Tag: ಕೋಟಿಗೊಬ್ಬ-3

  • ಯುಟ್ಯೂಬ್‍ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್- ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ

    ಯುಟ್ಯೂಬ್‍ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್- ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಡಿಲೀಟ್ ಆಗಿದ್ದಕ್ಕೆ ನಿರ್ಮಾಪಕ ಸೂರಪ್ಪಬಾಬು ಅವರು ಸ್ಪಷ್ಟನೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರಪ್ಪ ಅವರು, ಕೋಟಿಗೊಬ್ಬ-3 ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಏಕೆ ಡಿಲೀಟ್ ಆಯ್ತು ಎಂದು ಕೇಳುತ್ತಿದ್ದರು. ಕೊರೊನಾ ವೈರಸ್‍ಗಿಂತ ಇದು ಜಾಸ್ತಿ ಸುದ್ದಿಯಾಗುತ್ತಿತ್ತು. ಪೋಲ್ಯಾಂಡ್‍ನಿಂದ ಶೂಟಿಂಗ್ ಆದ ಬಳಿಕ ಅಲ್ಲಿ ಸಹೋದರರಾದ ಸಂಜಯ್ ಪಾಲ್ ಹಾಗೂ ಅಜಯ್ ಪಾಲ್ ಇದ್ದರು. ಅವರು ಯಾರೆಂಬುದು ನನಗೆ ಗೊತ್ತಿರಲಿಲ್ಲ. ನನಗೆ ಯಾರೋ ಒಬ್ಬರು ಇಬ್ಬರು ಸಹೋದರರನ್ನು ಪರಿಚಯ ಮಾಡಿಸಿ ಅಲ್ಲಿ ಶೂಟಿಂಗ್ ಮಾಡೋಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಅವರು ಇಲ್ಲಿ ಹೋಗುವಾಗ ಆಡಿದ ಮಾತುಗಳನ್ನು ಅಲ್ಲಿ ಏನು ಮಾಡಿಕೊಟ್ಟಿಲ್ಲ. ಅವರಿಗೆ ಸಲ್ಲಬೇಕಾದ ಹಣವನ್ನು ನಮ್ಮ ಖಾತೆ ಮೂಲಕ ಕೊಟ್ಟಿದ್ದು, ಇದಕ್ಕೆ ನನ್ನ ಬಳಿ ದಾಖಲೆ ಇವೆ ಎಂದರು.

    ಯುಟ್ಯೂಬ್‍ನಲ್ಲಿ ಈಗ ಯಾರು ಏನಾದರೂ ದೂರು ನೀಡಿದರೆ ತಕ್ಷಣ ಅದನ್ನು ಡಿಲೀಟ್ ಮಾಡುತ್ತದೆ ಎಂಬುದು ನನಗೆ ನಿನ್ನೆ ಗೊತ್ತಾಗಿದೆ. ಇದರ ವಿರುದ್ಧವಾಗಿ ಆನಂದ್ ಆಡಿಯೋ ಶ್ಯಾಮ್ ಅವರು ಕಾನೂನಿನ ಪ್ರಕಾರ ಕ್ರಮಕೈಗೊಂಡಿದ್ದಾರೆ. ನಿನ್ನೆ, ಮೊನ್ನೆ ಶನಿವಾರ, ಭಾನುವಾರ ಆಗಿದ್ದ ಕಾರಣ ಅದು ವರ್ಕ್ ಆಗಿಲ್ಲ ಎಂಬ ಕಾರಣದಿಂದ ಇಂದು ಸಂಜೆಯೊಳಗೆ ಟೀಸರ್ ಅಪ್ಲೋಡ್ ಆಗುತ್ತದೆ ಎಂದು ನನಗೆ ಭರವಸೆ ಕೊಟ್ಟಿದ್ದಾರೆ. ಯುಟ್ಯೂಬ್ ಎನ್ನುವಂತದ್ದು ಮಶಿನ್ ಆಗಿದ್ದು, ಮನುಷ್ಯರು ಅಲ್ಲಿ ಕೆಲಸ ಮಾಡಲ್ಲ ಎಂದು ಶ್ಯಾಮ್ ಅವರು ತಿಳಿಸಿದ್ದರು. ಮನುಷ್ಯರು ಕೆಲಸ ಮಾಡುವಂತಿದ್ದರೆ ಈ ಸಮಸ್ಯೆಯನ್ನು ಅಲ್ಲಿಯೇ ಹೋಗಿ ಸರಿಪಡಿಸಬಹುದಿತ್ತು. ಆದರೆ ಅದು ಆಗಲ್ಲ ಎಂದು ತಿಳಿಸಿದರು.

    ಪಾಲ್ ಸಹೋದರರಿಂದ ಆದ ಅನ್ಯಾಯವನ್ನು ಪದೇ ಪದೇ ಹೇಳುತ್ತಾ ಕೋರ್ಟ್‍ಗೆ ಹೋಗುತ್ತೇನೆ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ನನ್ನ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು ಬ್ಯಾಕ್‍ಮೇಲ್ ಮಾಡಿದ್ದರು ಎಂಬುದು ಈ ಹಿಂದೆಯೇ ದಾಖಲೆಯೊಂದಿಗೆ ತೋರಿಸಿದ್ದೇನೆ. ಬಳಿಕ ನನ್ನ ಸಿಬ್ಬಂದಿಯನ್ನು ಕೇಂದ್ರ ಸಚಿವ ಸದಾನಂದ ಗೌಡ ಅವರ ಮೂಲಕ ಕರೆಸಿಕೊಂಡಿದ್ದೇವು. ಪಾಲ್ ಸಹೋದರರ ಮುಖಾಂತರ ನಾವು ಎಲ್ಲಾ ಲೋಕೇಶನ್‍ಗೆ ಹಣ ಕಟ್ಟಿದ್ದೇವೆ. ಆದರೆ ಈಗ ನನ್ನ ಸಂಬಂಧಪಟ್ಟವರಿಂದ ನನಗೆ ದುಡ್ಡು ಬಂದಿಲ್ಲ, ನಮ್ಮ ಲೋಕೇಶನ್ ಬಳಸಿಕೊಂಡಿದ್ದೀರಾ ಎಂದು ಪತ್ರ ಬರೆದು ಕಳುಹಿಸಿದ್ದರು ಎಂದು ಹೇಳಿದರು.

    ಶೂಟಿಂಗ್ ಕಡೆ ದಿನ ಅಂದರೆ 95 ಲಕ್ಷ ರೂ. ಕೊಟ್ಟರೆ ಮಾತ್ರ ನಿಮ್ಮ ತಂಡವನ್ನು ಹೊರಗೆ ಕಳುಹಿಸುತ್ತೇನೆ ಎಂದಿದ್ದ ವ್ಯಕ್ತಿ ಕೊನೆ ಕ್ಷಣದಲ್ಲಿ ಅಕೌಂಟ್ ಎಲ್ಲಾ ನೋಡಿ 45 ಲಕ್ಷ ರೂ. ಕೇಳಿದ್ದಾನೆ. ಇದರಿಂದ ನನ್ನ ಅಕೌಂಟೆಂಟ್ ಹೆದರಿ ನನಗೆ ಕರೆ ಮಾಡಿ ಸರ್ ಹಣ ಕಳುಹಿಸಿಕೊಡಿ ಇವರು ನನ್ನ ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಆಗ ನಾನು ಜಗ್ಗೇಶ್ ಅವರ ಮುಖಾಂತರ ದೂರು ನೀಡಿ ಅಕೌಂಟೆಂಟ್‍ನನ್ನು ಹಾಗೆ ಕರೆದುಕೊಂಡು ಬಂದೇವು. ನನ್ನ ಲೆಕ್ಕದ ಪ್ರಕಾರ ನಾನು ಅವರಿಗೆ 45 ಲಕ್ಷ ರೂ. ಕೊಡುವಂತಿಲ್ಲ. ಆ ಹಣವನ್ನು ನಾನು ಕೋರ್ಟ್‍ನಲ್ಲಿ ಡೆಪಾಸಿಟ್ ಇಟ್ಟು ಕಾನೂನಿನ ಹೋರಾಟ ಕೈಗೊಳ್ಳುತ್ತೇನೆ. ಆ ಹಣ ಕೊಡುವಂತಿದ್ರೆ ನಾನು ಕೊಡುತ್ತೇನೆ ಎಂದು ಸೂರಪ್ಪ ಸ್ಪಷ್ಟನೆ ನೀಡಿದರು.

  • ಇಬ್ಬರ ಅಲ್ಲ ಒಬ್ಬನೇ- ಕೋಟಿಗೊಬ್ಬ ಟೀಸರ್ ಝಲಕ್‍ನಲ್ಲಿ ಕಿಚ್ಚ ಕಮಾಲ್

    ಇಬ್ಬರ ಅಲ್ಲ ಒಬ್ಬನೇ- ಕೋಟಿಗೊಬ್ಬ ಟೀಸರ್ ಝಲಕ್‍ನಲ್ಲಿ ಕಿಚ್ಚ ಕಮಾಲ್

    ಬೆಂಗಳೂರು: ಚಂದನವನದ ಬಹುನೀರಿಕ್ಷಿತ ಕೋಟಿಗೊಬ್ಬ-3 ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಕಿಚ್ಚನ್ ಆ್ಯಕ್ಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಆರಂಭದಲ್ಲಿಯೇ ನಟ ರವಿಶಂಕರ್ ಪೊಲೀಸರ ಮುಂದೆ, ಸರ್ ಇಬ್ಬರ ಅಲ್ಲ ಅವನು ಒಬ್ಬನೇ ಎಂದು ಕಿಚ್ಚ ಸುದೀಪ್ ಪಾತ್ರವನ್ನ ವಿಶ್ಲೇಷಣೆ ಮಾಡ್ತಾ ಹೋಗ್ತಾರೆ. ಲೋಕಲ್ ನಲ್ಲಿ ಹೊಡೆದಾಗಲೇ ಹೇಳಿದ್ರೆ ಯಾರು ಕೇಳಲಿಲ್ಲ. ಈಗ ಅವನು ಇಂಟರ್ ನ್ಯಾಷನಲ್ ಕಿಲಾಡಿ. ಅವನ ಟ್ರಿಕ್ಸ್ ನನಗೆ ಗೊತ್ತು. ನೀವು ಅವನನ್ನ ಬಿಟ್ಟರೆ ಮುಂದೆ ಯಾರು ಹಿಡಿಯೋದಕ್ಕೆ ಸಾಧ್ಯನೇ ಇಲ್ಲ ಎಂದು ಹೇಳುವ ದೃಶ್ಯಗಳನ್ನು ಟೀಸರ್ ನಲ್ಲಿ ನೋಡಬಹುದಾಗಿದೆ.

    ರವಿಶಂಕರ್ ಹೇಳುತ್ತಿದ್ದಂತೆ ಮಧ್ಯೆ ಕಿಚ್ಚನ ಮಾಸ್ ಲುಕ್ ನೋಡುಗರನ್ನ ಸೆಳೆಯುತ್ತಿದೆ. ಟೀಸರ್ ನಲ್ಲಿ ಕಿಚ್ಚನ್ ಡೈಲಾಗ್ ಇಲ್ಲದಿದ್ದರೂ, ಫೈಟಿಂಗ್ ದೃಶ್ಯಗಳು ಮಾಸ್ ಆಡಿಯನ್ಸ್ ಸೆಳೆಯುವಲ್ಲಿ ಯಶಸ್ವಿಯಾಗುತ್ತೆ ಎಂಬ ಭರವಸೆಯನ್ನು ಮೂಡಿಸಿದೆ. ಈ ಮೋಷನ್ ಪೋಸ್ಟರ್ ನಲ್ಲಿ ಕನ್ನಡಕದ ಲುಕ್ ಗೆ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಮೊದಲ ಬಾರಿಗೆ ಗಾಂಧಿನಗರಕ್ಕೆ ಬಂದಿರೋ ಅಫ್ತಾಬ್ ಶಿವದಾಸನಿ ಪಾತ್ರವನ್ನು ಟೀಸರ್ ನಲ್ಲಿ ಪರಿಚಯಿಸಲಾಗಿದೆ.

    ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯರಾಗಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ಕೋಟಿಗೊಬ್ಬ-3 ಸಿನಿಮಾ ತಂಡ ಕಿಚ್ಚನ ಅಭಿಮಾನಿಗಳಿಗೆ ಟೀಸರ್ ರಿಲೀಸ್ ಮಾಡುವ ಮೂಲಕ ಹಬ್ಬದ ಗಿಫ್ಟ್ ನೀಡಿದೆ.

  • ಶಿವರಾತ್ರಿಗೆ ಕಿಚ್ಚನ ಅಭಿಮಾನಿಗಳಿಗೆ ಬಂಪರ್ ಗಿಫ್ಟ್

    ಶಿವರಾತ್ರಿಗೆ ಕಿಚ್ಚನ ಅಭಿಮಾನಿಗಳಿಗೆ ಬಂಪರ್ ಗಿಫ್ಟ್

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಮೋಷನ್ ಪೋಸ್ಟರ್ ಸಖತ್ ಸದ್ದು ಮಾಡಿದ್ದು, ಈಗ ಚಿತ್ರ ತಂಡ ಟೀಸರ್ ರಿಲೀಸ್ ಮಾಡಲು ರೆಡಿಯಾಗಿದೆ.

    ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನೀರಿಕ್ಷಿತ ಚಿತ್ರ ಕೋಟಿಗೊಬ್ಬ-3 ಚಿತ್ರದ ಟೀಸರ್ ಅನ್ನು ಫೆಬ್ರವರಿ 21 ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಶಿವರಾತ್ರಿ ಹಬ್ಬಕ್ಕೆ ಕಿಚ್ಚನ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ಕೊಡಲು ತಯಾರಾಗಿದೆ.

    ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿರುವ ಕೋಟಿಗೊಬ್ಬ-3 ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ-2 ಚಿತ್ರ 2016 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈಗ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದ ಟೀಸರ್ ಅನ್ನು ಫೆಬ್ರವರಿ 21 ಶಿವರಾತ್ರಿ ಹಬ್ಬದ ದಿನ ಮಧ್ಯಾಹ್ನ 12 ಗಂಟೆ 1 ನಿಮಿಷಕ್ಕೆ ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

    ಜನವರಿ 14 ರಂದು ಚಿತ್ರತಂಡ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಪೋಸ್ಟರ್ ನಲ್ಲಿ ಕಿಚ್ಚನ ಸ್ಟೈಲಿಶ್ ಲುಕ್ ನೋಡಿದ್ದ ಅಭಿಮಾನಿಗಳು ಫಿದಾ ಆಗಿದ್ದರು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಮೊದಲ ಬಾರಿಗೆ ಕನ್ನಡದಲ್ಲಿ ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

    ಮಡೋನಾ ಸೆಬಾಸ್ಟಿಯನ್ ಜೊತೆ ಶ್ರದ್ಧಾ ದಾಸ್ ಕೂಡ ಕೋಟಿಗೊಬ್ಬನಿಗೆ ನಾಯಕಿಯಾಗಿದ್ದಾರೆ. ಇವರನ್ನು ಬಿಟ್ಟರೆ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಇದೇ ಮೊದಲ ಬಾರಿಗೆ ಕೋಟಿಗೊಬ್ಬ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತ್ರ ಚಿತ್ರತಂಡ ಹೇಳಿಕೊಂಡಿದ್ದು, ಅವರ ಪಾತ್ರ ಏನು ಎಂಬ ಸುಳಿವುನ್ನು ಬಿಟ್ಟುಕೊಟ್ಟಿಲ್ಲ.

    ಈ ಹಿಂದೆ ಮಾತನಾಡಿದ್ದ ಅಫ್ತಾಬ್, ಕೋಟಿಗೊಬ್ಬ-3 ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾವಾಗಿದೆ. ನಾನು ಮೊದಲ ಬಾರಿಗೆ ಸುದೀಪ್ ಜೊತೆ ನಟಿಸುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ನಮ್ಮಿಬ್ಬರಿಗೆ ಸುಮಾರು 8 ವರ್ಷಗಳ ಹಿಂದೆ ಸೆಲೆಬ್ರೆಟಿ ಟಿ-20 ಕ್ರಿಕೆಟ್ ಮ್ಯಾಚಿನಲ್ಲಿ ಪರಿಚಯವಾಗಿತ್ತು. ಅಂದಿನಿಂದ ನಾವಿಬ್ಬರೂ ಸ್ನೇಹಿತರಾಗಿದ್ದೇವೆ. ಸುದೀಪ್ ಅವರು ಯಾವಾಗಲೂ ಕನ್ನಡ ಸಿನಿಮಾದಲ್ಲಿ ಅಭಿನಯಿಸು ಎಂದು ಹೇಳುತ್ತಿದ್ದರು. ಆದರೆ ಇಷ್ಟುಬೇಗ ಅವಕಾಶ ಸಿಗುತ್ತದೆ ಎಂದುಕೊಂಡಿರಲಿಲ್ಲ. ಸಿನಿಮಾದಲ್ಲಿ ಈ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಹೀಗಾಗಿ ನೀನೇ ಅಭಿನಯಿಸಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ ಸುದೀಪ್ ಜೊತೆ ಅಭಿನಯಿಸಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದರು.

  • ಕೂಲಿಂಗ್ ಗ್ಲಾಸ್ ತೊಟ್ಟು, ಹ್ಯಾಟ್ ಹಾಕ್ಕೊಂಡು ಕೋಟಿಗೊಬ್ಬ ಎಂಟ್ರಿ

    ಕೂಲಿಂಗ್ ಗ್ಲಾಸ್ ತೊಟ್ಟು, ಹ್ಯಾಟ್ ಹಾಕ್ಕೊಂಡು ಕೋಟಿಗೊಬ್ಬ ಎಂಟ್ರಿ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾದ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷವಾಗಿ ಬಿಡುಗಡೆಯಾಗಿದೆ.

    ನಟ ಸುದೀಪ್ ಮೋಷನ್ ಪೋಸ್ಟರ್ ರಿಲೀಸ್ ಆಗಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

    ಬಿಡುಗಡೆಯಾಗಿರುವ ಮೋಷನ್ ಪೋಸ್ಟರಿನಲ್ಲಿ ಸುದೀಪ್ ಲುಕ್ ಜಬರ್ದಸ್ತ್ ಆಗಿ ಮೂಡಿಬಂದಿದೆ. ಕಣ್ಣಿಗೆ ಕೂಲಿಂಗ್ ಗ್ಲಾಸ್, ಹ್ಯಾಟ್ ಹಾಕಿಕೊಂಡು ಕೈಯಲ್ಲಿ ಸಿಗಾರ್ ಹಿಡಿದುಕೊಂಡು ಮಾಸ್ ಆಗಿ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

    ಮೋಷನ್ ಪೋಸ್ಟರಿನಲ್ಲಿ ಬ್ಯಾಕ್‍ಗೌಂಡ್ ಮ್ಯೂಸಿಕ್ ಸಖತ್ ಆಗಿ ಮೂಡಿ ಬಂದಿದೆ. ಕಿಚ್ಚನ ನ್ಯೂ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪೋಸ್ಟರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2.5 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. ಅಲ್ಲದೇ 33 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೋಷನ್ ಪೋಸ್ಟರ್ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

    ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯರಾಗಿದ್ದಾರೆ. ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕೋಟಿಗೊಬ್ಬ ಚಿತ್ರದ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತ್ರ ಚಿತ್ರತಂಡ ಹೇಳಿಕೊಂಡಿದ್ದು, ಯಾವ ಪಾತ್ರ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

  • ಕೋಟಿಗೊಬ್ಬ-3 ಸಿನ್ಮಾದ ಕಿಚ್ಚನ ಫೋಟೋ ರಿವೀಲ್

    ಕೋಟಿಗೊಬ್ಬ-3 ಸಿನ್ಮಾದ ಕಿಚ್ಚನ ಫೋಟೋ ರಿವೀಲ್

    ಬೆಂಗಳೂರು: ಚಂದನವನದ ಪೈಲ್ವಾನ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾದ ಫೋಟೋಗಳು ರಿವೀಲ್ ಆಗಿದೆ. ಕಿಚ್ಚನ ಸ್ಟೈಲಿಶ್ ಲುಕ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಕ್ಲಬ್ ನಲ್ಲಿ ಹಾಡಿನ ಚಿತ್ರೀಕರಣ ನಡೆದಿದ್ದು, ಕಪ್ಪು ಬಣ್ಣದ ಹ್ಯಾಟ್ ಜೊತೆಗೆ ರೌನೆಲ್ ಸನ್‍ಗ್ಲಾಸ್ ಧರಿಸಿರುವ ಕಿಚ್ಚನ ಫೋಟೋಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. ಈ ಹಿಂದೆ ಮಾಣಿಕ್ಯ ಸಿನಿಮಾದಲ್ಲಿಯೂ ಕ್ಲಬ್ ಹಾಡಿತ್ತು. ಸಿನಿಮಾದ ಹಾಡಿನ ದೃಶ್ಯದ ಕೆಲ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ಕೋಟಿಗೊಬ್ಬ-2 ಸಿನಿಮಾ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸದ್ದು ಮಾಡಿತ್ತು. ಇದರ ಮುಂದುವರಿದ ಭಾಗವೇ ಕೋಟಿಗೊಬ್ಬ-3 ಎನ್ನಲಾಗುತ್ತಿದೆ. ಆದ್ರೆ ಚಿತ್ರತಂಡ ಸಿನಿಮಾದ ಕಥೆಯ ಸಣ್ಣ ಎಳೆಯನ್ನು ಬಿಟ್ಟುಕೊಡದೇ ಗೌಪ್ಯವಾಗಿ ಕಾಯ್ದುಕೊಂಡು ಬಂದಿದೆ. ಸಿನಿಮಾದ ಮೇಕಿಂಕ್ ಫೋಟೋ ಹೊರತು ಪಡಿಸಿದ್ರೆ ಚಿತ್ರದ ಬಗೆಗಗಿ ಇನ್ನಿತರ ಅಂಶಗಳನ್ನು ರಿವೀಲ್ ಗೊಳಿಸಿಲ್ಲ. ಸುದೀಪ್ ಅಭಿಮಾನಿಗಳು ಕೋಟಿಗೊಬ್ಬನ ದರ್ಶನಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ.

    ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯರಾಗಿದ್ದಾರೆ. ಇನ್ನು ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕೋಟಿಗೊಬ್ಬ ಚಿತ್ರದ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತ್ರ ಚಿತ್ರತಂಡ ಹೇಳಿಕೊಂಡಿದ್ದು, ಯಾವ ಪಾತ್ರ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಪೈಲ್ವಾನ ಸಿನಿಮಾದ ಮೂಲಕ ಸುನಿಲ್ ಶೆಟ್ಟಿ ಚಂದನವನ ಪ್ರವೇಶಿಸಿದ್ದಾರೆ.

  • ಕಾರು ಬಿಟ್ಟು ಸೈಕಲ್ ಸವಾರಿ ಮಾಡಿದ ಕಿಚ್ಚ: ವಿಡಿಯೋ

    ಕಾರು ಬಿಟ್ಟು ಸೈಕಲ್ ಸವಾರಿ ಮಾಡಿದ ಕಿಚ್ಚ: ವಿಡಿಯೋ

    ಬೆಂಗಳೂರು: ಕಿಚ್ಚ ಸುದೀಪ್ ಐಷರಾಮಿ ಕಾರು ಬಿಟ್ಟು ಸೈಕಲ್ ಸವಾರಿ ಮಾಡುತ್ತಾ ಶೂಟಿಂಗ್ ಸೆಟ್ ಗೆ ಹೋಗಿದ್ದಾರೆ.

    ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಹೀಗಾಗಿ ಸುದೀಪ್ ರಾಜ್‍ಕುಮಾರ್ ರಸ್ತೆಯಲ್ಲಿ ಇರುವ ಶೆರಟಾನ್ ಹೋಟೆಲ್‍ನಿಂದ ಸೈಕಲ್ ನಲ್ಲಿ ಕಂಠೀರವ ಸ್ಟುಡಿಯೋಗೆ ಬಂದಿದ್ದಾರೆ. ಸುದೀಪ್ ಜನರ ನಡುವೆ ಸೈಕಲ್ ಸವಾರಿ ಮಾಡಿದ್ದಾರೆ. ಆದರೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡ ಕಾರಣ ಯಾರ ಕಣ್ಣಿಗೂ ಬಿದ್ದಿಲ್ಲ.

    https://www.instagram.com/p/B5ZWycIn07s/

    ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರು ಶೂಟಿಂಗ್ ಸೆಟ್‍ಗೆ ದುಬಾರಿ ಕಾರ್ ಅಥವಾ ಕ್ಯಾರವಾನ್ ಮೂಲಕ ಬರುತ್ತಾರೆ. ಆದರೆ ಈ ಬಾರಿ ಕಿಚ್ಚ ಸುದೀಪ್ ಸೈಕಲ್ ಏರಿ ಶೂಟಿಂಗ್ ಸೆಟ್‍ಗೆ ಹೋಗಿದ್ದು ವಿಶೇಷ. ಸುದೀಪ್ ತಾವು ಸೈಕಲ್ ಸವಾರಿ ಮಾಡಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ನಿಮ್ಮ ಜೀವನಕ್ಕೆ ನೀವು ಹತ್ತಿರವಾಗಿರಿ ಎಂದು ಬರೆದುಕೊಂಡಿದ್ದಾರೆ. ಬೆಂಗಳೂರಿನ ಬೆಳಗ್ಗೆಯ ಚಳಿಯ ನಡುವೆ ಸುದೀಪ್ ಸೈಕಲ್ ಸವಾರಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕೋಟಿಗೊಬ್ಬ 3 ಸಿನಿಮಾವನ್ನು ಶಿವಕಾರ್ತಿಕ್ ನಿರ್ದೇಶನ ಮಾಡುತ್ತಿದ್ದು, ರಾಕ್‍ಲೈನ್ ಪ್ರೊಡಕ್ಷನ್ ಅಡಿಯಲ್ಲಿ ಸೂರಪ್ಪ ಬಾಬು ಹಾಗೂ ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್‍ಗೆ ಮಡೋನಾ ಸೆಬಾಸ್ಟಿಯಾನ್ ಹಾಗೂ ಶ್ರದ್ಧಾ ದಾಸ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ರವಿಶಂಕರ್ ಮತ್ತು ಅಫ್ತಾಬ್ ಶಿವದಾಸಾನಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

  • ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರತಂಡಕ್ಕೆ ಸಂಕಷ್ಟ

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರತಂಡಕ್ಕೆ ಸಂಕಷ್ಟ

    ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರಸಿಯಿಂದ ಸಾಕಷ್ಟು ನಷ್ಟ ಎದುರಿಸಿತ್ತು. ಇದರ ಬೆನ್ನಲ್ಲೇ ಕಿಚ್ಚ ನಟನೆಯ ಕೋಟಿಗೊಬ್ಬ-3 ಚಿತ್ರತಂಡಕ್ಕೆ ಮತ್ತೊಂದು ಆತಂಕ ಎದುರಾಗಿದ್ದು, ವಿದೇಶಿದಲ್ಲಿ ಚಿತ್ರೀಕರಣ ನಡೆಸಲು ವ್ಯವಸ್ಥೆ ಮಾಡಿದ್ದ ಮುಂಬೈ ಏಜೆನ್ಸಿ ಚಿತ್ರತಂಡಕ್ಕೆ ದೋಖಾ ಮಾಡಿದೆ.

    ಕೋಟಿಗೊಬ್ಬ ಚಿತ್ರದ ಶೂಟಿಂಗ್ ನಡೆಸಲು ಚಿತ್ರತಂಡ ಮುಂಬೈ ಮೂಲದ ಏಜೆನ್ಸಿಯೊಂದಿಗೆ ವ್ಯವಸ್ಥೆ ಮಾಡಿಕೊಂಡಿತ್ತು. ಇದರಂತೆ ಪೋಲ್ಯಾಂಡ್‍ನಲ್ಲಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿದ್ದ ಏಜೆನ್ಸಿ, ಶೂಟಿಂಗ್ ಮುಕ್ತಾಯವಾದ ಬಳಿಕ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದೆ. ಚಿತ್ರೀಕರಣದ ಸಮಯ ಹೆಚ್ಚಾಗಿದೆ ಎಂದು ಹೇಳಿ ಏಜೆನ್ಸಿಯವರು 95 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿ ಮಾಡಲು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಚಿತ್ರ ತಂಡದ ಇಬ್ಬರನ್ನು ಒತ್ತೆಯಾಳಾಗಿಸಿಕೊಂಡು ಬೆದರಿಕೆ ಹಾಕಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರು, ಚಿತ್ರೀಕರಣ ಮುಗಿಸಿ ಹೊರಡುವ ಸಂದರ್ಭದಲ್ಲಿ ಏಜೆನ್ಸಿಯವರು ನಮ್ಮ ತಂಡದ ಇಬ್ಬರ ಸದಸ್ಯರನ್ನು ಒತ್ತೆಯಾಳಾಗಿಸಿಕೊಂಡಿದ್ದಾರೆ. ಅಲ್ಲದೇ ಇಬ್ಬರ ವಿಡಿಯೋ ತೋರಿಸಿ ಹೆಚ್ಚಿನ ಹಣ ಕೊಟ್ಟು ಬಿಡಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಈಗಾಗಲೇ ವಿದೇಶದಲ್ಲಿ ಶೂಟಿಂಗ್ ನಡೆಸಲು ನಿಗದಿಯಂತೆ 3 ಕೋಟಿ ರೂ. ಪಾವತಿಸಿದ್ದೇವೆ. ಹೆಚ್ಚುವರಿ 95 ಲಕ್ಷ ರೂ. ನೀಡಲು ಬೇಡಿಕೆ ಇಟ್ಟಿದ್ದಾರೆ. ಸದ್ಯಕ್ಕೆ 45 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು. ಸದ್ಯ ಕೋಟಿಗೊಬ್ಬ-3 ಚಿತ್ರತಂಡಕ್ಕೆ ವಂಚಿಸಿದ ಮುಂಬೈ ಮೂಲದ ಏಜೆನ್ಸಿ ವಿರುದ್ಧ ಚಿತ್ರ ನಿರ್ಮಾಪಕರು ದೂರು ನೀಡಿದ್ದು, ಬೆಂಗಳೂರು ಪೊಲೀಸ್ ಕಮಿಷನರ್ ಅವರ ಸಹಾಯ ಕೋರಿದ್ದಾರೆ.

  • ‘ಕೋಟಿಗೊಬ್ಬ-3’ ಟೀಂಗೆ ಸುದೀಪ್ ಗೆಳೆಯ ಎಂಟ್ರಿ

    ‘ಕೋಟಿಗೊಬ್ಬ-3’ ಟೀಂಗೆ ಸುದೀಪ್ ಗೆಳೆಯ ಎಂಟ್ರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟರು ಬಾಲಿವುಡ್‍ನ ಅನೇಕ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅದೇ ರೀತಿ ಬಾಲಿವುಡ್ ನಟರು ಸಿನಿಮಾಗಾಗಿ ಸ್ಯಾಂಡಲ್‍ವುಡ್‍ಗೆ ಆಗಮಿಸುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಸಿನಿಮಾಗೆ ಬಾಲಿವುಡ್ ನಟ ಎಂಟ್ರಿಯಾಗಿದ್ದಾರೆ. ಈಗಾಗಲೇ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ವಿಲನ್ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

    ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ಕಿಚ್ಚನ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಶಿವದಾಸನಿ ಅವರು ಸುದೀಪ್ ಅವರ ಆಪ್ತ ಸ್ನೇಹಿತರಾಗಿದ್ದು, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದೊಂದು ಪಕ್ಕಾ ಮಾಸ್ ಆ್ಯಂಡ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಮುಖ ಪಾತ್ರದಲ್ಲಿ ಶಿವದಾಸನಿ ಮಿಂಚಲಿದ್ದಾರೆ.

    “ಕೋಟಿಗೊಬ್ಬ-3′ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾವಾಗಿದೆ. ನಾನು ಮೊದಲ ಬಾರಿಗೆ ಸುದೀಪ್ ಜೊತೆ ನಟಿಸುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ನಮ್ಮಿಬ್ಬರಿಗೆ ಸುಮಾರು 8 ವರ್ಷಗಳ ಹಿಂದೆ ಸೆಲೆಬ್ರೆಟಿ ಟಿ-20 ಕ್ರಿಕೆಟ್ ಮ್ಯಾಚಿನಲ್ಲಿ ಪರಿಚಯವಾಗಿತ್ತು. ಅಂದಿನಿಂದ ನಾವಿಬ್ಬರೂ ಸ್ನೇಹಿತರಾಗಿದ್ದೇವೆ. ಸುದೀಪ್ ಅವರು ಯಾವಾಗಲೂ ಕನ್ನಡ ಸಿನಿಮಾದಲ್ಲಿ ಅಭಿನಯಿಸು ಎಂದು ಹೇಳುತ್ತಿದ್ದರು. ಆದರೆ ಇಷ್ಟುಬೇಗ ಅವಕಾಶ ಸಿಗುತ್ತದೆ ಎಂದುಕೊಂಡಿರಲಿಲ್ಲ. ಸಿನಿಮಾದಲ್ಲಿ ಈ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಹೀಗಾಗಿ ನೀನೇ ಅಭಿನಯಿಸಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ ಸುದೀಪ್ ಜೊತೆ ಅಭಿನಯಿಸಲು ಒಪ್ಪಿಕೊಂಡಿದ್ದೇನೆ” ಎಂದು ಶಿವದಾಸನಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ‘ಕೋಟಿಗೊಬ್ಬ-3’ ಸಿನಿಮಾದ ಶೂಟಿಂಗ್ ಆರಂಭವಾಗುತ್ತಿದ್ದಂತೆ ನಟ ಅಫ್ತಾಬ್ ಶಿವದಾಸನಿ ಚಿತ್ರತಂಡ ಸೇರಲಿದ್ದಾರೆ. ಇದೊಂದು ಹೈ ಬಜೆಟ್ ಸಿನಿಮಾವಾಗಿದ್ದು, ಶಿವಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಸಿನಿಮಾಗೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದು, ಸದ್ಯಕ್ಕೆ ಹೈದರಾಬಾದ್‍ನಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಿದೆ.

  • ದಬಾಂಗ್‍ನಿಂದ ಸುಂದರ ಕ್ಷಣಗಳ ಬುತ್ತಿ ಹೊತ್ತು ತಂದ ಸುದೀಪ್

    ದಬಾಂಗ್‍ನಿಂದ ಸುಂದರ ಕ್ಷಣಗಳ ಬುತ್ತಿ ಹೊತ್ತು ತಂದ ಸುದೀಪ್

    ಬೆಂಗಳೂರು: ಚಂದನವನದ ಸ್ವಾತಿಮುತ್ತು, ಅಭಿನಯ ಚಕ್ರವರ್ತಿ ಸುದೀಪ್ ಬಾಲಿವುಡ್ ನ ಬಹುನಿರೀಕ್ಷಿತ ದಬಾಂಗ್-3 ಸಿನಿಮಾದಲ್ಲಿ ನಟಿಸುತ್ತಿರೋದು ಎಲ್ಲರಿಗೂ ತಿಳಿದಿದೆ. ಸದ್ಯ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿಕೊಂಡಿರುವ ಸುದೀಪ್ ದಬಾಂಗ್ ಸೆಟ್ ನಿಂದ ಸುಂದರ ಕ್ಷಣಗಳನ್ನು ಹೊತ್ತುಕೊಂಡು ಮನೆಗೆ ಬಂದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ, ಮೊದಲ ಶೂಟಿಂಗ್ ಶೆಡ್ಯೂಲ್ ರೋಮಾಂಚನವಾಗಿತ್ತು. ಇಲ್ಲಿಂದ ಹಲವು ಸಲ್ಮಾನ್ ಖಾನ್, ಸೋಹೈಲ್ ಖಾನ್, ಅರ್ಬಾಜ್ ಖಾನ್, ಸೋನಾಕ್ಷಿ ಸಿನ್ಹಾ, ಪ್ರಭುದೇವ್ ಟೀಮ್ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಹೊತ್ತು ಮನೆಯತ್ತ ಸಾಗುತ್ತಿದ್ದೇನೆ. ಸಲ್ಮಾನ್ ಖಾನ್ ತಂದೆ ಸಲೀಂ ಸಾಬ್ ಕುಟುಂಬದ ಜೊತೆಗಿನ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಈಗ ಕೋಟಿಗೊಬ್ಬ-3ರ ಶೂಟಿಂಗ್ ಕೆಲಸ ಆರಂಭ ಎಂಬ ಸಿಹಿ ಸುದ್ದಿಯನ್ನು ನೀಡಿದ್ದಾರೆ.

    ಕನ್ನಡ ಮಾತ್ರವಲ್ಲದೇ ತೆಲಗು, ತಮಿಳು, ಹಿಂದಿ ಸಿನಿ ಅಂಗಳದಲ್ಲಿ ಸುದೀಪ್ ತಮ್ಮದೇ ಗುರುತು ಹೊಂದಿದ್ದಾರೆ. ಚಂದನವನದಲ್ಲಿ ಹೀರೋ ಆಗಿ ಮಿಂಚುವ ಸುದೀಪ್ ಪರಭಾಷೆಯ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿಯೇ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ದಬಾಂಗ್ ಚಿತ್ರದಲ್ಲಿ ಸಿಖಂದರ್ ಎಂಬ ಪಾತ್ರದಲ್ಲಿ ಕಿಚ್ಚ ನಟಿಸಿದ್ದು, ಚಿತ್ರ ಕ್ರಿಸ್‍ಮಸ್ ಹಬ್ಬಕ್ಕೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

    2016ರಲ್ಲಿ ತೆರೆಕಂಡು ಹವಾ ಕ್ರಿಯೇಟ್ ಮಾಡಿದ್ದ ಕೋಟಿಗೊಬ್ಬ-2 ಮುಂದುವರಿದ ಕಥೆಯೇ ಕೋಟಿಗೊಬ್ಬ-3. ಈಗಾಗಲೇ ವಿದೇಶಗಳಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರ ಕೊನೆಯ ಹಂತದಲ್ಲಿದೆ. ದಬಾಂಗ್ ಶೂಟಿಂಗ್ ಮುಗಿದಿದ್ದು, ಕಿಚ್ಚ ಸುದೀಪ್ ಕೋಟಿಗೊಬ್ಬ-3ರತ್ತ ಮುಖ ಮಾಡಿದ್ದಾರೆ.

  • ಕಿಚ್ಚ ಸುದೀಪ್ ಹೊಸ ಅವತಾರ

    ಕಿಚ್ಚ ಸುದೀಪ್ ಹೊಸ ಅವತಾರ

    ಸ್ಯಾಂಡಲ್ ವುಡ್ ನಲ್ಲಿ ಕೋಟಿಗೊಬ್ಬ ಅಂದಾಕ್ಷಣ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರೇ ಕಣ್ಣ ಮುಂದೆ ಬರುತ್ತಾರೆ. ಕೋಟಿಗೊಬ್ಬ ಆ ಕಾಲದ ಸೂಪರ್ ಹಿಟ್ ಸಿನಿಮಾ ಕೂಡ ಆಗಿತ್ತು. ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 2 ಚಿತ್ರವೂ ಬ್ಲಾಕ್ ಬಸ್ಟರ್ ಹಿಟ್ ಕಂಡಿದ್ದು, ಕಿಚ್ಚನಿಗೆ ಒಂದು ಮಟ್ಟಿನ ಇಮೇಜನ್ನು ತಂದುಕೊಟ್ಟಿತ್ತು. ಇದೀಗ ಅದರದೇ ಮೂರನೇ ಸೀಕ್ವೆಲ್ ನಲ್ಲಿ ಕಿಚ್ಚ ಸುದೀಪ್ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಚಿತ್ರದ ಟೀಸರ್ ನಲ್ಲಿಯೇ ದುಬಾರಿ ಮೇಕ್ ಓವರ್ ಮೂಲಕ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದ, ಕೋಟಿಗೊಬ್ಬ 3 ಸಿನಿಮಾ ಇದೀಗ ತನ್ನ ಮತ್ತೊಂದು ವಿಚಾರದಿಂದ ಅಭಿಮಾನಿಗಳ ಮುಖವರಳಿಸಿದೆ.

    ಕೋಟಿಗೊಬ್ಬ 3 ಸಿನಿಮಾದಲ್ಲಿನ ಕಿಚ್ಚ ಸುದೀಪ್ ಅವರ ಹೊಸದೊಂದು ಲುಕ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್ ಆ ಲುಕ್ ನಲ್ಲಿ ಸೇಮ್ ಕ್ರಿಶ್ ಚಿತ್ರದ ಹೃತಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಕಾಸ್ಟ್ಯೂಮ್, ಲಾಂಗ್ ಹೇರ್, ಕಣ್ಣಿಗೆ ಬಣ್ಣ ಹಚ್ಚಿಕೊಂಡು ಸುದೀಪ್ ದರ್ಶನ ಭಾಗ್ಯ ನೀಡಿದ್ದಾರೆ. ಅಂದಹಾಗೆ ಕೋಟಿಗೊಬ್ಬ 3 ಚಿತ್ರತಂಡ ಫೈಟಿಂಗ್ ಶೂಟಿಂಗ್ ಗೆ ವಿದೇಶಕ್ಕೆ ಹಾರಿದ್ದು, ಚಿತ್ರೀಕರಣವನ್ನು ನಡೆಸುತ್ತಿದೆ. ಇತ್ತೀಚೆಗಷ್ಟೇ ಮಿನರ್ವ ಮಿಲ್ ನಲ್ಲಿ ಮೆಟ್ರೋ ಮಾದರಿಯ ಬೃಹತ್ ಸೆಟ್ ನಿರ್ಮಿಸಿಯೂ ಶೂಟಿಂಗ್ ಮಾಡಲಾಗಿತ್ತು. ಕಿಚ್ಚನ ಈ ಅವತಾರ ಅಭಿಮಾನಿಗಳಲ್ಲಿ ನಾನಾ ಕುತೂಹಲಗಳನ್ನು ಹುಟ್ಟುಹಾಕಿದೆ.