Tag: ಕೊಹಿನೂರು ವಜ್ರ

  • ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ಯಾದಗಿರಿ: ಬ್ರಿಟನ್ (Britain) ರಾಣಿ ಎಲಿಜಬೆತ್ ನಿಧನದ ನಂತರ, ಅವರು ಧರಿಸುತ್ತಿದ್ದ ಕೊಹಿನೂರು ವಜ್ರದ ಕಿರೀಟದ ಕುರಿತು ಚರ್ಚೆ ಜೋರಾಗಿದೆ. ಎಲಿಜಬೆತ್ ರಾಣಿ ಧರಿಸುತ್ತಿದ್ದ ಕಿರೀಟದಲ್ಲಿದ್ದ ವಜ್ರ, ಇದು ಭಾರರತದದ್ದು ಎನ್ನುವುದು ಮತ್ತೆ ಮುನ್ನಲೆಗೆ ಬಂದಿದೆ. ಆದರೆ ಇದು ಕೃಷ್ಣಾನದಿ ತೀರದಲ್ಲಿ ದೊರೆತ ಡೈಮೆಂಡ್ ಆಗಿದ್ದು, ಕರ್ನಾಟಕದ ಸ್ವತ್ತು ಎನ್ನಲಾಗಿದೆ.

    ಬ್ರಿಟನ್ ರಾಣಿ 2ನೇ ಎಲಿಜಬೆತ್ (Rani Elizabeth) ನಿಧನ ನಂತರ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರ (Kohinuru Diamond) ದ ಮೂಲ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಜ್ರ ಭಾರತದ್ದು, ಅದರಲ್ಲೂ ಕರ್ನಾಟಕದ ಯಾದಗಿರಿ (Yadagiri) ಯಲ್ಲಿ ಸಿಕ್ಕಿದ್ದು ಅನ್ನಲು ಕೆಲವೊಂದು ದಾಖಲೆಗಳು ಸಿಕ್ಕಿವೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಹೊರ ಭಾಗದಲ್ಲಿ ಹರಿಯುತ ಕೃಷ್ಣಾ ನದಿ (Krishna River) ತೀರದಲ್ಲಿ ಸಿಕ್ಕಿತೆನ್ನಲಾಗ್ತಿದೆ.

    ವಜ್ರ ಸಿಕ್ಕ ಸ್ಥಳವೆಂದು ಸುರಪುರ ಇತಿಹಾಸ ಸಂಶೋಧನಾ ಕೇಂದ್ರದಿಂದ ನಾಮಫಲಕ ಹಾಕಲಾಗಿದೆ. ಡೈಮಂಡ್ ಸಿಕ್ಕ ಸ್ಥಳದಲ್ಲಿ ಮರಳು ಗಣಿಗಾರಿಕೆ ಕೂಡ ನಿಷೇಧ ಮಾಡಲಾಗಿದೆ. ಆದರೆ ವಜ್ರ ದೊರೆತ ಸ್ಥಳವು ಈಗ ಹಾಳುಕೊಂಪೆಯಾಗಿದೆ. ವಿಶ್ವ ಖ್ಯಾತಿ ಹೊಂದಿದ್ದ ವಜ್ರ ತರುವಲ್ಲಿ ವಿಫಲವಾಗಿರುವುದಕ್ಕೆ ಇತಿಹಾಸಕಾರ ಭಾಸ್ಕರ ರಾವ್ (Bhaskar Rao) ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

    1799ರಲ್ಲಿ ಬ್ರಿಟಿಷ್ ಕ್ಯಾಪ್ಟನ್ ಲಾರೆನ್ಸ್ ಪಂಜಾಬ್ (Punjab) ಗೆದ್ದ ನಂತರ ಖಜಾನೆಯಲ್ಲಿದ್ದ ವಜ್ರವು ಬ್ರಿಟಿಷ್‍ರು ದೋಚಿ ಕೊಂಡು ಹೋಗಿರುತ್ತಾರೆ. ಅದನ್ನೇ ರಾಣಿ ವಿಕ್ಟೋರಿಯಾ ಬ್ರೂಚ್‍ (Victoria Brooch) ರವರು ಕಿರೀಟದಲ್ಲಿ ಧರಿಸುತ್ತಾರೆ. ಆದರೆ ಮಹಿಳೆಯರು ಮಾತ್ರ ಕೊಹಿನೂರ್ ವಜ್ರವನ್ನ ಧರಿಸಬೇಕೆಂದು ಆದೇಶ ಮಾಡಿದ್ದ ಹಿನ್ನೆಲೆ, ನಂತರ ಬಂದ ರಾಣಿ ಎಲಿಜಬೆತ್ ಕೊಹಿನೂರು ವಜ್ರ ಕಿರೀಟ ಧರಿಸುತ್ತಾರೆ. ಇದೀಗ 2ನೇ ಎಲಿಜಬೆತ್ ನಿಧನ ನಂತರ ಕೊಹಿನೂರು ವಜ್ರದ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ.

    ಈ ವಜ್ರವು ಯಾದಗಿರಿ ಜಿಲ್ಲೆಗೆ ಸೇರಿದ್ದು ಎಂದು ಸಂಸದ ಜಿ.ಸಿ.ಚಂದ್ರಶೇಖರ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ನಮ್ಮ ಸ್ವತ್ತನ್ನು ನಮ್ಮ ದೇಶಕ್ಕೆ ತರುವ ಪ್ರಯತ್ನ ಮಾಡ್ಬೇಕು ಎನ್ನಲಾಗ್ತಿದೆ. ಆದರೆ ವಿಶ್ವ ಖ್ಯಾತಿ ಹೊಂದಿದ್ದ ಡೈಮಂಡ್ ವಿಚಾರವಾಗಿ ಮತ್ತೊಂದೆಡೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಸಿಕ್ಕಿದ್ದು ಅಂತಾ ವೆಬ್‍ಸೈಟ್‍ಗಳಲ್ಲಿ ಸ್ವಲ್ಪ ಗೊಂದಲ ಸೃಷ್ಟಿಸುತ್ತಿವೆ. ಅದೇನೇ ಇರಲಿ ಕೊಹಿನೂರ್ ವಜ್ರ ಕರ್ನಾಟಕದ್ದೇ ಎನ್ನುವುಕ್ಕೆ ರಾಜ್ಯದಲ್ಲಿ ಸಾಕಷ್ಟು ಪುರಾವೆಗಳು ಇವೆ.

    ಒಟ್ಟಿನಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ (Narenra Modi) ಅವರು ಕೊಹಿನೂರು ವಜ್ರವನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನ ಮಾಡುತ್ತಾರಾ ಎಂಬ ಪ್ರಶ್ನೆ ಕಾಡುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ರಾಣಿ ಎಲಿಜಬೆತ್ 2ರ ಬಳಿಕ ಕೊಹಿನೂರು ಯಾರಿಗೆ ಸಿಗಲಿದೆ?

    ಲಂಡನ್: 800 ವರ್ಷಗಳ ಭಾರತದ ಇತಿಹಾಸ ಹೊಂದಿರುವ ಕೊಹಿನೂರು ವಜ್ರ 1937ರಲ್ಲಿ ಬ್ರಿಟಿಷ್ ರಾಣಿಯ ಕಿರೀಟ ಸೇರಿತ್ತು. ಈ ಬೆಲೆಬಾಳುವ ವಜ್ರ ಹೊಂದಿರುವ ಕಿರೀಟ ರಾಣಿ ಎಲಿಜಬೆತ್ 2ರ ಬಳಿಕ ಯಾರಿಗೆ ಹಸ್ತಾಂತರಿಸಲಿದ್ದಾರೆ ಎಂಬುದರ ಬಗ್ಗೆ ಇತ್ತೀಚೆಗೆ ವರದಿಯಾಗಿದೆ.

    ರಾಣಿ ಎಲಿಜಬೆತ್ ಅವರ ಹಿರಿಯ ಪುತ್ರ ಪ್ರಿನ್ಸ್ ಚಾಲ್ರ್ಸ್ ಮುಂದಿನ ವರ್ಷ ಉತ್ತರಾಧಿಕಾರವನ್ನು ವಹಿಸಿಕೊಳ್ಳಿದ್ದು, ಅವರ ಪತ್ನಿ ಡಚೆಸ್ ಆಫ್ ಕಾರ್ನ್‍ವಾಲ್ ಕ್ಯಾಮಿಲ್ಲಾ ವಿಶ್ವಪ್ರಸಿದ್ಧ ಕೊಹಿನೂರು ವಜ್ರವಿರುವ ಕಿರೀಟವನ್ನು ತೊಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶುಭ ಸುದ್ದಿ – ಅಂತಿಮ ಹಂತದಲ್ಲಿದೆ 5ಜಿ ನೆಟ್ವರ್ಕ್

    ಇಂಗ್ಲೆಂಡ್ ರಾಣಿಗೆ ಸೇರಿರುವ ಕಿರೀಟ ಪ್ಲಾಟಿನಂ ನಿಂದ ಮಾಡಲ್ಪಟ್ಟಿದೆ. ವಿಶ್ವ ವಿಖ್ಯಾತ ಕೊಹಿನೂರು ವಜ್ರದೊಂದಿಗೆ 2,800 ವಜ್ರಗಳು ಈ ಕಿರೀಟದಲ್ಲಿದೆ. ಈ ಕಿರೀಟವನ್ನು 1937ರಲ್ಲಿ ಕಿಂಗ್ ಜಾರ್ಜ್ 6 ರ ಪಟ್ಟಾಭಿಷೇಕಕ್ಕಾಗಿ ಮಾಡಲಾಗಿತ್ತು. 105-ಕ್ಯಾರೆಟ್ ಹೊಂದಿರುವ ಕೊಹಿನೂರು ವಜ್ರವನ್ನು ಕಿರೀಟದ ಮುಂಭಾಗದಲ್ಲಿರುವ ಶಿಲುಬೆಗೆ ಜೋಡಿಸಲಾಗಿದೆ. ಇದನ್ನೂ ಓದಿ: ಸಂವಿಧಾನವೇ ನನಗೆ ಭಗವದ್ಗೀತೆ, ಭಾವನೆಗಳ ಆಧಾರದಲ್ಲಿ ಆದೇಶ ಕೊಡಲು ಆಗಲ್ಲ: ಹಿಜಬ್‌ ವಿವಾದ ಕೋರ್ಟ್‌ನಲ್ಲಿ ಏನಾಯ್ತು?

    ಪ್ರಿನ್ಸ್ ಚಾಲ್ರ್ಸ್ ರಾಜನಾದಾಗ ಡಚೆಸ್ ಕ್ಯಾಮಿಲ್ಲಾಗೆ ರಾಣಿ ಪತ್ನಿ ಎಂಬ ಬಿರುದನ್ನು ನೀಡಲಾಗುವುದು ಎಂದು ಇಂಗ್ಲೆಂಡ್ ರಾಣಿ ಇತ್ತೀಚೆಗೆ ಘೋಷಿಸಿದರು. ಪ್ರಿನ್ಸ್ ಚಾಲ್ರ್ಸ್‍ನ ಪಟ್ಟಾಭಿಷೇಕದ ಸಮಯದಲ್ಲಿ ರಾಣಿ ಪತ್ನಿಯಾಗಿ ಕ್ಯಾಮಿಲ್ಲಾಗೆ ಕೊಹಿನೂರ್ ಕಿರೀಟವನ್ನು ಹಸ್ತಾಂತರಿಸಲಾಗುತ್ತದೆ.