Tag: ಕೋಟಿಗೊಬ್ಬ3

  • ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಕೋಟಿಗೊಬ್ಬ3 ಭರ್ಜರಿ ಕಲೆಕ್ಷನ್‌

    ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಕೋಟಿಗೊಬ್ಬ3 ಭರ್ಜರಿ ಕಲೆಕ್ಷನ್‌

    ಬೆಂಗಳೂರು: ಸುದೀಪ್‌, ಆಶಿಕಾ ರಂಗನಾಥ್‌ ಅಭಿನಯದ ಕೋಟಿಗೊಬ್ಬ 3 ಬಿಡುಗಡೆಯಾದ ನಾಲ್ಕು ದಿನದಲ್ಲಿ 40.5 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

    ಸ್ವತ: ಸುದೀಪ್‌ ಅವರೇ ಈ ಸಿಹಿಸುದ್ದಿಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಚೀಯರ್ಸ್‌ ಟೀಂ ಕೆ3 ಎಂದು ಬರೆದು ಸಂತಸ ಹಂಚಿಕೊಂಡಿದ್ದಾರೆ.

    ಒಂದು ದಿನ ತಡವಾಗಿ ರಿಲೀಸ್‌ ಆದರೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

    ಅ.14 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಚಿತ್ರ ಬಿಡುಗಡೆ ರದ್ದಾಗಿತ್ತು. ಇದರಿಂದಾಗಿ ನಮಗೆ 7-8 ಕೋಟಿ ನಷ್ಟವಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಆಕ್ರೋಶ ವ್ಯಕ್ತಪಡಿಸಿದ್ದರು. ಕೋವಿಡ್‌ 19 ಬಳಿಕ ಜನರು ಥಿಯೇಟರ್‌ ಕಡೆ ಬರುತ್ತಿರುವುದು ಸ್ಯಾಂಡಲ್‌ವುಡ್‌ ಮಂದಿಗೆ ಸಂತಸ ನೀಡಿದೆ. ಇದನ್ನೂ ಓದಿ: ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

    ಪಬ್ಲಿಕ್‌ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಸುದೀಪ್‌, 25 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದು ಏನು ಮಾಡಿದ್ರಿ ಎಂದು ಕೇಳಿದರೆ ಜನರ ಪ್ರೀತಿ ಸಂಪಾದಿಸಿದ್ದೇನೆ ಅಂತ ಹೇಳಬಹುದು. ಸಿನಿಮಾ ಎಲ್ಲರಿಗೂ ಬೇಕು. ಊಟದಲ್ಲಿ ಕೂದಲು ಬಿದ್ದಿರುತ್ತೆ. ಆದರೆ ಆ ಕೂದಲನ್ನು ಬದಿಗಿರಿಸಿ ನಾವು ಊಟ ತಿನ್ನಬೇಕೇ ಹೊರತು ಊಟವನ್ನು ಎಸೆಯಬಾರದು ಎಂದು ಹೇಳಿದ್ದರು.

  • ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್

    ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್

    – ನಾನು ಕೋಟಿಗೊಬ್ಬ3ಗೆ ವೇಟ್ ಮಾಡ್ತಿರಲಿಲ್ಲ

    ಬೆಂಗಳೂರು: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ. ಅದು ಒಂದು ಬೇರೆ ರೀಸನ್. ಅದರಿಂದ ಸಿನಿಮಾಕ್ಕೆ ತೊಂದರೆ ಆಗಲಿಲ್ಲ, ಆಗೋದೂ ಇಲ್ಲ ಎಂದು ನಟ ಸುದೀಪ್ ಹೇಳಿದ್ದಾರೆ.

    soorappa babu

    ಪಬ್ಲಿಕ್ ಟಿವಿ ಜೊತೆಗಿನ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡುತ್ತಾ, ಸಿನಿಮಾ ರಿಲೀಸ್ ಒಂದು ದಿನ ತಡವಾಗಿದ್ದರ ಕುರಿತು ಬೇಸರ ವ್ಯಕ್ತಪಡಿಸಿದರು. ನಾನು ಕೋಟಿಗೊಬ್ಬ3ಗೆ ವೇಟ್ ಮಾಡ್ತಿರಲಿಲ್ಲ. ನಾನು ನೋಡುತ್ತಾ ಇದ್ದೆ. ಅಭಿಮಾನಿಗಳು ಸಿನಿಮಾ ರಿಲೀಸ್ ಆಗುವುದು ತಡವಾಗಿದ್ದರೂ ಮಳೆಯಲ್ಲಿ ಬಂದು ಸಿನಿಮಾ ನೋಡಿದ್ದಾರೆ. ನಾನು ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡಬೇಕು. ಒಂದು ಸಿನಿಮಾ ಯಶಸ್ಸು ಕಂಡ್ರೆ ಸುಮ್ಮನೆ ಕೂರುವುದಿಲ್ಲ. ಮುಂದೆ ಇನ್ನೂ ಚೆನ್ನಾಗಿ ಏನು ಮಾಡಬೇಕು ಎಂದು ಯೋಚನೆ ಮಾಡುತ್ತೇನೆ. ಸಂದರ್ಶನದಲ್ಲಿ ಎಲ್ಲ ಪ್ರಶ್ನೆ ಹೇಗೆ ಮುಖ್ಯವಾಗುತ್ತೋ ಹಾಗೇ ಸಿನಿಮಾ ಆಯ್ಕೆಯೂ ಮುಖ್ಯವಾಗುತ್ತದೆ. ಹೀರೊ ಆಗೋವರೆಗೂ ಮಾತ್ರ ನಂತರ ಜನರನ್ನು ಸಿನಿಮಾ ಮಂದಿರಕ್ಕೆ ಎಳೆದು ತರಬೇಕು ಎಂದು ಹೇಳುವ ಮೂಲಕ ಸಿನಿಮಾ ಆಯ್ಕೆ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:   EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

    ಅರ್ಜುನ್ ಜನ್ಯ ಒಳ್ಳೆ ಸಂಗೀತವನ್ನು ನೀಡಿದ್ದಾರೆ. ಮ್ಯೂಸಿಕ್ ಇಂದ ಕೂಡಾ ಸಿನಿಮಾ ಹಾಳಾಗುತ್ತದೆ. ಆದರೆ ಅರ್ಜುನ್ ಅವರ ಮ್ಯೂಸಿಕ್ ಮಾತ್ರ ಚೆನ್ನಾಗಿದೆ. ರವಿಶಂಕರ್ ನನ್ನದೂ ಒಂದು ಲಾಂಗ್ ಜರ್ನಿಯಾಗಿದೆ. ಅವರು ಬೆಸ್ಟ್ ಪರ್ಸನ್. ಶಿವಾ ಮತ್ತು ಸತ್ಯಗೆ 2 ಪಾತ್ರವನ್ನು ಮಾಡಬೇಕಿತ್ತು. ಮೇಕಪ್, ಬಾಡಿ ಲ್ಯಾಂಗ್ವೇಜನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇವೆ ಎಂದು ಕೋಟಿಗೊಬ್ಬ3 ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ಊಟದಲ್ಲಿ ಕೂದಲು ಬಿದ್ದರೆ ಪಕ್ಕಕ್ಕಿಡಬೇಕು ಹೊರತು ಹಾವು ಅಂತ ತಿಳಿದು ಊಟ ಬಿಡಬಾರದು. ಅದು ಕೂದಲಷ್ಟೇ ಅಲ್ಲವೇ. ಇದು ಯಾರ ಷಡ್ಯಂತ್ರ ಅನ್ನೋದು ನನಗೆ ಗೊತ್ತಿದೆ. ಅಂಥವರನ್ನ ದೂರಕ್ಕಿಡುತ್ತೇನೆ. ಹಣ ನನಗೆ ಮುಖ್ಯವಲ್ಲ. ಕೆಲವೊಮ್ಮೆ ಬಿಟ್ಟುಕೊಡಬೇಕಾಗುತ್ತದೆ. ಆದಷ್ಟು ಬಿಟ್ಟುಕೊಡ್ತೀನಿ. ನನಗೂ ಹೆಂಡತಿ ಮಕ್ಕಳು ಇದ್ದಾರೆ.  ಮಂಜು, ಕುಮಾರ್, ಸುಪ್ರೀತ್ ಅಂತವರಿಂದ ಇವತ್ತು ಕೋಟಿಗೊಬ್ಬ ಸಿನಿಮಾವನ್ನ ಕಾಪಾಡೋಕೆ ಸಾಧ್ಯವಾಗಿದ್ದು. ವಿರೋಧಿಗಳಿಗೆ ನಾನು ಖಡಕ್ ಸಂದೇಶ ಕೊಡಲ್ಲ. ನಿನ್ನೆ ಸಿನಿಮಾ ರಿಲೀಸ್ ಆಯ್ತಲ್ಲ ಅದೇ ಉತ್ತರವಾಗಿದೆ. ಚಿಲ್ಲರೆ ಬುದ್ಧಿಗಳು ಇವೆಲ್ಲ. ಶತ್ರುಗಳು ಅನ್ನೋದು ದೊಡ್ಡ ಸ್ಥಾನವಾಗಿದೆ. ಆ ಹೆಸರನ್ನ ಇಂಥವರಿಗೆ ಹೇಳಕಾಗಲ್ಲ. ಅಂಥವರಿಗೆ ಉತ್ತರ ಕೊಡಲ್ಲ ನಾನು ಎಂದು ಹೇಳಿದ್ದಾರೆ.

    ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ. ಅದು ಒಂದು ಬೇರೆ ರೀಸನ್. ಅದರಿಂದ ಸಿನಿಮಾಕ್ಕೆ ತೊಂದರೆ ಆಗಲಿಲ್ಲ. ಆಗೋದೂ ಇಲ್ಲ. ಸೂರಪ್ಪ ಬಾಬು ಸಿನಿಮಾ ಮಾಡಬೇಕು ಅಂದಾಗ ನಾನು ಹೇಳ್ದೆ ಕೋಟಿಗೊಬ್ಬ 2 ಇಂದ ಒಂದು ನಾಟ್ ಇತ್ತು. ಅದನ್ನ ಸೂರಪ್ಪ ಬಾಬುಗೆ ಹೇಳಿದ್ದೆ. ಆಗ ಶಿವಕಾರ್ತಿಕ್ ಹೊಸಬರು ಅವರು ಕಥೆ ಹೇಳಿದ್ರು, ಕೊನೆಗೆ ಅದನ್ನ ಡೆವಲಪ್ ಮಾಡಿದೆವು ಎಂದು ಸಿನಿಮಾ ಕಥೆ ಹೇಗೆ ಹುಟ್ಟಿಕೊಂಡಿತು ಎನ್ನುವುದರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ.

  • ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

    ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

    – ಪೈರಸಿ, ಕಳ್ಳರಿಗೆ ನಾನು ಹೆದರಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಬಹುನೀರಿಕ್ಷೆಯನ್ನು ಹುಟ್ಟಿಸಿರುವ ಸಿನಿಮಾ ಕೋಟಿಗೊಬ್ಬ3. ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕುರಿತಾಗಿ ಕಿಚ್ಚ ಕೆಲವು ವಿಚಾರಗಳನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ.


    ಕೋಟಿಗೊಬ್ಬ 3 ಸಿನಿಮಾ ಸುದೀಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಎರಡು ಸಿನಿಮಾ ರಿಲೀಸ್ ಆಗುತ್ತಿದ್ದು, ಖುಷಿಯಾಗುತ್ತಿದೆ. ಕಥೆ ಇಷ್ಟ ಆಗಿದೆ, ಸಿನಿಮಾ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ. ಹುಚ್ಚ ಸಿನಿಮಾದಿಂದ ಶುರು ಮಾಡಿದರೆ, ಆ ಕಥೆ ಹೇಗೆ ಹೇಳಬೇಕೊ ಹಾಗೇ ಹೇಳಿದ್ದೇವೆ. ಹಾಗೇ ಈ ಕಥೆ ಹೇಗೆ ಹೇಳಬೇಕೊ ಹಾಗೆ ಹೇಳಿದ್ದೇವೆ ಎಂದಿದ್ದಾರೆ.

    ವಾಪಾಸು ಒಂದು ಪಯಣ ಶುರುವಾಗಿದೆ. ಕೊರೊನಾ ಸಮಯದಲ್ಲಿ ತುಂಬಾ ಎಫೆಕ್ಟ್ ಆಗಿದೆ. ಎಷ್ಟು ಜನ ಕೆಲಸ ಹೋಗಿದೆ. ಹಾಗಂತ ಕೆಲಸ ಮಾಡದು ನಿಲ್ಲಸಲ್ಲ ಎಂದಿದ್ದಾರೆ. ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

    ಅರ್ಜುನ್ ಮ್ಯೂಸಿಕ್ ಚೆನ್ನಾಗಿದೆ. ಹೊರ ದೇಶದ ರೋಡ್‍ಗಳಲ್ಲಿ ಆ್ಯಕ್ಷನ್ ಸಿಕ್ವೇಲ್‍ಗಳು ಚೆನ್ನಾಗಿದೆ. 50-30 ಕಾರುಗಳು ಚೇಸಿಂಗ್ ನೋಡೊಕೆ ಚೆನ್ನಾಗಿತ್ತು. ನನಗೆ ಹೊಸ ಅನುಭವವಾಗಿದೆ. ಪೈರಸಿಗೆ ಹೆದರಲ್ಲ. ಕಳ್ಳರಿಗೆ ನಾನು ಭಯ ಪಡಲ್ಲ. ನನ್ನ ಫ್ಯಾನ್ಸ್ ನಿಂದಲೇ ನಾನು ಇಲ್ಲಿ ಇರೋದು ಎಂದು ಹೇಳಿದ್ದಾರೆ.

  • ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    – ಸಲಗ, ಕೋಟಿಗೊಬ್ಬ3 ನಡುವೆ ಪೈಟ್

    ಬೆಂಗಳೂರು: ಚಂದನವನದಲ್ಲಿ ಈಗ ಸ್ಟಾರ್‌ವಾರ್‌ ಶುರುವಾಗಿದೆ. ಒಂದೇ ದಿನ ತೆರೆ ಮೇಲೆ ಬರಲು ಬಿಗ್ ಬಜೆಟ್ ಸಿನಿಮಾಗಳಾದ ಸಲಗ, ಕೋಟಿಗೊಬ್ಬ-3 ಬಿಡುಗಡೆ ಸಿದ್ಧವಾಗಿದೆ.

    ದಸಾರ ಹಬ್ಬದ ದಿನ ಸಲಗ ಸವಾರಿ ಆರಂಭವಾಗಲಿದೆ. ದುನಿಯ ವಿಜಿ ನಿರ್ದೇಶಿಸಿ ನಟಿಸಿರುವ ಸಲಗ ಆ.14ಕ್ಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅದೇ ದಿನ ತೆರೆಗೆ ಬರೋದು ಪಕ್ಕಾ ಅಂತಿದೆ ಸುದೀಪ್ ನಟನೆಯ ಸೂರಪ್ಪ ಬಾಬು ನಿರ್ಮಾಣದ ಚಿತ್ರ ಕೋಟಿಗೊಬ್ಬ 3 ಸಿನಿಮಾ. ವಿಜಯ ದಶಮಿಯಂದು ವಿಜಯದ ಮಾಲೆ ಯಾರಿಗೆ ಹಾಕಲಿದ್ದಾರೆ ಸಿನಿ ಪ್ರೇಕ್ಷಕರು ಎಂಬುದನ್ನು ಕಾದುನೋಡಬೇಕಾಗಿದೆ.

    ಇದು  ಸ್ಟಾರ್‌ವಾರ್‌ ಅಲ್ಲ, ಇಬ್ಬರೂ ಒಟ್ಟಿಗೆ ಬರ್ತಿದ್ದೀವಿ ಅಷ್ಟೇ. ಎರಡೂ ಸಿನಿಮಾಗಳಿಗೂ ಕನ್ನಡಿಗರು ಆರ್ಶೀವಾದ ಮಾಡುತ್ತಾರೆ. ಎರಡೂ ಸಿನಿಮಾಗಳ ನಿರ್ಮಾಪಕರ ನಡುವೆ ಸಮಸ್ಯೆ ಇಲ್ಲ. ಒಟ್ಟಿಗೆ ರಿಲೀಸ್ ಆಗ್ತಿರುವುದರಿಂದ ಎಲ್ಲಾ ಕಡೆ ಕನ್ನಡ ಸಿನಿಮಾಗಳು ನೋಡಲು ಸಿಗುತ್ತದೆ. ಪರಭಾಷ ಸಿನಿಮಾಗಳ ಸಮಸ್ಯೆಗೆ ಅವಕಾಶ ಇರೋದಿಲ್ಲ ಎಂದು ಪಬ್ಲಿಕ್ ಟಿವಿಗೆ ಸಲಗ ನಿರ್ಮಾಪಕ ಕೆ ಪಿ ಶ್ರೀಕಾಂತ್ ಹೇಳಿದ್ದಾರೆ. ಇದನ್ನೂ ಓದಿ:  ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ

    ನಮಗೊಂದು ಒಳ್ಳೆಯ ದಿನ ಸಿಕ್ಕಿದೆ. ದಸರಾ ಹಬ್ಬ, ಚಾಮುಂಡೇಶ್ವರಿ ದಯೆ ಎಲ್ಲವೂ ಇದೆ ಎಂದು ಪಬ್ಲಿಕ್ ಟಿವಿಗೆ ನಟ ದುನಿಯಾ ವಿಜಯ್ ಹೇಳಿಕೆ ನೀಡಿದ್ದಾರೆ.

    ಅಕ್ಟೋಬರ್ 14ರಂದೇ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯಾಗಲಿದೆ. ಮಾತುಕತೆ ಆಡಿದ್ದು ನಿಜ, ಶ್ರೀಕಾಂತ್ ಅವರದ್ದು ತಪ್ಪಿಲ್ಲ. ಅಕ್ಟೋಬರ್ 1, 14, 29 ಅಂತ ಇತ್ತು. ಅಕ್ಟೋಬರ್ 14ರಂದು ಬಿಟ್ಟುಕೊಡಲು ರೆಡಿ ಇದ್ದೇನೆ ಎಂದು ಹೇಳಿದ್ದೇನೆ. ಅಕ್ಟೋಬರ್ 29ರಂದು ಡೇಟ್ ಸಿಗೋದಾದರೆ ಬಿಟ್ಟುಕೊಡಲು ಒಪ್ಪಿದೆ. ಆದರೆ ಅಕ್ಟೋಬರ್ 29ರಂದು ಜಯಣ್ಣ ಅವರು ಭಜರಂಗಿ-2 ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ಪಬ್ಲಿಕ್ ಟಿವಿಗೆ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.