Tag: ಕೋಟಾ ಶ್ರೀನಿವಾಸ್ ಪೂಜಾರಿ

  • ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಐದು ಕ್ಷೇತ್ರಗಳನ್ನು ಗೆಲ್ಲುತ್ತೇವೆ: ಕೋಟಾ ವಿಶ್ವಾಸ

    ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಐದು ಕ್ಷೇತ್ರಗಳನ್ನು ಗೆಲ್ಲುತ್ತೇವೆ: ಕೋಟಾ ವಿಶ್ವಾಸ

    ಉಡುಪಿ: ಉಡುಪಿ (Udupi) ಜಿಲ್ಲೆಯಲ್ಲಿ ಎಲ್ಲಾ ಐದು ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಉಡುಪಿ ಹಾಗೂ ಕುಂದಾಪುರದಲ್ಲಿ ಬಹುದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ. ಉಳಿದ ಕ್ಷೇತ್ರಗಳಲ್ಲೂ ನಿಶ್ಚಯವಾಗಿ ಗೆಲುವು ಸಾಧಿಸುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಮತದಾನವಾದಾಗ ಭಾರತೀಯ ಜನತಾ ಪಕ್ಷಕ್ಕೆ ಅನುಕೂಲವಾಗಿದೆ. ಕಡಿಮೆ ಮತದಾನವಾದಾಗ ಬಿಜೆಪಿ (BJP) ಗೆಲುವು ಕಂಡಿರುವುದು ಕಡಿಮೆ. ಈ ಬಾರಿ ಬಹು ದೊಡ್ಡ ಪ್ರಮಾಣದಲ್ಲಿ ಮತದಾನವಾಗಿದೆ. ಮತದಾನದ ಸಂಖ್ಯೆ ಹೆಚ್ಚಿರುವುದರಿಂದ ಬಿಜೆಪಿಯ ಗೆಲುವಿಗೆ ಪೂರಕವಾಗಲಿದೆ. ಬದಲಾವಣೆಗಾಗಿ ಜನ ಹೆಚ್ಚಿನ ಮತ ಹಾಕಿರಬಹುದು ಮತ್ತು ಆ ಬದಲಾವಣೆ ನಮ್ಮ ಪರವಾಗಿ ಇರಬಹುದು ಎಂದರು. ಇದನ್ನೂ ಓದಿ: ಬಿಎಸ್‌ವೈ ನಿವಾಸದಲ್ಲಿ ನಾಯಕರ ಸಭೆ – ಅಧಿಕಾರಕ್ಕೇರಲು ಬಿಜೆಪಿ ರಣತಂತ್ರ

    ಬೆಂಗಳೂರಿನಲ್ಲಿ (Bengaluru) ಕಡಿಮೆ ಮತದಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇಶಕ್ಕೆ ಒಳ್ಳೆಯದಾಗಬೇಕು, ಅಭಿವೃದ್ಧಿ ಆಗಬೇಕು ಎಂದು ಹೇಳುವವರು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಬೇಕು. ಹಾಗೆ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಶಕ್ತಿ ಬರುತ್ತಿತ್ತು. ಅದನ್ನು ಹೇಳುವುದು ಯಾರು, ಮಾಡುವುದು ಯಾರು ಎಂಬ ಚರ್ಚೆಯಿದೆ. ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳುವ ಹಕ್ಕು ರಾಜಕೀಯ ಸರ್ಕಾರಕ್ಕೆ ಇಲ್ಲ. ಹೆಚ್ಚು ಮತದಾನದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಇಷ್ಟಾದರೂ ಮತದಾನವಾಗಿದೆಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೋಲು-ಗೆಲುವಿನ ಲೆಕ್ಕಾಚಾರ; ‘ಚೊಂಬೇಶ್ವರ’ ಅಂತ ಚೊಂಬು ಶಾಸ್ತ್ರದ ಮೊರೆ ಹೋದ ಕಾರ್ಯಕರ್ತರು

    ರಾಜ್ಯದಲ್ಲಿ ಅತಂತ್ರವಾದರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಆಪರೇಷನ್ ಆಗುವ ಪ್ರಶ್ನೆಯೇ ಬರುವುದಿಲ್ಲ. ಆಪರೇಷನ್ ಕಮಲದ ಅಗತ್ಯವೂ ಇಲ್ಲ. ಅತಂತ್ರ ಆದರೇ ಎಂದು ಕೇಳಿ ನಮ್ಮ ದಾರಿ ತಪ್ಪಿಸಬೇಡಿ. ಅತಂತ್ರ ಬಂದರೆ ಏನು ಮಾಡಬೇಕು ಎಂದು ಪಕ್ಷದ ದೊಡ್ಡವರು ಯೋಚನೆ ಮಾಡುತ್ತಾರೆ. ನಳಿನ್ ಕುಮಾರ್, ಬಸವರಾಜ ಬೊಮ್ಮಾಯಿ, ಅಮಿತ್ ಶಾ, ನಡ್ಡಾ ಅವರ ಮಟ್ಟದಲ್ಲಿ ಚರ್ಚೆ ಮಾಡುತ್ತಾರೆ. ನಾಳಿನ ಫಲಿತಾಂಶದಲ್ಲಿ ಮಾತ್ರ ಯಾವ ಆಪರೇಷನ್ ಅಗತ್ಯ ಬರಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಫಲಿತಾಂಶ ಹೊರಬೀಳುವ ಹೊತ್ತಿನಲ್ಲೇ ರಾಜ್ಯದ ಜನತೆಗೆ ಕರೆಂಟ್‌ ಶಾಕ್ – ವಿದ್ಯುತ್‌ ದರ ಹೆಚ್ಚಳ

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumaraswamy) ಅವರೊಂದಿಗಿನ ರಾಜಕೀಯ ಮಾತುಕತೆ ವಿಚಾರವಾಗಿ ಮಾತನಾಡಿದ ಅವರು, ಮುಂಜಾಗರೂಕತಾ ಕ್ರಮವಾಗಿ ಒಬ್ಬರ ಜೊತೆ ಇನ್ನೊಬ್ಬರು ಮಾತನಾಡಿರಬಹುದು. ನಾಳೆ ಫಲಿತಾಂಶ ಬಂದನಂತರ ಯಾವುದೇ ಆತಂಕ ಇರುವುದಿಲ್ಲ. ಲೆಕ್ಕಾಚಾರ ಮುಗಿದ ನಂತರ ಯಾವುದೇ ಚರ್ಚೆ ಇರುವುದಿಲ್ಲ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಎನ್ನುವುದನ್ನು ಶಾಸಕಾಂಗ ಸಭೆ ತೀರ್ಮಾನ ಮಾಡುತ್ತದೆ ಎಂದರು. ಇದನ್ನೂ ಓದಿ: ವಿಧಾನಸಭೆ ಚುನಾವಣೆ 2023: ಕಣದಲ್ಲಿದ್ದ ಸಿನಿಮಾ ಸೆಲೆಬ್ರಿಟಿಗಳ ಕನಸು ನನಸಾಗತ್ತಾ?

  • ಉಕ್ರೇನ್‍ನಲ್ಲಿಯೇ ಉಳಿದುಕೊಂಡಿರುವ ವಿದ್ಯಾರ್ಥಿಗಳ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ: ಕೋಟಾ ಶ್ರೀನಿವಾಸ್

    ಉಕ್ರೇನ್‍ನಲ್ಲಿಯೇ ಉಳಿದುಕೊಂಡಿರುವ ವಿದ್ಯಾರ್ಥಿಗಳ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ: ಕೋಟಾ ಶ್ರೀನಿವಾಸ್

    ಮಡಿಕೇರಿ: ಉಕ್ರೇನ್‍ನಲ್ಲಿ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ಸಿಲುಕಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸಿದೆ. ಅಲ್ಲದೆ ನಮ್ಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೂ ಒಬ್ಬರು ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

    ಮಡಿಕೇರಿಯಲ್ಲಿ ಅಂತ್ಯೋದಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಸಿಲುಕಿರುವ ನಾಗರಿಕರ ಜೊತೆಗೆ ನಿನ್ನೆಯೇ ರಾಜ್ಯದ 12 ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಸಂಪರ್ಕದ ಕೊರತೆ ಮತ್ತು ಏನು ಆಗುವುದಿಲ್ಲ ಎಂಬ ಮನೋಭಾವದಿಂದ ಕೆಲವು ವಿದ್ಯಾರ್ಥಿಗಳು ಅಲ್ಲಿಯೇ ಉಳಿದುಕೊಂಡಿದ್ದಾರೆ. ಅಲ್ಲದೇ ಅಲ್ಲೇ ಉಳಿದುಕೊಂಡಿರುವವರ ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ವಂತ ಸಾಮಾಜಿಕ ಮಾಧ್ಯಮ ಆ್ಯಪ್ ಬಿಡುಗಡೆ ಮಾಡಿದ ಟ್ರಂಪ್

    ನನ್ನ ಇಲಾಖೆಯಿಂದಲೂ ಒಬ್ಬರು ಅಧಿಕಾರಿಯನ್ನು ಇದಕ್ಕಾಗಿ ನೇಮಿಸಲಾಗಿದೆ. ಅಲ್ಲಿ ಒಂದಷ್ಟು ಜನರಿಗೆ ಆಹಾರದ ಕೊರತೆಯೂ ಎದುರಾಗಿದೆ. ಅದನ್ನು ನಿಭಾಯಿಸುವ ಕೆಲಸ ಆಗುತ್ತಿದೆ. ಈಗಾಗಲೇ ದೂರವಾಣಿ ಮೂಲಕ ವಿದ್ಯಾರ್ಥಿಗಳ ಜೊತೆ ಮಾತಾನಾಡಿ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು.

    ರಷ್ಯಾ ಹಾಗೂ ಉಕ್ರೇನ್ ಗಡಿಯ 40 ಕೀಲೋ ಮೀಟರ್‍ಗಳಲ್ಲಿ ಇರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕೇಂದ್ರ ರಾಯಭಾರಿ ಅವರೊಂದಿಗೆ ಸರ್ಕಾರ ಮಾಹಿತಿ ನೀಡುತ್ತಿದೆ. ಒಟ್ಟಿನಲ್ಲಿ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

  • ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದೆ : ಕೋಟಾ ಶ್ರೀನಿವಾಸ್ ಪೂಜಾರಿ

    ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದೆ : ಕೋಟಾ ಶ್ರೀನಿವಾಸ್ ಪೂಜಾರಿ

    ಮಡಿಕೇರಿ: ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದೆ ಎಂದು  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ (Kota Srinivas Poojary) ವಾಗ್ದಾಳಿ ನಡೆಸಿದ್ದಾರೆ.

    ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಳಂಬದಲ್ಲಿ ಯಾವುದೇ ರಾಜಕಾರಣ ಇಲ್ಲ ಕಾಂಗ್ರೆಸ್ ನವರು ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ.  ಮೇಕೆದಾಟು ಸೇರಿದಂತೆ ಯಾವುದೇ ನೀರಿನ ಯೋಜನೆ ವಿಷಯದಲ್ಲಿ ಸರ್ಕಾರ ರಾಜಿಮಾಡಿಕೊಂಡಿಲ್ಲ. ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ನಡೆಸಿ ಅವರಿಂದ ಆದ ಅನಾಹುತ ಅವರಿಗೆ ಅರಿವಾಗಿದೆ. ಈಗ ಮತ್ತೆ ಪಾದಯಾತ್ರೆ ಆರಂಭಿಸಿರುವುದು ಒಂದು ರಾಜಕೀಯ ಪ್ರೇರಿತವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ಒಳ್ಳೆ ಕೆಲಸವನ್ನು ನಮ್ಮ ಸರ್ಕಾರ ಮಾಡಿರುವುದನ್ನು ಕಾಂಗ್ರೆಸ್ ಅಥವಾ ವಿರೋಧ ಪಕ್ಷಗಳು ಹೋಗಳುತ್ತವೆಯೇ? ವಿರೋಧ ಮಾಡುವುದೇ ಅವರ ಕೆಲಸ ಅಲ್ಲವೇ. ಆದರೆ ನಮಗೆ ನಮ್ಮ ಸರ್ಕಾರದ ಕೋವಿಡ್ ಹಾಗೂ ಪ್ರವಾಹ ಸಂದರ್ಭದಲ್ಲಿ ಹಾಗೂ ರಾಜ್ಯದ ಏಳಿಗೆಗಾಗಿ ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಇದೆ. ಸದನದಲ್ಲಿಯೂ ಕಾಂಗ್ರೆಸ್ ಅವರಿಗೆ ಸಮರ್ಥವಾಗಿಯೇ ಉತ್ತರ ನೀಡುತ್ತದೆ‌ ಎಂದಿದ್ದಾರೆ.

  • ಮಕ್ಕಳನ್ನು ಸಂಘಕ್ಕೆ ಕಳುಹಿಸಿ ಐಎಎಸ್ ಅಧಿಕಾರಿಗಳಾಗುತ್ತಾರೆ- ಹೆಚ್‍ಡಿಕೆಗೆ ಕೋಟಾ ತಿರುಗೇಟು

    ಮಕ್ಕಳನ್ನು ಸಂಘಕ್ಕೆ ಕಳುಹಿಸಿ ಐಎಎಸ್ ಅಧಿಕಾರಿಗಳಾಗುತ್ತಾರೆ- ಹೆಚ್‍ಡಿಕೆಗೆ ಕೋಟಾ ತಿರುಗೇಟು

    ಮಡಿಕೇರಿ: ಮಕ್ಕಳನ್ನು ಸಂಘಕ್ಕೆ ಕಳುಹಿಸಿ ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಾರೆ ಎಂದು ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು.

    ಮಡಿಕೇರಿಯಲ್ಲಿ ದಸರಾ ಹಾಗೂ ತಲಕಾವೇರಿ ತೀರ್ಥೋದ್ಭವ ಸಂಬಂಧ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್ ತರಬೇತಿ ಪಡೆದ 4000ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳಿದ್ದಾರೆ ಎಂಬ ಎಚ್‍ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು. ಹಿಂದಿನಿಂದಲೂ ನಾವು ಅದನ್ನೇ ಹೇಳುತ್ತಿದ್ದೇವೆ. ಅವರು ಈಗ ಹೇಳುತ್ತಿದ್ದಾರೆ. ತಮ್ಮ ಮಕ್ಕಳನ್ನು ಸಂಘಕ್ಕೆ ಕಳುಹಿಸಿ ಐಪಿಎಸ್, ಐಎಎಸ್ ಅಧಿಕಾರಿಗಳಾಗುತ್ತಾರೆ ಎಂದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಶ್ರೀ ರಾಮಾಯಣ ದರ್ಶನಂ, ಪರ್ವ ಕಾದಂಬರಿ ನೀಡಿದ ಸುನಿಲ್ ಕುಮಾರ್

    ಸಂಘದ ಶಿಕ್ಷಣ ಪಡೆದವರು ಬುದ್ಧಿವಂತರಿರುತ್ತಾರೆ. ಸೂಕ್ಷ್ಮ ಮತಿಗಳಾಗಿರುತ್ತಾರೆ ಹೀಗಾಗಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

    ಸಂಘ ಲಂಚಪಡೆಯೋದನ್ನು, ಜನರಿಗೆ ತೊಂದರೆ ಕೊಡೋದನ್ನು ಹೇಳಿಕೊಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ, ಹೆಚ್‍ಡಿಕೆ ಏನು ಹೇಳುತ್ತಾರೆ ಎಂಬುದರ ಮೇಲೆ ಸಂಘ ಕಟ್ಟಿಲ್ಲ. ಸಂಘ ರಾಷ್ಟ್ರ ಭಕ್ತಿಯನ್ನು ಹೇಳಿಕೊಡುತ್ತದೆ ಅದರ ಆಧಾರದಲ್ಲಿ ಸಂಘದ ಶಿಕ್ಷಣವಿದೆ ಎಂದು ಕುಟುಕಿದರು.

  • ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಮಾಡಿಕೊಳ್ಳೋ ಪ್ರಶ್ನೆಯೇ ಇಲ್ಲ: ಕೋಟಾ

    ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಮಾಡಿಕೊಳ್ಳೋ ಪ್ರಶ್ನೆಯೇ ಇಲ್ಲ: ಕೋಟಾ

    ಬೆಂಗಳೂರು: ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ವಿಧಾನಸಭಾ ಕಲಾಪದ ವೇಳೆ ಸಚಿವರು, ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿದ್ದೇನೆ. ಧಾರ್ಮಿಕ ದತ್ತಿ ಇಲಾಖೆಯಿಂದ ಹೊರಗಿರುವ ಖಾಸಗಿ ಸುತ್ತೋಲೆಯಿಂದ ಖಾಸಗಿ ದೇವಸ್ಥಾನದವರು ಆತಂಕ ಪಡುವ ಅಗತ್ಯ ಇಲ್ಲ. ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದರು.

    ದೇವಸ್ಥಾನಗಳನ್ನ ನೋಂದಣಿ ಮಾಡಿಕೊಳ್ಳಬೇಕು ಅಂತ 2015ರಲ್ಲಿ ಧಾರ್ಮಿಕ ದತ್ತಿ ಕಾಯಿದೆ ತಿದ್ದುಪಡಿ ತರಲಾಗಿದೆ. ಇದರ ಅರ್ಥ ಸರ್ಕಾರ ಖಾಸಗಿ ದೇವಸ್ಥಾನಗಳ ಮೇಲೆ ಹಕ್ಕು ಚಲಾಯಿಸುವುದು, ನಿಗಾ ಇಡೋದು, ಸ್ವಾಯತ್ತ ತೆಗೆದುಕೊಳ್ಳುವುದಲ್ಲ ಎಂದು ಸ್ಪಷ್ಟಪಡಿಸಿದರು.

    ನೋಂದಣಿ ಪ್ರಕ್ರಿಯೆಯ ನೆನಪಿನ ಸುತ್ತೋಲೆ ಕೊಟ್ಟಿದ್ದೇವೆ. ಖಾಸಗಿ ದೇವಸ್ಥಾನ ಸ್ವಾಯತ್ತ ಪಡೆಯುವ ಯಾವುದೇ ಪ್ರಸಂಗ ಇಲ್ಲ. ಖಾಸಗಿ ದೇವಸ್ಥಾನ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಆತಂಕ ಬೇಡ. 2011ರಲ್ಲಿ ಕಾಯಿದೆ ತಂದಿರುವುದು 2015 ರಲ್ಲಿ ಜಾರಿ ಮಾಡಿದ್ದಾರೆ. 2016, 17, 18, 19, 20ರಲ್ಲಿ ನೆನಪಿನ ಸುತ್ತೋಲೆ ಕೊಡುತ್ತಾ ಬಂದಿದ್ದೇವೆ. ಮೊನ್ನೆ ಸಹ ಅಂತಹದೇ ಸುತ್ತೋಲೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

    ನನ್ನ ಗಮನಕ್ಕೆ ಬಾರದೇ ಇದು ರೆಗ್ಯುಲರ್ ಪ್ರೋಸಸ್ ರೀತಿ ಸುತ್ತೋಲೆ ಹೋಗಿರುತ್ತೆ. ಆದರೆ ಖಾಸಗಿ ದೇವಸ್ಥಾನಗಳ ಸ್ವಾಧೀನ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ವಾಪಸ್ ತೆಗೆದುಕೊಳ್ಳಬೇಕು ಅಂತ ಯಾರಾದರೂ ಹೇಳಿದ್ರೆ ಪರಿಶೀಲನೆ ಮಾಡ್ತೀವಿ. ಖಾಸಗಿ ದೇವಸ್ಥಾನಗಳು ಖಾಸಗಿಯಾಗಿಯೇ ಮುಂದುವರಿಯುತ್ತೆ ಎಂದು ಮಾಹಿತಿ ನೀಡಿದರು.

  • ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನೀರು ಕುಡಿಸಿದ್ದಾರೆ – ಕೋಟಾ ಹೀಗಂದಿದ್ಯಾಕೆ?

    ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನೀರು ಕುಡಿಸಿದ್ದಾರೆ – ಕೋಟಾ ಹೀಗಂದಿದ್ಯಾಕೆ?

    ಶಿವಮೊಗ್ಗ: ನಾನು ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನನಗೆ ನೀರು ಕುಡಿಸಿದ್ದಾರೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಕೋಟಾ ಭಾಷಣ ಮಾಡುತ್ತಿದ್ದರು. ಮಾತನಾಡುವ ವೇಳೆ ಸಚಿವರು ಕೆಮ್ಮುತ್ತಿದ್ದರು. ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರು ಸಚಿವರಿಗೆ ಕುಡಿಯಲು ನೀರು ಕೊಡಲು ಹೋದರು. ನಾನು ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನೀರು ಕುಡಿಸಿದ್ದಾರೆ ಎಂದು ಸಚಿವರು ಟಾಂಗ್ ನೀಡಿದರು.

    ಈ ಮಧ್ಯೆ ಎದ್ದು ನಿಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪೂಜಾರಿ ಅವರಿಗೆ ಮುಜರಾಯಿ ಮಾತ್ರ ಇಲ್ಲ ಮೀನುಗಾರಿಕೆನೂ ಇದೆ ಎಂದರು. ಆಗ ಪೂಜಾರಿ ಅಷ್ಟೇ ಅಲ್ಲ ಬಿಡಿ ಅಂದ್ರು. ಅಷ್ಟೇ ಅಲ್ಲ ಇನ್ನು ಇದೆ. ಹೇಳೋಣ ನಿಮ್ಮ ಕಥೆನಾ ಅಂತ ಸಿ.ಟಿ. ರವಿ ಮುಂದುವರಿಸಿದರು.

    ಆಗ ಪೂಜಾರಿ, ಅಯ್ಯೋ ಬೇಡಪ್ಪಾ ಕಾಂಪ್ರಮೈಸ್ ಮಾಡಿಕೊಳ್ಳೋಣ ಎಂದು ಹೇಳಿ ಕೋಟಾ ಭಾಷಣ ಮುಂದುವರಿಸಿದ ಪ್ರಸಂಗ ನಡೆಯಿತು.

  • ಹೈಕಮಾಂಡ್ ಒಪ್ಪಿದ್ರೆ 6+3 ಫಾರ್ಮುಲಾ ಫೈನಲ್ – ಗೇಟ್‌ಪಾಸ್‌ ಯಾರಿಗೆ?

    ಹೈಕಮಾಂಡ್ ಒಪ್ಪಿದ್ರೆ 6+3 ಫಾರ್ಮುಲಾ ಫೈನಲ್ – ಗೇಟ್‌ಪಾಸ್‌ ಯಾರಿಗೆ?

    ಬೆಂಗಳೂರು: ಬಿಜೆಪಿ ಹೈಕಮಾಂಡ್ ಒಪ್ಪಿದರೆ ಯಡಿಯೂರಪ್ಪನವರ 6+3 ಫಾರ್ಮುಲಾ ಫೈನಲ್ ಆಗುವ ಸಾಧ್ಯತೆಯಿದೆ.

    ಹೌದು. ಯಡಿಯೂರಪ್ಪನವರು ಮೂವರನ್ನು ಸಂಪುಟದಿಂದ ಕೈಬಿಟ್ಟು 9 ಮಂದಿಗೆ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಉತ್ತರ ಕರ್ನಾಟಕದ ಇಬ್ಬರು, ಕರಾವಳಿಯ ಒಬ್ಬರಿಗೆ ಕೊಕ್ ನೀಡಿ ಮೂಲ ಬಿಜೆಪಿಯ 6 ಮಂದಿಯ ಜೊತೆ ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದಿರುವ ಮೂವರಿಗೆ ಸ್ಥಾನ ನೀಡಲು ಯಡಿಯೂರಪ್ಪನವರು ಮುಂದಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಯಡಿಯೂರಪ್ಪನವರು ಅಳೆದು ತೂಗಿ ಈ ನಿರ್ಧಾರಕ್ಕೆ ಬಂದಿದ್ದು ಹೈಕಮಾಂಡ್ ಒಪ್ಪಿದರೆ ಇದೇ ಅಂತಿಮವಾಗುವ ಸಾಧ್ಯತೆಯಿದೆ.

    ಯಾರಿಗೆ ಗೇಟ್‍ಪಾಸ್?
    ಸದ್ಯಕ್ಕೆ 3 ರಿಂದ 4 ಸಚಿವರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆಯಿದೆ. ಮಜುರಾಯಿ, ಮೀನುಗಾರಿಕೆ, ಬಂದರು ಖಾತೆಯನ್ನು ನೋಡಿಕೊಳ್ಳುತ್ತಿರುವ ಕೋಟಾ ಶ್ರೀನಿವಾಸ್ ಪೂಜಾರಿ, ಮಹಿಳಾ ಮತ್ತು ಮಕ್ಕಳ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ, ಗಣಿ ಭೂ ವಿಜ್ಞಾನ ಖಾತೆ ನೋಡಿಕೊಳ್ಳುತ್ತಿರುವ ಸಿ ಸಿ ಪಾಟೀಲ್, ಜವಳಿ ಮತ್ತು ಅಲ್ಪಸಂಖ್ಯಾತರ ಖಾತೆಯ ಸಚಿವ ಶ್ರೀಮಂತ ಪಾಟೀಲ್ ಅವರನ್ನು ಕೈ ಬಿಡುವ ಸಾಧ್ಯತೆಯಿದೆ.

  • ಎಲ್ಲ ಮುಜರಾಯಿ ದೇವಾಲಯಗಳಲ್ಲಿ ತಿಂಗಳಿಗೊಮ್ಮೆ ಹುಂಡಿ ಎಣಿಕೆ – ಕೋಟಾ ಆದೇಶ

    ಎಲ್ಲ ಮುಜರಾಯಿ ದೇವಾಲಯಗಳಲ್ಲಿ ತಿಂಗಳಿಗೊಮ್ಮೆ ಹುಂಡಿ ಎಣಿಕೆ – ಕೋಟಾ ಆದೇಶ

    – ಕೊಲೆಯಾದ ಅರ್ಚಕ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಣೆ

    ಮಂಡ್ಯ: ಶುಕ್ರವಾರ ಮಂಡ್ಯದ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿ ಹಣ ಕಳವು ಮಾಡಿದ ಹಿನ್ನೆಲೆ ಇಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಸಚಿವ ನಾರಾಯಣಗೌಡ ಹಾಗೂ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಕೋಟಾ ಶ್ರೀನಿವಾಸ್ ಪೂಜಾರಿ, ದೇವಸ್ಥಾನವನ್ನು ಮೊದಲು ವೀಕ್ಷಣೆ ಮಾಡಿದರು. ನಂತರ ನಿನ್ನೆ ನಡೆದ ಘಟನೆಯ ಕುರಿತು ಮಂಡ್ಯ ಎಸ್‍ಪಿ ಪರಶುರಾಮ್ ಅವರ ಬಳಿ ಮಾಹಿತಿ ಕಲೆ ಹಾಕಿ, ಹಂತಕರನ್ನು ಶ್ರೀಘ್ರದಲ್ಲಿ ಪತ್ತೆ ಹಚ್ಚುವಂತೆ ಸೂಚನೆ ನೀಡಿದರು. ಬಳಿಕ ಕೊಲೆಯಾದ ಮೂವರು ಅರ್ಚಕರ ಕುಟುಂಬಕ್ಕೆ ಸಾಂತ್ವನ ಹೇಳಿ, ತಲಾ ಐದು ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದರು.

    ನಂತರ ಮಾತನಾಡಿ ಅವರು, ನಿನ್ನೆ ಮಂಡ್ಯದಲ್ಲಿ ನಡೆದ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು ಆಗಿದೆ. ಇಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಇದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮುಜರಾಯಿ ಇಲಾಖೆಯ ಆಯುಕ್ತರಿಗೆ ತಿಳಿಸಿದ್ದೇನೆ. ಇನ್ನೂ ಮುಂದೆ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಪ್ರತಿ ತಿಂಗಳು ಹುಂಡಿ ತೆಗೆಯಬೇಕು ಎಂದು ಆದೇಶಿಸಿದರು.

  • ಮುಜರಾಯಿ ಇಲಾಖೆಯ ಸಪ್ತಪದಿ ವಿವಾಹಕ್ಕೂ ಶೀಘ್ರದಲ್ಲೇ ದಿನ ನಿಗದಿ- ಸಚಿವ ಕೋಟಾ

    ಮುಜರಾಯಿ ಇಲಾಖೆಯ ಸಪ್ತಪದಿ ವಿವಾಹಕ್ಕೂ ಶೀಘ್ರದಲ್ಲೇ ದಿನ ನಿಗದಿ- ಸಚಿವ ಕೋಟಾ

    ಮಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಮುಜರಾಯಿ ಇಲಾಖೆಯ ಒಟ್ಟು ಆದಾಯದಲ್ಲಿ ಶೇ.30 ರಿಂದ 35ರಷ್ಟು ಕಡಿಮೆ ಆಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಿಂದ ಪ್ರತಿವರ್ಷ ಅಂದಾಜು 600 ಕೋಟಿ ರೂ. ಆದಾಯ ಬರುತಿತ್ತು. ಆದ್ರೆ ಲಾಕ್‍ಡೌನ್‍ನಿಂದ ಒಟ್ಟು ಆದಾಯದ ಪ್ರಮಾಣವು ಕಡಿಮೆಯಾಗಿದೆ ಎಂದು ತಿಳಿಸಿದರು.

    ಲಾಕ್‍ಡೌನ್‍ನಿಂದಾಗಿ ಮುಜರಾಯಿ ಇಲಾಖೆಯಿಂದ ನಡೆಯಬೇಕಿದ್ದ ಸಪ್ತಪದಿ ವಿವಾಹವೂ ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ಅನುಷ್ಠಾನ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಸಪ್ತಪದಿಯನ್ನು ನಿಶ್ಚಯವಾಗಿ ನಮ್ಮ ಇಲಾಖೆ ಮಾಡುತ್ತೆ. ಯಾವ ರೀತಿ ಮಾಡಬೇಕು ಎಂದು ನಮ್ಮ ತಂಡ ಚಿಂತನೆ ನಡೆಸಿದೆ ಎಂದು ತಿಳಿಸಿದರು.

  • ಮೇ 26ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ

    ಮೇ 26ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ

    – ಪೂಜೆಗಳನ್ನು ನೇರ ಪ್ರಸಾರ ಮಾಡಲು ಚಿಂತನೆ

    ಬೆಂಗಳೂರು: ಇಷ್ಟು ದಿನ ಕೊರೊನಾ ವೈರಸ್ ಭೀತಿಗೆ ಬಂದ್ ಆಗಿದ್ದ ದೇವಲಯಗಳಲ್ಲಿ ಈಗ ಭಕ್ತರಿಗೆ ಆನ್‍ಲೈನ್ ಮೂಲಕ ಹಣ ಪಾವತಿಸಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತಿದೆ. ಮೇ 26, 27ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ ಆಗಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಆನ್‍ಲೈನ್‍ನಲ್ಲಿ ಭಕ್ತರು ದೇವಸ್ಥಾನಗಳಿಗೆ ಹಣ ಪಾವತಿ ಮಾಡಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತದೆ. 15ರಿಂದ 20 ಸೇವೆಗಳಿಗೆ ಅವಕಾಶ ಕೊಡಲಾಗುತ್ತದೆ. ಆನ್‍ಲೈನ್‍ನಲ್ಲಿ ಭಕ್ತರು ಹಣ ಪಾವತಿ ಮಾಡಬೇಕು, ಅವರ ಹೆಸರಿನಲ್ಲಿ ಪೂಜೆ ಮಾಡಿ ಪ್ರಸಾದ ಭಕ್ತರ ಮನೆಗೇ ಕಳುಹಿಸ್ತೀವಿ. ಯಾರನ್ನು ದೇವಾಲಯದ ಒಳಗೆ ಬಿಡೋದಿಲ್ಲ. ಹಣ ಪಾವತಿಸಿದ ಭಕ್ತರು ಅಥವಾ ಅವರು ಹೇಳುವ ಮಂದಿಯ ಹೆಸರಿನಲ್ಲಿ ಪೂಜೆ ಮಾಡಿ ಪ್ರಸಾದ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಪ್ರಥಮ ಬಾರಿಗೆ 50 ದೇವಾಲಯದಲ್ಲಿ ಆನ್‍ಲೈನ್ ಸೇವೆಗೆ ಅವಕಾಶ ನೀಡಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿ, ಮೈಸೂರು ಚಾಮುಂಡೇಶ್ವರಿ, ಬನಶಂಕರಿ ದೇವಾಲಯ, ನಂಜನಗೂಡು ನಂಜುಂಡೇಶ್ವರ ದೇವಲಯ ಸೇರಿ ಒಟ್ಟು 50 ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭವಾಗುತ್ತದೆ. ಸಿಎಂ ಒಪ್ಪಿಗೆ ಕೊಟ್ಟ ಕೂಡಲೇ ಆನ್‍ಲೈನ್ ಸೇವೆ ಪ್ರಾರಂಭ ಮಾಡ್ತೀವಿ ಎಂದು ಸಚಿವರು ತಿಳಿಸಿದರು.

    ಇಲಾಖೆ ವತಿಯಿಂದ ಸಾಮೂಹಿಕ ಮದುವೆ:
    ಸಾಮೂಹಿಕ ವಿವಾಹ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಕಾರ್ಯಕ್ರಮಗಳು ನಡೆಯುತ್ತೆ. ಮೇ 31ರ ಬಳಿಕ ಲಾಕ್‍ಡೌನ್ ಮುಗಿದ ನಂತರ ಈ ಬಗ್ಗೆ ತೀರ್ಮಾನ ಮಾಡ್ತೀವಿ. ಕಡಿಮೆ ಜನಸಂಖ್ಯೆ, ಕಡಿಮೆ ಜೋಡಿಗಳನ್ನ ಇಟ್ಟುಕೊಂಡು ಮದುವೆ ಮಾಡುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ವರದಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಸಾಮೂಹಿಕ ಮದುವೆ ಇಲಾಖೆ ಮಾಡೇ ಮಾಡುತ್ತೆ. ಲಾಕ್‍ಡೌನ್ ಮುಗಿದ ನಂತರ ಈ ಬಗ್ಗೆ ಅಂತಿಮ ನಿರ್ಧಾರ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

    ಆರ್ಥಿಕ ನೆರವು:
    ಅರ್ಚಕರಿಗೆ ಆರ್ಥಿಕ ಸಮಸ್ಯೆಯಿದೆ. ಮೂರು ತಿಂಗಳು ಮುಂಗಡವಾಗಿ ತಸ್ತಿಕ್ ಹಣ ಬಿಡುಗಡೆಗೆ ಸಿಎಂಗೆ ಮನವಿ ಮಾಡಿದ್ದೇವೆ. ಸಿಎಂ ಸೂಚನೆ ಮೇರೆಗೆ 33.65 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಆರ್ಥಿಕ ಇಲಾಖೆ ಹಣವನ್ನ ಬಿಡುಗಡೆ ಮಾಡಿದೆ. 26,700 ದೇಗುಲಗಳ ಅರ್ಚಕರಿಗೆ 3 ತಿಂಗಳ ಮುಂಗಡ ತಸ್ತಿಕ್ ಹಣ ಬಿಡುಗಡೆ ಮಾಡಲಾಗಿದೆ. ಇತ್ತ ವರ್ಶಾಸನದ ದೇವಾಲಯಗಳಿಗೂ ಹಣ ಬಿಡುಗಡೆ ಮಾಡಲಾಗಿದೆ. 5.32 ಕೋಟಿ ರೂ. ಹಣ ಬಿಡುಗಡೆಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಒಟ್ಟು ಸುಮಾರು 39 ಕೋಟಿ ರೂ. ಹಣವನ್ನು ಮುಜರಾಯಿ ಇಲಾಖೆಗೆ ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಹಿತಿ ಕೊಟ್ಟರು.

    ದೇವಾಲಯದ ಪೂಜೆಗಳನ್ನು ನೇರ ಪ್ರಸಾರ ಮಾಡಲು ನಿರ್ಧಾರ:
    ಪ್ರಮುಖ ದೇವಾಲಯಗಳ ಪೂಜೆಗಳನ್ನು ನೇರ ಪ್ರಸಾರ ಮಾಡುವ ನಿಟ್ಟಿನಲ್ಲಿ ಇಲಾಖೆ ಚಿಂತನೆ ನಡೆಸಿದೆ. ಆಯ್ದ ದೇವಾಲಯಗಳ ಪೂಜೆ-ಪುನಸ್ಕಾರಗಳನ್ನ ನೇರ ಪ್ರಸಾರ ಮಾಡಲಾಗುತ್ತೆ. ಈ ನಿಟ್ಟಿನಲ್ಲಿ ಸಿದ್ಧತೆ ಪ್ರಾರಂಭವಾಗಿದೆ. ಯುಟ್ಯೂಬ್, ವೆಬ್ ಪೋರ್ಟಲ್, ಫೇಸ್‍ಬುಕ್‍ನಲ್ಲಿ ಪೂಜೆ ನೇರ ಪ್ರಸಾರ ಮಾಡುವ ಕಲ್ಪನೆ ಇದೆ. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡ್ತೀವಿ. ಶೀಘ್ರವೇ ದೇವಾಲಯಗಳ ಪೂಜೆ ನೇರ ಪ್ರಸಾರವಾಗುತ್ತೆ ಎಂದು ಶ್ರೀನಿವಾಸ್ ಪೂಜಾರಿ ತಿಳಿಸಿದರು.