Tag: ಕೊಲ್ಹಾರ

  • ʻಸಿಎಂ ಲಫಂಗʼ ಹೇಳಿಕೆ ಹಿಂಪಡೆಯುತ್ತೇವೆ – ಅಭಿನವ ಸಂಗನಬಸವ ಶ್ರೀ

    ʻಸಿಎಂ ಲಫಂಗʼ ಹೇಳಿಕೆ ಹಿಂಪಡೆಯುತ್ತೇವೆ – ಅಭಿನವ ಸಂಗನಬಸವ ಶ್ರೀ

    ವಿಜಯಪುರ: ಸಿಎಂ ಸಿದ್ದರಾಮಯ್ಯ (Siddaramaiah) ಲಫಂಗ ಇದ್ದಾನೆ, ಮೀಸಲಾತಿ ನೀಡಲ್ಲ ಎಂದು ಸಿಎಂ ವಿರುದ್ಧ ವಿಜಯಪುರ (Vijayapura) ಜಿಲ್ಲೆಯ ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ  ಬುಧವಾರ ಕಾರ್ಯಕ್ರಮವೊಂದರಲ್ಲಿ ಏಕವಚನದಲ್ಲೆ ವಾಗ್ದಾಳಿ ನಡೆಸಿದ್ದರು. ಅವರ ಸ್ಥಾನಕ್ಕೆ ನಾನು ಬಳಸಿದ ಶಬ್ದ ಒಳ್ಳೆಯದಲ್ಲ. ಆಶಿರ್ವಚನದ ವೇಳೆ ಬಳಸಿದ ಎರಡು ಪದಗಳನ್ನು ಹಿಂದೆ ಪಡೆಯುತ್ತೇನೆ ಎಂದು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

    ಸಿಎಂ ವಿರುದ್ಧದ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ (Abhinava Sanganabasava Shivacharya Swamiji), ನಾವು ನೋವು ಆಗುವಂತಹ ಮಾತುಗಳನ್ನ ಆಡಿದ್ದೇವೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಅದಕ್ಕಾಗಿ ನಾನು ಆಶಿರ್ವಚನದ ವೇಳೆ ಬಳಸಿದ ಎರಡು ಪದಗಳನ್ನು ಹಿಂದೆ ಪಡೆಯುತ್ತೇನೆ. ಅವರ ಸ್ಥಾನಕ್ಕೆ ನಾನು ಬಳಸಿದ ಶಬ್ದ ಒಳ್ಳೆಯದಲ್ಲ. ಕಾರಣ ನಾನು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಬಕಾರಿ ಸಚಿವರ ಖಾತೆ ಬದಲಿಸುವಂತೆ ಆಗ್ರಹಿಸಿ ನ.20ಕ್ಕೆ ರಾಜ್ಯಾದ್ಯಂತ ಬಾರ್ ಬಂದ್

    ಬುಧವಾರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಜಿಲ್ಲೆಯ ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯಸ್ವಾಮೀಜಿ ಪಂಚಮಸಾಲಿ 2ಎ ಮೀಸಲಾತಿ ವಿಚಾರದಲ್ಲಿ ಸಿಎಂ ವಿರುದ್ಧ ಆಶಿರ್ವಚನದ ವೇಳೆ ಸಿದ್ದರಾಮಯ್ಯ ಲಫಂಗ ಇದ್ದಾನೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೂಡಲಸಂಗಮ ಜಯಮೃತ್ಯುಂಜಯ ಶ್ರೀಗಳ ಹೆಗಲ ಮೇಲೆ ಸಿದ್ದರಾಮಯ್ಯ ಕೈ ಹಾಕ್ತಾನೆ. ನಾನೇ ಆಗಿದ್ರೇ ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ. ಸಿಎಂ ಆದಾಗ ಗದ್ದಲ ಮಾಡುತ್ತಾರೆ. ಪಂಚಮಸಾಲಿ 2ಎ ಮೀಸಲಾತಿಯಲ್ಲಿ ನಾಟಕ ಮಾಡಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಮೀಸಲಾತಿ ನೀಡಲ್ಲ ಎಂದು ಕಿಡಿಕಾರಿದ್ದರು. ಇದೀಗ ಸ್ವಾಮೀಜಿ ಸಿಎಂ ವಿರುದ್ಧ ಬಳಸಿದ ಎರಡು ಪದ ಹಿಂಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ| ರಾಶಿ ರಾಶಿ ಗೋವಾ ಮದ್ಯ ಬಾಟಲಿಗಳು ವಶ

  • ಕಾಲುವೆಗೆ ಜಾರಿ ಬಿದ್ದು ಬಾಲಕ ಸಾವು

    ಕಾಲುವೆಗೆ ಜಾರಿ ಬಿದ್ದು ಬಾಲಕ ಸಾವು

    ವಿಜಯಪುರ: (Vijayapura) ಕಾಲುವೆಗೆ ಜಾರಿ ಬಿದ್ದು ಬಾಲಕ ಸಾವಿಗೀಡಾದ ಘಟನೆ ಕೊಲ್ಹಾರ (Kolhar)  ತಾಲೂಕಿನ ಚಿಕ್ಕ ಆಸಂಗಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಕಲ್ಲಯ್ಯ ಹಿರೇಮಠ (13) ಎಂದು ಗುರುತಿಸಲಾಗಿದೆ.

    ನಿನ್ನೆ ಶಾಲೆಯಿಂದ (School) ಮನೆಗೆ ಬಂದಿದ್ದ ಬಾಲಕ ಜಮೀನಿನಲ್ಲಿದ್ದ ತನ್ನ ತಂದೆ ಗಂಗಯ್ಯನನ್ನು ಭೇಟಿಯಾಗಲು ತೆರಳಿದ್ದ. ಈ ವೇಳೆ ಕಾಲು ಜಾರಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದು ಬಾಲಕ ಸಾವಿಗೀಡಾಗಿದ್ದಾನೆ. ಕತ್ತಲಾದರೂ ಮನೆಗೆ ವಾಪಸ್ ಮರಳದ ಬಾಲಕನಿಗೆ ಹುಡುಕಾಟ ಆರಂಭಿಸಿದ್ದರು. ಇದನ್ನೂ ಓದಿ: ನಟ ಅನಂತ್ ನಾಗ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

    ಇಂದು ಬೆಳಗ್ಗೆ ಬಾಲಕನ ಶವ ಜಮೀನಿನ ಬಳಿ ಹಾದು ಹೋಗಿರುವ ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯಲ್ಲಿ ಪತ್ತೆಯಾಗಿದೆ.

     ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಿಂಬು ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ನಟಿ ಹನ್ಸಿಕಾ ಮೋಟ್ವಾನಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k