Tag: ಕೊಲ್ಹಾಪುರ

  • ದೂದ್‌ಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಜಲಸಮಾಧಿ

    ದೂದ್‌ಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಜಲಸಮಾಧಿ

    ಚಿಕ್ಕೋಡಿ: ದೂದ್‌ಗಂಗಾ ನದಿಯಲ್ಲಿ (Doodhganga River) ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಜಲಸಮಾಧಿ ಆಗಿರುವ ಘಟನೆ ಮಹಾರಾಷ್ಟ್ರದ (Maharashtra)  ಕೊಲ್ಹಾಪುರ (Kolhapur) ಜಿಲ್ಲೆಯ ಕಾಗಲ ತಾಲೂಕಿನ ಬಸ್ತವಾಡೆ ಸೇತುವೆ ಬಳಿ ನಡೆದಿದೆ.

    ಕಾಗಲ ತಾಲೂಕಿನ ಅನ್ನುರ ಗ್ರಾಮದ ಜಾತ್ರೆಗೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯುವಾಗ ದುರ್ಘಟನೆ ನಡೆದಿದೆ. ಮೃತರಲ್ಲಿ ಇಬ್ಬರು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿಗಳಾಗಿದ್ದಾರೆ. ರೇಶ್ಮಾ ದಿಲೀಪ್ ಏಳಮಲೇ (34), ಯಶ್ ದಿಲೀಪ್ ಏಳಮಲೇ (17) ಹಾಗೂ ಇಬ್ಬರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಜಿತೇಂದ್ರ ಲೋಕರೆ (36) ಹಾಗೂ ಸವಿತಾ ಅಮರ ಕಾಂಬಳೆ (27) ಮೃತ ದುರ್ದೈವಿಗಳು. ಇದನ್ನೂ ಓದಿ: ಮನೆಯಲ್ಲೇ ಮತದಾನ ಮಾಡಿದ ಅನ್ಸಾರಿ, ಮನಮೋಹನ್‌ ಸಿಂಗ್‌, ಜೋಶಿ

    ಮೃತರ ಶವಗಳನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ. ಕಾಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೊಬೈಲ್ ಕೊಡದಿದ್ದಕ್ಕೆ ಸುತ್ತಿಗೆಯಿಂದ ಹೊಡೆದು ತಮ್ಮನ ಹತ್ಯೆಗೈದ ಅಣ್ಣ

  • ಕರ್ನಾಟಕ ನೆರೆ ರಾಜ್ಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 3.4 ತೀವ್ರತೆ ಭೂಕಂಪ

    ಕರ್ನಾಟಕ ನೆರೆ ರಾಜ್ಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 3.4 ತೀವ್ರತೆ ಭೂಕಂಪ

    ಮುಂಬೈ: ಕರ್ನಾಟಕದ ನೆರೆ ರಾಜ್ಯ ಮಹಾರಾಷ್ಟ್ರದ (Maharashtra) ಕೊಲ್ಹಾಪುರದಲ್ಲಿ (Kolhapur) 3.4 ತೀವ್ರತೆಯ ಭೂಕಂಪವಾಗಿದೆ (Earthquake) ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

    06:45 ರ ಸುಮಾರಿಗೆ ಕಂಪನದ ಅನುಭವವಾಗಿದೆ. ಕಂಪನವು 5 ಕಿಮೀ ಆಳದಲ್ಲಿ ಆಗಿದೆ. ಇದಕ್ಕೂ ಮೊದಲು ಆಗಸ್ಟ್ 11 ರಂದು 4.3 ತೀವ್ರತೆಯ ಭೂಕಂಪವು ಪೋರ್ಟ್‌ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭೂಕಂಪವಾಗಿತ್ತು. ಇದನ್ನೂ ಓದಿ: ಲಿವ್ ಇನ್ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯಕರನ ಅಪ್ರಾಪ್ತ ಮಗನ ಹತ್ಯೆ – ಖತರ್‌ನಾಕ್‌ ಲೇಡಿ ಅಂದರ್

    ಈ ಭಾಗಗಳಲ್ಲಿ 02:56 ರ ಸುಮಾರಿಗೆ ಭೂಕಂಪವಾಗಿತ್ತು. ಭೂಕಂಪದ 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಅಂದಾಜಿಸಿದೆ. ಇದನ್ನೂ ಓದಿ: ಇನ್ಮುಂದೆ ತಿರುಪತಿ ಹೋಗುವವರು ಕೈಯಲ್ಲಿ ಕೋಲು ಹಿಡಿದುಕೊಳ್ಳಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಾಟ್ಸಾಪ್‍ನಲ್ಲಿ ಔರಂಗಜೇಬ್ ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ

    ವಾಟ್ಸಾಪ್‍ನಲ್ಲಿ ಔರಂಗಜೇಬ್ ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ

    ಮುಂಬೈ: ಮೊಘಲ್ ಚಕ್ರವರ್ತಿ ಔರಂಗಜೇಬ್ (Aurangzeb) ಚಿತ್ರವನ್ನು ತನ್ನ ವಾಟ್ಸಾಪ್ (Whatsapp) ಪ್ರೊಫೈಲ್ ಫೋಟೋವನ್ನಾಗಿ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ (Mumbai) ಪೊಲೀಸರು ಬಂಧಿಸಿದ್ದಾರೆ.

    ಬಂಧನಕ್ಕೊಳಗಾದ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 298 ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು 153 ಎ ಅಡಿಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಪ್ರಕರಣ ದಾಖಲಿಸಲಾಗಿದೆ. ಬಂಧನದ ಬಳಿಕ ಆತನನ್ನು ವಿಚಾರಣೆ ನಡೆಸಿ, ಸೂಕ್ತ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

    ಹಿಂದೂ ಪರ ಸಂಘಟನೆಗಳು ಔರಂಗಜೇಬ್ ಚಿತ್ರ ಹಾಕಿರುವ ಸ್ಕ್ರೀನ್‍ಶಾಟ್‍ನ್ನು ಪೊಲೀಸರಿಗೆ ಸಲ್ಲಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದವು. ಇತ್ತೀಚೆಗೆ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ವಿಚಾರವಾಗಿ ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಕೋಮು ಉದ್ವಿಗ್ನ ಘಟನೆಗಳು ನಡೆದಿದ್ದವು.

    ಕೊಲ್ಹಾಪುರದಲ್ಲಿ (Kolhapur) ಟಿಪ್ಪು ಸುಲ್ತಾನ್ (Tipu Sultan) ಚಿತ್ರವನ್ನು ಆಕ್ಷೇಪಾರ್ಹ ಆಡಿಯೋದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದರಿಂದಾಗಿ ಕಲ್ಲು ತೂರಾಟ ನಡೆದಿತ್ತು. ಅಲ್ಲದೇ ಮೆರವಣಿಗೆಯೊಂದರಲ್ಲಿ ಔರಂಗಜೇಬ್ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು. ಇದರಿಂದಾಗಿ ನಡೆದ ಗಲಭೆಯಲ್ಲಿ ಹಲವರು ಗಾಯಗೊಂಡಿದ್ದರು. ಇದನ್ನೂ ಓದಿ: ವಿಧಾನಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿದ ಸಚಿವ ಎಂ.ಬಿ ಪಾಟೀಲ್

  • ಕ್ರಿಕೆಟರ್ ಅಜಿಂಕ್ಯ ರಹಾನೆ ತಂದೆ ಬಂಧನ

    ಕ್ರಿಕೆಟರ್ ಅಜಿಂಕ್ಯ ರಹಾನೆ ತಂದೆ ಬಂಧನ

    ನವದೆಹಲಿ: ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟರ್ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್ ಬಾಬು ರಾವ್ ರಹಾನೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದಾರೆ.

    ಇಂದು ಮಧುಕರ್ ಅವರು ಚಲಾಯಿಸುತ್ತಿದ್ದ ಕಾರ್ 67 ವರ್ಷದ ಮಹಿಳೆಯೊಬ್ಬರ ಮೇಲೆ ಹರಿದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಮಧುಕರ್ ಅವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಮಧುಕರ್ ಅವರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹುಂಡೈ ಐ20 ಕಾರಿನಲ್ಲಿ ಹೋಗುತ್ತಿದ್ದ ವೇಳೆ ವಾಹನದ ನಿಯಂತ್ರಣ ತಪ್ಪಿ ಕಣಗಲ್ ಪ್ರದೇಶದ ಬಳಿ ಆಶಾತಾಯ್ ಕಾಂಬ್ಳೆ ಎಂಬ ಮಹಿಳೆಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಸ್ಥಳದಲ್ಲಿದ್ದವರು ಮಹಿಳೆಯನ್ನ ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಕೊಲ್ಹಾಪುರ ಪೊಲೀಸರು ಐಪಿಸಿ ಸೆಕ್ಷನ್ 304ಎ, 337, 338, 279 ಹಾಗೂ 184ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

  • ಶಾಕಿಂಗ್: ತಾಯಿಯನ್ನೇ ಕೊಂದು ಹೃದಯ ತೆಗೆದು ಚಟ್ನಿಯೊಂದಿಗೆ ತಿಂದ!

    ಶಾಕಿಂಗ್: ತಾಯಿಯನ್ನೇ ಕೊಂದು ಹೃದಯ ತೆಗೆದು ಚಟ್ನಿಯೊಂದಿಗೆ ತಿಂದ!

    ಮುಂಬೈ: ತಿನ್ನಲು ಊಟ ಸಿಗದ ಕಾರಣ 27 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಕೊಂದು ಆಕೆಯ ಹೃದಯವನ್ನು ತಿಂದಿದ್ದಾನೆ ಎಂಬ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ.

    ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ತಾಯಿಯನ್ನು 65 ವರ್ಷದ ಯೆಲಾವಾ ಎಂದು ಗುರುತಿಸಲಾಗಿದೆ. ಆರೋಪಿ ಸುನಿಲ್ ನನ್ನು ಶಾಹುಪುರಿ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸುನಿಲ್ ತನ್ನ ತಾಯಿಯನ್ನು ಇರಿದು ಕೊಂದು ಆಕೆಯ ಹೃದಯವನ್ನ ಚಟ್ನಿ ಹಾಗೂ ಮೆಣಸಿನಪುಡಿಯೊಂದಿಗೆ ನೆಂಚಿಕೊಂಡು ತಿಂದಿದ್ದಾನೆ. ಕೆಲವು ಗಂಟೆಗಳ ಬಳಿಕ ಆತ ಮನೆಯಿಂದ ಹೊರಬಂದಿದ್ದು, ಆತನ ಕೈಗಳು ರಕ್ತಸಿಕ್ತವಾಗಿತ್ತು ಎಂದು ವರದಿಯಾಗಿದೆ.

    ಘಟನೆ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರೋ ಶಹಾಪುರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಮೋರೆ, ಸುನಿಲ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ. ಈತನಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಹೆಂಡತಿ ತನ್ನ ಮಕ್ಕಳೊಂದಿಗೆ ಮುಂಬೈನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ ಅಂತ ಹೇಳಿದ್ರು.

    ಘಟನೆ ನಡೆದ ದಿನ ಸುನಿಲ್ ಕಂಠಪೂರ್ತಿ ಕುಡಿದಿದ್ದ. ಮೊದಲು ಪಕ್ಕದ ಮನೆಗೆ ಹೋಗಿ ಊಟ ಕೇಳಿದ್ದ. ಆದ್ರೆ ಅವರು ಏನೂ ಕೊಡದೇ ಇದ್ದಾಗ ತನ್ನ ಮನೆಗೆ ಹೋಗಿದ್ದಾನೆ. ಮನೆಗೆ ಹೋದ ನಂತರ ತಾಯಿಯೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಕೋಪದಲ್ಲಿ ಆಕೆಯನ್ನ ಇರಿದು ಕೊಂದಿದ್ದಾನೆ. ನಂತರ ಆಕೆಯ ಹೃದಯವನ್ನು ತೆಗೆದು ಪ್ಲೇಟ್‍ನಲ್ಲಿ ಇಟ್ಟಿದ್ದಾನೆ. ಮನೆಯಲ್ಲಿ ಚಟ್ನಿ ಹಾಗೂ ಪೆಪ್ಪರ್ ಸ್ಪ್ರೇ ಪತ್ತೆಯಾಗಿದೆ. ಅದನ್ನು ಆತ ಹೃದಯದ ಮೇಲೆ ಉದುರಿಸಿದ್ದ. ಹೃದಯದ ಸ್ವಲ್ಪ ಭಾಗವನ್ನು ಆತ ತಂದಿರಬಹುದು ಎಂಬ ಶಂಕೆಯಿದೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ರು.