Tag: ಕೊಹಿನೂರು

  • ಉಕ್ರೇನ್ ವಿರುದ್ಧ ಯುದ್ಧ – ಚರ್ಚೆಯಾಗುತ್ತಿದೆ ಭಾರತದ ಐತಿಹಾಸಿಕ ಕೊಹಿನೂರು ವಜ್ರ

    ಉಕ್ರೇನ್ ವಿರುದ್ಧ ಯುದ್ಧ – ಚರ್ಚೆಯಾಗುತ್ತಿದೆ ಭಾರತದ ಐತಿಹಾಸಿಕ ಕೊಹಿನೂರು ವಜ್ರ

    ಬೆಂಗಳೂರು: ಉಕ್ರೇನ್ ವಿರುದ್ಧದ ರಷ್ಯಾ ಯುದ್ಧ ಸಂಬಂಧ ಭಾರೀ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬ್ರಿಟನ್ ಮೂಲದ ಸುದ್ದಿ ನಿರೂಪಕನೊಬ್ಬನ ಟ್ವೀಟ್‍ನಿಂದ ಭಾರತದ ಕೊಹಿನೂರು ವಜ್ರದ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.

    ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಬಗ್ಗೆ ಬುಧವಾರ ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನ ನಡೆದಿದೆ. ಈ ಅಧಿವೇಶನದಲ್ಲಿ ಭಾರತ ಉಕ್ರೇನ್ ಅಥವಾ ರಷ್ಯಾದ ಪರವಾಗಿ ಮತ ಚಲಾಯಿಸದೇ ದೂರ ಉಳಿದಿದ್ದು, ಇದಕ್ಕೆ ಬ್ರಿಟನ್ ಮೂಲದ ಸುದ್ದಿ ನಿರೂಪಕನೊಬ್ಬ ಭಾರತದ ವಿರುದ್ಧವಾಗಿ ಟ್ವೀಟ್ ಮಾಡಿದ್ದ.

    ಭಾರತ ಹಾಗೂ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ನಡೆದ ಅಧಿವೇಶನದಲ್ಲಿ ಯಾವ ದೇಶಕ್ಕೂ ಮತ ಹಾಕದೇ ಇರುವಾಗ ಜಿಬಿ ನ್ಯೂಸ್‍ನ ನಿರೂಪಕ ಯಾವುದೇ ದೇಶಕ್ಕೆ ಮತ ಹಾಕದೇ ಇರುವ ಭಾರತ ಹಾಗೂ ಪಾಕಿಸ್ತಾನ ನಾಚಿಕೆಯಿಂದ ನೇಣು ಹಾಕಿಕೊಳ್ಳಬೇಕು. ಈ ಎರಡೂ ದೇಶಗಳು ಬ್ರಿಟನ್‍ನಿಂದ ಸ್ವಲ್ಪವೂ ಸಹಾಯ ಕೇಳಲು ಅರ್ಹವಲ್ಲ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ – ದಕ್ಷಿಣ ಏಷ್ಯಾ ರಾಷ್ಟ್ರಗಳು ಯಾರ ಪರ?

    ಈ ಹೇಳಿಕೆಗೆ ಭಾರತೀಯ ಟ್ವಿಟ್ಟರ್ ಬಳಕೆದಾರರು ಕೊಹಿನೂರು ವಿಚಾರವನ್ನು ಎಳೆದು ಹಾಕಿದ್ದಾರೆ. ಈ ಮೂಲಕ ಬ್ರಿಟನ್ ಸುದ್ದಿ ನಿರೂಪಕನೊಂದಿಗೆ ಟ್ಟಿಟ್ಟರ್‌ನಲ್ಲಿ ಯುದ್ಧ ಪ್ರಾರಂಭಿಸಿದ್ದಾರೆ. ಬ್ರಿಟನ್ ಸುದ್ದಿ ಸಂಸ್ಥೆಯ ನಿರೂಪಕನ ಟ್ವೀಟ್‍ಗೆ ಕಿಡಿಯಾದ ಭಾರತೀಯರು ಕಾಲ್ಕಿತ್ತು ಕೊಹಿನೂರು ವಿಚಾರವಾಗಿ ವಾಗ್ದಾಳಿ ಪ್ರಾರಂಭಿಸಿದ್ದಾರೆ.

    ಭಾರತದ ಆರ್ಥಿಕತೆ ನಿಮಗಿಂತಲೂ ದೊಡ್ಡದಾಗಿದೆ. ಇದೀಗ ನೀವು ಕದ್ದುಕೊಂಡು ಹೋಗಿರುವ ಕೊಹಿನೂರು ವಜ್ರವನ್ನು ಹಿಂದಿರುಗಿಸಬೇಕಾಗಿರುವುದಷ್ಟೇ ಬಾಕಿ ಎಂದು ಕೆಲವರು ಟ್ವಿಟ್ಟರ್‌ನಲ್ಲಿ ಕಾಲೆಳೆದಿದ್ದಾರೆ.

    ನಾವು ಸಹಾಯ ಕೇಳುವುದಕ್ಕೂ ಮೊದಲು ಭಾರತವನ್ನು ಲೂಟಿ ಮಾಡಿರುವ ನಮ್ಮ 45 ಟ್ರಿಲಿಯನ್ ಡಾಲರ್‍ಅನ್ನು ಹಿಂದಿರುಗಿಸಿ. ನಮ್ಮ ಎಲ್ಲಾ ಅಮೂಲ್ಯ ಸಂಪತ್ತು, ಐತಿಹಾಸಿಕ ಕಲಾಕೃತಿಗಳು ಹಾಗೂ ಕೊಹಿನೂರು ವಜ್ರವನ್ನು ಹಿಂದಿರುಗಿಸಿ ಎಂದು ಇನ್ನೊಬ್ಬರು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಬ್ರಿಟಿಷರು ಕೇವಲ ಕೊಹಿನೂರನ್ನಷ್ಟೇ ಕದ್ದುಕೊಂಡು ಹೋಗಿಲ್ಲ. ಕೊಡಗಿನ ರಾಜಕುಮಾರಿ ಗೌರಮ್ಮನನ್ನು ಕೂಡಾ ಹೊತ್ತೊಯ್ದಿದ್ದಾರೆ. ಆಕೆಯ ಮತಾಂತರ ಮಾಡಿ ಕರೆದುಕೊಂಡು ಹೋಗಲಾಗಿತ್ತು ಎಂದಿದ್ದಾರೆ.

    ನಿಮ್ಮ ವಸ್ತು ಸಂಗ್ರಹಾಲಯಗಳಲ್ಲಿ ವಿದೇಶದಿಂದ ಕದ್ದಿರುವ ವಸ್ತುಗಳೇ ತುಂಬಿ ತುಳುಕುತ್ತಿವೆ. ಕೊಹಿನೂರು ಕೂಡಾ ಅವುಗಳಲ್ಲೊಂದು ಎಂದು ವ್ಯಂಗ್ಯ ಮಾಡಿದ್ದಾರೆ. ನಾವು ನೇಣು ಹಾಕಿಕೊಳ್ಳುವುದಕ್ಕೂ ಮೊದಲು ನೀವು ನಮ್ಮ ಕೊಹಿನೂರು ಹಾಗೂ ಲೂಟಿ ಮಾಡಿರುವ ಎಲ್ಲಾ ಹಣವನ್ನು ಹಿಂದಿರುಗಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.