Tag: ಕೋಟಿ ಸಿನಿಮಾ

  • ಮೈಸೂರಿನಲ್ಲಿ ‘ಕೋಟಿ’ ವೀಕ್ಷಿಸಲಿದ್ದಾರೆ ಪ್ರತಾಪ್ ಸಿಂಹ

    ಮೈಸೂರಿನಲ್ಲಿ ‘ಕೋಟಿ’ ವೀಕ್ಷಿಸಲಿದ್ದಾರೆ ಪ್ರತಾಪ್ ಸಿಂಹ

    ಡಾಲಿ ಧನಂಜಯ (Daali Dhananjay) ನಟನೆಯ ‘ಕೋಟಿ’ (Kotee) ಸಿನಿಮಾ ಫರ್ಪೆಕ್ಟ್ ಪ್ಯಾಮಿಲಿ ಎಂಟರ್‌ಟೈನರ್ ಆಗಿ ಹೊರಹೊಮ್ಮಿದ್ದು, ದೊಡ್ಡಪರದೆಯಲ್ಲಿ ಪ್ರೇಕ್ಷಕರ ಮನ ಗೆಲ್ಲುವುದನ್ನು ಮುಂದುವರೆಸಿದೆ. ಬಹಳ ವರ್ಷಗಳ ನಂತರ ಕನ್ನಡದಲ್ಲಿ ಇಡೀ ಕುಟುಂಬವೇ ಕೂತು ನೋಡುವ ಚಿತ್ರವೊಂದು ಬಂದಿದ್ದು ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ ಕಡೆ ಹೆಚ್ಚೆಚ್ಚು ಬರುತ್ತಿದ್ದಾರೆ. ಧನಂಜಯ್, ರಮೇಶ್ ಇಂದಿರಾ, ತಾರಾ ಅವರ ನಟನೆ, ಕಲರ್‌ಫುಲ್ ಕ್ಲೈಮ್ಯಾಕ್ಸ್ ಮತ್ತು ದುನಿಯಾ ವಿಜಯ್ (Duniya Vijay) ಅವರ ಕ್ಯಾಮಿಯೋಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ.

    ‘ಕೋಟಿ’ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಚಿತ್ರತಂಡ ಮೈಸೂರಿನಲ್ಲಿ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಿದೆ. ಮೈಸೂರಿನ ಜನಪ್ರಿಯ ರಾಜಕಾರಣಿ ಪ್ರತಾಪ್ ಸಿಂಹ ಅವರು ತಂಡದ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ. ಮೈಸೂರಿನ ವಿಶೇಷ ಪ್ರದರ್ಶನ ಗುರುವಾರ ಸಂಜೆ 6:45ಕೆ ಡಿಆರ್‌ಸಿ ಸಿನಿಮಾದಲ್ಲಿ ನಡೆಯಲಿದೆ.

     

    View this post on Instagram

     

    A post shared by Param (@parameshwargundkal)

    ಅಂದಹಾಗೆ, ‘ಕೋಟಿ’ ಚಿತ್ರಕ್ಕೆ ಮೈಸೂರಿನಲ್ಲಿ ಅದ್ಭುತ ರೆಸ್ಪಾನ್ಸ್ ಬರುತ್ತಿದ್ದು, ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚುತ್ತಿದ್ದಾರೆ. ಮೈಸೂರಿನಲ್ಲಿ ‘ಕೋಟಿ’ಯ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು ಮೈಸೂರು ಸೇರಿದಂತೆ ರಾಜ್ಯಾದ್ಯಂತ ‘ಕೋಟಿ’ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಹೊಸ ಮನೆಗೆ ಕಾಲಿಟ್ಟ ಹಿರಿಯ ನಟಿ ತಾರಾ

    ಈ ಸಿನಿಮಾದಲ್ಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಈ ಕಥಾಹಂದರದ `ಕೋಟಿ’ ಸಿನಿಮಾದ ಅರ್ಧಕ್ಕಿಂತಲೂ ಹೆಚ್ಚು ಚಿತ್ರೀಕರಣ ಮೈಸೂರಿನಲ್ಲಿ ನಡೆದಿದೆ.

    ನಮ್ಮ ಚಿತ್ರವನ್ನು ಮೈಸೂರಿನಲ್ಲಿ ಶೂಟ್ ಮಾಡಿದ್ದು ತುಂಬಾ ಖುಷಿ ನೀಡಿತ್ತು. ಈಗ ಅದೇ ಮೈಸೂರಿನ ಪ್ರೇಕ್ಷಕರು ಕೋಟಿಯನ್ನು ಮೆಚ್ಚಿಕೊಳ್ಳುತ್ತಿರುವುದು ನೂರುಪಟ್ಟು ಖುಷಿ ನೀಡಿದೆ ಎಂದು ‘ಕೋಟಿ’ಯ ಬರಹಗಾರ ಮತ್ತು ನಿರ್ದೇಶಕ ಪರಮ್ ಹರ್ಷ ವ್ಯಕ್ತಪಡಿಸಿದರು.

    ‘ಕೋಟಿ’ (Kotee Film) ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

    ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ‘ಕೋಟಿ’ ರಾಜಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

  • ಹೊಸ ಮನೆಗೆ ಕಾಲಿಟ್ಟ ಹಿರಿಯ ನಟಿ ತಾರಾ

    ಹೊಸ ಮನೆಗೆ ಕಾಲಿಟ್ಟ ಹಿರಿಯ ನಟಿ ತಾರಾ

    ಸ್ಯಾಂಡಲ್‌ವುಡ್ ನಟಿ ತಾರಾ (Thara Anooradha) ಇದೀಗ ಅಭಿಮಾನಿಗಳು ಖುಷಿಪಡುವ ಸುದ್ದಿ ನೀಡಿದ್ದಾರೆ. ಕಂಡ ಕನಸಿನಂತೆ ಹೊಸ ಮನೆಗೆ ಕಾಲಿಟ್ಟಿದ್ದಾರೆ. ತಾರಾ ಮನೆಯ ಗೃಹಪ್ರವೇಶದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಮತ್ತು ಕಿರುತೆರೆ ಕಲಾವಿದರು ಭಾಗಿಯಾಗಿದ್ದಾರೆ.

    ಕನ್ನಡ ಸಿನಿಮಾಗಳಲ್ಲಿ ಮತ್ತು ಕಿರುತೆರೆಯ ‘ರಾಜ ರಾಣಿ’ (Raja Rani) ಶೋಗೆ ಜಡ್ಜ್ ಆಗಿ ತಾರಾ ಬ್ಯುಸಿಯಾಗಿದ್ದಾರೆ. ಹೊಸ ಮನೆಗೆ ಗೃಹಪ್ರವೇಶ ಸಮಾರಂಭವನ್ನು ಅದ್ಧೂರಿಯಾಗಿ ನಡೆದಿದೆ. ಇದೀಗ ತಾರಾ ಮನೆಗೆ ಸೃಜನ್ ಲೋಕೇಶ್, ಅನುಪಮಾ ಗೌಡ (Anupama Gowda), ನೇಹಾ (Neha Gowda), ಇಶಿತಾ ದಂಪತಿ ಭಾಗಿಯಾಗಿ ಶುಭಕೋರಿದ್ದಾರೆ.

    ಅದಷ್ಟೇ ಅಲ್ಲ, ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿಗಳು, ರಾಜ ರಾಣಿ ಕಾರ್ಯಕ್ರಮದ ಸ್ಪರ್ಧಿಗಳು ಭಾಗಿಯಾಗುವ ಸಂಭ್ರಮ ಡಬಲ್ ಮಾಡಿದ್ದಾರೆ. ಇದನ್ನೂ ಓದಿ:ಗರ್ಭಿಣಿ ದೀಪಿಕಾ ಸ್ಟೇಜ್‌ನಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌ಗೆ ಕಾಲೆಳೆದ ಬಿಗ್ ಬಿ

    ಅಂದಹಾಗೆ, ಇತ್ತೀಚೆಗೆ ‘ಕೋಟಿ’ (Kotee Film) ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆ ಹಿರಿಯ ನಟಿ ತಾರಾ (Thara Anooradha) ನಟಿಸಿದ್ದರು. ತಾಯಿ ಮಗನ ಕಾಂಬಿನೇಷನ್ ನೋಡಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.

  • ಹೆಚ್.ಆರ್. ರಂಗನಾಥ್ ಜೊತೆ ಮಾತುಕತೆ- ‘ಕೋಟಿ’ ಸೀಕ್ರೆಟ್ ಬಿಚ್ಚಿಟ್ಟ ಡಾಲಿ

    ಹೆಚ್.ಆರ್. ರಂಗನಾಥ್ ಜೊತೆ ಮಾತುಕತೆ- ‘ಕೋಟಿ’ ಸೀಕ್ರೆಟ್ ಬಿಚ್ಚಿಟ್ಟ ಡಾಲಿ

    ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೋಟಿ’ (Kotee Film) ಸಿನಿಮಾ ಅಬ್ಬರ ಇಂದಿನಿಂದ ಶುರುವಾಗಿದೆ. ‘ಕೋಟಿ’ ಎಂಬ ಮಿಡಲ್ ಕ್ಲಾಸ್ ಹುಡುಗ ನಿಷ್ಠೆಯಿಂದ ಕೋಟಿ ರೂಪಾಯಿ ಗಳಿಸಬೇಕು ಎಂಬ ಗುರಿ ಇಟ್ಟುಕೊಂಡಿರುತ್ತಾನೆ. ಆ ಕನಸಿನ ಹಾದಿಯಲ್ಲಿ ಬರುವ ಸವಾಲುಗಳು ಹೇಗಿರುತ್ತದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಆದರೆ ಚಿತ್ರದ ಇಂಟ್ರಸ್ಟಿಂಗ್ ವಿಚಾರಗಳನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ (HR Ranganath) ಜೊತೆ ನಟರಾಕ್ಷಸ ಡಾಲಿ ಹಂಚಿಕೊಂಡಿದ್ದಾರೆ. ‘ಕೋಟಿ’ ಕನಸುಗಳನ್ನು ಡಾಲಿ ಬಿಚ್ಚಿಟ್ಟಿದ್ದಾರೆ.

    ‘ಕೋಟಿ’ ಸಿನಿಮಾ ಒಪ್ಪಿಕೊಳ್ಳೋಕೆ ಕಾರಣ ಏನು ಎಂಬುದನ್ನು ಡಾಲಿ ಮುಕ್ತವಾಗಿ ಮಾತನಾಡಿದ್ದಾರೆ. ಪರಮ್ ಅವರು ನನಗೆ ‘ಬಡವ ರಾಸ್ಕಲ್’ ಸಿನಿಮಾ ಸಮಯದಲ್ಲಿ ಪರಿಚಯ ಆಗಿದ್ದು, ತುಂಬಾ ಹತ್ತಿರದಿಂದ ನೋಡಿದ್ದೇನೆ. ನಮ್ಮೀಬ್ಬರಿಗೂ ಒಳ್ಳೆಯ ಕನೆಕ್ಷನ್ ಇತ್ತು. ಅವರು ಕಥೆ ಹೇಳಿದಾಗ ನನಗೆ ತುಂಬಾ ಕ್ಯೂರಿಯಾಸಿಟಿ ಇತ್ತು. ಇವರು ಕಿರುತೆರೆಯಲ್ಲಿ ಕೆಲಸ ಮಾಡಿದವರು. ಸಿನಿಮಾಗೆ ಹೇಗೆ ಬರೆದಿರುತ್ತಾರೆ ಏನೋ ಅಂತ ಭಾವಿಸಿದ್ದೆ, ಆದರೆ ಪರಮ್ ಕಥೆ ಹೇಳಿದಾಗ ಇಲ್ಲ ಅನ್ನೋಕೆ ಮನಸ್ಸು ಬರಲಿಲ್ಲ. ಈ ಕಥೆ ನನಗೆ ಕಾಡ್ತಾ ಇತ್ತು ಎಂದು ಡಾಲಿ ಮಾತನಾಡಿದರು. ಇದನ್ನೂ ಓದಿ:ಇಂದಿನಿಂದ ಡಾಲಿ ನಟನೆಯ ‘ಕೋಟಿ’ ಸಿನಿಮಾ ಅಬ್ಬರ

    ನೀವು ಫ್ರೆಂಡ್‌ಶಿಪ್‌ಗಾಗಿ ಸಿನಿಮಾ ಓಕೆ ಹೇಳಬೇಡಿ. ಚೆನ್ನಾಗಿಲ್ಲ ಅಂದರೆ ಚೆನ್ನಾಗಿಲ್ಲ ಅಂತಲೇ ಹೇಳಿ ಎಂದಿದ್ದರು. ಅವರು ಸಖತ್ ಆಗಿಯೇ ಕಥೆ ಬರೆದಿದ್ದರು. ಒಂದು ಚಾನಲ್ ಕಟ್ಟಿ ಅಷ್ಟು ಸಕ್ಸಸ್ ಕಂಡಿರೋರು. ಒಂದು ಸಿನಿಮಾಗೆ ಕಥೆ ಕಟ್ಟುವ ತಾಕತ್ತು ಇದೆ ಎನ್ನುವ ನಂಬಿಕೆ ನನಗಿತ್ತು ಹಾಗಾಗಿ ಕೋಟಿ ಸಿನಿಮಾ ಮಾಡಲು ಒಪ್ಪಿಕೊಂಡೆ ಎಂದು ಡಾಲಿ ಮಾತನಾಡಿದರು. ಕೋಟಿ ಸಿನಿಮಾ ನಿಜಕ್ಕೂ ವರ್ಕೌಟ್ ಆಗಿದೆ. ಜನರಿಗೆ ಇಷ್ಟವಾಗುತ್ತೆ ಎನ್ನುವ ಭರವಸೆ ಇದೆ ಎಂದು ಮಾತನಾಡಿದರು.

    ಅಂದಹಾಗೆ, ‘ಕೋಟಿ’ (Kotee Film) ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ (Daali Dhananjay) ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ನಟಿಸಿದ್ದಾರೆ. ಖಳನಾಯಕನಾಗಿ ರಮೇಶ್ ಇಂದಿರಾ ಅಬ್ಬರಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

    ‘ಕೋಟಿ’ ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು’ 777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ.

  • ಇಂದಿನಿಂದ ಡಾಲಿ ನಟನೆಯ ‘ಕೋಟಿ’ ಸಿನಿಮಾ ಅಬ್ಬರ

    ಇಂದಿನಿಂದ ಡಾಲಿ ನಟನೆಯ ‘ಕೋಟಿ’ ಸಿನಿಮಾ ಅಬ್ಬರ

    ಹುನಿರೀಕ್ಷಿತ ‘ಕೋಟಿ’ (Kotee) ಸಿನಿಮಾ ಇದೀಗ ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚೆನ್ನೈ ಮತ್ತು ಹೈದರಾಬಾದ್‌ನಲ್ಲೂ ಹಲವು ಶೋಗಳಿವೆ. ಈಗಾಗಲೇ ಬೆಂಗಳೂರು, ಮೈಸೂರು, ಶಿವಮೊಗ್ಗಗಳಲ್ಲಿ ಹೌಸ್‌ಫುಲ್ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ:ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಯುವರಾಜ್‌ಕುಮಾರ್‌, ಸಪ್ತಮಿ ನಟನೆಯ ‘ಯುವ’ ಸಿನಿಮಾ

    ಈ ಸಿನಿಮಾದಲ್ಲಿ ಧನಂಜಯ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಗುರಿಯಿರುತ್ತದೆ. ಈ ಕಥಾಹಂದರದ ‘ಕೋಟಿ’ ಇಡೀ ಫ್ಯಾಮಿಲಿಯೇ ಕೂತು ನೋಡುವಂತ ಸಿನಿಮಾ.

    ಜೂನ್ 12ರಂದು ಬೆಂಗಳೂರಿನಲ್ಲಿ ನಡೆದ ಸೆಲೆಬ್ರಿಟಿ ಪ್ರೀಮಿಯರ್ ಶೋನಲ್ಲಿ 600ಕ್ಕೂ ಅಧಿಕ ಟಿವಿ ಮತ್ತು ಸಿನಿಮಾ ತಾರೆಗಳು ಸಿನಿಮಾ ವೀಕ್ಷಿಸಿದರು. ಸಿನಿಮಾದಲ್ಲಿನ ಧನಂಜಯ ಅವರ ಕಾಮನ್ ಮ್ಯಾನ್ ‘ಕೋಟಿ’ ಪಾತ್ರದ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಥಿಯೇಟರಿನ ಹೊರಗೂ ಸಿನಿಮಾ ಕ್ಲೈಮ್ಯಾಕ್ಸ್ ನೆರೆದಿದ್ದ ಜನರ ಮಾತಿನ ವಿಷಯವಾಗಿತ್ತು. ಈ ಸಿನಿಮಾದಲ್ಲಿ ವಿಶೇಷವಾಗಿ ಬರುವ ಒಂದು ಸ್ಟಾರ್ ಕ್ಯಾಮಿಯೋಗೆ ಭರ್ಜರಿ ಪ್ರತಿಕ್ರಿಯೆ ದೊರೆಯಿತು. ಇದೀಗ ರಾಜ್ಯಾದ್ಯಂತ ಬಿಡುಗಡೆಯಾಗಿರುವ `ಕೋಟಿ’ ಮುಂದಿನ ವಾರಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.

    ರಿಲೀಸ್‌ಗೂ ಮುನ್ನವೇ ಸಾಕಷ್ಟು ಸದ್ದು ಮಾಡಿರುವ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಗೆಲ್ಲುವ ಭರವಸೆಯಾಗಿ ಕಂಡಿದೆ. ಇದನ್ನೂ ಓದಿ:ಕಾನೂನಿಗಿಂತ ಯಾರೂ ದೊಡ್ಡವರಲ್ಲ – ದರ್ಶನ್‌, ಪವಿತ್ರಾಗೌಡಗೆ ನಟಿ ರಮ್ಯಾ ಕ್ಲಾಸ್‌!

    ‘ಕೋಟಿ’ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ (Daali Dhananjay) ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ನಟಿಸಿದ್ದಾರೆ. ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

    ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ‘777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ‘ಕೋಟಿ’ ಇಂದಿನಿಂದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

  • ಹೆಚ್.ಆರ್. ರಂಗನಾಥ್ ಜೊತೆ ಮಾತುಕತೆ- ‘ಕೋಟಿ’ ಕನಸಿನ ಬಗ್ಗೆ ಪರಮ್ ಮಾತು

    ಹೆಚ್.ಆರ್. ರಂಗನಾಥ್ ಜೊತೆ ಮಾತುಕತೆ- ‘ಕೋಟಿ’ ಕನಸಿನ ಬಗ್ಗೆ ಪರಮ್ ಮಾತು

    ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೋಟಿ’ (Kotee Film) ಸಿನಿಮಾ ಜೂನ್ 14ರಂದು ರಿಲೀಸ್‌ಗೆ ಸಿದ್ಧವಾಗಿದೆ. ಕೋಟಿ ಎಂಬ ಮಿಡಲ್ ಕ್ಲಾಸ್ ಹುಡುಗ ನಿಷ್ಠೆಯಿಂದ ಕೋಟಿ ರೂಪಾಯಿ ಗಳಿಸಬೇಕು ಎಂಬ ಗುರಿ ಇಟ್ಟುಕೊಂಡಿರುತ್ತಾನೆ. ಆ ಕನಸಿನ ಹಾದಿಯಲ್ಲಿ ಬರುವ ಸವಾಲುಗಳು ಹೇಗಿರುತ್ತದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಆದರೆ ಚಿತ್ರದ ಇಂಟ್ರಸ್ಟಿಂಗ್ ವಿಚಾರಗಳನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ (HR Ranganath) ಜೊತೆ ಡೈರೆಕ್ಟರ್ ಪರಮ್ ಹಂಚಿಕೊಂಡಿದ್ದಾರೆ.

    ಇಂದಿನ ಜೀವನ ಶೈಲಿಯಲ್ಲಿ ಹೇಗಾದ್ರು ಓಕೆ ನಾವು ದುಡ್ಡು ಮಾಡಬೇಕು ಎಂಬ ಮನಸ್ಥಿತಿ ಇದೆ. ಹೀಗಿರುವಾಗ ನಾನು ಕೂಡ ಮಿಡಲ್ ಕ್ಲಾಸ್ ಕುಟುಂಬದಿಂದ ಬಂದ ವ್ಯಕ್ತಿಯಾಗಿರೋದ್ರಿಂದ ಕೋಟಿ ಚಿತ್ರದ ಕಥೆ ಜನರಿಗೆ ಕನೆಕ್ಟ್ ಆಗುತ್ತೆ ಅನ್ನುವ ನಂಬಿಕೆ ಇದೆ. ಶ್ರದ್ಧೆ, ನಿಷ್ಠೆ, ನಂಬಿಕೆ ಇದ್ದರೆ ಕೋಟಿ ಗಳಿಸಲು ಸಾಧ್ಯವಾಗುತ್ತದೆ ಎಂದು ಓಪನ್ ಆಗಿ ಸಿನಿಮಾ ಕುರಿತು ಡೈರೆಕ್ಟರ್ ಪರಮ್ ಮಾತನಾಡಿದ್ದಾರೆ.

    1 ಕೋಟಿ ರೂಪಾಯಿಯನ್ನು ನ್ಯಾಯವಾಗಿ ಗಳಿಸಬೇಕು. ತಪ್ಪಿಲ್ಲದೇ ಮುಂದೆ ಹೋಗಬೇಕು. ನಾಯಕ ಅನುಭವಿಸುವ ಕಷ್ಟಗಳು, ಕಥೆಯ ಸಾರಾಂಶ ಜನರಿಗೆ ಕನೆಕ್ಟ್ ಆಗುತ್ತೆ ಎಂದು ನಂಬಿಕೆಯಿದೆ. ಕೊನೆಗೂ ಹೀರೋ ಕೋಟಿ ಹೇಗೆ ಗಳಿಸುತ್ತಾರೆ ಎಂಬ ಪ್ರಶ್ನೆಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ ಎಂದು ಪರಮ್ ಮಾತನಾಡಿದರು. ಇದನ್ನೂ ಓದಿ:ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್‌’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ

    ಅಂದಹಾಗೆ, ‘ಕೋಟಿ’ (Kotee Film) ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ (Daali Dhananjay) ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಖಳನಾಯಕನಾಗಿ ರಮೇಶ್ ಇಂದಿರಾ ಅಬ್ಬರಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

    ‘ಕೋಟಿ’ ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ.

  • ‘ಕೋಟಿ’ ಸಿನಿಮಾ ಪ್ರೀಮಿಯರ್‌ನಲ್ಲಿ ಸೆಲೆಬ್ರಿಟಿಗಳ ದಂಡು

    ‘ಕೋಟಿ’ ಸಿನಿಮಾ ಪ್ರೀಮಿಯರ್‌ನಲ್ಲಿ ಸೆಲೆಬ್ರಿಟಿಗಳ ದಂಡು

    ಡಾಲಿ ಧನಂಜಯ (Daali Dhananjay) ಅಭಿನಯದ ‘ಕೋಟಿ’ (Kotee Film) ಸಿನಿಮಾದ ಪ್ರೀಮಿಯರ್ ಶೋ ಓರಾಯನ್ ಮಾಲ್‌ನಲ್ಲಿ ಜೂನ್ 12ರ ಸಂಜೆ ಅದ್ಧೂರಿಯಾಗಿ ನಡೆಯಿತು. ಇಡೀ ಟಿವಿ ಮತ್ತು ಚಿತ್ರರಂಗವೇ ಸಿನಿಮಾ ನೋಡಲು ಆಗಮಿಸಿತ್ತು. ಇದಕ್ಕೆ ಕಾರಣ ಚಿತ್ರದ ನಿರ್ದೇಶಕ ಪರಮ್. ದಶಕಗಳ ಕಾಲ ಕಲರ್ಸ್ ಕನ್ನಡವನ್ನು ಮುನ್ನಡೆಸಿ ಯಶಸ್ಸಿನ ಅಲೆಯಲ್ಲಿ ತೇಲೆಸಿದ್ದ ಇವರಿಗೆ ಕಿರುತೆರೆ ಮತ್ತು ಹಿರಿತೆರೆ ಎಲ್ಲೆಡೆ ಸ್ನೇಹಿತರಿದ್ದಾರೆ. ತಾರೆಗಳಿಗಾಗಿಯೇ ಎರಡು ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದೆ ಇದಕ್ಕೆ ಸಾಕ್ಷಿ. ಸಾರ್ವಜನಿಕರಿಗೆ ಪೇಯ್ಡ್ ಪ್ರೀಮಿಯರ್ ಸೇರಿ ಓರಾಯನ್‌ನ ಮೂರು ಪರದೆಗಳು ಹೌಸ್‌ಫುಲ್ ಆಗಿದ್ದವು. ಸಾವಿರಕ್ಕಿಂತಲೂ ಹೆಚ್ಚು ಜನರು ಸಿನಿಮಾ ವೀಕ್ಷಿಸಿದರು.

    ‘ಕೋಟಿ’ ಸಿನಿಮಾ ನೋಡಿದ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಧನಂಜಯ ಅವರ ಎಂಟ್ರಿಗೆ ಶಿಳ್ಳೆ, ಕೇಕೆಗಳು ಮುಗಿಲ ಮುಟ್ಟಿದ್ದವು. ಇಡೀ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ದೊರೆಯಿತು. ಸಿನಿಮಾದಲ್ಲಿ ಬರುವ ಒಂದು ಕ್ಯಾಮಿಯೋಗೆ ಇಡೀ ಚಿತ್ರಮಂದಿರವೇ ಹರ್ಷೋದ್ಗಾರ ಮಾಡಿದರೆ, ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸಿತ್ತು. ಸಿನಿಮಾ ಮುಗಿಯುತ್ತಿದ್ದಂತೆ ಮುಖ್ಯ ಪರದೆಯಲ್ಲಿ ಪ್ರೇಕ್ಷಕರೊಬ್ಬರು ಓಡಿ ಬಂದು ನಿರ್ದೇಶಕರನ್ನು ತಬ್ಬಿಕೊಂಡು ಹರ್ಷ ವ್ಯಕ್ತಪಡಿಸಿದರು. ಸಿನಿಮಾ ಮೆಚ್ಚಿದ ಟಿವಿ ಮತ್ತು ಸಿನಿಮಾ ಮಂದಿ ತಂಡಕ್ಕೆ ಶುಭ ಕೋರಿದರು.

    ಇನ್ನೂ ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ನೂರಾರು ತಾರೆಗಳು ಪ್ರೀಮಿಯರ್ ಶೋಗೆ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ರಂಗು ತಂದಿದ್ದರು. ಟಿ.ಎನ್ ಸೀತಾರಾಂ, ಹೇಮಂತ್ ರಾವ್, ಕಿರಣ್ ರಾಜ್, ಆರ್.ಚಂದ್ರು, ಸತೀಶ್ ನೀನಾಸಂ, ನವೀನ್ ಶಂಕರ್, ಮಂಜು ಪಾವಗಡ, ಬಿಗ್ ಬಾಸ್ ವಿನ್ನರ್ ಕಾರ್ತಿಕ್, ದಿವ್ಯಾ ಉರುಡುಗ (Divya Uruduga), ಅರವಿಂದ ಕೆ.ಪಿ, ಶೈನ್ ಶೆಟ್ಟಿ (Shine Shetty) ಸೇರಿ ಸುಮಾರು ಆರುನೂರಕ್ಕೂ ಅಧಿಕ ಟಿವಿ ಮತ್ತು ಸಿನಿಮಾ ಸೆಲೆಬ್ರಿಟಿಗಳು ಆಗಮಿಸಿದ್ದರು. ಮಾಧ್ಯಮ ಮಿತ್ರರಿಂದ ಕನ್ನಡ ಸಿನಿಮಾವೊಂದರ ಅತಿದೊಡ್ಡ ಪ್ರೀಮಿಯರ್ ಶೋ ಎಂಬ ಮಾತುಗಳು ಕೇಳಿಬಂದವು. ಇದನ್ನೂ ಓದಿ:‘ಕಲ್ಕಿ’ಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ದಿಶಾ ಪಟಾನಿ

     

    View this post on Instagram

     

    A post shared by Daali Dhananjaya (@dhananjaya_ka)

    ‘ಕೋಟಿ’ಯ ಬುಕಿಂಗ್ಸ್ ಈಗ ಓಪನ್ ಆಗಿದ್ದು ಜೂನ್ 13ರಂದು ಮೈಸೂರು ಮತ್ತು ಶಿವಮೊಗ್ಗದಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಧನಂಜಯ್ ಮತ್ತು ಸಿನಿಮಾ ತಂಡ ಮೈಸೂರಿನ ಸಿನಿಪ್ರೇಮಿಗಳ ಜೊತೆ ‘ಕೋಟಿ’ ಸಿನಿಮಾ ನೋಡಲಿದೆ. ಶುಕ್ರವಾರದಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿ’ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.

    ಸಾಕಷ್ಟು ಸದ್ದು ಮಾಡುತ್ತಿರುವ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಸೋತಿರುವ ಕನ್ನಡ ಇಂಡಸ್ಟ್ರಿಗೆ ಗೆಲ್ಲುವ ಭರವಸೆಯಾಗಿ ಕಂಡಿದೆ. ‘ಕೋಟಿ’ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

    ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ‘777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ‘ಕಾಂತಾರ’ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

    ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ಜೂನ್ 14ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿ’ ಚಿತ್ರ ಬಿಡುಗಡೆಯಾಗಲಿದೆ.

  • ಡಾಲಿ ನಟನೆಯ ‘ಕೋಟಿ’ ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್

    ಡಾಲಿ ನಟನೆಯ ‘ಕೋಟಿ’ ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್

    ಡಾಲಿ ಧನಂಜಯ ನಟನೆಯ ಕೋಟಿ ಸಿನಿಮಾದ ‘ಮನ ಮನ’ (Mana Mana Song) ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ. ಥ್ರಿಲ್ಲರ್ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಡಾಲಿ ‘ಕೋಟಿ’ (Kotee) ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಹೊಂದಿರುವ ಪಾತ್ರವಾಗಿದೆ. ಈ ಥ್ರಿಲ್ಲರ್ ಸಿನಿಮಾದಲ್ಲಿ ಒಂದು ಪುಟ್ಟ ಲವ್ ಸ್ಟೋರಿ ಕೂಡ ಇದೆ.

    ‘ಮನ ಮನ’ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಬರುವ ವಿಡಿಯೋ ತುಣುಕು ಇನ್ಸ್ಟಾಗ್ರಾಂ ರೀಲ್, ವಾಟ್ಸಾಪ್ ಸ್ಟೋರಿಯಾಗಿ ಎಲ್ಲೆಡೆ ಓಡಾಡ್ತಾ ಇದೆ. ಇಬ್ಬರ ನಡುವೆ ಪ್ರೀತಿ ಅರಳಿ ನಿಂತಾಗ ಬಹುವಚನದಿಂದ ಏಕವಚನಕ್ಕೆ ಬರುವ ಒಂದು ಸಂದರ್ಭ ಬಂದೇ ಬರುತ್ತದೆ. ‘ನೀವು’ ಅಂತ ಕರೆಯುತ್ತಿದ್ದವರು ‘ನೀನು’ ಅಂತ ಕರೆಯುವ ಸಮಯವದು. ಕೋಟಿಯ ಲೈಫಲ್ಲಿ ಬಂದ ಆ ಸಮಯ ಈ ವಿಡಿಯೋದಲ್ಲಿದೆ. ಎಲ್ಲರ ಲೈಫಲ್ಲೂ ಆಗಿರಬಹುದಾದ ಈ ಸಣ್ಣ ಕ್ಯೂಟ್ ಘಟನೆ ಈ ಹಾಡಿನಲ್ಲಿ ತೋರಿಸಲಾಗಿದ್ದು, ಎಲ್ಲರಿಗೂ ಕನೆಕ್ಟ್ ಆಗುತ್ತಿದೆ.

    ನಿರ್ದೇಶಕರಾದ ಪರಮ್ ಅವರು ಹುಡುಗಿಯೊಬ್ಬಳು ನೀವು ಅಂತ ಕರೆಯಬೇಡ ಅಂತ ತಾಕೀತು ಮಾಡಿದಾಗ ಸಾಮಾನ್ಯ ಹುಡುಗನೊಬ್ಬ ಎದುರಿಸಬಹುದಾದ ಸಂಕೋಚವನ್ನು ಧನಂಜಯ ಅಭಿನಯಿಸಿರುವ ರೀತಿ ನಿಮಗೆ ಇಷ್ಟ ಆಗಬಹುದು ಎಂದು ಹೇಳಿದರು. ಇದನ್ನೂ ಓದಿ:ಹಾಟ್ ಆದ ಮೃಣಾಲ್- ನಟಿಯ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ

    ಕೋಟಿ ಸಿನಿಮಾದ ಬುಕಿಂಗ್ಸ್ ಈಗ ಓಪನ್ ಆಗಿದೆ. ಜೂನ್ 12ರ ಸಂಜೆ ಟಿವಿ ಮತ್ತು ಸಿನಿಮಾ ತಾರೆಗಳಿಗೆ ಪ್ರೀಮಿಯರ್ ಶೋ ನಡೆಯಲಿದೆ. ಅದರ ಜೊತೆ ಸಾರ್ವಜನಿಕರಿಗಾಗಿ ಎರಡು ಪೇಯ್ಡ್ ಪ್ರೀಮಿಯರ್ ಶೋಗಳಿವೆ. ಜೂನ್ 13ರಂದು ಮೈಸೂರಿನಲ್ಲೂ ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿದ್ದು, ಡಾಲಿ ಮತ್ತು ಸಿನಿಮಾತಂಡ ಮೈಸೂರಿನ ಸಿನಿಪ್ರೇಮಿಗಳ ಜೊತೆ ‘ಕೋಟಿ’ ಸಿನಿಮಾ ನೋಡಲಿದೆ. ಜೂನ್ 14ರಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿ’ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.

     

    View this post on Instagram

     

    A post shared by Param (@parameshwargundkal)

    ಸಾಕಷ್ಟು ಸದ್ದು ಮಾಡುತ್ತಿರುವ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಸೋತಿರುವ ಕನ್ನಡ ಇಂಡಸ್ಟ್ರಿಗೆ ಗೆಲ್ಲುವ ಭರವಸೆಯಾಗಿ ಕಂಡಿದೆ. ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

    ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

    ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. `ಕೋಟಿ’ ಜೂನ್ 14ರ ಶುಕ್ರವಾರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

  • ಮತ್ತೆ ಡಾಲಿ ಅಬ್ಬರ- ಜೂನ್ 14ಕ್ಕೆ ‘ಕೋಟಿ’ ಸಿನಿಮಾ ರಿಲೀಸ್

    ಮತ್ತೆ ಡಾಲಿ ಅಬ್ಬರ- ಜೂನ್ 14ಕ್ಕೆ ‘ಕೋಟಿ’ ಸಿನಿಮಾ ರಿಲೀಸ್

    ಡಾಲಿ ಧನಂಜಯ (Daali Dhananjay) ಅಭಿನಯದ ‘ಕೋಟಿ’ (Kotee Film) ಸಿನಿಮಾ ಜೂನ್ 14ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಟ್ರೆಂಡ್ ಆಗಿದ್ದು, ಜೂನ್ 11ರಿಂದ ಟಿಕೆಟ್ ಬುಕ್ಕಿಂಗ್ ಕೂಡ ಓಪನ್ ಆಗಿದೆ.

    ಈ ಚಿತ್ರದ ಬರಹಗಾರ, ನಿರ್ದೇಶಕ ಪರಮ್ ಕಿರುತೆರೆಯಲ್ಲಿ ಬಹುದೊಡ್ಡ ಹೆಸರು. ದಶಕಗಳ ಕಾಲ ಕಲರ್ಸ್ ಕನ್ನಡವನ್ನು ಮುನ್ನಡೆಸಿದ್ದ ಇವರು ಈಗ ನಿರ್ದೇಶನದ ಟೋಪಿ ತೊಟ್ಟಿದ್ದಾರೆ. ‘ಕೋಟಿ’ ತಂಡ ನಿರಂತರವಾಗಿ ಸಿನಿಮಾ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಮೆಟ್ರೋ,  ಬಸ್, ಟಿವಿ, ಯೂಟ್ಯೂಬ್, ಇನ್ಸ್ಟಾಗ್ರಾಂ ಎಲ್ಲಾ ಕಡೆ ಕೋಟಿ ಸಿನಿಮಾ ಸದ್ದು ಮಾಡ್ತಾ ಇದೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಮಯೂರಿ

    ಇತ್ತೀಚೆಗೆ ಅದ್ದೂರಿಯಾಗಿ ನಡೆದ ‘ಕೋಟಿ’ ಸಿನಿಮಾದ ಪ್ರಿ-ರಿಲೀಸ್ ವಿಶೇಷ ಟಿವಿ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸಿದ್ದರು. ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ವೇದಿಕೆಯ ಮೇಲಿದ್ದು, ತಂಡಕ್ಕೆ ಶುಭ ಹಾರೈಸಿದರು. ಬಳಿಕ ಸುದೀಪ್‌ಗೆ ‘ಕೋಟಿ’ ಸಿನಿಮಾದ ಮೊದಲ ಟಿಕೆಟ್ ನೀಡಿತ್ತು. ಹತ್ತಾರು ವರ್ಷ ಟಿವಿ, ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿರುವ ಪರಮ್ ಅವರಿಗೆ ಎಲ್ಲೆಡೆ ಸ್ನೇಹಿತರಿದ್ದಾರೆ. ಇದೇ ಜೂನ್ 12ರಂದು ‘ಕೋಟಿ’ ತಂಡ ಸಿನಿಮಾತಾರೆಗಳಿಗೆ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿದೆ. ದೊಡ್ಡ ಸಂಖ್ಯೆಯಲ್ಲಿ ತಾರೆಗಳು ಸೇರುವ ನಿರೀಕ್ಷೆ ಇದೆ. ಇದರ ಜೊತೆಗೆ ಸಿನಿರಸಿಕರಿಗಾಗಿ ಎರಡು ಪೇಯ್ಡ್ ಪ್ರೀಮಿಯರ್ ಶೋ ಕೂಡ ಇದೆ.

    ಜೂನ್‌ 13ರಂದು ಮೈಸೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳಿದ್ದು, ಧನಂಜಯ ಮತ್ತು ಚಿತ್ರತಂಡ ಮೈಸೂರಿನ ಸಿನಿರಸಿಕರ ಜೊತೆ ಸಿನಿಮಾ ನೋಡಲಿದ್ದಾರೆ. ‘ಕೋಟಿ’ ಸಿನಿಮಾ ಜೂನ್‌ 14ರಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.

    ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಸೋತಿರುವ ಕನ್ನಡ ಇಂಡಸ್ಟ್ರಿಗೆ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ಗೆಲ್ಲುವ ಭರವಸೆಯಾಗಿ ಕಂಡಿದೆ. ‘ಕೋಟಿ’ ಚಿತ್ರದ ತಾರಾಗಣದಲ್ಲಿ ಡಾಲಿ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

    ‘ಕೋಟಿ’ ಚಿತ್ರದಲ್ಲಿ ಐದು ಹಾಡುಗಳಿವೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ‘777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ‘ಕಾಂತಾರ’ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ‘ಕೋಟಿ’ಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಪರಮ್ ನಿರ್ದೇಶನದ ‘ಕೋಟಿ’ ಜೂನ್ 14ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

  • ಡಾಲಿ ಧನಂಜಯ ವೃತ್ತಿ ಜೀವನದ ಬಹುಮುಖ್ಯ ಸಿನಿಮಾ ‘ಕೋಟಿ’

    ಡಾಲಿ ಧನಂಜಯ ವೃತ್ತಿ ಜೀವನದ ಬಹುಮುಖ್ಯ ಸಿನಿಮಾ ‘ಕೋಟಿ’

    ಡಾಲಿ, ನಟರಾಕ್ಷಸ ಎಂದೇ ಕನ್ನಡ ಜನತೆಯ ಪ್ರೀತಿಗೆ ಪಾತ್ರರಾಗಿರುವ ಧನಂಜಯ (Dhananjay) ಅವರ ಹೊಚ್ಚ ಹೊಸ ಸಿನಿಮಾ ‘ಕೋಟಿ’ (Kotee Film) ಬಿಡುಗಡೆಗೆ ಸಿದ್ಧವಾಗಿದೆ. ಹಲವಾರು ಕಾರಣಗಳಿಗೆ ಈ ಸಿನಿಮಾ ಧನಂಜಯ ಅವರ ವೃತ್ತಿ ಜೀವನದಲ್ಲೇ ಬಹುಮುಖ್ಯ ಸಿನಿಮಾವಾಗಿದೆ.

    ಕಳೆದ ವರ್ಷ ಮೇ ತಿಂಗಳಿನಲ್ಲಿ ಸೆಟ್ಟೇರಿದ್ದ ‘ಕೋಟಿ’ ಈಗಾಗಲೇ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಎಲ್ಲ ಕೆಲಸಗಳ ಮುಗಿಸಿ ಜೂನ್ 14ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಧನಂಜಯ್ ಪೂರ್ಣ ಪ್ರಮಾಣದ ಹೀರೋ ಆದ್ಮೇಲೆ ಮಾಡಿದ ದೊಡ್ಡ ಬಜೆಟ್‌ನ ಸಿನಿಮಾ ಇದಾಗಿದೆ. ಜಿಯೋ ಸ್ಟುಡಿಯೋಸ್ ನಂತಹ ದೊಡ್ಡ ಸಂಸ್ಥೆಯ ಮೊದಲ ಕನ್ನಡ ಸಿನಿಮಾ ಇದಾಗಿದ್ದು ಅವರ ನಾಯಕನಟನ ಆಯ್ಕೆ ಧನಂಜಯ ಆಗಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ. ಜೊತೆಗೆ ಈ ಸಿನಿಮಾವನ್ನು ಬರೋಬ್ಬರಿ 85 ದಿನಗಳ ಕಾಲ ಬೆಂಗಳೂರು, ಮೈಸೂರು, ಚಿಕ್ಕಮಗಳೂರನಲ್ಲಿ ಚಿತ್ರೀಕರಿಸಲಾಗಿದೆ. ಧನಂಜಯ ಅವರ ಇಲ್ಲಿವರೆಗಿನ ಸಿನಿಮಾಗಳಲ್ಲಿ ಇದು ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರವಾಗಿದೆ.

    ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ‘ಕೋಟಿ’ಯ ಗೆಲುವು ತೀರಾ ಅವಶ್ಯಕವಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮುಖಾಂತರ ಕೋಟಿ ಸದ್ದು ಮಾಡುತ್ತಿದ್ದು ಅಪ್ಪಟ ಕನ್ನಡ ಮಣ್ಣಿನ ಕಥೆಯೊಂದು ಎಲ್ಲೆಡೆ ಮಾತಾಗುತ್ತಿದೆ.‌ ಇದನ್ನೂ ಓದಿ:ಡಿವೋರ್ಸ್ ಹಿಂದೆ 3ನೇ ವ್ಯಕ್ತಿ ಕೈವಾಡವಿದ್ಯಾ? ಮೌನ ಮುರಿದ ನಿವೇದಿತಾ

    ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ದುಡಿಯುವ ಬಯಕೆಯ ಡ್ರೈವರ್ ‘ಕೋಟಿ’ಯ ಪಾತ್ರದಲ್ಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಮಿಡಲ್ ಕ್ಲಾಸ್ ಪ್ಯಾಮಿಲಿ ಮ್ಯಾನ್ ಅವತಾರ ಎಲ್ಲರಿಗೂ ಕನೆಕ್ಟ್ ಆಗುವ ಭರವಸೆಯನ್ನು ಟೀಸರ್ ಮತ್ತು ಹಾಡುಗಳು ನೀಡಿವೆ.

    ದ್ವಿತೀಯಾರ್ಧದಲ್ಲಿ ಹಲವು ಸ್ಟಾರ್ ಸಿನಿಮಾಗಳು ಬರುವ ಸೂಚನೆ ನೀಡಿದ್ದು ‘ಕೋಟಿ’ ಮೊದಲ ಗೆಲುವಾಗುವ ಭರವಸೆ ನೀಡಿದೆ. ಜೊತೆಗೆ ‘ಕೋಟಿ’ಯ ಬಿಡುಗಡೆಯ ನಂತರ ಎರಡುವಾರಗಳ ಕಾಲ ಬಿಡುಗಡೆಗೆ ಸಿದ್ಧವಿರುವ ಯಾವುದೇ ದೊಡ್ಡ ಚಿತ್ರಗಳಿಲ್ಲ. ಇದು ‘ಕೋಟಿ’ಗೆ ವರದಾನವಾಗಲಿದೆ. `ಬಡವ ರಾಸ್ಕಲ್’ ನಂತರ ಧನಂಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮತ್ತೊಂದು ಸಾಮಾನ್ಯ ಮಿಡಲ್ ಕ್ಲಾಸ್ ವ್ಯಕ್ತಿಯ ಪಾತ್ರದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಹಾಗೆ ಸುಲಭಕ್ಕೆ ಯಾವುದೇ ಸಿನಿಮಾಗಳ ಪ್ರಮೋಷನ್‌ಗಳಿಗೆ ಹೋಗದ ಕಿಚ್ಚ ಸುದೀಪ್ (Sudeep) ಇತ್ತಿಚೆಗೆ ನಡೆದ ‘ಕೋಟಿ’ ಪ್ರೀ-ರಿಲೀಸ್ ಟಿವಿ ಕಾರ್ಯಕ್ರಮಕ್ಕೆ ತೆರಳಿ ಸುಮಾರು ಒಂದು ಗಂಟೆಗಳಿಗೂ ಹೆಚ್ಚಿನ ಕಾಲ ವೇದಿಕೆಯ ಮೇಲಿದ್ದು ಡಾಲಿಗೆ ಶುಭ ಹಾರೈಸಿದ್ದಾರೆ.


    ‘ಕೋಟಿ’ ಸಿನಿಮಾ ಧನಂಜಯ ಅವರಿಗೆ ದೊಡ್ಡ ಯಶಸ್ಸು ತರಲಿ ಮತ್ತು ಚಂದನವನದ ಈ ವರ್ಷದ ಮೊದಲ ದೊಡ್ಡ ಹಿಟ್ ಆಗಲಿ ಎಂಬುದು ಅಭಿಮಾನಿಗಳ ಬಯಕೆ. `ಕೋಟಿ’ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.

  • ‘ಕೋಟಿ’ ಚಿತ್ರದ ಸಕ್ಸಸ್ ನಂತರ ಮದುವೆ ಆಗ್ತೀನಿ ಎಂದ ಡಾಲಿ

    ‘ಕೋಟಿ’ ಚಿತ್ರದ ಸಕ್ಸಸ್ ನಂತರ ಮದುವೆ ಆಗ್ತೀನಿ ಎಂದ ಡಾಲಿ

    ಸ್ಯಾಂಡಲ್‌ವುಡ್ ನಟ ಡಾಲಿಗೆ (Daali) ಕನ್ನಡ ಮಾತ್ರವಲ್ಲ ಪರಭಾಷೆಯಲ್ಲೂ ಭಾರೀ ಬೇಡಿಕೆ ಇದೆ. ಸದ್ಯ ಕನ್ನಡದ ‘ಕೋಟಿ’ ಸಿನಿಮಾದ ಪ್ರಚಾರ ಕಾರ್ಯದ ವೇಳೆ, ಮದುವೆ ಬಗ್ಗೆ ಎದುರಾದ ಪ್ರಶ್ನೆ ಧನಂಜಯ ರಿಯಾಕ್ಟ್ ಮಾಡಿದ್ದಾರೆ. ‘ಕೋಟಿ’ (Kotee) ಚಿತ್ರ ಸಕ್ಸಸ್ ಆದ್ಮೇಲೆ ಮದುವೆ (Wedding) ಆಗ್ತೀನಿ ಎಂದು ಡಾಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದಂದು ಗುಡ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ

    ಎಲ್ಲೇ ಹೋದರೂ ಎದುರಾಗುವ ಪ್ರಶ್ನೆ, ನಿಮ್ಮ ಮದುವೆ ಯಾವಾಗ ಎಂದು ಹಾಗಾಗಿ ಈ ಬಗ್ಗೆ ಧನಂಜಯ ಪ್ರತಿಕ್ರಿಯೆ ನೀಡಿದ್ದಾರೆ. ವರ್ಷಗಳು ಹೋಗುತ್ತಾ ಇರುತ್ತದೆ. ಅದು ಗೊತ್ತಾಗುವುದೇ ಇಲ್ಲ. ಸಿನಿಮಾದವರಿಗೆ ವಯಸ್ಸಾಗುವುದು ಗೊತ್ತಾಗಲ್ಲ, ಸತ್ತು ಹೋಗುವುದು ಗೊತ್ತಾಗಲ್ಲ. ಒಂದು ಸಿನಿಮಾ ಮಾಡೋದರ ಒಳಗೆ ಎರಡು ವರ್ಷ ಕಳೆದು ಹೋಗಿರುತ್ತದೆ. ರೋಡಲ್ಲಿ ಫೋಟೋ ತೆಗೆಸಿಕೊಳ್ಳುವವರು ಕೂಡ ಮದುವೆ ಯಾವಾಗ ಅಂತ ಕೇಳುವ ಹಾಗೆ ಆಗಿದೆ ಎಂದು ಡಾಲಿ ತಮಾಷೆಯಾಗಿ ಉತ್ತರಿಸಿದ್ದಾರೆ.

    ಪ್ರಮಾಣ ಮಾಡಿದ್ದೀನಿ. ‘ಕೋಟಿ’ ಸಿನಿಮಾ ಚೆನ್ನಾಗಿ ಆದರೆ ಪಕ್ಕಾ ಮದುವೆ. ಚೆನ್ನಾಗಿ ಆಗಿಲ್ಲ ಅಂದರೂ ಬಿಡಲ್ಲ, ತಾರಮ್ಮನೇ ಮದುವೆ ಮಾಡಿಸಿ ಬಿಡುತ್ತಾರೆ. ‘ಕೋಟಿ’ ಸಿನಿಮಾ ಹಿಟ್ ಆಗುತ್ತದೆ. ಯಾಕೆಂದರೆ ಈ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಡಾಲಿ ಮಾತನಾಡಿದ್ದಾರೆ.

    ಅಂದಹಾಗೆ, ‘ಕೋಟಿ’ (Kotee Film) ಸಿನಿಮಾ ಇದೇ ಜೂನ್ 14ಕ್ಕೆ ರಿಲೀಸ್ ಆಗುತ್ತಿದೆ. ಧನಂಜಯಗೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ನಟಿಸಿದ್ದಾರೆ. ಈ ಚಿತ್ರವನ್ನು ಪರಮ್ ನಿರ್ದೇಶನ ಮಾಡಿದ್ದಾರೆ.