Tag: ಕೋಟಾ ಶ್ರೀನಿವಾಸ ಪೂಜಾರಿ

  • ಡಿಕೆಶಿ ಆಟ ಹೆಚ್ಚು ದಿನ ನಡೆಯಲ್ಲ: ಶ್ರೀನಿವಾಸ ಪೂಜಾರಿ

    ಡಿಕೆಶಿ ಆಟ ಹೆಚ್ಚು ದಿನ ನಡೆಯಲ್ಲ: ಶ್ರೀನಿವಾಸ ಪೂಜಾರಿ

    ಉಡುಪಿ: ಸಚಿವ ಡಿಕೆಶಿ ಆಟ ಇನ್ನು ಹೆಚ್ಚು ದಿನ ನಡೆಯಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ ಪೂಜಾರಿ, ಇಡಿ ನೋಟಿಸ್ ಬರುತ್ತದೆ ಎಂಬ ಆತಂಕ ಡಿಕೆ ಶಿವಕುಮಾರ್ ಅವರಿಗಿದೆ. ಅಪಾರ ಅಕ್ರಮ ಸಂಪತ್ತು ಹೊಂದಿರುವ ಕಾರಣ ಅವರ ಮೇಲೆ ಕಾನೂನು ಕ್ರಮ ಜಾರಿಯಾಗಿದೆ. ಆದರೆ ಡಿಕೆ ಬ್ರದರ್ಸ್ ಇನ್ನೂ ಅಧಿಕಾರ ನಡೆಸುವ ಭ್ರಮೆಯಲ್ಲಿದ್ದಾರೆ. ನಮ್ಮ ಬಳಿ ಯಾವುದೇ ಅಕ್ರಮ ಸಂಪತ್ತಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಹಣ ಬಲದಿಂದಲೇ ಅಧಿಕಾರ ನಡೆಸುವ ಭ್ರಮೆ ಅವರಲ್ಲಿದೆ. ಒಂದೊಮ್ಮೆ ಅವರು ಅಕ್ರಮ ಸಂಪತ್ತು ಹೊಂದಿಲ್ಲ ಎನ್ನುವುದಾದರೆ ಕಾನೂನು ಕ್ರಮ ಎದುರಿಸಬೇಕು. ತಪ್ಪು ಮಾಡದಿದ್ದರೆ ಹೆದರುವ ಅವತ್ಯವಿಲ್ಲ ಎಂದು ಹೇಳಿದರು. ಇದನ್ನು ಓದಿ: ಬಿಜೆಪಿ ಅವರೆಲ್ಲ ನನ್ನ ಗೆಳೆಯರು – ಡಿಕೆಶಿ

    ಸಚಿವ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಸಂಪತ್ತು ಗಳಿಸಿದ ಆರೋಪ ಮೇಲೆ ಆದಾಯ ತೆರಿಗೆ (ಐಟಿ), ಕಂದಾಯ ಇಲಾಖೆ (ಇಡಿ) ಅಧಿಕಾರಿಗಳು ದಾಳಿ ನಡೆಸಿದೆ. ಡಿಕೆ ಶಿವಕುಮಾರ್ ಅವರ ಮೇಲೆ ಆರೋಪಗಳು ಕೇಳಿ ಬಂದಿದ್ದರೂ ಕಾಂಗ್ರೆಸ್ ಹಾಗೂ ಸಿಎಂ ಕುಮಾರಸ್ವಾಮಿ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ ಎಂಬುವುದನ್ನ ಸಾಬೀತುಪಡಿಸಲು ಕೂಡಲೇ ಡಿಕೆಶಿಯನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. ಇದನ್ನು ಓದಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದ್ವೇಷದ ರಾಜಕಾರಣ, ಭಯದಿಂದ ತುರ್ತು ಸುದ್ದಿಗೋಷ್ಠಿ ಕರೆದಿಲ್ಲ: ಡಿಕೆ ಸುರೇಶ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಬಜೆಟ್‍ನಲ್ಲಿ ಕರಾವಳಿಗಿಲ್ಲ ಬಿಡಿಗಾಸು – ದೋಸ್ತಿ ಸರ್ಕಾರದ ವಿರುದ್ಧ 3 ಜಿಲ್ಲೆಯ ಶಾಸಕರು ಗರಂ

    ಬಜೆಟ್‍ನಲ್ಲಿ ಕರಾವಳಿಗಿಲ್ಲ ಬಿಡಿಗಾಸು – ದೋಸ್ತಿ ಸರ್ಕಾರದ ವಿರುದ್ಧ 3 ಜಿಲ್ಲೆಯ ಶಾಸಕರು ಗರಂ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ರಾಜ್ಯ ಬಜೆಟ್ ಗುರುವಾರ ಮಂಡನೆಯಾಗಿದ್ದು, ಎಚ್‍ಡಿಕೆ ಬಜೆಟ್‍ನಲ್ಲಿ ಪ್ರಾದೇಶಿಕ ಅಸಮತೋಲನ ಹಾಗೂ ಕರಾವಳಿಗೆ ಬಿಡಿಗಾಸು ನೀಡದಿದ್ದರಿಂದ ಕರಾವಳಿ ಭಾಗದ ಬಿಜೆಪಿ ಶಾಸಕರು ಸಿಡಿದೆದ್ದಿದ್ದಾರೆ.

    ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಶಾಸಕರು ಕಪ್ಪುಪಟ್ಟಿ ಧರಿಸಿ ದೋಸ್ತಿ ಸರ್ಕಾರದ ಬಜೆಟ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

    ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು, ತಾಯಿ ಸ್ಥಾನದಲ್ಲಿ ಇರುವಂತೆ ಸರ್ಕಾರ ಇದೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ರು. ಆದ್ರೆ ಕರಾವಳಿ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡಿದ್ರು. ಮೀನುಗಾರರ ರಕ್ಷಣೆಗೆ ಸರ್ಕಾರ ಅನುದಾನ ನೀಡಿಲ್ಲ. ವರಹಾ ಯೋಜನೆಗೆ ಹಣ ನೀಡಿಲ್ಲ. ಪಶ್ಚಿಮ ವಾಹಿನಿ ಯೋಜನೆಗೆ ಅನುದಾನ ನೀಡಿಲ್ಲ. ವಿದ್ಯುತ್, ಪೆಟ್ರೋಲ್ ದರ ಏರಿಸಿದ್ರು. ಸಿಎಂ ಕುಮಾರಸ್ವಾಮಿ ಕೇವಲ 37 ಶಾಸಕರಿಗೆ ಮಾತ್ರ ಬಜೆಟ್ ನೀಡಿದ್ದಾರೆ ಅಂತ ಕೋಟಾ ಗರಂ ಆದ್ರು.

    ಬಜೆಟ್ ಉತ್ತರ ವೇಳೆ ಕರಾವಳಿ ಕರ್ನಾಟಕ ಭಾಗಕ್ಕೆ ಅನುದಾನ ನೀಡಲೇಬೇಕು. ಇಲ್ಲದಿದ್ದಲ್ಲಿ ಸದನದ ಒಳಗೆ- ಹೊರಗೆ ಹಾಗೂ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತೇವೆ ಅಂತ ಅವರು ತಮ್ಮ ಆಕ್ರೋಶ ಹೊರಹಾಕಿ ಎಚ್ಚರಿಸಿದ್ದಾರೆ.

    ಇದೇ ವೇಳೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸಿಎಂ ನಿನ್ನೆ ನೀಡಿದ ಬಜೆಟ್ ಕೇವಲ ರಾಮನಗರ, ಹಾಸನದ ಜಿಲ್ಲಾ ಪಂಚಾಯ್ತಿ ಬಜೆಟ್. ಉಡುಪಿ, ದಕ್ಷಿಣ ಕನ್ನಡದ ಜನತೆಯ ಹಿತವನ್ನು ಸರ್ಕಾರ ಕಾಯಲಿಲ್ಲ. ನಮ್ಮ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಮೆಡಿಕಲ್ ಕಾಲೇಜ್ ನೀಡುವಂತೆ ಮನವಿ ಮಾಡಿದ್ವಿ. ಆದ್ರೆ ಕರಾವಳಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಮತ ನೀಡಿಲ್ಲ ಅಂತ ಬಜೆಟ್ ನಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಅನ್ಯಾಯದ ವಿರುದ್ಧ ನಮ್ಮ ಹೋರಾಟ ಬಿಡೋದಿಲ್ಲ. ಈ ಬಜೆಟ್ ನಾವು ಒಪ್ಪಲು ರೆಡಿ ಇಲ್ಲ ಅಂತ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ನಮ್ಮ ದೇವಸ್ಥಾನ ಕೇವಲ ಅಡ್ಡ ಬೀಳಲು ಇರೋದಲ್ಲ. ನಿಮಗೆ ನಮಸ್ಯೆ ಆದಾಗ ದೇವರ ದರ್ಶನಕ್ಕೆ ನಮ್ಮ ಜಿಲ್ಲೆಗೆ ಬರ್ತಿರಾ. ಆದ್ರೆ ಅಭಿವೃದ್ಧಿಗೆ ಅನುದಾನ ನೀಡಲು ಯಾಕೆ ಹಿಂದೇಟು ಹಾಕಿದ್ದೀರಾ. ಸರ್ಕಾರ ಬಜೆಟ್ ಉತ್ತರದಲ್ಲಿ ಕರಾವಳಿ ಭಾಗಕ್ಕೆ ಒತ್ತು ನೀಡಬೇಕು. ನಮ್ಮ ಬೇಡಿಕೆ ಈಡೇರಿಸದೇ ಇದ್ರೆ ಕರಾವಳಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೀವಿ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.