Tag: ಕೊಳಾಯಿ

  • ಕೊಳಾಯಿ ತೆರೆದು ನೀರು ಕುಡಿದ ಚುರುಕು ಕಾಗೆ – ವೀಡಿಯೋ ವೈರಲ್

    ಕೊಳಾಯಿ ತೆರೆದು ನೀರು ಕುಡಿದ ಚುರುಕು ಕಾಗೆ – ವೀಡಿಯೋ ವೈರಲ್

    ಮಕ್ಕಳು ಚಿಕ್ಕವರಿದ್ದಾಗ ಕಾಗೆಯೊಂದು ತನ್ನ ದಣಿವನ್ನು ತೀರಿಸಿಕೊಳ್ಳಲು ಅರ್ಧ ನೀರು ತುಂಬಿರುವ ಬಿಂದಿಗಿಗೆಗೆ ಪುಟ್ಟಪುಟ್ಟ ಕಲ್ಲುಗಳನ್ನು ಹಾಕಿ ನೀರು ಮೇಲೆ ಬಂದ ನಂತರ ಕುಡಿದಿರುವ ಕಥೆಯನ್ನು ನಾವು ಕೇಳಿದ್ದೇವೆ. ಆದರೆ 21ನೇ ಶತಮಾನದ ಕಾಗೆಯೊಂದು ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ತನ್ನ ಬುದ್ಧಿವಂತಿಕೆ ಉಪಯೋಗಿಸಿಕೊಂಡಿದೆ.

    ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಎಂಬವರು ಶುಕ್ರವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ನುರಿತ ಕಾಗೆ’ ಎಂಬ ಕ್ಯಾಪ್ಷನ್ ಜೊತೆಗೆ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ಈ ವೀಡಿಯೋದಲ್ಲಿ ಕಾಗೆ ಹಾರಿಕೊಂಡು ಬಂದು ನೀರಿನ ಕೊಳಾಯಿ ಮೇಲೆ ಕುಳಿತುಕೊಂಡು, ತನ್ನ ಕೊಕ್ಕಿನ ಸಹಾಯದಿಂದ ಕೊಳಾಯಿಯನ್ನು ನಿಧಾನವಾಗಿ ಒತ್ತುವ ಮೂಲಕ ತೆರೆಯುತ್ತದೆ. ಬಳಿಕ ಆರಾಮವಾಗಿ ಕೊಳಾಯಿಂದ ಬರುವ ನೀರನ್ನು ಕುಡಿಯುತ್ತದೆ.

    ಸದ್ಯ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಒಂದು ಗಂಟೆಯೊಳಗೆ ಸುಮಾರು ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಹಲವಾರು ಕಮೆಂಟ್‍ಗಳು ಹರಿದು ಬರುತ್ತಿದೆ. ಕೆಲವರು ಕಾಗೆಯ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಕೊಳಾಯಿಯನ್ನು ಸರಿಯಾಗಿ ಮುಚ್ಚಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಕೊಳಾಯಿಯಿಂದ ಹಲ್ಲೆಗೈದು ಪತ್ನಿಯ ಕೊಲೆಗೈದ ಪತಿ!

    ಕೊಳಾಯಿಯಿಂದ ಹಲ್ಲೆಗೈದು ಪತ್ನಿಯ ಕೊಲೆಗೈದ ಪತಿ!

    ಲಕ್ನೋ: ವ್ಯಕ್ತಿಯೊಬ್ಬ ಸಣ್ಣ-ಪುಟ್ಟ ಗಲಾಟೆಗೆ ಹೆಂಡತಿಯನ್ನು ಕೊಳಾಯಿಯಿಂದ ಕ್ರೂರವಾಗಿ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಬಾಗಪತ್ ಬಾರೌತ್ ಜಿಲ್ಲೆಯ ವಾಜಿದ್‍ಪುರ ಗ್ರಾಮದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತಪಟ್ಟ ಮಹಿಳೆಯನ್ನು ನೀಲಂ ಎಂದು ಗುರುತಿಸಲಾಗಿದ್ದು, ಕೊಳಾಯಿಯಿಂದ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ನೀಲಂ, ಧೀರಜ್‍ನನ್ನು 5 ವರ್ಷದ ಹಿಂದೆ ವಿವಾಹವಾಗಿದ್ದಳು. ಮದುವೆಯ ನಂತರ ಆಗಾಗ ಇಬ್ಬರು ಜಗಳವಾಡುತ್ತಿದ್ದರು. ಅದೇ ರೀತಿ ಒಂದು ದಿನ ಇಬ್ಬರು ಜಗಳವಾಡಿದ್ದಾರೆ. ಈ ವೇಳೆ ಕೋಪಗೊಂಡ ಧೀರಜ್ ಕೊಳಾಯಿಯಿಂದ ಹೆಂಡತಿ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ನೀಲಂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಘಟನೆ ವೇಳೆ ಮನೆಯಲ್ಲಿ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡ ಅಲ್ಲಿದ್ದ ಅಕ್ಕ-ಪಕ್ಕದ ಮನೆಯವರು ದಂಪತಿ ಮನೆಗೆ ತೆರಳಿ ನೀಲಂ ಪತಿ ಧೀರಜ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ವೃತ್ತ ಅಧಿಕಾರಿ(ಸಿಒ) ಅಲೋಕ್ ಕುಮಾರ್, ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.