Tag: ಕೋಟಿಗೊಬ್ಬ-3

  • ಡಿಲೇ ಆಗಿದ್ದಕ್ಕೆ ಯಾವ ಮಾನಮರ್ಯಾದೆ ಹೋಗಲ್ಲ, ಬದನೆಕಾಯಿಯೂ ಆಗಿಲ್ಲ: ಸುದೀಪ್

    ಡಿಲೇ ಆಗಿದ್ದಕ್ಕೆ ಯಾವ ಮಾನಮರ್ಯಾದೆ ಹೋಗಲ್ಲ, ಬದನೆಕಾಯಿಯೂ ಆಗಿಲ್ಲ: ಸುದೀಪ್

    ಬೆಂಗಳೂರು: ಕೊನೆಗಳಿಗೆಯಲ್ಲಿ ಸಿನಿಮಾ ರಿಲೀಸ್ ವೇಳೆ ನನ್ ಜೊತೆ ಸಂಪಾದಿಸಿರೋ ಜನ ಇದ್ದಾರೆ. ಒಂದು ದಿನ ಡಿಲೇ ಆಗಿದ್ದಕ್ಕೆ ಯಾವ ಮಾನ ಮಾರ್ಯದೆ ಹೋಗಲ್ಲ. ಬದನೆಕಾಯಿಯೂ ಆಗಿಲ್ಲ ಎಂದು ನಟ ಸುದೀಪ್ ಕೋಟಿಗೊಬ್ಬ 3 ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ಹೇಳಿದ್ದಾರೆ.

    ದಸರ ಹಬ್ಬದ ಗಿಫ್ಟ್ ಆಗಿ ರಿಲೀಸ್ ಆಗಿರೋ ಕೋಟಿಗೊಬ್ಬ 3 ಸಿನಿಮಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದೆ. ಸಿನಿಮಾ ತೆರೆ ಮೇಲೆ ಅಬ್ಬರಿಸಿ, ಬಾಕ್ಸ್ ಆಫೀಸ್‍ನಲ್ಲಿ ಕಮಾಲ್ ಮಾಡಿದೆ. ಶಿವಕಾರ್ತಿಕ್ ಆಕ್ಷನ್‍ಕಟ್ ಹೇಳಿರೋ ಸಿನಿಮಾವಾಗಿದ್ದು, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ. ಕೋಟಿಗೊಬ್ಬ 3 ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ನಟ ಉಪೇಂದ್ರ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಚಿತ್ರ ಯಶಸ್ವಿಯಾಗಿದೆ, ಅದಕ್ಕೆ ಅಭಿನಂದನೆಗಳು. ನನ್ನನ್ನ ನಿರ್ದೇಶಕ ಮಾಡಿದ್ದು ಸೂರಪ್ಪ ಬಾಬು ಎಂದು ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:  ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ: ನಟಿ ಚಂದನಾ

    Sudeep Kotigobba 3 interview

    ಈ ವೇಳೆ ಮಾತನಾಡಿದ ಸುದೀಪ್, ಕೊನೆಗಳಿಗೆಯಲ್ಲಿ ಸಿನಿಮಾ ರಿಲೀಸ್ ವೇಳೆ ನನ್ ಜೊತೆ ಸಂಪಾದಿಸಿರೋ ಜನ ಇದ್ದಾರೆ ಅವರಿಂದ ಅದಾಗಿದ್ದು. ಸೂರಪ್ಪ ಬಾಬು ಆಕ್ಟಿಂಗ್ ಮಾಡಿದ್ದಾರೆ. ಕಾಲೇಜ್ ದಿನಗಳಲ್ಲಿ ನಿಮ್ ಹತ್ರ ಬರಬೇಕಾದ್ರೆ ಇದ್ದ ದಿನಗಳನ್ನ ನಾನ್ ಯಾವತ್ತೂ ಮರೆಯಲ್ಲ, ಚಿತ್ರರಂಗದ ಪರವಾಗಿ ಶುಭ ಹಾರೈಸಿದ್ದೀರಿ ಥ್ಯಾಂಕ್ಸ್ ಎಂದು ಉಪೇಂದ್ರ ಅವರಿಗೆ ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

    ಒಂದು ದಿನ ಡೀಲೆ ಅದ್ರೂ ಕೂಡ ನನ್ನ ಅಭಿಮಾನಿಗಳು ಸಹಕಾರ ನೀಡಿದ್ದಾರೆ. ಅ ಸ್ನೇಹಿತರು ನೀಡಿದ ಸಹಕಾರಕ್ಕೆ ಧ್ಯನವಾದಗಳು. ಒಂದು ದಿನ ಡಿಲೇ ಆಗಿದ್ದಕ್ಕೇ ಯಾವ ಮಾನ ಮಾರ್ಯದೆ ಹೋಗಲ್ಲ. ಬದನೆಕಾಯಿಯೂ ಕೂಡ ಆಗಿಲ್ಲ. ಅದಕ್ಕೆಲ್ಲ ತಲೆಕೆಡಸಿಕೊಳ್ಳಬಾರದು ಬಾಬು. ಒಬ್ಬ ರಿಟರ್ಡ್ ಆಂಕರ್‍ನ ಕರೆಸಿ ಸಮಾರಂಭ ಮಾಡುತ್ತಿದ್ದಾರೆ ಎಂದು ಅರುಣ್ ಸಾಗರ್ ಅವರಿಗೆ ಸುದೀಪ್ ತಮಾಷೆ ಮಾಡಿದ್ದಾರೆ. ಇದನ್ನೂ ಓದಿ:  ವಿಚ್ಛೇದನದ ನಂತ್ರ ಚಾರ್ ಧಾಮ್ ಯಾತ್ರೆಯಲ್ಲಿ ನಟಿ ಸಮಂತಾ

  • ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ FIR

    ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ FIR

    ಚಿತ್ರದುರ್ಗ: ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

    khajapeer

    ಚಿತ್ರದುರ್ಗದ ಫಿಲಂ ವಿತರಕ ಖಾಜಾಪೀರ್ ಹಾಗೂ ನಿರ್ಮಾಪಕ ಸೂರಪ್ಪ ನಡುವೆ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೋಟಿಗೊಬ್ಬ-3 ಚಿತ್ರ ವಿತರಣೆ ವಿಚಾರವಾಗಿ 2 ಕೋಟಿ 90 ಲಕ್ಷ ರೂಪಾಯಿಗಳಿಗೆ ಒಪ್ಪಂದವಾಗಿತ್ತು.  ಇದನ್ನೂ ಓದಿ: ನನ್ನ ಜೀವಕ್ಕೆ ಹಾನಿಯಾದ್ರೆ ನಿರ್ಮಾಪಕ ಸೂರಪ್ಪಬಾಬು ಹೊಣೆ: ಖಾಜಾಪೀರ್

    soorappa babu

    ಅದರಂತೆ 60 ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದಿದ್ದಾರೆ. ಆದರೆ ಆ ಅಗ್ರಿಮೆಂಟ್‍ನಂತೆ ನಡೆದುಕೊಳ್ಳದ ಸೂರಪ್ಪಬಾಬು, ಬೇರೆಯವರಿಗೆ ಚಿತ್ರವನ್ನು ನೀಡಿದ್ದಾರೆ. ಹೀಗಾಗಿ ನಮ್ಮ ಹಣ ನೀಡುವಂತೆ ಕೇಳಿದರೆ ವಾಪಾಸ್ ಕೊಡದೇ ದೌರ್ಜನ್ಯದಿಂದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ನಟ ಸುದೀಪ್ ಅವರ ಅಭಿಮಾನಿಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ದಮ್ಕಿ ಹಾಕುತ್ತಿದ್ದಾರೆ. ಅಲ್ಲದೇ ಪ್ರಾಣಬೆದರಿಕೆ ಹಾಕಿದ್ದಾರೆ. ಹೀಗಾಗಿ ನಾನು ಚಿತ್ರದುರ್ಗ ನಗರ ಠಾಣೆಗೆ ದೂರು ನೀಡಿದ್ದೂ, ನ್ಯಾಯ ಒದಗಿಸುವಂತೆ ಕೋರಿದ್ದೇನೆಂದು ಖಾಜಾಪೀರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

    ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಎಂ.ಬಿ.ಬಾಬು ವಿರುದ್ಧ ಜೀವ ಬೆದರಿಕೆ ಆರೋಪ ಕೇಳಿಬಂದಿದ್ದು, ಖಾಜಾಪೀರ್ ನೀಡಿರುವ ದೂರಿನ ಮೇರೆಗೆ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಐಪಿಸಿ ಕಲಂ 506 ಹಾಗೂ 504 ಅಡಿ ಎಫ್‍ಐಆರ್ ದಾಖಲಾಗಿದೆ. ಈ ವೇಳೆ ಖಾಜಾಪೀರ್ ಅವರೊಂದಿಗೆ ಕುಮಾರ್ ಫಿಲ್ಮಂ ನಿರ್ಮಾಪಕ ಕುಮಾರ್ ಇದ್ದರು.

  • ನನ್ನ ಜೀವಕ್ಕೆ ಹಾನಿಯಾದ್ರೆ ನಿರ್ಮಾಪಕ ಸೂರಪ್ಪಬಾಬು ಹೊಣೆ: ಖಾಜಾಪೀರ್

    ನನ್ನ ಜೀವಕ್ಕೆ ಹಾನಿಯಾದ್ರೆ ನಿರ್ಮಾಪಕ ಸೂರಪ್ಪಬಾಬು ಹೊಣೆ: ಖಾಜಾಪೀರ್

    ಚಿತ್ರದುರ್ಗ: ತಾಂತ್ರಿಕ ದೋಷದಿಂದ ರಿಲೀಸ್ ಗೂ ಮುನ್ನವೇ ಭಾರೀ ಸುದ್ದಿಯಾಗಿದ್ದ ಕೋಟಿಗೊಬ್ಬ-3 ಸಿನಿಮಾದ ಸುತ್ತ ಇದೀಗ ಮತ್ತೊಂದು ವಿವಾದ ಸುತ್ತಿಕೊಂಡಿದೆ. ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಫಿಲಂ ವಿತರಕರು ತಿರುಗಿಬಿದ್ದಿದ್ದಾರೆ.

    ಚಿತ್ರದುರ್ಗದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋಟಿಗೊಬ್ಬ-3 ಚಿತ್ರ ವಿತರಣೆಗಾಗಿ 1 ಕೋಟಿ 90 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೆವು. ಅವರು ಮುಂಗಡವಾಗಿ 60 ಲಕ್ಷ ಹಣ ಪಡೆದಿದ್ದರು. ಆದರೆ ನಮಗೆ ಚಿತ್ರವೂ ನೀಡದೆ ಇತ್ತ ಹಣವೂ ನೀಡದೆ ಧಮ್ಕಿ ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

    Soorappa Babu

    ರಾಜ್ಯದ ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ವಿತರಣೆಗಾಗಿ ಕುಮಾರ್ ಫಿಲಂಸ್ ಮೂಲಕ ಡಿಸ್ಟ್ರಿಬ್ಯೂಷನ್ ಪಡೆದಿದ್ದು, ಮಾರ್ಚ್ 31ಕ್ಕೆ ಕಾಳಿಂಗ ಹ್ಯಾಡ್ಸ್ ಮೂಲಕ ರಾಂಬಾಬು ಫಿಲಂಸ್ ಗೆ ಹಣ ಸಂದಾಯವಾಗಿದೆ. 45 ಲಕ್ಷ ಖಖಿಉS ಹಾಗೂ ಉಳಿದ ಹಣವನ್ನು ನಗದು ರೂಪದಲ್ಲಿ ನೀಡಲಾಗಿದೆ. ಈ ವೇಳೆ ಉಳಿದ ಹಣ ನೀಡದ ಕಾರಣ ಸಿನಿಮಾ ರಿಲೀಸ್ ಲೈಸನ್ಸ್ ಕೊಟ್ಟಿರಲಿಲ್ಲ ಎಂದರು.  ಇದನ್ನೂ ಓದಿ:   EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

    ಆಗ ಸಿನಿಮಾ ಬಿಡಗಡೆ ಆಗದಿದ್ದಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳನ್ನು ಎತ್ತಿಕಟ್ಟಿ ನಮಗೆ ಬೆದರಿಸಿದ್ದಾರೆ. ಹಾಗೆಯೇ ಮರುದಿನ ಜಾಕ್ ಮಂಜುಗೆ ಸಿನಿಮಾ ವಿತರಣೆಗೆ ಅವಕಾಶ ನೀಡಿದ್ದು, ಆಗ ನನ್ನ ಹಣ ವಾಪಸ್ ನೀಡುವಂತೆ ಕೇಳು ಮೂಲಕ ಸೂರಪ್ಪಬಾಬು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂರಪ್ಪ ಬಾಬು ವಿರುದ್ಧ ಕುಮಾರ್ ಫಿಲಂಸ್ ನಿರ್ಮಾಪಕ ಕುಮಾರ್ ಹಾಗೂ ನಾನು ಚಿತ್ರದುರ್ಗ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೇವೆ. ನಮ್ಮ ಜೀವಕ್ಕೆ ಪ್ರಾಣಭಯವಿದ್ದು, ನಮಗೆ ರಕ್ಷಣೆ ಒದಗಿಸಬೇಕು ಹಾಗೂ ಸಂಕಷ್ಟದಲ್ಲಿರುವ ನಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.  ಇದನ್ನೂ ಓದಿ: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್

  • ಏನೇ ವಿವಾದ ಇದ್ರೂ ಇಂಡಸ್ಟ್ರಿಯೊಳಗೆ ಬಗೆಹರಿಸಿಕೊಳ್ಳಬೇಕು, ಮರ್ಯಾದೆ ತೆಗೆಯಬಾರ್ದು: ನಿಖಿಲ್

    ಏನೇ ವಿವಾದ ಇದ್ರೂ ಇಂಡಸ್ಟ್ರಿಯೊಳಗೆ ಬಗೆಹರಿಸಿಕೊಳ್ಳಬೇಕು, ಮರ್ಯಾದೆ ತೆಗೆಯಬಾರ್ದು: ನಿಖಿಲ್

    – ಭಗವಂತ ಸುದೀಪ್ ಅವರಿಗೆ ಶಕ್ತಿ ಕೊಟ್ಟಿದ್ದಾನೆ

    ಬೆಂಗಳೂರು: ಯಾವುದೇ ವಿವಾದ ಇದ್ದರೂ ಒಳಗಡೆ ಕುಳಿತು ಬಗೆಹರಿಸಿಕೊಳ್ಳಬೇಕು. ಏನೇ ಆದರೂ ಕನ್ನಡ ಇಂಡಸ್ಟ್ರಿಯ ಮರ್ಯಾದೆ ಹೋಗಬಾರದು ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ಬಿಡುಗಡೆ ಅಡ್ಡಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಸಿನಿಮಾ ರಿಲೀಸ್ ಆದರೂ ಅದು ನಮಗೆ ಹೆಮ್ಮೆ ಇದೆ. ಬೇರೆ ಭಾಷೆಗಳ ಚಿತ್ರಕ್ಕಿಂತ ನಮ್ಮ ಭಾಷೆಯಲ್ಲಿ ತುಂಬ ಕಷ್ಟಪಡುತ್ತಿದ್ದೇವೆ. ಹೊರಗಡೆ ನಾವು ನಗೆಪಾಟಲಿಗೆ ಈಡಾಗದಂತೆ ನಡೆದುಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್

    ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಅಡ್ಡಿ ಉಂಟಾಗಿದ ವಿಚಾರ ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಯಾವುದೇ ವಿವಾದ ಇದ್ದರೂ ಒಳಗಡೆ ಕುಳಿತು ಬಗೆಹರಿಸಿಕೊಳ್ಳಬೇಕು. ಏನೇ ಆದರೂ ಕನ್ನಡ ಇಂಡಸ್ಟ್ರಿಯ ಮರ್ಯಾದೆ ಹೋಗಬಾರದು. ಇದು ಆಗಬಾರದಿತ್ತು, ಆದರೆ ಆಗಿದೆ. ನಾನು ಸುದೀಪ್ ಅವರ ಜೊತೆ ಆತ್ಮೀಯವಾಗಿದ್ದೇನೆ. ಭಗವಂತ ಸುದೀಪ್ ಅವರಿಗೆ ಶಕ್ತಿ ಕೊಟ್ಟಿದ್ದಾನೆ. ಹಾಗಾಗಿ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಯಾವುದೇ ಹೀರೋ ಸಿನಿಮಾ ರಿಲೀಸ್ ಆದರೂ ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

  • ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

    ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

    ಬೆಂಗಳೂರು: ನನ್ನನ್ನು ನಂಬಿ ಚಿತ್ರಮಂದಿರಗಳಿಗೆ ಬಂದು ನಿರಾಶಾರಾಗಿದ್ದವರ ಬಳಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗಿನ ಎಕ್ಸ್ ಕ್ಲೂಸೀವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಕ್ಷಮೆ ಕೇಳುವುದರಿಂದ ನಾನು ಸಣ್ಣವನಾಗಲ್ಲ ಅಥವಾ ನನಗೆ ಮುಜುಗರವಾಗಲ್ಲ. ಪ್ರಮೋಷನ್ ಮೇಲೆ ಸಿನಿಮಾ ನಿಂತಿದೆ. ನಾನು ಯಾಕೆ ಟ್ವೀಟ್ ಮಾಡಿಲ್ಲ ಅಂದ್ರೆ ನನಗೆ ಆ ಯಾವುದೇ ವಿಚಾರದಲ್ಲಿ ಯಾವುದೇ ನಿಖರ ಮಾಹಿತಿ ಇರಲಿಲ್ಲ. ನನ್ನ ತಪ್ಪು ಇನ್ನೊಬ್ಬರಿಗೆ ಡ್ಯಾಮೇಜ್ ಮಾಡಲ್ಲ ಎಂದರು. ಇದನ್ನೂ ಓದಿ:   EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

    ತಾಳ್ಮೆ ತಡೆದುಕೊಳ್ಳುವ ತಾಕತ್ತು ಇದೆ. ಹೀಗಾಗಿ ನನಗೆ ಇಂತಹ ಸಮಸ್ಯೆಗಳು ಬಂದಿದೆ ಅಷ್ಟೆ. 25 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದು ಏನು ಮಾಡಿದ್ರಿ ಎಂದು ಕೇಳಿದರೆ ಜನರ ಪ್ರೀತಿ ಸಂಪಾದಿಸಿದ್ದೇನೆ ಅಂತ ಹೇಳಬಹುದು. ಸಿನಿಮಾ ಎಲ್ಲರಿಗೂ ಬೇಕು. ಊಟದಲ್ಲಿ ಕೂದಲು ಬಿದ್ದಿರುತ್ತೆ. ಆದರೆ ಆ ಕೂದಲನ್ನು ಬದಿಗಿರಿಸಿ ನಾವು ಊಟ ಮುಂದುವರಿಸಬೇಕೇ ಹೊರತು ಅದನ್ನು ಬಿಸಾಕಬಾರದು ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್

     ಎಲ್ಲ ಕಡೆ ರಾಜಕೀಯ ನಡೆಯುತ್ತದೆ. ಇದೀಗ ನನಗೆ ಅರ್ಥವಾಗುತ್ತಿದೆ ನಿಜವಾದ ಸ್ನೇಹಿತರು ಗೊತ್ತಾಗುತ್ತಾರೆ. ಇದು ಷಡ್ಯಂತ್ರ ಎನ್ನುವುದು ನನಗೆ ಗೊತ್ತು. ಸಿನಿಮಾ ಮಾಡಿದ ನಾವು, ನಮ್ಮ ತಂಡಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಆದರೆ ಕೆಲವು ಕೆಟ್ಟ ಮನೋಭಾವ ಇರುವವರು ಪೈರಸಿ ಮಾಡುತ್ತಾರೆ. ಈ ವೇಳೆ ತಾಳ್ಮೆ ಕಳೆದುಕೊಂಡು ಯಾರೊಂದಿಗೆ ಯುದ್ಧ ಮಾಡಲಿ. ಕಾಣದೆ ಇರುವ ಶತ್ರುವಿನ ಮೇಲೆ ನಾನು ಹೇಗೆ ಯುದ್ಧ ಮಾಡಲಿ ಎಂದು ಸುದೀಪ್ ತಿಳಿಸಿದರು. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ಯಾರು ನಮ್ಮ ಪರ ನಿಂತಿದ್ದಾರೆ ಎಂಬುದನ್ನು ನಾವು ನೋಡಬೇಕು. ಈ ಸಮಯದಲ್ಲಿ ಯಾರು ನಮ್ಮವರು ಎಂದು ಗೊತ್ತಾಗುತ್ತದೆ. ನಾನು ಬದಲಾಗಿದ್ದೇನೆ ಎಂದು ಕಿಚ್ಚ ಸುದೀಪ್ ಹೇಳಿದರು.

  • EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

    EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

    – ನಿರ್ಮಾಪಕ ಸೂರಪ್ಪ ಬಾಬು ತಪ್ಪಿಲ್ಲ
    – ಇದೊಂದು ಪಾಠ ಅಷ್ಟೆ

    ಬೆಂಗಳೂರು: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ಕಿತ್ತು ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗಿನ ಎಕ್ಸ್ ಕ್ಲೂಸೀವ್ ಸಂದರ್ಶನದಲ್ಲಿ ಮಾತನಾಡುತ್ತಾ, ಸಿನಿಮಾ ರಿಲೀಸ್ ಒಂದು ದಿನ ತಡವಾಗಿದ್ದರ ಕುರಿತು ಬೇಸರ ವ್ಯಕ್ತಪಡಿಸಿದರು. ಸಿನಿಮಾ ರಿಲೀಸ್ ತಡವಾಗಿದೆ. ಇದರಲ್ಲಿ ನಿರ್ಮಾಪಕ ಸೂರಪ್ಪ ಬಾಬು ತಪ್ಪಿಲ್ಲ. ಇದಕ್ಕೆ ಅವರು ಏನೂ ಮಾಡೋಕೆ ಆಗುವುದು ಇಲ್ಲ. ಹೀಗಾಗಿ ಅವರ ಪರ ನಾವಿದ್ದೀವಿ ಎಂದು ತಿಳಿಸಿದ್ದಾರೆ.

    soorappa babu

    ನಾವು ಯಾವಾಗಲೂ ಕಿತ್ತಾಡುತ್ತಾ, ಜಗಳಾಡುತ್ತಾ ಇರುತ್ತೇವೆ. ಹಾಗಂತ ಇಲ್ಲಿ ಅವರದ್ದು ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಕೊರೊನಾದಿಂದ ಲಾಕ್ ಡೌನ್ ಸಮಯ ನಮಗೆಲ್ಲ ದೊಡ್ಡ ಸವಾಲು ನೀಡಿತ್ತು. ಅಂತೆಯೇ ಇದನ್ನೂ ನಾವು ಹೊಸ ಸವಾಲೆಂದು ಸ್ವೀಕರಿಸುತ್ತೇವೆ. ಒಳ್ಳೆಯ ಪಾಠ ಕಲಿಸಿದೆ ಎಂದು ಸುದೀಪ್ ವಿಚಾರವನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮಾತನಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ಇದೊಂದು ಒಳ್ಳೆಯ ಬೆಳವಣಿಗೆ. ಚಿತ್ರ ರಿಲೀಸ್ ಆಗಲು ರೆಡಿಯಾಗಿತ್ತು. ಆದರೆ ನಾವೇ ಬೇಡ ಅಂತ ಬಿಟ್ಟು ಬಿಟ್ವಿ. ಕೋಪ- ತಾಪಗಳನ್ನು ಸ್ವಲ್ಪ ಪೋಸ್ಟ್ ಪೋನ್ ಮಾಡೋಣ ಅಂತ ಡಿಸೈಡ್ ಮಾಡಿದ್ವಿ. ಜನರಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಅಂತ ನಾಳೆ ಬರುತ್ತಾ ಇದ್ವಿ ಅಂತ ಪಕ್ಕಾ ಮಾಹಿತಿ ನೀಡಿದೆವು. ಇದರಿಂದ ಜನ ಗೊಂದಕ್ಕೀಡಾಗುವುದು ತಪ್ಪಿತ್ತು ಎಂದರು. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ

    ಸಿನಿಮಾ ಆಗಿಲ್ಲ ಅಂದರೂ ನನ್ನ ಸ್ನೇಹಿತರು ಅಂದು ಸಂಜೆಯವರೆಗೂ ಥಿಯೇಟರ್ ಮುಂದೆ ಸಂಭ್ರಮ ವ್ಯಕ್ತಪಡಿಸಿದರು. ಕೆಲವೆಡೆಗಳಲ್ಲಿ ಊಟೋಪಚಾರಗಳನ್ನು ಕೂಡ ಮಾಡಿದ್ದರು. ಒಟ್ಟಿನಲ್ಲಿ ಇಡೀ ದಿನ ಸಂಭ್ರಮಿಸಿರುವುದು ನನಗೆ ಇನ್ನಷ್ಟು ಖುಷಿ ನೀಡಿದೆ. ಸಿನಿಮಾಗೆ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು. ಇದು ನನಗೆ ತುಂಬಾ ಖುಷಿ ನೀಡಿದೆ ಎಂದು ಕಿಚ್ಚ ತಿಳಿಸಿದರು.  ಇದನ್ನೂ ಓದಿ: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್

    ಸಮಯ ಹಾಗೂ ದೇವರ ಸಪೋರ್ಟ್ ಸಿಕ್ಕಾಗ ಮಾತ್ರ ಇಂತಹ ಮ್ಯಾಜಿಕ್ ಆಗಲು ಸಾಧ್ಯ. ಇನ್ನೊಂದು ಖುಷಿ ಏನಂದ್ರೆ ರಾತ್ರಿ ಮಳೆ ಸುರಿದಿದ್ದು, ಒದ್ದೆಯಾದ್ರೂ ಜನ ಚಿತ್ರಮಂದಿಗಳ ಮುಂದೆ ನೆರೆದಿದ್ದರು. ರಾತ್ರಿಯೂ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದವು. ಮಹಿಳೆಯರೂ ಕೂಡ ಥಿಯೇಟರ್ ಗಳಿಗೆ ಹೋಗಿ ಸಿನಿಮಾ ವೀಕ್ಷಿಸಿದ್ದು ನೋಡಿ ಸಂತಸವಾಯಿತು ಎಂದರು.

    ನಾನು ಸಂಪಾದಿಸಿದ ಸ್ನೇಹಿತರೇ ನನ್ನ ಗೆಲುವು. ಪ್ರೀತಿ ಮುಂದೆ ನಮ್ಮ ಪವರ್ ಏನೂ ಇಲ್ಲ. ನಾವು ಸೈಲೆಂಟ್ ಆಗಿದ್ದರೂ ಆದ್ರೂ ನಮ್ಮ ಮೇಲಿನ ಪ್ರೀತಿಗೋಸ್ಕರ ಸ್ನೇಹಿತರು ಕೈ ಜೋಡಿಸಿದ್ದಾರೆ. ಇದಕ್ಕೆ ಕಾರಣ ನಾವಲ್ಲ, ನಮ್ಮ ಕೆಲಸ. ನಾವು ಕೆಲಸ ಮಾಡಬೇಕೇ ಹೊರತು ಮಾತನಾಡುವುದಲ್ಲ. ಒಟ್ಟಿನಲ್ಲಿ ನಮ್ಮ ಕೆಲಸದ ಮೂಲಕ ಜನ ಮಾತಾಡಬೇಕೋ ಹೊರತು ನಾವಲ್ಲ ಎಂದು ಹೇಳಿದರು.

    ನನ್ನ ಮೌನ ಯಾವತ್ತೂ ನನಗೆ ಡ್ಯಾಮೇಜ್ ಮಾಡಿಲ್ಲ. ನಂಬಿಕೆ ಸ್ಟ್ರಾಂಗ್ ವರ್ಡ್. ಈ ನಂಬಿಕೆ ಮೂಲಕ ನಾವು ನಮ್ಮ ಪಾಡಿಗೆ ಕೆಲಸ ಮಾಡುತ್ತಾ ಹೋಗೋಣ. ಇದರಿಂದ ಪಾಠ ಕಲಿತಿದ್ದೇವೆ. ಮುಂದಿನ ಸಿನಿಮಾಗಳಲ್ಲಿ ಇಂತಹ ತಪ್ಪು ಮರುಕಳಿಸಲ್ಲ ಎಂದು ಕಿಚ್ಚ ಭರವಸೆ ನಿಡಿದರು.

  • ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ವಿತಕರು ಹಣ ನೀಡದೇ, ನನ್ನ ಹಾಗೂ ಸುದೀಪ್ ಅವರ ಹೆಸರಿಗೆ ಅಪಖ್ಯಾತಿ ತರಲು ಸಂಚು ರೂಪಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆಸಲಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸೂರಪ್ಪ ಬಾಬು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಮ್ಮ ಸಂಸ್ಥೆಯಿಂದ ನಿರ್ಮಾಣಗೊಂಡ ಕೋಟಿಗೊಬ್ಬ 3 ಚಿತ್ರದ ಬಿಡುಗಡೆ, ಇದೇ ಅಕ್ಟೋಬರ್ 14 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ನಮ್ಮ ಸಿನಿಮಾ ವಿತರಣೆ ಹಕ್ಕನ್ನು ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ ವಿತರಣೆ ಪಡೆದ ಮೆಹಲ್ ಫಿಲ್ಮ್ಸ್ ಮಾಲೀಕರಾದ ಗೌತಮ್ ಚಂದ್ ರವರು ಮತ್ತು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ವಿತರಕರಾದ ಒ.ಆ ಖಾಜಾಪೀರ್ ಮತ್ತು ಕುಮಾರ್ ಫಿಲ್ಮ್ಸ್ ಮಾಲೀಕರಾದ ಕುಮಾರ್ ಅವರು ಮಾಡಿಕೊಂಡ ಕರಾರಿನ ಒಪ್ಪಂದದಂತೆ ಮುಂಗಡ ಹಣವಾಗಿ ಕೇವಲ 15% ಮಾತ್ರ ಪಡೆದು, ಚಿತ್ರ ಬಿಡುಗಡೆಯ ಒಂದು ದಿನ ಮೊದಲು ಅಂದರೆ 2021ರ ಅಕ್ಟೋಬರ್ 13ರಂದು ಚಿತ್ರದ ನಿರ್ಮಾಪಕರಿಗೆ ಬಾಕಿ ಹಣ ನೀಡಬೇಕೆಂದು ಒಪ್ಪಂದವಾಗಿರುತ್ತದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ

    ಈ ಮೇಲೆ ತಿಳಿಸಿರುವ ಇಬ್ಬರು ವಿತರಕರು ಕಟ್ಟ ಕಡೆಯ ಸಮಯದಲ್ಲಿ ನಮಗೆ ಕೊಡಬೇಕಾದ ಹಣವನ್ನು ತಂದು ಕೊಡದೇ ನಮಗೆ ನಮ್ಮ ಕರೆಗಳಿಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸದೇ ನಮ್ಮ ಚಿತ್ರ ಅಂದುಕೊಂಡ ದಿನದಂದು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್

    soorappa babu

    ಇವರ ಈ ತಪ್ಪಿನಿಂದ ನಾವು ಒಂದು ದಿನದ ನಂತರ ಸಾಕಷ್ಟು ಕಷ್ಟದಲ್ಲಿ ಬಿಡುಗಡೆ ಮಾಡಬೇಕಾಯಿತು. ಹಾಗಾಗಿ ಈ ಮೇಲೆ ತಿಳಿಸಿದ ವಿತರಕರ ತಪ್ಪಿನಿಂದ ನಮ್ಮ ಸಂಸ್ಥೆಗೆ ಸರಿ ಸುಮಾರು 8 ರಿಂದ 10 ಕೋಟಿ ನಷ್ಟವಾಗಿದೆ ಹಾಗೂ ನಮ್ಮ ಸಂಸ್ಥೆಗೂ ಈ ವಿತರಕರಿಗೂ ಆದ ಕರಾರಿನ ಪ್ರಕಾರ ಹಣ ನೀಡದೇ ನಮಗೆ ವಂಚನೆ ಎಸಗಿದ್ದು, ನಮಗೆ ಬಹಳಷ್ಟು ಆರ್ಥಿಕ ನಷ್ಟ ಉಂಟು ಮಾಡಿರುತ್ತಾರೆ. ನನ್ನ ಮತ್ತು ನಮ್ಮ ನಾಯಕ ನಟರಿಗೆ ಅಪಖ್ಯಾತಿ ತರಲು ಸಂಚು ಮಾಡಿರುತ್ತಾರೆ. ಅದಕ್ಕಾಗಿ ಮಾನನಷ್ಟ ಮೊಕದ್ದಮೆ ಸೇರಿದಂತೆ ಯಾವ ರೀತಿಯ ಕಾನೂನು ಕ್ರಮ ಜರುಗಿಸಬೇಕೆಂದು ನಮ್ಮ ಕಾನೂನು ಸಲಹೆಗಾರರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

  • ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್

    ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್

    ಬೆಂಗಳೂರು: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ ಶುರುವಾಗಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಚಿತ್ರ ನಿನ್ನೆ ರಿಲೀಸ್ ಆಗಬೇಕಿತ್ತು. ಆದರೆ ವಿತರಕರ ತೊಂದರೆಯಿಂದಾಗಿ ಕಿಚ್ಚನ ಸಿನಿಮಾ ಇಂದು ತೆರೆಗೆ ಬಂದಿದೆ. ಇಂದು 7 ಗಂಟೆಗೆ ಶೋ ಶುರುವಾಗಿದೆ.

    ದಾವಣಗೆರೆಯಲ್ಲಿ ವಸಂತ ಹಾಗೂ ಗೀತಾಂಜಲಿ ಚಿತ್ರಮಂದಿರಕ್ಕೆ ಸುದೀಪ್ ಅಭಿಮಾನಿಗಳು ಮುಂಜಾನೆ 3 ಗಂಟೆಗೆ ತೆರಳಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಶೋ ಹಿನ್ನೆಲೆ ಥಿಯೇಟರ್ ಗೆ ಬಂದು ಕಾದು ಕುಳಿತಿದ್ದರು. ಚಿತ್ರಮಂದಿರದ ಗೇಟ್ ಬಳಿ ಅಭಿಮಾನಿಗಳು ಕುಂಬಳಕಾಯಿ ಹೊಡೆದು ಸಂಭ್ರಮಿಸಿದರು.  ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಇತ್ತ ಕೋಟೆನಾಡಿನಲ್ಲಿ ಥಿಯೇಟರ್ ಬಳಿಯೂ ಕಿಚ್ಚ ಸುದೀಪ್ ಅಭಿಮಾನಿಗಳು ಜಮಾಯಿಸಿದ್ದರು. ಚಿತ್ರದುರ್ಗದ ವೆಂಕಟೇಶ್ವರ ಚಿತ್ರಮಂದಿರ ಬಳಿ ಯುವಕರು ಸೇರಿದ್ದರು. ನಿನ್ನೆ ಪ್ರದರ್ಶನ ರದ್ದಾದ ಹಿನ್ನೆಲೆ ನಿರಾಸೆಯಿಂದ ತೆರಳಿದ್ದ ಅಭಿಮಾನಿಗಳು, ಇಂದು ಕೋಟಿಗೊಬ್ಬ-3 ವೀಕ್ಷಣೆಗೆ ಕಾತುರದಿಂದ ಕಾದು ಕುಳಿತಿದ್ದರು. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

  • ಟಿಕೆಟ್ ಹಣ ನೀಡುತ್ತಿದ್ದಂತೆ ಥಿಯೇಟರ್‌ನಲ್ಲೇ ಕುಸಿದು ಬಿದ್ದ ಕಿಚ್ಚನ ಅಭಿಮಾನಿ

    ಟಿಕೆಟ್ ಹಣ ನೀಡುತ್ತಿದ್ದಂತೆ ಥಿಯೇಟರ್‌ನಲ್ಲೇ ಕುಸಿದು ಬಿದ್ದ ಕಿಚ್ಚನ ಅಭಿಮಾನಿ

    ಧಾರವಾಡ: ಕೋಟಿಗೊಬ್ಬ-3 ಸಿನಿಮಾ ಇವತ್ತು ರಾಜ್ಯಾದ್ಯಂತ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆಯಾಗಲೇ ಇಲ್ಲ. ಈ ಹಿನ್ನೆಲೆ ಸುದೀಪ್ ಅಭಿಮಾನಿ ಸಿನಿಮಾ ಮಂದಿರದಲ್ಲೇ ಕುಸಿದು ಬಿದ್ದಿದ್ದಾರೆ.

    ಧಾರವಾಡದ ಪದ್ಮಾ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದ ಸುದೀಪ್ ಅಭಿಮಾನಿಗಳು, ಸಿನಿಮಾ ರಿಲೀಸ್ ಆಗುವುದಿಲ್ಲ ಎಂದು ಬೇಸರಗೊಂಡು ವಾಪಸ್ ಆಗಿದ್ದಾರೆ. ಈ ನಡುವೆ ಸುದೀಪ್ ಅಭಿಮಾನಿಯೊಬ್ಬರು ಹಳ್ಳಿಯೊಂದರಿಂದ ಕೋಟಿಗೊಬ್ಬ-3 ನೋಡಲು ಬಂದಿದ್ದರು. ಕಿಚ್ಚನ ಸಿನಿಮಾ ಬಿಡುಗಡೆಯಾಗಲಿದೆ ಎಂದು ಟಿಕೆಟ್ ತೆಗೆದುಕೊಂಡಿದ್ದರು. ಆದರೆ ಸಿನಿಮಾ ರಿಲೀಸ್ ಆಗುವುದಿಲ್ಲ ಎಂದು ಚಿತ್ರಮಂದಿರ ಹಣವನ್ನು ವಾಪಸ್ ನೀಡಿದೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಹಣವನ್ನು ವಾಪಸ್ ಕೊಡುತಿದ್ದಂತೆಯೇ ಸಿನಿಮಾ ಹಾಲ್ ಎದುರು ಸುದೀಪ್ ಅಭಿಮಾನಿ ಕುಸಿದು ಬಿದ್ದದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಜನರು ಆ ಅಭಿಮಾನಿಗೆ ನೀರು ಕುಡಿಸಿ ವಾಪಸ್ ಕಳಿಸಿದರು. ಸಿನಿಮಾ ನೋಡಲು ಬಂದಿದ್ದ ಯುವಕ ಬೆಳಗ್ಗೆ ಯಾವುದೇ ಆಹಾರ ಸೇವಿಸದೇ ಬಂದಿದ್ದ ವಿಚಾರ ತಿಳಿದುಬಂದಿದೆ.

  • ನಾಳೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್

    ನಾಳೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್

    ಬೆಂಗಳೂರು: ಕಾರಣಾಂತರಗಳಿಂದ ರದ್ದುಗೊಳಿಸಲಾಗಿದ್ದ ಕಿಚ್ಚ ಸುದಿಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ.

    2 ವರ್ಷಗಳ ನಂತರ ಸ್ಕ್ರೀನ್ ಮೇಲೆ ಕಿಚ್ಚನನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದ್ದು, ಹಲವಾರು ಚಿತ್ರಮಂದಿರ ಬಳಿ ಜಮಾಯಿಸಿದ್ದ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಆಗದೇ ಗಲಾಟೆ ಮಾಡಲು ಶುರುಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಕಿಚ್ಚ ಟ್ವೀಟ್ ಮಾಡುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಈ ವಿಚಾರವಾಗಿ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕೋಟಿಗೊಬ್ಬ-3 ವೀಕ್ಷಿಸಲು ಚಿತ್ರಮಂದಿರಗಳಿಗೆ ಬಂದಿರುವವರಿಗೆ, ಬರುತ್ತಿರುವವರಿಗೆ, ಚಿತ್ರದ ಪ್ರದರ್ಶನ ತಡವಾಗುತ್ತಿರುವ ಬಗ್ಗೆ ತಿಳಿಸಲು ವಿಷಾದಿಸುತ್ತೇನೆ. ಈ ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರಮಂದಿರಗಳಿಂದ ಯಾವುದೇ ರೀತಿಯ ತಪ್ಪು ನಡೆದಿಲ್ಲ. ನಾನೂ ಕೂಡ ನನ್ನ ಚಿತ್ರವೊಂದು ಎರಡು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಬಗ್ಗೆ ನಿಮ್ಮಷ್ಟೇ ಉತ್ಸುಕನಾಗಿದ್ದೆ. ನಿಮ್ಮೆಲ್ಲರ ಪ್ರೀತಿ ಹಾಗೂ ತಾಳ್ಮೆಯೇ ನನ್ನ ಅತಿ ದೊಡ್ಡ ಶಕ್ತಿ. ಆದಷ್ಟು ಬೇಗ ಚಿತ್ರದ ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತೇನೆ ಹಾಗೂ ಮುಂದಿನ ನನ್ನ ಚಿತ್ರಗಳಿಗೆ ಹೀಗಾಗದ ಹಾಗೇ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗೂ ಯಾವುದೇ ರೀತಿಯ ಹಾನಿಗೆ ಕಾರಣರಾಗದೆ, ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಕಿಚ್ಚ ಧೈರ್ಯ ತುಂಬಿದ್ದು, ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಾಬು ಅವರು ಅಪ್ಲೋಡ್ ಮಾಡಿದ ವೀಡಿಯೋ ನಾನು ನೋಡಿದೆ. ನೀವೊಬ್ಬರೇ ಅಲ್ಲ ನಿಮ್ಮ ಜೊತೆ ನಾವಿದ್ದೇವೆ. ಯಾರಿಂದ ತೊಂದರೆ ಆಗಿದೆ, ಯಾರು ಮಾಡಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಕಾಲವೇ ಉತ್ತರ ಕೊಡುತ್ತದೆ. ನಾಳೆಯಿಂದ ಪ್ರದರ್ಶನ ಕಾಣುತ್ತದೆ. ಭರ್ಜರಿಯಾಗಿ ಹೋಗುತ್ತದೆ ಅನ್ನೋದ್ರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

    ರಾಜ್ಯಾದ್ಯಂತ ಇಂದು 300 ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಶೋ ರದ್ದಾಗಿದ್ದು, ರಾಜ್ಯಾದ್ಯಂತ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.