Tag: ಕೊಲೆ ಯತ್ನಿ

  • ಪ್ರೀತಿಗೆ ಅಡ್ಡ ಬಂದವನಿಗೆ ಗುಂಡು ಹಾರಿಸಿ ಕೊಲೆ ಮಾಡಲೆತ್ನಿಸಿದ ಕಿರಾತಕ ಅರೆಸ್ಟ್

    ಪ್ರೀತಿಗೆ ಅಡ್ಡ ಬಂದವನಿಗೆ ಗುಂಡು ಹಾರಿಸಿ ಕೊಲೆ ಮಾಡಲೆತ್ನಿಸಿದ ಕಿರಾತಕ ಅರೆಸ್ಟ್

    ಬೆಳಗಾವಿ: ತನ್ನ ಪ್ರೀತಿಗೆ ಅಡ್ಡ ಬಂದನೆಂದು ಆತನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ.

    ವಿನಾಯಕ ಸೋಮಶೇಖರ ಹೊರಕೇರಿ (26) ಬಂಧಿತ. ಈತ ಕಳೆದ ಡಿಸೆಂಬರ್ 16ರಂದು ಯಮಕನಮರಡಿಯಲ್ಲಿ ಭರಮಾ ದುಪದಾಳೆ ಮೇಲೆ ಗುಂಡಿನ ದಾಳಿ ಮಾಡಿದ್ದ.

    ಆರೋಪಿ ವಿನಾಯಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಈ ವಿಚಾರ ತಿಳಿದ ಯುವತಿಯ ದೂರದ ಸಂಬಂಧಿಯಾಗಿದ್ದ ಭರಮಾ ದುಪದಾಳೆ, ಯುವತಿಗೆ ಬೇರೆ ಮದುವೆ ನಿಶ್ಚಯ ಮಾಡಿದ್ದನು. ಇದರಿಂದ ಸಿಟ್ಟಿಗೆದ್ದ ವಿನಾಯಕ ತಾನು ಪ್ರೀತಿಸಿದ ಹುಡುಗಿಯನ್ನು ಸೇರಲು ಬಿಡದ ಭರಮಾ ಮೇಲೆ ಗುಂಡಿನ ದಾಳಿ ನಡೆಸಿದ್ದ. ಅದೃಷ್ಟವಶಾತ್ ಘಟನೆಯಲ್ಲಿ ಭರಮಾ ಪ್ರಾಣಾಪಾಯದಿಂದ ಪಾರಾಗಿದ್ದರು.

    ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.