Tag: ಕೋಚ್

  • ಟೀಂ ಇಂಡಿಯಾ ಕೋಚ್ ಹುದ್ದೆಗೆ ದ್ರಾವಿಡ್ ಅಧಿಕೃತ ಅರ್ಜಿ ಸಲ್ಲಿಕೆ

    ಟೀಂ ಇಂಡಿಯಾ ಕೋಚ್ ಹುದ್ದೆಗೆ ದ್ರಾವಿಡ್ ಅಧಿಕೃತ ಅರ್ಜಿ ಸಲ್ಲಿಕೆ

    ಮುಂಬೈ : ಭಾರತದ ಹಿರಿಯರ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ನಿನ್ನೆ ಅರ್ಜಿ ಸಲ್ಲಿಸಿದ್ದಾರೆ.

    ರವಿ ಶಾಸ್ತ್ರಿ ಬಳಿಕ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆ ದಿನವಾದ ನಿನ್ನೆ ದ್ರಾವಿಡ್ ಅರ್ಜಿ ಸಲ್ಲಿಸಿದ್ದಾರೆ.

    ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ನಿರ್ದೇಶಕರಾಗಿರುವ ದ್ರಾವಿಡ್ ಆ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ದ್ರಾವಿಡ್ ಕೋಚ್ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗಿದ್ದರೂ, ದಿನಗಳ ಹಿಂದಷ್ಟೇ ದ್ರಾವಿಡ್ ಇದಕ್ಕೆ ಇನ್ನೂ ಒಪ್ಪಿಕೊಂಡಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಚ್ಚರಿಯ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ಪ್ರಧಾನ ಕೋಚ್ ಹುದ್ದೆಯ ಆಯ್ಕೆಯ ಬಗ್ಗೆ ಗೊಂದಲ ಸೇಷ್ಟಿಯಾಗಿತ್ತು. ನಿನ್ನೆ ಕೋಚ್ ಹುದ್ದೆಗೆ ಅಧಿಕೃತವಾಗಿ ಅರ್ಜಿ ಸಲ್ಲಿಸುವ ಮೂಲಕ ರಾಹುಲ್ ದ್ರಾವಿಡ್ ಗೊಂದಗಳಿಗೆ ತೆರೆ ಎಳೆದಿದ್ದಾರೆ.

    ಭಾರತದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ, ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ದೇಸೀ ಕ್ರಿಕೆಟ್ ತಂಡಗಳಿಗೆ ಕೋಚ್ ಆಗಿ ಸೇವೆಸಲ್ಲಿಸಿರುವ 39 ವರ್ಷದ ಅಜಯ್, ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು. ಭಾರತ ಮಹಿಳಾ ತಂಡದಲ್ಲೂ ರಾತ್ರಾ ಕೆಲಸ ಮಾಡಿದ್ದರು. ಅಜಯ್ ರಾತ್ರಾ ಹಾಗೂ ಅಭಯ್ ಶರ್ಮಾ ನಡುವೆ ಫೀಲ್ಡಿಂಗ್ ಕೋಚ್ ಹುದ್ದೆಗೆ ಪೈಪೋಟಿ ಏರ್ಪಡಲಿದೆ. ಇದನ್ನೂ ಓದಿ:  ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಎನ್‍ಸಿಎಗೆ ಲಕ್ಷ್ಮಣ್ ಹೊಸ ನಿದೇಶಕ:
    ದ್ರಾವಿಡ್ ರಾಜೀನಾಮೆ ನೀಡಿದರೆ ತೆರವಾಗಲಿರುವ ಎನ್‍ಸಿಎ ನಿರ್ದೇಶಕ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ನೇಮಕವಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಲಕ್ಷ್ಮಣ್ ಎನ್‍ಸಿಎ ನಿರ್ದೇಶಕ ಹುದ್ದೆಯನ್ನು ನಿರ್ವಹಿಸಲಿ ಆಸಕ್ತಿ ಹೊದಿಲ್ಲ, ಬಿಸಿಸಿಐ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿತ್ತು. ಲಕ್ಷ್ಮಣ್ ನಿರ್ದೇಶಕ ಹುದ್ದೆ ಅಲಂಕರಿಸಿದರೆ ಅವರು ಐಪಿಎಲ್‍ನಲ್ಲಿ ಮೆಂಟರ್, ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕಿದೆ. ಜೊತೆಗೆ ಮಾಧ್ಯಮಗಳಲ್ಲಿ ಲೇಖನ ಬರೆಯುವುದಕ್ಕೂ ಅವಕಾಶವಿರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವ ವೇತನ ನಿಗದಿಯಾಗಲಿದೆ.

  • ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾಕ್ಕೆ ಕನ್ನಡಿಗ ಕೋಚ್?

    ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾಕ್ಕೆ ಕನ್ನಡಿಗ ಕೋಚ್?

    ಮುಂಬೈ: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿಯವರ ಒಪ್ಪಂದ ಕೊನೆಗೊಳ್ಳುತ್ತದೆ. ಈ ನಡುವೆ ಬಿಸಿಸಿಐ ಈಗಾಗಲೇ ಕೋಚ್‍ಗಳ ಹುಡುಕಾಟದಲ್ಲಿ ತೊಡಗಿದ್ದು, ಕನ್ನಡಿಗರೊಬ್ಬರಿಗೆ ಕೋಚ್ ಆಗುವಂತೆ ಆಫರ್ ಕೂಡ ಕೊಟ್ಟಿದೆ ಎಂದು ವರದಿಯಾಗಿದೆ.

    ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೊನೆಗೊಳ್ಳುತ್ತಿದ್ದಂತೆ ರವಿಶಾಸ್ತ್ರಿ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಶಾಸ್ತ್ರಿ 2014ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಡೈರೆಕ್ಟರ್ ಆಗಿ ಆಯ್ಕೆಗೊಂಡರು. 2016ರ ಬಳಿಕ ಒಂದು ವರ್ಷಗಳ ಕಾಲ ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದರು. ನಂತರ 2017ರಲ್ಲಿ ರವಿಶಾಸ್ತ್ರಿ ಮುಖ್ಯ ಕೋಚ್ ಆಗಿ ಟೀಂ ಇಂಡಿಯಾಗೆ ನೇಮಕಗೊಂಡರು. ರವಿಶಾಸ್ತ್ರಿ ಸಾರಥ್ಯದಲ್ಲಿ ಮುನ್ನಡೆದ ಭಾರತ ತಂಡ ಚಾಂಪಿಯನ್ ಟ್ರೋಫಿ, ಆಸ್ಟ್ರೇಲಿಯಾ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸಹಿತ ಹಲವು ಮಹತ್ವದ ಪಂದ್ಯಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ.

    2019ರ ಏಕದಿನ ವಿಶ್ವಕಪ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಸೋತರು ಕೂಡ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ತವರಿನಲ್ಲಿ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ, ಸರಣಿ ಗೆಲ್ಲುವ ಮೂಲಕ ಭಾರತ ತಂಡ ವಿಶೇಷ ಸಾಧನೆ ಮಾಡಿದೆ. ಟೀ ಇಂಡಿಯಾದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಧಿಸಿದ್ದೇವೆ ಎಂಬ ಸಂತೃಪ್ತಿ ಇದೆ ಎಂದು ಶಾಸ್ತ್ರಿ ಕೂಡ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ, ಲಕ್ಷ್ಮಣ್ !

    ಇದೀಗ ಟಿ-20 ವಿಶ್ವಕಪ್ ಬಳಿಕ ಬಿಸಿಸಿಐ ಜೊತೆಗಿನ ಒಪ್ಪಂದ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಮುಖ್ಯ ಕೋಚ್ ಹುದ್ದೆಗೆ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ 2016-17ರ ನಡುವೆ ಒಂದು ವರ್ಷ ಕುಂಬ್ಳೆ ಕೋಚ್ ಆಗಿ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ವಿರಾಟ್ ಕೊಹ್ಲಿ ಜೊತೆಗಿನ ವೈಮನಸ್ಸಿನಿಂದಾಗಿ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಮತ್ತೆ ಬಿಸಿಸಿಐ ಕುಂಬ್ಳೆ ಕಡೆಗೆ ಒಲವನ್ನು ತೋರಿದೆ ಎಂದು ವರದಿಯಾಗಿದೆ.

    ಕುಂಬ್ಳೆ ಜೊತೆ ಕನ್ನಡಿಗ ರಾಹುಲ್ ದ್ರಾವಿಡ್ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ ದ್ರಾವಿಡ್ ಕೋಚ್ ಹುದ್ದೆ ಸ್ವೀಕರಿಸಲು ಸಿದ್ಧರಿಲ್ಲ ಎಂದು ಕೇಳಿಬರುತ್ತಿದೆ. ಈ ನಡುವೆ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್, ಪ್ರಸ್ತುತ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋರ್ ಅವರ ಹೆಸರಿನೊಂದಿಗೆ ಕೆಲ ವಿದೇಶಿ ಕೋಚ್‍ಗಳ ಹೆಸರು ಕೇಳಿ ಬರುತ್ತಿದೆ. ಆದರೆ ಬಿಸಿಸಿಐ ಮಾತ್ರ ಸ್ವದೇಶಿ ಕೋಚ್‍ಗಳನ್ನು ಪರಿಗಣಿಸಲು ಒಲವು ತೋರಿಸಿದೆ ಎಂಬ ಮಾಹಿತಿ ಇದೆ. ಇದನ್ನೂ ಓದಿ: ನಾಳೆಯಿಂದ ದುಬೈನಲ್ಲಿ ಐಪಿಎಲ್ ಕಲರವ

    ರವಿಶಾಸ್ತ್ರಿ ಕೋಚ್ ಆಗಿ ಕಾರ್ಯನಿರ್ವಹಿಸಿದ ಬಳಿಕ ಭಾರತ ತಂಡದಲ್ಲಿ ಆಟಗಾರರ ಬೆಂಚ್ ಸ್ಟ್ರೆಂತ್ ತುಂಬಾನೆ ಬೆಳೆದಿದ್ದು, ಹಲವು ಉದಯೋನ್ಮುಕ ಆಟಗಾರರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ಸರದಿ ಮುಗಿದ ಬಳಿಕ ಮುಂದಿನ ಕೋಚ್ ಯಾರಗಳಿದ್ದಾರೆ ಎಂಬ ಕುರಿತು ಕ್ರಿಕೆಟ್ ಅಂಗಳದಲ್ಲಿ ಚರ್ಚೆ ಜೋರಾಗಿದೆ. ಇದನ್ನೂ ಓದಿ:ಮಾಸ್ಕ್ ಹಾಕಿ, ಲಸಿಕೆ ಪಡೆಯಿರಿ- ಧೋನಿ ಕ್ಯಾಂಪೇನ್

  • ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್- ಕ್ವಾರಂಟೈನ್‍ನಲ್ಲಿ ಮೂವರು ಸಹಾಯಕ ಸಿಬ್ಬಂದಿ

    ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್- ಕ್ವಾರಂಟೈನ್‍ನಲ್ಲಿ ಮೂವರು ಸಹಾಯಕ ಸಿಬ್ಬಂದಿ

    ಓವೆಲ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈ ಬೆನ್ನಲ್ಲೇ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

    ಓವೆಲ್‍ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ನ ನಾಲ್ಕನೇ ದಿನದಾಟದ ಮುಂಚೆ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಇವರ ಸಂಪರ್ಕದಲ್ಲಿದ್ದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಫಿಸಿಯೋ ಥೆರಪಿಸ್ಟ್ ನಿತೀನ್ ಪಟೇಲ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ

    ನಾಲ್ಕನೇ ಟೆಸ್ಟ್​ನ ಮೂರನೇ ದಿನ ಭಾರತ ತಂಡ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 280ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು 181 ರನ್‍ಗಳ ಮುನ್ನಡೆ ಪಡೆದುಕೊಂಡಿತ್ತು.  ಇದೀಗ ನಾಲ್ಕನೇ ದಿನದಾಟ ಮುಂದುವರಿಯುತ್ತಿದೆ.

  • ಆರ್​ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್

    ಆರ್​ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್

    ಬೆಂಗಳೂರು: ಯುಎಇಯಲ್ಲಿ ನಡೆಯಲಿರುವ ಐಪಿಎಲ್‍ನ ಎರಡನೇ ಭಾಗಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೈಕ್ ಹೆಸನ್ ಅವರನ್ನು ನೂತನ ಕೋಚ್ ಆಗಿ ನೇಮಕ ಮಾಡಿದೆ.

    ಈ ಹಿಂದೆ ಆರ್​ಸಿಬಿ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಸೈಮನ್ ಕ್ಯಾಟಿಚ್ ಅವರು ವೈಯಕ್ತಿಕ ಕಾರಣ ಹೇಳಿ ಐಪಿಎಲ್ ಕೋಚ್ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಅವರ ಬದಲು ಮೈಕ್ ಹಸನ್ ಅವರಿಗೆ ಮುಖ್ಯ ಕೋಚ್ ಹುದ್ದೆಯನ್ನು ನೀಡಲಾಗಿದೆ ಎಂದು ಆರ್​ಸಿಬಿ ತಂಡದ ವ್ಯವಸ್ಥಾಪಕರಾದ ರಾಜೇಶ್ ಮೆನನ್ ಸ್ಥಳೀಯ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಟ್ರೋಫಿಯ ಆನ್‍ಲೈನ್ ವಿಶ್ವದರ್ಶನ ಪ್ರಾರಂಭ

    ಕ್ಯಾಟಿಚ್ ಅವರು ಕೋಚ್ ಆಗಿ ಉತ್ತಮ ಕಾರ್ಯ ಆರ್​ಸಿಬಿ ತಂಡದ ಪರ ನಿರ್ವಹಿಸಿದ್ದರು ಅವರಿಗೆ ಧನ್ಯವಾದ. ಈ ಆವೃತ್ತಿಯ ಅಂತ್ಯದವರೆಗೆ ಮೈಕ್ ಹೆಸನ್ ಅವರು ಆರ್​ಸಿಬಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡಕ್ಕೆ ಶ್ರೀಲಂಕಾದ ಆಲ್‍ರೌಂಡರ್ ವನಿಂದು ಹಸರಂಗ ಅವರನ್ನು ಆಸ್ಟ್ರೇಲಿಯಾದ ಆಟಗಾರ ಆ್ಯಡಂ ಜಂಪಾ ಅವರ ಸ್ಥಾನಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಐಪಿಎಲ್‍ಗೆ ವಿಶೇಷ ನಿಯಮ ಜಾರಿ ಮಾಡಿದ ಬಿಸಿಸಿಐ

    ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಆರಂಭಗೊಂಡು, ಅಕ್ಟೋಬರ್ 15ಕ್ಕೆ ಅಂತ್ಯಗೊಳ್ಳಲಿದೆ. ಈಗಾಗಲೇ ಕೆಲ ತಂಡಗಳು ಯುಎಇಗೆ ತೆರಳಿ ಅಭ್ಯಾಸ ಆರಂಭಿಸಿದೆ.

  • ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

    ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

    ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕು. ಅಂಕಿತಾ ಸುರೇಶ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸಿದ್ದಾರೆ.

    ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದ್ದು, ತಂಡದ ತರಬೇತಿದಾರರಿಗೆ ತುಂಬು ಹೃದಯದ ಧನ್ಯವಾದಗಳು. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಬೊಮ್ಮಾಯಿ, ಅಂಕಿತಾ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಹಾಕಿಯಲ್ಲಿ ಸಾಧನೆ – ಕೊಡಗಿನಲ್ಲಿ ಅಂಕಿತಾ ಸುರೇಶ್‍ಗೆ ಅದ್ಧೂರಿ ಸ್ವಾಗತ

    ಅಂಕಿತಾ ಅವರು ಮಡಿಕೇರಿ ಮೂಲದವರಾಗಿದ್ದು, ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ. ಪ್ರಥಮ ಬಾರಿಗೆ ಒಲಂಪಿಕ್ಸ್ ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತೇರ್ಗಡೆಗೊಂಡು ಅಮೋಘ ಸಾಧನೆ ಮಾಡಿದ್ದು ಅವರಿಗೆ ಹಾಗೂ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಸಿಎಂ ಸಂತಸ ವ್ಯಕ್ತಪಡಿಸಿದರು.

  • ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ರೆ ಕೋಚ್, ಕ್ರೀಡಾಪಟುವಿಗೆ ಸಿಗಲಿದೆ ನಗದು ಬಹುಮಾನ

    ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ರೆ ಕೋಚ್, ಕ್ರೀಡಾಪಟುವಿಗೆ ಸಿಗಲಿದೆ ನಗದು ಬಹುಮಾನ

    ಟೋಕಿಯೋ: ಜಪಾನ್‍ನಲ್ಲಿ ನಡೆಯುತ್ತಿರುವ ಟೋಕಿಯೋ  ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಮತ್ತು ಅವರ ತರಬೇತುದಾರರಿಗೆ ಭಾರೀ ಮೊತ್ತದ ನಗದು ಬಹುಮಾನವನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್(ಐಒಎ) ಘೋಷಿಸಿದೆ.

    ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿರು ಭಾರತೀಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚು ಯಾವುದೇ ಪದಕ ಗೆದ್ದರೂ ಕೂಡ ನಗದು ಬಹುಮಾನ ಘೋಷಿಸಿದ್ದ ಐಒಎ ಇದೀಗ ಅಥ್ಲೀಟ್ಸ್ ಜೊತೆ ಅವರ ಕೋಚ್‍ಗಳಿಗೂ ಕೂಡ ನಗದು ಬಹುಮಾನವನ್ನು ಘೋಷಿಸಿದೆ.

    ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ 49 ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು ಅವರ ಕೋಚ್ ವಿಜಯ್ ಶರ್ಮಾ ಅವರಿಗೆ 10ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ಇದಲ್ಲದೆ ಇನ್ನೂ ಮುಂದೆ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳ ಕೋಚ್‍ಗಳಿಗೆ 12.5 ಲಕ್ಷ ರೂಪಾಯಿ, ಬೆಳ್ಳಿ ಗೆದ್ದರೆ 10 ಲಕ್ಷ ರೂಪಾಯಿ ಮತ್ತು ಕಂಚು ಗೆದ್ದರೆ 7.5 ಲಕ್ಷ ರೂಪಾಯಿ ಕೊಡುವುದಾಗಿ ಐಒಎ ತಿಳಿಸಿದೆ.

    ಈ ಕುರಿತು ಮಾತನಾಡಿದ ಐಒಎನ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು, ಪದಕ ಗೆಲ್ಲುವ ಕ್ರೀಡಾಪಟುಗಳೊಂದಿಗೆ ಅವರ ಕೋಚ್‍ಗಳಿಗೂ ನಗದು ಬಹುಮಾನವನ್ನು ಘೋಷಿಸಲಾಗಿದ್ದು, ಪ್ರತಿದಿನ ಕ್ರೀಡಾಪಟುಗಳೊಂದಿಗೆ ಅವರ ಕೋಚ್‍ಗಳು ಕೂಡ ಶ್ರಮ ವಹಿಸುತ್ತಾರೆ. ಹಾಗಾಗಿ ಅವರಿಗೂ ಕೂಡ ಗೌರವಿಸಲು ನಿರ್ಧರಿಸಿದ್ದೇವೆ ಎಂದರು.

    ಈ ಹಿಂದೆ ರಾಷ್ಟ್ರೀಯ ಫೆಡರೇಶನ್(ಎನ್‍ಎಸ್‍ಎಫ್) ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುವಿಗೆ 25 ಲಕ್ಷ ರೂಪಾಯಿ ಬೋನಸ್ ಜೊತೆ 75 ಲಕ್ಷ ರೂಪಾಯಿ ನಗದು, ಬೆಳ್ಳಿ ಪದಕ ಗೆದ್ದವರಿಗೆ 40 ಲಕ್ಷ ರೂಪಾಯಿ ಮತ್ತು ಕಂಚಿನ ಪದಕ ಗೆದ್ದವರಿಗೆ 25 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿತ್ತು. ಈ ಮೂಲಕ ಭಾರತದ ಪದಕ ವಿಜೇತರಿಗೆ ಇನ್ನಷ್ಟು ಹುರುಪನ್ನು ಮೂಡಿಸಿದೆ.

  • ಕೇವಲ 7 ನಿಮಿಷದಲ್ಲಿ ಟೀಂ ಇಂಡಿಯಾದ ಕೋಚ್‌ ಆದ ಕಥೆ ಬಿಚ್ಚಿಟ್ಟ ಗ್ಯಾರಿ ಕರ್ಸ್ಟನ್‌

    ಕೇವಲ 7 ನಿಮಿಷದಲ್ಲಿ ಟೀಂ ಇಂಡಿಯಾದ ಕೋಚ್‌ ಆದ ಕಥೆ ಬಿಚ್ಚಿಟ್ಟ ಗ್ಯಾರಿ ಕರ್ಸ್ಟನ್‌

    – ಅನುಭವ ಇಲ್ಲದೇ ಇದ್ದರೂ ಒಲಿದು ಬಂತು ಕೋಚ್‌ ಹುದ್ದೆ
    – ಹಳೆ ನೆನಪು ಹಂಚಿಕೊಂಡ ಕರ್ಸ್ಟನ್‌

    ನವದೆಹಲಿ: ಟೀ ಇಂಡಿಯಾದ ಯಶಸ್ವಿ ಕೋಚ್‌ ಎಂದೇ ಪ್ರಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಕೇವಲ ಏಳು ನಿಮಿಷದಲ್ಲಿ ಹುದ್ದೆಯನ್ನು ಅಲಕರಿಸಿದ್ದರಂತೆ.

    ಹೌದು. ಮಾಜಿ ಆರಂಭಿಕ ಆಟಗಾರ ಗ್ಯಾರಿ ಕರ್ಸ್ಟನ್‌ ಈ ಹಿಂದೆ ಕೋಚ್‌ ಆಗಿ ನೇಮಕಗೊಂಡ ಸ್ವಾರಸ್ಯಕರ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ. ಈ ವೇಳೆ ಮೇಲ್‌ ಬಂದಾಗ ಏನಾಯ್ತು, ಸಂದರ್ಶನದ ವೇಳೆ ಯಾರು ಏನು ಪ್ರಶ್ನೆ ಕೇಳಿದ್ದರು? ಎಲ್ಲವನ್ನು ಈಗ ವಿವರಿಸಿದ್ದಾರೆ.

    ಆಸ್ಟ್ರೇಲಿಯಾದ ಗ್ರೇಗ್‌ ಚಾಪೆಲ್‌ 2005ರಿಂದ 2007ರವರೆಗೆ ಕೋಚ್‌ ಆಗಿದ್ದರು. ಈ ವೇಳೆ ಆಟಗಾರರ ಮತ್ತು ಕೋಚ್‌ ನಡುವೆ ಹೊಂದಾಣಿಕೆ ಸರಿಯಾಗದ ಕಾರಣ ಬಿಸಿಸಿಐ ಹೊಸ ಕೋಚ್‌ ನೇಮಕ ಮಾಡಲು ಸುನಿಲ್‌ ಗವಾಸ್ಕರ್‌, ರವಿಶಾಸ್ತ್ರಿಯನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ನೇಮಿಸಿತ್ತು.

    ಕರ್ಸ್ಟನ್‌ ನೆನಪು ಹಂಚಿಕೊಂಡದ್ದು ಹೀಗೆ
    “ಒಂದು ದಿನ ಹಿರಿಯ ಕ್ರಿಕೆಟ್‌ ಆಟಗಾರ ಸುನಿಲ್‌ ಗವಾಸ್ಕರ್‌ ನನಗೆ ಇಮೇಲ್‌ ಮಾಡಿ, ಟೀಂ ಇಂಡಿಯಾ ಕೋಚ್‌ ಹುದ್ದೆಗೆ ನಿಮ್ಮನ್ನು ಪರಿಗಣಿಸಬಹುದೇ” ಎಂದು ಕೇಳಿದ್ದರು. ಇಮೇಲ್‌ ನೋಡಿ,”ಯಾರೋ ಆನ್‌ಲೈನ್‌ ವಂಚಕರು ಮೇಲ್‌ ಮಾಡಿರಬಹುದು” ಎಂದು ಭಾವಿಸಿ ನಾನು ಉತ್ತರ ನೀಡದೇ ಸುಮ್ಮನ್ನಾಗಿದ್ದೆ. ಆದರೆ ಗವಾಸ್ಕರ್‌ ಅವರಿಂದ ಮತ್ತೊಂದು ಇಮೇಲ್‌ ಬಂದಿತ್ತು. “ಇದರಲ್ಲೂ ನೀವು ಸಂದರ್ಶನಕ್ಕೆ ಬರಬಬಹುದೇ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.

     

    ಈ ಇಮೇಲ್‌ ಅನ್ನು ಪತ್ನಿಗೆ ತೋರಿಸಿದಾಗ ಆಕೆ, “ತಪ್ಪಾದ ವ್ಯಕ್ತಿಗೆ ಮೇಲ್‌ ಸೆಂಡ್‌ ಮಾಡಿದ್ದಾರೆ” ಎಂದು ಹೇಳಿದ್ದಳು. ನಿಜವಾಗಿಯೂ ನಾನು ಕೋಚ್‌ ಆಗಲು ಆಸಕ್ತಿ ಇರಲಿಲ್ಲ. ಅಷ್ಟೇ ಅಲ್ಲದೇ ಅನುಭವ ಸಹ ಇರಲಿಲ್ಲ. ಆದರೂ ನೋಡಿಯೋ ಬೀಡೋಣ ಎಂದು ತೀರ್ಮಾನಿಸಿ ಸಂದರ್ಶನಕ್ಕೆ ಹಾಜರಾದೆ.

    ಈ ಸಂದರ್ಭದಲ್ಲಿ ಅನಿಲ್‌ ಕುಂಬ್ಳೆ ನನಗೆ ಸಿಕ್ಕಿದರು. ಟೀಂ ಇಂಡಿಯಾದ ನಾಯಕರಾಗಿದ್ದ ಕುಂಬ್ಳೆ ನನ್ನನ್ನು ನೋಡಿ,”ಇಲ್ಲಿ ಏನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ನಾನು,”ಕೋಚ್‌ ಹುದ್ದೆಯ ಸಂದರ್ಶನಕ್ಕೆ ಬಂದಿದ್ದೇನೆ. ಮುಂದೆ ನಾನೇ ನಿಮಗೆ ಮಾರ್ಗದರ್ಶನ ನೀಡಲಿದ್ದೇನೆ” ಎಂದು ಹೇಳಿದಾಗ ಕುಂಬ್ಳೆ ನಕ್ಕರು. ನನಗೂ ನಗುವನ್ನು ತಡೆಯಲು ಆಗಲಿಲ್ಲ.

     

    ಅನುಭವ ಇಲ್ಲದ ಕಾರಣ ನಾನು ಯಾವುದೇ ತಯಾರಿ ಇಲ್ಲದೇ ಸಂದರ್ಶನಕ್ಕೆ ಹಾಜರಾಗಿದ್ದೆ. ರವಿಶಾಸ್ತ್ರಿ ಅವರು, “ದಕ್ಷಿಣ ಆಫ್ರಿಕಾ ತಂಡ ಭಾರತವನ್ನು ಹೇಗೆ ಮಣಿಸಬಹುದು” ಎಂದು ಪ್ರಶ್ನಿಸಿದರು. ಇದಕ್ಕೆ ನಾನು ನಮ್ಮ ತಂಡದ ತಂತ್ರಗಳನ್ನು ಹೇಳದೇ ಮೂರು ನಿಮಿಷದಲ್ಲಿ ಉತ್ತರ ನೀಡಿದ್ದೆ. ಈ ಉತ್ತರ ಎಲ್ಲರಿಗೂ ಖುಷಿ ನೀಡಿತು. ಇದಾದ ನಾಲ್ಕು ನಿಮಿಷಕ್ಕೆ ಒಪ್ಪಂದದ ಪತ್ರ ನನ್ನ ಕೈ ಸೇರಿತ್ತು.

    ಪತ್ರ ಸಿಕ್ಕಿದ ಕೂಡಲೇ ಓದಲು ಆರಂಭಿಸಿದೆ. ಮೊದಲ ಪುಟದಲ್ಲಿ ನನ್ನ ಹೆಸರು ಇರಲಿಲ್ಲ. ಬದಲಾಗಿ ಗ್ರೇಗ್‌ ಚಾಪೆಲ್‌ ಹೆಸರು ಇತ್ತು. ಗಮನಕ್ಕೆ ಬಂದ ಕೂಡಲೇ ಬಿಸಿಸಿಐ ಕಾರ್ಯದರ್ಶಿಗೆ ನನ್ನ ಹೆಸರು ಇದರಲ್ಲಿ ಇಲ್ಲ. ನೀವು ಹಳೆಯ ಪತ್ರ ನೀಡಿದ್ದೀರಿ ಎಂದು ತಿಳಿಸಿದೆ. ಬಳಿಕ ಅವರು ಪತ್ರವನ್ನು ಓದಿ ಚಾಪೆಲ್‌ ಹೆಸರನ್ನು ಅಳಿಸಿ ನನ್ನ ಹೆಸರನ್ನು ಬರೆದು ಹಿಂತಿರುಗಿಸಿದ್ದರು ಎಂದು ಹಳೆಯ ನೆನಪುಗಳನ್ನು ಗ್ಯಾರಿ ಕರ್ಸ್ಟನ್‌ ಹಂಚಿಕೊಂಡಿದ್ದಾರೆ.

    ಕರ್ಸ್ಟನ್‌ ಅವರು 2008ರಲ್ಲಿ ಕೋಚ್‌ ಹುದ್ದೆ ಅಲಂಕರಿಸಿದ ಬಳಿಕ ಭಾರತ ತಂಡವು ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ(2009) ಮೊದಲ ಸ್ಥಾನಕ್ಕೆ ಏರಿತ್ತು. 2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಈ ವೇಳೆ ಟೀಂ ಇಂಡಿಯಾ ಆಟಗಾರರು ಕರ್ಸ್ಟನ್‌ ಅವರನ್ನು ಎತ್ತಿಕೊಂಡು ಕುಣಿದಾಡಿದ್ದರು.

    ಟೀಂ ಇಂಡಿಯಾ ಆಟಗಾರರಲ್ಲಿ ಹೊಂದಾಣಿಕೆ ಇಲ್ಲ. ಡ್ರೆಸ್ಸಿಂಗ್‌ ರೂಂ ವಾತಾವರಣ ಸರಿ ಇಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಕರ್ಸ್ಟನ್‌ ಆಯ್ಕೆ ಆದ ಬಳಿಕ ಟೀಂ ಇಂಡಿಯಾದ ಸ್ವರೂಪವೇ ಬದಲಾಯಿತು. ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದ ಕಾರಣ ಇಂದು ತಂಡ ಮೇಲೆ ಉತ್ತಮ ಪರಿಣಾಮ ಬೀರಿತ್ತು. 2018ರಲ್ಲಿ ಐಪಿಎಲ್‌ ಸರಣಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕೋಚ್‌ ಆಗಿ ಆಯ್ಕೆ ಆಗಿದ್ದರು.

  • ತನ್ನ ಕೋಚ್ ಮಗಳನ್ನೇ ವರಿಸಿದ ರೈನಾ- ಪವರ್ ಹಿಟ್ಟರ್ ಪ್ರೇಮ್ ಕಹಾನಿ

    ತನ್ನ ಕೋಚ್ ಮಗಳನ್ನೇ ವರಿಸಿದ ರೈನಾ- ಪವರ್ ಹಿಟ್ಟರ್ ಪ್ರೇಮ್ ಕಹಾನಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಪವರ್ ಹಿಟ್ಟರ್ ಸುರೇಶ್ ರೈನಾ ಅವರು ತನ್ನ ಬಾಲ್ಯದ ಕೋಚ್ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.

    ಕ್ರಿಕೆಟ್ ಎಂಬ ಜಂಟಲ್‍ಮ್ಯಾನ್ ಕ್ರೀಡೆಗೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ ಸುರೇಶ್ ರೈನಾ ಅವರದ್ದು, ಮೈದಾನದಲ್ಲಿ ಶಾಂತವಾಗಿ ವರ್ತಿಸುವ ಅವರು ತನ್ನ ಬ್ಯಾಟ್ ಮೂಲಕವೇ ಕೆಣಕಿದವರಿಗೆ ಉತ್ತರ ಹೇಳುತ್ತಾರೆ. ಹಾಗೆಯೇ ಅವರು 2015ರಲ್ಲಿ ತನ್ನ ಬಾಲ್ಯದ ಗೆಳತಿ ಪ್ರಿಯಾಂಕ ಚೌಧರಿಯವರನ್ನು ಮದುವೆಯಾಗಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.

    ಸುರೇಶ್ ರೈನಾ ಮತ್ತು ಪ್ರಿಯಾಂಕ ಭಾರತ ಕ್ರಿಕೆಟ್ ತಂಡದಲ್ಲಿರುವ ಕ್ಯೂಟ್ ಜೋಡಿಗಳಲ್ಲಿ ಒಬ್ಬರು. ಇವರು ಬಹುಕಾಲದಿಂದ ಪ್ರೀತಿಸಿ ಮದುವೆಯಾಗಿದ್ದರು. ಇನ್ನೊಂದು ವಿಶೇಷವೆಂದರೆ ರೈನಾ ಅವರು ತನ್ನ ಬಾಲ್ಯದ ಕ್ರಿಕೆಟ್ ಕೋಚ್ ಮಗಳನ್ನೇ ವಿವಾಹವಾಗಿದ್ದಾರೆ. ಕ್ರಿಕೆಟ್ ಆಡುವ ಕನಸನ್ನು ಕಂಡಿದ್ದ ಸುರೇಶ್ ರೈನಾ, ತನ್ನ ಬಾಲ್ಯದಲ್ಲಿ ಕೋಚ್ ತೇಜ್‍ಪಾಲ್ ಚೌಧರಿಯವರ ಬಳಿ ಹೋಗಿದ್ದರು. ಈ ಕೋಚ್ ತೇಜ್‍ಪಾಲ್ ಅವರ ಮಗಳೇ ರೈನಾ ಅವರ ಪತ್ನಿ ಪ್ರಿಯಾಂಕ.

    ಮೊದಲಿಗೆ ತೇಜ್‍ಪಾಲ್ ಚೌಧರಿಯವರ ಜೊತೆ ಕ್ರಿಕೆಟ್ ಕಲಿಯುತ್ತಿದ್ದರು ರೈನಾ, ಪ್ರಿಯಾಂಕ ಅವರನ್ನು ನೋಡಿರಲಿಲ್ಲ. ಆದರೆ ನಂತರ ತೇಜ್‍ಪಾಲ್ ಅವರು ರೈನಾ ಅವರನ್ನು ಕುಟುಂಬದ ಕಾರ್ಯಕ್ರಮವೊಂದಕ್ಕೆ ಕರೆದಿದ್ದರಂತೆ. ಈ ಕಾರ್ಯಕ್ರಮಕ್ಕೆ ಹೋಗಿದ್ದ ರೈನಾ ಅಲ್ಲಿ ಪ್ರಿಯಾಂಕ ಅವರನ್ನು ನೋಡಿ ಇಷ್ಟಪಟ್ಟಿದ್ದಾರೆ. ನಂತರ ಪರಿಚಯವಾಗಿದೆ. ಪರಿಚಯ ಪ್ರೀತಿ ಆಗಿ ಡೇಟಿಂಗ್ ಮಾಡಿ ನಂತರ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ.

    ಬಾಲ್ಯದಿಂದಲೂ ಚೆನ್ನಾಗಿ ಓದುತ್ತಿದ್ದ ಪ್ರಿಯಾಂಕ ಅವರು, ಉತ್ತರ ಪ್ರದೇಶದ ಒಂದು ಉನ್ನತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ ಹಾಗೂ ಅವರು ನೆದರ್ ಲ್ಯಾಂಡ್‍ನಲ್ಲಿ ಬ್ಯಾಂಕ್‍ವೊಂದರಲ್ಲಿ ಕೆಲಸ ಕೂಡ ಮಾಡುತ್ತಿದ್ದರು. ಆದರೆ ಮದುವೆಯಾದ ನಂತರ ಅಲ್ಲಿಂದ ವಾಪಸ್ ಬಂದು ಇಲ್ಲಿ ಒಂದು ರೆಡಿಯೋ ಚಾನೆಲ್ ನಡೆಸುತ್ತಿದ್ದಾರೆ. ಜೊತೆಗೆ ಹಳ್ಳಿಗಾಡಿನ ಹೆಣ್ಣು ಮಕ್ಕಳ ದನಿಯಾಗಿದ್ದಾರೆ. ಅವರಿಗೆ ವಿದ್ಯಾಭ್ಯಾಸ, ಉಚಿತ ಆರೋಗ್ಯ ತಪಾಸಣೆ ಮಾಡಿಸುತ್ತಾರೆ.

    2015 ಏಪ್ರಿಲ್ 3ರಂದು ಪ್ರಿಯಾಂಕ ಮತ್ತು ರೈನಾ ದೆಹಲಿಯಲ್ಲಿ ಮದುವೆಯಾಗಿದ್ದರು. ಈ ಜೋಡಿಗೆ ಈಗ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಮೊದಲ ಹೆಣ್ಣು ಮಗು 2016ರಲ್ಲಿ ಜನಿಸಿತ್ತು. ಈ ಮಗುವೆಗೆ ಗ್ರೇಸಿಯಾ ರೈನಾ ಎಂದು ಹೆಸರಿಟ್ಟಿದ್ದಾರೆ. ಜೊತೆಗೆ ಈಗ ಇದೇ ವರ್ಷ ಮಾರ್ಚ್ 23ರಂದು ಎರಡನೇ ಮಗುವಿಗೆ ತಂದೆಯಾದ ರೈನಾಗೆ ಗಂಡು ಮಗು ಜನಿಸಿದೆ. ಈ ಮಗುವಿಗೆ ರಿಯೋ ರೈನಾ ಎಂದು ಹೆಸರಿಡಲಾಗಿದೆ.

    https://www.instagram.com/p/By2G5egBuXJ/

    ಸದ್ಯ ಟೀಂ ಇಂಡಿಯಾದಿಂದ ಕೊಂಚ ದೂರ ಉಳಿದಿರುವ ಸುರೇಶ್ ರೈನಾ, ಕೊನೆಯದಾಗಿ ಭಾರತ ಪರವಾಗಿ ಆಡಿದ್ದು 2018ರಲ್ಲಿ ಇದಾದ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ರೈನಾ ವಿಫಲರಾಗಿದ್ದಾರೆ. ಆದರೆ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುವ ರೈನಾ ಈ ಬಾರಿ ಆಡಲು ಭಾರೀ ಸಿದ್ಧತೆ ನಡೆಸಿದ್ದರು. ಈ ಹಿನ್ನೆಯಲ್ಲಿ ರೈನಾ ಧೋನಿ ಜೊತೆಗೂಡಿ ಅಭ್ಯಾಸ ಕೂಡ ನಡೆಸಿದ್ದರು. ಆದರೆ ಕೊರೊನಾ ಲಾಕ್‍ಡೌನ್ ನಿಂದ ಐಪಿಎಲ್ ಮುಂದಕ್ಕೆ ಹೋಗಿದೆ.

  • ಲೈಂಗಿಕ ಕಿರುಕುಳ ಆರೋಪ – ಮಹಿಳಾ ಕ್ರಿಕೆಟ್ ತಂಡದ ಕೋಚ್ ಅಮಾನತು

    ಲೈಂಗಿಕ ಕಿರುಕುಳ ಆರೋಪ – ಮಹಿಳಾ ಕ್ರಿಕೆಟ್ ತಂಡದ ಕೋಚ್ ಅಮಾನತು

    ಗಾಂಧಿನಗರ: ಲೈಂಗಿಕ ಕಿರುಕುಳ ಆರೋಪದ ಮೇಲೆ ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಮಹಿಳಾ ತಂಡದ ಕೋಚ್ ಅತುಲ್ ಬೆಡಾಡೆ ಅವರನ್ನು ಶನಿವಾರ ಅಮಾನತುಗೊಳಿಸಿದೆ.

    ಮಹಿಳಾ ಆಟಗಾರರು ಅತುಲ್ ಬೆಡಾಡೆ ಅವರ ಮೇಲೆ ಲೈಂಗಿಕ ಕಿರುಕುಳ ಮತ್ತು ಅನುಚಿತ ವರ್ತನೆ ಆರೋಪ ಮಾಡಿದ್ದಾರೆ. ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ನಡೆದ ಟೂರ್ನಿಯಲ್ಲಿ ಈ ಘಟನೆ ಸಂಭವಿಸಿದೆ. ಹೀಗಾಗಿ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ ಎಂದು ಬಿಸಿಎ ಕಾರ್ಯದರ್ಶಿ ಅಜಿತ್ ಲೆಲೆ ಹೇಳಿದ್ದಾರೆ.

    ಶೀಘ್ರದಲ್ಲೇ ಸಮಿತಿ ರಚಿಸಿ ತನಿಖೆ ಆರಂಭಿಸಲಾಗುವುದು. ಈ ಸಮಿತಿಯಲ್ಲಿ ಬಿಸಿಎ ಹೊರಗಿನಿಂದ ಒಬ್ಬ ಸದಸ್ಯರು ಇರಲಿದ್ದಾರೆ ಎಂದು ಬಿಸಿಎ ಹೇಳಿದೆ. ಆದರೆ ಆರೋಪವನ್ನು ಬೆಡಾಡೆ ತಳ್ಳಿಹಾಕಿದ್ದಾರೆ. ‘ನನ್ನ ಮೇಲಿನ ಎಲ್ಲಾ ಆರೋಪಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ.

    ಭಾರತದ ಪರ 13 ಏಕದಿನ ಪಂದ್ಯಗಳನ್ನು ಆಡಿರುವ ಬೆಡಾಡೆ ಅವರು 22.57 ಸರಾಸರಿಯಲ್ಲಿ 158 ರನ್ ಗಳಿಸಿದ್ದಾರೆ. ಅವರು ಬರೋಡಾದ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿದ್ದರು. ಬಳಿಕ ಅಂದ್ರೆ ಕಳೆದ ವರ್ಷ ಏಪ್ರಿಲ್‍ನಲ್ಲಿ ಮಹಿಳಾ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು.

  • ಕಿವೀಸ್ ಸ್ಪಿನ್ ದಿಗ್ಗಜ ವೆಟ್ಟೋರಿ ಈಗ ಏಷ್ಯಾದ ದುಬಾರಿ ಕೋಚ್

    ಕಿವೀಸ್ ಸ್ಪಿನ್ ದಿಗ್ಗಜ ವೆಟ್ಟೋರಿ ಈಗ ಏಷ್ಯಾದ ದುಬಾರಿ ಕೋಚ್

    – ಬಿಸಿಬಿಯಿಂದ ದಿನಕ್ಕೆ 2.5 ಲಕ್ಷ ರೂ. ವೇತನ

    ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿರುವ ಕಿವೀಸ್ ಸ್ಪಿನ್ ದಿಗ್ಗಜ ಡೇನಿಯಲ್ ವೆಟ್ಟೋರಿ ಅವರಿಗೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ (ಬಿಸಿಬಿ) ಪ್ರತಿದಿನಕ್ಕೆ 2.5 ಲಕ್ಷ ರೂ. ವೇತನ ನೀಡಲಿದೆ. ಈ ಮೂಲಕ ವೆಟ್ಟೋರಿ ಏಷ್ಯಾದ ದುಬಾರಿ ಬೌಲಿಂಗ್ ಕೋಚ್ ಎನಿಸಿಕೊಂಡಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿವರೆಗೆ ಬಾಂಗ್ಲಾದೇಶ ತಂಡವು ಭರ್ಜರಿ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಬಿಸಿಬಿ ತನ್ನ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ 40 ವರ್ಷದ ವೆಟ್ಟೋರಿ ಅವರನ್ನು ಕಳೆದ ತಿಂಗಳು ಆಯ್ಕೆ ಮಾಡಿಕೊಂಡಿತ್ತು. ಮಾತುಕತೆ ಪ್ರಕಾರ ಬಿಸಿಬಿ ವೆಟ್ಟೋರಿ ಅವರಿಗೆ ದಿನದ 3,571 ಅಮೆರಿಕನ್ ಡಾಲರ್ ವೇತನ ನಿಗದಿಪಡಿಸಿದೆ. ಅಂದರೆ ದಿನಕ್ಕೆ ಸುಮಾರು 2.5 ಲಕ್ಷ ರೂಪಾಯಿಯನ್ನು ಡೇನಿಯನ್ ವೆಟ್ಟೋರಿ ವೇತನವಾಗಿ ಪಡೆಯಲಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಬಾಂಗ್ಲಾದೇಶದ ಕ್ರಿಕೆಟ್ ವೆಬ್‍ಸೈಟ್, ಸ್ಪಿನ್ ಬೌಲಿಂಗ್ ಕೋಚ್ ವೆಟ್ಟೋರಿ ಶೇ. 30ರಷ್ಟು ತೆರಿಗೆ ರೂಪದಲ್ಲಿ ಕಟ್ಟಲಿದ್ದಾರೆ ಎಂದು ತಿಳಿಸಿದೆ. ಈಗಾಗಲೇ ಬಾಂಗ್ಲಾ ತಂಡವನ್ನು ಸೇರಿರುವ ವೆಟ್ಟೋರಿ ತರಬೇತಿ ಆರಂಭಿಸಿದ್ದಾರೆ. ಪ್ರತಿದಿನಕ್ಕೆ 2.5 ಲಕ್ಷ ರೂ. ವೇತನ ಪಡೆಯುತ್ತಿರುವ ವೆಟ್ಟೋರಿ ಏಷ್ಯಾದ ದುಬಾರಿ ಬೌಲಿಂಗ್ ಕೋಚ್ ಆಗಿದ್ದಾರೆ.

    ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಕೋಚಿಂಗ್ ಅವಧಿ ಮುಗಿದ ಮೇಲೆ ಬಿಸಿಬಿ ಡೇನಿಯಲ್ ವೆಟ್ಟೋರಿ ಅವರಿಗೆ ಮಣೆ ಹಾಕಿದೆ. ವೆಟ್ಟೋರಿ ಬಾಂಗ್ಲಾ ತಂಡಕ್ಕೆ ಅರೆಕಾಲಿಕ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

    ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ವೇಗಿಗಳದ್ದೇ ದರ್ಬಾರ್ ಆಗಿದ್ದ ಕಾಲದಲ್ಲಿ ಡೇನಿಯನ್ ವೆಟ್ಟೋರಿ ತಮ್ಮದೇ ಆದ ಛಾಪು ಮೂಡಿಸಿದ್ದರು. 18ನೇ ವಯಸ್ಸಿನಲ್ಲಿ ವೆಟ್ಟೋರಿ ಟೆಸ್ಟ್ ಕ್ರಿಕೆಟ್ ಕಣಕ್ಕಿಳಿದಿದ್ದರು. 1996-97ರಲ್ಲಿ ನ್ಯೂಜಿಲೆಂಡ್ ಪರ ಟೆಸ್ಟ್ ಸರಣಿ ಆಡುವ ಮೂಲಕ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು.

    ಎಡಗೈ ಸ್ಪಿನ್ನರ್ ವೆಟ್ಟೋರಿ ಟೆಸ್ಟ್ ಕ್ರಿಕೆಟ್‍ನಲ್ಲಿ 113 ಟೆಸ್ಟ್ ಪಂದ್ಯಗಳಿಂದ 362 ವಿಕೆಟ್ ಪಡೆದುಕೊಂಡು ನ್ಯೂಜಿಲೆಂಡ್ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ 15 ವಿಕೆಟ್ ಪಡೆದು ಭರ್ಜರಿ ಮಿಂಚಿದ್ದರು. ಒಟ್ಟಾರೆ ವಿಶ್ವಕಪ್ ಟೂರ್ನಿಗಳಲ್ಲಿ ವೆಟ್ಟೋರಿ 32 ಪಂದ್ಯಗಳಿಂದ 36 ವಿಕೆಟ್ ಪಡೆದಿದ್ದರು. ಟಿ-20 ಕ್ರಿಕೆಟ್‍ನಲ್ಲಿ 34 ವಿಕೆಟ್ ಪಡೆದು, 205 ರನ್ ಬಾರಿಸಿ ಮಿಂಚಿದ್ದರು.

    ಏಕದಿನ ಪಂದ್ಯಕ್ಕೆ ವಿದಾಯ ಹೇಳಿದ್ದ ವೆಟ್ಟೋರಿ ಅವರಿಗೆ ಐಪಿಎಲ್‍ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಣೆ ಹಾಕಿತ್ತು. ಆರ್.ಸಿ.ಬಿ ಕೋಚ್ ಆಗಿದ್ದ ವೆಟ್ಟೋರಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ.