Tag: ಕೊಳಚೆ

  • ಡಬಲ್‌ ಮರ್ಡರ್‌ ಮಾಡಿ ಕೊಳಚೆಯಲ್ಲಿ ಅವಿತಿದ್ದವನ ಬಂಧನ

    ಡಬಲ್‌ ಮರ್ಡರ್‌ ಮಾಡಿ ಕೊಳಚೆಯಲ್ಲಿ ಅವಿತಿದ್ದವನ ಬಂಧನ

    ಮುಂಬೈ: ವ್ಯಕ್ತಿಯೊಬ್ಬ ಡಬಲ್‌ ಮರ್ಡರ್‌ ಮಾಡಿ ನಂತರ ಅರಣ್ಯ ಪ್ರದೇಶದಲ್ಲಿರುವ ಕೊಳಚೆ ಗುಂಡಿಯಲ್ಲಿ ಅವಿತುಕೊಂಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಆರೋಪಿಯನ್ನು ಕಿಶೋರ್ ಕುಮಾರ್ ಮಂಡಲ್ ಎಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿರುವ ಈತ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ (Palghar, Maharashtra) ಬೋಯಿಸರ್‌ನ ಕೂಡನ್ ಎಂಬ ಕುಗ್ರಾಮದಲ್ಲಿ ಜೋಡಿ ಕೊಲೆ ಮಾಡಿದ್ದಾನೆ. ಇಬ್ಬರು ಹಿರಯ ನಾಗರೀಕರನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಇದನ್ನೂ ಓದಿ: ರಾಮೇಶ್ವರ ಕೆಫೆಯಲ್ಲಿ ಸ್ಫೋಟ – ಸ್ಥಳಕ್ಕೆ ಭಯೋತ್ಪಾದನಾ ನಿಗ್ರಹ ದಳ ಎಂಟ್ರಿ

    ಇಬ್ಬರ ಬರ್ಬರ ಕೊಲೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಈ ವೇಳೆ ಕಿಶೋರ್‌ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು.

    ಇತ್ತ ಆರೋಪಿ ಅರಣ್ಯ ಪ್ರದೇಶವೊಂದರ ಕೊಳಚೆ ಗುಂಡಿಯಲ್ಲಿ ಅಡಗಿ ಕುಳಿತಿರುವ ಮಾಹಿತಿ ಸಿಕ್ಕಿದೆ. ಅಂತೆಯೇ ಸ್ಥಳಕ್ಕೆ ತೆರಳಿ ಕೊಳಚೆಯಿಂದ ಆತನನ್ನು ಹಿಡಿದು ತಂದಿರುವುದಾಗಿ ಫಾಲ್ಗರ್‌ ಪೊಲೀಸರು ತಿಳಿಸಿದ್ದಾರೆ.

  • ಮಲೆಮಹದೇಶ್ವರ ಬೆಟ್ಟಕ್ಕೆ ಹೋಗೋರು ಹುಷಾರ್- ಕಲ್ಯಾಣಿ ಸೇರ್ತಿದೆ ಮೋರಿ, ಶೌಚಾಲಯದ ನೀರು!

    ಮಲೆಮಹದೇಶ್ವರ ಬೆಟ್ಟಕ್ಕೆ ಹೋಗೋರು ಹುಷಾರ್- ಕಲ್ಯಾಣಿ ಸೇರ್ತಿದೆ ಮೋರಿ, ಶೌಚಾಲಯದ ನೀರು!

    ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟಕ್ಕೆ ಹೋಗೋ ಭಕ್ತರು ಇನ್ಮುಂದೆ ಸ್ವಲ್ಪ ಹುಷಾರಾಗಿರಬೇಕು. ಯಾಕಂದ್ರೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಕಲ್ಯಾಣಿಯ ನೀರು ಮಲಿನಗೊಂಡಿದೆ.

    ಮೋರಿ ನೀರು ಹಾಗೂ ಶೌಚಾಲಯದ ನೀರು ಸೇರಿ ಕಲ್ಯಾಣಿಯ ಶುದ್ಧ ನೀರು ಕೊಳತು ನಾರುತ್ತಿದೆ. ಇದೇ ಕಲ್ಯಾಣಿಯಲ್ಲಿ ವರ್ಷಕ್ಕೆ ನಾಲ್ಕು ಬಾರಿ ಮಹದೇಶ್ವರನ ಉತ್ಸವ ಮೂರ್ತಿಯನ್ನು ಇಟ್ಟು ತೆಪ್ಪೋತ್ಸವ ಮಾಡಲಾಗುತ್ತೆ.

    ಕಲ್ಯಾಣಿ ಮಾತ್ರವಲ್ಲದೆ ಕುಡಿಯುವ ನೀರಿನ ಕೊಳಕ್ಕೂ ಶೌಚಾಲಯದ ನೀರು ಸೇರುತ್ತಿದ್ದು, ಭಕ್ತರು ಇದೇ ನೀರನ್ನು ಕುಡಿಯಬೇಕಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ತರುವ 2ನೇ ದೇಗುಲ ಇದಾಗಿದ್ದು, ಭಕ್ತರಿಗೆ ಕನಿಷ್ಠ ಸೌಲಭ್ಯ ನೀಡುವಲ್ಲಿ ಪ್ರಾಧಿಕಾರ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.