Tag: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

  • ಪ್ರಸಾದ್‌ ಯೋಜನೆಯಡಿ ಕೊಲ್ಲೂರು ದೇವಸ್ಥಾನ ಸೇರಿಸಿ: ನಿರ್ಮಲಾ ಸೀತಾರಾಮನ್‌ಗೆ ಬಿ.ವೈ.ರಾಘವೇಂದ್ರ ಮನವಿ

    ಪ್ರಸಾದ್‌ ಯೋಜನೆಯಡಿ ಕೊಲ್ಲೂರು ದೇವಸ್ಥಾನ ಸೇರಿಸಿ: ನಿರ್ಮಲಾ ಸೀತಾರಾಮನ್‌ಗೆ ಬಿ.ವೈ.ರಾಘವೇಂದ್ರ ಮನವಿ

    – ಕೇಂದ್ರ ಹಣಕಾಸು ಸಚಿವೆ ಭೇಟಿಯಾದ ಶಿವಮೊಗ್ಗ ಸಂಸದ
    – ನಬಾರ್ಡ್‌ ಸಹಾಯಧನ ಬಾಕಿ ಉಳಿದ ಹಣ ಶೀಘ್ರ ಬಿಡುಗಡೆಗೆ ಮನವಿ

    ನವದೆಹಲಿ: ಪ್ರಸಾದ್‌ ಯೋಜನೆಯಡಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವನ್ನು (Kollur Mookambika Temple) ಸೇರಿಸುವಂತೆ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್‌ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಮನವಿ ಮಾಡಿದ್ದಾರೆ.

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾಗಿದ್ದಾರೆ. ಈ ವೇಳೆ ಹಲವಾರು ಬೇಡಿಕೆಗಳನ್ನು ಸಚಿವರ ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿಲ್ಲ, ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಮಾತ್ರ ನಿರ್ಬಂಧಿಸಲು ನಿರ್ಧಾರ: ದಿನೇಶ್ ಗುಂಡೂರಾವ್

    ಕೊಲ್ಲೂರು ಮೂಕಾಂಬಿಕಾ ದೇವಾಲಯವು ಧಾರ್ಮಿಕ ಮತ್ತು ಪ್ರಕೃತಿ ಸೌಂದರ್ಯದಿಂದ ಕೂಡಿದ್ದು, ಪ್ರವಾಸೋದ್ಯಮಕ್ಕೆ ಉತ್ತಮ ಸ್ಥಳವಾಗಿದೆ. ಪ್ರವಾಸಿಗರ ಆಕರ್ಷಣೆಯಿಂದ ಹೆಚ್ಚಿನ ಹೂಡಿಕೆ ಸಾಧ್ಯವಾಗಲಿದೆ. ಶಿವಮೊಗ್ಗ, ಮಂಗಳೂರು ಹಾಗೂ ಉಡುಪಿ CGHS ಕ್ಷೇಮ ಕೇಂದ್ರಗಳಿಗೆ ಹುದ್ದೆಗಳ ಮಂಜೂರಾತಿ ಹಾಗೂ ಅನುದಾನ ಬಿಡುಗಡೆಗೆ ಆದಷ್ಟು ಬೇಗ ಅನುಮೋದನೆ ನೀಡಬೇಕೆಂದು ಕೇಳಿಕೊಂಡಿದ್ದಾರೆ.

    ನಬಾರ್ಡ್ ಸಹಾಯಧನ ಬಾಕಿ ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡಿ. ಈ ಯೋಜನೆಯಿಂದ ರಾಜ್ಯದ ಅಡಿಕೆ ಬೆಳೆಗಾರರಿಗೆ ಮೂಲಸೌಕರ್ಯ ಹಾಗೂ ಮೌಲ್ಯವರ್ಧನೆಯ ಲಾಭ ಸಿಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದ್ದಾರೆ. ಇದನ್ನೂ ಓದಿ: ಉಕ್ಕು ವಲಯ ಅಭಿವೃದ್ಧಿ – ಒಡಿಶಾ ಮುಖ್ಯಮಂತ್ರಿ ಜೊತೆ ಹೆಚ್‌ಡಿಕೆ ಚರ್ಚೆ

  • ಕೊಲ್ಲೂರಲ್ಲಿ ಚಂಡಿಕಾ ಹೋಮದಿಂದ ಸಂಗ್ರಹವಾಯ್ತು 1.77 ಕೋಟಿ ರೂ.

    ಕೊಲ್ಲೂರಲ್ಲಿ ಚಂಡಿಕಾ ಹೋಮದಿಂದ ಸಂಗ್ರಹವಾಯ್ತು 1.77 ಕೋಟಿ ರೂ.

    ಉಡುಪಿ: ದಕ್ಷಿಣ ಭಾರತಾದ್ಯಂತ ಭಕ್ತರನ್ನು ಹೊಂದಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಚಂಡಿಕಾ ಹೋಮದಂದಲೇ ವಾರ್ಷಿಕ 1.77 ಕೋಟಿ ರೂಪಾಯಿ ಆದಾಯ ಬಂದಿದೆ.

    ದೇಗುಲದ ಆದಾಯವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2024-25ನೇ ಸಾಲಿನಲ್ಲಿ 71 ಕೋಟಿ ರೂ. ದಾಟಿದೆ. ಇದು ಕಳೆದ ವರ್ಷಕ್ಕಿಂತ 3 ಕೋಟಿ ರೂ. ಹೆಚ್ಚು. ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಸಂಗ್ರಹವಾದ ನಗದು ಹಾಗೂ ಚಿನ್ನಾಭರಣ, ಚಂಡಿಕಾ ಹೋಮ ಸೇರಿ ವಿವಿಧ ಪೂಜೆಗಳಿಂದ ಬರುವ ಆದಾಯ, ನಿತ್ಯ ಪೂಜೆ, ಆನ್‌ಲೈನ್ ಪೂಜೆಗಳ ಆದಾಯವನ್ನು ಇದು ಒಳಗೊಂಡಿದೆ.

    ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಹೊರತುಪಡಿಸಿದರೆ ಕೊಲ್ಲೂರು ರಾಜ್ಯದಲ್ಲೇ ಅತಿ ಹೆಚ್ಚು ಆದಾಯವಿರುವ ಕ್ಷೇತ್ರ.

  • ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ನಟ ಮೋಹನ್‌ಲಾಲ್

    ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ನಟ ಮೋಹನ್‌ಲಾಲ್

    ಮಾಲಿವುಡ್ ನಟ ಮೋಹನ್‌ಲಾಲ್ (Mohanlal) ಕೊಲ್ಲೂರು ಮೂಕಾಂಬಿಕೆ ದೇವಿಯ (Kollur Mookambika Temple) ದರ್ಶನ ಪಡೆದಿದ್ದಾರೆ. ಶೂಟಿಂಗ್‌ಗೆ ಬ್ರೇಕ್ ಹಾಕಿ ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದು ಮೋಹನ್‌ಲಾಲ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಾಗ ಸೆಲೆಬ್ರಿಟಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಚ್ಚ ವಿಶೇಷ ಪೂಜೆ ಸಲ್ಲಿಸಿದ್ದರು.


    ಇದೀಗ ಮಲಯಾಳಂ (Mollywood) ಚಿತ್ರರಂಗದ ಸ್ಟಾರ್ ನಟ ಮೋಹನ್‌ಲಾಲ್ ಭೇಟಿ ನೀಡಿ, ಮುಂಜಾನೆ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ, ಅಭಿಮಾನಿಗಳು ಮೋಹನ್‌ಲಾಲ್ ಜೊತೆಗೆ ಸೆಲ್ಫಿ ತೆಗೆಯಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

    ಬರೋಜ್, ಕಣ್ಣಪ್ಪ ಸೇರಿದಂತೆ ಕನ್ನಡದ ಕೆಲವು ಪ್ರಾಜೆಕ್ಟ್‌ಗಳಲ್ಲಿ ಮೋಹನ್‌ಲಾಲ್ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ‘ಮೈತ್ರಿ’ (Mytri Film) ಸಿನಿಮಾದಲ್ಲಿ ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

  • ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಕ್ರಿಕೆಟಿಗ ಕೆ.ಎಲ್‌.ರಾಹುಲ್‌

    ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಕ್ರಿಕೆಟಿಗ ಕೆ.ಎಲ್‌.ರಾಹುಲ್‌

    ಉಡುಪಿ: ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್.ರಾಹುಲ್ (K.L.Rahul) ಮಂಗಳವಾರ ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ (Kollur Mookambika Temple) ಭೇಟಿ ನೀಡಿದರು.

    ಶ್ರೀ ಮುಕಾಂಬಿಕಾ ದೇವಿಯ ದರ್ಶನ ಪಡೆದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಆಡಳಿತ ಮಂಡಳಿಯ ವತಿಯಿಂದ ಕೆ.ಎಲ್.ರಾಹುಲ್ ಅವರನ್ನು ಗೌರವಿಸಲಾಯಿತು. ಇದನ್ನೂ ಓದಿ: ಜ.18ರಂದು ಚಿಕ್ಕಬಳ್ಳಾಪುರದಲ್ಲಿ T20I ಲೀಗ್ – ಕಣದಲ್ಲಿ ಅಬ್ಬರಿಸಲಿದ್ದಾರೆ ಸಚಿನ್, ಯುವಿ, ಜಯಸೂರ್ಯ

    ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್, ಅರ್ಚಕ ಸುರೇಶ್ ಭಟ್ ಈ ಸಂದರ್ಭದಲ್ಲಿ ಜೊತೆಗಿದ್ದರು. ಇಲ್ಲಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ದೇಗುಗಳಿಗೂ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮಂಗಳೂರಿನ ಫೇಮಸ್‌ ಪಬ್ಬಾಸ್‌ಗೆ ಹೋಗಿ ಗಡ್‌ಬಡ್‌ ಕೂಡ ಸವಿದಿದ್ದಾರೆ. ರಾಹುಲ್‌ ಅವರು ತಾವು ಭೇಟಿ ನೀಡಿದ ಸ್ಥಳಗಳ ಫೋಟೋಗಳನ್ನು ಸಾಮಾಜಿಕ ಜಾಲತಣಗಳಲ್ಲಿ ಹಂಚಿಕೊಂಡಿದ್ದಾರೆ.

    ವಿಶ್ವಕಪ್‌ ಟೂರ್ನಿ ನಂತರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿ ಸರಣಿ ಗೆದ್ದುಕೊಟ್ಟಿದ್ದರು. ಅದಾದ ಬಳಿಕ ಈಗ ಆಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅಲಭ್ಯರಾಗಿದ್ದಾರೆ. ಸದ್ಯ ಕೆ.ಎಲ್.ರಾಹುಲ್‌ ವಿಶ್ರಾಂತಿಯಲ್ಲಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ: ವಾರದಲ್ಲಿ 4 ಬಾರಿ ವಿಮಾನ ಸಂಚಾರ ಆರಂಭ – ಜೋಶಿ ಮಾಹಿತಿ

  • ಮುಂದಿನ ಪೀಳಿಗೆಯೂ ಕೊಲ್ಲೂರಿಗೆ ಬರಬೇಕಂದ್ರೆ ‘ದಿ ಕೇರಳ ಸ್ಟೋರಿ’ ಮೂವಿ ನೋಡಿ

    ಮುಂದಿನ ಪೀಳಿಗೆಯೂ ಕೊಲ್ಲೂರಿಗೆ ಬರಬೇಕಂದ್ರೆ ‘ದಿ ಕೇರಳ ಸ್ಟೋರಿ’ ಮೂವಿ ನೋಡಿ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕೇರಳ ಸ್ಟೋರಿ ಚಿತ್ರದ ಪ್ರಚಾರ ಕಾರ್ಯ ನಡೆದಿದೆ. ರಾಷ್ಟ್ರಾದ್ಯಂತ ಭಾರೀ ಚರ್ಚೆ ಎಬ್ಬಿಸಿರುವ ಚಲನಚಿತ್ರದಲ್ಲಿ ಲವ್ ಜಿಹಾದ್ ಕುರಿತು ಬೆಳಕು ಚೆಲ್ಲಲಾಗಿದೆ.

    ಕೊಲ್ಲೂರು ಮೂಕಾಂಬಿಕಾ ದೇಗುಲ (Kolluru Mookambika Temple) ಕ್ಕೆ ಕೇರಳದ ಭಕ್ತರೇ ಹೆಚ್ಚು. ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ಚಿತ್ರ (The Kerala Story) ನೋಡಿ ಎಂಬ ಬೋರ್ಡ್ ಕೊಲ್ಲೂರಿಗೆ ಬರುವ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಆಂಗ್ಲ ಭಾಷೆಯಲ್ಲಿ ಬೋರ್ಡ್ ಇದೆ.

    ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ವಿನೋದ್ ಕೊಲ್ಲೂರು, ವಿಜಯ ಬಳೆಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ನೇತೃತ್ವದಲ್ಲಿ ದೇವಾಲಯದ ದ್ವಾರ ಹಾಗೂ ಆವರಣದ ಎರಡು ಕಡೆ ಬ್ಯಾನರ್ ಅಳವಡಿಸಿದ್ದಾರೆ. ಬ್ಯಾನರ್ ಅಳವಡಿಕೆಗೆ ಪಂಚಾಯತ್ ಪರವಾನಿಗೆ ಕೂಡಾ ಮಾಡಿಸಲಾಗಿದೆ. ಇದನ್ನೂ ಓದಿ: ಶಿಕಾರಿಪುರದಲ್ಲಿ ಬಿ.ವೈ ವಿಜಯೇಂದ್ರ ಗೆಲ್ಲದಂತೆ ದುಷ್ಟ ಶಕ್ತಿಗಳಿಂದ ನಡೆದಿತ್ತಾ ವಾಮಾಚಾರ?

     

  • ನೆರೆ ಪರಿಹಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 1 ಕೋಟಿ ರೂ. ದೇಣಿಗೆ

    ನೆರೆ ಪರಿಹಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 1 ಕೋಟಿ ರೂ. ದೇಣಿಗೆ

    ಉಡುಪಿ: ಪ್ರವಾಹ ಪರಿಸ್ಥಿತಿಯಿಂದ ರಾಜ್ಯದ ಉತ್ತರ ಕರ್ನಾಟಕ ಭಾಗ ಹಾಗೂ ಕರವಾಳಿ ಭಾಗದ ಜಿಲ್ಲೆಗಳು ತತ್ತರಿಸಿವೆ. ಈಗಾಗಲೇ ಕರುನಾಡಿನ ನೋವಿಗೆ ಹಲವು ಜನರು, ಸಂಘ ಸಂಸ್ಥೆಗಳು ಜನರ ನೋವಿಗೆ ಸ್ಪಂಧಿಸಿವೆ. ಸದ್ಯ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲದಿಂದ ಪರಿಹಾರ ದೇಣಿಗೆಯಾಗಿ ಒಂದು ಕೋಟಿ ರೂ. ಘೋಷಣೆಯಾಗಿದೆ.

    ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಇಂದು ಸಂಜೆ ಸಭೆ ಸೇರಿ ಈ ಮಾನವೀಯ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆಯನ್ನು ನೀಡಲು ಎಲ್ಲರೂ ಒಪ್ಪಿದ್ದಾರೆ. ಈ ಬಗ್ಗೆ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ಹೊರಡಿಸಿದೆ.

    ಪಬ್ಲಿಕ್ ಟಿವಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಭಕ್ತರು ದೇವರಿಗೆ ಹರಕೆ ರೂಪದಲ್ಲಿ ಧನ ಸಹಾಯ ಮಾಡುತ್ತಾರೆ. ಜನ ಕಷ್ಟದಲ್ಲಿರುವಾಗ ಸೂರು ಕಳೆದುಕೊಂಡಿರುವಾಗ ದೇಗುಲ ಸಹಾಯ ಮಾಡುವುದು ಜವಾಬ್ದಾರಿ. ತಾಯಿ ಮೂಕಾಂಬಿಕೆಯ ಪ್ರೇರಣೆಯಂತೆ ನೆರೆ ಪರಿಹಾರ ಕೊಡುತ್ತಿದ್ದೇವೆ ಎಂದು ಹೇಳಿದರು.