Tag: ಕೊಲೆ ಪ್ರಕರಣ

  • ಬೆಂಗಳೂರಲ್ಲಿ ವಿದ್ಯಾರ್ಥಿನಿ ಕತ್ತು ಕೊಯ್ದು ಹತ್ಯೆ ಕೇಸ್‌ – ಪಾಗಲ್‌ ಪ್ರೇಮಿ ಬಂಧನ

    ಬೆಂಗಳೂರಲ್ಲಿ ವಿದ್ಯಾರ್ಥಿನಿ ಕತ್ತು ಕೊಯ್ದು ಹತ್ಯೆ ಕೇಸ್‌ – ಪಾಗಲ್‌ ಪ್ರೇಮಿ ಬಂಧನ

    ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದ ಪಾಗಲ್‌ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಹತ್ಯೆ ಮಾಡಿದ್ದ ವಿಘ್ನೇಶ್‌ ಮತ್ತು ಆತನಿಗೆ ನೆರವಾಗಿದ್ದ ಹರೀಶ್‌ ಎಂಬಾತನನ್ನು ಶ್ರೀರಾಂಪುರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

    ಶ್ರೀರಾಂಪುರ ಸಮೀಪದ ಸ್ವತಂತ್ರಪಾಳ್ಯ ನಿವಾಸಿ ಯಾಮಿನಿಯನ್ನು ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಇವರ ಬಂಧನಕ್ಕೆ ಶ್ರೀರಾಂಪುರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ 2 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪರಿಚಯವಿದ್ದ ಯಾಮಿನಿಯನ್ನು ಪ್ರೀತಿಸುವಂತೆ ವಿಘ್ನೇಶ್‌ ಒತ್ತಾಯಿಸುತ್ತಿದ್ದ. ಆದರೆ, ಅದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಳು. ಗುರುವಾರ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಅಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ.

  • ಲವ್ವರ್‌ ಜೊತೆ ಸೇರಿಕೊಂಡು ಪತಿ ಕೊಂದ ಮಹಿಳೆ; ಹತ್ಯೆ ಬಗ್ಗೆ ಸಾಕ್ಷಿ ನುಡಿದ 8 ವರ್ಷದ ಪುತ್ರ

    ಲವ್ವರ್‌ ಜೊತೆ ಸೇರಿಕೊಂಡು ಪತಿ ಕೊಂದ ಮಹಿಳೆ; ಹತ್ಯೆ ಬಗ್ಗೆ ಸಾಕ್ಷಿ ನುಡಿದ 8 ವರ್ಷದ ಪುತ್ರ

    ಜೈಪುರ: ರಾಜಸ್ಥಾನದ (Rajasthan) ಅಲ್ವಾರ್‌ನಲ್ಲಿ ನೀಲಿ ಬಣ್ಣದ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಚಿಕ್ಕಪ್ಪನ ಜೊತೆ ಅಮ್ಮ ಸೇರಿಕೊಂಡು ಅಪ್ಪನ ದೇಹವನ್ನು ಡ್ರಮ್‌ಗೆ ಹಾಕುತ್ತಿದ್ದುದನ್ನು ನಾನು ನೋಡಿದೆ ಎಂದು ಅವರ 8 ವರ್ಷದ ಪುತ್ರ ಸಾಕ್ಷಿ ನುಡಿದಿದ್ದಾನೆ.

    ಪ್ರಿಯಕರನೊಂದಿಗೆ ಸೇರಿಕೊಂಡು ಮಹಿಳೆ ತನ್ನ ಗಂಡನನ್ನು ಕೊಂದಿರುವ ಪ್ರಕರಣಕ್ಕೆ ಆಕೆಯ 8 ವರ್ಷದ ಪುತ್ರ ಸಾಕ್ಷಿಯಾಗಿದ್ದಾನೆ. ಡ್ರಮ್‌ನಲ್ಲಿ ನೀರು ಸಂಗ್ರಹಿಸಿ ಇಡುತ್ತಿದ್ದೆವು. ಅದರಲ್ಲಿ ಅಪ್ಪನ ಶವವನ್ನು ಅಮ್ಮ ಹಾಕುತ್ತಿದ್ದುದನ್ನು ನಾನು ನೋಡಿದೆ ಎಂದು ಪೊಲೀಸರಿಗೆ ಬಾಲಕ ತಿಳಿಸಿದ್ದಾನೆ. ಇದನ್ನೂ ಓದಿ: ಕಾಲೇಜು ಅಡ್ಮಿಷನ್ ಮುಗಿಸಿ ಹಿಂತಿರುಗುವಾಗ ಭೀಕರ ಅಪಘಾತ – ಅಣ್ಣ, ತಂಗಿ ದುರ್ಮರಣ

    ಹಂಸರಾಜ್‌ ಕೊಲೆಯಾದ ವ್ಯಕ್ತಿ. ಆತನ ಹಿರಿಯ ಮಗ ಹರ್ಷಲ್‌, ಕೊಲೆಗೆ ಮೊದಲು ಮತ್ತು ನಂತರ ಕಿಶನ್‌ಗಢದಲ್ಲಿರುವ ತನ್ನ ಮನೆಯಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾನೆ.

    ನನ್ನ ತಂದೆ, ತಾಯಿ ಮತ್ತು ಚಿಕ್ಕಪ್ಪ (ಅವರ ಮನೆ ಮಾಲೀಕರ ಮಗ) ಒಟ್ಟಿಗೆ ಕುಡಿಯುತ್ತಿದ್ದರು. ನನ್ನ ತಾಯಿಯ ಬಳಿ ಕೇವಲ ಎರಡು ಪೆಗ್‌ಗಳು ಮಾತ್ರ ಇತ್ತು. ಆದರೆ ನನ್ನ ತಂದೆಯನ್ನು ಕೊಂದ ಚಿಕ್ಕಪ್ಪ ತುಂಬಾ ಕುಡಿದಿದ್ದರು. ಈ ವೇಳೆ ಅಪ್ಪ, ಅಮ್ಮನನ್ನು ಹೊಡೆಯುತ್ತಿದ್ದರು. ನನ್ನ ಚಿಕ್ಕಪ್ಪ ಮಧ್ಯಪ್ರವೇಶಿಸಲು ಮುಂದಾದರು. ಆದರೆ ನನ್ನ ತಂದೆ, ‘ನೀನು ಅವಳನ್ನು ಉಳಿಸಿದರೆ, ನಾನು ನಿನ್ನನ್ನೂ ಕೊಲ್ಲುತ್ತೇನೆ’ ಎಂದು ಕೂಗಾಡಿದರು. ಆಗ ತಂದೆಯ ಮೇಲೆ ಚಿಕ್ಕಪ್ಪ ಹಲ್ಲೆ ಮಾಡಲು ಮುಂದಾದರು ಎಂದು ಬಾಲಕ ಘಟನೆ ಬಗ್ಗೆ ವಿವರಿಸಿದ್ದಾನೆ.

    ನಾನು ಎಚ್ಚರವಾದಾಗ, ನನ್ನ ತಂದೆ ಹಾಸಿಗೆಯ ಮೇಲೆ ಇರುವುದನ್ನು ನೋಡಿದೆ. ನಂತರ ನಾನು ಮತ್ತೆ ಮಲಗಿದೆ. ಆದರೆ ಮತ್ತೆ ಎಚ್ಚರವಾದಾಗ, ನಾನು ಚಿಕ್ಕಪ್ಪ ಮತ್ತು ನನ್ನ ತಾಯಿಯನ್ನು ನೋಡಿದೆ. ಮನೆ ಮಾಲೀಕರು ನನ್ನ ತಂದೆಯನ್ನು ಕೇಳಲು ಪ್ರಾರಂಭಿಸಿದರು. ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಕೆ ಹಾಕಿದರು. ಆಗ, ಚಿಕ್ಕಪ್ಪ ನಮ್ಮನ್ನು ಇಟ್ಟಿಗೆ ಗೂಡುಗೆ ಕರೆದೊಯ್ದರು ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಥಿನ್ನರ್ ಬಾಟಲಿ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ – ಗಂಭೀರ ಸ್ಥಿತಿಯಲ್ಲಿದ್ದ ತಂದೆಯೂ ಸಾವು

    ಇಟ್ಟಿಗೆಗೂಡಿನ ಮಾಲೀಕ ಕರೆ ಮಾಡಿ ದೂರು ನೀಡಿದ್ದರು. ವಿಚಾರಣೆ ವೇಳೆ ಬಾಲಕ ನಡೆದಿದ್ದೆಲ್ಲವನ್ನೂ ವಿವರಿಸಿದ್ದಾನೆ. ಡ್ರಮ್‌ನಲ್ಲಿ ತಂದೆಯ ದೇಹವನ್ನು ಯಾಕೆ ಹಾಕುತ್ತಿದ್ದೀರಿ ಎಂದು ಕೇಳಿದಾಗ, ನಿಮ್ಮಪ್ಪ ಸತ್ತಿದ್ದಾನೆಂದು ತಾಯಿ ವಿವರಿಸಿದ್ದಾಳೆ. ಮಹಿಳೆ ಮತ್ತು ಪ್ರಿಯಕರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

  • ಹೊಳೆ ದಡದಲ್ಲಿ ಮಹಿಳೆ ಶವ ಹೂತಿಟ್ಟಿದ್ದ ಕೇಸ್‌ಗೆ ಟ್ವಿಸ್ಟ್; ಲವ್ವಿಡವ್ವಿ ಅಂತಾ ಹೋಗಿದ್ದವನಿಂದಲೇ ಹತ್ಯೆ

    ಹೊಳೆ ದಡದಲ್ಲಿ ಮಹಿಳೆ ಶವ ಹೂತಿಟ್ಟಿದ್ದ ಕೇಸ್‌ಗೆ ಟ್ವಿಸ್ಟ್; ಲವ್ವಿಡವ್ವಿ ಅಂತಾ ಹೋಗಿದ್ದವನಿಂದಲೇ ಹತ್ಯೆ

    ಚಾಮರಾಜನಗರ: ಹೊಳೆ ದಡದಲ್ಲಿ ಒಂಟಿ ಮಹಿಳೆಯ ಕೊಲೆ ಕೇಸ್‌ಗೆ ಕೊನೆಗೂ ಮೇಜರ್ ಟ್ವಿಸ್ಟ್ ಸಿಕ್ಕಿದೆ.‌ ಪ್ರಿಯಕರನಿಂದಲೇ ಭೀಕರ ಹತ್ಯೆ ನಡೆದು ಹೋಗಿದೆ.

    ಸೋನಾಕ್ಷಿ ಎಂಬಾಕೆ ಮೃತ ಮಹಿಳೆ. ಗಂಡ, ಮಕ್ಕಳನ್ನು ಬಿಟ್ಟು ಹೋಗಿದ್ದವಳು ಹೆಣವಾಗಿದ್ದಾಳೆ. ಈಕೆ ಜೊತೆ ಮಾದೇಶ ಎಂಬ ವ್ಯಕ್ತಿ ಪ್ರೀತಿಯಲ್ಲಿದ್ದ. ಆದರೆ, ಮಾದೇಶನಿಗೂ ಕೈಕೊಟ್ಟು ಮತ್ತೋರ್ವನ ಸಂಘ ಬೆಳೆಸಿದ್ದಳು. ಕೊಳ್ಳೇಗಾಲದಿಂದ ಹೋಗಿ ಟಿ. ನರಸೀಪುರದಲ್ಲಿ ಸೋನಾಕ್ಷಿ ವಾಸವಿದ್ದಳು.

    ಈ ವಿಚಾರವನ್ನ ಸೋನಾಕ್ಷಿ ಕುಟುಂಬಸ್ಥರಿಗೆ ಮಾದೇಶ ತಿಳಿಸಿದ್ದಾನೆ. ಈ ವಿಚಾರಕ್ಕೆ ಮಾದೇಶ ಹಾಗೂ ಸೋನಾಕ್ಷಿ ನಡುವೆ ಕಿರಿಕ್ ಆಗಿತ್ತು. ನಾಲ್ಕು ದಿನಗಳ ಹಿಂದೆ ಸೋನಾಕ್ಷಿಯನ್ನು ಆರೋಪಿ ಮಾದೇಶ ಮನೆಗೆ ಕರೆಸಿಕೊಂಡಿದ್ದ. ಪರಸ್ಪರ ಮಾತು ಬೆಳೆದು ಜಗಳ ಶುರುವಾಗಿತ್ತು. ಕೋಪದಲ್ಲಿ ಸೋನಾಕ್ಷಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ.

    ಮಾದೇಶನ ಏಟಿಗೆ ಸ್ಥಳದಲ್ಲೇ ಸೋನಾಕ್ಷಿ ಮೃತಪಟ್ಟಿದ್ದಾಳೆ. ಮರಣದ ಬಳಿಕ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹಳೇ ಹಂಪಾಪುರದ ಸನಿಹದ ಸುವರ್ಣಾವತಿ ಹೊಳೆಯ ಬಳಿ ತಂದು ಮೃತದೇಹವನ್ನು ಪಾತಕಿ ಹೂತಿ ಹೋಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನ ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು ನಡೆಸುತ್ತಿದ್ದಾರೆ.

  • ರೇಣುಕಾಸ್ವಾಮಿ ಮರ್ಡರ್‌ ಕೇಸ್-‌ ನಟಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ

    ರೇಣುಕಾಸ್ವಾಮಿ ಮರ್ಡರ್‌ ಕೇಸ್-‌ ನಟಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ

    ಬೆಂಗಳೂರು: ಕೊಲೆ ಪ್ರಕರಣವೊಂದರ ಸಂಬಂಧ ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (ChallengingStar Darshan) ಬಂಧನದ ಬೆನ್ನಲ್ಲೇ ಇದೀಗ ನಟಿ ಪವಿತ್ರಾ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಒಳಸಂಚು ಆರೋಪದ ಮೇಲೆ ನಟಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣ ಸಂಬಂಧ ಪವಿತ್ರಾ ಗೌಡ (Pavithra Gowda) ಹಾಗೂ ದರ್ಶನ್‌ ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಪವಿತ್ರಾ ಗೌಡ ಸೋಶಿಯಲ್ ಮೀಡಿಯಾ ಪೋಸ್ಟ್ ಗೆ ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದ ಎಂದು ಹೇಳಲಾಗಿತ್ತಿದ್ದು, ಇದೇ ಕಾರಣಕ್ಕೆ ದರ್ಶನ್‌ ಬಾಡಿಗಾರ್ಡ್‌ಗಳು ಬೆದರಿಸಲು ಹೋಗಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಏನಿದು ಹತ್ಯೆ ಪ್ರಕರಣ? ದರ್ಶನ್‌ ಅರೆಸ್ಟ್‌ ಆಗಿದ್ದು ಯಾಕೆ? ಇಲ್ಲಿದೆ ಪೂರ್ಣ ವಿವರ

  • ಏನಿದು ಹತ್ಯೆ ಪ್ರಕರಣ? ದರ್ಶನ್‌ ಅರೆಸ್ಟ್‌ ಆಗಿದ್ದು ಯಾಕೆ? ಇಲ್ಲಿದೆ ಪೂರ್ಣ ವಿವರ

    ಏನಿದು ಹತ್ಯೆ ಪ್ರಕರಣ? ದರ್ಶನ್‌ ಅರೆಸ್ಟ್‌ ಆಗಿದ್ದು ಯಾಕೆ? ಇಲ್ಲಿದೆ ಪೂರ್ಣ ವಿವರ

    ಬೆಂಗಳೂರು: ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ (Murder Case) ಆರೋಪದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Challenging Star Darshan) ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

    ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ (Renukaswamy) ಅವರನ್ನು ಜೂನ್‌ 9 ರಂದು ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿದ ಬಳಿಕ ಆರೋಪಿಗಳು ಕಾಮಾಕ್ಷಿಪಾಳ್ಯ ರಿಂಗ್‌ ರೋಡ್‌ ಬಳಿ ಇರುವ  ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಮುಂದಿರುವ ಮೋರಿಯಲ್ಲಿ ಶವವನ್ನು ಎಸೆದಿದ್ದರು. ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಇತ್ಯಾದಿ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ  ಆರೋಪಿಗಳನ್ನು ಬಂಧಿಸಿದ್ದರು. ಬಂಧನ ಮಾಡಿದ ಆರೋಪಿಗಳ ವಿವರ ಕಲೆ ಹಾಕಿದಾಗ ಅವರು ದರ್ಶನ್‌ ಬಾಡಿಗಾರ್ಡ್‌ಗಳು (Darshan Bodyguard) ಎಂಬ ಶಾಕಿಂಗ್‌ ವಿಚಾರ ಗೊತ್ತಾಗಿದೆ.

    ಆರೋಪಿಗಳನ್ನು ವಿಚಾರಣೆ ಒಳಪಡಿಸಿದಾಗ ಅವರು ದರ್ಶನ್‌ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆರ್‌ ಆರ್‌ ನಗರದಲ್ಲಿ ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಕೊಲೆಗೆ ದರ್ಶನ್‌ ಸುಪಾರಿ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಆರೋಪ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್‌ ಅವರನ್ನು ಇಂದು ಬೆಳಗ್ಗೆ ಮೈಸೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ  ನಡೆಸುತ್ತಿದ್ದಾರೆ.

    ಅಶ್ಲೀಲ ಮೆಸೇಜ್‌ಗೆ ಕೊಲೆ:
    ಪವಿತ್ರಾ ಗೌಡ (Pavithra Gowda) ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ ಮಾಡುತ್ತಿದ್ದರು. ಈ ಕಾರಣಕ್ಕೆ ದರ್ಶನ್‌ ಕಡೆಯವರು ರೇಣುಕಾಸ್ವಾಮಿಯ ಅವರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಕೊಲೆ ಬೆಳಕಿಗೆ ಬಂದಿದ್ದು ಹೇಗೆ?
    ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ಗಸ್ತು ತಿರುಗುತ್ತಿದ್ದಾಗ 35 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಅವರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಿಳಿಸುತ್ತಾರೆ. ಪೊಲೀಸರು ಕೊಲೆಯಾದ ವ್ಯಕ್ತಿ ಮೂಲ ಪತ್ತೆ ಹಚ್ಚಲು ಆರಂಭಿಸುತ್ತಾರೆ. ತನಿಖೆಯ ವೇಳೆ ಪತ್ತೆಯಾದ ಶವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯದ್ದು ಎನ್ನುವುದು ಗೊತ್ತಾಗುತ್ತದೆ. ನಂತರ ಫೋನ್‌ ಕರೆ, ಸಿಸಿಟಿವಿ ಇತ್ಯಾದಿ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ ಆರೋಪಿಗಳನ್ನು ಬಂಧನ ಮಾಡಿದಾಗ ಈ ಪ್ರಕರಣದ ಮಾಹಿತಿ ಒಂದೊಂದಾಗಿ ಈಗ ಬೆಳಕಿಗೆ ಬರುತ್ತಿದೆ.

     

  • ನಾಲ್ವರ ಕೊಂದ ಆರೋಪಿ ಮೇಲೆ ಜನಾಕ್ರೋಶ; ರಸ್ತೆ ತಡೆದು ಸಾರ್ವಜನಿಕರ ಪ್ರತಿಭಟನೆ, ಲಾಠಿ ಪ್ರಹಾರ – ಉಡುಪಿ ಉದ್ವಿಗ್ನ

    ನಾಲ್ವರ ಕೊಂದ ಆರೋಪಿ ಮೇಲೆ ಜನಾಕ್ರೋಶ; ರಸ್ತೆ ತಡೆದು ಸಾರ್ವಜನಿಕರ ಪ್ರತಿಭಟನೆ, ಲಾಠಿ ಪ್ರಹಾರ – ಉಡುಪಿ ಉದ್ವಿಗ್ನ

    ಉಡುಪಿ: ನಾಲ್ವರನ್ನು ಕೊಂದ ಪಾಪಿ ಆರೋಪಿ ಇದ್ದ ಪೊಲೀಸ್ ಜೀಪ್‌ಗೆ ಸಾರ್ವಜನಿಕರ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಆಕ್ರೋಶಿತರನ್ನು ಚದುರಿಸಲು ಪೊಲೀಸರ ಲಘು ಲಾಠಿ ಪ್ರಹಾರ ನಡೆಸಿದರು. ಆರೋಪಿಯನ್ನ ನಮಗೆ ಕೊಡಿ ಎಂಬ ಆಕ್ರೋಶದ ಮಾತು ಪ್ರತಿಭಟನಾಕಾರರಿಂದ ಕೇಳಿಬಂತು. ಈ ಎಲ್ಲಾ ದೃಶ್ಯಗಳಿಂದಾಗಿ ಉಡುಪಿಯ ತೃಪ್ತಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಉಡುಪಿಯ ತೃಪ್ತಿ ನಗರದಲ್ಲಿ ನಾಲ್ವರನ್ನು ಕೊಂದ ಆರೋಪಿಯ ತನಿಖೆ ಆಗುತ್ತಿದೆ. 14 ದಿನ ಪೊಲೀಸ್ ಕಸ್ಟಡಿಗೆ ಪಡೆದು ಮಲ್ಪೆ ಠಾಣಾ ಪೊಲೀಸರು ಆರೋಪಿ ಪ್ರವೀಣ್ ಚೌಗುಲೆಯನ್ನು ವಿಚಾರಣೆ ಮತ್ತು ಮಹಜರು ಪ್ರಕ್ರಿಯೆಗೆ ಒಳಪಡಿಸಿದ್ದಾರೆ. ದಿನಪೂರ್ತಿ ಮಾಹಿತಿ ಸಂಗ್ರಹಿಸಿ ಕೃತ್ಯ ನಡೆದ ತೃಪ್ತಿ ಲೇಔಟ್‌ಗೆ ಆರೋಪಿಯನ್ನು ಪೊಲೀಸರು ಇಂದು (ಗುರುವಾರ) ಸಂಜೆ ಕರೆ ತಂದಿದ್ದರು.

    ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆರೋಪಿಯನ್ನ ಕೃತ್ಯ ನಡೆದ ಮನೆಯಲ್ಲಿ ಮಹಜರು ನಡೆಸಲಾಯಿತು. ಆಗಲೇ ಧಿಕ್ಕಾರದ ಕೂಗು ಜಮಾಯಿಸಿದ ಜನರಿಂದ ಕೇಳಿಬಂತು. ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಸಂಜೆ 4:55 ಕ್ಕೆ ನೇಜಾರು ತೃಪ್ತಿ ನಗರದ ಕೃತ್ಯ ನಡೆದ ಮನೆಗೆ ಪೊಲೀಸರು ಕರೆತಂದರು. ಅಷ್ಟೊತ್ತಿಗಾಗಲೇ ನೂರಾರು ಮಂದಿ ಸ್ಥಳದಲ್ಲಿ ಜವಾಯಿಸಿದ್ದರು. ಆರೋಪಿಯನ್ನ ಕರೆ ತಂದಿದ್ದಾರೆ ಎಂಬ ಮಾಹಿತಿ ತಿಳಿದ ಸಾರ್ವಜನಿಕರು ಆಕ್ರೋಶ ಮತ್ತು ಕುತೂಹಲ ಹೆಚ್ಚಿ ಮತ್ತಷ್ಟು ಸಂಖ್ಯೆಯಲ್ಲಿ ಜಮಾಯಿಸಿದರು.

    ಪೊಲೀಸರು ಬ್ಯಾರಿಕೇಡ್‌ಗಳನ್ನ ಹಾಕಿ ಜನರನ್ನ ತಡೆಯಲು ಯತ್ನಿಸಿದರೂ ಆಕ್ರೋಶಿತರ ಕೋಪ ಎಷ್ಟಿತ್ತೆಂದರೆ, ಆರೋಪಿ ಇದ್ದ ವಾಹನಕ್ಕೆ ಮುತ್ತಿಗೆ ಹಾಕಲು ಜನ ನುಗ್ಗಿದರು. ತಡೆದ ಪೊಲೀಸರು ಜನರನ್ನು ತಳ್ಳಿ, ಲಘು ಲಾಠಿ ಪ್ರಹಾರ ಮಾಡಿ ಜನರನ್ನ ಚದುರಿಸಿದರು. ಜನಸಂದಣಿ ನಡುವೆ ಸಿಲುಕಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಸ್ಥಳದಿಂದ ಕರೆದೊಯ್ದರು. ಈ ಸಂದರ್ಭ ಹತ್ತಾರು ಜನರಿಗೆ ಲಾಟಿಯೇಟು ಬಿದ್ದಿದೆ. ಜನರ ಆಕ್ರೋಶ ಪೊಲೀಸರ ಕಡೆ ತರುಗಿತು.

    ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದ ಮುಂದುವರೆಯಿತು. ರಸ್ತೆಯಲ್ಲಿ ಕೂತು ಜನ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಎಸ್‌ಪಿ, ಡಿಸಿ ಬರಬೇಕು ಎಂದು ಒತ್ತಾಯಿಸಿದರು. ಮುಸ್ಲಿಂ ಸಮುದಾಯದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಆರೋಪಿಯನ್ನು ಚುಚ್ಚಿ ಚುಚ್ಚಿ ಸಾಯಿಸಿ ಎಂದು ಆಕ್ರೋಶ ಹೊರಹಾಕಿದರು.

    ಸುಮಾರು ಅರ್ಧ ಗಂಟೆಗಳ ಕಾಲ ಸಂತೆಕಟ್ಟೆ-ಕೆಮ್ಮಣ್ಣು-ಮಲ್ಪೆ ರಸ್ತೆಯಲ್ಲಿ ಯಾವುದೇ ವಾಹನಗಳು ಓಡಾಡಲಿಲ್ಲ. ವಾಹನಗಳನ್ನ ಪ್ರತಿಭಟನಾಕಾರರು ವಾಪಸ್ ಕಳುಹಿಸಿದರು. ಮಲ್ಪೆ ಎಸ್ಐ ಗುರುನಾಥ ಹಾದಿಮನಿ ಪ್ರತಿಭಟನೆಕಾರರ ಮನವೊಲಿಕೆ ಮಾಡಿದರು. ಮುಸಲ್ಮಾನ ಸಮುದಾಯದ ಮುಖಂಡರು ಪರಿಸ್ಥಿತಿಯನ್ನು ವಿವರಿಸಿದರು. ಆನಂತರ ಸಾರ್ವಜನಿಕರು ರಸ್ತೆ ತಡೆಯನ್ನು ವಾಪಸ್ ತೆಗೆದುಕೊಂಡು. ಸುಗಮ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟರು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಜನರನ್ನ ಸ್ಥಳದಿಂದ ಚದುರಿಸಲಾಗಿದೆ. ಆರೋಪಿ ಬಗೆಗಿನ ಆಕ್ರೋಶ ಜನರಲ್ಲಿ ಮಡುಗಟ್ಟಿದೆ.

  • ಅನುಯಾಯಿ ಅತ್ಯಾಚಾರ, ಕೊಲೆ ಕೇಸ್‌ – ಪೆರೋಲ್‌ ಮೇಲೆ ಹೊರಬಂದು ಕೇಕ್‌ ಕಟ್‌ ಮಾಡಿದ ಗುರ್ಮಿತ್‌ ಸಿಂಗ್‌

    ಅನುಯಾಯಿ ಅತ್ಯಾಚಾರ, ಕೊಲೆ ಕೇಸ್‌ – ಪೆರೋಲ್‌ ಮೇಲೆ ಹೊರಬಂದು ಕೇಕ್‌ ಕಟ್‌ ಮಾಡಿದ ಗುರ್ಮಿತ್‌ ಸಿಂಗ್‌

    ನವದೆಹಲಿ: ಡೇರಾ ಸಚ್ಛಾಸೌಧದ (Dera Sacha Sauda) ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ಗೆ (Gurmeet Ram Rahim) 40 ದಿನಗಳ ಪೆರೋಲ್‌ ಮಂಜೂರಾಗಿದ್ದು, ಜೈಲಿನಿಂದ ಹೊರಬಂದು ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.

    ಆಶ್ರಮದಲ್ಲಿ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್ಮಿತ್‌ ಸಿಂಗ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಿಂಗ್‌ಗೆ ಮೂರು ದಿನಗಳ ಹಿಂದೆ ಪೆರೋಲ್‌ ಮಂಜೂರು ಮಾಡಲಾಗಿತ್ತು. ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಜಾಮೀನು ಅರ್ಜಿಯಲ್ಲಿ ರಾಮ್ ರಹೀಮ್, ಜನವರಿ 25 ರಂದು ಮಾಜಿ ಡೇರಾ ಮುಖ್ಯಸ್ಥ ಷಾ ಸತ್ನಾಮ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅವಕಾಶಕ್ಕೆ ಕೋರಿದ್ದರು.

    ಸಿಂಗ್‌ ಕೇಕ್‌ ಕತ್ತರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. “ಐದು ವರ್ಷಗಳ ನಂತರ ಈ ರೀತಿ ಆಚರಿಸಲು ಅವಕಾಶ ಸಿಕ್ಕಿದೆ. ಹಾಗಾಗಿ ಕನಿಷ್ಠ ಐದು ಕೇಕ್‌ಗಳನ್ನಾದರೂ ಕತ್ತರಿಸಬೇಕು. ಇದು ಮೊದಲ ಕೇಕ್” ಎಂದು ವೀಡಿಯೋ ಸಿಂಗ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ಪೈಸ್‌ ಜೆಟ್ ಗಗನ ಸಖಿಯೊಂದಿಗೆ ಅಸಭ್ಯ ವರ್ತನೆ – ಪ್ರಯಾಣಿಕ ಅರೆಸ್ಟ್

    ಸಿಂಗ್‌ ಕತ್ತಿಯಿಂದ ಕೇಕ್‌ ಕತ್ತರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಶಸ್ತ್ರಾಸ್ತ್ರಗಳ ಕಾಯಿದೆಯ ಅಡಿಯಲ್ಲಿ ಶಸ್ತ್ರಾಸ್ತ್ರಗಳ ಸಾರ್ವಜನಿಕ ಪ್ರದರ್ಶನ (ಕತ್ತಿಯಿಂದ ಕೇಕ್ ಕತ್ತರಿಸುವುದು) ನಿಷೇಧಿಸಲಾಗಿದೆ.

    ಕಳೆದ 14 ತಿಂಗಳಲ್ಲಿ ಇದು ನಾಲ್ಕನೇ ಬಾರಿ ಮತ್ತು ಮೂರು ತಿಂಗಳೊಳಗೆ ಎರಡನೇ ಬಾರಿಗೆ ರಾಮ್ ರಹೀಮ್‌ಗೆ ಪೆರೋಲ್ ನೀಡಲಾಗಿದೆ. ಇದಕ್ಕೂ ಮೊದಲು, ಹರಿಯಾಣ ಪಂಚಾಯತ್ ಚುನಾವಣೆ ಮತ್ತು ಆದಂಪುರ ವಿಧಾನಸಭಾ ಉಪಚುನಾವಣೆಗೆ ಮುಂಚಿತವಾಗಿ ಅವರನ್ನು ಅಕ್ಟೋಬರ್ 2022 ರಲ್ಲಿ 40 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಒಂದೇ ವಾರದಲ್ಲಿ ಕರ್ನಾಟಕದ ಟ್ಯಾಬ್ಲೋ ರೆಡಿ

    ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರ ಆಗಸ್ಟ್‌ನಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಆತನಿಗೆ ಶಿಕ್ಷೆ ವಿಧಿಸಿತ್ತು. 2003 ರಲ್ಲಿ ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈ ಹಿಂದೆ ಕುರುಕ್ಷೇತ್ರದ ಪೊಲೀಸ್ ಠಾಣೆ ಸದರ್‌ನಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೀಸ್ ಪೀಸ್ ಪ್ರೇಮಿಯ ಮತ್ತಷ್ಟು ಕ್ರೂರತೆ ಬಹಿರಂಗ- ದೆಹಲಿ ಮಾತ್ರವಲ್ಲ ಡೆಹ್ರಾಡೂನ್‍ನಲ್ಲೂ ದೇಹದ ತುಂಡು ಎಸೆತ

    ಪೀಸ್ ಪೀಸ್ ಪ್ರೇಮಿಯ ಮತ್ತಷ್ಟು ಕ್ರೂರತೆ ಬಹಿರಂಗ- ದೆಹಲಿ ಮಾತ್ರವಲ್ಲ ಡೆಹ್ರಾಡೂನ್‍ನಲ್ಲೂ ದೇಹದ ತುಂಡು ಎಸೆತ

    ನವದೆಹಲಿ: ದೆಹಲಿಯಲ್ಲಿ ನಡೆದ ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಸಿಕ್ಕಿದೆ. ಶ್ರದ್ಧಾ ದೇಹವನ್ನು ತುಂಡರಿದ್ದ ಸೈಕೋ ಪಾತಕಿ ಅಫ್ತಾಬ್ ಬರಿ ದೆಹಲಿಯ ಕಾಡುಗಳಲ್ಲಿ ಮಾತ್ರವಲ್ಲದೇ ಉತ್ತಾರಖಂಡನ ಡೆಹ್ರಾಡೂನ್ ನಲ್ಲೂ ಕೆಲವು ತುಂಡುಗಳನ್ನು ಎಸೆದು ಬಂದಿದ್ದಾನಂತೆ. ಈ ನಡುವೆ ಶ್ರದ್ಧಾ ಸ್ನೇಹಿತರು ಹಂಚಿಕೊಂಡ ಚಾಟ್‍ಗಳು ವೈರಲ್ ಆಗಿದ್ದು, ಅಫ್ತಾಬ್ ಶ್ರದ್ಧಾಳನ್ನು ವರ್ಷಗಳಿಂದ ಹಿಂಸಿಸುತ್ತಿದ್ದದ್ದು ಬಹಿರಂಗವಾಗಿದೆ.

    ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಮೊಗೆದಷ್ಟು ಸ್ಪೋಟಕ ಮಾಹಿತಿಗಳು ಹೊರ ಬರುತ್ತಿದೆ. ದೆಹಲಿ ಪೊಲೀಸರ ವಿಚಾರಣೆಯಲ್ಲಿ ಸೈಕೊ ಪಾತಕಿ ಅಫ್ತಾಬ್ (Aftab Amin Poonawala) ಸ್ಫೋಟಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಪೊಲೀಸ್ ಕಸ್ಟಡಿ ವಿಸ್ತರಣೆ ಬಳಿಕ ಪೊಲೀಸರು ಅಫ್ತಾಬ್ ವಿಚಾರಣೆ ಮುಂದುವರಿಸಿದ್ದು, ವಿಚಾರಣೆ ವೇಳೆ ಮತ್ತೊಂದು ಸ್ಪೋಟಕ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ಇದನ್ನೂ ಓದಿ: ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ: ಅಫ್ತಾಬ್ ತಪ್ಪೊಪ್ಪಿಗೆ

    ಶ್ರದ್ಧಾಳ ದೇಹವನ್ನು 16 ಪೀಸ್ ಮಾಡಿದ್ದೆ ಎಂದು ಹೇಳಿಕೆ ತಿರುಚಿದ್ದ ಅಫ್ತಾಬ್, ಈಗ ದೆಹಲಿಯ ಮೆಹ್ರೋಲಿ ಕಾಡುಗಳು ಮಾತ್ರವಲ್ಲದೇ ಉತ್ತರಾಖಂಡ (Uttarakhand) ರಾಜಧಾನಿ ಡೆಹ್ರಾಡೂನ್‍ (Dehradun) ನಲ್ಲೂ ಕೆಲವು ತುಂಡುಗಳನ್ನು ಎಸೆದು ಬಂದಿರುವುದಾಗಿ ಹೇಳಿದ್ದಾನೆ. ಶ್ರದ್ಧಾ ದೇಹದ ಯಾವ ಭಾಗವನ್ನು ಎಸೆದು ಬಂದಿದ್ದ ಎನ್ನುವುದು ಇನ್ನೂ ಖಚಿತವಾಗಿಲ್ಲ, ಆದರೆ ಅಫ್ತಾಬ್ ನೀಡಿದ ಹೇಳಿಕೆಗೆ ಪೊಲೀಸರು ಅಚ್ಚರಿಗೊಂಡಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ – ತಲೆ ಬುರುಡೆ ಸುಟ್ಟು, ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದ ಅಫ್ತಾಬ್

    ಸ್ನೇಹಿತೆಗೆ ಶ್ರದ್ಧಾ ಮಾಡಿದ ಮೆಸೇಜ್ ವೈರಲ್: ತನಿಖೆಯ ಭಾಗವಾಗಿ ಪೊಲೀಸರು ಶ್ರದ್ಧಾಳ ಸ್ನೇಹಿತರು ಮತ್ತು ಆಕೆ ಕೆಲಸ ಮಾಡುತ್ತಿದ್ದ ಕಂಪನಿಯ ಮ್ಯಾನೇಜರ್ (Company Manager) ಅನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ 2020ರಲ್ಲಿ ಶ್ರದ್ಧಾ ಮಾಡಿದ ಮೆಸೇಜ್ ಗಳನ್ನು ಅವರು ಹಂಚಿಕೊಂಡಿದ್ದಾರೆ. ಶ್ರದ್ಧಾ ತನ್ನ ಮ್ಯಾನೇಜರ್ ಕರಣ್ ಭಕ್ಕಿಗೆ 2020ರ ನವೆಂಬರ್ 26 ರಿಂದ 2020ರ ಡಿಸೆಂಬರ್ 3ರ ನಡುವೆ ಮಾಡಿದ ಮೆಸೇಜ್‍ನಲ್ಲಿ ಅಫ್ತಾಬ್ ತನ್ನನ್ನು ಕೊಂದುಬಿಡುವ ಬಗ್ಗೆ ಮಸೇಜ್ ಮಾಡಿದ್ದಾಳೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ- ಸಾಕ್ಷಿ ನಾಶಕ್ಕೆ OLXನಲ್ಲಿ ಫೋನ್ ಮಾರಿದ್ದ ಅಫ್ತಾಬ್!

    ಶ್ರದ್ಧಾ ಮೆಸೇಜ್‍ನಲ್ಲಿ ಮಾಡಿದ್ದೇನು..?: ಅಫ್ತಾಬ್ ನಿನ್ನೆ ಹೆಚ್ಚು ಹೊಡೆದಿದ್ದಾನೆ. ದೇಹಕ್ಕೆ ಹೆಚ್ಚು ನೋವಾಗಿದ್ದು ನಾನು ಕೆಲಸ ಮಾಡುವ ಪರಿಸ್ಥಿತಿಯಲ್ಲಿಲ್ಲ. ನನ್ನ ಬಿಪಿ (Blood Pressure) ಕೂಡ ಕಡಿಮೆಯಾಗಿದೆ. ಹಾಸಿಗೆಯಿಂದ ಎದ್ದೇಳುವ ಶಕ್ತಿಯೂ ನನ್ನಗಿಲ್ಲ. ಅವನು ಮನೆಯಿಂದ ಹೊರ ಹೋಗುವುದು ಕಾಯುತ್ತಿದ್ದೇನೆ. ನಾನು ಪೊಲೀಸ್‍ಗೆ ಕಂಪ್ಲೇಟ್ ಕೊಡಬೇಕು. ಮಹಿಳಾ ಸಂಘಟನೆಯನ್ನು ಸಂಪರ್ಕಿಸಬೇಕು, ನೀವೂ ನನಗೆ ಸಹಾಯ ಮಾಡಿ ಎಂದು ಮೆಸೇಜ್ (Message) ನಲ್ಲಿ ತಿಳಿಸಿದ್ದಾಳೆ. ಅಲ್ಲದೇ ತೀವ್ರ ಗಾಯಗೊಂಡ ಮುಖದ ಪೊಟೋವನ್ನು ತೆಗೆದು ಶ್ರದ್ಧಾ ಮ್ಯಾನೇಜರ್‍ಗೆ ರಜೆಗೆ ಮನವಿ ಮಾಡಿದ್ದಾರೆ. ಫೋಟೋ ನೋಡಿದ ಮ್ಯಾನೇಜರ್ ಕರಣ್ ಭಕ್ಕಿ ಸಹಾಯ ಮಾಡುವ ಭರವಸೆ ನೀಡಿದ್ದರು.

    ಮತ್ತೊಂದು ಮೆಸೆಂಜರ್ (Messanger) ಚಾಟ್‍ನಲ್ಲಿ ಶ್ರದ್ಧಾ ಅಫ್ತಾಬ್ ಹೊಡೆದ ವಿಚಾರವನ್ನು ಸ್ನೇಹಿತೆಯಿಂದ ಮುಚ್ಚಿಡುವ ಪ್ರಯತ್ನ ಮಾಡಿದ್ದಾಳೆ. ಮೂಗಿನ ಮೇಲಿನ ಗಾಯ ಕಂಡು ಏನಾಯಿತು ಎಂದು ಕೇಳಿದ ಸ್ನೇಹಿತೆಗೆ ಮೆಟ್ಟಿಲು ಹತ್ತುವಾಗ ಜಾರಿ ಬಿದ್ದಿರುವುದಾಗಿ ಬಳಿಕ ಮುರಿದಿದೆ, ಕೆಲವು ವಾರದಲ್ಲಿ ಸರಿಯಾಗಲಿದೆ ಎಂದು ಶ್ರದ್ಧಾ ಹೇಳಿದ್ದಾಳೆ. ಈ ನಡುವೆ ಸ್ನೇಹಿತ ಲಕ್ಷ್ಮಣ್ ನಾಡಾರ್ ಗೆ ವ್ಯಾಟ್ಸಪ್ ಕಾಲ್ (Whatsap Call) ಮಾಡಿದ್ದ ಶ್ರದ್ಧಾ, ಅಫ್ತಾಬ್‍ನಿಂದ ರಕ್ಷಿಸುವಂತೆ ಕೇಳಿಕೊಂಡಿದ್ದಳು. ರಾತ್ರಿ ಆಫ್ತಾಬ್‍ನೊಂದಿಗೆ ಉಳಿದುಕೊಂಡರೆ ಅವನು ನನ್ನನ್ನು ಕೊಲ್ಲುತ್ತಾನೆ ಎಂದು ಹೇಳಿಕೊಂಡಿದ್ದಳು. ಇದನ್ನೂ ಓದಿ: ಶ್ರದ್ಧಾ ದೇಹ ತುಂಡರಿಸಿದ್ರೂ ತಲೆಬುರುಡೆಗೆ ಹಾನಿ ಮಾಡಿಲ್ಲ- ಫ್ರಿಡ್ಜ್‌ನಲ್ಲಿಟ್ಟು ಆಗಾಗ ನೋಡ್ತಿದ್ದ ಅಫ್ತಾಬ್

    ಹಲ್ಲೆಯಿಂದ ಖಿನ್ನತೆಗೆ ಒಳಗಾಗಿದ್ದ ಶ್ರದ್ಧಾ: ಅಫ್ತಾಬ್‍ನ ನಿರಂತರ ಶೋಷಣೆಯಿಂದ ಶ್ರದ್ಧಾ ಖಿನ್ನತೆಗೆ ಒಳಗಾಗಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇದಕ್ಕಾಗಿ ಮುಂಬೈ ಮೂಲದ ವೈದ್ಯ ಪ್ರಣವ್ ಕಬ್ರಾ (Pranav Kabra) ಅವರನ್ನು ಶ್ರದ್ಧಾ ಕಳೆದ ವರ್ಷ ಸಂಪರ್ಕಿಸಿದ್ದಳು. ಅವಳು ತನ್ನ ಸಿಟ್ಟು, ಖಿನ್ನತೆ ಬಗ್ಗೆ ಫೋನ್‍ನಲ್ಲಿ ಹೇಳಿಕೊಂಡಿದ್ದಳು. ನೇರವಾಗಿ ಸಂಪರ್ಕಿಸಲು ವೈದ್ಯರು ಸಲಹೆ ನೀಡಿದ ವೇಳೆ ಕೋವಿಡ್ ಕಾರಣದಿಂದ ನಿರಾಕರಿಸಿದರು ಎಂದು ವೈದ್ಯ ಪ್ರಣವ್ ಕಬ್ರಾ ಹೇಳಿಕೆ ದಾಖಲಿಸಿದ್ದಾರೆ.  ಇದನ್ನೂ ಓದಿ: ಶ್ರದ್ಧಾ ಕೇಸ್‌ನಂತೆಯೇ ಬಾಂಗ್ಲಾದಲ್ಲೂ ಭೀಕರ ಹತ್ಯೆ – ಹಿಂದೂ ಯುವತಿಯನ್ನು ಪೀಸ್ ಪೀಸ್ ಮಾಡಿದ ಹಂತಕ ಪ್ರೇಮಿ

    ಪೊಲೀಸರಿಗೆ ಕೋರ್ಟ್ ಸೂಚನೆ: ಅಫ್ತಾಬ್ ಮಂಪರು ಪರೀಕ್ಷೆ ಸಂಬಂಧ ಕೋರ್ಟ್ (Court ಮಹತ್ವದ ಸೂಚನೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ತಜ್ಞರ ಸಮ್ಮುಖದಲ್ಲಿ ಪರೀಕ್ಷೆ ನಡೆಸಲು ರೋಹಿಣಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಾಕೇತ್ ನ್ಯಾಯಾಲಯ ಆದೇಶ ನೀಡಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಜಯಶ್ರೀ ರಾಥೋಡ್ ಅಫ್ತಾಬ್ ಪರಿಸ್ಥಿತಿ ಕಂಡಿ ಯಾವುದೇ ಥರ್ಡ್ ಡಿಗ್ರಿ ಟ್ರಿಂಟ್ಮೆಂಟ್ ನೀಡದಂತೆ ತನಿಖಾಧಿಕಾರಿಗೆ ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    ತನಿಖೆಯ ಭಾಗವಾಗಿ ಹಿಮಾಚಲದಲ್ಲಿ ಪರಿಶೀಲನೆ ನಡೆಸುತ್ತಿದ್ದ ದೆಹಲಿ ಪೊಲೀಸರು, ಈಗ ಅಫ್ತಾಬ್ ಹೇಳಿಕೆಯ ಬಳಿಕ ಉತ್ತರಾಖಂಡಗೆ ಪ್ರಯಾಣ ಬೆಳೆಸಿದ್ದು ಡೆಹ್ರಾಡೂನ್‍ನಲ್ಲಿ ಶ್ರದ್ಧಾ ದೇಹದ ತುಂಡುಗಳಿಗಾಗಿ ಹುಡುಕಾಟ ನಡೆಸಲಿದ್ದಾರೆ. ಈ ನಡುವೆ ಮಂಪರು ಪರೀಕ್ಷೆ ಬಳಿಕ ಮತ್ತಷ್ಟು ಸ್ಫೋಟಕ ಸತ್ಯಗಳು ಹೊರಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್

    ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆಯಿದೆ. ಅದಕ್ಕೆ ಮೊದಲು ಅದನ್ನು ಹೆಚ್ಚಿಸಬೇಕು ಎಂದು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಡಿಜಿಪಿ ಪ್ರವೀಣ್ ಸೂದ್ ತಿಳಿಸಿದರು.

    ಮಂಗಳೂರು ಕೊಲೆ ಪ್ರಕರಣಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹತ್ತು ದಿನಗಳಲ್ಲಿ ಮೂರು ಕೊಲೆ ಪ್ರಕರಣಗಳು ನಡೆದಿವೆ. ಮಸೂದ್ ಕೊಲೆ ಪ್ರಕರಣಲ್ಲಿ ಎಂಟು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಇಬ್ಬರು ಅರೆಸ್ಟ್ ಆಗಿದ್ದಾರೆ. ತನಿಖೆ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಉಳಿದ ಆರೋಪಿಗಳನ್ನು ಪತ್ತೆ ಮಾಡುತ್ತೇವೆ. ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಸುರತ್ಕಲ್ ಫಾಜಿಲ್ ಹತ್ಯೆ ಕೇಸಲ್ಲಿ ನಾಲ್ವರು ಭಾಗಿ ಶಂಕೆ

    ಗಡಿಪ್ರದೇಶದಲ್ಲಿ ತಪಾಸಣೆ ಜಾಸ್ತಿ ಮಾಡಬೇಕು. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆಯಿದೆ. ಅದನ್ನು ಸ್ವಲ್ಪ ಹೆಚ್ಚು ಮಾಡಬೇಕು ಎಂದು ಸರ್ಕಾರದ ಕಡೆಯಿಂದ ಚರ್ಚೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.

    ಫಾಝಿಲ್ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ. ಕೃತ್ಯಕ್ಕೆ ಬಳಸಿದ ಕಾರು ಸಿಕ್ಕಿದ್ದು, ಮಾಲೀಕನನ್ನು ಬಂಧಿಸಿದ್ದೇವೆ. ಅವರ ಮೂಲಕ ಉಳಿದ ಅಪರಾಧಿಗಳನ್ನು ಸದ್ಯದಲ್ಲೇ ಬಂಧಿಸುತ್ತೇವೆ. ನಾನು ಇಂದು ಕಮಿಷನರ್, ಎಸ್‍ಪಿ, ಐಜಿ ಜೊತೆ ಸಭೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರು ಪೊಲೀಸರ ವಶಕ್ಕೆ

    ಮುಂದೆ ಇಂತಹ ಘಟನೆಗಳು ಆಗಬಾರದು. ಏನೇನು ಕ್ರಮ ತೆಗೆದುಕೊಳ್ಳಬೇಕು ಅದರ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡ್ತಿನಿ. ಡಿಸಿ ಅವರ ಜೊತೆಯೂ ಮಾತನಾಡುತ್ತೀನಿ. ಏನೇನು ಕ್ರಮ ತೆಗೆದುಕೊಳ್ಳುತ್ತೀವಿ ಎಂದು ಈಗಾಗಲೇ ಸಿಎಂ ಬೊಮ್ಮಾಯಿ ಅವರಿಗೆ ಹೇಳಿದ್ದೇವೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ 13 ಕಡೆ ಎನ್‌ಐಎ ಅಧಿಕಾರಿಗಳ ದಾಳಿ

    ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ 13 ಕಡೆ ಎನ್‌ಐಎ ಅಧಿಕಾರಿಗಳ ದಾಳಿ

    ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಜಿಲ್ಲೆ ಹಲವೆಡೆ ಕ್ಷಿಪ್ರ ದಾಳಿ ನಡೆಸಿದ್ದಾರೆ.

    ಶಿವಮೊಗ್ಗಕ್ಕೆ ಎನ್‌ಐಎ ಅಧಿಕಾರಿಗಳು ನಿನ್ನೆ ರಾತ್ರಿ ಬಂದಿಳಿದಿದ್ದರು. ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ಜಿಲ್ಲೆಗೆ ಆಗಮಿಸಿದೆ. ಜಿಲ್ಲೆಯ ಅಧಿಕಾರಿಗಳನ್ನೂ ಸೇರಿ ಒಟ್ಟು 90 ಅಧಿಕಾರಿಗಳಿಂದ ದಾಳಿ ನಡೆದಿದೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ವಾಪಸ್

    ಇಂದು ಬೆಳಗ್ಗೆ ಐದು ಗಂಟೆಗೆ ದಾಳಿ ಆರಂಭವಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ 13 ಕಡೆ ದಾಳಿ ನಡೆಸಿ ವಿಚಾರಣೆ ಮಾಡಲಾಯಿತು. ಬೆಳಗ್ಗೆ 10 ಗಂಟೆಯೊಳಗೆ ವಿಚಾರಣೆ ಮುಗಿಸಿ ವಾಪಸ್ ಆಗಿದ್ದಾರೆ. ಹರ್ಷ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಆರೋಪಿಗಳು ಹಾಗೂ ಅವರ ಸಂಬಂಧಿಕರ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ವೇಳೆ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಇದುವರೆಗೆ ಒಟ್ಟು 450 ಮಂದಿಯನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಉಮೇಶ್ ಕತ್ತಿ

    Live Tv