Tag: ಕೊಲ್ಲೂರು

  • ಭಾರೀ ಮಳೆಗೆ ಕೊಚ್ಚಿ ಹೋಯ್ತು ರಸ್ತೆ: ಶಿವಮೊಗ್ಗ-ಹೊಸನಗರ-ಕೊಲ್ಲೂರು ಮಾರ್ಗ ಬಂದ್

    ಭಾರೀ ಮಳೆಗೆ ಕೊಚ್ಚಿ ಹೋಯ್ತು ರಸ್ತೆ: ಶಿವಮೊಗ್ಗ-ಹೊಸನಗರ-ಕೊಲ್ಲೂರು ಮಾರ್ಗ ಬಂದ್

    ಶಿವಮೊಗ್ಗ/ರಾಯಚೂರು: ಶಿವಮೊಗ್ಗ ಜಿಲ್ಲೆಯಲ್ಲೀ ಭಾರೀ ಮಳೆಯಾಗುತ್ತಿದ್ದು ಹೊಸನಗರ ತಾಲೂಕಿನಲ್ಲಿ ಕಳೆದ 24 ತಾಸಿನಲ್ಲಿ 146 ಮಿಲಿ ಮೀಟರ್ ಮಳೆಯಾಗ್ತಿದೆ. ಶಿವಮೊಗ್ಗ-ಹೊಸನಗರ-ಕೊಲ್ಲೂರು ಮಾರ್ಗ ಬಂದ್ ಆಗಿದೆ.

     

    ಹೊಸನಗರ ತಾಲೂಕು ಕೋಡುರು ಬಳಿ ಮಳೆ ನೀರಿನ ರಭಸಕ್ಕೆ ಸೇತುವ ಕಾಮಗಾರಿಗಾಗಿ ಮಾಡಿದ್ದ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದೆ. ರಾಜ್ಯ ಹೆದ್ದಾರಿ ಬಂದ್ ಆಗಿದ್ದು, ಪರ್ಯಾಯ ಮಾರ್ಗದಲ್ಲಿ ವಾಹನ ಸಂಚರಿಸುತ್ತಿದೆ.

    ರಾಯಚೂರು: ರಾಯಚೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತರ ಮುಖದಲ್ಲಿ ಮಂದಹಾಸ ಮೂಡಿದ್ರೆ ನಗರದ ಜನ ಜೀವನ ಅಸ್ತವ್ಯಸ್ತವಾಗಿದೆ. ತಗ್ಗುಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರ ದುಸ್ತರವಾಗಿದೆ.

    ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಗೆ ನಗರದ ರೈಲ್ವೇ ಒಳಸೇತುವೆಗೆ ನೀರು ನುಗ್ಗಿದ್ದು ವಾಹನ ಸವಾರರು ಪರದಾಟುತ್ತಿದ್ದಾರೆ. ಮೋಡ ಕವಿದ ವಾತಾವರಣ ಮುಂದುವರೆದಿದ್ದು ಮಳೆ ಮುಂದುವರೆಯುವ ಲಕ್ಷಣಗಳಿವೆ.

     

  • ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪುದುಚೆರಿ ಸಿಎಂ ಭೇಟಿ

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪುದುಚೆರಿ ಸಿಎಂ ಭೇಟಿ

    ಉಡುಪಿ: ಸುಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇಂದು ಪುದುಚೆರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಮೂಕಾಂಬಿಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಕೆಲಕಾಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ರು. ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಮಂತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕೊನೆಗೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್ ಕೃಷ್ಣಮೂರ್ತಿ ಅವರು ಮುಖ್ಯಮಂತ್ರಿಯನ್ನು ಸನ್ಮಾನಿಸಿದರು.

    ಕೆಲವು ದಿನಗಳ ಹಿಂದಷ್ಟೆ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಕುಟುಂಬ ಸಮೇತರಾಗಿ ಆಗಮಿಸಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.