Tag: ಕೊಲ್ಕತ್ತ

  • ವ್ಯಕ್ತಿಯ ಬೆಲ್ಟ್, ಶೂಗಳಲ್ಲಿ 3 ಕೋಟಿ ಮೌಲ್ಯದ ಚಿನ್ನ ಪತ್ತೆ!

    ವ್ಯಕ್ತಿಯ ಬೆಲ್ಟ್, ಶೂಗಳಲ್ಲಿ 3 ಕೋಟಿ ಮೌಲ್ಯದ ಚಿನ್ನ ಪತ್ತೆ!

    ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆದಾಯ ತೆರಿಗೆ ಗುಪ್ತಚರ ನಿರ್ದೇಶನಾಲಯವು(ಡಿಆರ್‍ಐ) ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ ನನ್ನು ವಶಪಡಿಸಿಕೊಂಡಿದೆ.

    ಡಿಆರ್ ಐ  ಅಧಿಕಾರಿಗಳು ನ್ಯೂ ಜಲ್‍ಪಾಲ್‍ಗುರಿ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಅನುಮಾನ ಮೇರೆಗೆ ಪರಿಶೀಲನೆ ನಡೆಸಿದಾಗ ಆತನ ಬಳಿ 56 ಚಿನ್ನದ ಬಿಸ್ಕತ್ ಪತ್ತೆಯಾಗಿದ್ದು, ಸುಮಾರು 9.2 ಕೆ.ಜಿ ತೂಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಮಣಿಪುರದ ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಚಿನ್ನವನ್ನು ಮ್ಯಾನ್ಮಾರ್ ದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ವ್ಯಕ್ತಿ ಅಸ್ಸಾಂನ ಗುವಾಹಾಟಿಯಲ್ಲಿನ ಮಣಿಪುರಿ ವ್ಯಕ್ತಿಯಿಂದ ಚಿನ್ನದ ಬಿಸ್ಕತ್ ಗಳನ್ನು ಪಡೆದುಕೊಂಡಿದ್ದನು ಎಂದು ತನಿಖೆ ಸಂಸ್ಥೆ ತಿಳಿಸಿದೆ.

    ಸದ್ಯಕ್ಕೆ ಡಿಆರ್‍ಐ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದೆ. ಈತ ಪಶ್ಚಿಮ ಬಂಗಾಳದ ಹೂಗ್ಲಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಈತ ಕಳ್ಳಸಾಗಾಣಿಕೆಯ ಚಿನ್ನದ ಬಿಸ್ಕತ್ ಗಳನ್ನು ತನ್ನ ಸೊಂಟದ ಸುತ್ತಲೂ ವಿಶೇಷವಾದ ಬಟ್ಟೆಯಿಂದ ತಯಾರಿಸಿದ್ದ ಬೆಲ್ಟ್ ನಲ್ಲಿ ಮತ್ತು ಸ್ಪೋರ್ಟ್ಸ್ ಶೂಗಳ ಒಳಭಾಗದಲ್ಲಿ ಅಡಗಿಸಿಕೊಂಡಿದ್ದನು ಎಂದು ಡಿಆರ್ ಐ ಹೇಳಿಕೆ ನೀಡಿದೆ.

    ಸದ್ಯಕ್ಕೆ ಡಿಆರ್‍ಐಯೂ ಬಂಧಿತ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದೆ. ಆತನಿಂದ ವಿದೇಶಿ ಮೂಲದ 9.296 ಕೆಜಿ ಚಿನ್ನದ ಬಿಸ್ಕತ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 3.08 ಕೋಟಿ ರೂ. ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತಕ್ಕೆ ಗೆಲುವು

    ವಿಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತಕ್ಕೆ ಗೆಲುವು

    ಕೋಲ್ಕತ್ತ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಶುಭಾರಂಭ ಪಡೆದಿದೆ.

    ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟಿ-20 ಪಂದ್ಯಗಳ ಪೈಕಿ, ಮೊದಲನೇ ಪಂದ್ಯ ಕೋಲ್ಕತ್ತದ ಈಡನ್‍ಗಾರ್ಡ್ ಮೈದಾನದಲ್ಲಿ ಇಂದು ನಡೆದಿತ್ತು. ಮೊದಲು ಬ್ಯಾಟ್ ಮಾಡಿ ವಿಂಡೀಸ್ 109 ರನ್‍ಗಳಿಸಿತ್ತು. 110 ರನ್ ಗಳ ಸುಲಭ ಸವಾಲನ್ನು ಸ್ವೀಕರಿಸಿದ ಭಾರತ 17.5 ಓವರ್ ಗಳಲ್ಲಿ 110 ರನ್ ಗಳಿಸುವ ಮೂಲಕ 5 ವಿಕೆಟ್‍ಗಳಿಂದ ಗೆಲುವು ಸಾಧಿಸಿತು.

    ಪ್ರಾರಂಭದಲ್ಲೇ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 6 ರನ್ ಹಾಗೂ ಆರಂಭಿಕ ಆಟಗಾರ ಶಿಖರ್ ಧವನ್ 3 ರನ್ ಗಳಿಸಿ ಔಟಾದರು. ನಂತರ ಬಂದ ಕ್ರುನಾಲ್ ಪಾಂಡ್ಯಾ 21 ರನ್ ಹಾಗೂ  ದಿನೇಶ್ ಕಾರ್ತಿಕ್‍  31 ರನ್ ಗಳು ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತ್ತು. ವಿಂಡೀಸ್ ಪರ ಫ್ಯಾಬಿಯನ್ ಅಲೆನ್ 27 ರನ್, ಕೀಮೊ ಪೌಲ್ 15 ರನ್ ಹೊಡೆಯುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ್ದರು. ಟೀಂ ಇಂಡಿಯಾದ ಕುಲ್‍ದೀಪ್ ಯಾದವ್ 4 ಓವರ್ ಗಳಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದರೆ, ಉಮೇಶ್ ಯಾದವ್, ಜಸ್ಪ್ರಿತ್ ಬೂಮ್ರಾ, ಕೆ ಖಲೀಲ್ ಅಹಮದ್ ಹಾಗೂ ಕ್ರುನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಬ್ಬಾವಿನೊಂದಿಗೆ ಸೆಲ್ಫಿ- ಕೂದಲೆಳೆ ಅಂತರದಲ್ಲಿ ಅರಣ್ಯಾಧಿಕಾರಿ ಪಾರು!

    ಹೆಬ್ಬಾವಿನೊಂದಿಗೆ ಸೆಲ್ಫಿ- ಕೂದಲೆಳೆ ಅಂತರದಲ್ಲಿ ಅರಣ್ಯಾಧಿಕಾರಿ ಪಾರು!

    ಕೋಲ್ಕತ್ತಾ: ಜನರನ್ನು ಮನರಂಜಿಸೋಕೆ ಹೋಗಿ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.

    ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಜನರನ್ನು ಮನರಂಜಿಸಲು ಹೋಗಿ ಅಪಾಯವನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದರು. ಸಹೋದ್ಯೋಗಿಯ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಜಲ್ಪೈಗುರಿ ಹಳ್ಳಿಗಾಡಿನ ಜನತೆ ಅರಣ್ಯ ಅಧಿಕಾರಿಗಳಿಗೆ ಕರೆಮಾಡಿ, ತಮ್ಮ ಮೇಕೆಗಳನ್ನು ರಾಕ್ ಪೈಥಾನ್ ಹೆಬ್ಬಾವು ತಿಂದು ಹಾಕುತ್ತಿದೆ ಎಂದು ದೂರು ನೀಡಿದ್ದರು. ಹೆಬ್ಬಾವನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಹಳ್ಳಿಗೆ ಧಾವಿಸಿ, 18 ಅಡಿ ಉದ್ದದ ಸುಮಾರು 40 ಕೆ.ಜಿ ತೂಕದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

    ಈ ಸಂದರ್ಭದಲ್ಲಿ ಸೆಲ್ಫಿ ಕ್ರೇಜ್ ಇದ್ದ ಅರಣ್ಯಾಧಿಕಾರಿ ಹೆಬ್ಬಾವನ್ನು ತಮ್ಮ ಕೊರಳಿಗೆ ಹಾಕಿಕೊಂಡು ಸೇರಿದ್ದ ಜನರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಆಗ ಹೆಬ್ಬಾವು ಅಧಿಕಾರಿಯ ಕೊರಳಿಗೆ ಹಿಂದಿನಿಂದ ಬಿಗಿಯಾಗಿ ಸುತ್ತಿಕೊಳ್ಳಲಾರಂಭಿಸಿತ್ತು.

    ಕೂಡಲೇ ಅರಣ್ಯಾಧಿಕಾರಿ “ಹಾವಿನ ಬಾಲವನ್ನು ಹಿಡಿ” ಎಂದು ಕಿರುಚುತ್ತಾ ಜನರಿಂದ ದೂರ ಓಡಿದರು. ಇದನ್ನು ನೋಡುತ್ತಲೇ ಸುತ್ತಲಿದ್ದ ಜನರೆಲ್ಲ ಅಲ್ಲಿಂದ ದೂರ ಓಡಿಹೋದರು. ಕೂಡಲೇ ಎಚ್ಚೆತ್ತ ಅವರ ಸಹಾಯಕ ಅಧಿಕಾರಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹಾವನ್ನು ಅವರ ಕುತ್ತಿಗೆಯಿಂದ ಬಿಡಿಸಿದ್ದಾರೆ.

    ಈ ಘಟನೆಯನ್ನು ನೋಡುತ್ತಿದ್ದ ಜನರ ಪ್ರಾಣವೇ ಬಾಯಿಗೆ ಬಂದಂತಾಗಿತ್ತು. ಕೆಲವರು ಅರಣ್ಯಾಧಿಕಾರಿಯ ಶೌರ್ಯದ ಕುರಿತು ಗುಣಗಾನ ಮಾಡಿದ್ರೆ, ಇನ್ನು ಕೆಲವರು ಅದನ್ನು ಟೀಕಿಸಿದರು. ಕೆಲ ಸಮಯದ ನಂತರ ಹಾವನ್ನು ಸುರಕ್ಷಿತವಾಗಿ ಕಾಡಿನೊಳಕ್ಕೆ ಬಿಡಲಾಯಿತು.