Tag: ಕೋಟಿಗೊಬ್ಬ-3

  • ಕಿಚ್ಚನ ಸ್ಟಂಟ್ ದೃಶ್ಯ ನೋಡಿ ಬೆರಗಾದ ನಿರ್ದೇಶಕ – ನೀವು ನೋಡಿ

    ಕಿಚ್ಚನ ಸ್ಟಂಟ್ ದೃಶ್ಯ ನೋಡಿ ಬೆರಗಾದ ನಿರ್ದೇಶಕ – ನೀವು ನೋಡಿ

    ಬೆಂಗಳೂರು: ಕಿಚ್ಚ ಸುದೀಪ್ ಸದ್ಯಕ್ಕೆ ಬಹು ನಿರೀಕ್ಷಿತ ಕೋಟಿಗೊಬ್ಬ -3 ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಶೂಟಿಂಗ್ ನಲ್ಲಿ ಸುದೀಪ್ ಅವರ ಸ್ಟಂಟ್ ದೃಶ್ಯವನ್ನು ನೋಡಿ ನಿರ್ದೇಶಕರು ಅಚ್ಚರಿ ಪಟ್ಟಿದ್ದಾರೆ.

    ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣ ಸದ್ಯಕ್ಕೆ ಸರ್ಬಿಯಾ ದೇಶದ ರಾಜಧಾನಿ ಬೆಲ್ ಗ್ರೇಡ್ ನಲ್ಲಿ ನಡೆಯುತ್ತಿದೆ. ಇಲ್ಲಿ ಸುದೀಪ್ ಅವರು ಕಾರ್ ಚೇಸಿಂಗ್ ನ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಸುದೀಪ್ ರೆಡ್ ಕಾರನ್ನು ವೇಗವಾಗಿ ಓಡಿಸಿಕೊಂಡು ಬಂದು ಹತ್ತಾರು ಅಡಿ ಮೇಲಿಂದ ಹಾರಿದ್ದಾರೆ.

    ಸುದೀಪ್ ಅವರ ಸ್ಟಂಟ್ ದೃಶ್ಯದಲ್ಲಿ ನೋಡಿ ನಿರ್ದೇಶಕ ಮತ್ತು ಸ್ಟಂಟ್ ಮಾಸ್ಟರ್ ಕೂಡ ಅಚ್ಚರಿ ಪಟ್ಟಿದ್ದಾರೆ. ಈ ದೃಶ್ಯಗಳನ್ನು ಸಾಹಸ ನಿರ್ದೇಶಕ ಅನಲರಸು ಅದ್ಭುತವಾಗಿ ಚಿತ್ರೀಕರಿಸುತ್ತಿದ್ದಾರೆ.

    ಬೆಲ್ ಗ್ರೇಡ್ ನಲ್ಲಿ ಚಿತ್ರೀಕರಿಸಿ ಸಾಹಸ ದೃಶ್ಯದ ವಿಡಿಯೋವನ್ನು ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು, “ಬೆಲ್ ಗ್ರೇಡ್ ನಲ್ಲಿ ಕೋಟಿಗೊಬ್ಬ-3 ಸಿನಿಮಾದ ಚೇಸಿಂಗ್ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಮಾಸ್ಟರ್ ಅನಲರಸು ಅವರು ಕೆಲವು ಸಾಹಸ ದೃಶ್ಯಗಳನ್ನು ವಿಡಿಯೋ ಮಾಡಿದ್ದಾರೆ. ನಾನು ಕಾರ್ ಚೇಸಿಂಗ್ ಚಿತ್ರೀಕರಣವನ್ನು ನಿಜಕ್ಕೂ ಎಂಜಾಯ್ ಮಾಡಿದೆ. ತುಂಬಾ ಚೆನ್ನಾಗಿತ್ತು” ಎಂದು ತಮ್ಮ ಅನುಭವವನ್ನು ವ್ಯಕ್ತಪಡಿಸಿದ್ದಾರೆ.

    ಕೋಟಿಗೊಬ್ಬ- 3 ಸಿನಿಮಾ ಸೂರಪ್ಪ ಬಾಬು ನಿರ್ಮಿಸುತ್ತಿದ್ದು, ಶಿವ ಕಾರ್ತಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಈ ಚಿತ್ರದಲ್ಲಿ ಸುದೀಪ್, ಮಡ್ಡೋನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಬಾಲಿವುಡ್ ನಟ ಅಪ್ತಾಬ್ ಶಿವದಾಸಿನಿ ಪ್ರಮುಖ ತಾರಾ ಬಳಗದವರು ಅಭಿನಯಿಸುತ್ತಿದ್ದಾರೆ. ಕೋಟಿಗೊಬ್ಬ-3 ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    https://twitter.com/ATKSSS_Official/status/1014126103315689472

  • ನಾಯಕ-ನಾಯಕಿ ಇಲ್ಲದೇನೆ ಶುರುವಾಯ್ತು ಕೋಟಿಗೊಬ್ಬ-3 ಶೂಟಿಂಗ್!

    ನಾಯಕ-ನಾಯಕಿ ಇಲ್ಲದೇನೆ ಶುರುವಾಯ್ತು ಕೋಟಿಗೊಬ್ಬ-3 ಶೂಟಿಂಗ್!

    ಬೆಂಗಳೂರು: ಕಿಚ್ಚ ಸುದೀಪ್ ನಟಿಸುತ್ತಿರುವ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣ ಶುರುವಾಗಿದೆ. ವಿಶೇಷವೆನೆಂದರೆ ಈ ಚಿತ್ರಕ್ಕೆ ನಾಯಕಿ ಇನ್ನೂ ಆಯ್ಕೆಯಾಗಿಲ್ಲ. ಅಲ್ಲದೇ ಸುದೀಪ್ ಇಲ್ಲದೆಯೇ ಈ ಚಿತ್ರದ ಚಿತ್ರೀಕರಣವನ್ನು ಚಿತ್ರತಂಡ ಶುರು ಮಾಡಿದೆ.

    ಕೋಟಿಗೊಬ್ಬ-2 ಚಿತ್ರದ ಯಶಸ್ಸಿನ ನಂತರ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಶನ್‍ನಲ್ಲಿ ಈ ಸಿನಿಮಾ ಬರುತ್ತಿದೆ. ಕೋಟಿಗೊಬ್ಬ-3 ಸಿನಿಮಾ ಸೆಟ್ಟೇರಿ ಎರಡು ತಿಂಗಳಾಯಿತು. ಆದರೆ ನಾಯಕಿ ಮಾತ್ರ ಇನ್ನೂ ಫಿಕ್ಸ್ ಆಗಿಲ್ಲ.

    ಇನ್ನೂ ನಿರ್ದೇಶಕ ಶಿವಕಾರ್ತಿಕ್, ಹೀರೋ-ಹೀರೋಯಿನ್ ಇಲ್ಲದೇ ಇದ್ದರೂ ಪರವಾಗಿಲ್ಲ ಎಂದು ಸಿನಿಮಾದ ಬೇರೆ ಬೇರೆ ದೃಶ್ಯಗಳನ್ನ ಚಿತ್ರೀಕರಿಸೋಕೆ ಮುಂದಾಗಿದ್ದಾರೆ. ಚಿತ್ರದ ಶೂಟಿಂಗ್ ಸರಿಯಾದ ಸಮಯಕ್ಕೆ ಮುಗಿಯಬೇಕೆಂದು ಕಿಚ್ಚ ಸುದೀಪ್ ಇಲ್ಲದೇ ಇರುವ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಲು ನಿರ್ಧರಿಸಿದೆ.

    ಈ ಸಿನಿಮಾಕ್ಕೆ ಕಿಚ್ಚ ಸುದೀಪ್ ಕಥೆ ಬರೆದಿದ್ದು, ಹೆಬ್ಬುಲಿ ನಂತರ ಅರ್ಜುನ್ ಜನ್ಯ ಸುದೀಪ್ ಚಿತ್ರಕ್ಕೆ ಮತ್ತೆ ಸಂಗೀತ ನೀಡುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಕ್ಯಾಮರಾಮೆನ್ ಆಗಿ ಶೇಖರ್ ಚಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಸದ್ಯಕ್ಕೆ ಕಿಚ್ಚ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಲ್ಲಿ ಮೂಗೂತಿ ಸುಂದರಿ ಶ್ರತಿ ಜತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ‘ದಿ ವಿಲನ್’ನಲ್ಲಿ ಬ್ರಿಟನ್ ಬೆಡಗಿ ಏಮಿ ಜಾಕ್ಸನ್ ಜತೆ ಡ್ಯೂಯೆಟ್ ಹಾಡಿದ್ದಾರೆ.

    ಪೈಲ್ವಾನ್ ಇನ್ನೂ ಶುರುವಾಗಿಲ್ಲ, ಇದೀಗ ಕೋಟಿಗೊಬ್ಬ-3 ಚಿತ್ರಕ್ಕಾಗಿ ನಾಯಕಿಗಾಗಿ ಹುಡುಕಾಡುತ್ತಿದ್ದಾರೆ.