Tag: ಕೊಳ್ಳೇಗಾಲ

  • ಹನಿಟ್ರ್ಯಾಪ್ ಬಲೆಯಲ್ಲಿ ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷಿ!

    ಹನಿಟ್ರ್ಯಾಪ್ ಬಲೆಯಲ್ಲಿ ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷಿ!

    ಚಾಮರಾಜನಗರ: ಕೊಳ್ಳೇಗಾಲದ ಜ್ಯೋತಿಷಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿ 20 ಲಕ್ಷ ರೂ. ಸೂಲಿಗೆ ಮಾಡಿದ್ದ ಖರೀಮರನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ಹೆಸರುಘಟ್ಟ ನಿವಾಸಿಗಳಾದ ಸರೋಜಮ್ಮ, ರತ್ನಮ್ಮ, ಬಸವರಾಜು ಬಂಧಿತ ಆರೋಪಿಗಳಾಗಿದ್ದು, ಖ್ಯಾತ ಜ್ಯೋತಿಷಿ ರಾಘವನ್ ಗುರಿಯಾಗಿಸಿ ಹನಿಟ್ರ್ಯಾಪ್ ನಡೆಸಿ ಬಲೆಗೆ ಬೀಳಿಸಿದ್ದರು.

    ಜ್ಯೋತಿಷಿ ರಾಘವನ್ ಸರೋಜಮ್ಮಳೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಆರೋಪಿಗಳು ಬ್ಲಾಕ್ ಮೇಲ್ ಮಾಡುಲು ಆರಂಭಿಸಿದ್ದರು. ಅಲ್ಲದೇ ಸುಮಾರು 20 ಲಕ್ಷ ರೂ. ಸುಲಿಗೆ ಮಾಡಿ, ಇನ್ನೂ 50 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು.

    ಆರೋಪಿಗಳ ಕಿರುಕುಳದಿಂದ ಬೇಸತ್ತ ರಾಘವನ್ ಕೊಳ್ಳೇಗಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಕೊಳ್ಳೆಗಾಲದಲ್ಲಿ ನೇಣು ಬಿಗಿದುಕೊಂಡ ನೇಪಾಳದ ಯುವಕ

    ಕೊಳ್ಳೆಗಾಲದಲ್ಲಿ ನೇಣು ಬಿಗಿದುಕೊಂಡ ನೇಪಾಳದ ಯುವಕ

    ಚಾಮರಾಜನಗರ: ನೇಪಾಳದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.

    ಕೊಳ್ಳೇಗಾಲದ ಓಂ ಶಕ್ತಿ ದೇವಸ್ಥಾನದ ರಸ್ತೆಯ ಚಿಲ್ಲರೆ ಅಂಗಡಿಯೊಂದರ ಬಳಿ ಘಟನೆ ನಡೆದಿದ್ದು, ಅತಿನ್ ಖಡ್ಕ (28) ಎಂಬಾತ ನೇಣಿಗೆ ಶರಣಾಗಿರುವ ನೇಪಾಳಿ ಯುವಕ. ಮೃತ ಯುವಕನ ಬಟ್ಟೆಯಲ್ಲಿ ದೊರೆತ ಪಾಸ್ ಪೋರ್ಟ್‍ನಿಂದ ಹೆಸರು ವಿಳಾಸ ತಿಳಿದು ಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

    ಚಿಲ್ಲರೆ ಅಂಗಡಿಯೊಂದರ ಮುಂಭಾಗದ ಸಜ್ಜೆಗೆ ಅಳವಡಿಸಲಾಗಿದ್ದ ಕಬ್ಬಿಣದ ಕೊಕ್ಕೆಗೆ ಪ್ಲಾಸ್ಟಿಕ್ ವೈರ್‍ನಿಂದ ನೇಣು ಬಿಗಿದುಕೊಂಡಿದ್ದಾನೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಅಕಸ್ಮಿಕವಾಗಿ ಹೊರ ಬಂದ ಸ್ಥಳೀಯ ನಿವಾಸಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಪರಿಶೀಲಿಸಿ, ಮೃತನ ವಾರಸುದಾರರ ಪತ್ತೆಗಾಗಿ ಒಡೆಯರಪಾಳ್ಯ ಟಿಬೆಟ್ ಕ್ಯಾಂಪ್‍ಗೆ ಮಾಹಿತಿ ನೀಡಿದ್ದರೆ. ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಇರಿಸಲಾಗಿದೆ.

  • ಸುಳ್ವಾಡಿ ಪ್ರಸಾದ ದುರಂತ – ರಾತ್ರೋರಾತ್ರಿ ಸಾಲೂರು ಮಠದ ಇಮ್ಮಡಿ ಶ್ರೀ ವಶಕ್ಕೆ

    ಸುಳ್ವಾಡಿ ಪ್ರಸಾದ ದುರಂತ – ರಾತ್ರೋರಾತ್ರಿ ಸಾಲೂರು ಮಠದ ಇಮ್ಮಡಿ ಶ್ರೀ ವಶಕ್ಕೆ

    ಚಾಮರಾಜನಗರ: ಸುಳ್ವಾಡಿ ಮಾರಮ್ಮನ ಪ್ರಸಾದ ದುರಂತ ಪ್ರಕರಣಕ್ಕೆ ಬಿಗ್‍ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಸಾಲೂರು ಮಠದ ಇಮ್ಮಡಿ ಮಹದೇವ ಶ್ರೀಗಳನ್ನು ಪೊಲೀಸರು ಕೊಳ್ಳೇಗಾಲದ ಮಠದಿಂದ ವಶಕ್ಕೆ ಪಡೆದಿದ್ದಾರೆ.

    ಈಗಾಗಲೇ ಪೊಲೀಸರ ವಶದಲ್ಲಿರುವ ಮ್ಯಾನೇಜರ್ ಮಾದೇಶ್ ಪತ್ನಿ ಅಂಬಿಕಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಅಂಬಿಕಾ, ದೇವಾಲಯ ಆಡಳಿತ ಮಂಡಳಿ ಮತ್ತು ಟ್ರಸ್ಟಿಗಳ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಮಾಹಿತಿ ನೀಡಿದ್ದಾಳೆ ಎನ್ನುವ ಮಾಹಿತಿ ಸಿಕ್ಕಿದೆ. ಅಲ್ಲದೆ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಕೈವಾಡವಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪ್ರಸಾದದಲ್ಲಿ ವಿಷ ಕೇಸ್: ಅಂದು ಕೂಲಿ ಕಾರ್ಮಿಕ -ಇಂದು ಐಷಾರಾಮಿ ಮನೆಯ ಒಡೆಯ!

    ಈ ವಿಚಾರ ಗೊತ್ತಾದ ಕೂಡಲೇ ಪೊಲೀಸರು ಸಾಲೂರು ಮಠದತ್ತ ತೆರಳಿದ್ದರು. ಆದರೆ ಮಹದೇವಸ್ವಾಮಿ ಅಲ್ಲಿರಲಿಲ್ಲ. ಬಳಿಕ ಸ್ವಾಮೀಜಿ ಕೊಳ್ಳೇಗಾಲದ ಸಂಸ್ಕೃತ ಪಾಠ ಶಾಲೆಯಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಲ್ಲಿಗೆ ತೆರಳಿ ತೀವ್ರ ವಿಚಾರಣೆಯ ಬಳಿಕ ವಶಕ್ಕೆ ಪಡೆದರು. ಇದನ್ನೂ ಓದಿ:ತಾಯಿ ಮೃತಪಟ್ಟ ಮರುದಿನವೇ ಪರೀಕ್ಷೆ ಬರೆದ ಮೂವರು ಮಕ್ಕಳು – ಮನಕಲಕುವ ದೃಶ್ಯ

    ಇದರ ಬೆನ್ನಲ್ಲೇ ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ನಾಲ್ವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಆದರೆ ಅವರನ್ನು ಎಲ್ಲಿಗೆ ಕರೆದೊಯ್ದಿದ್ದಾರೆ ಎನ್ನುವುದು ಮಾತ್ರ ಇನ್ನೂ ಖಚಿತವಾಗಿಲ್ಲ. ಈವರೆಗೆ ಒಟ್ಟು 10 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಲ್ಲಿ ಟ್ರಸ್ಟಿಗಳು, ಇಬ್ಬರು ಚಾಲಕರೂ ಸೇರಿದ್ದಾರೆ. ಇದನ್ನೂ ಓದಿ:ಪಬ್ಲಿಕ್ ಟಿವಿ ವರದಿ ನಂತ್ರ ಎಚ್ಚೆತ್ತ ಪುಟ್ಟರಂಗ ಶೆಟ್ಟಿ – ಮೃತರ ಮನೆಗಳಿಗೆ ಹೋಗಿ ಪರಿಹಾರ ವಿತರಣೆ

     

    ಎರಡನೇ ಬಾರಿ ವಿಚಾರಣೆ:
    ಭಾನುವಾರ ಕೊಳ್ಳೇಗಾಲದ ಸಾಲೂರು ಮಠದ ಐಟಿಐ ಕಾಲೇಜಿನಲ್ಲಿ ಇಮ್ಮಡಿ ಮಹದೇವ ಸ್ವಾಮೀಜಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಮೊದಲ ಹಂತದ ವಿಚಾರಣೆ ಬಳಿಕ ಇಮ್ಮಡಿ ಮಹದೇವ ಸ್ವಾಮೀಜಿ ಸೋಮವಾರ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಧಿಕ ರಕ್ತದೊತ್ತಡ ಇತ್ತು ಅಂತ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಸ್ವಾಮೀಜಿ, ಬುಧವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ವಾಪಸ್ ಆಗಿದ್ದರು. ಸ್ವಾಮೀಜಿಯವರ ಈ ನಡೆ ಅಲ್ಲಿನ ಜನಸಾಮಾನ್ಯರಲ್ಲಿ ಅನುಮಾನ ಉಂಟು ಮಾಡಿತ್ತು. ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವ ಸ್ವಾಮೀಜಿಯವರು ಮಾರಮ್ಮ ದೇವಸ್ಥಾನದ ಪ್ರತಿ ಸಣ್ಣ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿದ್ದರು. ಆದ್ರೆ ದುರಂತ ನಡೆದ ಕಾರ್ಯಕ್ರಮದಂದು ನಾನು ಬರಲ್ಲ. ನೀವೇ ಕಾರ್ಯಕ್ರಮ ಮಾಡಿ ಅಂತ ಹೇಳಿ ಗೈರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಸ್ವಸ್ಥರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸುತ್ತೆ- ಸಚಿವ ಪುಟ್ಟರಂಗಶೆಟ್ಟಿ

    ಅಸ್ವಸ್ಥರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸುತ್ತೆ- ಸಚಿವ ಪುಟ್ಟರಂಗಶೆಟ್ಟಿ

    – ಮೃತರ ಕುಟುಂಬಗಳಿಗೆ ಸ್ಥಳದಲ್ಲೇ 25 ಸಾವಿರ ನೀಡಿದ್ರು

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಿ ದೇವಾಲಯದಲ್ಲಿ ಪ್ರಸಾದ ಸೇವನೆಯಿಂದ ಅಸ್ವಸ್ಥರಾದವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

    ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಪ್ರಸಾದ ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೆಯೇ ಮೃತರ ಕುಟುಂಬದವರಿಗೆ ಸ್ಥಳದಲ್ಲೇ 25 ಸಾವಿರ ಹಣ ನೀಡಿದರು. ಅಲ್ಲದೆ ಪ್ರಸಾದ ಸೇವನೆಯಿಂದ ಇದೂವರೆಗೆ 11 ಜನರು ಪ್ರಾಣ ಬಿಟ್ಟಿದ್ದಾರೆ. ಕೊಳ್ಳೇಗಾಲ ಹಾಗೂ ಮೈಸೂರು ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದೆ. ಮಾರಮ್ಮನ ಪ್ರಸಾದ ಸೇವಿಸಿ ಭಕ್ತಾದಿಗಳು ಸಾವನ್ನಪ್ಪಿರುವುದು ವಿಪರ್ಯಾಸ. ಪ್ರಸಾದದಲ್ಲಿ ವಿಷ ಸೇರಿಸಿ ಹೀಗೆ ಅಮಾಯಕರ ಬಲಿ ಪಡೆದಿರೋ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಂತಾಪ ಸೂಚಿಸಿದರು.

    ಸಚಿವ ಪುಟ್ಟರಂಗಶೆಟ್ಟಿ ಅವರ ಜೊತೆ ಹನೂರು ಶಾಸಕ ಆರ್ ನರೇಂದ್ರ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಷ್ಟೆ ಅಲ್ಲದೆ ಈಗಾಗಲೇ ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗೌಪ್ಯವಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಅದರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಈ ಪ್ರಕರಣ ಸಂಬಂಧಿತ ತನಿಖೆಗಾಗಿ ಉನ್ನತ ಅಧಿಕಾರಿಗಳನ್ನೇ ನೇಮಿಸಲಾಗುತ್ತದೆ. ಮೈಸೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಅಸ್ವಸ್ಥರ ಚಿಕಿತ್ಸೆಗೆಂದು ಹೆಚ್ಚುವರಿ ವೈದ್ಯರನ್ನು ನೇಮಿಸಿದ್ದೇವೆ. ಈ ಘಟನೆ ಸಂಬಂಧಿತ ಯಾವುದೇ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ಸಚಿವ ಮಹೇಶ್: ವಿಡಿಯೋ ವೈರಲ್

    ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ಸಚಿವ ಮಹೇಶ್: ವಿಡಿಯೋ ವೈರಲ್

    ಚಾಮರಾಜನಗರ: ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಳ್ಳೇಗಾಲ ಮತಕ್ಷೇತ್ರದಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ಮಹೇಶ್ ಅವರು ಗೆಲುವು ಸಾಧಿಸಿ ಸಚಿವರಾಗಿದ್ದಾರೆ. ಎನ್.ಮಹೇಶ್ ಅವರು ಕೆಲವು ದಿನಗಳ ಹಿಂದಷ್ಟೇ ಸುತ್ತೂರು ಶ್ರೀಗಳ ಕಾಲಿಗೆ ಬಿದ್ದು ನಮಸ್ಕರಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದರು. ಇದರ ಬೆನ್ನಲ್ಲೆ ಈಗ ಅಮ್ಮ ಭಗವಾನ್ ಎಂಬ ಸ್ವಾಮೀಜಿಯ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ, ಭಾರೀ ಪ್ರಮಾಣದ ಟೀಕೆಗಳು ಕೇಳಿಬರುತ್ತಿದ್ದು, ಈ ಕುರಿತು ಅಂಬೇಡ್ಕರ್‍ವಾದಿಗಳು ಅಸಮಾಧಾನ ವ್ಯಕ್ತಡಿಸಿದ್ದಾರೆ. ಅಂಬೇಡ್ಕರ್ ವಿಚಾರಧಾರೆಯನ್ನು ಊರೆಲ್ಲ ಹರಡಿ, ಈಗ ಅವರ ಸ್ವಾಭಿಮಾನವನ್ನು ಹರಾಜು ಹಾಕುವ ಕೃತ್ಯವನ್ನು ಎನ್.ಮಹೇಶ್ ಮಾಡುತ್ತಿದ್ದಾರೆ. ಅಂಬೇಡ್ಕರ್ ಸ್ವಾಭಿಮಾನದ ಚಿಂತನೆಯನ್ನು ಸ್ವಾಮೀಜಿ ಚಪ್ಪಲಿ ತಳಕ್ಕಿಟ್ಟಿದ್ದು, ಬಿಎಸ್‍ಪಿ ಹಾಗೂ ಅಂಬೇಡ್ಕರಿಸಮ್ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಬೆಂಬಲಿಗರು ಕಮೆಂಟ್ ಮಾಡುತ್ತಿದ್ದಾರೆ.

    https://youtu.be/jg2vq0ZAyTc

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎನ್ ಮಹೇಶ್, ಚುನಾವಣೆ ಪ್ರಚಾರಕ್ಕಾಗಿ ಕೊಳ್ಳೇಗಾಲಕ್ಕೆ ಹೋಗಿದ್ದೆ. ಈ ವೇಳೆ ಸ್ಥಳೀಯರು ನೀವು ಪೂಜೆ ಮಾಡಿ ಒಳ್ಳೆದಾಗುತ್ತದೆ ಎಂದು ಹೇಳಿದರು. ಅವರ ಮನಸ್ಸಿಗೆ ಧಕ್ಕೆ ತರಬಾರದು ಎನ್ನುವುದಕ್ಕೆ ನಾನು ಪಾದ ಪೂಜೆ ಮಾಡಿದ್ದು ಸತ್ಯ. ಆದರೆ ನಾವು ಯಾವುದೇ ಧರ್ಮಕ್ಕೆ ಸೇರಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಉಳಿದ ಧರ್ಮಗಳನ್ನು ಗೌರವಿಸಬೇಕಾಗುತ್ತದೆ. ನಾನು ಚರ್ಮಕ್ಕೆ ಪಾದರಕ್ಷೆ ಮುಟ್ಟಿಸಿಕೊಂಡಿಲ್ಲ, ಬಟ್ಟೆಗೆ ಮುಟ್ಟಿಸಿಕೊಂಡಿರುವೆ. ನಾನು ಅಂಬೇಡ್ಕರ್ ಸಿದ್ಧಾಂತಗಳಿಗೆ ಧಕ್ಕೆ ತಂದಿದ್ದೇನೆ ಎಂದು ಕೆಲವರು ದೂರಿದ್ದಾರೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ. ನಾನು ಕಟ್ಟಾ ಅಂಬೇಡ್ಕರ್‍ವಾದಿ ಎಂದಿದ್ದಾರೆ.

  • ಉರುಳಿಗೆ ಸಿಲುಕಿ ನರಳುತ್ತಿದ್ದ ಜಿಂಕೆಯನ್ನು ರಕ್ಷಿಸಿದ ಯುವಕರು

    ಉರುಳಿಗೆ ಸಿಲುಕಿ ನರಳುತ್ತಿದ್ದ ಜಿಂಕೆಯನ್ನು ರಕ್ಷಿಸಿದ ಯುವಕರು

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ಜೀವಿಧಾಮದಲ್ಲಿ ಉರುಳಿಗೆ ಸಿಲುಕಿ ನರಳುತ್ತಿದ್ದ ಜಿಂಕೆ ಮತ್ತು ಜಿಂಕೆ ಮರಿಯನ್ನು ಯುವಕರು ರಕ್ಷಿಸಿದ್ದಾರೆ.

    ಕೊಳ್ಳೆಗಾಲ ತಾಲೂಕಿನ ಚಿಕ್ಕಲ್ಲೂರುನಿಂದ ಮುತ್ತತ್ತಿಗೆ ಹೋಗುವ ದಾರಿಯಲ್ಲಿ ಜಿಂಕೆಯ ಚೀರಾಟ ಕೇಳುತಿತ್ತು. ಕೂಡಲೇ ಈ ಸ್ಥಳದ ಮೂಲಕ ತೆರಳುತ್ತಿದ್ದ ಯುವಕರು ಜಿಂಕೆ ಮತ್ತು ಜಿಂಕೆ ಮರಿಯನ್ನು ರಕ್ಷಣೆ ಮಾಡಿದ್ದಾರೆ.

    ಸಾಮಾನ್ಯವಾಗಿ ಉರುಳನ್ನು ಬೇಟೆಗಾರರು ಮೊಲ ಹಾಗೂ ಹಂದಿಯನ್ನು ಹಿಡಿಯಲು ಕಾಡಿನಲ್ಲಿ ಉರುಳನ್ನು ಹಾಕಿರುತ್ತಾರೆ.

    ಬಹಳಷ್ಟು ಸಲ ದೊಡ್ಡ ಪ್ರಾಣಿಗಳಾದ ಹುಲಿ ಚಿರತೆಗಳಂತ ಪ್ರಾಣಿಗಳೇ ಈ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆಗಳು ಬಹಳಷ್ಟು ಸಂದರ್ಭದಲ್ಲಿ ಆಗಿವೆ. ಈ ಬಗ್ಗೆ ಅರಣ್ಯ ಇಲಾಖೆ ಸಾಕಷ್ಟು ಕ್ರಮ ವಹಿಸಿದ್ದರೂ ಬೇಟೆಗಾರರು ಮಾಂಸಕ್ಕಾಗಿ ತಮ್ಮ ಚಾಳಿಯನ್ನು ಬಿಡುತ್ತಿಲ್ಲ.

     

    https://youtu.be/vlD6prhb0xQ

     

  • ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಭತ್ತ ನಾಟಿ ಮಾಡಿ ಸಾರ್ವಜನಿಕರ ಪ್ರತಿಭಟನೆ

    ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಭತ್ತ ನಾಟಿ ಮಾಡಿ ಸಾರ್ವಜನಿಕರ ಪ್ರತಿಭಟನೆ

    ಚಾಮರಾಜನಗರ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದ ಹಲವೆಡೆ ಅವಾಂತರ ಸಂಭವಿಸಿದೆ. ಭಾರಿ ಮಳೆಯಿಂದಾಗಿ ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣ ಕೆರೆಯಂತಾಗಿ ಸಾರ್ವಜನಿಕರು ಪರಿತಪಿಸುವಂತಾಗಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಭತ್ತದ ನಾಟಿ ಮಾಡಿ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶುಕ್ರವಾರ ಮಧ್ಯರಾತ್ರಿ ಭರ್ಜರಿ ಮಳೆಯಾಗಿದೆ. ಕಳೆದ ಐದು ವರ್ಷದಿಂದ ಮಳೆ ಹನಿ ಕಾಣದೇ ಕಂಗಾಲಾಗಿದ್ದ ರೈತರು ಕಳೆದ ಹತ್ತು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂದಹಾಸ ಬೀರುವಂತಾಗಿದೆ. ಜಿಲ್ಲೆಯ ಕೊಳ್ಳೆಗಾಲ, ಗುಂಡ್ಲುಪೇಟೆ, ಹನೂರು ಸೇರಿದಂತೆ ಮೊದಲಾದೆಡೆ ಭರ್ಜರಿ ಮಳೆಯಾಗಿದೆ.

    ಮಳೆ ಅವಾಂತರ: ಗುಂಡ್ಲುಪೇಟೆ ಭಾಗದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಲ್ಲದೆ ದೊಡ್ಡಕೆರೆ ತುಂಬಿ ಜಮೀನಿಗೆ ನೀರು ಹರಿದಿದೆ. ಕೊಡಹಳ್ಳಿ ಗ್ರಾಮದಲ್ಲಿ ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದ ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣ ಕೆರೆಯಂತಾಗಿದೆ. ಬಸ್ ನಿಲ್ದಾಣದ ಈ ಅವಾಂತರಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಭಗೀರಥನಾದ್ರು, ಈಗ ಮೇವು ಪೂರೈಕೆಗೆ ಯಶೋಮಾರ್ಗ ಪ್ಲಾನ್

    ಭಗೀರಥನಾದ್ರು, ಈಗ ಮೇವು ಪೂರೈಕೆಗೆ ಯಶೋಮಾರ್ಗ ಪ್ಲಾನ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಯಶೋಮಾರ್ಗದ ಮೂಲಕ ಹಲವು ಸಮಾಜಮುಖಿ ಕೆಲಸಗಳನ್ನ ಮಾಡ್ತಿದ್ದಾರೆ. ಸದ್ಯ ಯಶ್ ಮತ್ತೊಂದು ರೈತಪರ ಕಾಳಜಿಯ ಕೆಲಸಕ್ಕೆ ಕೈ ಹಾಕಿದ್ದಾರೆ.

    ಮೇವಿನ ಕೊರತೆಯಿಂದ ಬಳಲ್ತಿರೋ ಜಾನುವಾರುಗಳಿಗೆ ಮೇವು ಒದಗಿಸುವ ಕಾರ್ಯಕ್ಕೆ ಯಶ್ ಕೈ ಜೋಡಿಸಿದ್ದಾರೆ. ಕೊಳ್ಳೆಗಾಲ ಸಮೀಪದ ಮಲೆಮಹದೇಶ್ವರ ಬೆಟ್ಟ ಹಾಗೂ ಅಲ್ಲಿನ ಹಲವು ಪ್ರದೇಶಗಳಿಗೆ ತೆರೆಳಿ ಅಲ್ಲಿ ಜಾನುವಾರುಗಳಿಗೆ ಆಗ್ತಿದ್ದ ಮೇವಿನ ಸಮಸ್ಯೆ ಬಗ್ಗೆ ಆದ ಮಾಧ್ಯಮದ ವರದಿ ಹಾಗು ವಿಡಿಯೋ ನೊಡಿದ್ದಾರೆ. ಸದ್ಯ ಮೇವಿನ ಸಮಸ್ಯೆ ನಿವಾರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲಿನ ಗೋವುಗಳಿಗೆ ಒದಗಿಸುತ್ತಿರುವ ಮೇವು ಸಾಲದಾಗಿದ್ದು ಯಶ್ ಈ ಕುರಿತು ಸಂಸದ ದೃವನಾರಾಯಣ್ ಹಾಗೂ ಎ ಮಂಜು ಜೊತೆ ಮಾತನಾಡಿದ್ದಾರೆ.

    ಇದನ್ನೂ ಓದಿ: ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ

    ಸದ್ಯ ಯಶೋಮಾರ್ಗ ಫೌಂಡೇಷನ್ ಮೂಲಕ ಹಲವು ರೈತಪರ ಕಾರ್ಯಕ್ಕೆ ಮುಂದಾಗಿರೋ ಯಶ್ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಅಲ್ಲಿನ ಜಾನುವಾರುಗಳಿಗೆ ಮೇವಿನ ತೊಂದರೆ ನಿವಾರಣೆಯಾಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದೇನೆ ಅಂತ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.