Tag: ಕೊಲ್ಲೂರು

  • ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ

    ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ

    ಉಡುಪಿ: ಕೊಲ್ಲೂರು ಮೂಕಾಂಬಿಕೆ (Kollur Mookambika) ತಾಯಿಗೆ ಖ್ಯಾತ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಅವರು 4 ಕೋಟಿ ರೂ. ಮೌಲ್ಯದ ವಜ್ರದ ಕಿರೀಟವನ್ನು (Diamond crown) ಅರ್ಪಿಸಿದ್ದಾರೆ.

    ಕೊಲ್ಲೂರು ಮೂಕಾಂಬಿಕೆಯ ಭಕ್ತರಾಗಿರುವ ಇಳಯರಾಜ (Ilaiyaraaja) ಅವರು, ಈ ಹಿಂದೆಯೂ ಮೂಕಾಂಬಿಕೆ ದೇವಿಗೆ ಬಗೆಬಗೆಯ ಆಭರಣ ನೀಡಿ ಭಕ್ತಿ ತೋರಿದ್ದರು. ಈ ಬಾರಿ ದೇವಿಗೆ ವಜ್ರದ ಕಿರೀಟ ಸಹಿತ ಆಭರಣಗಳನ್ನು ಅರ್ಪಿಸಿದ್ದಾರೆ. ಜೊತೆಗೆ ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಿಸಿದ್ದಾರೆ. ಇದನ್ನೂ ಓದಿ: ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

    ಆಭರಣ ಅರ್ಪಿಸುವ ಮುನ್ನ ದೇಗುಲದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ದೇಗುಲದ ಆಡಳಿತ ಮಂಡಳಿ ಹಾಗೂ ಅರ್ಚಕರು ಭಾಗಿಯಾಗಿದ್ದರು. ಕೋಟ್ಯಂತರ ಮೌಲ್ಯದ ಆಭರಣಗಳನ್ನು ಅರ್ಪಿಸಿ ಇಳೆಯರಾಜ ಅವರು ಭಾವುಕರಾಗಿದ್ದು, ಮೂಕಾಂಬಿಕೆಯಿಂದ ತನ್ನ ಜೀವನದಲ್ಲಿ ಪವಾಡ ನಡೆದಿದೆ ಎಂದಿದ್ದಾರೆ. ಬಳಿಕ ದೇಗುಲದ ವತಿಯಿಂದ ಮಹಾದಾನಿ ಇಳಯರಾಜ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

  • ದರ್ಶನ್‌ ಬಿಡುಗಡೆಗೆ ಕೊಲ್ಲೂರು ದೇವಿಯ ಮೊರೆ ಹೋದ ವಿಜಯಲಕ್ಷ್ಮಿ

    ದರ್ಶನ್‌ ಬಿಡುಗಡೆಗೆ ಕೊಲ್ಲೂರು ದೇವಿಯ ಮೊರೆ ಹೋದ ವಿಜಯಲಕ್ಷ್ಮಿ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ (Kollur Mookambika Temple) ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ಆಪ್ತರ ಜೊತೆ ಆಗಮಿಸಿದ್ದಾರೆ.

    ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರಿಗೆ ರಾತ್ರಿ ಆಗಮಿಸಿದ ಅವರು ದೇವಿಯ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಆಸ್ತಿ, ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ: ದರ್ಶನ್‌ಗೆ ಜೈಲೂಟ ಫಿಕ್ಸ್‌ – ಕೋರ್ಟ್‌ ಹೇಳಿದ್ದೇನು?

     

    ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ದರ್ಶನ್‌ ಬಿಡುಗಡೆ ಸಂಬಂಧ ನವ ಚಂಡಿಕಾ ಹೋಮ (Nava Chandika Homa) ನಡೆಯಲಿದೆ. ಮುಂಜಾನೆ ಯಾಗಶಾಲೆಯಲ್ಲಿ ಚಂಡಿಕಾಹೋಮ ನಡೆಯಲಿದ್ದು ದರ್ಶನ್ ಬಂಧಮುಕ್ತಿಗಾಗಿ ವಿಜಯಲಕ್ಷ್ಮಿ ಪ್ರಾರ್ಥನೆ ಮಾಡಲಿದ್ದಾರೆ.

  • ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ಸಾವು- ಮೊಬೈಲ್‍ನಲ್ಲಿ ಕೊನೇ ಕ್ಷಣ ಸೆರೆ

    ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ಸಾವು- ಮೊಬೈಲ್‍ನಲ್ಲಿ ಕೊನೇ ಕ್ಷಣ ಸೆರೆ

    ಉಡುಪಿ: ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು (Kolluru) ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ (Arishina Gundi Falls) ನಡೆದಿದೆ.

    ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಈತ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ ಮತ್ತೋರ್ವ ಯುವಕನ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆ ತೆರಳಿದ್ದಾನೆ. ಈ ವೇಳೆ ಆತ ಕಾಲು ಜಾರಿ ಬಿದ್ದಿದ್ದಾನೆ. ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ದೋಣಿ ಮುಳುಗಿ 15 ಮಂದಿ ಸಾವು, ಹಲವರು ನಾಪತ್ತೆ

    ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಈ ಸಂಬಂಧ ಕೊಲ್ಲೂರು ಠಾಣೆಯಲ್ಲಿ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ ಬೊಮ್ಮಾಯಿ ಭೇಟಿ ರಾಜಕೀಯದ ಬಣ್ಣ ಬೇಡ : ನಟ ರಿಷಬ್ ಶೆಟ್ಟಿ

    ಸಿಎಂ ಬೊಮ್ಮಾಯಿ ಭೇಟಿ ರಾಜಕೀಯದ ಬಣ್ಣ ಬೇಡ : ನಟ ರಿಷಬ್ ಶೆಟ್ಟಿ

    ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಕೊಲ್ಲೂರು ಮೂಕಾಂಬಿಕಾ  (Kollur Mukambika)ದೇವಸ್ಥಾನದಲ್ಲಿ ಭೇಟಿ ಮಾಡಿದ್ದರು. ಈ ಭೇಟಿಗೆ ಹಲವಾರು ಅರ್ಥಗಳನ್ನು ಕಲ್ಪಿಸಲಾಗಿತ್ತು. ಕಿಚ್ಚ ಸುದೀಪ್ ಬಿಜೆಪಿ (BJP) ಅಭ್ಯರ್ಥಿಗಳನ್ನು ಬೆಂಬಲಿಸಿದ್ದರಿಂದ ರಿಷಬ್ ಕೂಡ ಅದೇ ಹಾದಿಯಲ್ಲೇ ಸಾಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಅದಕ್ಕೆ ರಿಷಬ್ ಪ್ರತಿಕ್ರಿಯೆ ನೀಡಿದ್ದಾರೆ.

    ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ‘ಕೊಲ್ಲೂರು ಮುಕಾಂಬಿಕೆ ದರ್ಶನಕ್ಕೆ ಹೋದಾಗ ಮಾನ್ಯ ಮುಖ್ಯಮಂತ್ರಿಗಳ ಭೇಟಿ ಆಯಿತು. ರಾಜಕೀಯದ ಬಣ್ಣ ಬೇಡ. ಕಾಂತಾರದ ಬರವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ’ ಎಂದು ಬರೆದಿದ್ದಾರೆ. ಇದನ್ನೂ ಓದಿ:ಕನ್ನಡದ ನಟಿ ವಿಶಾಖ ಸಿಂಗ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

    ಸಿಎಂ ಬೊಮ್ಮಾಯಿ ಹೇಳಿದ್ದೇನು?

    ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ‘ರಿಷಬ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಿಕ್ಕಿದ್ದು ಆಕಸ್ಮಿಕ. ನಾನು ಬರುವ ಮೊದಲೇ ರಿಷಬ್ ಶೆಟ್ಟಿ ದೇವಸ್ಥಾನದಲ್ಲಿ ಇದ್ದರು. ಹಾಗಾಗಿ ನಾವು ಜೊತೆಗೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದೇವೆ. ಇದು ಯಾವುದು ಪೂರ್ವ ನಿರ್ಧರಿತ ಆಗಿರಲಿಲ್ಲ’ ಎಂದಿದ್ದಾರೆ.

    ಮುಂದುವರೆದು ಮಾತನಾಡಿದ ಸಿಎಂ, ‘ನಮ್ಮ ಸಿದ್ದಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಈ ಹಿಂದೆ ಕೂಡ ರಿಷಬ್ ನಮ್ಮ ಸಿದ್ದಾಂತವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ರಿಷಬ್ ಶೆಟ್ಟಿಯ ವಿಚಾರಗಳು ಹಾಗೆ ಇದೆ. ಅದನ್ನು ಆಗಾಗ ಅವರು ಪ್ರಕಟಣೆ ಮಾಡಿದ್ದಾರೆ. ಅವರು ಕೊಲ್ಲೂರು ದೇಗುಲದ ಒಳಗೆ ಇದ್ದದ್ದು ನನಗೆ ಆಶ್ಚರ್ಯ ಆಯ್ತು. ಬಿಜೆಪಿ, ನಾಯಕತ್ವದ ಬಗ್ಗೆ ಅವರು ಒಲವಿರುವ ಮಾತುಗಳಾಡಿದವರು. ಪ್ರಚಾರಕ್ಕೆ ಬರುವ ಕುರಿತು ಈವರೆಗೆ ಯಾವುದೇ ಮಾತುಕತೆಗಳು ನಮ್ಮ ನಡುವೆ ನಡೆದಿಲ್ಲ. ಮುಂದೆ ಮೂಕಾಂಬಿಕೆ ಏನೆಂದು  ಆಶೀರ್ವಾದ ಕೊಡುತ್ತಾಳೆ ನೋಡೋಣ’ ಎಂದರು.

  • ನಮ್ಮ ಸಿದ್ಧಾಂತಕ್ಕೂ ರಿಷಬ್ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ : ಸಿಎಂ ಬೊಮ್ಮಾಯಿ

    ನಮ್ಮ ಸಿದ್ಧಾಂತಕ್ಕೂ ರಿಷಬ್ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ : ಸಿಎಂ ಬೊಮ್ಮಾಯಿ

    ಕೊಲ್ಲೂರು (Kollur) ಮೂಕಾಂಬಿಕಾ (Mukambika) ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಮತ್ತು ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಭೇಟಿ ಮಾಡಿದ್ದಾರೆ. ಇದೊಂದು ಅನಿರೀಕ್ಷಿತ ಭೇಟಿ ಎಂದು ಹೇಳಲಾಗುತ್ತಿದೆಯಾದರೂ, ನಾನಾ ರೀತಿಯಲ್ಲಿ ಈ ಭೇಟಿಯನ್ನು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಸ್ವತಃ ಬೊಮ್ಮಾಯಿ ಅವರೇ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ‘ರಿಷಬ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಿಕ್ಕಿದ್ದು ಆಕಸ್ಮಿಕ. ನಾನು ಬರುವ ಮೊದಲೇ ರಿಷಬ್ ಶೆಟ್ಟಿ ದೇವಸ್ಥಾನದಲ್ಲಿ ಇದ್ದರು. ಹಾಗಾಗಿ ನಾವು ಜೊತೆಗೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದೇವೆ. ಇದು ಯಾವುದು ಪೂರ್ವ ನಿರ್ಧರಿತ ಆಗಿರಲಿಲ್ಲ’ ಎಂದಿದ್ದಾರೆ. ಇದನ್ನೂ ಓದಿ:ನಟಿ ಶ್ರುತಿ ವಿರುದ್ಧ ಹಿರೆಕೇರೂರಿನಲ್ಲಿ ದೂರು ದಾಖಲು

    ಮುಂದುವರೆದು ಮಾತನಾಡಿದ ಸಿಎಂ, ‘ನಮ್ಮ ಸಿದ್ದಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಈ ಹಿಂದೆ ಕೂಡ ರಿಷಬ್ ನಮ್ಮ ಸಿದ್ದಾಂತವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ರಿಷಬ್ ಶೆಟ್ಟಿಯ ವಿಚಾರಗಳು ಹಾಗೆ ಇದೆ. ಅದನ್ನು ಆಗಾಗ ಅವರು ಪ್ರಕಟಣೆ ಮಾಡಿದ್ದಾರೆ. ಅವರು ಕೊಲ್ಲೂರು ದೇಗುಲದ ಒಳಗೆ ಇದ್ದದ್ದು ನನಗೆ ಆಶ್ಚರ್ಯ ಆಯ್ತು. ಬಿಜೆಪಿ, ನಾಯಕತ್ವದ ಬಗ್ಗೆ ಅವರು ಒಲವಿರುವ ಮಾತುಗಳಾಡಿದವರು. ಪ್ರಚಾರಕ್ಕೆ ಬರುವ ಕುರಿತು ಈವರೆಗೆ ಯಾವುದೇ ಮಾತುಕತೆಗಳು ನಮ್ಮ ನಡುವೆ ನಡೆದಿಲ್ಲ. ಮುಂದೆ ಮೂಕಾಂಬಿಕೆ ಏನೆಂದು  ಆಶೀರ್ವಾದ ಕೊಡುತ್ತಾಳೆ ನೋಡೋಣ’ ಎಂದರು.

    ಈಗಾಗಲೇ ಬಸವರಾಜ ಬೊಮ್ಮಾಯಿ ಅವರ ಆಡಳಿತವನ್ನು ಮೆಚ್ಚಿ ಕಿಚ್ಚ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ನೇರವಾಗಿ ಬಿಜೆಪಿ (BJP) ಪರವಾಗಿ ಪ್ರಚಾರ ಮಾಡುತ್ತೇನೆ ಎನ್ನುವ ಬದಲು, ಸಿಎಂ ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಸುದೀಪ್ ತಿಳಿಸಿದ್ದಾರೆ. ಇದೀಗ ರಿಷಬ್ ಕೂಡ ಪ್ರಚಾರಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ತೇಲಿಬಂದಿದೆ.

    ಬಿಜೆಪಿ ಪರವಾಗಿ ರಿಷಬ್ ಅನೇಕ ಬಾರಿ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಬಂದಾಗಲೂ ರಿಷಬ್ ಅವರನ್ನು ಭೇಟಿ ಮಾಡಿದ್ದರು. ಹಾಗಾಗಿ ಉಡುಪಿ, ದಕ್ಷಿಣ ಕನ್ನಡದ 13 ಕ್ಷೇತ್ರಗಳಲ್ಲಿ ರಿಷಬ್ ಬಳಸಲು ಪ್ಲ್ಯಾನ್ ನಡೆದಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಏನೇ ಮಾಹಿತಿ ಕೇಳಿ ಬಂದರೂ, ತಾವು ರಾಜಕಾರಣಕ್ಕೆ ಬರುವುದಿಲ್ಲ ಎಂದು ಈಗಾಗಲೇ ರಿಷಬ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರು ತಮ್ಮ ಮಾತಿಗೆ ಬದ್ಧರಾಗಿ ಇರುತ್ತಾರಾ ಕಾದು ನೋಡಬೇಕು.

  • ಸಿಎಂ ಬೊಮ್ಮಾಯಿ ಜೊತೆ ಕಾಣಿಸಿಕೊಂಡ ರಿಷಬ್ ಶೆಟ್ಟಿ

    ಸಿಎಂ ಬೊಮ್ಮಾಯಿ ಜೊತೆ ಕಾಣಿಸಿಕೊಂಡ ರಿಷಬ್ ಶೆಟ್ಟಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಜೊತೆ ಕಾಣಿಸಿಕೊಳ್ಳುವ ಮೂಲಕ ಮತ್ತೆ ರಾಜಕಾರಣದ ಪಡಸಾಲೆಯಲ್ಲಿ ಕಾಣಿಸಿಕೊಂಡಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಈ ಬಾರಿಯ ಚುನಾವಣೆಯಲ್ಲಿ ರಿಷಬ್ ಶೆಟ್ಟಿ (Rishabh Shetty) ಸಕ್ರಿಯರಾಗಿರುತ್ತಾರೆ ಎನ್ನುವ ಮಾತು ಹಲವು ತಿಂಗಳಿಂದ ಕೇಳಿ ಬರುತ್ತಲೇ ಇದೆ. ಅದಕ್ಕೆ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೆ, ಸಿಎಂ ಜೊತೆ ಕಾಣಿಸಿಕೊಳ್ಳುವ ಮೂಲಕ ರಿಷಬ್ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದ್ದಾರೆ.

    ಬಸವರಾಜ ಬೊಮ್ಮಾಯಿ ದಂಪತಿ ಇಂದು ಕೊಲ್ಲೂರು (Kollur) ಮೂಕಾಂಬಿಕಾ (Mukambika) ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅದೇ ದೇವಸ್ಥಾನದಲ್ಲೇ ನಟ ರಿಷಬ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮತ್ತೊಬ್ಬ ಸ್ಟಾರ್ ಪ್ರಚಾರಕ ಬಿಜೆಪಿಗೆ ಬರಲಿದ್ದಾರೆ ಎನ್ನುವ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಇದನ್ನೂ ಓದಿ:ಮನೆಮುಂದೆಯೇ ಶವವಾಗಿ ಪತ್ತೆಯಾದ ಖ್ಯಾತ ಕೊರಿಯನ್ ನಟಿ

    ಈಗಾಗಲೇ ಬಸವರಾಜ ಬೊಮ್ಮಾಯಿ ಅವರ ಆಡಳಿತವನ್ನು ಮೆಚ್ಚಿ ಕಿಚ್ಚ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ನೇರವಾಗಿ ಬಿಜೆಪಿ (BJP) ಪರವಾಗಿ ಪ್ರಚಾರ ಮಾಡುತ್ತೇನೆ ಎನ್ನುವ ಬದಲು, ಸಿಎಂ ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಸುದೀಪ್ ತಿಳಿಸಿದ್ದಾರೆ. ಇದೀಗ ರಿಷಬ್ ಕೂಡ ಪ್ರಚಾರಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ತೇಲಿಬಂದಿದೆ.

    ಬಿಜೆಪಿ ಪರವಾಗಿ ರಿಷಬ್ ಅನೇಕ ಬಾರಿ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಬಂದಾಗಲೂ ರಿಷಬ್ ಅವರನ್ನು ಭೇಟಿ ಮಾಡಿದ್ದರು. ಹಾಗಾಗಿ ಉಡುಪಿ, ದಕ್ಷಿಣ ಕನ್ನಡದ 13 ಕ್ಷೇತ್ರಗಳಲ್ಲಿ ರಿಷಬ್ ಬಳಸಲು ಪ್ಲ್ಯಾನ್ ನಡೆದಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಏನೇ ಮಾಹಿತಿ ಕೇಳಿ ಬಂದರೂ, ತಾವು ರಾಜಕಾರಣಕ್ಕೆ ಬರುವುದಿಲ್ಲ ಎಂದು ಈಗಾಗಲೇ ರಿಷಬ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರು ತಮ್ಮ ಮಾತಿಗೆ ಬದ್ಧರಾಗಿ ಇರುತ್ತಾರಾ ಕಾದು ನೋಡಬೇಕು.

  • ಕೊಲ್ಲೂರಮ್ಮನ ದರ್ಶನದಿಂದ ಮನಸ್ಸಿಗೆ ಖುಷಿಯಾಗಿದೆ: ನಿರ್ಮಲಾ ಸೀತಾರಾಮನ್

    ಕೊಲ್ಲೂರಮ್ಮನ ದರ್ಶನದಿಂದ ಮನಸ್ಸಿಗೆ ಖುಷಿಯಾಗಿದೆ: ನಿರ್ಮಲಾ ಸೀತಾರಾಮನ್

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇವರ ವಿಶೇಷ ದರ್ಶನ ಮಾಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ವಿತ್ತ ಸಚಿವೆ ಉಡುಪಿಯಲ್ಲಿ ಎಡೆಬಿಡದ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ.

    ಶುಕ್ರವಾರ ರಾತ್ರಿ ಮಣಿಪಾಲಕ್ಕೆ ಬಂದಿದ್ದ ಅವರು, ಕೊಲ್ಲೂರಿಗೆ ಭೇಟಿಯಾಗಿದ್ದಾರೆ. ಕೊಲ್ಲೂರು ದೇವಸ್ಥಾನದ ಪರವಾಗಿ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿರ್ಮಲಾ ಸೀತಾರಾಮನ್ ಅವರನ್ನು ಸ್ವಾಗತ ಮಾಡಿದರು. ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದೇವಿಯ ವಿಶೇಷ ದರ್ಶನ ಮಾಡಿದ್ದಾರೆ. ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಿದ್ದಾರೆ. ನಂತರ ಕೊಲ್ಲೂರಿನ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳನ್ನು ಸಂದರ್ಶಿಸಿ ಮಹಾ ಪೂಜೆಯಲ್ಲಿ ಭಾಗಿಯಾದರು.

    ಸಚಿವೆ ನಿರ್ಮಲಾ ಸೀತಾರಾಮನ್ ಮಾವ ಜೊತೆಗಿದ್ದು, ದೇವರ ದರ್ಶನ ಮಾಡಿದರು. ದೇವಸ್ಥಾನದ ಯಜ್ಞಶಾಲೆಯಲ್ಲಿ ಚಂಡಿಕಾ ಹೋಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾದರು. ಕೇಂದ್ರ ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬಿಜೆಪಿಯ ಕಾರ್ಯಕರ್ತರು ಸ್ಥಳೀಯ ನಾಯಕರು ಭೇಟಿಯಾದರು. ಸುಮಾರು 20 ನಿಮಿಷಗಳ ಕಾಲ ಸಚಿವೆ ಚರ್ಚಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಇದನ್ನೂ ಓದಿ: ಉಡುಪಿ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್

    ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರ ಜೊತೆ ಸಮಾಲೋಚನೆ ಮಾತುಕತೆ ಮಾಡಿದ ನಿರ್ಮಲಾ ಸೀತಾರಾಮನ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದರ್ಶನ ಆಗಿದ್ದೇನೆ ದೇವರ ದರ್ಶನ, ಚಂಡಿಕಾಹೋಮದ ಸೇವೆಯಿಂದ ಮನಸ್ಸಿಗೆ ಖುಷಿಯಾಗಿದೆ ಎಂದು ಹೇಳಿದರು. ಮುಂದೆ ಮತ್ತೆ ಕ್ಷೇತ್ರಕ್ಕೆ ಭೇಟಿಕೊಡುವುದಾಗಿ ಹೇಳಿದರು. ಇದನ್ನೂ ಓದಿ: 2 ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ಬದುಕುಳಿದ ಕ್ಯಾಂಟರ್ ಚಾಲಕ

  • ಕೊಲ್ಲೂರಲ್ಲಿ ಚಂಡಿಕಾಹೋಮದಲ್ಲಿ ತಟ್ಟೆಗೆ ಜಾರಿ ಬಿದ್ದ ಸೇಬು – ಭಕ್ತರಿಗೆ ರೋಮಾಂಚನ

    ಕೊಲ್ಲೂರಲ್ಲಿ ಚಂಡಿಕಾಹೋಮದಲ್ಲಿ ತಟ್ಟೆಗೆ ಜಾರಿ ಬಿದ್ದ ಸೇಬು – ಭಕ್ತರಿಗೆ ರೋಮಾಂಚನ

    ಉಡುಪಿ: ಶಂಕರಾಚಾರ್ಯರು ಸ್ಥಾಪಿಸಿದ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ಪವಾಡ ನಡೆದಿದೆ. ಚಂಡಕಾಹೋಮಕ್ಕೆ ಅರ್ಪಿಸಿದ್ದ ಹಣ್ಣಿನ ರಾಶಿಯಿಂದ ಸೇಬೊಂದು ಜಾರಿ ತಟ್ಟೆಗೆ ಬಿದ್ದಿದೆ.

    ಕೆಲವು ನಿರ್ಬಂಧಗಳ ನಡುವೆ ನಾಡಿನಾದ್ಯಂತ ನವರಾತ್ರಿ ಉತ್ಸವ ನಡೆಯುತ್ತಿದೆ. ದುರ್ಗೆಯರ ಆರಾಧನೆ ಭಕ್ತಿಭಾವದಿಂದ ನಡೆಯುತ್ತಿದೆ. ಈ ನಡುವೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಚಂಡಿಕಾಹೋಮದ ಸಂದರ್ಭ ಫಲವೊಂದು ಪ್ರಸಾದ ರೂಪದಲ್ಲಿ ತಟ್ಟೆಗೆ ಬಿದ್ದು ಎಲ್ಲರಲ್ಲೂ ರೋಮಾಂಚಕ ಸೃಷ್ಟಿಸಿದೆ.

    ಉಡುಪಿ ಜಿಲ್ಲೆ ಬೈಂದೂರು ತಾಲೂಕು ಕೊಲ್ಲೂರು ಶ್ರೀ ಮೂಕಾಂಬಿಕ ದೇವಿಯ ಸನ್ನಿಧಾನದ ದೃಶ್ಯ ಇದು. ನವರಾತ್ರಿ ಧಾರ್ಮಿಕ ಕೈಂಕರ್ಯಗಳು ಕೊಲ್ಲೂರಲ್ಲಿ ಹತ್ತು ದಿನಗಳ ಹಿಂದೆಯೇ ಆರಂಭವಾಗಿದೆ. ನವಮಿಯ ಈ ಶುಭ ದಿನದಂದು ವಿಶೇಷ ಚಂಡಿಕಾ ಯಾಗದ ಸಂದರ್ಭ ಫಲಗಳನ್ನು ದೇವರಿಗೆ ಅರ್ಪಿಸಲಾಗಿತ್ತು. ಈ ಸಂದರ್ಭ ಹಣ್ಣುಗಳ ರಾಶಿಯಿಂದ ಸೇಬು ಹಣ್ಣು ಎದುರಿದ್ದ ತಟ್ಟೆಗೆ ಜಾರಿ ಬಿದ್ದಿದೆ.

    ಭಕ್ತರು ಇದನ್ನು ದೇವಿಯ ಪ್ರಸಾದ ಎಂದು ಬಣ್ಣಿಸಿದ್ದಾರೆ. ದೇವಿ ಮೂಕಾಂಬಿಕೆ ಸೇವೆಯನ್ನು ಸ್ವೀಕರಿಸಿ ಸಂತುಷ್ಟಳಾಗಿದ್ದಾಳೆ ಎಂದು ಭಕ್ತರು ಜೈಕಾರ ಹಾಕಿದ್ದಾರೆ. ನಾಡಿನ ಸಂಕಷ್ಟ ದೂರವಾಗಲಿ, ಕೊರೊನಾ ಮಹಾಮಾರಿಗೆ ತಡೆ ಸಿಗಲಿ. ದೇವಿ ಸಂತುಷ್ಟಳಾದರೆ ಎಲ್ಲವೂ ಸಾಧ್ಯ ಆಗುತ್ತದೆ. ಜನತೆ ಕೊರೊನಾ ಕಾಲದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ದೇವಿ ಕೃಪೆ ತೋರಲಿದ್ದಾಳೆ ಎಂದು ಸ್ಥಳೀಯ ಭಕ್ತ ಜಗದೀಶ್ ಕೊಲ್ಲೂರು ಹೇಳಿದ್ದಾರೆ.

  • ಸೆ.7ರಿಂದ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭ

    ಸೆ.7ರಿಂದ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭ

    ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ದೇವಿ ದೇವಸ್ಥಾನ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸರ್ವ ಸೇವೆಗಳು ಸೋಮವಾರದಿಂದ ಆರಂಭವಾಗಲಿದೆ. ಮುಜರಾಯಿ ಇಲಾಖೆಯ ಕಮಿಷನರ್ ಮೂಕಾಂಬಿಕ ದೇವಸ್ಥಾನಕ್ಕೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

    ಸೋಮವಾರದಿಂದ ಎಲ್ಲಾ ಸೇವೆಗಳನ್ನು ಆರಂಭಿಸಲು ದೇಗುಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲೆಯ ಬೈಂದೂರು ತಾಲೂಕಿನ ಮೂಕಾಂಬಿಕೆ ಸನ್ನಿಧಿ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ವರಮಾನ ಇರುವ ದೇವಸ್ಥಾನ. ಲಾಕ್‍ಡೌನ್ ಆಗಿರೋದರಿಂದ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಭಕ್ತರಿಗೆ ಲಭ್ಯವಿರಲಿಲ್ಲ. ಹೀಗಾಗಿ ಕಳೆದ 5 ತಿಂಗಳಿಂದ ಕಾತುರರಾಗಿದ್ದ ಮೂಕಾಂಬಿಕಾ ಭಕ್ತರಿಗೆ ಈ ಆದೇಶ ಹರ್ಷ ತಂದಿದೆ.

    ಮೂಕಾಂಬಿಕಾ ಸನ್ನಿಧಾನದಲ್ಲಿ ಕುಂಕುಮಾರ್ಚನೆ, ಲಡ್ಡು ಪ್ರಸಾದ ತುಲಾಭಾರ ಸೇವೆಗಳು ಆರಂಭವಾಗಲಿದೆ. ಕೋವಿಡ್ 19 ನಿಯಮ ಪ್ರಕಾರ ಚಂಡಿಕಾಹೋಮ, ಬೆಳ್ಳಿ ರಥ, ಬಂಗಾರದ ರಥ ಸೇವೆ ನಡೆಸುವುದು ದೇವಸ್ಥಾನಕ್ಕೆ ಸವಾಲಾಗಿದೆ. ಈ ಸೇವೆಗಳಲ್ಲಿ ಎಷ್ಟು ಜನರಿಗೆ ಅವಕಾಶ ಕೊಡಬೇಕು ಎಂಬ ಬಗ್ಗೆ ದೇವಸ್ಥಾನಕ್ಕೆ ಸಾಕಷ್ಟು ಗೊಂದಲ ಇದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅರ್ಚಕರು ಜಿಲ್ಲಾಡಳಿತ ಚರ್ಚೆ ನಡೆಸಿ ನಿಯಮಗಳನ್ನು ರೂಪಿಸಲಿದ್ದಾರೆ.

    ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಮಧ್ಯಾಹ್ನ ಬರುವ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಇದೆ. ರಾತ್ರಿ ಊಟದ ವ್ಯವಸ್ಥೆ ಸದ್ಯಕ್ಕೆ ಇಲ್ಲ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತಗುಂಡಿ ಮಾಹಿತಿ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಎಲ್ಲಾ ಸೇವೆಗಳು ಆರಂಭವಾದರೂ ಕೇರಳ, ತಮಿಳುನಾಡು ಭಕ್ತರು ಸದ್ಯಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲ.

    ನಾನು ತಿಂಗಳಿಗೆ ಒಂದು ಬಾರಿಯಾದರೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಮಾಡುತ್ತೇನೆ. ಆದರೆ ಕಳೆದ 5 ತಿಂಗಳಿಂದ ದೂರದಲ್ಲಿ ನಿಂತು ದೇವರ ದರ್ಶನ ಮಾಡುತ್ತಿದ್ದೆ. ಇದರಿಂದ ಮನಸ್ಸಿಗೆ ಬಹಳ ಬೇಸರವಾಗುತ್ತಿತ್ತು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಮಾಡುವುದು ಮನಸ್ಸಿಗೆ ಕಿರಿಕಿರಿ ಮಾಡುತ್ತಿತ್ತು. ಇದೀಗ ದೇವಸ್ಥಾನದಲ್ಲಿ ದೇವರ ಸೇವೆಗಳು ಆರಂಭವಾಗುತ್ತದೆ ಎಂದು ಕೇಳಿ ಖುಷಿಯಾಗಿದೆ. ದೇವರನ್ನು ಹತ್ತಿರದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಅದರಲ್ಲೂ ಆಷಾಢ, ಶ್ರಾವಣ ಮಾಸದಲ್ಲಿ ದೇವಿ ದೇವಸ್ಥಾನಗಳಿಗೆ ಹಲವಾರು ವರ್ಷಗಳಿಂದ ಭೇಟಿ ಕೊಡುತ್ತಿದ್ದೇನೆ. ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭವಾಗಿದೆ ಎಂದು ತಿಳಿದು ಬಹಳ ಸಂತೋಷವಾಗುತ್ತಿದೆ ಎಂದು ಮೂಕಾಂಬಿಕೆಯ ಭಕ್ತೆ ಸಂಧ್ಯಾ ರಮೇಶ್ ಹೇಳಿದ್ದಾರೆ.

  • ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಉಡುಪಿ: ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಮೂರು ಕಡೆ ಆನ್‍ಲೈನ್ ಪೂಜೆಗೆ ಅವಕಾಶ ನೀಡಲಾಗಿದೆ. ಕೊಲ್ಲೂರಿನಲ್ಲಿ ಈಗಾಗಲೇ ಭಕ್ತರಿಗೆ ಅವಕಾಶವಿದ್ದು, ಕೋಟ ಅಮೃತೇಶ್ವರಿ ಮತ್ತು ಮಂದಾರ್ತಿ ಕ್ಷೇತ್ರ ಹೊಸ ಸೇರ್ಪಡೆಯಾಗಿದೆ.

    ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಆನ್‍ಲೈನ್ ಪೂಜೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮುಜರಾಯಿ ಇಲಾಖೆಯಿಂದ ಉಡುಪಿ ಜಿಲ್ಲೆಯೊಳಗೆ ಮೂರು ದೇವಸ್ಥಾನಗಳಿಗೆ ಅವಕಾಶವಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಈಗಾಗಲೇ ಭಕ್ತರಿಗೆ ಬುಕ್ ಮಾಡಿ ಪೂಜೆ ಮಾಡಿಸಿ, ಪೋಸ್ಟ್ ಮೂಲಕ ಪ್ರಸಾದ ಪಡೆಯುವ ಅವಕಾಶ ಇತ್ತು. ಇದೀಗ ಕೋಟ ಅಮೃತೇಶ್ವರಿ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರಕ್ಕೆ ಬರಲು ಸಾಧ್ಯವಾಗದವರು ಈ ಅವಕಾಶ ಪಡೆಯಬಹುದು.

    ಜೂನ್ 1 ರಿಂದ ನಮ್ಮಲ್ಲಿ ಆನ್‍ಲೈನ್ ಪೂಜೆ ಆರಂಭವಾಗಲಿದೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನ ಮಾಹಿತಿ ನೀಡಿದೆ. ಕೋಟ ಅಮೃತೇಶ್ವರಿ ದೇವರಿಗೆ ವಿಶೇಷ ಅಭಿಷೇಕ ಬೆಳಗ್ಗೆ ಸಂಪನ್ನವಾಗುತ್ತದೆ. ಅಲಂಕಾರ ಪೂಜೆ, ಮಂಗಳಾರತಿ ನಡೆಸಿ ಲಾಕ್ ಡೌನ್ ಸಂದರ್ಭದಲ್ಲಿ ಬಾಗಿಲು ಮುಚ್ಚುತ್ತಿದ್ದರು, ಜೂನ್ 1 ರಿಂದ ದೇವಸ್ಥಾನ ತೆರೆಯಲಿದ್ದು, ಭಕ್ತರಿಗೆ ದರ್ಶನ ಅವಕಾಶ ಸಿಗಲಿದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಮಾದಪ್ಪನ ದರ್ಶನ ಆರಂಭ

    ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಆರಂಭವಾಗಿದೆ. ಭಕ್ತರು ಆನ್‍ಲೈನ್ ಮೂಲಕ ಪೂಜೆ ಬುಕ್ ಮಾಡಬಹುದು. ಸರ್ಕಾರದ ನಿಯಮದಂತೆ ಪೂಜೆ ನಡೆಸುತ್ತೇವೆ. ಜೂನ್ 1ರಿಂದ ಭಕ್ತರಿಗೆ ನೇರ ದರ್ಶನ ಅವಕಾಶವಿದೆ. ಸರ್ಕಾರದ ಸುತ್ತೋಲೆ ಈವರೆಗೆ ನಮ್ಮ ಕೈ ಸೇರಿಲ್ಲ. ದೇಗುಲ ತೆರವಿಗೆ ಎಲ್ಲಾ ಸ್ವಚ್ಛತೆ, ಸಿದ್ಧತೆ ಮಾಡುತ್ತೇವೆ ಎಂದು ಮಂದರ್ತಿ ದೇವಸ್ಥಾನ ಧರ್ಮದರ್ಶಿ ಧನಂಜಯ ಶೆಟ್ಟಿ ಮಾಹಿತಿ ನೀಡಿದ್ದಾರೆ.