Tag: ಕೊಳ್ಳೇಗಾಲ

  • ಕೊಳ್ಳೇಗಾಲ| ಕಾಂಪೌಂಡ್‌ ಸರಳಿಗೆ ಕುತ್ತಿಗೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಕೊಳ್ಳೇಗಾಲ| ಕಾಂಪೌಂಡ್‌ ಸರಳಿಗೆ ಕುತ್ತಿಗೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಚಾಮರಾಜನಗರ: ಕೊಳ್ಳೇಗಾಲದ ಬಸ್‌ ನಿಲ್ದಾಣದಲ್ಲಿ ಕಾಂಪೌಂಡ್‌ನ ಸರಳಿಗೆ ಕುತ್ತಿಗೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

    ಬಸ್ ನಿಲ್ದಾಣದ ಕಾಂಪೌಂಡ್‌ ಸರಳಿಗೆ ತಲೆ ಸಿಕ್ಕಿಕೊಂಡಂತೆ ಯುವಕನ ಶವ ಪತ್ತೆಯಾಗಿದೆ. ಯುವಕನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಎರಡು ಸರಳಿನ ಮಧ್ಯೆ ಕುತ್ತಿಗೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಮೃತದೇಹವಿತ್ತು.

    ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಚಾಮರಾಜನಗರ| ನದಿಯಲ್ಲಿ ಈಜಲು ಹೋಗಿ ಯುವಕ ನೀರುಪಾಲು

    ಚಾಮರಾಜನಗರ| ನದಿಯಲ್ಲಿ ಈಜಲು ಹೋಗಿ ಯುವಕ ನೀರುಪಾಲು

    ಚಾಮರಾಜನಗರ: ಈಜಲು ಹೋಗಿ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಶಿವನಸಮುದ್ರ ಕಾವೇರಿ ನದಿಯಲ್ಲಿ ನಡೆದಿದೆ.

    ಬೆಂಗಳೂರಿನ ಜೆಪಿ ನಗರದ ನಿವಾಸಿ ಸಾಹಿಲ್ ಪಾಷ (23) ಮೃತ ಯುವಕ. 9 ಜನ ಸ್ನೇಹಿತರ ಜೊತೆ ನದಿಯಲ್ಲಿ ಈಜಲು ಹೋಗಿದ್ದ ದಾರುಣ ಅಂತ್ಯ ಕಂಡಿದ್ದಾನೆ.

    ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ವೆಸ್ಲಿ ಸೇತುವೆ ಬಳಿಯ ಕಾವೇರಿ ನದಿಯಲ್ಲಿ ಘಟನೆ ನಡೆದಿದೆ. ಬಂಡೆಗಳ ಸಮೀಪ 9 ಜನ ಯುವಕರ ಗುಂಪು ಈಜಲು ಹೋಗಿದ್ದರು. ರಂಜಾನ್ ಹಬ್ಬ ಮುಗಿದ ಹಿನ್ನೆಲೆ ಶಿವನಸಮುದ್ರ ದರ್ಗಾಕ್ಕೆ ಯುವಕ ಬಂದಿದ್ದ. ಪ್ರಾರ್ಥನೆ ಸಲ್ಲಿಸಿ ನಂತರ ವೆಸ್ಲಿ ಸೇತುವೆಯ ಬಳಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.

    ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ವಿದ್ಯುಕ್ತ ಚಾಲನೆ

    ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ವಿದ್ಯುಕ್ತ ಚಾಲನೆ

    ಚಾಮರಾಜನಗರ: ಚಿಕ್ಕಲ್ಲೂರು (Chikkalluru Jathre) ಘನನೀಲಿ ಸಿದ್ದಪ್ಪಾಜಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಐದು ದಿನಗಳ ಕಾಲ ಚಿಕ್ಕಲ್ಲೂರು ಜಾತ್ರೆ ನಡೆಯಲಿದೆ.

    ಮೊದಲ ದಿನ ಚಂದ್ರಮಂಡಲೋತ್ಸವ ನಡೆಯಲಿದೆ. ಬಿದಿರಿನಿಂದ ರಚಿಸಿದ ಚಂದ್ರಮಂಡಲದ ಆಕೃತಿ ರಚನೆ ಮಾಡಲಾಗಿದೆ. ಚಂದ್ರಮಂಡಲಕ್ಕೆ ತಡರಾತ್ರಿ ಅಗ್ನಿಸ್ಪರ್ಶ ಮಾಡಲಾಯಿತು.

    ಉರಿಯುವ ಚಂದ್ರಮಂಡಲಕ್ಕೆ ಸುತ್ತಮುತ್ತಲ ಗ್ರಾಮಗಳ ರೈತರಿಂದ ದವಸ-ಧಾನ್ಯ ಅರ್ಪಣೆ ಮಾಡಿದ್ದಾರೆ. ಈ ಬಾರಿ ದಕ್ಷಿಣ ದಿಕ್ಕಿಗೆ ಚಂದ್ರಮಂಡಲ ಜ್ಯೋತಿ ಉರಿಯಿತು.

    ಚಂದ್ರಮಂಡಲ ಜ್ಯೋತಿ ಯಾವ ದಿಕ್ಕಿಗೆ ವಾಲುತ್ತದೋ ಆ ದಿಕ್ಕಿಗೆ ಈ ವರ್ಷ ಉತ್ತಮ ಮಳೆ, ಬೆಳೆ ಎಂಬ ನಂಬಿಕೆಯಿದೆ. ಚಂದ್ರಮಂಡಲೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿದ್ದರು.

  • ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಅಂದಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ!

    ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಅಂದಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ!

    ಚಾಮರಾಜನಗರ: ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ಕಿರಾತಕ ಅಣ್ಣನೊಬ್ಬ ತಂಗಿಯನ್ನೇ ಕೊಲೆ ಮಾಡಿದ್ದಾನೆ. ಈ ಪ್ರಕರಣ ಜಿಲ್ಲೆಯ ಕೊಳ್ಳೇಗಾಲ (Kollegala) ಪಟ್ಟಣದ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ. ಐಮಾನ್ ಬಾನು ಕೊಲೆಗೀಡಾದ ತಂಗಿ. ತಂಗಿಗೆ ಹಲ್ಲೆ ಮಾಡುವ ವೇಳೆ ಅಡ್ಡ ಬಂದಿದ್ದ ಅತ್ತಿಗೆಯ ಮೇಲೂ ಆರೋಪಿ ದಾಳಿ ಮಾಡಿದ್ದಾನೆ.

    ಘಟನೆ ಯಾಕಾಯ್ತು…?: ನಿನ್ನೆ ರಾತ್ರಿ ಕೊಲೆ ಪಾತಕಿ ಫರ್ಮಾನ್ ಪಾಷಾ ಊಟ ಮಾಡುವ ವೇಳೆ ತನ್ನ ಅಣ್ಣನ ಮಗುವಿಗೆ ಸೌತೆಕಾಯಿ ತಿನ್ನಿಸುತ್ತಿದ್ದ. ಆದರೆ ಮಗು ಜ್ವರದಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಸೌತೆಕಾಯಿ ತಿನ್ನಿಸ ಬೇಡ ಎಂದು ಅತ್ತಿಗೆ ತಸ್ಲೀಮ್ ತಾಜ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಫರ್ಮಾನ್ ತಂಗಿ ಐಮಾನ್ ಭಾನು ಸಹ ಫರ್ಮಾನ್ ಗೆ ನಿಂದಿಸಿದ್ದಳು. ತಂಗಿ ಬೈಯ್ಯುತ್ತಿದ್ದಂತೆ ರೊಚ್ಚಿಗೆದ್ದಿದ್ದ ಆರೋಪಿ ಫರ್ಮಾನ್ ಪಾಷಾ ತಕ್ಷಣ ಅಡುಗೆ ಮನೆಯಲ್ಲಿದ್ದ ಮಾಂಸ ಕತ್ತರಿಸುವ ಕತ್ತಿಯಿಂದ ತಂಗಿ ಐಮಾನ್ ಕತ್ತಿಗೆ ಕೊಚ್ಚಿದ್ದಾನೆ.. ಇದನ್ನೂ ಓದಿ: ಟೆಸ್ಲಾ ಸೈಬರ್‌ಟ್ರಕ್ ಸ್ಫೋಟ | ನೀವು ತಪ್ಪಾದ ವಾಹನ ಆಯ್ಕೆ ಮಾಡಿದ್ದೀರಿ – ಉಗ್ರರಿಗೆ ಮಸ್ಕ್ ಟಾಂಗ್‌

    ಈ ವೇಳೆ ಐಮಾನ್ ರಕ್ಷಣೆಗೆ ಬಂದ ಅತ್ತಿಗೆ ಮೇಲು ಫರ್ಮಾನ್ ಅಟ್ಯಾಕ್ ಮಾಡಿದ್ದಾನೆ. ಗಲಾಟೆಯ ಸದ್ದು ಕೇಳಿ ಕೆಳಗೆ ಬಂದ ತಂದೆ ಸೈಯದ್ ಪಾಷಾ ಮೇಲೂ ಹಂತಕ ಹಲ್ಲೆ ನಡೆಸಿದ್ದಾನೆ. ಚೀರಾಟ ಕೂಗಾಟ ಕೇಳಿ ಸ್ಥಳೀಯರು ಬರುತ್ತಿದ್ದಂತೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ತಾನೇ 112ಗೆ ಕರೆ ಮಾಡಿ ಪೊಲೀಸರನ್ನ ಮನೆಗೆ ಕರೆಸಿಕೊಂಡು ಫರ್ಮಾನ್ ಶರಣಾಗಿದ್ದಾನೆ. ಗಂಭೀರ ಗಾಯಗೊಂಡ ಇಬ್ಬರನ್ನೂ ಚಾಮರಾಜನಗರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

    ಸದ್ಯ ಕೊಳ್ಳೇಗಾಲ ಪಟ್ಟಣ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದು, ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯುವತಿಯರ ಅಂಗಾಂಗ ವಿಡಿಯೋ ಮಾಡ್ತಿದ್ದ ಕಾಮುಕ ಪೊಲೀಸ್ ವಶಕ್ಕೆ

  • ಕೊಳ್ಳೇಗಾಲಕ್ಕೆ ಸಿಎಂ ಭೇಟಿ – ಎಸ್. ಜಯಣ್ಣ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಕೆ

    ಕೊಳ್ಳೇಗಾಲಕ್ಕೆ ಸಿಎಂ ಭೇಟಿ – ಎಸ್. ಜಯಣ್ಣ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಕೆ

    ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೊಳ್ಳೇಗಾಲ (Kollegala) ಪಟ್ಟಣಕ್ಕೆ ಇಂದು (ಬುಧವಾರ) ಭೇಟಿ ನೀಡಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ದಿವಂಗತ ಎಸ್. ಜಯಣ್ಣ (S Jayanna) ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ಗೌರವ ಸಲ್ಲಿಸಿದರು.

    ಕೊಳ್ಳೇಗಾಲ ಪಟ್ಟಣದ ಎಂ.ಜಿ.ಎಸ್.ವಿ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಬಂದಿಳಿದ ಸಿಎಂ ಅಲ್ಲಿಂದ ಕಾರಿನಲ್ಲಿ ಪಟ್ಟಣದ ಮಹದೇಶ್ವರ ಕಾಲೇಜು ಬಡಾವಣೆಯಲ್ಲಿರುವ ಎಸ್.ಜಯಣ್ಣ ಅವರ ಅನುಗ್ರಹ ನಿಲಯಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. ಬಳಿಕ ಎಸ್. ಜಯಣ್ಣ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಅಂತಿಮ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಇದನ್ನೂ ಓದಿ: ಪೊಲೀಸ್ ಮಾಹಿತಿದಾರ ಎಂದು ಬಿಜೆಪಿ ನಾಯಕನ ಕೊಂದ ನಕ್ಸಲರು

    ಮುಖ್ಯಮಂತ್ರಿಯವರೊಂದಿಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ಲೋಕಸಭಾ ಸದಸ್ಯರಾದ ಸುನಿಲ್ ಬೋಸ್, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ ಪುಟ್ಟರಂಗಶೆಟ್ಟಿ, ಹೆಚ್.ಎಂ. ಗಣೇಶ್ ಪ್ರಸಾದ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಂ.ಆರ್. ಮಂಜುನಾಥ್, ದರ್ಶನ್ ಧ್ರುವನಾರಾಯಣ, ಡಾ. ಡಿ. ತಿಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರ್‌ನಾಥ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಇನ್ನಿತರ ಗಣ್ಯರು ಎಸ್. ಜಯಣ್ಣ ಅವರಿಗೆ ಅಂತಿಮ ಗೌರವ ನಮನ ಸಲ್ಲಿಸಿದರು. ಇದನ್ನೂ ಓದಿ: ಕಾರು, ಬೈಕ್ ನಡುವೆ ಭೀಕರ ಅಪಘಾತ – ಸವಾರ ಸಾವು, ಇಬ್ಬರಿಗೆ ಗಾಯ

    ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜಯಣ್ಣ ಅವರು ವಿದ್ಯಾರ್ಥಿ ದೆಸೆಯಿಂದಲೂ ನನ್ನ ಜೊತೆಗೆ ಆತ್ಮೀಯವಾದ ಸಂಬಂಧ ಹೊಂದಿದ್ದರು. ಶಾಸಕರಾದ ಮೇಲೆ ಮತ್ತಷ್ಟು ಹತ್ತಿರವಾದರು. ನಾನು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧರಾಗಿರುತ್ತಿದ್ದರು. ರಾಜಕೀಯದಲ್ಲಿ ಬಹಳ ಅಪರೂಪದ ವ್ಯಕ್ತಿ ಹಾಗೂ ಸೌಮ್ಯ ಸ್ವಭಾವದವರಾಗಿದ್ದರು ಎಂದರು. ಇದನ್ನೂ ಓದಿ: ಉಡುಪಿ| ಸ್ಟಾರ್‌ ಹೋಟೆಲ್‌ಗಳಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ ವೃದ್ಧ ಸೆರೆ

    ಜಯಣ್ಣ ಅವರು ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರಾಗಿದ್ದರು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗುತ್ತಿರಲಿಲ್ಲ. ಅವರು ನಂಬಿದ್ದ ಸಿದ್ಧಾಂತಗಳಲ್ಲಿ ಬದಲಾವಣೆ ಮಾಡುತ್ತಿರಲಿಲ್ಲ. ಅಜಾತಶತ್ರುವಾಗಿದ್ದ ಜಯಣ್ಣನವರು ಎಲ್ಲರನ್ನೂ ಪ್ರೀತಿಸುತ್ತಿದ್ದರು. ಎಂದೂ ದ್ವೇಷ ಮಾಡುತ್ತಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ರೈಲ್ವೇ ತಿದ್ದುಪಡಿ ಮಸೂದೆ 2024 ಅಂಗೀಕಾರ

  • ಕೊಳ್ಳೇಗಾಲ ಮಾಜಿ ಶಾಸಕ ಎಸ್ ಜಯಣ್ಣ ಹೃದಯಾಘಾತದಿಂದ ನಿಧನ

    ಕೊಳ್ಳೇಗಾಲ ಮಾಜಿ ಶಾಸಕ ಎಸ್ ಜಯಣ್ಣ ಹೃದಯಾಘಾತದಿಂದ ನಿಧನ

    ಚಾಮರಾಜನಗರ: ಕೊಳ್ಳೇಗಾಲದ (Kollegala) ಮಾಜಿ ಶಾಸಕ ಎಸ್ ಜಯಣ್ಣ (S Jayanna) ಹೃದಯಾಘಾತದಿಂದ (Heart Attack) ಮಂಗಳವಾರ ನಿಧನರಾಗಿದ್ದಾರೆ.

    ಬುಧವಾರ ಗೃಹ ಪ್ರವೇಶ ಹಿನ್ನೆಲೆ ಆಹ್ವಾನ ಪತ್ರಿಕೆ ಕೊಡಲು ಮೈಸೂರಿಗೆ (Mysuru) ತೆರಳುತ್ತಿದ್ದ ವೇಳೆ ಕೋಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಬಳಿ ಜಯಣ್ಣ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿ ಕೆಮ್ಮು ಹಾಗೂ ಎದೆನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆತರುವ ಮುನ್ನ ಮಾರ್ಗಮಧ್ಯೆ ಜಯಣ್ಣ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ರಾಯಚೂರಿನಲ್ಲಿ ಉದ್ಘಾಟಿಸಿದ್ದ ಕೃಷ್ಣ

    ಸಣ್ಣಯ್ಯ, ಪುಟ್ಟನಂಜಮ್ಮ ದಂಪತಿಯ ಸುಪುತ್ರನಾದ ಜಯಣ್ಣ 1952ರ ಸೆ.9ರಂದು ಜನಿಸಿದರು. 72 ವಯಸ್ಸಿನ ಜಯಣ್ಣ ರಾಜ್ಯ ಸರ್ಕಾರ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಜಯಣ್ಣ ಎರಡು ಬಾರಿ ಶಾಸಕರಾಗಿದ್ದರು. ಅನಾರೋಗ್ಯದ ಹಿನ್ನೆಲೆ 2018ರಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. 1994ರಲ್ಲಿ ಜೆಡಿಎಸ್‌ನಿಂದ ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದರು. ಜಯಣ್ಣ ಅವರ ಅಂತ್ಯಕ್ರಿಯೆ ಬುಧವಾರ ಮಾಂಬಳ್ಳಿ ಗ್ರಾಮದಲ್ಲಿ ನಡೆಯಲಿದೆ. ಇದನ್ನೂ ಓದಿ: ಭಾರತ ಒಬ್ಬ ದೂರದೃಷ್ಟಿ ನಾಯಕನನ್ನು ಕಳೆದುಕೊಂಡಿದೆ – ಪ್ರಹ್ಲಾದ್ ಜೋಶಿ ಸಂತಾಪ

  • ಕೊಳ್ಳೇಗಾಲ ನಗರಸಭೆ ಎಡವಟ್ಟು – ಬದುಕಿರುವ ವ್ಯಕ್ತಿಯನ್ನೇ ಶವಸಂಸ್ಕಾರ ಮಾಡಲಾಗಿದೆ ಅಂತಾ ದೃಢೀಕರಣ ಪತ್ರ

    ಕೊಳ್ಳೇಗಾಲ ನಗರಸಭೆ ಎಡವಟ್ಟು – ಬದುಕಿರುವ ವ್ಯಕ್ತಿಯನ್ನೇ ಶವಸಂಸ್ಕಾರ ಮಾಡಲಾಗಿದೆ ಅಂತಾ ದೃಢೀಕರಣ ಪತ್ರ

    ಚಾಮರಾಜನಗರ: ಬದುಕಿರುವ ವ್ಯಕ್ತಿಯನ್ನೇ ಶವಸಂಸ್ಕಾರ ಮಾಡಲಾಗಿದೆ ಎಂದು ದೃಢೀಕರಣ ಪತ್ರ ನೀಡುವ ಮೂಲಕ ಕೊಳ್ಳೇಗಾಲ ನಗರಸಭೆ ಎಡವಟ್ಟು ಮಾಡಿದೆ.

    ನಿಧನರಾಗಿದ್ದ ತಾಯಿಯ ಶವಸಂಸ್ಕಾರದ ದೃಢೀಕರಣ ಪತ್ರಕ್ಕಾಗಿ ಶಂಕರ್ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ, ಶಂಕರ್ ಅವರ ಶವಸಂಸ್ಕಾರ ನೆರವೇರಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ದೃಢೀಕರಣ ಪತ್ರ ನೀಡಿದ್ದಾರೆ.

    ಕೊಳ್ಳೇಗಾಲ ಕುರುಬರ ಬೀದಿಯ ನಿವಾಸಿಯಾಗಿರುವ ಶಂಕರ್ ಅವರ ಪುಟ್ಟಮ್ಮ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದರು. ಅ.27 ರಂದು ಕೊಳ್ಳೇಗಾಲಕ್ಕೆ ತಂದು ಶವಸಂಸ್ಕಾರ ಮಾಡಲಾಗಿತ್ತು. ಈ ಬಗ್ಗೆ ದೃಢೀಕರಣ ಪತ್ರಕ್ಕಾಗಿ ಪುಟ್ಟಮ್ಮ ಅವರ ಪುತ್ರ ಶಂಕರ್ ಅರ್ಜಿ ಸಲ್ಲಿಸಿದ್ದರು.

    ನಿಧನರಾದ ತಾಯಿಯ ಆಧಾರ್ ಕಾರ್ಡ್ ಸಹ ನೀಡಿದ್ದರು. ಆದರೆ, ಶಂಕರ್ ಅವರ ಶವಸಂಸ್ಕಾರ ಮಾಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ದೃಢೀಕರಣ ಪತ್ರ ನೀಡಿದ್ದಾರೆ. ತಮ್ಮ ಶವಸಂಸ್ಕಾರ ಎಂದು ಉಲ್ಲೇಖಿಸಿರುವ ದೃಢೀಕರಣ ಪತ್ರ ನೋಡಿ ವ್ಯಕ್ತಿ ಹೌಹಾರಿದ್ದಾರೆ.

  • ಮಾಜಿ ಸಚಿವ ಎನ್ ಮಹೇಶ್ ಮನೆಯಲ್ಲಿ ಕಳ್ಳತನ – 50 ಸಾವಿರ ಹಣ ದೋಚಿದ ಕಳ್ಳರು

    ಮಾಜಿ ಸಚಿವ ಎನ್ ಮಹೇಶ್ ಮನೆಯಲ್ಲಿ ಕಳ್ಳತನ – 50 ಸಾವಿರ ಹಣ ದೋಚಿದ ಕಳ್ಳರು

    ಚಾಮರಾಜನಗರ: ಮಾಜಿ ಸಚಿವ ಎನ್ ಮಹೇಶ್ (N Mahesh) ಮನೆಯಲ್ಲಿ ಕಳ್ಳತನ ನಡೆದಿದೆ. ಚಾಮರಾಜನಗರ (Chamarajanagara)  ಜಿಲ್ಲೆಯ ಕೊಳ್ಳೇಗಾಲದ ಆದರ್ಶ ಬಡಾವಣೆಯಲ್ಲಿರುವ ಮಹೇಶ್ ಮನೆಗೆ ನುಗ್ಗಿ ಕಳ್ಳರು ಹಣ ದೋಚಿದ್ದಾರೆ.

    ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಕಳ್ಳತನಕ್ಕೆ ಸಂಚು ನಡೆಸಿದ ಖದೀಮರು, ಬಾಗಿಲ ಬೀಗ ಮುರಿದು ಸಚಿವನ ಮನೆಗೆ ನುಗ್ಗಿ ಮನೆಯಲ್ಲಿದ್ದ 50 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಆತ್ಮರಕ್ಷಣೆಗಾಗಿ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ – ಪ್ರತ್ಯುತ್ತರವಾಗಿ 300 ರಾಕೆಟ್‌ ಹಾರಿಸಿದ ಹಿಜ್ಬುಲ್ಲಾ

    ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ- ನವವಿವಾಹಿತೆ ಆತ್ಮಹತ್ಯೆ

  • ಮಹಿಳೆ ನಿಗೂಢ ಸಾವಿಗೆ ಟ್ವಿಸ್ಟ್- ತಾಯಿ ಹತ್ಯೆಗೈದು ಮಗಳನ್ನು ಅಪಹರಿಸಿದ್ನಾ ಪ್ರಿಯಕರ?

    ಮಹಿಳೆ ನಿಗೂಢ ಸಾವಿಗೆ ಟ್ವಿಸ್ಟ್- ತಾಯಿ ಹತ್ಯೆಗೈದು ಮಗಳನ್ನು ಅಪಹರಿಸಿದ್ನಾ ಪ್ರಿಯಕರ?

    ಚಾಮರಾಜನಗರ: ಕೊಳ್ಳೇಗಾಲದಲ್ಲಿ (Kollegala) ನಡೆದಿದ್ದ ಒಂಟಿ ಮಹಿಳೆಯ (Woman) ಅನುಮಾನಾಸ್ಪದ ಸಾವು ಪ್ರಕರಣ ದಿನ ಕಳೆದಂತೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ತಾಯಿಯ ಸಾವಿನ ಬಳಿಕ ಆಕೆಯ 6 ವರ್ಷದ ಮಗಳು ನಾಪತ್ತೆಯಾಗಿದ್ದು, ಮಹಿಳೆಯ ಪ್ರಿಯಕರನೇ ಹತ್ಯೆಗೈದು ಆಕೆಯ ಮಗಳನ್ನು ಅಪಹರಿಸಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

    ಶನಿವಾರ ಸಂಜೆ ಕೊಳ್ಳೆಗಾಲದ ಆದರ್ಶನಗರದಲ್ಲಿ ಮಹಿಳೆ ರೇಖಾ ಎಂಬಾಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ 6 ವರ್ಷದ ಮಗಳು ಮಾನ್ವಿತ ಈಗ ಕಾಣೆಯಾಗಿದ್ದಾಳೆ. ಅಸಲಿಗೆ ಮಹಿಳೆಯ ಸಾವಿನ ಪ್ರಕರಣ ಬೆಳಕಿಗೆ ಬಂದಿದ್ದೇ ಬಲು ರೋಚಕವಾಗಿದೆ. ಕಳೆದ ಒಂದು ವಾರದಿಂದ ಮಗಳು ಶಾಲೆಗೆ ಗೈರಾಗಿದ್ದಾಳೆಂದು ಮಾಹಿತಿ ತಿಳಿಯಲು ಶಾಲೆಯ ಶಿಕ್ಷಕ ರೇಖಾಳಿಗೆ ಕರೆ ಮಾಡಿದ್ದಾರೆ. ಎಷ್ಟೇ ಕರೆ ಮಾಡಿದರು ಕರೆ ಸ್ವೀಕರಿಸದಿದ್ದಾಗ ಖುದ್ದು ಶಿಕ್ಷಕ ಮನೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಲು ಮುಂದಾದಾಗ ಆಗ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಬಾಲಕಿಯರ ಬಟ್ಟೆ ಬದಲಿಸುವ ವೀಡಿಯೋ ತೆಗೆದ ಸಿಬ್ಬಂದಿ – ಪೋಷಕರ ಆಕ್ರೋಶ

    ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕೆಇಬಿ ಲೈನ್ ಮ್ಯಾನ್ ನಾಗೇಂದ್ರ ಎಂಬಾತನ ವಿಚಾರ ಆಕೆಯ ಪತಿ ಸುನೀಲ್‍ಗೆ ತಿಳಿದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಾದ ಬಳಿಕ ಆಗಿನಿಂದಲೂ ಇಬ್ಬರೂ ಅನ್ಯೂನ್ಯವಾಗಿದ್ದರು. ಕೆಲವು ದಿನಗಳಿಂದ ಮಹಿಳೆಯನ್ನು ಮದುವೆ ಆಗುವುದಾಗಿ ನಾಗೇಂದ್ರ ಹೇಳಿದ್ದ. ಅಷ್ಟೇ ಅಲ್ಲದೇ ಕೊಳ್ಳೇಗಾಲದಲ್ಲಿ ಪ್ರತ್ಯೇಕವಾದ ಮನೆ ಮಾಡಿ ಇಟ್ಟಿದ್ದ. ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿದ್ದು, ಇದೇ ವಿಚಾರಕ್ಕೆ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಇಷ್ಟೇ ಅಲ್ಲದೇ ಮಹಿಳೆಯ ಮಗಳನ್ನು ಅಪಹರಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ವೀರ್ ಸಾವರ್ಕರ್ ಎಂದರೆ ಆನೆ, ನಾಯಿ ನರಿ ಮಾತಿಗೆಲ್ಲ ಅದು ತಲೆಕೆಡಿಸಿಕೊಳ್ಳಲ್ಲ: ಕಾಂತೇಶ್

  • ಜೋಕಾಲಿಯಾಡ್ತಿದ್ದ ಶಿಕ್ಷಕಿ ಎರಡನೇ ಮಹಡಿಯಿಂದ ಬಿದ್ದು ಸಾವು

    ಜೋಕಾಲಿಯಾಡ್ತಿದ್ದ ಶಿಕ್ಷಕಿ ಎರಡನೇ ಮಹಡಿಯಿಂದ ಬಿದ್ದು ಸಾವು

    ಚಾಮರಾಜನಗರ: ಜೋಕಾಲಿ ಆಡುತ್ತಿದ್ದ ಶಿಕ್ಷಕಿಯೊಬ್ಬರು (Teacher) ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಕೊಳ್ಳೇಗಾಲದಲ್ಲಿ (Kollegala) ನಡೆದಿದೆ.

    ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ ಪುಟ್ಟಿ ಮೃತಪಟ್ಟ ಶಿಕ್ಷಕಿಯಾಗಿದ್ದಾರೆ. ಜೋಕಾಲಿಯಿಂದ ಬಿದ್ದು ಗಾಯಗೊಂಡಿದ್ದ ಅವರನ್ನು ಕೊಳ್ಳೇಗಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಎರಡು ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಡಿಕೆಶಿ ನೂರಕ್ಕೆ ನೂರರಷ್ಟು ತಪ್ಪಿತಸ್ಥ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ಲಿ- ಈಶ್ವರಪ್ಪ ಆಗ್ರಹ

    ಅವರು ಯಳಂದೂರು ತಾಲೂಕಿನ ಮಾಂಬಳ್ಳಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂಬಂಧ ಕೊಳ್ಳೇಗಾಲ ನಗರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡಿಕೆಶಿ ಬೆಳಗಾವಿ ಮಾತ್ರವಲ್ಲ ರಾಜ್ಯ, ರಾಷ್ಟ್ರ ರಾಜಕಾರಣವನ್ನೂ ಮಾಡ್ತಾರೆ: ಅಶೋಕ್ ಪಟ್ಟಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]