Tag: ಕೊಳೆತ ಚಿಕನ್

  • ಚಿಕನ್ ಪ್ರಿಯರೇ ಎಚ್ಚರ – ಕೊಳೆತ ಚಿಕನ್ ಮಾರಾಟ ಮಾಡ್ತಾರೆ ವ್ಯಾಪಾರಸ್ಥರು

    ಚಿಕನ್ ಪ್ರಿಯರೇ ಎಚ್ಚರ – ಕೊಳೆತ ಚಿಕನ್ ಮಾರಾಟ ಮಾಡ್ತಾರೆ ವ್ಯಾಪಾರಸ್ಥರು

    ಮೈಸೂರು: ಮೈಸೂರಿನಲ್ಲಿನ ಚಿಕನ್ ಪ್ರಿಯರೇ ಕೊಂಚ ಹುಷಾರ್. ನೀವು ಸ್ವಲ್ಪ ಯಾಮಾರಿದ್ರು ನಿಮಗೆ ಹಳೆಯ ಸ್ಟಾಕ್ ನಲ್ಲಿರೋ ಚಿಕನ್ ಮಾಂಸವನ್ನು ನಿಮಗೆ ವ್ಯಾಪಾರಸ್ಥರು ಕೊಡುತ್ತಾರೆ.

    ಹಕ್ಕಿ ಜ್ವರದ ಕಾರಣ ಮೈಸೂರು ಜಿಲ್ಲಾಡಳಿತ ರಾತ್ರೋರಾತ್ರಿ ಕೋಳಿ ಮಾರಾಟಕ್ಕೆ ಬ್ರೇಕ್ ಹಾಕಿತ್ತು. ಹೀಗಾಗಿ ಕೆಲ ವ್ಯಾಪಾರಸ್ಥರು ಕೋಳಿ ಮಾಂಸವನ್ನು ಫ್ರಿಡ್ಜ್ ನಲ್ಲಿ ಇಟ್ಟಿದ್ದರು. ಈಗ ಚಿಕನ್ ಮಾರಾಟಕ್ಕೆ ಮೈಸೂರು ಜಿಲ್ಲಾಡಳಿತ ಅನುಮತಿ ನೀಡಿದ ಪರಿಣಾಮ ಫ್ರಿಡ್ಜ್‍ನಲ್ಲಿ ಇಡಲಾಗಿದ್ದ 20 ದಿನಗಳ ಹಿಂದಿನ ಕೋಳಿ ಮಾಂಸವನ್ನು ಗ್ರಾಹಕರಿಗೆ ನೀಡಲು ಮುಂದಾಗಿದ್ದಾರೆ.

    ಇದನ್ನು ಪತ್ತೆ ಹಚ್ಚಿದ ಕೆಲ ಗ್ರಾಹಕರು ಮಾರಾಟಗಾರರ ಅಸಲಿಯತ್ತನ್ನು ಬಯಲು ಮಾಡಿದ್ದಾರೆ. ಮೈಸೂರಿನ ಕ್ಯಾತಮಾರನಹಳ್ಳಿಯ ತಸ್ಕೀನ್ ಚಿಕನ್ ಅಂಡ್ ಮಟನ್ ಸೆಂಟರ್ ನಲ್ಲಿ ಕೊಳೆತ ಕೋಳಿ ಮಾಂಸ ಮಾರಾಟ ಮಾಡಲಾಗುತ್ತಿತ್ತು. ಎಚ್ಚೆತ್ತ ನಾಗರೀಕರು ಪಾಲಿಕೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪಾಲಿಕೆ ಅಧಿಕಾರಿಗಳು ಅಂಗಡಿ ಬಂದ್ ಮಾಡಿಸಿದ್ದಾರೆ. ಚಿಕನ್ ಮಾರಾಟಗಾರನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.