Tag: ಕೊಲೆಯತ್ನ

  • ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆಯಿಂದ್ಲೇ ಮಗನ ಹತ್ಯೆಗೆ ಯತ್ನ

    ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆಯಿಂದ್ಲೇ ಮಗನ ಹತ್ಯೆಗೆ ಯತ್ನ

    ಮಂಡ್ಯ: ತಂದೆಯೇ ಮಗನನ್ನು ಹತ್ಯೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಂಚೆಭುವನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.

    ತಂದೆಯಿಂದ ಹಲ್ಲೆಗೊಳಗಾದವನನ್ನು ಪ್ರಸನ್ನ ಎಂದು ಗುರುತಿಸಲಾಗಿದೆ. ಕಿರಿಯ ಪತ್ನಿಯ ಮಗನೊಂದಿಗೆ ಸೇರಿ ಹಿರಿಹೆಂಡ್ತಿ ಮಗನ ಕೊಲೆಗೆ ಶಿವಲಿಂಗೇಗೌಡ ಯತ್ನಿಸಿದ್ದಾನೆ. ಶಿವಲಿಂಗೇ ಗೌಡನಿಗೆ ಪ್ರಸನ್ನ ಸಹೋದರ ರಾಮಕೃಷ್ಣ ಸಾಥ್ ನೀಡಿದ್ದಾನೆ.

    ಶಿವಲಿಂಗೇಗೌಡ ಮತ್ತು ರಾಮಕೃಷ್ಣ ಕುಟುಂಬ ಬೆಂಗಳೂರಿನಲ್ಲಿ ವಾಸವಿದೆ. ನಿನ್ನೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದಾರೆ. ತಮ್ಮ ಪ್ರಯತ್ನ ವಿಫಲವಾದಾಗ ಕೃತ್ಯ ಎಸಗಲು ತಾವು ಬಂದಿದ್ದ ಕಾರನ್ನೂ ಬಿಟ್ಟು ಪರಾರಿಯಾಗಿದ್ದಾರೆ.

    ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಪ್ರಸನ್ನರನ್ನ ಸ್ಥಳೀಯರು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೌಟುಂಬಿಕ ಕಲಹದಿಂದ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ದುಷ್ಕರ್ಮಿಗಳ ಪತ್ತೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

    ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಅರೆಸ್ಟ್

    ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಅರೆಸ್ಟ್

    ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.

    ಬಂಧಿತನನ್ನು 23 ವರ್ಷದ ಹನಮಂತ ಮಹಾಗುಂಡಪ್ಪ ಹುಣಸಗೇರಿ ಎಂದು ಗುರುತಿಸಲಾಗಿದೆ. ಈತ ಮೇ 17ರಂದು ಗ್ರಾಮ ದೇವತೆಯ ಜಾತ್ರೆ ಸಂದರ್ಭದಲ್ಲಿ ಮನೆಗೆ ನುಗ್ಗಿ ಒಬ್ಬಳೇ ಇದ್ದ 29 ವರ್ಷದ ಬುದ್ಧಿಮಾಂದ್ಯ ಯುವತಿಯನ್ನು ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಕತ್ತು ಹಿಸುಕಿ ಕೊಲೆಗೆ ಯತ್ನಿಸಿ ಬಳಿಕ ಪರಾರಿಯಾಗಿದ್ದನು.

    ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪತ್ತೆಹಚ್ಚಲು ಯುವತಿಯನ್ನು ತನಿಖೆಗೆ ಒಳಪಡಿಸಲಾಗಿತ್ತು. ದೆಹಲಿ ನಿರ್ಭಯಾ ಪ್ರಕರಣದಲ್ಲಿ ವೈದ್ಯಕೀಯ ಪರಿಶೀಲನೆ ಮಾಡಿದ ವೈದ್ಯರಿಂದಲೇ ವೈದ್ಯಕೀಯ ಪರೀಕ್ಷೆ ಮಾಡಲಾಯಿತು. ಈ ವೇಳೆ ಯುವತಿಯ ಎದೆಯ ಮೇಲೆ ಕಚ್ಚಿದ ಹಲ್ಲಿನ ಕಲೆಗಳ ಆಧಾರದ ಮೇಲೆ ಆತನನ್ನು ಪತ್ತೆಹಚ್ಚಲಾಗಿದೆ. ಅಲ್ಲದೆ ಆತ ಅತ್ಯಾಚಾರವೆಸಗಿದ ಮನೆಯಿಂದ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.

    ಖಾಕಿ ಬಲೆಗೆ ಬಿದ್ದ ಆರೋಪಿ ಈ ಹಿಂದೆ ಯುವತಿಯರಿಗೆ ಚುಡಾಯಿಸುತ್ತಿದ್ದನು. ಅಲ್ಲದೆ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಜಾತಿ ನಿಂದನೆ ಕೇಸ್‍ನಲ್ಲಿ ಜೈಲಿನಲ್ಲಿದ್ದ ಎನ್ನಲಾಗಿದೆ.

    ಜೈಲಿನಿಂದ ಹೊರ ಬಂದ ತಿಂಗಳ ಒಳಗಾಗಿ ಅಮಾಯಕ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದನು. ಇದರಿಂದ ತಿಂಗಳುಗಳ ಕಾಲ ಆಕೆ ಪ್ರಜ್ಞಾಹೀನಳಾಗಿದ್ದಳು. ಖಾಸಗಿ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸಾ ವೆಚ್ಚವನ್ನು ಜಿಲ್ಲಾಧಿಕಾರಿ ಸ್ಕೀಮ್‍ವೊಂದರಿಂದ ಭರಿಸಲಾಗುವುದು ಎಂದು ಹೇಳಲಾಗಿದೆ. ಸದ್ಯ ಯುವತಿಯು ಸುದೀರ್ಘ ವೈದ್ಯಕೀಯ ಚಿಕಿತ್ಸೆ ಬಳಿಕ ಪ್ರಜ್ಞಾವಸ್ಥೆಗೆ ಬಂದಿದ್ದಾಳೆ. ಪೋರೆನ್ಸಿಕ್ ಲ್ಯಾಬ್ ನಿಂದ ವರದಿ ಬಂದ ತಕ್ಷಣ ಸಮರ್ಪಕ ದಾಖಲೆಗಳ ಸಮೇತ ಚಾರ್ಜ್ ಸೀಟ್ ಸಲ್ಲಿಕೆ ಮಾಡಲಿದ್ದು, ಆರೋಪಿಗೆ ಶಿಕ್ಷೆ ಖಂಡಿತ ಎಂದು ಎಸ್.ಪಿ ಅಭಿನವ್ ಭರವಸೆ ನೀಡಿದ್ದಾರೆ.

  • ಟೋಲ್ ಬಳಿ ಲಾರಿ ಹರಿಸಿ RTI ಕಾರ್ಯಕರ್ತನ ಹತ್ಯೆಗೆ ಯತ್ನ!

    ಟೋಲ್ ಬಳಿ ಲಾರಿ ಹರಿಸಿ RTI ಕಾರ್ಯಕರ್ತನ ಹತ್ಯೆಗೆ ಯತ್ನ!

    ಬೆಂಗಳೂರು: ಕೊಬ್ಬರಿ ಹಗರಣ ಬಯಲಿಗೆಳೆದಿದ್ದ ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಹತ್ಯೆಗೆ ಸಂಚು ನಡೆಸಲಾಗಿದೆ. ದಾಖಲೆ ಇಲ್ಲದೆ ಕೊಬ್ಬರಿಯನ್ನ ಹೊರರಾಜ್ಯಕ್ಕೆ ಅಕ್ರಮವಾಗಿ ಸಾಗಾಟದ ಬಗ್ಗೆ ವಾಣಿಜ್ಯ ತೆರಿಗೆ ಆಯುಕ್ತರಿಗೆ ತುಮಕೂರು ಮೂಲದ ರವಿ ದೂರು ನೀಡಿದ್ರು. ಅಲ್ಲದೆ ಅದಕ್ಕೆ ಬೇಕಾದ ಎಲ್ಲಾ ಆಡಿಯೋ, ವಿಡಿಯೋ ಸಾಕ್ಷ್ಯ ಕೂಡಾ ಒದಗಿಸಿದ್ದರು.

    ಇದರ ಮಧ್ಯೆ ರವಿ ಕುಮಾರ್ ಕಾರ್ ಮೇಲೆ ಲಾರಿ ಹರಿಸಿ ಹತ್ಯೆಗೆ ಸಂಚು ರೂಪಿಸಲಾಗಿದೆಯಂತೆ. ನೆಲಮಂಗಲ ಪಟ್ಟಣದ ನವಯುಗ ಟೋಲ್ ಬಳಿ ತಮಿಳುನಾಡು ರಿಜಿಸ್ಟ್ರೇಷನ್ ಲಾರಿ ರವಿ ಕಾರಿಗೆ ಡಿಕ್ಕಿ ಹೊಡೆದಿದೆ. ಚಾಲಕ ಇದು ಬ್ರೆಕ್ ಫೇಲ್ಯೂರ್‍ನಿಂದ ಆಗಿರುವ ಅಪಘಾತ ಎಂದು ಹೇಳಿದ್ರೂ, ಲಾರಿ ಬ್ರೇಕ್ ಫೇಲ್ಯೂರ್ ಆಗಿರಲಿಲ್ಲ ಅನ್ನೋದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರವಿಕುಮಾರ್ ದೂರು ಕೊಟ್ಟು ಒಂದೂವರೆ ತಿಂಗಳಾದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತಿಪಟೂರು ಎಪಿಎಂಸಿ ಕಾರ್ಯದರ್ಶಿಯನ್ನು ಕೇಳಿದ್ರೆ, ಈ ವಿಚಾರವಾಗಿ ದೂರು ನೀಡಿದ್ರೆ ಯಾವುದೇ ಪ್ರಯೋಜನ ಇಲ್ಲ. 29 ಮಂದಿ ಕೆಲಸಗಾರರ ಜಾಗದಲ್ಲಿ ಇರೋದು ಇಬ್ಬರು ಮಾತ್ರ. ಹೀಗಿದ್ದಾಗ ಅಕ್ರಮ ತಡೆಗಟ್ಟಲು ಹೇಗೆ ಸಾಧ್ಯ ಅಂತಿದ್ದಾರೆ ಎಂದು ರವಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೀಪಕ್ ರಾವ್, ಬಶೀರ್ ಮನೆಗೆ ಸಿಎಂ ಭೇಟಿ- ದೀಪಕ್ ರಾವ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸೂಚನೆ

    ದೀಪಕ್ ರಾವ್, ಬಶೀರ್ ಮನೆಗೆ ಸಿಎಂ ಭೇಟಿ- ದೀಪಕ್ ರಾವ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸೂಚನೆ

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ದೀಪಕ್ ರಾವ್ ಮತ್ತು ಬಶೀರ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಲೂಕಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ತೆರಳಿದ್ದ ಸಿಎಂ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮೃತರ ಕುಟುಂಬಗಳಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ದೀಪಕ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಥಮ್

    ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಾಡಹಗಲೇ ದುಷ್ಕರ್ಮಿಗಳ ಮಾರಣಾಂತಿಕ ದಾಳಿಯಿಂದ ಮೃತಪಟ್ಟಿದ್ದ ದೀಪಕ್ ರಾವ್ ಮನೆಗೆ ಭೇಟಿಯಿತ್ತ ಸಿಎಂ ಸಿದ್ದರಾಮಯ್ಯ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶ ನೀಡುತ್ತೇವೆ ಎಂದು ಹೇಳಿದ್ರು. ದೀಪಕ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಇದನ್ನೂ ಓದಿ: ಬಿಜೆಪಿ ನಾಯಕ ಕೃಷ್ಣ ಪಾಲೇಮಾರ್ ವಿರುದ್ಧ ಬಶೀರ್ ಕುಟುಂಬಸ್ಥರ ಆಕ್ರೋಶ

    ದೀಪಕ್ ರಾವ್ ಮನೆಯಿಂದ ತೆರಳಿದ ಸಿದ್ದರಾಮಯ್ಯ, ಮಂಗಳೂರಿನ ಆಕಾಶಭವನದಲ್ಲಿರುವ ಬಶೀರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಈ ವೇಳೆ ಸಿಎಂ ಗೆ ಸಚಿವರಾದ ರಮನಾಥ್ ರೈ, ಯು.ಟಿ ಖಾದರ್, ಮೊಯ್ದೀನ್ ಬಾವ, ಮೇಯರ್ ಕವಿತಾ ಸನಿಲ್ ಸಾಥ್ ನೀಡಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ರು. ಇದನ್ನೂ ಒದಿ: ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡ್ತಿದ್ದಾರೆ- ಸಿಎಂ ಎದುರೇ ರೈ ವಿವಾದಾತ್ಮಕ ಹೇಳಿಕೆ

    ಜ.3ರಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯದ್ವಾತದ್ವಾ ದೀಪಕ್ ರಾವ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಕೂಡಲೇ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದರು. ಸದ್ಯ ಅವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಅಬ್ದುಲ್ ಬಶೀರ್ ಕೊಲೆ ಯತ್ನ- ನಾಲ್ವರು ಆರೋಪಿಗಳ ಬಂಧನ

    ಇತ್ತ ಅದೇ ದಿನ ರಾತ್ರಿ ನಗರದ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಹಿಂದುರುಗುತ್ತಿದ್ದ ಸಂದರ್ಭದಲ್ಲಿ ಆಕಾಶಭವನ ನಿವಾಸಿ ಬಶೀರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆಯಿಂದ ತಲೆ, ಎದೆ ಹಾಗೂ ಗಂಟಲು ಭಾಗಕ್ಕೆ ಗಂಭೀರ ಗಾಯವಾಗಿದ್ದ ಅವರನ್ನು ಕೂಡಲೇ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ಬಶೀರ್ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದರು.

     

     

  • ಮದುವೆಗೆ ಒಪ್ಪದಿದ್ದಕ್ಕೆ ವಿಧವೆಯ ಹೊಟ್ಟೆ, ಕಿವಿ, ಕೆನ್ನೆಗೆ ಚೂರಿಯಿಂದ ಇರಿದ ನಿರುದ್ಯೋಗಿ..!

    ಮದುವೆಗೆ ಒಪ್ಪದಿದ್ದಕ್ಕೆ ವಿಧವೆಯ ಹೊಟ್ಟೆ, ಕಿವಿ, ಕೆನ್ನೆಗೆ ಚೂರಿಯಿಂದ ಇರಿದ ನಿರುದ್ಯೋಗಿ..!

    ಬೆಂಗಳೂರು: ಮದುವೆ ಮಾಡಿಕೊಳ್ಳಲು ಒಪ್ಪದ ಮುಂಬೈನ 33 ವರ್ಷ ವಯಸ್ಸಿನ ವಿಧವೆಯ ಹೊಟ್ಟೆ, ಕಿವಿ, ಕೆನ್ನೆ ಹಾಗೂ ಭುಜಕ್ಕೆ 36 ವರ್ಷದ ನಿರುದ್ಯೋಗಿ ಲೋಹಿತ್ ಎಂಬಾತ ಚಾಕುವಿನಿಂದ ಹಲವು ಬಾರಿ ಇರಿದ ಭಯಾನಕ ಘಟನೆಯೊಂದು ನಡೆದಿದೆ.

    ಈ ಘಟನೆ ದಕ್ಷಿಣ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ ಮತ್ತು ಆರೋಪಿ ಲೋಹಿತ್ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದರು.

    ಘಟನೆ ವಿವರ: ನಗರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರೋ ಮಹಿಳೆಯ ಪತಿ ಎರಡು ವರ್ಷದ ಹಿಂದೆ ತೀರಿಕೊಂಡಿದ್ದು, ಈಕೆ 7 ಮತ್ತು 4 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ಹೀಗಾಗಿ ಮರುಮದುವೆಯಾಬೇಕು ಎನ್ನುವ ನಿಟ್ಟಿನಲ್ಲಿ ಮಹಿಳೆ ಪ್ರಸಿದ್ಧ ಜಾತಲತಾಣ ಮ್ಯಾಟ್ರಿಮೋನಿಯಲ್ಲಿ ಫೋಟೋವೊಂದನ್ನು ಹಾಕಿದ್ದರು.

    ಇದನ್ನೂ ಓದಿ: ಮನೆ ಮುಂದೆ ಮಲಗಿದ್ದ ಮಹಿಳೆಯ ಮೇಲೆ ಗ್ಯಾಂಗ್ ರೇಪ್-ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ

    ಬಳಿಕ ಲೋಹಿತ್ ಮಹಿಳೆಗೆ ಕರೆ ಮಾಡಿ ಮದುವೆ ಮಾಡಿಕೊಳ್ಳುವ ವಿಚಾರವನ್ನು ತಿಳಿಸಿದ್ದಾನೆ. ಅಲ್ಲದೇ ಅವರಿಬ್ಬರ ಮಧ್ಯೆ ಮೆಸೇಜ್ ಗಳು ಆರಂಭವಾಗಿದ್ದವು. ಕೆಲ ದಿನಗಳ ಹಿಂದೆ ಮಹಿಳೆ ನಗರದಲ್ಲಿದ್ದ ಲೋಹಿತ್ ಮನೆಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಹೀಗೆ ಮನೆಗೆ ಬಂದಿದ್ದ ಮಹಿಳೆಯನ್ನು ಮದುವೆ ಮಾಡಿಕೊಳ್ಳುವಂತೆ ಆರೋಪಿ ಪೀಡಿಸಿದ್ದಾನೆ. ಆದ್ರೆ ಮಹಿಳೆ ಈ ವಿಚಾರದಿಂದ ಹಿಂದೆ ಸರಿದಿದ್ರು. ಇದರಿಂದ ಸಿಟ್ಟುಗೊಂಡ ಆರೋಪಿ ಆಕೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಮಹಿಳೆಯನ್ನು ನಗರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಫ್ಲ್ಯಾಟ್ ನಲ್ಲಿ ತಾಯಿ,ಮಗಳ ಶವ ಪತ್ತೆ- 1.17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ

    `ನಾನು ಅಕ್ಟೋಬರ್ 19ರಂದು ಬೆಂಗಳೂರಿಗೆ ಬಂದಿದ್ದು, ಲೋಹಿತ್ ಮನೆಗೆ ಹೋಗಿದ್ದೆ. ಲೋಹಿತ ತನ್ನ ತಾಯಿ ಜೊತೆ ವಾಸಿಸುತ್ತಿದ್ದು, ನಿರುದ್ಯೋಗಿಯಾಗಿದ್ದನೆಂದು ನನಗೆ ತಿಳಿದುಬಂದಿತ್ತು. ಆತನಿಗೆ ಮೊದಲು ಮದುವೆಯಾಗಿತ್ತು. ಆತನ ಗುಣ ಚೆನ್ನಾಗಿಲ್ಲ. ಅಲ್ಲದೇ ದುಡಿಯಲ್ಲ. ಮನೆಯ ಖರ್ಚಿಗೆ ಹಣ ಸಂಪಾದನೆ ಮಾಡಲ್ಲ ಎಂಬ ಕಾರಣಕ್ಕೆ ಪತ್ನಿ ದೂರ ಉಳಿದಿದ್ದಾಳೆ ಅಂತ ಆತನ ಮನೆ ಪಕ್ಕದವರು ನನ್ನ ಬಳಿ ಹೇಳಿದ್ದರು. ಈ ಎಲ್ಲಾ ಕಾರಣಗಳಿಂದ ನಾನು ಆತನನ್ನು ಮದುವೆ ಮಾಡಿಕೊಳ್ಳಲು ಒಪ್ಪಲಿಲ್ಲ. ಹೀಗಾಗಿ ತನ್ನ ಮನೆ ಮುಂಬೈಗೆ ತೆರಳಲೆಂದು ನವೆಂಬರ್ 4 ರಂದು ಟಿಕೆಟ್ ಬುಕ್ ಮಾಡಿದ್ದೆ ಅಂತ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

    ಅಂತೆಯೇ ಶುಕ್ರವಾರ ಮುಂಬೈಗೆ ತೆರಳಲೆಂದು ತಾನು ಬ್ಯಾಗ್ ಪ್ಯಾಕ್ ಮಾಡುತ್ತಿದೆ. ಈ ವೇಳೆ ಆರೋಪಿ ನನ್ನನ್ನು ತಡೆದಿದ್ದಾನೆ. ಅಲ್ಲದೇ ನನ್ನ ಮದುವೆಯಾಗದಿದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಒಳಗಿನಿಂದ ಚಾಕು ತೆಗೆದುಕೊಂಡು ಬಂದು ಮೊದಲು ಹೊಟ್ಟೆಗೆ ಇರಿದಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೈ, ಬಲದ ಕಿವಿ, ಎಡಗಡೆಯ ಕೆನ್ನೆ ಹಾಗೂ ಭುಜಕ್ಕೆ ಹೀಗೆ ಆತನ ತಾಯಿ ಬಂದು ನನ್ನನ್ನು ರಕ್ಷಿಸುವವರೆಗೂ ಹಲವು ಬಾರಿ ಇರಿದಿದ್ದಾನೆ ಅಂತ ಮಹಿಳೆ ವಿವರಿಸಿದ್ದಾರೆ.

    ಇದನ್ನೂ ಓದಿ: ಇನ್ಶುರೆನ್ಸ್ ಪಾಲಿಸಿ ಮಾಡಿಸಲು ಹೋದ ಹೊಸ ಗೆಳತಿಯ ಮನೆಯಲ್ಲಿಯೇ ಮಹಿಳೆ ಹೆಣವಾದ್ಳು!

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವೇಶ್ವರಪುರಂ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

  • ಕೈ ಕೋಳಗಳಿಂದ್ಲೇ ಪೇದೆಯ ಕುತ್ತಿಗೆ ಬಿಗಿದು ಪರಾರಿಯಾಗಲೆತ್ನಿಸಿದ ಕೈದಿ

    ಕೈ ಕೋಳಗಳಿಂದ್ಲೇ ಪೇದೆಯ ಕುತ್ತಿಗೆ ಬಿಗಿದು ಪರಾರಿಯಾಗಲೆತ್ನಿಸಿದ ಕೈದಿ

    ಮಂಗಳೂರು: ಜೈಲಿನಿಂದ ಕೋರ್ಟಿಗೆ ವಿಚಾರಣೆಗೆಂದು ಕರೆತಂದಿದ್ದ ಕೈದಿಯೊಬ್ಬ ತನ್ನನ್ನು ಹಿಡಿದುಕೊಂಡಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮೂಲತಃ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿಯಾಗಿದ್ದ ನುಮಾನ್ ಎಂಬ ಆರೋಪಿ ಪೊಲೀಸ್ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಜೈಲಿನಲ್ಲಿದ್ದ ನುಮಾನ್ ನನ್ನು ಕುರಿಯಾಕೋಸ್ ಎಂಬ ಮೀಸಲು ಪಡೆಯ ಪೇದೆ ಕೋರ್ಟ್ ಗೆ ಹಾಜರುಪಡಿಸಲು ಕರೆದುಕೊಂಡು ಬಂದಿದ್ದರು.

    ಕೋರ್ಟ್ ನಲ್ಲಿ ವಿಚಾರಣೆ ಪೂರ್ಣವಾದ ನಂತರ ಜೈಲಿಗೆ ಹಿಂದಿರುಗುವ ಸಮಯದಲ್ಲಿ ಆರೋಪಿ ನುಮಾನ್ ತನಗೆ ಹಾಕಿದ್ದ ಕೈ ಕೋಳಗಳಿಂದಲೇ ಪೇದೆಯ ಕುತ್ತಿಗೆ ಬಿಗಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಮಯದಲ್ಲಿ ಪೊಲೀಸ್ ಹಾಗೂ ಪೇದೆಯ ನಡುವಿನ ಜಟಾಪಟಿ ಏರ್ಪಟ್ಟಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಟ್ರಾಫಿಕ್ ಪೊಲೀಸ್ ಪೇದೆಯ ಸಹಾಯಕ್ಕೆ ಆಗಮಿಸಿದ್ದಾರೆ.

    ಬಳಿಕ ಪೊಲೀಸರು ಕೈದಿಯನ್ನು ಜೀಪಿನ ಮೂಲಕ ಜೈಲಿಗೆ ಕರೆದ್ಯೊಯ್ದಿದ್ದು, ಘಟನೆ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ಕೈದಿ ನುಮಾನ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

     

     

     

     

     

  • ಯುವಕನನ್ನು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ!

    ಯುವಕನನ್ನು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ!

    ಕಲಬುರಗಿ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವಕನ ಕೊಲೆಗೆ ಯತ್ನಿಸಿದ ಘಟನೆ ಕಲಬುರಗಿ ನಗರದ ಇನಾಮದಾರ್ ಶಾಲೆ ಹಿಂಭಾಗದಲ್ಲಿ ನಡೆದಿದೆ.

    ಶೇಕ್ ನೂರುದ್ದೀನ್(22) ಹತ್ಯೆಗೆ ಯತ್ನಿಸಲಾದ ಯುವಕ. ಮನೆಯಿಂದ ಕೆಲಸಕ್ಕೆ ತೆರಳುವ ವೇಳೆ ಈ ಕೃತ್ಯ ನಡೆದಿದೆ.

    ಶೇಕ್ ನೂರುದ್ದೀನ್ ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿಯಾಗಿದ್ದು, ಸಾಮಿಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು. ಶೇಕ್ ನೂರುದ್ದೀನ್ ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೊರಟಿದ್ದರು. ಅಂತೆಯೇ ಜಬ್ಬಾರ್ ಪನಶೆನ್ ಹಾಲ್ ಬಳಿ ಆಟೋಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಎರಡು ಬೈಕ್ ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನೂರುದ್ದೀನ್ ಅವರನ್ನು ತಮ್ಮ ಬೈಕಿನಲ್ಲಿ ಅಪಹರಿಸಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಿಂದ ನರಳಾಡುತ್ತಿದ್ದ ನೂರುದ್ದೀನ್ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೇಕ್ ನೂರುದ್ದೀನ್, ಮೈತುಂಬಾ ಸುಟ್ಟಗಾಯಗಳಿಂದ ನರಳಾಡುತ್ತಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.