Tag: ಕೊಲ್ಕತ್ತಾ ನೈಟ್ ರೈಡರ್ಸ್

  • ಐಪಿಎಲ್‌ನಲ್ಲಿ ಅತೀ ಕಳಪೆ ಪ್ರದರ್ಶನ ನೀಡಿದ ಟಾಪ್-5 ತಂಡಗಳಿವು

    ಐಪಿಎಲ್‌ನಲ್ಲಿ ಅತೀ ಕಳಪೆ ಪ್ರದರ್ಶನ ನೀಡಿದ ಟಾಪ್-5 ತಂಡಗಳಿವು

    15ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಕ್ರಿಕೆಟ್ ಪ್ರೇಮಿಗಳ ಕಣ್ಣಿಗೆ ಹಬ್ಬ ಶುರುವಾಗಿದೆ. ಅತೀ ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಹೊಳೆ ಹರಿಸುವ ಮೂಲಕ ಗಮನ ಸೆಳೆಯುವ ಈ ಟೂರ್ನಿಯನ್ನು ಕಣ್ತುಂಬಿಗೊಳ್ಳಲು ಕರ್ನಾಟಕ ಸೇರಿದಂತೆ ಹಲವು ರಾಜ್ಯದ ಪ್ರಮುಖ ನಗರಗಳಲ್ಲಿ ಹೋಟೆಲ್‌ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತದೆ.

    ಆದರೆ, ಕೆಲವೊಮ್ಮೆ ಕ್ರೀಡಾ ಪ್ರೇಮಿಗಳ ನಿರೀಕ್ಷೆಯನ್ನು ಹುಸಿಗೊಳಿಸಿ ಅತಿ ಕಡಿಮೆ ರನ್ ಕಲೆಹಾಕಿರುವ ತಂಡಗಳೂ ಇವೆ. ಅವುಗಳ ಮಾಹಿತಿಯನ್ನಿಲ್ಲಿ ನೋಡಬಹುದಾಗಿದೆ.

    ಕಡಿಮೆ ರನ್ ಗಳಿಸಿದ ಟೀಂ ಗಳು!

    ipl

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
    2017ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 49 ರನ್‌ಗಳಿಗೆ ಆಲೌಟ್ ಆಗುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಕಡಿಮೆ ರನ್ ದಾಖಲಿಸಿರುವ ತಂಡಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಬರಲು ಕಾರಣವಾಯಿತು. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ

    ರಾಜಸ್ಥಾನ್ ರಾಯಲ್ಸ್ (RR)
    2008ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಜಸ್ಥಾನ್ ರಾಯಲ್ಸ್ ‌2009ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 58 ರನ್ ಕಲೆ ಹಾಕುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ ಕಲೆಹಾಕಿದ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತು.

    ipl

    ಡೆಲ್ಲಿ ಡೇರ್‌ಡೆವಿಲ್ಸ್ (DD)
    ಮೊದಲೇ ಹೇಳಿದಂತೆ ಡೆಲ್ಲಿ ಫ್ರಾಂಚೈಸಿ ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ತೀರಾ ಕೆಟ್ಟ ಪ್ರದರ್ಶನವನ್ನು ನೀಡಿದ್ದು, 66 ರನ್‌ಗಳ ಅಲ್ಪ ಮೊತ್ತ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. 2017ರ ಐಪಿಎಲ್ ಆವೃತ್ತಿಯ ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 66 ರನ್ ಕಲೆಹಾಕಿ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ ಗಳಿಸಿದ 3ನೇ ತಂಡ ಎಂದೂ ಕೂಡ ಎನಿಸಿಕೊಂಡಿದೆ. ಇದನ್ನೂ ಓದಿ: 2023 ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ

    ಡೆಲ್ಲಿ ಕ್ಯಾಪಿಟಲ್ಸ್ (DK)
    2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡ ಡೆಲ್ಲಿ ಫ್ರಾಂಚೈಸಿ ಆ ಆವೃತ್ತಿಗೂ ಮುನ್ನ ಡೆಲ್ಲಿ ಡೇರ್‌ಡೆವಿಲ್ಸ್ ಎಂಬ ಹೆಸರನ್ನು ಹೊಂದಿತ್ತು. ಸದ್ಯ ಇತ್ತೀಚಿನ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿರುವ ಡೆಲ್ಲಿ ತಂಡ ಈ ಹಿಂದಿನ ಆವೃತ್ತಿಗಳಲ್ಲಿ ತೀರಾ ಕಳಪೆ ಪ್ರದರ್ಶನವನ್ನು ನೀಡಿರುವ ಸಾಕಷ್ಟು ಉದಾಹರಣೆಗಳಿವೆ. 2017ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ತಂಡ 67ರನ್ ಕಲೆಹಾಕಿತ್ತು. ಈ ಮೊತ್ತ ಐಪಿಎಲ್ ಇತಿಹಾಸದಲ್ಲಿ ತಂಡವೊಂದು ದಾಖಲಿಸಿದ 4ನೇ ಕಡಿಮೆ ಮೊತ್ತ ಎನಿಸಿಕೊಂಡಿದೆ.

    ipl

    ಕೋಲ್ಕತ್ತಾ ನೈಟ್ ರೈಡರ್ಸ್ (KKR) 
    ಐಪಿಎಲ್ 2008ರ ಆವೃತ್ತಿಯಲ್ಲಿ ಕೆಕೆಆರ್ ಉತ್ತಮ ಪ್ರದರ್ಶನ ನೀಡಿದ್ದಕ್ಕಿಂತ ಕಳಪೆ ಪ್ರದರ್ಶನ ನೀಡಿದ್ದೇ ಹೆಚ್ಚು. ಇನ್ನು ಈ ಆವೃತ್ತಿಯಲ್ಲಿ ಇದೇ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಅಂದು ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿದ್ದ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಕೇವಲ 67 ರನ್‌ಗಳಿಗೆ ಆಲೌಟ್ ಆಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕಲೆಹಾಕಿದ್ದ ಈ ಮೊತ್ತ ಐಪಿಎಲ್ ಇತಿಹಾಸದಲ್ಲಿ ತಂಡವೊಂದು ದಾಖಲಿಸಿದ 5ನೇ ಕಡಿಮೆ ಮೊತ್ತ ಎನಿಸಿಕೊಂಡಿತು. ನಂತರ 2ನೇ ಆವೃತ್ತಿಯಲ್ಲಿ ಐಪಿಎಲ್ ಕಿರೀಟವನ್ನೇ ಮುಡಿಗೇರಿಸಿಕೊಂಡಿದ್ದನ್ನು ನೋಡಬಹುದು.

  • ಐಪಿಎಲ್ ಇಂದು ಮುಂಬೈ- ಕೋಲ್ಕತ್ತಾ ಮುಖಾಮುಖಿ

    ಐಪಿಎಲ್ ಇಂದು ಮುಂಬೈ- ಕೋಲ್ಕತ್ತಾ ಮುಖಾಮುಖಿ

    ಅಬುಧಾಬಿ: ಐಪಿಎಲ್‍ನ ಐದನೇ ಪಂದ್ಯ ಇಂದು ಅಬುಧಾಬಿಯಲ್ಲಿ ನಡೆಯಲಿದೆ. ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪರಸ್ಪರ ಮುಖಾಮುಖಿಯಾಗಲಿವೆ.

    ಟೂರ್ನಿಯಲ್ಲಿ ಎರಡು ತಂಡಗಳು ಹೇಳಿಕೊಳ್ಳುವಂತ ಪ್ರದರ್ಶವನ್ನು ನೀಡಿಲ್ಲ. ಒಟ್ಟು 8 ಪಂದ್ಯಗಳನ್ನಾಡಿರುವ ಮುಂಬೈ 4 ಪಂದ್ಯಗಳನ್ನು ಗೆದ್ದು, ನಾಲ್ಕು ಪಂದ್ಯಗಳನ್ನು ಸೋತಿದೆ. 8 ಪಂದ್ಯಗಳನ್ನಾಡಿರುವ ಕೆಕೆಆರ್, ಕೇವಲ ಮೂರು ಪಂದ್ಯಗಳನ್ನು ಗೆದ್ದು 5 ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ ಮುಂಬೈ 4ನೇ ಸ್ಥಾನದಲ್ಲಿದ್ದರೆ ಕೆಕೆಆರ್ 6ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಡೆಲ್ಲಿಗೆ 8 ವಿಕೆಟ್‍ಗಳ ಭರ್ಜರಿ ಜಯ

    ಪ್ರತಿ ಸೀಸನ್‍ನಲ್ಲಿಯೂ ಮೊದಲಾರ್ಧ ಪಂದ್ಯಗಳನ್ನು ಸೋತು ನಂತರ ಪುಟಿದೇಳುವ ಮುಂಬೈ, ಈ ಪಂದ್ಯವನ್ನು ಗೆಲ್ಲುವ ಮೂಲಕ ಅಬುದುಬೈನಲ್ಲಿ ಶುಭಾರಂಭ ಮಾಡಲು ರೆಡಿಯಾಗಿದೆ. ಕಳೆದ ಸೀಸನ್ ನಿಂದಲೂ ಕೊಲ್ಕತ್ತಾ ತಂಡ ಐಪಿಎಲ್‍ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಕೆಕೆಆರ್ ತಂಡದಲ್ಲಿ ಸ್ಟಾರ್ ಆಟಗಾರರ ಬಳಗವೇ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಶುಭಮನ್ ಗಿಲ್, ರಾಹುಲ್ ತ್ರಿಪಾಟಿ, ಇಯನ್ ಮೊರ್ಗನ್, ನೀತಿಶ್ ರಾಣ, ಅಂಡ್ರೆ ರಸೆಲ್ ರಂತ ಹೊಡಿಬಡಿ ಆಟಗಾರರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸುನೀಲ್ ನರೈನ್, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ ಆಟಗಾರರು ಎದುರಾಳಿ ತಂಡವನ್ನು ಕಟ್ಟಿಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

    ಮುಂಬೈ ಇಂಡಿಯನ್ಸ್ ಬಲಾಬಲವನ್ನು ನೊಡುವುದಾದರೇ ಡಿ ಕಾಕ್, ಸೂರ್ಯ ಕುಮಾರ್ ಯಾದವ್, ಇಶನ್ ಕಿಶಾನ್, ಪೊಲಾರ್ಡ್ ರಂತ ಅಬ್ಬರಿಸುವ ಬ್ಯಾಟ್ಸ್‍ಮನ್‍ಗಳಿದ್ದಾರೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದ್ದು, ಮುಂಬೈ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಲಿದೆ. ಬೌಲಿಂಗ್ ವಿಭಾಗದಲ್ಲಿ ಮುಂಬೈ ಅತ್ಯಂತ ಬಲಿಷ್ಟವಾಗಿದೆ. ರಾಹುಲ್ ಚಹಾರ್, ಟ್ರೆಂಟ್ ಬೋಲ್ಟ್, ಅಡಮ್ ಮಿಲ್ನೆ, ಬೂಮ್ರರಂತ ಬೌಲರ್‍ಗಳನ್ನು ಕೆಕೆಆರ್ ತಂಡ ಎದುರಿಸಬೇಕಿದೆ.

    ಮುಂಬೈ ನಾಯಕ ರೋಹಿತ್ ಶರ್ಮಾ, ಕೆಕೆಆರ್ ವಿರುದ್ಧ ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ 18 ರನ್ ಗಳಿಸಿದರೆ ಐಪಿಎಲ್ ತಂಡಯೊಂದರ ವಿರುದ್ಧ 1000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯಗಳಲ್ಲಿ ಒಟ್ಟು 4 ಬಾರಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ.

    ಕೆಕೆಆರ್ ತಂಡಕ್ಕಿಂತಲೂ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಮುಂಬೈ ಬಲಿಷ್ಟವಾಗಿದೆ. ಎರಡು ತಂಡಗಳಲ್ಲಿನ ಸ್ಟಾರ್ ಆಟಗಾರರ ಮೇಲೆ ಭಾರೀ ನಿರೀಕ್ಷೆಯಿದೆ. ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು ಗೆಲುವಿಗಾಗಿ ಉಭಯ ತಂಡಗಳು ಕಾದಾಟ ನಡೆಸಲಿವೆ.