Tag: ಕೊಲೆ ಪ್ರಕರಣ

  • ಉರ್ದು ವಿಚಾರಕ್ಕೆ ಚಂದ್ರು ಕೊಲೆ ನಡೆದಿಲ್ಲ – ಅರ್ಧ ಗಂಟೆಯಲ್ಲೇ ಉಲ್ಟಾ ಹೊಡೆದ ಆರಗ

    ಉರ್ದು ವಿಚಾರಕ್ಕೆ ಚಂದ್ರು ಕೊಲೆ ನಡೆದಿಲ್ಲ – ಅರ್ಧ ಗಂಟೆಯಲ್ಲೇ ಉಲ್ಟಾ ಹೊಡೆದ ಆರಗ

    ಬೆಂಗಳೂರು: ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವ ಭರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಯಡವಟ್ಟು ಮಾಡಿಕೊಂಡಿದ್ದಾರೆ. ಹೇಳಿಕೆ ನೀಡಿದ ಅರ್ಧ ಗಂಟೆಯಲ್ಲೇ ಯೂಟರ್ನ್ ಹೊಡೆದಿದ್ದಾರೆ. ಅಲ್ಲದೇ ತಪ್ಪಾಯಿತು ಎಂದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿರುವ ಪ್ರಸಂಗ ನಡೆದಿದೆ.

    ಏ.4ರಂದು ಮಧ್ಯರಾತ್ರಿ ಚಂದ್ರು ಕೊಲೆ ನಡೆದಿತ್ತು. ಉರ್ದು ಮಾತನಾಡಲು ಬರಲ್ಲ ಎಂದಿದ್ದಕ್ಕೆ ಚಂದ್ರು ಕೊಲೆ ಮಾಡಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದರು. ಆ ಮೂಲಕ ಕೋಮು ಗಲಭೆಗೆ ಮತ್ತಷ್ಟು ಪುಷ್ಠಿ ಕೊಡುವಂತೆ ಮಾತನಾಡಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ತಮ್ಮ ಹೇಳಿಕೆಗೆ ಯೂಟರ್ನ್ ಹೊಡೆದಿದ್ದಾರೆ. ಕೊಲೆ ಪ್ರಕರಣ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರು ವಿಲನ್ ರೋಲ್ ಮಾಡ್ತಿದ್ದಾರೋ, ಕಾಮಿಡಿ ರೋಲ್ ಮಾಡ್ತಿದ್ದಾರೋ ಗೊತ್ತಿಲ್ಲ: ಹೆಚ್‌ಡಿಕೆ

    ಆ ದಿನ ಚಂದ್ರು ಮತ್ತು ಸೈಮನ್ ಊಟಕ್ಕೆ ಹೋಗಿದ್ದರು. ಊಟ ಮಾಡಿಕೊಂಡು ಹೋಗುವಾಗ ಆರೋಪಿಗಳು ಮತ್ತು ಚಂದ್ರು ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದು ಕೊಲೆಯಾಗಿದೆ ಎಂದು ಕಮಲ್ ಪಂತ್ ಅವರು ಸ್ಪಷ್ಟಪಡಿಸಿದ್ದಾರೆ. ನಂತರ ಗೃಹ ಸಚಿವರು ತಮ್ಮ ಹೇಳಿಕೆಯಿಂದ ತಪ್ಪಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ.

    ಉರ್ದು ಮಾತಾಡಲು ಚಂದ್ರುವಿಗೆ ಹೇಳಿದ್ದಾರೆ. ಉರ್ದು ಮಾತಾಡಲು ಬರಲಿಲ್ಲ. ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂತ ಹೇಳಿದ್ದಕ್ಕೆ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಬಂಧನ ಆಗಿದೆ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಆರಗ ಜ್ಞಾನೇಂದ್ರ ಯಡವಟ್ಟಿನ ಹೇಳಿಕೆ ನೀಡಿದ್ದರು. ಇದನ್ನೂಓದಿ: ಉರ್ದು ಮಾತನಾಡಲು ಬರದಕ್ಕೆ ಚಂದ್ರು ಕೊಲೆ: ಆರಗ

    ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಗೃಹ ಸಚಿವ ವಿವಾದಾತ್ಮಕ ಹೇಳಿಕೆ ನೀಡುವುದು, ಯೂಟರ್ನ್ ಹೊಡೆಯುವುದು ಆರಗ ಜ್ಞಾನೇಂದ್ರ ಅವರಿಗೆ ಹೊಸದೆನಲ್ಲ. ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ವಿರೋಧ ಪಕ್ಷಗಳು ನನ್ನ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಭಾರಿ ಟೀಕೆಗೆ ಒಳಗಾಗಿದ್ದರು.

    ಹಿಜಾಬ್, ಹಲಾಲ್, ಧ್ವನಿವರ್ಧಕ ತೆರವು ಬೆಳವಣಿಗೆಗಳೆಲ್ಲವೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಾಗಿವೆ. ಆದರೆ ಪ್ರತಿ ಬೆಳವಣಿಗೆಯಲ್ಲೂ ನನಗೆ ವಿಷಯ ಗೊತ್ತಿಲ್ಲ, ತಿಳಿದು ಹೇಳುತ್ತೇನೆ, ಮಾಹಿತಿ ಪಡೆಯುತ್ತೇನೆ ಎಂದು ಬೇಜವಾಬ್ದಾರಿ ಹೇಳಿಕೆಗಳನ್ನೇ ನೀಡುತ್ತಾ ಬಂದಿದ್ದಾರೆ. ಇದನ್ನೂ ಓದಿ: ಚಿಕನ್ ಖರೀದಿ ಮಾಡುವಾಗ ಗಲಾಟೆ – ಯುವಕ ಬರ್ಬರ ಹತ್ಯೆ 

    HDK

    ರಾಜ್ಯದಲ್ಲಿ ಸಾಕಷ್ಟು ಗೊಂದಲದ ರಾಜಕೀಯ ವಾತವರಣ ಇರುವಾಗಲೇ ಮತ್ತೊಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರಿಂದಲೇ ಬೇಜವಾಬ್ದಾರಿ ಹೇಳಿಕೆ ಹೊರಬಂದಿದೆ ಪ್ರತಿಪಕ್ಷಗಳಿಗೆ ದೊಡ್ಡ ಆಹಾರ ಸಿಕ್ಕಿದೆ.

    ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಕ್ಕೊಂದು ಹೇಳಿಕೆ ನೀಡುತ್ತಿರುವ ಅರಗ ಜ್ಞಾನೇಂದ್ರ ಅವರು ಕಾಮಿಡಿ ರೋಲ್ ಮಾಡಲು ಗೃಹ ಸಚಿವರಾಗಿದ್ದಾರಾ? ಅಥವಾ ವಿಲನ್ ರೋಲ್ ಮಾಡುತ್ತೀದ್ದಿರಾ ಎನ್ನುವುದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

  • ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ

    ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ

    ಬೆಳಗಾವಿ: ಅಂಕೋಲಾ ಉದ್ಯಮಿ ಆರ್.ಎನ್ ನಾಯಕ ಕೊಲೆ ಪ್ರಕರಣ ಸಂಬಂಧ ಬೆಳಗಾವಿ ಕೋಕಾ ನ್ಯಾಯಾಲಯ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿತರನ್ನು ದೋಷಿ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.

    ಶಿಕ್ಷೆಯ ಪ್ರಮಾಣ ಕಾಯ್ದಿರಿಸಿ ನ್ಯಾಯಾಧೀಶ ಸಿ.ಎಂ. ಜೋಶಿ ತೀರ್ಪು ನೀಡಿದ್ದಾರೆ. ಎಪ್ರಿಲ್ 4 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಧೀಶ ಸಿ.ಎಂ ಜೋಶಿ ತಿಳಿಸಿದ್ದಾರೆ.

    ಪ್ರಕರಣದ 6, 11 ಹಾಗೂ 16 ನೇ ಆರೋಪಿಗಳನ್ನು ನಿರ್ದೋಷಿ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಆರನೇ ಆರೋಪಿ ಕೇರಳದ ರಬ್ದಿನ್ ಫಿಚೈ, 11ನೇ ಆರೋಪಿ ಬೆಂಗಳೂರಿನ ಮಹ್ಮದ್ ಶಾಬಂದರಿ ಹಾಗೂ 16ನೇ ಆರೋಪಿ ಉತ್ತರ ಕನ್ನಡದ ಆನಂದ ರಮೇಶ್ ನಾಯಕ ಈ ಪ್ರಕರಣದಿಂದ ದೋಷಮುಕ್ತರಾಗಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

    ಉಳಿದಂತೆ ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ, ಐದನೇ ಆರೋಪಿ ಕೇರಳದ ಕೆ.ಎಂ ಇಸ್ಮಾಯಿಲ್, ಏಳನೇ ಆರೋಪಿ ಹಾಸನದ ಮಹೇಶ ಅಚ್ಛಂಗಿ, ಎಂಟನೇ ಆರೋಪಿ ಕೇರಳದ ಸಂತೋಷ ಎಂ.ಬಿ, ಒಂಬತ್ತನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ, ಹತ್ತನೇ ಆರೋಪಿ ಬೆಂಗಳೂರಿನ ಜಗದೀಶ್ ಚಂದ್ರರಾಜ್, 12 ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ್ ಕಶ್ಯಪ್ ದೋಷಿಗಳೆಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.  ಇದನ್ನೂ ಓದಿ: ಇಂದು ರಾಜ್ಯದ ಮೊದಲ ಕೋಕಾ ಕೇಸ್‍ನ ತೀರ್ಪು ಪ್ರಕಟ- ಪಾತಕಿ ಬನ್ನಂಜೆ ರಾಜಾ ಸೇರಿ 13 ಪಾತಕಿಗಳ ಭವಿಷ್ಯ ನಿರ್ಧಾರ

    2013 ಡಿಸೆಂಬರ್ 21ರಂದು ಅಂಕೋಲಾದಲ್ಲಿ ನಡೆದ ಆರ್.ಎನ್ ನಾಯಕ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕೋಕಾ ಕೇಸ್ ದಾಖಲಿಸಲಾಗಿತ್ತು. ಇದು ರಾಜ್ಯದ ಮೊದಲ ಕೋಕಾ ಪ್ರಕರಣವಾಗಿತ್ತು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ. ಪುರಾಣಿಕಮಠ ಹಾಗೂ ಹೆಚ್ಚುವರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ವಕಾಲತ್ತು ವಹಿಸಿದ್ದರು.

  • 1,500 ರೂಪಾಯಿಗೆ ಯುವಕನ ಕೊಲೆ ಮಾಡಿದ ಆರೋಪಿಗಳು ಅರೆಸ್ಟ್

    1,500 ರೂಪಾಯಿಗೆ ಯುವಕನ ಕೊಲೆ ಮಾಡಿದ ಆರೋಪಿಗಳು ಅರೆಸ್ಟ್

    ಬೆಂಗಳೂರು: 1500 ರೂಪಾಯಿಗೆ ಯುವಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿ ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

    ಕಿರಣ್ ಜಾಕ್ಸನ್, ಕಿರಣ್ ಬಚ್ಚನ್, ವಿನೋದ್, ಪವನ್, ಶಶಾಂಕ್, ಹಾಗೂ ಪವನ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು. ಜನವರಿ 4 ರಂದು ರಾತ್ರಿ ಮೆಹಬೂಬ್ ಎಂಬಾತನ ಕೊಲೆ ಮಾಡಲಾಗಿತ್ತು. ಆರೋಪಿ ಕಿರಣ್ ಹಾಗೂ ಲಲಿತ್ ಎಂಬವನ ನಡುವೆ ಈ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿತ್ತು. ಲಲಿತ್ ಫ್ರೀಪೈರ್ ಎಂಬ ಗೇಮ್ ಆಡಿ ಆರೋಪಿ ಜೊತೆ 1500 ರೂಪಾಯಿ ಸೋತಿದ್ದನು. ಇದನ್ನೂ ಓದಿ: ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗ್ಯಾಂಗ್ ಅರೆಸ್ಟ್

    ಈ ಸಂಬಂಧ ಆರೋಪಿಯು ಹಣವನ್ನು ಕೇಳಲು ಹೋದಾಗ ಲಲಿತ್ ಹಾಗೂ ಅವನ ಸ್ನೇಹಿತರು ಆರೋಪಿ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಲಲಿತ್ ಗುಂಪಿನಲ್ಲಿ ಮೃತ ಮೆಹಬೂಬ್ ಕೂಡ ಇದ್ದನು. ಇದೇ ಕಾರಣಕ್ಕೆ ಆರೋಪಿಯು ಗ್ಯಾಂಗ್ ಸಮೇತ ಲಲಿತ್ ಮೇಲೆ ಹಲ್ಲೆ ಮಾಡಲು ತೆರಳಿತ್ತು. ಆದರೆ ಲಲಿತ್ ಸಿಗದೆ ಮೆಹಬೂಬ್ ಸಿಕ್ಕಿದ್ದು, ಮನಸೋ ಇಚ್ಚೆಯಂತೆ ಮೃತನ ಮೇಲೆ ಹಲ್ಲೆ ಮಾಡಿದ್ದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

    ಕೋಣನಕುಂಟೆ ಠಾಣಾ ವ್ಯಾಪ್ತಿಯ ಎಕೆ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು.

  • ಪೊಲೀಸರು ಮುಚ್ಚಿ ಹಾಕಲು ಯತ್ನಿಸಿದ್ದ ಕೇಸ್‌ಗೆ ಮರುಜೀವ- 6 ವರ್ಷಗಳ ನಂತರ ಮತ್ತೆ ಪ್ರಕರಣ ದಾಖಲು!

    ಪೊಲೀಸರು ಮುಚ್ಚಿ ಹಾಕಲು ಯತ್ನಿಸಿದ್ದ ಕೇಸ್‌ಗೆ ಮರುಜೀವ- 6 ವರ್ಷಗಳ ನಂತರ ಮತ್ತೆ ಪ್ರಕರಣ ದಾಖಲು!

    ಹುಬ್ಬಳ್ಳಿ: ಆರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ನಗರದ ದೀಪಾ ಕಿರಣ ಬದ್ದಿ ಎಂಬ ಗೃಹಿಣಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಎರಡು ಬಾರಿ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿದ್ದ ಪಾಲಕರ ಅರ್ಜಿಯನ್ನು 1 ನೇ ಜಿಎಂಎಫ್‌ಸಿ ನ್ಯಾಯಾಲಯ ಪುರಸ್ಕರಿಸಿದೆ. ಆರೋಪಿ ಪತಿ ಸೇರಿ ಐವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿದೆ. ಹೀಗಾಗಿ ಪೊಲೀಸರು ತೆರೆ ಎಳೆಯಲು ಮುಂದಾಗಿದ್ದ ಪ್ರಕರಣಕ್ಕೆ ಈ ಮೂಲಕ ಮರುಜೀವ ಬಂದಿದೆ.

    ದೀಪಾಳ ಸಾವಿಗೆ ಆಕೆಯ ಪತಿ ಸೊರಬದಮಠ ಗಲ್ಲಿಯ ಕಿರಣ ವಿಠಲಸಾ ಬದ್ದಿ, ವಿಠಲಸಾ ಬದ್ದಿ, ಜಯಶ್ರೀ ಬದ್ದಿ, ರಾಜು ಬದ್ದಿ, ಹಾಗೂ ವಿನಯಾ ಹಬೀಬ ಕಾರಣ ಎಂದು ದೀಪಾಳ ಪಾಲಕರು ಸಾಕ್ಷಿ ಸಮೇತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಸರ್ಕಾರಿ ಬಸ್‍ನಲ್ಲಿ ಇಬ್ಬರು ಮಕ್ಕಳ ಜನನ – ಗಿಫ್ಟ್ ಆಗಿ ಸಿಕ್ತು ಜೀವನಪರ್ಯಂತ ಉಚಿತ ಪಾಸ್

    ಪ್ರಕರಣದ ವಿಚಾರಣೆ ನಡೆಸಿದ ಹುಬ್ಬಳ್ಳಿಯ 1 ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ತ್ರಿವೇಣಿ ಈರಗಾರ ಅವರು, ಈ ಐವರು ಆರೋಪಿಗಳು ದೀಪಾಳ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ. ಸತತ ಆರು ವರ್ಷಗಳ ಹೋರಾಟದ ಬಳಿಕ ನ್ಯಾಯಾಲಯದ ಆದೇಶದಂತೆ, ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಪಿರ್ಯಾದಿದಾರರ ಪರವಾಗಿ ವಕೀಲರಾದ ಎಸ್.ಎಂ.ಬಡಸ್ಕರ, ಎಲ್.ಎಚ್‌.ಇಂಗಳಹಳ್ಳಿ, ಎಂ.ಎಂ.ಹಳ್ಳಿ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಕಚ್ಚಿದ ಕೋತಿ- ಸೊಳ್ಳೆ ಪರದೆ ಸಹಾಯದಿಂದ ಸೆರೆ

    ನ್ಯಾಯಾಲಯದ ಮೊರೆ
    ಹಳೇಹುಬ್ಬಳ್ಳಿ ಸುಭಾಷ ನಗರದ ನಿವಾಸಿ ಹೀರಾಲಾಲ ಕಾಟವೆ ಅವರು 2014 ರಲ್ಲಿ ನಗರದ ಸೊರಬದಮಠ ಗಲ್ಲಿ ನಿವಾಸಿ ಕಿರಣ ವಿಠಲಸಾ ಬದ್ದಿ ಜೊತೆ ತಮ್ಮ ಮಗಳು ದೀಪಾಳ ಮದುವೆ ಮಾಡಿದ್ದರು. ನಂತರ ದೀಪಾಳಿಗೆ ಹೆಣ್ಣು ಮಗು ಜನಿಸಿತ್ತು. ಡಿಸೆಂಬರ್ 2 , 2015 ರಂದು ದೀಪಾ ಮೃತಪಟ್ಟಿದ್ದಳು. ಈ ಸಾವಿಗೆ ದೀಪಾಳ ಪತಿ ಕಿರಣ ಬದ್ದಿ ಹಾಗೂ ಕುಟುಂಬದವರು ಕಾರಣ ಎಂದು ಹೀರಾಲಾಲ ಕಾಟವೆ ಅವರು ಶಹರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ತನಿಖೆ ನಡೆಸಿದ್ದ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್‌ ಶ್ಯಾಮರಾವ್‌ ಸಜ್ಜನ ಅವರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು.

    ಈ ತನಿಖೆ ನ್ಯಾಯಸಮ್ಮತವಾಗಿಲ್ಲವೆಂದು ಪ್ರಶ್ನಿಸಿ ಹೀರಾಲಾಲ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದ ತನಿಖೆ ನಡೆಸಲು ಅಂದಿನ ಶಹರ ಠಾಣೆ ಇನ್‌ಸ್ಪೆಕ್ಟರ್‌ ಗಿರೀಶ ಬೋಜನವರಗೆ ಆದೇಶಿಸಿತ್ತು. ಅವರು ಮತ್ತೊಮ್ಮೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನೂ ಪ್ರಶ್ನಿಸಿ ಹೀರಾಲಾಲ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯದ ಹೀರಾಲಾಲರ ಅರ್ಜಿ ಪುರಸ್ಕರಿಸಿ ಮತ್ತೊಮ್ಮೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಮೊಕದ್ದಮೆ ದಾಖಲಿಸಲು ಆದೇಶಿಸಿದೆ.

  • ಪತ್ನಿ ಜೊತೆಗಿನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಹತ್ಯೆ- ಆರೋಪಿ ಅರೆಸ್ಟ್

    ಪತ್ನಿ ಜೊತೆಗಿನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಹತ್ಯೆ- ಆರೋಪಿ ಅರೆಸ್ಟ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಆಜಾದ್ ಚೌಕ್‍ನಲ್ಲಿ ತಡರಾತ್ರಿ ನಡೆದ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಆರೋಪಿ ನವೀದ್ ಎಂಬವನನ್ನು ಚಿಂತಾಮಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಚಿಂತಾಮಣಿ ನಗರದ ಆಗ್ರಹಾರ ನಿವಾಸಿ 35 ವರ್ಷದ ಸೈಯದ್ ಮುಸ್ತಾಕ್ ಎಂಬವರನ್ನ ಸೆ.13 ರ ರಾತ್ರಿ 8.30 ಗಂಟೆ ಸುಮಾರಿಗೆ ಕೊಲೆ ಮಾಡಲಾಗಿತ್ತು. ಜನವಸತಿ ಪ್ರದೇಶದಲ್ಲೇ ಚಾಕುವಿನಿಂದ ಎದೆ ಹಾಗೂ ಹೊಟ್ಟೆಗೆ ಇರಿದು ಯುವಕನೋರ್ವ ಕೊಲೆ ಮಾಡಿ ಪರಾರಿಯಾಗಿದ್ದ. ಆದರೆ ಆತ ಯಾರೆಂಬುದು ಸ್ಥಳೀಯರಿಗೆ ಗೊತ್ತಾಗಿರಲಿಲ್ಲ. ನವೀದ್ ಇರಬಹುದು ಅನ್ನೋ ಅನುಮಾನಗಳು ಇತ್ತು. ಇದನ್ನೂ ಓದಿ: ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧ – ನಿವೃತ್ತ ಪೊಲೀಸಪ್ಪ ಹೈಡ್ರಾಮಾ

    ಪೊಲೀಸರು ನವೀದ್ ಎಂಬ ಆಟೋ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ನವೀದ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.  ಇದನ್ನೂ ಓದಿ:ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

    ಕೊಲೆಗೆ ಕಾರಣ ಏನು..?

    ಮೃತ ಮುಸ್ತಾಕ್ ಪತ್ನಿ ಜೊತೆ ನವೀದ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯರು ಮುಸ್ತಾಕ್ ಗೆ ಕುಹಕ ಮಾಡುತ್ತಿದ್ದರಂತೆ. ಇದರಿಂದ ಕೆರಳಿದ ಮುಸ್ತಾಕ್, ನವೀದ್ ಗೆ ಕರೆ ಮಾಡಿ ಮಾತಾಡಬೇಕು ಬಾ ಅಂತ ಕರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೊದಲೇ ಚಾಕು ತಂದಿದ್ದ ನವೀದ್, ಮುಸ್ತಾಕ್ ಗೆ ಇರಿದು ಕೊಲೆ ಮಾಡಿದ್ದಾನೆ.

  • ನನ್ನನ್ನು ಗಲ್ಲಿಗೇರಿಸಿ- ಅಪ್ರಾಪ್ತ ಬಾಲಕಿಯ ರೇಪ್ ಮಾಡಿ ಕೊಲೆಗೈದ ಆರೋಪಿಯ ಮನವಿ

    ನನ್ನನ್ನು ಗಲ್ಲಿಗೇರಿಸಿ- ಅಪ್ರಾಪ್ತ ಬಾಲಕಿಯ ರೇಪ್ ಮಾಡಿ ಕೊಲೆಗೈದ ಆರೋಪಿಯ ಮನವಿ

    ಭೋಪಾಲ್: ನಾನು ಕುಡಿದ ಅಮಲಿನಲ್ಲಿ ತಪ್ಪು ಮಾಡಿದ್ದೇನೆ. ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದೇನೆ ಎಂದು ಆರೋಪಿಯೊಬ್ಬ ತನ್ನ ತಪ್ಪೊಪ್ಪಿಕೊಂಡು ಕೋರ್ಟ್ ನಲ್ಲಿ ನನ್ನನ್ನು ಗಲ್ಲಿಗೇರಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.

    ಕುಡಿದ ಅಮಲಿನಲ್ಲಿದ್ದೆ. ತಪ್ಪು ನಡೆದು ಹೋಯಿತು. ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ. ನನ್ನನ್ನು ನೇಣಿಗೇರಿಸಿ ಎಂದು 9 ವರ್ಷದ ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ 32 ವರ್ಷದ ವಿಷ್ಣು ಪ್ರಸಾದ್ ಕೋರ್ಟ್ ಮುಂದೆ ಮೊರೆಯಿಟ್ಟಿದ್ದಾನೆ. ಮಧ್ಯ ಪ್ರದೇಶದ ಸಿಎಂ ಕಮಲ್‍ನಾಥ್ ಸಂತ್ರಸ್ತೆಯ ಕುಟುಂಬಕ್ಕೆ 48 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗುತ್ತದೆ ಮತ್ತು ಒಂದು ತಿಂಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಭೋಪಾಲ್‍ನಲ್ಲಿ ನಡೆದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇವಲ 48 ಗಂಟೆಗಳಲ್ಲಿ ಮಧ್ಯಪ್ರದೇಶ ಪೊಲೀಸರು ಬೇಧಿಸಿದ್ದಾರೆ. ಕಮಲ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ 108 ಪುಟಗಳ ಚಾರ್ಜ್ ಶೀಟ್ ಹಾಕಲಾಗಿತ್ತು. ವಿಶೇಷ ಪೋಕ್ಸೋ ಕೋರ್ಟ್ ನಲ್ಲಿ ಬುಧವಾರ ಆರೋಪಿಯನ್ನು ಹಾಜರು ಪಡಿಸಲಾಗಿತ್ತು. ಅಲ್ಲಿ ನ್ಯಾಯಧೀಶರು ಆರೋಪಿಯ ವಿಚಾರಣೆ ನಡೆಸಿ, ಇಂದು ಪ್ರಕರಣವನ್ನು ಟ್ರಯಲ್ ಕೋರ್ಟ್ ಗೆ ವರ್ಗಾಯಿಸಲಾಗುತ್ತದೆ ಎಂದಿದ್ದರು.

    ಬುಧವಾರ ನಡೆದ ವಿಚಾರಣೆ ವೇಳೆ ನ್ಯಾಯಾಧೀಶರು ಆರೋಪಿಯನ್ನು ಈ ಕೃತ್ಯ ಎಸೆಗಲು ಕಾರಣ ಕೇಳಿದಾಗ, ನಾನು ಮದ್ಯದ ಅಮಲಿನಲ್ಲಿದ್ದೆ, ಆಗ ಇದೆಲ್ಲಾ ನಡೆದೋಯಿತು. ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ. ನನ್ನನ್ನು ಗಲ್ಲಿಗೇರಿಸಿ ಎಂದು ಕೋರಿಕೊಂಡಿದ್ದಾನೆ. ಅಲ್ಲದೆ ಇದನ್ನು ಆಲಿಸಿದ ನ್ಯಾಯಾಧೀಶರು ಆತನನ್ನು ಜೈಲಿಗೆ ಕಳುಹಿಸಿ ಸದ್ಯ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.

    ಪ್ರಕರಣದ ವಿಚಾರಣೆ ಅಂತ್ಯಗೊಳ್ಳುವವರೆಗೆ ಪ್ರಸಾದ್‍ನನ್ನು ಜೈಲಿಗೆ ಕಳುಹಿಸಲಾಗಿದ್ದು, ಆತ್ಮಹತ್ಯೆ ಸಾಧ್ಯತೆ ಇರುವು ಬಗ್ಗೆ ಪೊಲೀಸರು ಜಾಗ್ರತೆ ವಹಿಸಿದ್ದು, ಇಂದೇ ಈ ಪ್ರಕರಣ ಸಂಬಂಧ ತೀರ್ಪು ನೀಡಲಾಗುವುದು ಎಂಬ ಮಾಹಿತಿ ದೊರಕಿದೆ. ಅಲ್ಲದೆ ಆರೋಪಿ ಪರ ಯಾವ ವಕೀಲರು ವಾದ ಮಂಡಿಸದ ಕಾರಣ ಕೋರ್ಟ್ ನಿಂದಲೇ ವಕೀಲರ ನೇಮಕ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

  • ಸ್ಮೃತಿ ಇರಾನಿ ಆಪ್ತನ ಕೊಲೆ ಪ್ರಕರಣ- ಮೂವರ ಬಂಧನ, ಇಬ್ಬರು ನಾಪತ್ತೆ

    ಸ್ಮೃತಿ ಇರಾನಿ ಆಪ್ತನ ಕೊಲೆ ಪ್ರಕರಣ- ಮೂವರ ಬಂಧನ, ಇಬ್ಬರು ನಾಪತ್ತೆ

    ಲಕ್ನೋ: ಅಮೇಠಿಯ ನೂತನ ಸಂಸದೆ ಸ್ಮೃತಿ ಇರಾನಿ ಅವರ ಆಪ್ತ ಸುರೇಂದ್ರ ಸಿಂಗ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದು, ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

    ರಾಜಕೀಯ ದ್ವೇಷದ ಹಿನ್ನೆಲೆ ಐವರು ದುಷ್ಕರ್ಮಿಗಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಸುರೇಂದ್ರ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈಗಾಗಲೇ ಘಟನೆಯಲ್ಲಿ ಶಾಮಿಲಾಗಿದ್ದ 3 ಮಂದಿಯನ್ನು ಬಂಧಿಸಲಾಗಿದೆ. ಉಳಿದ 2 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನೂ ಕೂಡ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ರಾತ್ರಿ ಸುರೇಂದ್ರ ಸಿಂಗ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಆದರೆ ಭಾನುವಾರದಂದು ಈ ಘಟನೆ ಸಂಬಂಧ ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಹತ್ಯೆ ಮಾಡಲು ಕಾರಣ ಏನು ಎನ್ನುವುದು ತಿಳಿದು ಬಂದಿರಲಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದರು.

    ಅಮೇಠಿಯಲ್ಲಿ ಪ್ರಚಾರ ಹಾಗೂ ಚುನಾವಣೆ ವೇಳೆ ತಮ್ಮೊಂದಿಗೆ ಇದ್ದು ಉತ್ತಮವಾಗಿ ಸಹಕರಿಸಿದ್ದ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಸ್ಮೃತಿ ಇರಾನಿ ಹೆಗಲು ಕೊಟ್ಟಿದ್ದರು. ಅಂತ್ಯಸಂಸ್ಕಾರದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಬೇಕಾದರೆ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಸುಪ್ರೀಂ ಕೋರ್ಟ್‍ಗೆ ಹೋಗಲು ನಾನು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಒಂದು ಮನೆಯನ್ನು ಇಬ್ಭಾಗ ಮಾಡೋ ಕುತಂತ್ರಿ ಪ್ರಹ್ಲಾದ್ ಜೋಶಿ: ವಿನಯ್ ಕುಲಕರ್ಣಿ

    ಒಂದು ಮನೆಯನ್ನು ಇಬ್ಭಾಗ ಮಾಡೋ ಕುತಂತ್ರಿ ಪ್ರಹ್ಲಾದ್ ಜೋಶಿ: ವಿನಯ್ ಕುಲಕರ್ಣಿ

    ಧಾರವಾಡ: ಜಿಪಂ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಾಕ್ಷ್ಯನಾಶ ಆರೋಪದಡಿ ಧಾರವಾಡ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿ ಮೇಲೆ ಎಫ್‍ಐಆರ್ ದಾಖಲಿಸಲು ಕೋರ್ಟ್ ಸೂಚನೆ ನೀಡಿದ್ದು, ಇದಕ್ಕೆಲ್ಲಾ ಪ್ರಹ್ಲಾದ್ ಜೋಶಿ ಕಾರಣ ಎಂದು ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಂಗದ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಆದರೆ ಯಾವತ್ತೋ ಆಗಿರುವ ಕೇಸ್ ಚುನಾವಣೆಯಲ್ಲಿಯೇ ಯಾಕೆ ಬಂತು ಎನ್ನುವುದು ನನ್ನ ಪ್ರಶ್ನೆ. ಆ ಕೇಸ್ ಹಾಕಿರುವ ಗುರುನಾಥಗೌಡ ಪ್ರಹ್ಲಾದ ಜೋಶಿ ಜೊತೆಯೇ ಇರುತ್ತಾರೆ. ಹಾಗಾದ್ರೆ ಯಾರೂ ಈ ಕೇಸ್ ಮಾಡಿದಂತಾಯ್ತು? ನಾನು ಆರೋಪಿಯೂ ಇಲ್ಲ, ಎಫ್‍ಐಆರ್ ನಲ್ಲಿಯೂ ಇಲ್ಲ, ಚಾರ್ಜ್ ಶೀಟ್‍ನಲ್ಲಿಯೂ ಇಲ್ಲ. ಆದರೆ ಈಗ ಚುನಾವಣೆ ಸಮಯದಲ್ಲಿ ಪ್ರಹ್ಲಾದ್ ಜೋಶಿ ಇಂತಹ ಕುತಂತ್ರ ತಂದಿದ್ದಾರೆ ಎಂದು ಕಿಡಿಕಾರಿದರು.

    ಯೋಗಿಶಗೌಡ ಕೊಲೆ ಪ್ರಕರಣದಲ್ಲಿ 62 ಸಾಕ್ಷಿಗಳು ಇದ್ದವು, ಅದರಲ್ಲಿ 59 ಸಾಕ್ಷಿಗಳು ಮುಗಿದಿವೆ. ಧಾರವಾಡದಲ್ಲಿ ಏನು ಆದರೂ ವಿನಯ್ ಕುಲಕರ್ಣಿ ಮಾತ್ರ ಕಾಣುತ್ತಾರೆ. ಒಂದು ಮನೆಯನ್ನು ಇಬ್ಭಾಗ ಮಾಡುವಂತಹ ಕುತಂತ್ರಿ ಪ್ರಹ್ಲಾದ್ ಜೋಶಿ. ಈ ಕೇಸ್ ಆಗಿ ಎರಡ್ಮೂರು ವರ್ಷ ಆದ ಮೇಲೆ ಈಗ ಮತ್ತೆ ವಿಚಾರ ಎತ್ತಿದ್ದಾರೆ. ಇದೆಲ್ಲವೂ ಪ್ರಹ್ಲಾದ್ ಜೋಶಿ ಕುತಂತ್ರ ಎಂದು ವಿನಯ್ ಕುಲಕರ್ಣಿ ಹರಿಹಾಯ್ದರು.

    ಏನಿದು ಪ್ರಕರಣ?
    ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಪೊಲೀಸ್ ಅಧಿಕಾರಿಗಳಾದ ತುಳಜಪ್ಪ ಸುಲ್ಪಿ ಹಾಗೂ ಚಂದ್ರಶೇಖರ್ ವಿರುದ್ಧ ಕೂಡ ಎಫ್‍ಐಆರ್ ದಾಖಲಿಸಿಕೊಳ್ಳುವಂತೆ ಧಾರವಾಡ ಜೆಎಂಎಫ್‍ಸಿ ಕೋರ್ಟ್ ಆದೇಶಿಸಿದೆ. ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಒತ್ತಡ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

    ಈ ಕೊಲೆ ಪ್ರಕರಣ 2017ರಲ್ಲಿ ನಡೆದಿದ್ದು, ಯೋಗೀಶಗೌಡ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆ ಆರು ಜನರೂ ಕೂಡ ವಿನಯ್ ಅವರ ಅನುಯಾಯಿಗಳೇ ಆಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್ ಅವರ ಕೈವಾಡ ಇದೆ ಎಂದು ಯೋಗೀಶಗೌಡರ ಪತ್ನಿ ಮಲ್ಲಮ್ಮ ಸಂಶಯ ವ್ಯಕ್ತಪಡಿಸಿದ್ದರು.

  • ಧಾರವಾಡ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಸಂಕಷ್ಟ

    ಧಾರವಾಡ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಸಂಕಷ್ಟ

    ಧಾರವಾಡ: ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗಲೇ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಪೊಲೀಸ್ ಅಧಿಕಾರಿಗಳಾದ ತುಳಜಪ್ಪ ಸುಲ್ಪಿ ಹಾಗೂ ಚಂದ್ರಶೇಖರ್ ವಿರುದ್ಧ ಕೂಡ ಎಫ್‍ಐಆರ್ ದಾಖಲಿಸಿಕೊಳ್ಳುವಂತೆ ಧಾರವಾಡ ಜೆಎಂಎಫ್‍ಸಿ ಕೋರ್ಟ್ ಆದೇಶಿಸಿದೆ.

    ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದದಲ್ಲಿ ಸಾಕ್ಷಿಗಳ ಮೇಲೆ ಒತ್ತಡ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

    ಯೋಗೀಶಗೌಡ ಅವರ ಕೊಲೆ ಪ್ರಕರಣದಲ್ಲಿ ಆರು ಜನ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆ ಆರು ಜನ ವಿನಯ್ ಅವರ ಅನುಯಾಯಿಗಳೇ ಆಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್ ಅವರ ಕೈವಾಡ ಇದೆ ಎಂದು ಯೋಗೀಶಗೌಡರ ಪತ್ನಿ ಮಲ್ಲಮ್ಮ ಸಂಶಯ ವ್ಯಕ್ತಪಡಿಸಿದ್ದರು.

  • ಗ್ರಾಮ ಲೆಕ್ಕಾಧಿಕಾರಿಯ ಪ್ರಾಣ ತೆಗೆದ ಲಾರಿ ಚಾಲಕನ ವಿರುದ್ಧ ಕೇಸ್

    ಗ್ರಾಮ ಲೆಕ್ಕಾಧಿಕಾರಿಯ ಪ್ರಾಣ ತೆಗೆದ ಲಾರಿ ಚಾಲಕನ ವಿರುದ್ಧ ಕೇಸ್

    ರಾಯಚೂರು: ಅಕ್ರಮ ಮರಳು ಸಾಗಿಸುವ ಲಾರಿಯನ್ನು ತಡೆಯಲು ಬಂದ ಅಧಿಕಾರಿಯೊಬ್ಬರ ಮೇಲೆ ಮರಳು ತುಂಬಿದ್ದ ಲಾರಿಯನ್ನೇ ಹರಿಸಿ ಹತ್ಯೆಗೈದಿದ್ದ ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಸಿ, ಪೊಲೀಸರು ಬಂಧಿಸಿದ್ದಾರೆ.

    ರಂಗಪ್ಪ ಎಂಬಾತ ಬಂಧಿತ ಲಾರಿ ಚಾಲಕ. ಸಾಹೇಬ್ ಪಟೇಲ್(45) ಮೃತ ಗ್ರಾಮ ಲೆಕ್ಕಾಧಿಕಾರಿ. ರಾಯಚೂರಿನ ಮಾನ್ವಿಯ ಬುದ್ದಿನ್ನಿಯಲ್ಲಿ ಶನಿವಾರ ನಡೆದ ಘಟನೆ ಇದಾಗಿದ್ದು, ಶರಣಯ್ಯಗೌಡ ಎಂಬವನಿಗೆ ಸೇರಿದ ಲಾರಿಯ ಚಾಲಕನ ವಿರುದ್ಧ ಗ್ರಾಮಲೆಕ್ಕಾಧಿಕಾರಿ ಇಫ್ರಾನ್ ಅಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿ, ರಂಗಪ್ಪನನ್ನು ಮಾನ್ವಿ ಪೊಲೀಸರು ಬಂಧಿಸಿದ್ದಾರೆ.

    ಘಟನೆ ವಿವರ:
    ಸಾಹೇಬ್ ಪಟೇಲ್ ಅವರು ಚೀಕಪರ್ವಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಾನ್ವಿಯ ಬುದ್ದಿನ್ನಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆಡಿದ್ದ ಅವರು ಪರಿಶೀಲನೆ ನಡೆಸಲು ಹೋಗಿದ್ದರು. ಈ ವೇಳೆ ಚಾಲಕ ತಪ್ಪಿಸಿಕೊಳ್ಳಲು ಸಾಹೇಬ್ ಪಟೇಲ್ ಅವರ ಕಾಲುಗಳ ಮೇಲೆ ಲಾರಿ ಹರಿಸಿದ್ದಾನೆ. ಪರಿಣಾಮ ಎರಡೂ ಕಾಲು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪಟೇಲ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾಹೇಬ್ ಮೃತಪಟ್ಟಿದ್ದಾರೆ.

    ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಮೃತ ದೇಹವನ್ನು ಇಂದು ಸ್ವಗ್ರಾಮ ಲಿಂಗಸುಗೂರಿನ ಚಿತ್ತಾಪುರಕ್ಕೆ ರವಾನಿಸಲಾಗಿದ್ದು, ಕುಟುಂಬಸ್ಥರ ಅಂತಿಮ ಸಂಸ್ಕಾರ ನಡೆಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv