Tag: ಕೊಲೆ ಶಂಕೆ

  • ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ- ಹೊಡೆದು ನೇಣಿಗೆ ಹಾಕಿರೋ ಶಂಕೆ

    ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ- ಹೊಡೆದು ನೇಣಿಗೆ ಹಾಕಿರೋ ಶಂಕೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮಹಿಳೆಯನ್ನು ಕತೀಜಾ ಕೂಬ್ರ (29) ಎಂದು ಗುರುತಿಸಲಾಗಿದೆ. ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕತೀಜಾ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

    ಪತಿ ಮಹೆಬೂಬ್ ಪರೀಷ್ ಪತ್ನಿಯನ್ನ ಹೊಡೆದು ನೇಣು ಹಾಕಿರೋ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೃತ ಕತೀಜಾ ಗಂಡ, ಮಾವ ಮತ್ತು ನಾದಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪನ್ನಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಸದುಗುಂಟೆಪಾಳ್ಯ ಪೊಲೀಸರು (Sadduguntepalya Police) ತನಿಖೆ ನಡೆಸುತ್ತಿದ್ದಾರೆ.

    ಮೃತ ಮಹಿಳೆ ತಂದೆ ಜಾವೀದ್ ವುಲ್ಲಾ ಖಾನ್ ಸುದ್ದಿಗಾರರೊಂದಿಗೆ ಮಾತನಾಡಿ, ಮದುವೆಯಾದಾಗಿನಿಂದ ಮಗಳ ಜೊತೆ ಯಾವಾಗ್ಲೂ ಜಗಳ ಅಗುತಿತ್ತು. ನನ್ನ ಅಳಿಯನಿಗೆ ಇನ್ನೋರ್ವ ಮಹಿಳೆಯ ಜೊತೆ ಸಂಬಂಧವಿತ್ತು. ಹಾಗಾಗಿ ನನ್ನ ಮಗಳನ್ನ ಅಳಿಯನೇ ಸಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬರ್ ಶಾರೀಕ್ ಹತ್ಯೆಗೆ ಸಂಚು ಶಂಕೆ- ಆಸ್ಪತ್ರೆ ಸುತ್ತ ಹೆಚ್ಚಿದ ಭದ್ರತೆ

    ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ. ಮದುವೆಯಾದಾಗಿನಿಂದ ಪ್ರತಿನಿತ್ಯ ಜಗಳ ಅಗುತಿತ್ತು. ಹಾಗಾಗಿ ಅವನೇ ಕೊಂದಿದ್ದಾನೆ. ನನ್ನ ಮಗಳಿಗೆ ಪ್ರತಿನಿತ್ಯ ಹೊಡೆಯೋದು ಮಾಡ್ತಿದ್ದ. ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಅವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

    Live Tv
    [brid partner=56869869 player=32851 video=960834 autoplay=true]

  • ತಮ್ಮನ ಕೊಲೆ ಸೇಡಿಗೆ ಬಿಸಿಯೂಟಕ್ಕೆ ವಿಷ ಬೆರೆಸಿದ 7ನೇ ತರಗತಿ ವಿದ್ಯಾರ್ಥಿನಿ !

    ತಮ್ಮನ ಕೊಲೆ ಸೇಡಿಗೆ ಬಿಸಿಯೂಟಕ್ಕೆ ವಿಷ ಬೆರೆಸಿದ 7ನೇ ತರಗತಿ ವಿದ್ಯಾರ್ಥಿನಿ !

    ಲಕ್ನೋ: ತಮ್ಮನನ್ನು ಕೊಲೆ ಮಾಡಿದರು ಅಂತಾ 7ನೇ ತರಗತಿ ಬಾಲಕಿಯೊಬ್ಬಳು ಬಿಸಿಯೂಟದಲ್ಲಿ ವಿಷ ಬೆರೆಸಿ ಎಲ್ಲ ವಿದ್ಯಾರ್ಥಿಗಳನ್ನು ಕೊಲೆ ಮಾಡಲು ಹೋಗಿ ಸಿಕ್ಕಿಬಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಬಂಕಟ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯಲ್ಲಿ ಪ್ರಕರಣ ನಡೆದಿದ್ದು, ಬಾಲಕಿ ಹಾಗೂ ಆಕೆಯ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನಡೆದದ್ದು ಏನು?
    ಇದೇ ಶಾಲೆಯಲ್ಲಿ ಬಾಲಕಿ 7ನೇ ತರಗತಿ ಹಾಗೂ ಆಕೆಯ ತಮ್ಮ 3ನೇ ತರಗತಿ ಓದುತ್ತಿದ್ದರು. 2018ರ ಏಪ್ರಿಲ್‍ನಲ್ಲಿ ಬಾಲಕಿಯ ತಮ್ಮನನ್ನು 5ನೇ ತರಗತಿ ವಿದ್ಯಾರ್ಥಿಯೊಬ್ಬ ಕೊಲೆ ಮಾಡಿದ್ದ. ಕೊಲೆ ಮಾಡಿದ್ದ ಆರೋಪಿ ಬಾಲಾಪರಾಧಿ ಕಾರಾಗೃಹದಲ್ಲಿ ಇದ್ದಾನೆ. ಆದರೆ ತಮ್ಮನ ಕೊಲೆಯಿಂದ ಮನನೊಂದ ಬಾಲಕಿ ಶಾಲೆಯ ಎಲ್ಲ ಮಕ್ಕಳ ಮೇಲೆ ದ್ವೇಷ ಸಾಧಿಸಲು ಕೊಲೆಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ.

    ಮಂಗಳವಾರ ಶಾಲೆಯ ಬಿಸಿಯೂಟದ ಮನೆಯಿಂದ ಬಾಲಕಿ ಹೊರಬಂದಿದ್ದಳು. ಬಾಲಕಿಯ ಕೈಗಳಿಂದ ವಿಷದ ವಾಸನೆ ಬರುತ್ತಿದ್ದು, ಬೇಳೆ ಸಾರಿನ ಪಾತ್ರೆ ತೆರೆದಿದ್ದರಿಂದ ಶಂಕೆ ವ್ಯಕ್ತಪಡಿಸಿದ ಅಡುಗೆ ಸಹಾಯಕಿ ಶಾಲೆಯ ಪ್ರಾಚಾರ್ಯ ಭ್ರಿಗುನಾಥ್ ಪ್ರಸಾದ್ ಅವರಿಗೆ ದೂರು ನೀಡಿದ್ದರು. ಅದೃಷ್ಟವಶಾತ್ ಯಾವುದೇ ಮಕ್ಕಳು ಊಟ ಮಾಡದಿರಲಿಲ್ಲ. ಹೀಗಾಗಿ ಭಾರೀ ಅನಾಹುತ ತಪ್ಪಿದೆ.

    ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಬಂದು ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಬಾಲಕಿ ಹಾಗೂ ಆಕೆಯ ತಾಯಿಯನ್ನು ಸುತ್ತುವರೆದು ಥಳಿಸಿ, ಕೂಡಿ ಹಾಕಿದ್ದರು. ಸ್ಥಳಕ್ಕೆ ಬಂದ ಪೊಲೀಸರು ತಾಯಿ ಹಾಗೂ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಆಹಾರವನ್ನು ವಿಷ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೂರು ದಿನಗಳ ನಂತರ ವರದಿ ಬರಲಿದ್ದು, ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲು ಬರುವುದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

  • ಮಠಾಧಿಪತಿ ಮೇಲೆ ಆರೋಪ ಮಾಡುವುದು ಸರಿಯಲ್ಲ – ಪೇಜಾವರ ಶ್ರೀ

    ಮಠಾಧಿಪತಿ ಮೇಲೆ ಆರೋಪ ಮಾಡುವುದು ಸರಿಯಲ್ಲ – ಪೇಜಾವರ ಶ್ರೀ

    ಹುಬ್ಬಳ್ಳಿ: ಕಳೆದ ಎರಡು ವರ್ಷಗಳಿಂದ ಶಿರೂರು ಶ್ರೀಗಳು ಆನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಹೆಚ್ಚಿನ ಸಮಯ ಕಳೆದಿದ್ದಾರೆ. ಆದರೆ ಅವರ ಸಾವಿನ ಕುರಿತು ಮಠಾಧಿಪತಿಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

    ಶಿರೂರು ಲಕ್ಷ್ಮೀವರತೀರ್ಥ ಶ್ರೀಗಳ ಅಗಲಿಕೆ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಗಳ ಅಗಲಿಕೆ ನೋವು ತಂದಿದೆ. ಆದರೆ ಸ್ವಾಮೀಜಿಗಳು ಯಾರನ್ನು ಕೊಲೆ ಮಾಡುವುದಿಲ್ಲಾ. ಅವರದು ಒಂದು ಸಹಜ ಸಾವು ಎಂದು ಪೇಜಾವರ ಶ್ರೀಗಳು ಹೇಳಿದರು.

    ಸಾವಿನ ಸಂಶಯದ ಕುರಿತ ಮಾಧ್ಯಮಗಳ ಪ್ರಶ್ನೆಗೆ, ವಿಷ ಪ್ರಾಶನ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದ ಪೇಜಾವರ ಶ್ರೀ ಗಳು, ಶಿರೂರು ಸ್ವಾಮೀಜಿಗಳಿಗೆ ವಿಷ ನೀಡುವ ಪ್ರಮೇಯವೇ ಇಲ್ಲ. ಸ್ವಾಮಿಗಳು ಯಾರನ್ನು ಕೊಲೆ ಮಾಡುವುದಿಲ್ಲ. ಅಲ್ಲದೆ ಅವರನ್ನು ಕೊಲೆ ಮಾಡಿ ಪಟ್ಟಕ್ಕೆ ಏರುವ ಉದ್ದೇಶ ಯಾರಿಗೂ ಇಲ್ಲ. ಕಾರಣ ಇಲ್ಲದೆ ಯಾರ ಮೇಲು ಸುಮ್ಮನೆ ಆರೋಪ ಮಾಡಬಾರದು. ಶ್ರೀಗಳ ಕೊಲೆ ಎಂಬುದು ಶುದ್ಧ ಸುಳ್ಳು. ಅವರದು ಒಂದು ಸಹಜ ಸಾವು. ಅವರ ಸಾವಿನ ಹಿಂದೆ ಸಂಶಯ ಮಾಡುವುದು ಸರಿಯಲ್ಲಾ. ಕಳೆದ ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದರು, ಕಳೆದ ಎರಡು ಮೂರ ವರ್ಷಗಳ ಹಿಂದಿನಿಂದ ಪೂಜೆ ಮಾಡುವುದನ್ನು ಸಹ ಬಿಟ್ಟಿದ್ದಾರೆ. ಹೀಗಾಗಿ ಅವರ ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲಾ ಎಂದರು.

    ಬುಧವಾರ ಬೆಳಗ್ಗೆ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದರು. ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗಿಗುತ್ತಲೇ ಇತ್ತು. ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶಿರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಪದೇ ಪದೇ ಆಸ್ಪತ್ರೆಗಳಿಗೆ ಚೆಕಪ್ ಗೆ ತೆರಳುತ್ತಿದ್ದ ಶ್ರೀಗಳು ಒಮ್ಮೆ ಗುಣಮುಖರಾದ್ರೆ ಮತ್ತೊಮ್ಮೆ ಅನಾರೋಗ್ಯಕ್ಕೆ ಈಡಾಗುತ್ತಲೇ ಇದ್ದರು.