರ್ಕಾರ ಪತನವಾದ್ರೆ ಸ್ವಾಮೀಜಿಗೆ ಹೆಬ್ಬೆರಳು ದಾನ ಮಾಡ್ತೇನೆ- ಬಿಜೆಪಿ ಕಾರ್ಯಕರ್ತ

    3-4 ತಿಂಗ್ಳಲ್ಲಿ ಸರ್ಕಾರ ಪತನವಾದ್ರೆ ಸ್ವಾಮೀಜಿಗೆ ಹೆಬ್ಬೆರಳು ದಾನ ಮಾಡ್ತೇನೆ- ಬಿಜೆಪಿ ಕಾರ್ಯಕರ್ತ

    ಮಂಡ್ಯ: ಕೋಡಿ ಮಠದ ಶ್ರೀಗಳ ಹೇಳಿಕೆ ಖಂಡಿಸಿ ಮಂಡ್ಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಅವರು ಸವಾಲು ಹಾಕಿದ್ದಾರೆ.

    ನಿಮ್ಮ ಭವಿಷ್ಯ ನಿಜವಾದರೆ ಹೆಬ್ಬೆರಳು ಕಟ್ ಮಾಡಿಕೊಂಡು ನಿಮ್ಮ ಪಾದಕ್ಕೆ ಅರ್ಪಿಸುತ್ತೇನೆ. ಒಂದು ವೇಳೆ ಸರ್ಕಾರ ಅವಧಿ ಪೂರ್ಣಗೊಳಿಸಿದರೆ ಶ್ರೀಗಳು ನನ್ನನ್ನು ಮಠದ ಶಿಷ್ಯನಾಗಿ ಸ್ವೀಕರಿಸುವಂತೆ ಆಗ್ರಹಿಸಿದ್ದಾರೆ.

    ಕಾರ್ಯಕರ್ತನ ಸವಾಲೇನು..?
    ನಿನ್ನೆ ಕೋಡಿ ಮಠದ ಸ್ವಾಮಿಗಳು ಇನ್ನು 3-4 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದು ಹೇಳಿದರು. ಒಂದು ವೇಳೆ 3-4 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾದರೆ ಹಿಂದೆ ಏಕಲವ್ಯ ದ್ರೋಣಾಚಾರ್ಯರಿಗೆ ತನ್ನ ಬಲಗೈ ಹೆಬ್ಬೆರಳನ್ನು ಯಾವ ರೀತಿ ದಾನವಾಗಿ ನೀಡಿದ್ದಾನೋ ಅದೇ ರೀತಿ ನನ್ನ ಬಲಗೈ ಹೆಬ್ಬೆರಳನ್ನು ಸ್ವಾಮೀಜಿಗಳಿಗೆ ದಾನವಾಗಿ ಕೊಡುತ್ತೇನೆ. ಒಂದು ವೇಳೆ ಬಿಜೆಪಿ ಪೂರ್ಣಾವಧಿ ಸರ್ಕಾರ ಮಾಡಿದರೆ ಬೇರೇನೂ ಬೇಡ ನಿಮ್ಮ ಶಿಷ್ಯನಾಗಿ ನನ್ನನ್ನು ಸ್ವೀಕರಿಸಬೇಕಾಗಿ ಸ್ವಾಮೀಜಿ ಹಾಗೂ ಮಠದ ಭಕ್ತನಾಗಿ ಮನವಿ ಮಾಡಿಕೊಂಡರು.

    ಶ್ರೀಗಳು ಹೇಳೀದ್ದೇನು..?
    ಗುರುವಾರ ಹಾವೇರಿಯಲ್ಲಿ ಮಾತನಾಡಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಬಿಎಸ್‍ವೈ ಸರ್ಕಾರದ ಪತನದ ಮುನ್ಸೂಚನೆ ನೀಡಿದ್ದರು. ಮಧ್ಯಂತರ ಚುನಾವಣೆ ಸನಿಹ ಬಂದಿದೆ ಎಂಬ ವಿಚಾರ ಕೇಳಿದಾಗ ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ ಕಾದು ನೋಡಿ. 18 ತಿಂಗಳ ನಂತರ ಮತ ಭಿಕ್ಷೆ ಎಂದು ನಾನು ಚುನಾವಣೆ ಪೂರ್ವದಲ್ಲಿ ಹೇಳಿದ್ದೆ. ಈಗ 14, 15 ತಿಂಗಳು ಮುಗಿದಿದೆ, ಇನ್ನೂ ಮೂರು ನಾಲ್ಕು ತಿಂಗಳು ಕಾದು ನೋಡಿ ಎಂದು ಕೋಡಿಹಳ್ಳಿ ಮಠದ ಶ್ರೀ ಭವಿಷ್ಯ ಹೇಳಿದ್ದರು.

  • ಈ ಬಾರಿಯೂ ಮಳೆ ರೋಗರುಜಿನ ಜಾಸ್ತಿ, ಬೆಳೆ ಕಡಿಮೆ: ಕೋಡಿ ಶ್ರೀ ಭವಿಷ್ಯ

    ಈ ಬಾರಿಯೂ ಮಳೆ ರೋಗರುಜಿನ ಜಾಸ್ತಿ, ಬೆಳೆ ಕಡಿಮೆ: ಕೋಡಿ ಶ್ರೀ ಭವಿಷ್ಯ

    ಮಡಿಕೇರಿ: ಈ ವರ್ಷವು ನಾಡಿನಾದ್ಯಂತ ಹೆಚ್ಚು ಮಳೆಯಾಗುತ್ತದೆ. ಜೊತೆಗೆ ರೋಗ ರುಜಿನಗಳು ಹೆಚ್ಚುತ್ತದೆ ಎಂದು ಅರಸೀಕೆರೆ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣದ ಗ್ರಾಮ ದೇವರ ಉತ್ಸವದಲ್ಲಿ ಭಾಗಿಯಾಗಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, ರಾಜಕೀಯ ಬೆಳವಣಿಗೆಗಳ ಕುರಿತು ನಾನು ಮಾತನಾಡುವ ಹಾಗಿಲ್ಲ. ಏಕೆಂದರೆ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ಶ್ರೀಗಳು ಹೇಳಿದರು.

    ಕಳೆದ ವರ್ಷ ಇದೇ ಗ್ರಾಮ ದೇವರ ಉತ್ಸವಕ್ಕೆ ಧಾವಿಸಿದ್ದಾಗ ಈ ಬಾರಿ ಜಲಪ್ರಳಯ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆಯೇ ಕೊಡಗಿನಲ್ಲಿ ಜಲಪ್ರಳಯ ಆಗಿತ್ತು. ನಂಜುಂಡೇಶ್ವರ ದೇವರನ್ನು ನಂಬಿ ನಿಮಗೇನು ಆಗಲ್ಲ ಎಂದಿದ್ದೆ. ಅದಕ್ಕೆ ಈ ಭಾಗಕ್ಕೆ ಏನೂ ಹಾನಿಯಾಗಿಲ್ಲ ಬಿಡಿ ಎಂದು ಶ್ರೀಗಳು ಹೇಳಿದರು.